ಗುರುವಾರ, ಅಕ್ಟೋಬರ್ 30, 2014

PRESS NOTE AS ON 30/10/2014



                                      ಜಿಲ್ಲಾ ಪೊಲೀಸ್ ಕಾರ್ಯಲಯ
                                             ಬಳ್ಳಾರಿ, ದಿನಾಂಕ: 30-10-2014
ಪತ್ರಿಕಾ ಪ್ರಕಟಣೆ 

1) ಎಂ.ಎಂ.ಹಳ್ಳಿ ಪೊಲೀಸ್ ಠಾಣೆ ಸರಹದ್ದಿನ ದೇವೇಂದ್ರಪ್ಪನ ಡಾಬಾದ ಹತ್ತಿರ ಕಳ್ಳತನದಿಂದ ಅಪಾರ ಪ್ರಮಾಣದ ಬೆಲೆಯುಳ್ಳ ರಕ್ತ ಚಂದನ ಸಾಗಿಸುತ್ತಿರುವಾಗ್ಗೆ ಹಿಡಿದು ಆರೋಪಿಯನ್ನು ಬಂಧಿಸಿ ರಕ್ತ ಚಂದನ ಜಪ್ತು ಪಡಿಸಿಕೊಂಡ ಬಗ್ಗೆ. 

         ದಿ: 25-10-14 ರಂದು ತಿಮ್ಮಲಾಪುರ ಗ್ರಾಮದಲ್ಲಿ ವರದಿಯಾದ ಕೊಲೆ ಪ್ರಕರಣದಲ್ಲಿ ತನಿಖೆಯ ಸಲುವಾಗಿ ದಿನಾಂಕ:28-10-14 ರಂದು ಸಂಜೆ 5-00 ಗಂಟೆಗೆ ತಿಮ್ಮಲಾಪುರ ಗ್ರಾಮ ಭೇಟಿಗಾಗಿ ಪಿ.ಎಸ್.ಐ ಎಂ.ಎಂ.ಹಳ್ಳಿ, ಪಿ.ಐ. ಸಂಡೂರು ಶ್ರೀ. ರಮೇಶರಾವ್ ರವರ ಸಂಗಡ ಹೋಗುತ್ತಿರುವಾಗ್ಗೆ ಸಂಜೆ 5-30 ಗಂಟೆ ಸುಮಾರಿಗೆ ದೇವೇಂದ್ರಪ್ಪನ ಡಾಬದ ಬಳಿ ಲಾರಿಗಳು ಟ್ರಾಫಿಕ್ ಜಾಮ್ ಆಗಿ ನಿಂತಿದ್ದವು. ಅದನ್ನು ಲೆಕ್ಕಿಸದೆ ಒಬ್ಬ ಲಾರಿ ಚಾಲಕನು ತನ್ನ ಲಾರಿಯನ್ನು ಸಂದುಗಳಲ್ಲಿ ತೂರಿಕೊಂಡು ಬರ ತೊಡಗಿದ್ದು ನಮ್ಮ ಸಿ.ಪಿ.ಐ. ಸಂಡೂರು ರವರ ಸೂಚನೆಯಂತೆ ಅದನ್ನು ಪಿ.ಎಸ್.ಐ ಮತ್ತು ಸಿಬ್ಬಂದಿಯವರು ಕೈ ಸನ್ನೆ ಮಾಡಿ ನಿಲ್ಲಿಸಲು ಸೂಚನೆ ನೀಡಿದರು ಸಹಾ ಹಾಗೆ ತನ್ನ ಲಾರಿಯನ್ನು ಚಲಿಸಿಕೊಂಡು ಹೋಗ ತೊಡಗಿದನು. ಕೂಡಲೆ  ಜೀಪಿನ ಸಹಾಯದಿಂದ ಬೆನ್ನತ್ತಿ ಲಾರಿಯನ್ನು ತಡೆದು ನಿಲ್ಲಿಸಿ ಲಾರಿ ಚಾಲಕನಿಗೆ ಕೆಳಗೆ ಇಳಿಸಿ ಆತನ ಹೆಸರು ಮತ್ತು ವಿಳಾಸ ಕೇಳಲು ತನ್ನ ಹೆಸರು ಮಂಜೂರು ಅಲಿ ತಂದೆ ಮಹ್ಮದ್ ತಾಲೀಮ್ ವ: 24 ವರ್ಷ ಮುಸ್ಲಿಂ ಜನಾಂಗ ಹೆಚ್.ಆರ್. 74/ಎ.1183 (10 ಗಾಲಿ) ಲಾರಿ ಚಾಲಕ ವಾಸ: ಪಹಡ ಹತ್ತಿರ ರೋಡಾವಾಲಿ ಗಲ್ಲಿ ಪಹಡ (ಪೊಲೀಸ್ ಠಾಣಾ ಸರಹದ್ದು) ನೋಹು (ಮೇವಾಥ) (ಜಿಲ್ಲೆ) ಹರಿಯಾಣ (ರಾಜ್ಯ) ಎಂದು ತಿಳಿಸಿದ್ದು ಲಾರಿಯಲ್ಲಿ ಏನು ಇದೆ ಎಂದು ವಿಚಾರಿಸಲು ಹಿಂದಿ ಬಾಷೆಯಲ್ಲಿ ತೆಂಗಿನ ಕಾಯಿ ಲೋಡ್ ಇದೆ ತುಮಕೂರಿನಲ್ಲಿ ಲೋಡಾಯಿತು ದೆಹಲಿಗೆ ಹೋಗಬೇಕು ಎಂದು ತಿಳಿದನು. ಲಾರಿಯಲ್ಲಿ ಏನು ಇದೆ ಎಂದು ಚೆಕ್ ಮಾಡಿ ನೋಡಲು, ಆರಂಭದಲ್ಲಿ ತೆಂಗಿನ ಕಾಯಿ ಮೂಟೆ ಇದ್ದು ನಂತರ ಕಟ್ಟಿಗೆ ದಿಂಡುಗಳು ಇದ್ದವು. ಇವುಗಳ ಬಗ್ಗೆ ಲಾರಿ ಚಾಲಕ ಮಂಜೂರು ಅಲಿಗೆ ವಿಚಾರಿಸಲು ಕಟ್ಟಿಗೆ ದಿಂಡುಗಳ ಬಗ್ಗೆ ನನಗೇನು ಗೊತ್ತಿಲ್ಲ ತುಮಕೂರಿನಲ್ಲಿ ತೆಂಗಿನ ಕಾಯಿ ಲೋಡಾಗಿದ್ದು ಡೆಲ್ಲಿಗೆ ಅನ್ ಲೋಡ್ ಮಾಡಲು ಹೋಗುವುದಾಗಿ ತಿಳಿಸಿದನು. ಸದರಿ ಕಟ್ಟಿಗೆಗಳು ಯಾವು ಎಂದು ದೃಡಪಡಿಸಿಕೊಳ್ಳಲು ಕೂಡಲೆ ಆರ್.ಎಫ್.ಓ. ಹೊಸಪೇಟೆ ಶ್ರೀ. ಶ್ರೀಧರ್ ರವರನ್ನು ಮತ್ತು ಇಬ್ಬರು ಪಂಚರನ್ನು ಸ್ಥಳಕ್ಕೆ ಬರಮಾಡಿಕೊಂಡು ಸಂಜೆ 6-00 ಗಂಟೆಗೆ ಅಲ್ಲಿದ್ದ ಗ್ರಾಮದ ಜನರ ಸಹಾಯದಿಂದ ಹೆಚ್.ಆರ್. 74/ಎ.1183 (10) ಲಾರಿಯಲ್ಲಿದ್ದ ತೆಂಗಿನ ಕಾಯಿ ಮೂಟೆಗಳನ್ನು ಕೆಳಗೆ ಇಳಿಸಿ ಲಾರಿಯಲ್ಲಿದ್ದ ಕಟ್ಟಿಗೆಗಳನ್ನು ಆರ್.ಎಫ್.ಓ. ರವರ ಸಮಕ್ಷಮದಲ್ಲಿ ನೋಡಲು, ಆರ್.ಎಫ್.ಓ. ರವರು ಸದರಿ ಕಟ್ಟಿಗೆಗಳು ರಕ್ತಚಂದನ ಲಾಗ್ಸ್ (ಐಔಉS) ಮತ್ತು ಇವು “ಬಿ” ಗ್ರೇಡಿನವುಗಳು ಇದ್ದು ಸಾರ್ವತ್ರಿಕ ಹರಾಜಿನಲ್ಲಿ ಪ್ರತಿ ಒಂದು ಮೆ.ಟನ್‍ಗೆ 8,00,000-00 ರೂಗಳು ಆಗುವುದಾಗಿ ತಿಳಿಸಿದರು. ಕೂಡಲೆ ಸೇರಿದ ಜನರು ಮತ್ತು ಪಂಚರ ಸಹಾಯದಿಂದ ಸದರಿ ರಕ್ತಚಂದನ ಲಾಗ್ಸ್ (ಐಔಉS) ಗಳನ್ನು ಒಂದೊಂದಾಗಿ ಪರಿಶೀಲಿಸಿ ನೋಡಲು. ಸುಮಾರು ಐದೂವರೆ ಅಡಿಯಿಂದ ಆರೂವರೆ ಅಡಿ ಉದ್ದನೇಯ ಮತ್ತು ಸುಮಾರು 8 ರಿಂದ 10 ಇಂಚು ಸುತ್ತಳೆತೆಯ ತೊಗಟೆ ಕೆತ್ತಿದ ಹಾಗು ಕೆಂಪು ಬಣ್ಣದಿಂದ ಕೂಡಿದ ಲಾಗ್ಸ್ (ಐಔಉS) ಕಟ್ಟಿಗೆಗಳು ಇರುತ್ತವೆ. ಇವುಗಳನ್ನು ತುಂಬಿಕೊಂಡು ಬಂದ ಲಾರಿಯನ್ನು ಪರಿಶೀಲಿಸಿ ನೋಡಲು, ಹೆಚ್.ಆರ್. 74/ ಎ. 1183 ನಂಬರಿನ (10 ಗಾಲಿ) ಲಾರಿ ಇದ್ದು ಮೇಲ್ಬಾಗವೆಲ್ಲ ತಾಡ್ ಪಾಲಿನಿಂದ ಹೊದಿಕೆ ಮಾಡಿರುತ್ತದೆ. ಸದರಿ ಲಾರಿ ತುಮಕೂರಿನಲ್ಲಿ ಲೋಡಾಗಿ ದೆಹಲಿಯಲ್ಲಿ ಅನ್ ಲೋಡ್ ಆಗುವುದಾಗಿ ಚಾಲಕನಿಂದ ಮಾಹಿತಿ ತಿಳಿದಿರುತ್ತದೆ. ಲಾಗ್ಸ್ (ಐಔಉS) ಕಟ್ಟಿಗೆಗಳ ನಿಖರ ತೂಕ ನೋಡಲು, ಒಟ್ಟು ನಿವ್ವಳ ತೂಕ 14,840 ಕೆ.ಜಿ. ತೂಕ ಬಂದಿರುತ್ತದೆ. ನಂತರ ಕಟ್ಟಿಗೆಗಳನ್ನು ಕೆಳಗೆ ಇಳಿಸಿ ಖಾಲಿ ಲಾರಿಯನ್ನು ತೂಕ ಮಾಡಿ ನೋಡಲು. ಖಾಲಿ ಲಾರಿ 9,380 ಕೆ.ಜಿ. ಬಂದಿರುತ್ತದೆ. ಅಂದರೆ, ಲಾಗ್ಸ್ (ಐಔಉS) ಕಟ್ಟಿಗೆಗಳ ತೂಕ 5,460 ಕೆ.ಜಿ. ಇದ್ದು ಅಂದಾಜು ಬೆಲೆ 43,68,000-00 ರೂಗಳು ಅಗಬಹುದಾಗಿ ಸ್ಥಳದಲ್ಲಿದ್ದ ಆರ್.ಎಫ್.ಓ. ರವರು ತಿಳಿಸಿರುತ್ತಾರೆ. ಲಾಗ್ಸ್ (ಐಔಉS) ಕಟ್ಟಿಗೆಗಳನ್ನು ಲೋಡ್ ಮಾಡಿದ ಸ್ಥಳ ಅಂದರೆ, ತುಮಕೂರಿನಲ್ಲಿನ ದುಷ್ಕರ್ಮಿಗಳು ಸದರಿ ಕಟ್ಟಿಗೆಗಳನ್ನು ಕಾಳ ಸಂತೆಯಿಂದ ಖರೀದಿ ಮಾಡಿಯೋ ಅಥವಾ ಅರಣ್ಯದಲ್ಲಿ ಬೆಳೆದು ನಿಂತ (ಐಔಉS) ಮರಗಳನ್ನು ಕಳ್ಳತನದಿಂದ   ಕತ್ತಿರಿಸಿಕೊಂಡು ತಮ್ಮ ಸ್ವಂತ ಲಾಭಕ್ಕಾಗಿ ದೆಹಲಿಗೆ ಹೆಚ್.ಆರ್. 74/ ಎ. 1183  ಲಾರಿಯಲ್ಲಿ  ಸಾಗಿಸುತ್ತಿದ್ದಾಗಿ ತಿಳಿದು ಬಂದಿದ್ದು  ಈ ಕೃತ್ಯದ ಹಿಂದೆ  ಇನ್ನು ಕೆಲವು ದುಷ್ಕರ್ಮಿಗಳು ಇದ್ದು ಆ ಬಗ್ಗೆ ಸಹಾ ಇನ್ನು ಮಾಹಿತಿ ತಿಳಿಯಬೇಕಾಗಿರುತ್ತದೆ. 5,460 ಕೆ.ಜಿ. ಲಾಗ್ಸ್ ಕಟ್ಟಿಗೆಗಳನ್ನು ಮತ್ತು ಲಾರಿಯಲ್ಲಿ ಸಾಗಿಸುತ್ತಿದ್ದ ಸುಮಾರು 50,000-00 ರೂಗಳು ಬೆಲೆ ಬಾಳುವ 100 ತೆಂಗಿನ ಕಾಯಿ ಮೂಟೆಗಳನ್ನು ಮತ್ತು ಕೃತ್ಯಕ್ಕೆ ಬಳಸಿದ ಹೆಚ್.ಆರ್. 74/ ಎ. 1183  ಲಾರಿಯನ್ನು ಜಪ್ತುಪಡಿಸಿಕೊಂಡಿದ್ದು, ಈ ಬಗ್ಗೆ ಎಂ.ಎಂ.ಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತದೆ.

                                                                                                               ಪೊಲೀಸ್ ಸೂಪರಿಂಟೆಂಡೆಂಟ್,                                                                              
                                                                                                                              ಬಳ್ಳಾರಿ.                                                                                                                
ಇವರಿಗೆ,
ಎಲ್ಲಾ ಪತ್ರಿಕಾ ವರದಿಗಾರರಿಗೆ

ಹೆಚ್ಚಿನ ಮಾಹಿತಿಗಾಗಿ ಶ್ರೀ. ಮಹಮ್ಮದ್ ಗಯಾಸ್, ಎ.ಎಸ್.ಐ ಮೊಬೈಲ್ ನಂ. 9845484100 ಹಾಗು                            ಜಿ. ಸುಬ್ರಮಣ್ಯಂ, ಹೆಚ್.ಸಿ-175, ಮೋಬೈಲ್ ಸಂ: 9448202005 ರವರನ್ನು ಸಂಪರ್ಕಿಸಲು ವಿನಂತಿ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ