ಭಾನುವಾರ, ಜನವರಿ 11, 2015

PRESS NOTE AS ON 12-01-2015

                                             ಜಿಲ್ಲಾ ಪೊಲೀಸ್ ಕಾರ್ಯಲಯ
                                        ಬಳ್ಳಾರಿ, ದಿನಾಂಕ: 12-01-2015

ಪತ್ರಿಕಾ ಪ್ರಕಟಣೆ 

1) ಹೊಸಪೇಟೆ ಸಂಚಾರ ಪೊಲೀಸ್ ಠಾಣೆ ಸರಹದ್ದಿನ ಅನಂತಶಯನಗುಡಿ ಹೊಸ ಬೈಪಾಸ್ ರಸ್ತೆಯ ರೈಲ್ವೆ ಕ್ವಾಟ್ರಸ್ ಹತ್ತಿರ ಮೋಟಾರ್ ಸೈಕಲ್ ರಸ್ತೆ ಅಫಘಾತ ಮೋಟಾರ್ ಸೈಕಲ್ ಸವಾರನ ಸಾವು ಇಬ್ಬರಿಗೆ ಗಾಯ. 
     
       ದಿನಾಂಕ: 11-01-2015 ರಂದು ರಾತ್ರಿ 11-00 ಗಂಟೆ ಸುಮಾರಿಗೆ ಹೊಸಪೇಟೆ ಹೊರ ವಲಯದ ಅನಂತಶಯನಗುಡಿ ಹೊಸ ಬೈಪಾಸ್ ರಸ್ತೆಯಲ್ಲಿನ ರೈಲ್ವೆ ಕ್ವಾಟ್ರಸ್ ಹತ್ತಿರ ತಾರ್ ರಸ್ತೆಯಲ್ಲಿ ಆರೋಪಿಯಾದ ಇ. ಮಹೇಶ್ ಹಾಗು ಆತನ ಸ್ನೇಹಿತರಾದ ಬಿ.ಎಂ. ಚೆನ್ನಯ್ಯಸ್ವಾಮಿ ಹಾಗು ಇರ್ಶಾದ್ ಮೂವರು ಸೇರಿ ಮಹೇಳಸನ ಬುಲೆಟ್ ಮೋಟಾರ್ ಸೈಕಲ್ ನಂ. ಕೆಎ-35 ಇ.ಎ-0767 ನೇದ್ದರಲ್ಲಿ ಕುಳಿತು ಹೊಸಪೇಟೆಯಿಂದ ಹಂಪಿ ಉತ್ಸವಕ್ಕೆಂದು  ಹೋಗುವಾಗ್ಗೆ ಮೋಟಾರ್ ಸೈಕಲ್ ಸವಾರನಾದ ಮಹೇಶನು ಮದ್ಯಸೇವನೆ ಮಾಡಿ ಅತಿವೇಗ ಹಾಗು ನಿರ್ಲಕ್ಷತನದಿಂದ ಬುಲೆಟ್‍ನ್ನು ಚಲಾಯಿಸಿ ಸ್ಕಿಡ್ ಆಗಿ ಬೀಳಿಸಿದ್ದರಿಂದ ಮೂವರು ಮೋಟಾರ್ ಸೈಕಲ್ ಮೇಲಿಂದ ಬಿದ್ದು ಬೈಕ್ ಚಲಾಯಿಸುತ್ತಿದ್ದ ಮಹೇಶನಿಗೆ ಸೊಂಟ ಹಾಗು ಎಡಗಾಲಿಗೆ ಒಳಪೆಟ್ಟಾಗಿದ್ದು, ಹಿಂದೆ ಕುಳಿತಿದ್ದ ಬಿ.ಎಂ. ಚನ್ನಯ್ಯಸ್ವಾಮಿ, 25 ವರ್ಷ ವಾ: ಹೊಸಪೇಟೆ ಈತನಿಗೆ ತಲೆಗೆ ಪೆಟ್ಟಾಗಿ ತಲೆ ಹಾಗು ಮೂಗಿನಿಂದ ರಕ್ತ ಸೋರಿ ಸ್ಥಳದಲ್ಲೇ ಮೃತಪಟ್ಟಿದ್ದು, ಇನ್ನೊಬ್ಬ ಹಿಂಬದಿ ಸವಾರನಾದ ಇರ್ಶಾದ್‍ನಿಗೂ ಸಣ್ಣಪುಟ್ಟ ಗಾಯಗಳಾಗಿರುತ್ತವೆಂದು ಕೊಟ್ಟ ದೂರಿನ ಮೇರೆಗೆ ಬಳ್ಳಾರಿ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತದೆ. 

2) ಸಿರುಗುಪ್ಪ ಪೊಲೀಸ್ ಠಾಣೆ ಸರಹದ್ದಿನ  ಇಬ್ರಾಹಿಂ ಪುರ ಗ್ರಾಮದ ಜಂಬನಗೌಡ ರವರ ರೈಸ್ ಮಿಲ್ ಪಕ್ಕದಲ್ಲಿ ಮೋಟಾರ್ ಸೈಕಲ್ ರಸ್ತೆ ಮೇಲೆ ಬಿದ್ದು ಮೋಟಾರ್ ಸೈಕಲ್ ಸವಾರನ ಸಾವು ಒಬ್ಬರಿಗೆ ಗಾಯ. 

      ಪಿರ್ಯಾದಿದಾರಳಾದ ಶ್ರೀಮತಿ. ಕೆ.ಎಂ. ಕಾವೇರಿ ವಾ: ಇಬ್ರಾಹಿಂಪುರ ಗ್ರಾಮ, ಸಿರುಗುಪ್ಪ ತಾಲ್ಲೂಕು ಇವರು ಕೊಟ್ಟ ದೂರು ಏನೆಂದರೆ, ದಿ:10-01-15 ರಂದು ಊಟ ತೆಗೆದುಕೊಂಡು ಇಬ್ರಾಹಿಂಪುರ ಗ್ರಾಮದಿಂದ ತಮ್ಮ ಚಿಕ್ಕಪ್ಪನ ಮಗನಾದ ಅಂಜಿನಿಯೊಂದಿಗೆ ಹೀರೋ ಸ್ಪೇಂಡರ್ ಪ್ರೋ ಮೋಟರ್ ಸೈಕಲ್ ನಂ:ಕೆಎ-34/ಇಸಿ/1338 ನೇದ್ದರಲ್ಲಿ ರಾತ್ರಿ ಸಿರುಗುಪ್ಪ ಸರ್ಕಾರಿ ಅಸ್ಪತ್ರೆಗೆ ಬಂದು ಪಿರ್ಯಾದಿಯು ತಮ್ಮ ಅಕ್ಕನಾದ ಶ್ರೀಮತಿ ಮೌಲಮ್ಮಳಿಗೆ ಊಟ ಕೊಟ್ಟು ನಂತರ ಮರಳಿ ತಮ್ಮ ಗ್ರಾಮಕ್ಕೆ ತಮ್ಮ ಅಣ್ಣನಾದ ಅಂಜಿನಿಯೊಂದಿಗೆ ಸದರಿ ಮೋಟರ್ ಸೈಕಲ್ ಮೇಲೆ ರಾತ್ರಿ 08-45 ಗಂಟೆ ಸುಮಾರಿಗೆ ಇಬ್ರಾಹಿಂಪುರ ಗ್ರಾಮದ ಜಂಭನಗೌಡ ರವರ ರೈಸ್ ಮಿಲ್ ಪಕ್ಕ ರಾಜ್ಯ ಹೆದ್ದಾರಿ-19 ರಸ್ತೆಯಲ್ಲಿ ಹೋಗುತ್ತಿರುವಾಗ ಎದುರುಗಡೆಯಿಂದ ಬರುತ್ತಿದ್ದ ವಾಹನವನ್ನು ಅದರ ಚಾಲಕನು ಏಕಾಏಕಿಯಾಗಿ ರಸ್ತೆಯ ಬಲಕ್ಕೆ ಬಂದಿದ್ದರಿಂದ ಅಗುವ ಅಪಘಾತವನ್ನು ತಪ್ಪಿಸಲು ಮೋಟರ್ ಸೈಕಲ್ ಸವಾರನು ತನ್ನ ಮೋಟರ್ ಸೈಕಲ್‍ನ್ನು ರಸ್ತೆಯ ಬಲಕ್ಕೆ ತೆಗೆದುಕೊಂಡ ಪರಿಣಾಮ ಸದರಿ ಮೋಟರ್ ಸೈಕಲ್ ಸವಾರನ ನಿಯಂತ್ರಣ ತಪ್ಪಿ ರಸ್ತೆಯ ಮೇಲೆ ಮೋಟರ್ ಸೈಕಲ್ ಸಮೇತ ಬಿದ್ದ ಪರಿಣಾಮ ಮೋಟರ್ ಸೈಕಲ್ ಸವಾರನಾದ ಅಂಜಿನಿ, 19 ವರ್ಷ, ವಾ: ಇಬ್ರಾಹಿಂಪುರ ಗ್ರಾಮ ಈತನಿಗೆ ತಲೆಗೆ ಬಲವಾದ ಪೆಟ್ಟು ಬಿದ್ದು ರಕ್ತಗಾಯವಾಗಿ ಸ್ಥಳದಲ್ಲಿಯೇ ಮೃತ ಪಟ್ಟಿದ್ದು. ಪಿರ್ಯಾದಿಗೆ ಎಡಮೋಣಕಾಲಿಗೆ ಹಾಗೂ ಎಡ ಕೈ ಬೆರಳುಗಳಿಗೆ ತೆರಚಿದ ಗಾಯಗಳಾಗಿದ್ದು. ಅಪಘಾತದಲ್ಲಿ ಸದರಿ ಮೋಟರ್ ಸೈಕಲ್ ಜಖಂಗೊಂಡಿದ್ದು. ಗಾಯಗೊಂಡ ಪಿರ್ಯಾದಿಯನ್ನು ಅಂಬಣ್ಣ ಮತ್ತು ವಿರೇಶ್ ರವರು ಚಿಕಿತ್ಸೆಗಾಗಿ ಸಿರುಗುಪ್ಪ ಸರ್ಕಾರಿ ಅಸ್ಪತ್ರೆಗೆ ಕರೆದುಕೊಂಡು ಬಂದು ದಾಖಲಿಸಿದ್ದು. ಮೋಟರ್ ಸೈಕಲ್ ಅನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ನಡೆಸಿಕೊಂಡು ಅಪಘಾತ ಪಡಿಸಿದ ಮೋಟರ್ ಸೈಕಲ್ ಸವಾರ ಅಂಜಿನಿ ಈತನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ಕೊಟ್ಟ ದೂರಿನ ಮೇರೆಗೆ ಸಿರುಗುಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಕೈಗೊಂಡಿರುತ್ತದೆ. 


3) ಹೊಸಪೇಟೆ ಬಡಾವಣೆ ಪೊಲೀಸ್ ಠಾಣೆ ಸರಹದ್ದಿನ ಎನ್.ಸಿ. ಕಾಲೋನಿ ನಿವಾಸಿಯಾದ ಶ್ರೀಮತಿ. ಸ್ವಾತಿ ಇವಳು ಎ.ಪಿ.ಎಂ.ಸಿ. ಮಾರ್ಕೆಟೆನಿಂ ಕಾಣಿಯಾಗಿರುವ ಬಗ್ಗೆ. 

       ದಿನಾಂಕ 11-1-2015 ರಂದು ಬೆಳಿಗ್ಗೆ 11-00 ಗಂಟೆಗೆ ಫಿರ್ಯಾದಿದಾರರಾದ ಶ್ರೀ. ಶ್ರೀನಿವಾಸ ಮೂರ್ತಿ, ವಾ: ಹೊಸಪೇಟೆ ಇರವರು ಠಾಣೆಗೆ ಬಂದು ನೀಡಿದ ಲಿಖಿತ ದೂರಿನ ಸಾರಾಂಶವೇನೆಂದರೆ, ಫಿರ್ಯಾದಿ ತಾನು ತನ್ನ ಸ್ವಂತ ಕೆಲಸದ ಮೇಲೆ ವಿಜಯವಾಡಕ್ಕೆ ಹೋಗಿದ್ದು, ತಮ್ಮ ಮನೆಯಲ್ಲಿ ತನ್ನ ತಂದೆ ತಾಯಿ ಮತ್ತು ತನ್ನ ಹೆಂಡತಿ ಶ್ರೀಮತಿ ಸ್ವಾತಿ ಮೂರ್ತಿ, 29 ವರ್ಷ, ವಾ: ಹೊಸಪೇಟೆ ಇವಲು ಇದ್ದು,  ದಿ 10-1-2015 ರಂದು ಬೆಳಿಗ್ಗೆ 8-15 ಗಂಟೆಗೆ ಎ.ಪಿ.ಎಂ.ಸಿ. ಮಾರ್ಕೇಟ್‍ನಿಂದ ತರಕಾರಿ ತರಲೆಂದು ತಮ್ಮ ಮನೆಯಿಂದ ತಮ್ಮ ಸ್ಕೂಟಿ ನಂ. ಕೆ.ಎ.35/ಡಬ್ಲೂ-8199 ನೇದ್ದರಲ್ಲಿ ಹೋಗಿ ಎ.ಪಿ.ಎಂ.ಸಿ. ಮಾರ್ಕೇಟ್‍ನ ಹತ್ತಿರ ಇರುವ ಪೆಟ್ರೋಲ್ ಬಂಕಿನ ಮುಂದೆ ನಿಲ್ಲಿಸಿ ಹೋದವಳು ಬೆಳಿಗ್ಗೆ 11-30 ಗಂಟೆಯಾದರೂ ಮನೆಗೆ ವಾಪಾಸ್ ಬಾರದೇ ಕಾಣೆಯಾಗಿದ್ದು,  ಕಾಣೆಯಾದವಳನ್ನು ಎಲ್ಲಾರೂ ಎಲ್ಲ ಕಡೆ ಹುಡುಕಾಡಿದರೂ ಸಿಕ್ಕಿರುವಿದಿಲ್ಲ. ಫಿರ್ಯಾದಿದಾರರು ವಾಪಾಸು ವಿಜಯವಾಡದಿಂದ ಹೊಸಪೇಟೆಗೆ ಬಂದು ತನ್ನ ಹೆಂಡತಿಯನ್ನು ಹುಡುಕಾಡಿ ಸಿಗದೇ ಇದ್ದ ಕಾರಣ ಈ ದಿನ ತಡವಾಗಿ ಠಾಣೆಗೆ ಬಂದು  ಕಾಣೆಯಾದ ತನ್ನ ಹೆಂಡತಿಯನ್ನು ಪತ್ತೆ ಮಾಡಿಕೊಡಲು ಕೋರಿ ಕೊಟ್ಟ ದೂರಿನ ಮೇರೆಗೆ ಹೊಸಪೇಟೆ ಬಡಾವಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದೆ.

                                                                                                          ಪೊಲೀಸ್ ಸೂಪರಿಂಟೆಂಡೆಂಟ್,                                                                              
                                                                                                                    ಬಳ್ಳಾರಿ.                                                                                                                
ಇವರಿಗೆ,
ಎಲ್ಲಾ ಪತ್ರಿಕಾ ವರದಿಗಾರರಿಗೆ

ಹೆಚ್ಚಿನ ಮಾಹಿತಿಗಾಗಿ ಶ್ರೀ. ಮಹಮ್ಮದ್ ಗಯಾಸ್, ಎ.ಎಸ್.ಐ ಮೊಬೈಲ್ ನಂ. 9845484100 ಹಾಗು                           ಜಿ. ಸುಬ್ರಮಣ್ಯಂ, ಹೆಚ್.ಸಿ-175, ಮೋಬೈಲ್ ಸಂ: 9448202005 ರವರನ್ನು ಸಂಪರ್ಕಿಸಲು ವಿನಂತಿ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ