ಜಿಲ್ಲಾ ಪೊಲೀಸ್ ಕಾರ್ಯಲಯ
ಬಳ್ಳಾರಿ, ದಿನಾಂಕ: 19-03-2015
ಪತ್ರಿಕಾ ಪ್ರಕಟಣೆ
1) ಮೋಟಾರ್ ಸೈಕಲ್‍ಗಳ ನಡುವೆ ರಸ್ತೆ ಅಫಘಾತ ಒಬ್ಬ ಸವಾರನ ಸಾವು.
ದಿ:17-03-15 ರಂದು ಸಂಜೆ 7-30 ಗಂಟೆಗೆ ಸುಮಾರಿಗೆ ಫಿರ್ಯಾದಿದಾರರು ತಮ್ಮ ಮಾಲಿಕನಾದ ಇಂತಿಯಾಜ್ ಹುಸೇನ್‍ರವರೊಂದಿ ಚಂದಮಾಮ ಹೋಟ್‍ನಲ್ಲಿ ಊಟ ಮಾಡಿ ತನ್ನ ಕೆ.ಎ.35/ಯು. 5827 ಟಿ.ವಿ.ಎಸ್. ಸೂಪರ್ ಎಕ್ಸೆಲ್ ಬೈಕ್‍ನಲ್ಲಿ ಹಿಂದುಗಡೆಗೆ ಮೃತ ಇಂತಿಯಾಜ್ ಹುಸೇನ್ ರವರನ್ನು ಕೂಡಿಸಿಕೊಂಡು ಮರಿಯಮ್ಮನಹಳ್ಳಿಗೆ ಬರಲು ಹೋಟಲ್‍ನಿಂದ ರಸ್ತೆಗೆ ಬರುತ್ತಿದ್ದಂತೆ ಹ.ಬೊ.ಹಳ್ಳಿ ಕಡೆಯಿಂದ ಯಾರೋ ಒಬ್ಬ ಅನಾಮಿಕ ಬೈಕ್ ಚಾಲಕನು ತನ್ನ ಬೈಕ್‍ನ್ನು ಅತೀ ವೇಗ ಮತ್ತು ನಿರ್ಲಕಷತನದಿಂದ ನಡೆಸಿಕೊಂಡು ಬಂದು ಡಿಕ್ಕಿ ಹೊಡೆದು ಅಪಘಾತಪಡಿಸಿ ಸ್ಥಳದಿಂದ ಪರಾರಿಯಾಗಿರುತ್ತಾನೆ. ಅಪಘಾತಪಡಿಸಿದ ಬೈಕ್ ಸವಾರಕನ ಹೆಸರು ಮತ್ತು ವಿಳಾಸ ಗೊತ್ತಿರುವುದಿಲ್ಲ ಗಾಯಗೊಂಡ ಇಂತಿಯಾಜ್ ಹುಸೇನ್, 29 ವರ್ಷ, ವಾ: ಮರಿಯಮ್ಮನಹಳ್ಳಿ ರವರಿಗೆ ಹೊಸಪೇಟೆ ಆಸ್ಪತ್ರೆಯಲ್ಲಿ ತದನಂತರ ಹೆಚ್ಚಿನ ಚಿಕಿತ್ಸೆಗೆ ಬಳ್ಳಾರಿ ವಿಮ್ಸ್‍ನಲ್ಲಿ ಚಿಕಿತ್ಸೆ ಕೊಡಿಸುತ್ತಿರುವ ಕಾಲಕ್ಕೆ ಈ ದಿನ ಬೆಳಿಗ್ಗೆ 7-00 ಗಂಟೆಗೆ ಚಿಕಿತ್ಸೆಯಲ್ಲಿ ಗುಣಮುಖನಾಗದೆ ಮೃತಪಟ್ಟಿರುತ್ತಾನೆ. ಅಪಘಾತಪಡಿಸಿ ಪರಾರಿಯಾದ ಬೈಕ್ ಚಾಲಕನಿಗೆ ಮತ್ತು ಬೈಕ್‍ನ್ನು ಪತ್ತೆ ಮಾಡಿ ಕಾನೂನು ಕ್ರಮ ಜರುಗಿಸಲು ಇದ್ದ ದೂರಿನ ಮೇರೆಗೆ ಪ್ರಕರಣ ದಾಖಲಿಸಿದ್ದು, ಈ ಬಗ್ಗೆ ಎಂ.ಎಂ.ಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತದೆ.
2) ಆಟೋ ಮತ್ತು ಲಾರಿ ನಡುವೆ ಡಿಕ್ಕಿ ಒಬ್ಬ ವ್ಯಕ್ತಿಯ ಸಾವು 10 ಜನರಿಗೆ ಗಾಯ.
ದಿನಾಂಕ: 18-3-2015 ರಂದು ಬೆಳಿಗ್ಗೆ ಬಳ್ಳಾರಿಯ ಅಂದ್ರಾಳು ಗ್ರಾಮದ ಬಳಿ ಇರುವ ಮುಲ್ಲಂಗಿರವರ ಹತ್ತಿ ಮಿಲ್‍ನಲ್ಲಿ ರಾತ್ರಿ ಪಾಳಿ ಕೆಲಸ ಮುಗಿಸಿಕೊಂಡು ವಾಪಾಸ್ ತಮ್ಮ ಗ್ರಾಮಗಳಿಗೆ ಹೋಗಲು ಮುಲ್ಲಂಗಿರವರ ಹತ್ತಿ ಮಿಲ್‍ನಿಂದ ಬೆಳಗಲ್ ತಾಂಡ ವಾಸಿಯಾದ ಚಂದ್ರಾನಾಯ್ಕರವರ ಆಟೋ ನಂಬರ್ ಕೆ.ಎ-34-ಬಿ-1448 ನೇದ್ದರಲ್ಲಿ ಫಿರ್ಯಾದಿ ಮತ್ತು ಅವರ ಗ್ರಾಮವಾಸಿ ಯಲ್ಲಮ್ಮ ಮತ್ತು ಬೆಳಗಲ್ ತಾಂಡ ವಾಸಿಗಳಾದ ಆಟೋ ಮಾಲೀಕ ಚಂದ್ರಾನಾಯ್ಕ, ರಾಮುನಾಯ್ಕ, ರಾಮ್‍ಜಿನಾಯ್ಕ, ಲಕ್ಷ್ಮೀಬಾಯಿ, ಸರಸ್ವತಿಬಾಯಿ @ ಸರಸುಬಾಯಿ, ದೇವರಾಜ್‍ನಾಯ್ಕ, ರಾಜೇಶ್‍ನಾಯ್ಕ ಸೀತಾಬಾಯಿ, ತಿಪ್ಲಿಬಾಯಿ ಮತ್ತು ಇತರರು ಕುಳಿತುಕೊಂಡು ಚಂದ್ರಾನಾಯ್ಕನ ಸಂಬಂದಿ ಅಮರೇಶ್‍ನಾಯ್ಕನು ಆಟೋ ಚಲಾಯಿಸಿಕೊಂಡು ಬೆಂಗಳೂರು ರಸ್ತೆಯಿಂದ ಹೊಸಪೇಟೆ ರಸ್ತೆಯನ್ನು ಸೇರುವ ಹೊಸ ಬೈಪಾಸ್ ರಸ್ತೆಯಲ್ಲಿ ಮಹಾದೇವ ಡಾಬಾ ಹತ್ತಿರ ಹೋಗುತ್ತಿದ್ದಾಗ ಬೆಳಿಗೆ 8-45 ಗಂಟೆಗೆ ಚಾಲಕ ಅಮರೇಶನಾಯ್ಕನು ಅಟೋವನ್ನು ಅತೀವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿ ಎದುರಿಗೆ ಬರುತ್ತಿದ್ದ ವಾಹನವನ್ನು ನೋಡಿ ಏಕಾಎಕೀ ಎಡಕ್ಕೆ ತಿರುಗಿಸಿ ರಸ್ತೆ ಪಕ್ಕ ನಿಂತಿದ್ದ ಲಾರಿಯೊಂದರ ಹಿಂಭಾಗಕ್ಕೆ ಡಿಕ್ಕಿ ಹೊಡೆದ ಪರಿಣಾಮವಾಗಿ ಆಟೋದ ಮುಂಭಾಗ ಪೂರಾ ಜಕ್ಕಂಗೊಂಡು ಆಟೋದಲ್ಲಿ ಪ್ರಯಾಣಿಸುತ್ತಿದ್ದ ಫಿರ್ಯಾದಿ ಮತ್ತು ಇತರರಿಗೆ ಹಾಗೂ ಆಟೋ ಚಾಲಕನಿಗೆ ಪೆಟ್ಟಾಗಿ ರಕ್ತಗಾಯಗಳಾಗಿ ಬೆಳಗಲ್ ತಾಂಡ ವಾಸಿ ರಾಮುನಾಯ್ಕ ತಂದೆ ರೊಡ್ಡ ಕೀರ್ಯಾನಾಯ್ಕ ವಯಸ್ಸು 55 ವರ್ಷ, ಲಿಂಬಾಣಿ ಜಾತಿ, ವಾಸ. ಬೆಳಗಲ್ ತಾಂಡ, ಬಳ್ಳಾರಿ ಈತನು ಸ್ಥಳದಲ್ಲೇ ಮೃತಪಟ್ಟಿರುತ್ತಾರೆಂದು ಆಟೋ ಚಾಲಕನ ಮೇಲೆ ಕಾನೂನು ಕ್ರಮ ಜರುಗಿಸಲು ಕೋರಿ ದೂರು ಇದ್ದ ದೂರಿನ ಮೇರೆಗೆ ಬಳ್ಳಾರಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತದೆ.
ಪೊಲೀಸ್ ಸೂಪರಿಂಟೆಂಡೆಂಟ್, ಬಳ್ಳಾರಿ.
ಇವರಿಗೆ,
ಎಲ್ಲಾ ಪತ್ರಿಕಾ ವರದಿಗಾರರಿಗೆ
ಹೆಚ್ಚಿನ ಮಾಹಿತಿಗಾಗಿ ಶ್ರೀ. ಮಹಮ್ಮದ್ ಗಯಾಸ್, ಎ.ಎಸ್.ಐ ಮೊಬೈಲ್ ನಂ. 9845484100 ಹಾಗು ಜಿ. ಸುಬ್ರಮಣ್ಯಂ, ಹೆಚ್.ಸಿ-175, ಮೋಬೈಲ್ ಸಂ: 9448202005 ರವರನ್ನು ಸಂಪರ್ಕಿಸಲು ವಿನಂತಿ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ