ಜಿಲ್ಲಾ ಪೊಲೀಸ್ ಕಾರ್ಯಲಯ
ಬಳ್ಳಾರಿ, ದಿನಾಂಕ: 13-01-2015
ಪತ್ರಿಕಾ ಪ್ರಕಟಣೆ
ದಿನಾಂಕ: 12.01.2015 ರಂದು ಬೆಳಿಗ್ಗೆ ಶ್ರೀ ಲಕ್ಷ್ಮಿಕಾಂತಯ್ಯ ಸಿ.ಪಿ.ಐ. ಕುರುಗೋಡು, ಶ್ರೀ ಕೆ.ಬಿ. ವಾಸುಕುಮಾರ್ ಪಿ.ಎಸ್.ಐ ಕುಡುತಿನಿ ಠಾಣೆ ಮತ್ತು ಸಿಬ್ಬಂದಿ ಕೆ. ರಮೇಶ ಪಿಸಿ 832, ಮತ್ತು ಗಪೂರ್‍ಸಾಬ್ ಪಿ.ಸಿ.166 ರವರೊಂದಿಗೆ ಇಲಾಖೆ ಜೀಪ್‍ನಲ್ಲಿ ಕುಡತಿನಿಯಲ್ಲಿ ಪೆಟ್ರೋಲಿಂಗ್ ಮಾಡುವಾಗ ಕುಡತಿನಿ ಬಸ್ ನಿಲ್ದಾಣದ ಹತ್ತಿರ ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದ ಅನಿಲ್‍ಕುಮಾರ್ ಹಿಡಿದು ವಿಚಾರಿಸಿದಾಗ, ಈಗ್ಗೆ ಸುಮಾರು ಒಂದುವರೆ ವರ್ಷದ ಹಿಂದಿನಿಂದಲೂ ಆರೋಪಿ ಅನಿಲ್‍ಕುಮಾರ್ ಮತ್ತು ತನ್ನ ಅಣ್ಣ ಸಂಜಯ್ ಕೂಡಿ 18 ಮೋಟರ್ ಸೈಕಲ್‍ಗಳನ್ನು ಹಾಗೂ ಹಳೇದರೋಜಿ ಗ್ರಾಮದಲ್ಲಿ ಮೋಬೈಲ್ ಟವರ್‍ಗೆ ಆಳವಡಿಸಿದ 21 ಬ್ಯಾಟರಿಗಳನ್ನು ಕಳ್ಳತನ ಮಾಡಿ, ಮೋಟರ್ ಸೈಕಲ್‍ಗಳನ್ನು ಹುಬ್ಬಳ್ಳಿ ಪ್ರವೀಣನಿಗೆ ಮತ್ತು ಬ್ಯಾಟರಿಗಳನ್ನು ಬಳ್ಳಾರಿಯ ಮಧುಶೆಟ್ಟಿ ಎಂಬುವವರಿಗೆ 15 ಬ್ಯಾಟರಿಗಳನ್ನು ಮಾರಾಟ ಮಾಡಿರುತ್ತೇನೆಂದು ತಿಳಿಸಿದ್ದರಿಂದ ಆತನನ್ನು ದಸ್ತಗಿರಿ ಮಾಡಿ ಶ್ರೀ. ಎನ್. ರುದ್ರಮುನಿ, ಡಿ.ಎಸ್.ಪಿ. ಬಳ್ಳಾರಿ ಗ್ರಾಮೀಣ ರವರ ಮಾರ್ಗದರ್ಶನದಲ್ಲಿ ತನಿಖೆ ಮುಂದುವರೆಸಿ ಮತ್ತೊಬ್ಬ ಆರೋಪಿ ಪ್ರವೀಣ್ ವಾ: ಹುಬ್ಬಳ್ಳಿ ಇವನನ್ನು ದಸ್ತಗಿರಿ ಮಾಡಿ ಈ ಕೆಳಕಂಡಂತೆ ಮೋಟಾರ್ ಸೈಕಲ್‍ಗಳನ್ನು, ಮೊಬೈಲ್ ಟವರ್ ಬ್ಯಾಟರಿಗಳನ್ನು ವಶಪಡಿಸಿಕೊಂಡಿರುತ್ತಾರೆ.
2) 2 ಪಲ್ಸರ್ ಮೋಟರ್ ಸೈಕಲ್‍ಗಳು,
3) 1 ಕರಶ್ಮ ಮೋಟರ್ ಸೈಕಲ್‍ಗಳು,
4) 1 ಅಪಾಚಿ ಮೋಟರ್ ಸೈಕಲ್‍ಗಳು,
5) 7 ಹಿರೋಹೋಂಡಾ ಮೋಟರ್ ಸೈಕಲ್‍ಗಳು,
6) 1 ಹೋಂಡಾ ಆಕ್ಟಿವಾ ಮೋಟರ್ ಸೈಕಲ್‍ಗಳು,
7) 15 ಮೊಬೈಲ್ ಟವರ್ ಬ್ಯಾಟರಿಗಳು
ಮೇಲ್ಕಂಡ ಮೋಟಾರ್ ಸೈಕಲ್‍ಗಳು ಮತ್ತು ಮೊಬೈಲ್ ಟವರ್ ಬ್ಯಾಟರಿಗಳ ಒಟ್ಟು ಮೌಲ್ಯ ರೂ. 12,40,000-00 ಇರುತ್ತದೆ. ಸದರಿ ಮೋಟರ್ ಸೈಕಲ್‍ಗಳನ್ನು ಬಳ್ಳಾರಿಯ ಗಾಂದಿನಗರ ಮತ್ತು ಕೌಲ್‍ಬಜಾರ್ ಏರಿಯಾಗಳಲ್ಲಿ ಕಳ್ಳತನ ಮಾಡಿರುವ್ಯದಾಗಿ ತಿಳಿದು ಬಂದಿರುತ್ತದೆ.
ಈ ಮೇಲ್ಕಂಡ ಪತ್ತೆ ಕಾರ್ಯದಲ್ಲಿ ಕಾರ್ಯ ನಿರ್ವಹಿಸಿ ಅಧಿಕಾರಿ ಮತ್ತು ಸಿಬ್ಬಂದಿಯವರ ಕಾರ್ಯವನ್ನು ಶ್ರೀ ಚೇತನ್ ಸಿಂಗ್ ರಾಥೋರ್ ಎಸ್.ಪಿ. ಸಾಹೇಬರು ಬಳ್ಳಾರಿ, ರವರು ಶ್ಲ್ಲಾಗಿಸಿ ಬಹುಮಾನವನ್ನು ಘೋಸಿಸಿರುತ್ತಾರೆ.
ಇವರಿಗೆ,
ಎಲ್ಲಾ ಪತ್ರಿಕಾ ವರದಿಗಾರರಿಗೆ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ