ಜಿಲ್ಲಾ ಪೊಲೀಸ್ ಕಾರ್ಯಲಯ
ಬಳ್ಳಾರಿ, ದಿನಾಂಕ: 06-02-2015
ಪತ್ರಿಕಾ ಪ್ರಕಟಣೆ
ಮೈಲಾರ ಲಿಂಗೇಶ್ವರ ಜಾತ್ರೆ ಸಂದರ್ಭದಲ್ಲಿ ಮಕ್ಕಳು ಸೇರಿದಂತೆ ಕಾಣೆಯಾದ 190 ಜನರನ್ನು ಪೊಲೀಸರು ಪುನ: ಅವರ ಪೋಷಕರು / ಸಂಬಂಧಿಕರಿಗೆ ಒಪ್ಪಿಸಿದರು.
ದಿನಾಂಕ: 03-02-2015 ರಿಂದ 05-02-2015 ರ ವರೆಗೆ ಬಳ್ಳಾರಿ ಜಿಲ್ಲೆಯ ಹಡಗಲಿ ತಾಲ್ಲೂಕಿನ ಹಿರೇ ಹಡಗಲಿ ಪೊಲೀಸ್ ಠಾಣೆ ಸರಹದ್ದಿನಲ್ಲಿ ಮೈಲಾರ ಗ್ರಾಮದಲ್ಲಿ “ ಮೈಲಾರ ಲಿಂಗೇಶ್ವರ ಕಾರ್ಣಿಕೋತ್ಸವ ಮತ್ತು ಜಾತ್ರೆ ” ವಿಜೃಂಭಣೆಯಿಂದ ಆಚರಿಸಲಾಗಿರುತ್ತದೆ. ಈ ಜಾತ್ರೆಯಲ್ಲಿ ಸುಮಾರು 8 ಲಕ್ಷ ಭಕ್ತಾಧಿಗಳು ಭಾಗವಹಿಸಿದ್ದರು. ಕಾರ್ಣಿಕೋತ್ಸವ ಮತ್ತು ಜಾತ್ರೆ ಸಂಧರ್ಭದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡು ಜನರ ಬೆಲೆ ಬಾಳುವ ವಸ್ತುಗಳು, ಆಭರಣಗಳ ಕಳವು ಇತ್ಯಾದಿ ತಡೆಗಟ್ಟಲು, ಸಂಚಾರ ವ್ಯವಸ್ಥೇ ಸುಗಮಗೊಳಿಸಲು ಸುಮಾರು 1,500 ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು. ಈ 3 ದಿನಗಳ ಅವಧಿಯಲ್ಲಿ ಮೈಲಾರ ಜಾತ್ರೆಗೆ ಸಂಬಂಧಪಟ್ಟ ಪೊಲೀಸ್ ಠಾಣೆಯ ಸಿಬ್ಬಂದಿಯವರು 190 ಕಾಣೆಯಾದ ವ್ಯಕ್ತಿಗಳನ್ನು ತಮ್ಮ ವಶಕ್ಕೆ ತೆಗೆದುಕೊಂಡು ಆ ವ್ಯಕ್ತಿಗಳನ್ನು ಅವರವರ ಕುಟುಂಬದ ಸದಸ್ಯರಿಗೆ ಒಪ್ಪಿಸುವಲ್ಲಿ ಯಶಸ್ವಿಯಾಗಿರುತ್ತಾರೆ. 190 ವ್ಯಕ್ತಿಗಳ ಪೈಕಿ 125 ಮಕ್ಕಳು ಮತ್ತು 65 ಜನ ವಯಸ್ಕರು ಕಾಣೆಯಾಗಿ ತಮ್ಮ ಕುಟುಂಬದ ಸದಸ್ಯರಿಂದ ದೂರವಾಗಿದ್ದರು. ಕಾಣೆಯಾದ ವ್ಯಕ್ತಿಗಳನ್ನು ಪತ್ತೆ ಮಾಡಿದ ನಂತರ ಅವರಿಗೆ ಅವರ ಸಂಬಂಧಿಕರು ಸಿಗುವ ತನಕ ಜಾತ್ರಾ ಪೊಲೀಸ್ ಠಾಣೆಯಲ್ಲಿ ಸೂಕ್ತ ಊಟದ ವ್ಯವಸ್ಥೆ ಮಾಡಲಾಗಿತ್ತು. ಅದೇ ರೀತಿ ಮಕ್ಕಳು ಭಯ ಭೀತರಾಗದೇ ಅವರಲ್ಲಿ ಉತ್ತಮ ವಾತಾವರಣ ಮೂಡಿಸಲು ಸೂಕ್ತ ಅಲ್ಪ ಉಪಹಾರ, ಚಾಕ್‍ಲೇಟ್, ಬಿಸ್ಕಟ್ ಮತ್ತು ಆಟಿಕೆಗಳನ್ನು ಕೊಟ್ಟು ಅವರಲ್ಲಿ ಭಯವನ್ನು ದೂರ ಮಾಡಲಾಗಿತ್ತು. ಮಕ್ಕಳ ಕಾಳಜಿ ವಹಿಸಲು ಪ್ರತ್ಯೇಕವಾಗಿ ಮಹಿಳಾ ಸಿಬ್ಬಂದಿಯನ್ನು ನೇಮಿಸಲಾಗಿತ್ತು.
ಕಾಣೆಯಾದ ವ್ಯಕ್ತಿಗಳ ಸಂಬಂಧಿಕರು, ಪೋಷಕರು ತಮ್ಮ ಕಾಣೆಯಾದ ಮಕ್ಕಳನ್ನು ಮತ್ತು ಸಂಬಂಧಿಕರನ್ನು ಪೊಲೀಸರು ಹುಡುಕಿ ತಮ್ಮಲ್ಲಿ ಇರಿಸಿಕೊಂಡು ಅವರಿಗೆ ಸೂಕ್ತ ಊಟದ ವ್ಯವಸ್ಥೆ, ಮಕ್ಕಳಿಗಾಗಿ ಮಾಡಿದ ಉತ್ತಮವಾದ ವ್ಯವಸ್ಥೆಯನ್ನು ಕಂಡು ಅವರ ಕಣ್ಣಿನಲ್ಲಿ ಹರ್ಷ ವ್ಯಕ್ತಪಡಿಸಿರುತ್ತಾರೆ.
ಜಾತ್ರಾ ವೇಳೆಯಲ್ಲಿ ಯಶಸ್ವಿಯಾಗಿ ಬಂದೋಬಸ್ತ್ ಕರ್ತವ್ಯ ನಿರ್ವಹಿಸಿದ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಮತ್ತು ವಿಶೇಷವಾಗಿ ಮಕ್ಕಳ ಯೋಗಕ್ಷೇಮ ನೋಡಿಕೊಳ್ಳಲು ನೇಮಿಸಿದ್ದ ಮಹಿಳಾ ಸಿಬ್ಬಂದಿ ಕರ್ತವ್ಯವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಅಭಿನಂದಿಸಿರುತ್ತಾರೆ.
ಪೊಲೀಸ್ ಸೂಪರಿಂಟೆಂಡೆಂಟ್,
ಬಳ್ಳಾರಿ.
ಇವರಿಗೆ,
ಎಲ್ಲಾ ಪತ್ರಿಕಾ ವರದಿಗಾರರಿಗೆ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ