ಜಿಲ್ಲಾ ಪೊಲೀಸ್ ಕಾರ್ಯಲಯ
ಬಳ್ಳಾರಿ, ದಿನಾಂಕ: 17-10-2014
ಪತ್ರಿಕಾ ಪ್ರಕಟಣೆ
1) ಬಳ್ಳಾರಿ ನಗರ ಗಾಂಧಿನಗರ ಠಾಣೆ ಸರಹದ್ದಿನ ಬಾಲಾ ರಿಜೆನ್ಸಿ ಲಾಡ್ಜ್ನ ರೂಂ. ನಂ. 303 ರಲ್ಲಿ ನಡೆಯುತ್ತಿದ್ದ ಇಸ್ಪೇಟ್ ಜೂಜಾಟದ ಮೇಲೆ ಪೊಲೀಸರ ದಾಳಿ ನಗದು ಹಣ ವಶ, ಆರೋಪಿತರ ಬಂಧನ.
ಶ್ರೀ ಪ್ರಸಾದ್ ಗೋಕುಲೆ, ಪಿ ಐ. ಡಿಸಿಆರ್ಬಿ ಬಳ್ಳಾರಿ ರವರಿಗೆ ದಿನಾಂಕ; 16-10-2014 ರಂದು ರಾತ್ರಿ 10-00 ಗಂಟೆಗೆ ಬಳ್ಳಾರಿ ನಗರದ ಪಾರ್ವತಿ ನಗರ ಮುಖ್ಯ ರಸ್ತೆಯಲ್ಲಿರುವ ಬಾಲಾ ರಜೆನ್ಸಿರ ರೂಮ್ ನಂ.303 ರಲ್ಲಿ ಅಂದರ್-ಬಾಹರ್ ಎನ್ನುವ ನಸೀಬಿನಾ ಇಸ್ಪೀಟ್ ಜೂಜಾಟ ನಡೆಯುತ್ತಿದೆ ಅಂತಾ ಬಂದ ಮಾಹಿತಿ ಮೇರೆಗೆ ಪೊಲೀಸ್ ಇನ್ಸ್ಪೆಕ್ಟರ್ ರವರು ಡಿ,ವೈ,ಎಸ್,ಪಿ ಬಳ್ಳಾರಿ ನಗರ ಉಪವಿಭಾಗ ರವರು ಹಾಗು ಸಿಬ್ಬಂದಿಯೊಂದಿಗೆ ರಾತ್ರಿ 10-45 ಗಂಟೆಗೆ ಮೇಲ್ಕಂಡ ಸ್ಥಳಕ್ಕೆ ಹೋಗಿ ದಾಳಿ ಮಾಡಿ, ಆರೋಪಿತರಾದ 1) ಪಾಂಡುರಂಗ 2) ಶರಣಬಸವ. 3) ವಿಜಯ್ ಕುರುಬ್, 4) ಪನಿ ಭೂಷಣ್. 5) ಕೆ ಟಿ ಕುಮಾರ್/ ಕಮ್ಮಾ. 6) ಬಿ ಪುರುಷೋತ್ತಮ. 7) ಡಿ ನಾಗರಾಜ. 8) ಕೃಷ್ಣಬಾಬು. 9) ಶಿವಪ್ರಸಾದ್. 10) ಶ್ರೀಕಾಂತ್. 11) ಸೋಮಶೇಖರ್ ರೆಡ್ಡಿ, 12) ಜಿ ಗಿರಿಯಪ್ಪ. 13) ರಾಜು ಎಸ್. 14) ರವಿಕುಮಾರ್ ಇವರನ್ನು ಹಿಡಿದು ಜೂಜಾಟಕ್ಕೆ ಪಣವಾಗಿ ಇಟ್ಟಿದ್ದ ಒಟ್ಟು ನಗದು ಹಣ ರೂ. 81,900/- ಮತ್ತು 52 ಇಸ್ಪೀಟ್ ಎಲೆಗಳನ್ನು ಜಪ್ತು ಮಾಡಿಕೊಂಡಿದ್ದು, ಈ ಬಗ್ಗೆ ಬಳ್ಳಾರಿ ಗಾಂಧಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ತನಿಖೆ ಕೈಗೊಂಡಿರುತ್ತದೆ.
ಪೊಲೀಸ್ ಸೂಪರಿಂಟೆಂಡೆಂಟ್,
ಬಳ್ಳಾರಿ.
ಇವರಿಗೆ,
ಎಲ್ಲಾ ಪತ್ರಿಕಾ ವರದಿಗಾರರಿಗೆ
ಹೆಚ್ಚಿನ ಮಾಹಿತಿಗಾಗಿ ಶ್ರೀ. ಮಹಮ್ಮದ್ ಗಯಾಸ್, ಎ.ಎಸ್.ಐ ಮೊಬೈಲ್ ನಂ. 9845484100 ಹಾಗು ಜಿ. ಸುಬ್ರಮಣ್ಯಂ, ಹೆಚ್.ಸಿ-175, ಮೋಬೈಲ್ ಸಂ: 9448202005 ರವರನ್ನು ಸಂಪಕರ್ಿಸಲು ವಿನಂತಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ