ಶನಿವಾರ, ಅಕ್ಟೋಬರ್ 25, 2014

Press Note as on 25-10-2014

ಜಿಲ್ಲಾ ಪೊಲೀಸ್ ಕಾರ್ಯಲಯ
                                             ಬಳ್ಳಾರಿ, ದಿನಾಂಕ: 25-10-2014
ಪತ್ರಿಕಾ ಪ್ರಕಟಣೆ

1)      ಬಳ್ಳಾರಿ ಗ್ರಾಮೀಣ ಪೊಲೀಸ್ ಠಾಣೆ ಸರಹದ್ದಿನ ಇಂಡಸ್ಟ್ರೀಯಲ್ ಏರಿಯಾದಲ್ಲಿರುವ ಮನೆಯಲ್ಲಿ ಕಳ್ಳತನ, ಕಂಪ್ಯೂಟರ್ ಸಲಕರಣಗಳ ಕಳವು.

       ಫಿರ್ಯಾದಿದಾರರಾದ ಶ್ರೀ. ಡಾ: ಮಲ್ಲಿಕಾರ್ಜುನ ರೆಡ್ಡಿ ತಂದೆ ಡಾ: ಎಲ್. ನಾಗಿರೆಡ್ಡಿ, : 39 ವರ್ಷ, ಆರ್ಯುವೇದ ವೈದ್ಯರು, ವಾಸ: ಮನೆ ನಂ: 54, ವಾರ್ಡ ನಂ: 25, ವಿಜಯನಗರ ಕಾಲೋನಿ, ಕಂಟೋನ್ಮೆಂಟ್, ಬಳ್ಳಾರಿ ಇವರು ದೂರು ನೀಡಿದ್ದೇನೆಂದರೆ, ದಿನಾಂಕ:  15-10-2014 ರಂದು ಸಂಜೆ 6-00 ಗಂಟೆಯಿಂದ ದಿ: 16-10-2014 ರಂದು ಬೆಳಿಗ್ಗೆ 8-00 ಗಂಟೆ ಮಧ್ಯದ ಅವಧಿಯಲ್ಲಿ ಯಾರೋ ಕಳ್ಳರು ಬಳ್ಳಾರಿ-ಬೆಂಗಳೂರು ರಸ್ತೆ ಇಂಡಸ್ಟ್ರೀಯಲ್ ಏರಿಯ 2 ನೇ ಹಂತದಲ್ಲಿರುವ ತನ್ನ ಚೈತನ್ಯ ಆಯುರ್ ಫಾರ್ಮಲೇಷನ್ ಪ್ಯಾಕ್ಟರಿಯ ದಕ್ಷಿಣ ಭಾಗದ ಗೋಡೆಯ ಕಿಟಕಿಯನ್ನು ಮುರಿದು ಪ್ಯಾಕ್ಟರಿಯ ಒಳಗೆ ಬಂದು ಪ್ಯಾಕ್ಟರಿಯ ಅಫೀಸ್ ರೂಂನಲ್ಲಿದ್ದ ಅಂದಾಜು ರೂ: 80,000/- ಬೆಲೆಯ ಒಂದು ಕಂಪ್ಯೂಟರ್ ಮಾನಿಟರ್, ಒಂದು ಸಿಪಿಯು, ಒಂದು ಲ್ಯಾಪ್ ಟಾಪ್ನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆಂದು  Àಮ್ಮ ವಸ್ತುಗಳನ್ನು ಪತ್ತೆ ಮಾಡಿ ಕಳ್ಳರ ಮೇಲೆ ಕಾನೂನು ಕ್ರಮ ಜರುಗಿಸಲು ಕೋರಿದ ಮೇರೆಗೆ ಬಳ್ಳಾರಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿ ತನಿಖೆ ಕೈಗೊಂಡಿರುತ್ತದೆ.


2)      ಪಿ.ಡಿ.ಹಳ್ಳಿ ಪೊಲೀಸ್ ಠಾಣೆ ಸರಹದ್ದಿನ ಚೆಳಗುರ್ಕಿ ಗ್ರಾಮದ ಹತ್ತಿರ ಎಪಿಎಸ್ಆರ್ಟಿಸಿ ಬಸ್ ಮತ್ತು ಮೋಟಾರ್ ಸೈಕಲ್ ನಡುವ ರಸ್ತೆ ಅಫಘಾತ, ಮೋಟಾರ್ ಸೈಕಲ್ ಸವಾರನ ಸಾವು, ಒಬ್ಬ ವ್ಯಕ್ತಿಗೆ ಗಾಯ.

        ಫಿರ್ಯಾದಿದಾರರಾದ ಶ್ರೀ. ಜಿ. ಶ್ರೀನಿವಾಸ ತಂದೆ ರಾಮಣ್ಣ, : 43 ವರ್ಷ, ಗೊಲ್ಲರು, ಸಾ: ಉರವಕೊಂಡ ಆಂದ್ರ ಪ್ರದೇಶ್ ಇವರು ಕೊಟ್ಟ ದೂರು ಏನೆಂದರೆ, ದಿ: 24/10/14 ರಂದು ರಂಗಸ್ವಾಮಿ ಮತ್ತು ರಾಮಾಂಜೀನಿಯಲು ರವರು ಮೊ/ಸೈ ನಂ ಎಪಿ-02/ಎಕ್ಯೂ-0856 ರಲ್ಲಿ ಚೆಳ್ಳಗುರ್ಕಿ ಕ್ರಾಸ್ ಹತ್ತಿರ ಹೋಗುವಾಗ ಆರೋಪಿತನಾದ ಬಾಷವಲಿ, ಎನ್. : 54 ವರ್ಷ, ಉರವಕೊಂಡ ಈತನು ತನ್ನ ಎಪಿಎಸ್ಆರ್ಟಿಸಿ ಬಸ್ ನಂ ಎಪಿ-02.ಜಡ್-0241 ನ್ನು ಅತಿವೇಗ ಮತ್ತು ಅಜಾಗ್ರತೆಯಿಂದ ನಡೆಸಿ ಮೊ/ಸೈ ಗೆ ಡಿಕ್ಕಿ ಹೊಡೆಸಿದ ಕಾರಣ ರಂಗಸ್ವಾಮಿ, 30 ವಾ: ಚೆಳ್ಳಗುರ್ಕಿ ಈತನು ಮೃತಪಟ್ಟಿದ್ದು, ರಾಮಾಂಜೀನೇಯಲು ಗೆ ಗಾಯಗಳಾಗಿರುವುದಾಗಿ ಇದ್ದ ದೂರಿನ ಮೇರೆಗೆ ಪಿ.ಡಿ.ಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿರುತ್ತದೆ
      
                                                ಪೊಲೀಸ್ ಸೂಪರಿಂಟೆಂಡೆಂಟ್,    
 ಬಳ್ಳಾರಿ.                     
ಇವರಿಗೆ
ಎಲ್ಲಾ ಪತ್ರಿಕಾ ವರದಿಗಾರರಿಗೆ.

ಹೆಚ್ಚಿನ ಮಾಹಿತಿಗಾಗಿ ಶ್ರೀ. ಮಹಮ್ಮದ್ ಗಯಾಸ್, .ಎಸ್. ಮೊಬೈಲ್ ನಂ. 9845484100 ಹಾಗು             
ಜಿ. ಸುಬ್ರಮಣ್ಯಂ, ಹೆಚ್.ಸಿ-175, ಮೋಬೈಲ್ ಸಂ: 9448202005 ರವರನ್ನು ಸಂಪರ್ಕಿಸಲು ವಿನಂತಿ.


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ