ಜಿಲ್ಲಾ ಪೊಲೀಸ್ ಕಾರ್ಯಲಯ
ಬಳ್ಳಾರಿ, ದಿನಾಂಕ: 27-10-2014
ಪತ್ರಿಕಾ ಪ್ರಕಟಣೆ
1) ಹೊಸಪೇಟೆ ನಗರದ ಕೌಲ್‍ಪೇಟೆಯಲ್ಲಿ ಕಳ್ಳರಿಂದ ಮನೆ ಕಳ್ಳತನ ಅಪಾರ ಆಭರಣ ಹಾಗು ನಗದು ಹಣ ಕಳವು.
ಫಿರ್ಯಾದುದಾರರಾದ ಶ್ರೀ ಕೆ. ಈರಣ್ಣ ತಂದೆ ವೀರಭದ್ರಪ್ಪ, ವಾಸ: ಕೌಲ್‍ಪೇಟೆ ಹೊಸಪೇಟೆ ಇವರು ತನ್ನ ಹೆಂಡತಿಗೆ ಮೈಯಲ್ಲಿ ಹುಷಾರಿಲ್ಲದ ಕಾರಣ ಮನೆಗೆ ಬೀಗ ಹಾಕಿಕೊಂಡು ದಿನಾಂಕ: 17-10-14 ರಂದು ಹೋಗಿದ್ದಾಗ ದಿನಾಂಕ: 26-10-14 ರಂದು ಬೆಳಿಗ್ಗೆ 08-15 ಗಂಟೆಗೆ ಫೋನ್ ಮಾಡಿ ನಮ್ಮ ಮನೆಗೆ ಹಾಕಿದ ಬೀಗ ಮುರಿದಿದೆ ಬಾಗಿಲು ತೆಗೆದಿರುತ್ತದೆಂದು ತಿಳಿಸಿದ್ದು ಅದರಂತೆ ದಿನಾಂಕ: 26-10-14 ರಂದು ಮಧ್ಯಾಹ್ನ 2 ಗಂಟೆಗೆ ಮನೆಗೆ ಬಂದು ನೋಡಲು ಬಾಗಿಲು ತೆರೆದಿತ್ತು. ದಿನಾಂಕ: 25-10-14 ರಂದು ರಾತ್ರಿ 10 ಗಂಟೆಯಿಂದ ದಿನಾಂಕ: 26-10-14 ರಂದು ಬೆಳಿಗನ ಜಾವ 2-30 ಗಂಟೆಯ ಮಧ್ಯದ ಅವಧಿಯಲ್ಲಿ ಯಾರೋ ಕಳ್ಳರು ಮನೆಗೆ ಹಾಕಿದ ಬೀಗ ಮುರಿದು ಒಳ ನುಗ್ಗಿ ಮನೆಯಲ್ಲಿಟ್ಟಿದ್ದ ಒಟ್ಟು 85 ಗ್ರಾಂ ತೂಕದ ಬಂಗಾರದ ಆಭರಣಗಳು ಹಾಗು 10 ಸಾವಿರ ನಗದು ಹಣವನ್ನು ಒಟ್ಟು ಬೆಲೆ ರೂ. 2,22,500/- ಬೆಲೆ ಬಾಳುವುಗಳನ್ನು ಕಳುವು ಮಾಡಿಕೊಂಡು ಹೋಗಿರುತ್ತಾರೆಂದು ದೂರು ಇದ್ದ ಮೇರೆಗೆ ಹೊಸಪೇಟೆ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತದೆ.
ಪೊಲೀಸ್ ಸೂಪರಿಂಟೆಂಡೆಂಟ್,
ಬಳ್ಳಾರಿ.
ಇವರಿಗೆ,
ಎಲ್ಲಾ ಪತ್ರಿಕಾ ವರದಿಗಾರರಿಗೆ
ಹೆಚ್ಚಿನ ಮಾಹಿತಿಗಾಗಿ ಶ್ರೀ. ಮಹಮ್ಮದ್ ಗಯಾಸ್, ಎ.ಎಸ್.ಐ ಮೊಬೈಲ್ ನಂ. 9845484100 ಹಾಗು
ಜಿ. ಸುಬ್ರಮಣ್ಯಂ, ಹೆಚ್.ಸಿ-175, ಮೋಬೈಲ್ ಸಂ: 9448202005 ರವರನ್ನು ಸಂಪರ್ಕಿಸಲು ವಿನಂತಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ