ಜಿಲ್ಲಾ ಪೊಲೀಸ್ ಕಾರ್ಯಲಯ
ಬಳ್ಳಾರಿ, ದಿನಾಂಕ: 28-10-2014
ಪತ್ರಿಕಾ ಪ್ರಕಟಣೆ
1) ತೋರಣಗಲ್ಲು ಪೊಲೀಸ್ ಠಾಣೆ ಸರಹದ್ದಿನ ಓವರ್ ಬ್ರಿಡ್ಜ ಹತ್ತಿರ ಎನ್.ಹೆಚ್.63 ರಸ್ತೆಯಲ್ಲಿ ಆಟೋ ಪಲ್ಟಿ ಒಬ್ಬ ಮಹಿಳೆ ಸಾವು ಹಲವರಿಗೆ ಗಾಯ
ದಿನಾಂಕ: 27-10-2014 ರಂದು ಮದ್ಯಾಹ್ನ 2-45 ಗಂಟೆ ಸುಮಾರಿಗೆ ಶ್ರೀಮತಿ. ರಾಮಾಂಜಿನಮ್ಮ ಇವರು ತನ್ನ ಮಕ್ಕಳಾದ ಬಸವರಾಜ ಮತ್ತು ಕುಸುಮಾವತಿ ಇವರೊಂದಿಗೆ ಬಸಾಪುರ ಗ್ರಾಮದಿಂದ ತೋರಣಗಲ್ಲು ಆರ್.ಎಸ್.ಗೆ ಬಂದಿದ್ದು, ಕೆಲಸ ಮುಗಿದ ನಂತರ ತೋರಣಗಲ್ಲು ಆರ್.ಎಸ್.ನಿಂದ ಬಸಾಪುರ ಗ್ರಾಮಕ್ಕೆ ಹೋಗಲು ಬಸಾಪುರ ಗ್ರಾಮದ ಜಂಬಣ್ಣ ಇವರು ತನ್ನ ಆಟೋ ನಂ. ಕೆ.ಎ-19-ಬಿ-7637 ರಲ್ಲಿ ಇತರೆ ಪ್ರಯಾಣಿಕರೊಂದಿಗೆ ಬರುತ್ತಿರುವಾಗ್ಗೆ ತೋರಣಗಲ್ ಆರ್.ಎಸ್.ನ ಓವರ್ ಬ್ರಿಡ್ಜ್ ಹತ್ತಿರ ಎನ್.ಹೆಚ್-63 ರಸ್ತೆಯಲ್ಲಿ ಚಾಲಕನು ತನ್ನ ಆಟೋವನ್ನು ಅತೀ ವೇಗವಾಗಿ ಮತ್ತು ಅಜಾಗೂರಕತೆಯಿಂದ ನಡೆದಿಕೊಂಡು ಬರುತ್ತಿದ್ದವನು ಇದ್ದಕ್ಕಿದ್ದಂತೆ ರಸ್ತೆಯ ಬಲಕ್ಕೆ ಹೋಗಿ ಆಟೋವನ್ನು ನಿಯಂತ್ರಣ ಮಾಡಿಕೊಳ್ಳಲಾಗಿದೇ ರಸ್ತೆಯ ಬಲಗಡೆ ತಗ್ಗಿಗೆ ಕೆಡವಿರುತ್ತಾನೆ. ಆಗ ಆಟೋ ಪಲ್ಟಿಯಾಗಿದ್ದು, ಆಟೋದಲ್ಲಿದ್ದ ಕುಸುಮಾವತಿಗೆ ತಲೆಯ ಹಿಂಬಾಗದಲ್ಲಿ ಬಲವಾದ ಪೆಟ್ಟು ಬಿದ್ದಿದ್ದು, ಇತರರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಎಲ್ಲರೂ ತೋರಣಗಲ್ ಜಿಂದಾಲ್ ಸಂಜೀವಿನಿ ಆಸ್ಪತ್ರೆಗೆ ಬಂದು ಚಿಕಿತ್ಸೆ ಪಡೆದುಕೊಂಡಿದ್ದು, ಕುಸುಮಾವತಿ- 15 ವರ್ಷ, ಇವಳನ್ನು ಹೆಚ್ಚಿನ ಚಿಕಿತ್ಸೆಗೆ ಬಳ್ಳಾರಿಗೆ ಕರೆದೊಯ್ಯುತ್ತಿರುವಾಗ್ಗೆ ಮಾರ್ಗ ಮಧ್ಯದಲ್ಲಿ ಮೃತಪಟ್ಟಿರುತ್ತಾಳೆಂದು ಇದ್ದ ದೂರಿನ ಮೇರೆಗೆ ತೋರಣಗಲ್ಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಕೈಗೊಂಡಿರುತ್ತದೆ.
2) ಗಾಂಧಿನಗರ ಠಾಣೆ ಸರಹದ್ದಿನ ಪಾರ್ವತಿನಗರದ ಟಿ.ವಿ.ಎಸ್. ಶೋ ರೂಂ ಹತ್ತಿರ ಯಾರೋ ಕಳ್ಳರಿಂದ ಮನೆ ಬಾಗಿಲಿನ ಚಿಲಕ ಮುರಿದು ಮನೆ ಕಳ್ಳತನ ಬಂಗಾರ, ಬೆಳ್ಳಿ ಮತ್ತು ನಗದು ಹಣ ಕಳವು.
ಫಿಯರ್ಾಧಿದಾರಳಾದ ಶ್ರೀಮತಿ. ಶಾಂತಕುಮಾರಿ ಗಂಡ ಎನ. ನಿರಂಜನ್, 40 ವರ್ಷ, ಜಂಗಮ ಜಾತಿ, ಮನೆಕಲಸ, ಸಾ: ಹೌ ನಂ. 6, ಪಾರ್ವತಿನಗರ, ಮುಖ್ಯ ರಸ್ತೆ, ಟಿ.ವಿ.ಎಸ್. ಶೋ ರೂಮ್ ಹತ್ತಿರ, ಬಳ್ಳಾರಿ ರವರು ಠಾಣೆಗೆ ಹಾಜರಾಗಿ ದಿ: 26-10-14 ರಂದು ಮಧ್ಯಾಹ್ನ 12-30 ಗಂಟೆಗೆ ಫಿರ್ಯಾದಿದಾರರು ತನ್ನ ಮನೆಯ ಬಾಗಿಲಿಗೆ ಬೀಗ ಹಾಕಿಕೊಂಡು ಮಗಳೊಂದಿಗೆ ತನ್ನ ಅಕ್ಕನ ಮನೆಗೆ ಹೋಗಿ ಅಲ್ಲಿಂದ ತನ್ನ ಅಕ್ಕನೊಂದಿಗೆ ಜೋಳದ ರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ನಡೆಯುತ್ತಿದ್ದ ಹಾಸ್ಯ ಕಾರ್ಯಕ್ರಮವನ್ನು ನೋಡಿ ಹೋಗಿ ಕಾರ್ಯಕ್ರಮ ಮುಗಿದ ನಂತರ ರಾತ್ರಿ 8-30 ಗಂಟೆಗೆ ಮನೆಗೆ ಬಂದು ಬಾಗಿಲ ಬೀಗ ತೆರೆಯಲು ಹೋದಾಗ ಅದಾಗಲೇ ತೆರದಿತ್ತು. ಬಾಗಿಲು ತೆಗೆದು ಒಳಗಡೆ ಹೋಗಿ ನೋಡಲು ಕಬ್ಬಿಣದ ಬೀರುವಾವನ್ನು ತೆರೆದು ಅದರಲ್ಲಿದ್ದ ಬಂಗಾರ ಮತ್ತು ಬೆಳ್ಳಿಯ ವಸ್ತುಗಳು ಹಾಗೂ ನಗದು ಹಣ ಒಟ್ಟು 1,65,100/- ರೂ ಬಾಳುವುದನ್ನು ಯಾರೋ ಕಳ್ಳರು ನಖಲಿ ಬೀಗಗಳನ್ನು ಉಪಯೋಗಿಸಿ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆಂದು ಇದ್ದ ದೂರಿನ ಮೇರೆಗೆ ಗಾಂಧಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತದೆ.
ಪೊಲೀಸ್ ಸೂಪರಿಂಟೆಂಡೆಂಟ್,
ಬಳ್ಳಾರಿ.
ಇವರಿಗೆ,
ಎಲ್ಲಾ ಪತ್ರಿಕಾ ವರದಿಗಾರರಿಗೆ
ಹೆಚ್ಚಿನ ಮಾಹಿತಿಗಾಗಿ ಶ್ರೀ. ಮಹಮ್ಮದ್ ಗಯಾಸ್, ಎ.ಎಸ್.ಐ ಮೊಬೈಲ್ ನಂ. 9845484100 ಹಾಗು ಜಿ. ಸುಬ್ರಮಣ್ಯಂ, ಹೆಚ್.ಸಿ-175, ಮೋಬೈಲ್ ಸಂ: 9448202005 ರವರನ್ನು ಸಂಪಕರ್ಿಸಲು ವಿನಂತಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ