ಪತ್ರಿಕಾ ಪ್ರಕಟಣೆ
ಕಂಪ್ಲಿ ಪೊಲೀಸರಿಂದ ಮನೆಗಳಲ್ಲಿ ಕಳ್ಳತನ ಮಾಡುವ 3 ಜನ ಆರೋಪಿತರ ಬಂಧನ, ಅರೋಪಿತರಿಂದ ರೂ.3 ಲಕ್ಷ ಬೆಲೆ ಬಾಳುವ ಬಂಗಾರ, ಬೆಳ್ಳಿ ಆಭರಣಗಳು ಹಾಗೂ ಇತರೆ ವಸ್ತುಗಳ ವಶ :
ದಿನಾಂಕ: 01/03/2015 ರಂದು ಬೆಳಿಗ್ಗೆ 7.00 ಗಂಟೆ ಸುಮಾರಿಗೆ ಶ್ರೀ.ಲಿಂಗನಗೌಡ ನೆಗಳೂರು, ಸಿ.ಪಿ.ಐ., ಕಂಪ್ಲಿ ವೃತ್ತ ಹಾಗೂ ಕಂಪ್ಲಿ ಠಾಣೆಯ ಪಿ.ಎಸ್.ಐ. ರವರಾದ ಶ್ರೀ.ಹೆಚ್.ದೊಡ್ಡಣ್ಣ, ಶ್ರೀ.ಡಿ.ಹುಲುಗಪ್ಪ ಮತ್ತು ಸಿಬ್ಬಂದಿಯವರು ಎಸ್.ಪಿ., ಬಳ್ಳಾರಿ, ಡಿ.ಎಸ್.ಪಿ., ಹಂಪಿ ರವರ ಮಾರ್ಗದರ್ಶನದಂತೆ ಬಳ್ಳಾರಿ - ಕಂಪ್ಲಿ ರಸ್ತೆಯಲ್ಲಿ ಗುಡ್‍ಮಾರ್ನಿಂಗ್ ಬೀಟ್ ಕರ್ತವ್ಯ ನಿರ್ವಹಿಸುತ್ತಿರುವಾಗ, ಅದೇ ರಸ್ತೆಯಲ್ಲಿರುವ ಶ್ರೀ.ತಮ್ಮಣ್ಣ ಎಂಬುವರ ಹೋಟೆಲ್ ಹತ್ತಿರ (1) ಗಂಗ @ ಗುಂಡು, ತಂದೆ: ರಾಜಪ್ಪ ಗೌಳಿ, ವಾಸ: ಗಂಗಾವತಿ, (2) ನಿಸಾರ್ @ ಅಬ್ದುಲ್ ಅಲೀಮ್, ತಂದೆ: ಅಬ್ದುಲ್ ಕಲೀಮ್, ವಾಸ: ಕೊಂಡಪೇಟೆ, ಡೋಣ ಮಂಡಲಂ, ಕರ್ನೂಲ್ ಜಿಲ್ಲೆ, ಆಂಧ್ರಪ್ರದೇಶ ಮತ್ತು (3) ಹುಸೇನ್ @ ಹುಸೇನಿ, ತಂದೆ: ಸೈಯದ್ ಬುಜ್ಜಿ, ವಾಸ: ಕೊಂಡಪೇಟೆ, ಡೋಣ ಮಂಡಲಂ, ಕರ್ನೂಲ್ ಜಿಲ್ಲೆ, ಆಂಧ್ರಪ್ರದೇಶ, ಈ ಮೂರು ಜನರು ಮೋಟಾರ್ ಸೈಕಲ್‍ನಲ್ಲಿ ಏರ್‍ಕೂಲರ್ ಇಟ್ಟುಕೊಂಡು ಬಳ್ಳಾರಿ ಕಡೆ ಹೋಗುತ್ತಿರುವಾಗ ಪೊಲೀಸ್ ಅಧಿಕಾರಿಗಳಿಗೆ ಅನುಮಾನ ಬಂದು ಅವರನ್ನು ತಡೆದು ವಿಚಾರಿಸಿದಾಗ, ಸದರಿ 3 ಜನರು ಮೋಟಾರ್ ಸೈಕಲ್, ಏರ್‍ಕೂಲರ್ ಮತ್ತು ಅವರಲ್ಲಿದ್ದ ಸ್ಯಾಮ್‍ಸಂಗ್ ಮೊಬೈಲನ್ನು ಗಂಗಾವತಿಯಲ್ಲಿ ಕಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಿರುತ್ತಾರೆ. ಅವರನ್ನು ಠಾಣೆಗೆ ಕರೆದೊಯ್ದು ಹೆಚ್ಚಿನ ವಿಚಾರಣೆಗೆ ಒಳಪಡಿಸಿದಾಗ, ಸದರಿ 3 ಜನರು ಈ ಹಿಂದೆ ಕಂಪ್ಲಿ ಠಾಣಾ ಸರಹದ್ದಿನಲ್ಲಿ ಬರುವ ಕಂಪ್ಲಿ, ಮೆಟ್ರಿ, ರಾಮಸಾಗರ ಗ್ರಾಮಗಳಲ್ಲಿ ಮನೆಯ ಬೀಗಗಳನ್ನು ಮುರಿದು ಕಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಿದ್ದು, ಅವರಿಂದ ಒಟ್ಟು ರೂ.3 ಲಕ್ಷ ಬೆಲೆ ಬಾಳುವ ಎಂಟುವರೆ ತೊಲೆಯ ಬಂಗಾರದ ಆಭರಣಗಳು ಮತ್ತು ಅರ್ಧ ಕೆ.ಜಿ. ತೂಕದ ಬೆಳ್ಳಿ ಸಾಮಾನುಗಳನ್ನು ವಶಪಡಿಸಿಕೊಳ್ಳಲಾಗಿರುತ್ತದೆ.
ಮೇಲ್ಕಂಡ 3 ಜನ ಆರೋಪಿತರ ದಸ್ತಗಿರಿಯಿಂದ ಕಂಪ್ಲಿ ಠಾಣೆಯಲ್ಲಿ 2014ರಲ್ಲಿ ವರದಿಯಾಗಿದ್ದ 4 ಕನ್ನ ಕಳುವು ಪ್ರಕರಣಗಳು ಹಾಗೂ ಗಂಗಾವತಿ ನಗರ ಪೊಲೀಸ್ ಠಾಣೆಯಲ್ಲಿ ವರದಿಯಾಗಿದ್ದ 2 ಕನ್ನ ಕಳುವು ಪ್ರಕರಣಗಳು ಪತ್ತೆಯಾಗಿರುತ್ತವೆ.
ಈ ಉತ್ತಮ ಕಾರ್ಯ ನಿರ್ವಹಿಸಿದ ಸಿ.ಪಿ.ಐ., ಕಂಪ್ಲಿ ವೃತ್ತ ಮತ್ತು ಕಂಪ್ಲಿ ಪೊಲೀಸ್ ಠಾಣೆಯ ಪಿ.ಎಸ್.ಐ. ರವರು ಹಾಗೂ ಸಿಬ್ಬಂದಿಯವರನ್ನು ಎಸ್.ಪಿ., ಬಳ್ಳಾರಿ ರವರು ಪ್ರಶಂಸಿರುತ್ತಾರೆ ಮತ್ತು ಸೂಕ್ತ ಬಹುಮಾನ ಘೋಷಿಸಿರುತ್ತಾರೆ.
ಪೊಲೀಸ್ ಅಧೀಕ್ಷಕರು,
ಬ ಳ್ಳಾ ರಿ.
ಇವರಿಗೆ,
ಜಿಲ್ಲೆಯ ಎಲ್ಲಾ ಪತ್ರಿಕಾ ವರದಿಗಾರರಿಗೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ