ಜಿಲ್ಲಾ ಪೊಲೀಸ್ ಕಾರ್ಯಲಯ
ಬಳ್ಳಾರಿ, ದಿನಾಂಕ: 31-10-2014
ಪತ್ರಿಕಾ ಪ್ರಕಟಣೆ
1) ಹೆಚ್.ಬಿ.ಹಳ್ಳಿ ಪೊಲೀಸ್ ಠಾಣೆ ಸರಹದ್ದಿನ ಅಗ್ನಿಶಾಮಕ ಠಾಣೆಯ ಹತ್ತಿರ ಮೋಟಾರ್ ಸೈಕಲ್ ಹಾಗು ಟ್ರಾಕ್ಟರ್ ನಡುವೆ ಮುಖಾಮುಖಿ ಡಿಕ್ಕಿ ಮೋಟಾರ್ ಸೈಕಲ್ ಸವಾರನ ಸಾವು.
ದಿನಾಂಕ 31-10-14 ರಂದು ಬೆಳಗಿನ ಜಾವ 00-15 ಗಂಟೆಗೆ ಪಿರ್ಯಾದಿದಾರರು ಠಾಣೆಗೆ ಬಂದು ಕೊಟ್ಟ ಹೇಳಿಕೆ ದೂರಿನ ಸಾರಾಂಶವೇನೆಂದರೆ, ದಿನಾಂಕ 30-10-14 ರಂದು ಸಂಜೆ 6-45 ಗಂಟೆಗೆ ಪಿರ್ಯಾದಿದಾರರ ಮಗನಾದ ಪಿ.ಎಂ.ಸಂತೋಷಕುಮಾರ, 25 ವರ್ಷ, ವಾ: ಹೆಚ್.ಬಿ.ಹಳ್ಳಿ ಈತನು ಹ.ಬೊ.ಹಳ್ಳಿ-ಹರಪನಹಳ್ಳಿ ತಾರ್ ರಸ್ತೆಯ ಮೇಲೆ ಅಗ್ನಿಶಾಮಕ ಠಾಣೆಯ ಹತ್ತಿರ ತನ್ನ ಹಿರೊಹೊಂಡಾ ಪ್ಯಾಶನ್ ಪ್ರೊ ಮೋಟರ್ ಸೈಕಲ್ ನಂ ಕೆ.ಎ.17/ಇಎಫ್-3466 ನೇದ್ದರಲ್ಲಿ ಹ.ಬೊ.ಹಳ್ಳಿ ಕಡೆಯಿಂದ ಹರಪನಹಳ್ಳಿ ಕಡೆಗೆ ಹೋಗುತ್ತಿರುವಾಗ ಹರಪನಹಳ್ಳಿ ಕಡೆಯಿಂದ ಹ.ಬೊ.ಹಳ್ಳಿ ಕಡೆಗೆ ಹೋಗಲು ಯಾವುದೊ ಒಂದು ಟ್ಯ್ರಾಕ್ಟರ್ ಚಾಲಕನು ತನ್ನ ಟ್ರ್ಯಾಕ್ಟರನ್ನು ಅತೀವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಮಗ ಸಂತೋಷಕುಮಾರನ ಮೋಟರ್ ಸೈಕಲ್‍ಗೆ ಡಿಕ್ಕಿಹೊಡೆಸಿ ತನ್ನ ಟ್ರ್ಯಾಕ್ಟರ್‍ನೊಂದಿಗೆ ಪರಾರಿಯಾದ ಪರಿಣಾಮವಾಗಿ ಸಂತೋಷಕುಮಾರನಿಗೆ ಹಣೆಯ ಬಲಬಾಗದಲ್ಲಿ ಭಾರಿ ರಕ್ತಗಾಯ ಮತ್ತು ಬಲಭುಜದ ಹತ್ತಿರ, ಬಲಪಾದದ ಹತ್ತಿರ ತೆರೆಚಿದ ರಕ್ತಗಾಯ ಮತ್ತು ಒಳಪೆಟ್ಟುಗಳಾಗಿದ್ದು 108 ಆಂಬೂಲೆನ್ಸ್‍ನಲ್ಲಿ ಚಿಕಿತ್ಸೆಗೆ ಹ.ಬೊ.ಹಳ್ಳಿ ಸರ್ಕಾರಿ ಆಸ್ಪತ್ರಗೆ ತರುವ ಮಾರ್ಗ ಮದ್ಯದಲ್ಲಿ ಮೃತಪಟ್ಟಿದ್ದಾಗಿ, ಅಪಘಾತ ಪಡಿಸಿ ಪರಾರಿಯಾದ ಟ್ರ್ಯಾಕ್ಟರ್ ಚಾಲಕ ಮತ್ತು ಟ್ರ್ಯಾಕ್ಟರ್‍ನ್ನು ಪತ್ತೆ ಹಚ್ಚಿ ಕಾನೂನು ಕ್ರಮ ಜರುಗಿಸುವಂತೆ ಇದ್ದ ಮೇರೆಗೆ ಹಗರಿಬೊಮ್ಮನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತದೆ.
ಪೊಲೀಸ್ ಸೂಪರಿಂಟೆಂಡೆಂಟ್,
ಬಳ್ಳಾರಿ.
ಇವರಿಗೆ,
ಎಲ್ಲಾ ಪತ್ರಿಕಾ ವರದಿಗಾರರಿಗೆ
ಹೆಚ್ಚಿನ ಮಾಹಿತಿಗಾಗಿ ಶ್ರೀ. ಮಹಮ್ಮದ್ ಗಯಾಸ್, ಎ.ಎಸ್.ಐ ಮೊಬೈಲ್ ನಂ. 9845484100 ಹಾಗು
ಜಿ. ಸುಬ್ರಮಣ್ಯಂ, ಹೆಚ್.ಸಿ-175, ಮೋಬೈಲ್ ಸಂ: 9448202005 ರವರನ್ನು ಸಂಪರ್ಕಿಸಲು ವಿನಂತಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ