ಶನಿವಾರ, ಫೆಬ್ರವರಿ 7, 2015

PRESS NOTE AS ON 08-02-2015


                                             ಜಿಲ್ಲಾ ಪೊಲೀಸ್ ಕಾರ್ಯಲಯ
                                        ಬಳ್ಳಾರಿ, ದಿನಾಂಕ: 08-02-2015

ಪತ್ರಿಕಾ ಪ್ರಕಟಣೆ 

1) ಎಂ.ಎಂ.ಹಳ್ಳಿ ಪೊಲೀಸ್ ಠಾಣೆ ಸರಹದ್ದಿನ ಎನ್.ಹೆಚ್-13 ರಸ್ತೆಯ ಹಾರೋವನಹಳ್ಳಿ ಹತ್ತಿರ ಕೆ.ಎಸ್.ಆರ್.ಟಿ.ಸಿ ಬಸ್ಸು ಮತ್ತು ಮೋಟಾರ್ ಸೈಕಲ್ ನಡುವೆ ರಸ್ತೆ ಅಫಘಾತ, ಮೋಟಾರ್ ಸೈಕಲ್‍ನಲ್ಲಿ ಪ್ರಯಾ¨ಣಿಸುತ್ತಿದ್ದ 3 ಜನರ ಸಾವು. 
 
       ಫಿರ್ಯಾದಿದಾರರಾದ ಶ್ರೀ.ಸಣ್ಣ ಬೋಸಪ್ಪ ತಂದೆ ಗುಡ್ಯನ ಒಬಪ್ಪ, ವ.31 ವರ್ಷ, ವಾಲ್ಮೀಕಿ ಜಾತಿ, ಬೇಸಾಯ ವಾಸ- ಚಿಲಕನಹಟ್ಟಿ ಗ್ರಾಮ ಇವರು ದೂರು ನೀಡಿದ್ದೇನೆಂದರೆ, ದಿ:7-01-15 ರಂದು ಸಾಯಂಕಾಲ 5.15 ಗಂಟೆ ಗಂಟೆ ಸುಮಾರಿಗೆ ಹಾರೋವನಹಳ್ಳಿ ಹತ್ತಿರ ಎನ್.ಹೆಚ್.13 ರಸ್ತೆಯ ವೆಂಕಪ್ಪ ಇವರ ಹೊಲದ ಹತ್ತಿರ ಜಿ.ದುರುಗಪ್ಪ ಈತನು ತನ್ನ ಮೋಟಾರ್ ಸೈಕಲ್ ನಂ- ಕೆ.ಎ.33/ಹೆಚ್.455  ನೇದ್ದರಲ್ಲಿ ಕೆ.ಮಂಜುನಾಥ ಮತ್ತು ಮಾರ್ಗದಪ್ಪನಿಗೆ ಕೂಡಿಸಿಕೊಂಡು ಮರಿಯಮ್ಮನಹಳ್ಳಿ ಆಸ್ಪತ್ರೆಗೆ ಹೋಗುವಾಗ ಕೆ.ಎಸ್.ಆರ್.ಟಿ.ಸಿ ಬಸ್ಸು ನಂ- ಕೆ.ಎ.17/ಎಫ್.1502 ನೇದ್ದರ ಚಾಲಕ ತನ್ನ ಬಸ್ಸನ್ನು ಅತಿಜೋರಾಗಿ ಮತ್ತು ನಿರ್ಲಕ್ಷ್ಯತನದಿಂದ ನಡೆಸಿಕೊಂಡು ಒವರ್ ಟೇಕ್ ಮಾಡುತ್ತಾ ಬಂದು ದುರುಗಪ್ಪನ ಮೋಟಾರ್ ಸೈಕಲ್‍ಗೆ ಡಿಕ್ಕಿ ಹೊಡೆಸಿ ಅಪಗಾತಪಡಿಸಿದ್ದರಿಂದ 1) ಈ. ಸಣ್ಣ ದುರುಗಪ್ಪ @ ತಿಪ್ಪಣ್ಣ ತಂದೆ ಗೋವಿಂದಪ್ಪ ವ. 31 ವರ್ಷ ವಾಲ್ಮೀಖಿ ಬೇಸಾಯ  2) ಕೆ.ಮಂಜುನಾಥ ತಂದೆ ಸಣ್ಣದುರುಗಪ್ಪ ವ.30 ವರ್ಷ ವಾಲ್ಮಿಕಿ, 3) ಕೆ. ಮಾರ್ಗದಪ್ಪ  ತಾಯಿ ದುರುಗಮ್ಮ ವ.50 ವರ್ಷ ವಾಲ್ಮೀಕಿ ಎಲ್ಲರೂ ವಾಸ- ಚಿಲಕನಹಟ್ಟಿ ಗ್ರಾಮ ಇವರಿಗೆ ಭಾರೀ ರಕ್ತ ಗಾಯಗಳಾಗಿ ಸ್ಥಳದಲ್ಲೇ ಮೃತಪಟ್ಟಿರುತ್ತರೆ. ಬಸ್ಸು ಚಾಲಕ ಅಪಘಾತದ ನಂತರ ಓಡಿ ಹೋಗಿರುತ್ತಾನೆಂದು ದೂರಿನ ಮೇರೆಗೆ ಎಂ.ಎಂ.ಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತದೆ. 

                                ಪೊಲೀಸ್ ಸೂಪರಿಂಟೆಂಡೆಂಟ್,                                                                                                                                            ಬಳ್ಳಾರಿ.                                                                                                                
ಇವರಿಗೆ,
ಎಲ್ಲಾ ಪತ್ರಿಕಾ ವರದಿಗಾರರಿಗೆ

ಹೆಚ್ಚಿನ ಮಾಹಿತಿಗಾಗಿ ಶ್ರೀ. ಮಹಮ್ಮದ್ ಗಯಾಸ್, ಎ.ಎಸ್.ಐ ಮೊಬೈಲ್ ನಂ. 9845484100 ಹಾಗು                           ಜಿ. ಸುಬ್ರಮಣ್ಯಂ, ಹೆಚ್.ಸಿ-175, ಮೋಬೈಲ್ ಸಂ: 9448202005 ರವರನ್ನು ಸಂಪರ್ಕಿಸಲು ವಿನಂತಿ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ