ಶುಕ್ರವಾರ, ಮಾರ್ಚ್ 27, 2015
ಬುಧವಾರ, ಮಾರ್ಚ್ 25, 2015
PRESS NOTE OF 25/03/2015
ಜಿಲ್ಲಾ ಪೊಲೀಸ್ ಕಾರ್ಯಲಯ
ಬಳ್ಳಾರಿ, ದಿನಾಂಕ: 25-03-2015
ಪತ್ರಿಕಾ ಪ್ರಕಟಣೆ
ದಿನಾಂಕ 24.03.2015 ರಂದು ಮದ್ಯಾಹ್ನ 03.45 ಗಂಟೆಗೆ ಪಿರ್ಯಾದಿದಾರರಾದ ಕೆ. ಮಲ್ಲಪ್ಪ ತಂದೆ ಬಸಪ್ಪ ತಾತ ವಯಸ್ಸು 60 ವರ್ಷ ವಾಸ ಕೋಳೂರು, ಇವರು ಕುರುಗೋಡು ಪೊಲೀಸ್ ಠಾಣೆಗೆ ಹಾಜರಾಗಿ ದೂರು ನೀಡಿದ್ದು ದೂರಿನಲ್ಲಿ ತಮ್ಮ ಮಗಳಾದ ಶಿವಲಿಂಗಮ್ಮಳನ್ನು ಹಿಗ್ಗೆ 5 ವರ್ಷಗಳ ಹಿಂದೆ ಆಂದ್ರದ ಗೂಳ್ಯಂ ಗ್ರಾಮದ ಮಹಾಲಿಂಗಪ್ಪನ ಮಗನಾದ ಮಲ್ಲಿಕಾರ್ಜುನನನಿಗೆ ಮದುವೆ ನಿಶ್ಚಯ ಮಾಡಿ ವರದಕ್ಷಿಣೆ 1 ಲಕ್ಷ ಮತ್ತು 1 ತೊಲೆ ಬಂಗಾರ ಕೊಡಬೇಕೆಂದು ಕೇಳಿದ್ದನು, ಮದುವೆಯ ಸಮಯದಲ್ಲಿ 50 ಸಾವಿರ ರೂಪಾಯಿ ಮತ್ತು 1 ತೊಲೆ ಬಂಗಾರವನ್ನು ಕೊಟ್ಟು ಗುಳ್ಯಂ ಗ್ರಾಮದ ಗಾದಿಲಿಂಗಪ್ಪ ತಾತನ ಗುಡಿಯ ಮುಂದೆ ಮದುವೆ ಮಾಡಲಾಗಿತ್ತು ಈಗ್ಗೆ 6 ತಿಂಗಳಿನಿಂದ ಗಂಡ ಮಲ್ಲಿಕಾರ್ಜುನ ಅತ್ತೆ ಅಂಬಮ್ಮ ಮೈದುನ ಬಸವ, ಮಾರೆಪ್ಪ, ಸಿದ್ದ, ದತ್ತ ಇವರೆಲ್ಲರು ಸೇರಿ ಉಳಿದ ವರದಕ್ಷಿಣೆ ಹಣ ತರುವಂತೆ ದೈಹಿಕ ಮತ್ತು ಮಾನಸಿಕ ಹಿಂಸೆ ನೀಡಿ ಹೊಡೆಬಡೆ ಮಾಡುತ್ತಿದ್ದರು ಮತ್ತು ಹೆಚ್ಚಿನ ವರದಕ್ಷಿಣೆ ಹಣವನ್ನು ತೆಗೆದುಕೊಂಡ ಬಾರದಿದ್ದರೇ ನಿನನ್ನು ಉರುಲು ಹಾಕಿ ಸಾಯಿಸುತ್ತವೆಂದು ಪ್ರಾಣ ಬೆದರಿಕೆ ಹಾಕಿದ್ದರು, ಈ ವಿಷಯವನ್ನು ಮಗಳು ಹಬ್ಬಕ್ಕೆ ಬಂದಾಗ ತಂದೆ ತಾಯಿಗೆ ವಿಚಾರವನ್ನು ತಿಳಿಸಿದ್ದಳು ಪುನಃ ಬೆಣಕಲ್ಲು ಗ್ರಾಮದ ಮಲ್ಲಿಕಾರ್ಜುನ ರವರ ಕುಮ್ಮಕ್ಕಿನಿಂದ ವರದಕ್ಷಿಣೆ ಹಣ 50,000=00 ಗಳನ್ನು ತರುವಂತೆ ಮೇಲ್ಕಂಡವರು ದೈಹಿಕ ಮತ್ತು ಮಾನಸಿಕ ಹಿಂಸೆ ನೀಡುವುದಲ್ಲದೆ ಹೊಡೆ ಬಡೆ ಮಾಡುವುದರಿಂದ ನನ್ನ ಗಂಡನ ಮನೆಯವರು ನನಗೆ ಉರುಲು ಹಾಕಿ ಸಾಯಿಸುತ್ತಾರೆಂದು ತಿಳಿದು ಮನಯಲ್ಲಿ ಸೀಮೆಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಸುಟ್ಟಗಾಯಗಳಿಂದ ಗುಣಪಡದೆ ಮೃತಪಟ್ಟಿರುತ್ತಾಳೆಂದು ದೂರು ನೀಡಿದ್ದು ದೂರನ್ನು ದಾಖಲಿಸಿ ತನಿಖೆ ಕೈಗೊಂಡಿದೆ.
ಪೊಲೀಸ್ ಸೂಪರಿಂಟೆಂಡೆಂಟ್, ಬಳ್ಳಾರಿ.
ಇವರಿಗೆ,
ಎಲ್ಲಾ ಪತ್ರಿಕಾ ವರದಿಗಾರರಿಗೆ
ಸೋಮವಾರ, ಮಾರ್ಚ್ 23, 2015
PRESS NOTE OF 23/03/2013
ಜಿಲ್ಲಾ ಪೊಲೀಸ್ ಕಾರ್ಯಲಯ
ಬಳ್ಳಾರಿ, ದಿನಾಂಕ: 23-03-2015
ಪತ್ರಿಕಾ ಪ್ರಕಟಣೆ
ಸಿ.ಪಿ.ಐ. ಕುರುಗೋಡು ವೃತ್ತ ಮತ್ತು ಅವರ ಅಧೀನದ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಯವರಿಂದ ಅಂತರ ರಾಜ್ಯ ಖೋಟಾ ನೋಟ್ ಚಲಾವಣೆ ಮಾಡುವವರ ಬಂಧನ – ರೂ. 1.70 ಲಕ್ಷ ಖೋಟಾ ನೋಟುಗಳ ವಶ.
ದಿನಾಂಕ 22.03.2015 ರಂದು ಮದ್ಯಾಹ್ನ 03.00 ಗಂಟೆಗೆ ಪಿ.ಎಸ್.ಐ. ಕುಡತಿನಿ ರವರು ಠಾಣೆಯಲ್ಲಿದ್ದಾಗ ಕುಡತಿನಿ ಗ್ರಾಮದ ಬಳ್ಳಾರಿ ರಸ್ತೆಯಲ್ಲಿರುವ ಅಪೂರ್ವ ಪೆಟ್ರೋಲ್ ಬಂಕ್‍ನಲ್ಲಿ ಒಬ್ಬ ವ್ಯಕ್ತಿ ತನ್ನ ಮೋಟಾರ್ ಸೈಕಲ್‍ಗೆ 100 ರೂ ಪೆಟ್ರೋಲ್ ಹಾಕಿಸಿಕೊಂಡು ರೂ 1000/- ಖೊಟಾ ನೋಟನ್ನು ನೀಡಿದ್ದಾನೆಂದು ಬಂದ ಖಚಿತ ಮಾಹಿತಿ ಮೇರೆಗೆ ಪಿ.ಎಸ್.ಐ.ರವರು ಮೇಲಾಧಿಕಾರಿಗಳ ಮಾರ್ಗದರ್ಶನದಂತೆ ತಮ್ಮ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ಹೋಗಿ ಖೋಟಾನೋಟು ಚಲಾವಣೆ ಮಾಡಿದ ಮಸೀದಿ ವಲಿಸಾಬ್ @ ವಲಿ, ವಾಸ ಹಳೆ ಮಾದಾಪುರ ಗ್ರಾಮ ಸಂಡೂರು ತಾಲೂಕು ಈತನನ್ನು ಹಿಡಿದುಕೊಂಡು ಪಂಚರ ಸಮಕ್ಷಮ 1000 ರೂ ಮುಖಬೆಲೆಯ 10 ಖೊಟಾನೋಟುಗಳನ್ನು & ಬಜಾಜ್ ಡಿಸ್ಕವರಿ ಮೋಟಾರ್ ಸೈಕಲನ್ನು ಜಪ್ತು ಮಾಡಿಕೊಂಡಿದ್ದು ಈ ಬಗ್ಗೆ ಕುಡತಿನಿ ಠಾಣೆ ಗು.ನಂ. 31/2015 ಕಲಂ. 489(ಬಿ) & (ಸಿ) ಐಪಿಸಿ ರೀತ್ಯ ಪ್ರಕರಣ ದಾಖಲಿಸಿಕೊಂಡಿದ್ದು ಇರುತ್ತದೆ.
ನಂತರ ಮಾನ್ಯ ಶ್ರೀ ಚೇತನ್ ಸಿಂಗ್ ರಾಥೋರ್ ಎಸ್.ಪಿ, ಬಳ್ಳಾರಿ, ಶ್ರೀ ವಿಜಯ್.ಜಿ.ಡಂಬಳ ಹೆಚ್ಚುವರಿ ಎಸ್.ಪಿ ಬಳ್ಳಾರಿ, ಶ್ರೀ ಎನ್.,ರುದ್ರಮುನಿ ಡಿಎಸ್‍ಪಿ ಬಳ್ಳಾರಿ ಗ್ರಾಮೀಣ ರವರ ಮಾರ್ಗದರ್ಶದಲ್ಲಿ ಶ್ರೀ.ಜಿ.ಲಕ್ಷ್ಮೀಕಾಂತಯ್ಯ ಸಿಪಿಐ ಕುರುಗೋಡು, ಕೆ.ಬಿ.ವಾಸುಕುಮಾರ ಪಿ.ಎಸ್.ಐ ಕುಡುತಿನಿ ಹಾಗೂ ಸಿಬ್ಬಂದಿಯವರು ತನಿಖೆ ಕೈಕೊಂಡು, 3 ಜನ ಆರೋಪಿಗಳನ್ನು ದಿ:23.03.2015 ರಂದು ದಸ್ತಗಿರಿ ಮಾಡಿದ್ದು, ಆರೋಪಿ 1)ಮಸೀದಿ ವಲಿ@ವಲಿಸಾಬ್, 2)ಅಲ್ಲಾಭಕಾಶ್ @ ಭಕ್ಷಿ ರವರ ಕಡೆಯಿಂದ 1000 ಮತ್ತು 500 ರೂ ಮುಖಬೆಲೆಯ ಒಟ್ಟು 1.70 ಲಕ್ಷ ರೂಗಳ ಖೋಟಾನೋಟುಗಳನ್ನು ವಶಪಡಿಸಿಕೊಳ್ಳಲಾಗಿದೆ. ಮತ್ತು ಆರೋಪಿ ಮಕ್ಬುಲ್ ಕಡೆಯಿಂದ ಖೊಟಾನೋಟುಗಳನ್ನು ವಶಪಡಿಸಿಕೊಳ್ಳುವುದು ಬಾಕಿಯಿದೆ. ಖೋಟಾ ನೋಟಿನ ಜಾಲವನ್ನು ಬೇಧಿಸಿ ಆರೋಪಿಗಳನ್ನು ಮತ್ತು ಖೋಟಾ ನೋಟುಗಳನ್ನು ಪತ್ತೆ ಹಚ್ಚಲು ಶ್ರಮಿಸಿದ ಜಿ.ಲಕ್ಷ್ಮೀಕಾಂತಯ್ಯ ಸಿ.ಪಿ.ಐ ಕುರುಗೋಡು, ಕೆ.ಬಿ.ವಾಸುಕುಮಾರ ಪಿ.ಎಸ್.ಐ ಕುಡುತಿನಿ ಪೊಲೀಸ್ ಠಾಣೆ ಹಾಗೂ ಸಿಬ್ಬಂದಿಯವರನ್ನು ಮಾನ್ಯ ಶ್ರೀ ಸುನೀಲ್ ಅಗರ್‍ವಾಲ್ ಐ.ಜಿ.ಪಿ.ಈಶಾನ್ಯ ವಲಯ ಕಲಬುರ್ಗಿ, ಮಾನ್ಯ ಶ್ರೀ ಚೇತನ್ ಸಿಂಗ್ ರಾಥೋರ್ ಎಸ್.ಪಿ ಬಳ್ಳಾರಿ, ರವರು ಈ ಕಾರ್ಯವನ್ನು ಶ್ಲಾಘಿಸಿ, ನಗದು ಬಹುಮಾನವನ್ನು ಘೋಷಿಸಿರುತ್ತಾರೆ.
ಆರೋಪಿಗಳ ವಿಳಾಸ :-
1. ಮಸೀದಿ ವಲಿ @ ವಲಿಸಾಬ್ @ ವಲಿ ತಂದೆ ಮದರಸಾಬ್ ವ:36 ವರ್ಷ, ಮುಸ್ಲಿಂ, ವ್ಯವಸಾಯ ವಾಸ: ದರ್ಗಾ ಹತ್ತಿರ, ಹಳೆ ಮಾದಾಪುರ ಗ್ರಾಮ, ಸಂಡೂರು(ತಾ), ಬಳ್ಳಾರಿ ಜಿಲ್ಲೆ. ಮೊಬೈಲ್ ನಂ:
2. ಅಲ್ಲಾ ಭಕಾಷ್ @ ಭಕ್ಷಿ ತಂದೆ ಅಮೀದ್ ಸಾಬ್, ವ:26 ವರ್ಷ, ಮುಸ್ಲಿಂ ಜನಾಂಗ, ಟೈಲರಿಂಗ್ ಕೆಲಸ, ವಾಸ, ಬಾಷ ಕಾಂಪೌಂಡ್,ಮಸೀದಿ ಹಿಂದೆ, ಬಂಡಿಮೋಟ್, ಬಳ್ಳಾರಿ. ಹಾಲಿ ವಾಸ:- ಬ್ಯೂಟಿ ಬಾರ್ & ರೆಸ್ಟೋರೆಂಟ್, ಅಲಿಗಾಂಜ್ (ಗ್ರಾಮ) ಇಸ್ಲಾಂಪುರ ಸಿಟಿ, ಪಶ್ಚಿಮಬಂಗಾಳ.
3. ಮಕ್ಬುಲ್ @ ಮಕ್ಬುಲ್ ಹುಸೇನ್ @ ಅಶ್ರಫ್ ಅಲಿ ತಂದೆ ಶೇಖ್ ಅಬ್ದುಲ್ ಭಾಶಿದ್ ಸಾಬ್ ವ: 32 ವರ್ಷ, ಮುಸ್ಲಿಂ ಜನಾಂಗ,ಜೀನ್ಸ್ ಟೈಲರಿಂಗ್ ವೃತ್ತಿ, ಹೈಲೆ ಹಜೀದ್ ಮಸೀದಿ ಹತ್ತಿರ ಐಸ್‍ಕ್ರೀಮ್ ಫ್ಯಾಕ್ಟರಿ ಬಳಿ ಮಿಲ್ಲಾರ್ ಪೇಟೆ ಬಳ್ಳಾರಿ.
4.
ವಶಪಡಿಸಿಕೊಂಡ ಖೋಟಾನೋಟುಗಳ ವಿವರ:-
1) 1000 ರೂ ಮುಖಬೆಲೆಯ 145 ಖೋಟಾ ನೋಟುಗಳು ಒಟ್ಟು 1,45,000-00 ರೂ
2) 500 ರು ಮುಖಬೆಲೆಯ 50 ಖೊಟಾ ನೋಟುಗಳು ಒಟ್ಟು 25,000-00 ರೂ
ಪೊಲೀಸ್ ಸೂಪರಿಂಟೆಂಡೆಂಟ್, ಬಳ್ಳಾರಿ.
ಇವರಿಗೆ,
ಎಲ್ಲಾ ಪತ್ರಿಕಾ ವರದಿಗಾರರಿಗೆ
ಗುರುವಾರ, ಮಾರ್ಚ್ 19, 2015
press note of 19-03-2015
ಜಿಲ್ಲಾ ಪೊಲೀಸ್ ಕಾರ್ಯಲಯ
ಬಳ್ಳಾರಿ, ದಿನಾಂಕ: 19-03-2015
ಪತ್ರಿಕಾ ಪ್ರಕಟಣೆ
1) ಮೋಟಾರ್ ಸೈಕಲ್‍ಗಳ ನಡುವೆ ರಸ್ತೆ ಅಫಘಾತ ಒಬ್ಬ ಸವಾರನ ಸಾವು.
ದಿ:17-03-15 ರಂದು ಸಂಜೆ 7-30 ಗಂಟೆಗೆ ಸುಮಾರಿಗೆ ಫಿರ್ಯಾದಿದಾರರು ತಮ್ಮ ಮಾಲಿಕನಾದ ಇಂತಿಯಾಜ್ ಹುಸೇನ್‍ರವರೊಂದಿ ಚಂದಮಾಮ ಹೋಟ್‍ನಲ್ಲಿ ಊಟ ಮಾಡಿ ತನ್ನ ಕೆ.ಎ.35/ಯು. 5827 ಟಿ.ವಿ.ಎಸ್. ಸೂಪರ್ ಎಕ್ಸೆಲ್ ಬೈಕ್‍ನಲ್ಲಿ ಹಿಂದುಗಡೆಗೆ ಮೃತ ಇಂತಿಯಾಜ್ ಹುಸೇನ್ ರವರನ್ನು ಕೂಡಿಸಿಕೊಂಡು ಮರಿಯಮ್ಮನಹಳ್ಳಿಗೆ ಬರಲು ಹೋಟಲ್‍ನಿಂದ ರಸ್ತೆಗೆ ಬರುತ್ತಿದ್ದಂತೆ ಹ.ಬೊ.ಹಳ್ಳಿ ಕಡೆಯಿಂದ ಯಾರೋ ಒಬ್ಬ ಅನಾಮಿಕ ಬೈಕ್ ಚಾಲಕನು ತನ್ನ ಬೈಕ್‍ನ್ನು ಅತೀ ವೇಗ ಮತ್ತು ನಿರ್ಲಕಷತನದಿಂದ ನಡೆಸಿಕೊಂಡು ಬಂದು ಡಿಕ್ಕಿ ಹೊಡೆದು ಅಪಘಾತಪಡಿಸಿ ಸ್ಥಳದಿಂದ ಪರಾರಿಯಾಗಿರುತ್ತಾನೆ. ಅಪಘಾತಪಡಿಸಿದ ಬೈಕ್ ಸವಾರಕನ ಹೆಸರು ಮತ್ತು ವಿಳಾಸ ಗೊತ್ತಿರುವುದಿಲ್ಲ ಗಾಯಗೊಂಡ ಇಂತಿಯಾಜ್ ಹುಸೇನ್, 29 ವರ್ಷ, ವಾ: ಮರಿಯಮ್ಮನಹಳ್ಳಿ ರವರಿಗೆ ಹೊಸಪೇಟೆ ಆಸ್ಪತ್ರೆಯಲ್ಲಿ ತದನಂತರ ಹೆಚ್ಚಿನ ಚಿಕಿತ್ಸೆಗೆ ಬಳ್ಳಾರಿ ವಿಮ್ಸ್‍ನಲ್ಲಿ ಚಿಕಿತ್ಸೆ ಕೊಡಿಸುತ್ತಿರುವ ಕಾಲಕ್ಕೆ ಈ ದಿನ ಬೆಳಿಗ್ಗೆ 7-00 ಗಂಟೆಗೆ ಚಿಕಿತ್ಸೆಯಲ್ಲಿ ಗುಣಮುಖನಾಗದೆ ಮೃತಪಟ್ಟಿರುತ್ತಾನೆ. ಅಪಘಾತಪಡಿಸಿ ಪರಾರಿಯಾದ ಬೈಕ್ ಚಾಲಕನಿಗೆ ಮತ್ತು ಬೈಕ್‍ನ್ನು ಪತ್ತೆ ಮಾಡಿ ಕಾನೂನು ಕ್ರಮ ಜರುಗಿಸಲು ಇದ್ದ ದೂರಿನ ಮೇರೆಗೆ ಪ್ರಕರಣ ದಾಖಲಿಸಿದ್ದು, ಈ ಬಗ್ಗೆ ಎಂ.ಎಂ.ಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತದೆ.
2) ಆಟೋ ಮತ್ತು ಲಾರಿ ನಡುವೆ ಡಿಕ್ಕಿ ಒಬ್ಬ ವ್ಯಕ್ತಿಯ ಸಾವು 10 ಜನರಿಗೆ ಗಾಯ.
ದಿನಾಂಕ: 18-3-2015 ರಂದು ಬೆಳಿಗ್ಗೆ ಬಳ್ಳಾರಿಯ ಅಂದ್ರಾಳು ಗ್ರಾಮದ ಬಳಿ ಇರುವ ಮುಲ್ಲಂಗಿರವರ ಹತ್ತಿ ಮಿಲ್‍ನಲ್ಲಿ ರಾತ್ರಿ ಪಾಳಿ ಕೆಲಸ ಮುಗಿಸಿಕೊಂಡು ವಾಪಾಸ್ ತಮ್ಮ ಗ್ರಾಮಗಳಿಗೆ ಹೋಗಲು ಮುಲ್ಲಂಗಿರವರ ಹತ್ತಿ ಮಿಲ್‍ನಿಂದ ಬೆಳಗಲ್ ತಾಂಡ ವಾಸಿಯಾದ ಚಂದ್ರಾನಾಯ್ಕರವರ ಆಟೋ ನಂಬರ್ ಕೆ.ಎ-34-ಬಿ-1448 ನೇದ್ದರಲ್ಲಿ ಫಿರ್ಯಾದಿ ಮತ್ತು ಅವರ ಗ್ರಾಮವಾಸಿ ಯಲ್ಲಮ್ಮ ಮತ್ತು ಬೆಳಗಲ್ ತಾಂಡ ವಾಸಿಗಳಾದ ಆಟೋ ಮಾಲೀಕ ಚಂದ್ರಾನಾಯ್ಕ, ರಾಮುನಾಯ್ಕ, ರಾಮ್‍ಜಿನಾಯ್ಕ, ಲಕ್ಷ್ಮೀಬಾಯಿ, ಸರಸ್ವತಿಬಾಯಿ @ ಸರಸುಬಾಯಿ, ದೇವರಾಜ್‍ನಾಯ್ಕ, ರಾಜೇಶ್‍ನಾಯ್ಕ ಸೀತಾಬಾಯಿ, ತಿಪ್ಲಿಬಾಯಿ ಮತ್ತು ಇತರರು ಕುಳಿತುಕೊಂಡು ಚಂದ್ರಾನಾಯ್ಕನ ಸಂಬಂದಿ ಅಮರೇಶ್‍ನಾಯ್ಕನು ಆಟೋ ಚಲಾಯಿಸಿಕೊಂಡು ಬೆಂಗಳೂರು ರಸ್ತೆಯಿಂದ ಹೊಸಪೇಟೆ ರಸ್ತೆಯನ್ನು ಸೇರುವ ಹೊಸ ಬೈಪಾಸ್ ರಸ್ತೆಯಲ್ಲಿ ಮಹಾದೇವ ಡಾಬಾ ಹತ್ತಿರ ಹೋಗುತ್ತಿದ್ದಾಗ ಬೆಳಿಗೆ 8-45 ಗಂಟೆಗೆ ಚಾಲಕ ಅಮರೇಶನಾಯ್ಕನು ಅಟೋವನ್ನು ಅತೀವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿ ಎದುರಿಗೆ ಬರುತ್ತಿದ್ದ ವಾಹನವನ್ನು ನೋಡಿ ಏಕಾಎಕೀ ಎಡಕ್ಕೆ ತಿರುಗಿಸಿ ರಸ್ತೆ ಪಕ್ಕ ನಿಂತಿದ್ದ ಲಾರಿಯೊಂದರ ಹಿಂಭಾಗಕ್ಕೆ ಡಿಕ್ಕಿ ಹೊಡೆದ ಪರಿಣಾಮವಾಗಿ ಆಟೋದ ಮುಂಭಾಗ ಪೂರಾ ಜಕ್ಕಂಗೊಂಡು ಆಟೋದಲ್ಲಿ ಪ್ರಯಾಣಿಸುತ್ತಿದ್ದ ಫಿರ್ಯಾದಿ ಮತ್ತು ಇತರರಿಗೆ ಹಾಗೂ ಆಟೋ ಚಾಲಕನಿಗೆ ಪೆಟ್ಟಾಗಿ ರಕ್ತಗಾಯಗಳಾಗಿ ಬೆಳಗಲ್ ತಾಂಡ ವಾಸಿ ರಾಮುನಾಯ್ಕ ತಂದೆ ರೊಡ್ಡ ಕೀರ್ಯಾನಾಯ್ಕ ವಯಸ್ಸು 55 ವರ್ಷ, ಲಿಂಬಾಣಿ ಜಾತಿ, ವಾಸ. ಬೆಳಗಲ್ ತಾಂಡ, ಬಳ್ಳಾರಿ ಈತನು ಸ್ಥಳದಲ್ಲೇ ಮೃತಪಟ್ಟಿರುತ್ತಾರೆಂದು ಆಟೋ ಚಾಲಕನ ಮೇಲೆ ಕಾನೂನು ಕ್ರಮ ಜರುಗಿಸಲು ಕೋರಿ ದೂರು ಇದ್ದ ದೂರಿನ ಮೇರೆಗೆ ಬಳ್ಳಾರಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತದೆ.
ಪೊಲೀಸ್ ಸೂಪರಿಂಟೆಂಡೆಂಟ್, ಬಳ್ಳಾರಿ.
ಇವರಿಗೆ,
ಎಲ್ಲಾ ಪತ್ರಿಕಾ ವರದಿಗಾರರಿಗೆ
ಹೆಚ್ಚಿನ ಮಾಹಿತಿಗಾಗಿ ಶ್ರೀ. ಮಹಮ್ಮದ್ ಗಯಾಸ್, ಎ.ಎಸ್.ಐ ಮೊಬೈಲ್ ನಂ. 9845484100 ಹಾಗು ಜಿ. ಸುಬ್ರಮಣ್ಯಂ, ಹೆಚ್.ಸಿ-175, ಮೋಬೈಲ್ ಸಂ: 9448202005 ರವರನ್ನು ಸಂಪರ್ಕಿಸಲು ವಿನಂತಿ
ಗುರುವಾರ, ಮಾರ್ಚ್ 5, 2015
PRESS NOTE OF 05-03-2015
ಜಿಲ್ಲಾ ಪೊಲೀಸ್ ಕಾರ್ಯಲಯ
ಬಳ್ಳಾರಿ, ದಿನಾಂಕ: 05-03-2015
ಪತ್ರಿಕಾ ಪ್ರಕಟಣೆ
ದಿನಾಂಕ: 04/03/2015 ರಂದು ಸಂಜೆ 4.30 ಗಂಟೆಗೆ ಎಲಿಗಾರ ನೂರ್ ಭಾಷ ತಂದೆ ಪೀರಾಸಾಬ್ 39ವರ್ಷ ಮುಸ್ಲಿಂ ಜನಾಂಗ ಮದೀನ ಸಪ್ಲೈಯರ್ಸ ವಾಸ- ಕಂಪ್ಲಿ ಇವರು ಕೊಟ್ಟ ದೂರು ಏನೆಂದರೆ, ಮೃತ ಅನಾಸ್ ತಂದೆ ನಜೀರ್ ಅಹಮದ್ 6 ವರ್ಷ 01ನೇ ತರಗತಿ ವಿದ್ಯಾರ್ಥಿ ಸಾಹಿತಿ ವಿದ್ಯಾಲಯ ಕಂಪ್ಲಿ ಈತನು ಶಾಲೆ ಬಿಟ್ಟ ನಂತರ ಮನೆಗೆ ಬರಲೆಂದು ಕಂಪ್ಲಿ ಸಾಹಿತಿ ವಿದ್ಯಾಲಯದ ಮುಂದೆ ಗೇಟ್‍ನ ಹತ್ತಿರ ರಸ್ತೆಯಲ್ಲಿ ಟ್ರಾಕ್ಸ್ ನಂ ಎಪಿ 02/ವಿ 5014 ನೇದ್ದರಲ್ಲಿ ಹತ್ತಲು ನಿಂತಿದ್ದು ಮೇಲ್ಕಂಡ ಟ್ರಾಕ್ಸ್ ಚಾಲಕ ರವಿ ತಾಯಿ ಷಣ್ಮುಖಮ್ಮ ಟ್ರಾಕ್ಸ್ ನಂ ಎಪಿ 02/ವಿ 5014 ನೇದ್ದರ ಚಾಲಕ ವಾ: ಎಮ್ಮಿಗನೂರು ಈತನು ಮೇಲ್ಕಂಡ ಶಾಲೆಯ ಮಕ್ಕಳು ಹತ್ತಲು ನಿಂತಿದ್ದನ್ನು ಕಂಡೂ ಮೇಲ್ಕಂಡ ವಾಹನವನ್ನು ವೇಗವಾಗಿ & ನಿರ್ಲಕ್ಷತನದಿಂದ ಏಕಾಏಕಿ ರಿವರ್ಸ್ ತೆಗೆದುಕೊಂಡಿದ್ದರಿಂದ ಟ್ರಾಕ್ಸ್ ತಗುಲಿದ್ದು ಇದರಿಂದ ಅನಾಸನು ಟ್ರಾಕ್ಸ್ ಮುಂಭಾಗದ ಎಡ ಚಕ್ರದ ಬಳಿ ಬಿದ್ದಿದ್ದು ಟ್ರಾಕ್ಸ್ ಅನಾಸನ ತಲೆಯ ಮೇಲೆ ಹತ್ತಿದ್ದು ತಲೆ ಅಪ್ಪಚ್ಚಿಯಾಗಿರುತ್ತದೆ. ಅನಾಸನು ಚಿಕಿತ್ಸೆಯಿಂದ ಗುಣವಾಗದೇ ಸಂಜೆ 5 ಗಂಟೆಗೆ ಕಂಪ್ಲಿ ಸರಕಾರಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು ಅನಾಸನ ಸಾವಿಗೆ ಮೇಲ್ಕಂಡ ಟ್ರಾಕ್ಸ್ ಚಾಲಕನ ನಿರ್ಲಕ್ಷತನವೇ ಕಾರಣವಾಗಿದ್ದು ಸದ್ರಿ ಚಾಲಕನ ವಿರುದ್ದ ಕ್ರಮ ಜರುಗಿಸಲು ಕಂಪ್ಲಿ ಸರಕಾರಿ ಆಸ್ಪತ್ರೆಯಲ್ಲಿ ನೀಡಿದ ದೂರನ್ನು ಪಡೆದು ಆರೋಪಿ ಚಾಲಕನ ವಿರುದ್ದ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತದೆ.
ಪೊಲೀಸ್ ಸೂಪರಿಂಟೆಂಡೆಂಟ್,
ಬಳ್ಳಾರಿ.
ಇವರಿಗೆ,
ಎಲ್ಲಾ ಪತ್ರಿಕಾ ವರದಿಗಾರರಿಗೆ
ಹೆಚ್ಚಿನ ಮಾಹಿತಿಗಾಗಿ ಶ್ರೀ. ಮಹಮ್ಮದ್ ಗಯಾಸ್, ಎ.ಎಸ್.ಐ ಮೊಬೈಲ್ ನಂ. 9845484100 ಹಾಗು ಜಿ. ಸುಬ್ರಮಣ್ಯಂ, ಹೆಚ್.ಸಿ-175, ಮೋಬೈಲ್ ಸಂ: 9448202005 ರವರನ್ನು ಸಂಪರ್ಕಿಸಲು ವಿನಂತಿ
ಮಂಗಳವಾರ, ಮಾರ್ಚ್ 3, 2015
PRESS NOTE OF 01-03-2015
ಪತ್ರಿಕಾ ಪ್ರಕಟಣೆ
ಕಂಪ್ಲಿ ಪೊಲೀಸರಿಂದ ಮನೆಗಳಲ್ಲಿ ಕಳ್ಳತನ ಮಾಡುವ 3 ಜನ ಆರೋಪಿತರ ಬಂಧನ, ಅರೋಪಿತರಿಂದ ರೂ.3 ಲಕ್ಷ ಬೆಲೆ ಬಾಳುವ ಬಂಗಾರ, ಬೆಳ್ಳಿ ಆಭರಣಗಳು ಹಾಗೂ ಇತರೆ ವಸ್ತುಗಳ ವಶ :
ದಿನಾಂಕ: 01/03/2015 ರಂದು ಬೆಳಿಗ್ಗೆ 7.00 ಗಂಟೆ ಸುಮಾರಿಗೆ ಶ್ರೀ.ಲಿಂಗನಗೌಡ ನೆಗಳೂರು, ಸಿ.ಪಿ.ಐ., ಕಂಪ್ಲಿ ವೃತ್ತ ಹಾಗೂ ಕಂಪ್ಲಿ ಠಾಣೆಯ ಪಿ.ಎಸ್.ಐ. ರವರಾದ ಶ್ರೀ.ಹೆಚ್.ದೊಡ್ಡಣ್ಣ, ಶ್ರೀ.ಡಿ.ಹುಲುಗಪ್ಪ ಮತ್ತು ಸಿಬ್ಬಂದಿಯವರು ಎಸ್.ಪಿ., ಬಳ್ಳಾರಿ, ಡಿ.ಎಸ್.ಪಿ., ಹಂಪಿ ರವರ ಮಾರ್ಗದರ್ಶನದಂತೆ ಬಳ್ಳಾರಿ - ಕಂಪ್ಲಿ ರಸ್ತೆಯಲ್ಲಿ ಗುಡ್‍ಮಾರ್ನಿಂಗ್ ಬೀಟ್ ಕರ್ತವ್ಯ ನಿರ್ವಹಿಸುತ್ತಿರುವಾಗ, ಅದೇ ರಸ್ತೆಯಲ್ಲಿರುವ ಶ್ರೀ.ತಮ್ಮಣ್ಣ ಎಂಬುವರ ಹೋಟೆಲ್ ಹತ್ತಿರ (1) ಗಂಗ @ ಗುಂಡು, ತಂದೆ: ರಾಜಪ್ಪ ಗೌಳಿ, ವಾಸ: ಗಂಗಾವತಿ, (2) ನಿಸಾರ್ @ ಅಬ್ದುಲ್ ಅಲೀಮ್, ತಂದೆ: ಅಬ್ದುಲ್ ಕಲೀಮ್, ವಾಸ: ಕೊಂಡಪೇಟೆ, ಡೋಣ ಮಂಡಲಂ, ಕರ್ನೂಲ್ ಜಿಲ್ಲೆ, ಆಂಧ್ರಪ್ರದೇಶ ಮತ್ತು (3) ಹುಸೇನ್ @ ಹುಸೇನಿ, ತಂದೆ: ಸೈಯದ್ ಬುಜ್ಜಿ, ವಾಸ: ಕೊಂಡಪೇಟೆ, ಡೋಣ ಮಂಡಲಂ, ಕರ್ನೂಲ್ ಜಿಲ್ಲೆ, ಆಂಧ್ರಪ್ರದೇಶ, ಈ ಮೂರು ಜನರು ಮೋಟಾರ್ ಸೈಕಲ್‍ನಲ್ಲಿ ಏರ್‍ಕೂಲರ್ ಇಟ್ಟುಕೊಂಡು ಬಳ್ಳಾರಿ ಕಡೆ ಹೋಗುತ್ತಿರುವಾಗ ಪೊಲೀಸ್ ಅಧಿಕಾರಿಗಳಿಗೆ ಅನುಮಾನ ಬಂದು ಅವರನ್ನು ತಡೆದು ವಿಚಾರಿಸಿದಾಗ, ಸದರಿ 3 ಜನರು ಮೋಟಾರ್ ಸೈಕಲ್, ಏರ್‍ಕೂಲರ್ ಮತ್ತು ಅವರಲ್ಲಿದ್ದ ಸ್ಯಾಮ್‍ಸಂಗ್ ಮೊಬೈಲನ್ನು ಗಂಗಾವತಿಯಲ್ಲಿ ಕಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಿರುತ್ತಾರೆ. ಅವರನ್ನು ಠಾಣೆಗೆ ಕರೆದೊಯ್ದು ಹೆಚ್ಚಿನ ವಿಚಾರಣೆಗೆ ಒಳಪಡಿಸಿದಾಗ, ಸದರಿ 3 ಜನರು ಈ ಹಿಂದೆ ಕಂಪ್ಲಿ ಠಾಣಾ ಸರಹದ್ದಿನಲ್ಲಿ ಬರುವ ಕಂಪ್ಲಿ, ಮೆಟ್ರಿ, ರಾಮಸಾಗರ ಗ್ರಾಮಗಳಲ್ಲಿ ಮನೆಯ ಬೀಗಗಳನ್ನು ಮುರಿದು ಕಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಿದ್ದು, ಅವರಿಂದ ಒಟ್ಟು ರೂ.3 ಲಕ್ಷ ಬೆಲೆ ಬಾಳುವ ಎಂಟುವರೆ ತೊಲೆಯ ಬಂಗಾರದ ಆಭರಣಗಳು ಮತ್ತು ಅರ್ಧ ಕೆ.ಜಿ. ತೂಕದ ಬೆಳ್ಳಿ ಸಾಮಾನುಗಳನ್ನು ವಶಪಡಿಸಿಕೊಳ್ಳಲಾಗಿರುತ್ತದೆ.
ಮೇಲ್ಕಂಡ 3 ಜನ ಆರೋಪಿತರ ದಸ್ತಗಿರಿಯಿಂದ ಕಂಪ್ಲಿ ಠಾಣೆಯಲ್ಲಿ 2014ರಲ್ಲಿ ವರದಿಯಾಗಿದ್ದ 4 ಕನ್ನ ಕಳುವು ಪ್ರಕರಣಗಳು ಹಾಗೂ ಗಂಗಾವತಿ ನಗರ ಪೊಲೀಸ್ ಠಾಣೆಯಲ್ಲಿ ವರದಿಯಾಗಿದ್ದ 2 ಕನ್ನ ಕಳುವು ಪ್ರಕರಣಗಳು ಪತ್ತೆಯಾಗಿರುತ್ತವೆ.
ಈ ಉತ್ತಮ ಕಾರ್ಯ ನಿರ್ವಹಿಸಿದ ಸಿ.ಪಿ.ಐ., ಕಂಪ್ಲಿ ವೃತ್ತ ಮತ್ತು ಕಂಪ್ಲಿ ಪೊಲೀಸ್ ಠಾಣೆಯ ಪಿ.ಎಸ್.ಐ. ರವರು ಹಾಗೂ ಸಿಬ್ಬಂದಿಯವರನ್ನು ಎಸ್.ಪಿ., ಬಳ್ಳಾರಿ ರವರು ಪ್ರಶಂಸಿರುತ್ತಾರೆ ಮತ್ತು ಸೂಕ್ತ ಬಹುಮಾನ ಘೋಷಿಸಿರುತ್ತಾರೆ.
ಪೊಲೀಸ್ ಅಧೀಕ್ಷಕರು,
ಬ ಳ್ಳಾ ರಿ.
ಇವರಿಗೆ,
ಜಿಲ್ಲೆಯ ಎಲ್ಲಾ ಪತ್ರಿಕಾ ವರದಿಗಾರರಿಗೆ.
PRESS NOTE OF 03-03-2015
ಜಿಲ್ಲಾ ಪೊಲೀಸ್ ಕಾರ್ಯಲಯ
ಬಳ್ಳಾರಿ, ದಿನಾಂಕ: 03-03-2015
ಪತ್ರಿಕಾ ಪ್ರಕಟಣೆ
ದಿನಾಂಕ 02-03-2015 ರಂದು 06-30 ಎ.ಎಂ ಗಂಟೆಗೆ ಫಿರ್ಯಾದಿದಾರರಾದ ಶ್ರೀ. ಜಿ.ಭೋಜಪ್ಪ ತಂದೆ ಲೇಟ್ ಕರಿಯಪ್ಪ, ವಯಸ್ಸು 66ವರ್ಷ, ಬಾರಿಕರ ಜನಾಂಗ, ರಿಟೈರ್ ಟೀಚರ್, ವಾಸ: ರಾಮಸ್ವಾಮಿ ಪ್ಲಾಟ್ ಹೂವಿನ ಹಡಗಲಿ ಪಟ್ಟಣ ಇವರು ದೂರು ನೀಡಿದ್ದೇನೆಂದರೆ ತನ್ನ ಹೆಂಡತಿಯಾದ ಶ್ರೀಮತಿ ಗೌರಮ್ಮ ಗಂಡ ಜಿ.ಭೋಜಪ್ಪ, ವಯಸ್ಸು 55ವರ್ಷ, ಮುಖ್ಯ ಶಿಕ್ಷಕಿ ವೃತ್ತಿ, ಬಾರಿಕಿರ ಜನಾಂಗ, ವಾಸ: ವಿಜಯನಗರ ಬಡಾವಣೆ/ ರಾಮಸ್ವಾಮಿ ಪ್ಲಾಟ್, ಹೂವಿನ ಹಡಗಲಿ ಪಟ್ಟಣ ಇವರು ಕೆ.ಇ.ಬಿ. ಮತ್ತು ಎ.ಪಿ.ಎಂ,ಸಿ ಸರ್ಕಲ್ ಮುಖ್ಯ ರಸ್ತೆಯಲ್ಲಿ ವೇ ಬ್ರಿಡ್ಜ ಹತ್ತಿರ ಎ.ಪಿ.ಎಂ.ಸಿ ಕಡೆಗೆ ರಸ್ತೆಯ ಎಡ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ, ತಮ್ಮ ಎದುರಿಗೆ ಬಿಳಿಯ ಬಣ್ಣದ ಟಾ.ಟಾ.ಎಸಿ ವಾಹನ ಚಾಲಕ ತನ್ನ ವಾಹನವನ್ನು ಅತಿವೇಗ ಮತ್ತು ಆಜಾಗರು ಕತೆಯಿಂದ ಚಲಾಯಿಸಿಕೊಂಡು ಬಂದು, ತನ್ನ ಹೆಂಡತಿ ಗೌರಮ್ಮಳಿಗೆ ಡಿಕ್ಕಿ ಹೊಡೆಯಿಸಿದ ಪರಿಣಾಮ ತನ್ನ ಹೆಂಡತಿಗೆ ಬಲಗಡೆಯ ಹಣೆಯ ಮೇಲೆ ಭಾರಿ ಒಳಪೆಟ್ಟಾಗಿ ಬಾವು ಬಂದು ಮೂಗಿನಿಂದ ರಕ್ತ ಬರುತ್ತಿತ್ತು, ಬಲಗಡೆಯ ಮೊಣಕಾಲು ಕೆಳಗೆ ಭಾರಿ ಪೆಟ್ಟಾಗಿ ರಕ್ತ ಬರುತ್ತಿತ್ತು, ಹಾಗೂ ಎಡಗಡೆ ಪಾದಕ್ಕೆ ತೆರೆಚಿದ ರಕ್ತಗಾಯವಾಗಿದ್ದು, ಹಡಗಲಿ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿದ್ದು, ವೈಧ್ಯರು ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗೆ ದಾವಣಗೆರಿಗೆ ಹೋಗಲು ತಿಳಿಸಿದರು, ನಂತರ ತನ್ನ ಹೆಂಡತಿಯನ್ನು ದಾವಣಗೇರಿಗೆ ಅಂಬುಲೇನ್ಸನಲ್ಲಿ ದಾವಣಗೇರಿ ಸಿ.ಜೆ ಆಸ್ಪತ್ರೆಯಲ್ಲಿ ದಿ: 03-03-2015 ರಂದು ಬೆಳಿಗ್ಗೆ 10-35 ಗಂಟೆಯ ಸುಮಾರಿಗೆ ಚಿಕಿತ್ಸೆಗೆ ದಾಖಲಿಸಿದ್ದು, ತನ್ನ ಹೆಂಡತಿ ಅಪಘಾತದಲ್ಲಿ ಆದಂತಹ ಗಾಯಾಗಳಿಂದ ಚೇತರಿಸಿಕೊಳ್ಳದೆ ಹಾಗೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುತ್ತಾಳೆ ಎಂದು ಹಾಗೂ ವಾಹನ ಮತ್ತು ಚಾಲಕನನ್ನು ಹುಡುಕಾಡಿದ್ದು ಪತ್ತೆಯಾಗಿರುವದಿಲ್ಲ, ಟಾಟಾ ಎಸಿ ವಾಹನ ಮತ್ತು ಚಾಲಕನನ್ನು ಪತ್ತೆ ಹಚ್ಚಿ ಚಾಲಕನ ಮೇಲೆ ಕಾನೂನು ಕ್ರಮ ಜರುಗಿಸಲು ನೀಡಿದ ದೂರಿನ ಮೇರೆಗೆ ಹಡಗಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ, ತನಿಖೆ ಕೈಗೊಂಡಿರುತ್ತದೆ.
ಪೊಲೀಸ್ ಸೂಪರಿಂಟೆಂಡೆಂಟ್,
ಬಳ್ಳಾರಿ.
ಇವರಿಗೆ,
ಎಲ್ಲಾ ಪತ್ರಿಕಾ ವರದಿಗಾರರಿಗೆ
ಹೆಚ್ಚಿನ ಮಾಹಿತಿಗಾಗಿ ಶ್ರೀ. ಮಹಮ್ಮದ್ ಗಯಾಸ್, ಎ.ಎಸ್.ಐ ಮೊಬೈಲ್ ನಂ. 9845484100 ಹಾಗು ಜಿ. ಸುಬ್ರಮಣ್ಯಂ, ಹೆಚ್.ಸಿ-175, ಮೋಬೈಲ್ ಸಂ: 9448202005 ರವರನ್ನು ಸಂಪರ್ಕಿಸಲು ವಿನಂತಿ.
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)