ಸೋಮವಾರ, ಮಾರ್ಚ್ 23, 2015

PRESS NOTE OF 23/03/2013


ಜಿಲ್ಲಾ ಪೊಲೀಸ್ ಕಾರ್ಯಲಯ
                                         ಬಳ್ಳಾರಿ, ದಿನಾಂಕ: 23-03-2015

ಪತ್ರಿಕಾ ಪ್ರಕಟಣೆ

ಸಿ.ಪಿ.ಐ. ಕುರುಗೋಡು ವೃತ್ತ ಮತ್ತು ಅವರ ಅಧೀನದ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಯವರಿಂದ ಅಂತರ ರಾಜ್ಯ ಖೋಟಾ ನೋಟ್ ಚಲಾವಣೆ ಮಾಡುವವರ ಬಂಧನ – ರೂ. 1.70 ಲಕ್ಷ ಖೋಟಾ ನೋಟುಗಳ ವಶ.



                                               

       ದಿನಾಂಕ 22.03.2015 ರಂದು ಮದ್ಯಾಹ್ನ 03.00 ಗಂಟೆಗೆ ಪಿ.ಎಸ್.ಐ. ಕುಡತಿನಿ ರವರು ಠಾಣೆಯಲ್ಲಿದ್ದಾಗ ಕುಡತಿನಿ ಗ್ರಾಮದ ಬಳ್ಳಾರಿ ರಸ್ತೆಯಲ್ಲಿರುವ ಅಪೂರ್ವ ಪೆಟ್ರೋಲ್ ಬಂಕ್‍ನಲ್ಲಿ ಒಬ್ಬ ವ್ಯಕ್ತಿ ತನ್ನ ಮೋಟಾರ್ ಸೈಕಲ್‍ಗೆ 100 ರೂ ಪೆಟ್ರೋಲ್ ಹಾಕಿಸಿಕೊಂಡು ರೂ 1000/-  ಖೊಟಾ ನೋಟನ್ನು ನೀಡಿದ್ದಾನೆಂದು ಬಂದ ಖಚಿತ ಮಾಹಿತಿ ಮೇರೆಗೆ ಪಿ.ಎಸ್.ಐ.ರವರು  ಮೇಲಾಧಿಕಾರಿಗಳ ಮಾರ್ಗದರ್ಶನದಂತೆ ತಮ್ಮ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ಹೋಗಿ ಖೋಟಾನೋಟು ಚಲಾವಣೆ ಮಾಡಿದ ಮಸೀದಿ ವಲಿಸಾಬ್ @ ವಲಿ, ವಾಸ ಹಳೆ ಮಾದಾಪುರ ಗ್ರಾಮ ಸಂಡೂರು ತಾಲೂಕು ಈತನನ್ನು ಹಿಡಿದುಕೊಂಡು ಪಂಚರ ಸಮಕ್ಷಮ 1000 ರೂ ಮುಖಬೆಲೆಯ 10 ಖೊಟಾನೋಟುಗಳನ್ನು & ಬಜಾಜ್ ಡಿಸ್ಕವರಿ ಮೋಟಾರ್ ಸೈಕಲನ್ನು ಜಪ್ತು ಮಾಡಿಕೊಂಡಿದ್ದು ಈ ಬಗ್ಗೆ ಕುಡತಿನಿ ಠಾಣೆ ಗು.ನಂ. 31/2015 ಕಲಂ. 489(ಬಿ) & (ಸಿ) ಐಪಿಸಿ ರೀತ್ಯ ಪ್ರಕರಣ ದಾಖಲಿಸಿಕೊಂಡಿದ್ದು ಇರುತ್ತದೆ. 
  ನಂತರ ಮಾನ್ಯ ಶ್ರೀ ಚೇತನ್ ಸಿಂಗ್ ರಾಥೋರ್  ಎಸ್.ಪಿ, ಬಳ್ಳಾರಿ, ಶ್ರೀ ವಿಜಯ್.ಜಿ.ಡಂಬಳ ಹೆಚ್ಚುವರಿ ಎಸ್.ಪಿ ಬಳ್ಳಾರಿ, ಶ್ರೀ ಎನ್.,ರುದ್ರಮುನಿ ಡಿಎಸ್‍ಪಿ ಬಳ್ಳಾರಿ ಗ್ರಾಮೀಣ ರವರ ಮಾರ್ಗದರ್ಶದಲ್ಲಿ ಶ್ರೀ.ಜಿ.ಲಕ್ಷ್ಮೀಕಾಂತಯ್ಯ ಸಿಪಿಐ ಕುರುಗೋಡು, ಕೆ.ಬಿ.ವಾಸುಕುಮಾರ ಪಿ.ಎಸ್.ಐ ಕುಡುತಿನಿ ಹಾಗೂ ಸಿಬ್ಬಂದಿಯವರು ತನಿಖೆ ಕೈಕೊಂಡು, 3 ಜನ ಆರೋಪಿಗಳನ್ನು ದಿ:23.03.2015 ರಂದು ದಸ್ತಗಿರಿ ಮಾಡಿದ್ದು, ಆರೋಪಿ 1)ಮಸೀದಿ ವಲಿ@ವಲಿಸಾಬ್, 2)ಅಲ್ಲಾಭಕಾಶ್ @ ಭಕ್ಷಿ ರವರ ಕಡೆಯಿಂದ 1000 ಮತ್ತು 500 ರೂ ಮುಖಬೆಲೆಯ  ಒಟ್ಟು 1.70 ಲಕ್ಷ ರೂಗಳ ಖೋಟಾನೋಟುಗಳನ್ನು ವಶಪಡಿಸಿಕೊಳ್ಳಲಾಗಿದೆ. ಮತ್ತು ಆರೋಪಿ ಮಕ್ಬುಲ್ ಕಡೆಯಿಂದ ಖೊಟಾನೋಟುಗಳನ್ನು ವಶಪಡಿಸಿಕೊಳ್ಳುವುದು ಬಾಕಿಯಿದೆ. ಖೋಟಾ ನೋಟಿನ ಜಾಲವನ್ನು ಬೇಧಿಸಿ ಆರೋಪಿಗಳನ್ನು ಮತ್ತು ಖೋಟಾ ನೋಟುಗಳನ್ನು ಪತ್ತೆ ಹಚ್ಚಲು ಶ್ರಮಿಸಿದ ಜಿ.ಲಕ್ಷ್ಮೀಕಾಂತಯ್ಯ ಸಿ.ಪಿ.ಐ ಕುರುಗೋಡು, ಕೆ.ಬಿ.ವಾಸುಕುಮಾರ ಪಿ.ಎಸ್.ಐ ಕುಡುತಿನಿ ಪೊಲೀಸ್ ಠಾಣೆ ಹಾಗೂ ಸಿಬ್ಬಂದಿಯವರನ್ನು ಮಾನ್ಯ ಶ್ರೀ ಸುನೀಲ್ ಅಗರ್‍ವಾಲ್ ಐ.ಜಿ.ಪಿ.ಈಶಾನ್ಯ ವಲಯ ಕಲಬುರ್ಗಿ, ಮಾನ್ಯ ಶ್ರೀ ಚೇತನ್ ಸಿಂಗ್ ರಾಥೋರ್ ಎಸ್.ಪಿ  ಬಳ್ಳಾರಿ, ರವರು  ಈ ಕಾರ್ಯವನ್ನು ಶ್ಲಾಘಿಸಿ, ನಗದು ಬಹುಮಾನವನ್ನು ಘೋಷಿಸಿರುತ್ತಾರೆ. 
ಆರೋಪಿಗಳ ವಿಳಾಸ :-
1. ಮಸೀದಿ ವಲಿ  @ ವಲಿಸಾಬ್ @ ವಲಿ  ತಂದೆ ಮದರಸಾಬ್ ವ:36 ವರ್ಷ, ಮುಸ್ಲಿಂ, ವ್ಯವಸಾಯ ವಾಸ: ದರ್ಗಾ ಹತ್ತಿರ, ಹಳೆ ಮಾದಾಪುರ ಗ್ರಾಮ, ಸಂಡೂರು(ತಾ), ಬಳ್ಳಾರಿ ಜಿಲ್ಲೆ. ಮೊಬೈಲ್ ನಂ: 
2. ಅಲ್ಲಾ ಭಕಾಷ್ @ ಭಕ್ಷಿ ತಂದೆ ಅಮೀದ್ ಸಾಬ್, ವ:26 ವರ್ಷ, ಮುಸ್ಲಿಂ ಜನಾಂಗ, ಟೈಲರಿಂಗ್ ಕೆಲಸ, ವಾಸ, ಬಾಷ ಕಾಂಪೌಂಡ್,ಮಸೀದಿ ಹಿಂದೆ, ಬಂಡಿಮೋಟ್, ಬಳ್ಳಾರಿ. ಹಾಲಿ ವಾಸ:- ಬ್ಯೂಟಿ ಬಾರ್ & ರೆಸ್ಟೋರೆಂಟ್, ಅಲಿಗಾಂಜ್ (ಗ್ರಾಮ) ಇಸ್ಲಾಂಪುರ ಸಿಟಿ, ಪಶ್ಚಿಮಬಂಗಾಳ. 
3. ಮಕ್ಬುಲ್ @  ಮಕ್ಬುಲ್ ಹುಸೇನ್ @ ಅಶ್ರಫ್ ಅಲಿ ತಂದೆ ಶೇಖ್ ಅಬ್ದುಲ್ ಭಾಶಿದ್ ಸಾಬ್  ವ: 32 ವರ್ಷ, ಮುಸ್ಲಿಂ ಜನಾಂಗ,ಜೀನ್ಸ್ ಟೈಲರಿಂಗ್ ವೃತ್ತಿ, ಹೈಲೆ ಹಜೀದ್ ಮಸೀದಿ ಹತ್ತಿರ ಐಸ್‍ಕ್ರೀಮ್ ಫ್ಯಾಕ್ಟರಿ ಬಳಿ ಮಿಲ್ಲಾರ್ ಪೇಟೆ  ಬಳ್ಳಾರಿ.
4.
ವಶಪಡಿಸಿಕೊಂಡ ಖೋಟಾನೋಟುಗಳ ವಿವರ:- 
1) 1000 ರೂ ಮುಖಬೆಲೆಯ  145 ಖೋಟಾ ನೋಟುಗಳು   ಒಟ್ಟು 1,45,000-00 ರೂ
2) 500 ರು ಮುಖಬೆಲೆಯ    50 ಖೊಟಾ ನೋಟುಗಳು    ಒಟ್ಟು   25,000-00 ರೂ 

                                                                                                            ಪೊಲೀಸ್ ಸೂಪರಿಂಟೆಂಡೆಂಟ್,                                                                                                                                           ಬಳ್ಳಾರಿ.                                                                                                                  
ಇವರಿಗೆ,
ಎಲ್ಲಾ ಪತ್ರಿಕಾ ವರದಿಗಾರರಿಗೆ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ