ಬುಧವಾರ, ಜನವರಿ 14, 2015

PRESS NOTE AS ON 15-01-2015

ಜಿಲ್ಲಾ ಪೊಲೀಸ್ ಕಾರ್ಯಲಯ
                                        ಬಳ್ಳಾರಿ, ದಿನಾಂಕ: 15-01-2015

ಪತ್ರಿಕಾ ಪ್ರಕಟಣೆ 

1) ಬಳ್ಳಾರಿ ಗ್ರಾಮೀಣ ಪೊಲೀಸ್ ಠಾಣೆ ಸರಹದ್ದಿನ ಗುಗ್ಗರಹಟ್ಟಿಯಲ್ಲಿ ಅಪ್ರಾಪ್ತ 15 ವರ್ಷದ 8ನೇ ತರಗತಿ ಬಾಲಕಿ ಮೇಲೆ ಅತ್ಯಾಚಾರ. 
       
         ದಿನಾಂಕ: 14-1-2015 ರಂದು ಮದ್ಯಾಹ್ನ 3-30 ಗಂಟೆಗೆ ನೊಂದ ಹುಡುಗಿಯು ಬಂದು ದೂರು ನೀಡಿದ್ದು ಸಾರಾಂಶ ಏನೆಂದರೆ ಗುಗ್ಗರಹಟ್ಟಿ ಗ್ರಾಮದ ವಾಸಿಯಾದ ಮರಾಠಿ ಜನಾಂಗದ ಪಿ. ವಿ. ರಾಘವೇಂದ್ರರಾವು ವಾಸ: ಗುಗ್ಗರಹಟ್ಟಿ ಈತನು ತನ್ನ ತಾಯಿಗೆ ಪರಿಚಯವಿದ್ದು ಆಗಾಗ ಮನೆಗೆ ಬಂದು ಹೋಗುತ್ತಿದ್ದರಿಂದ ತನಗೆ ಸಹ ಇವರ ಪರಿಚಯ ವಿದ್ದು ಇತನಿಗೆ ಮದುವೆ ಆಗಿ ಒಂದು ಹೆಣ್ಣು ಮಗು ಇರುತ್ತದೆ. ತನ್ನ ತಾಯಿ ಪಿ. ಪೀರಾಬಿಯು ತನಗೆ ಪಿ.ವಿ. ರಾಘವೇಂದ್ರರಾವು ಚೆನ್ನಾಗಿದ್ದಾನೆ ಆತನಿಗೆ ಮದುವೆ ಆಗು ಎಂದು ಹೇಳುತ್ತಿದ್ದಳು, ಪಿ.ವಿ. ರಾಘವೇಂದ್ರರಾವು ಸಹ ತನಗೆ ಮದುವೆ ಮಾಡಿಕೊಳ್ಳುತ್ತೇನೆಂದು ತಮ್ಮ ಮನೆಗೆ ಬಂದಾಗಲೆಲ್ಲಾ ಹೇಳುತ್ತಿದ್ದರಿಂದ ತಾನು ತನಗೆ ಇನ್ನು ವಯಸ್ಸು ಕಡಿಮೆ ಇದೆ, ಪಿ.ವಿ. ರಾಘವೇಂದ್ರರಾವುಗೆ ಮದುವೆ ಸಹ ಆಗಿದೆ ಎಂದು ಹೇಳಿದರೂ ಕೇಳದೇ ತನ್ನ ತಾಯಿ ಮತ್ತು ಪಿ.ವಿ. ರಾಘವೇಂದ್ರರವರು ಸೇರಿಕೊಂಡು ಗುಗ್ಗರಹಟ್ಟಿಯಲ್ಲಿರುವ ಪಿ.ವಿ. ರಾಘವೇಂದ್ರ ರವರ ಮನೆಯಲ್ಲಿ ಖಾಜಿಗೆ ಕರೆಯಿಸಿ ದಿ : 18-10-2014 ರಂದು ಬೆಳಿಗ್ಗೆ 11-00 ಗಂಟೆಗೆ ತನಗೆ ಮತ್ತು ಪಿ.ವಿ. ರಾಘವೇಂದ್ರ ರಾವು ರವರಿಗೆ ಮುಸ್ಲಿಂ ಪದ್ಧತಿಯಂತೆ ಮದುವೆ ಮಾಡಿದ್ದು, ದಿನಾಂಕ :   19-10-2014 ರಂದು ರಾತ್ರಿ ತನಗೆ ಮತ್ತು ಪಿ.ವಿ. ರಾಘವೇಂದ್ರರಾವುರವರಿಗೆ ಮಿಲ್ಲಾರಪೇಟೆಯಲ್ಲಿರುವ ಪಿ.ವಿ. ರಾಘವೇಂದ್ರ ರಾವು ರವರ ತಾಯಿ ಮನೆಗೆ ಕರೆದುಕೊಂಡು ಹೋಗಿದ್ದು ಅಲ್ಲಿ ತನ್ನ ಇಚ್ಚೆಗೆ ವಿರುದ್ದವಾಗಿ ತನ್ನ ಮೇಲೆ ಅತ್ಯಾಚಾರ ಮಾಡಿರುತ್ತಾನೆಂದು ಅಲ್ಲಿಂದ ಇತನು ತನ್ನ ಮೇಲೆ ಸತತವಾಗಿ ಅತ್ಯಾಚಾರ ಮಾಡುತ್ತಿರುತ್ತಾನೆಂದು ತನ್ನ ತಾಯಿ ಪಿ. ಪೀರಾಬೀ ಮತ್ತು ಪಿ.ವಿ. ರಾಘವೇಂದ್ರರಾವು ರವರು ಸೇರಿಕೊಂಡು ಅಪ್ರಾಪ್ತ 15 ವರ್ಷ ವಯಸ್ಸಿನ ಬಾಲಿಕಿಗೆ ಪಿ.ವಿ. ರಾಘವೇಂದ್ರರಾವುನು ಲಗ್ನ ಮಾಡಿಕೊಂಡು ಇತನು ಸತತವಾಗಿ ತನ್ನ ಮೇಲೆ ಅತ್ಯಾಚಾರ ಮಾಡಿರುತ್ತಾನೆಂದು ಇವರ ಮೇಲೆ ಕಾನೂನು ಕ್ರಮ ಜರುಗಿಸಲು ಕೊಟ್ಟ ದೂರಿನ ಮೇರೆಗೆ ಬಳ್ಳಾರಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತದೆ. 

2) ಬಳ್ಳಾರಿ ನಗರದ ಅಂದ್ರಾಳ್ ಗ್ರಾಮದಿಂದ 40 ವರ್ಷದ ಮನುಷ್ಯ ಕಾಣೆಯಾಗಿರುವ ಬಗ್ಗೆ.     

       ದಿನಾಂಕ: 14/01/2015 ರಂದು ಬೆಳಿಗ್ಗೆ 11-45 ಗಂಟೆಗೆ ಪಿರ್ಯಾದಿದಾರರಾದ ಶ್ರೀಮತಿ. ಕಾಮಾಕ್ಷಿ ಗಂಡ ಅಂದ್ರಾಳಪ್ಪ, 35 ವರ್ಷ, ಕುರುಬರು, ವ್ಯವಸಾಯ, ವಾಸ: ಬೈ-ಪಾಸ್ ಪಕ್ಕದಲ್ಲಿ, ಬಿ.ಗೋನಾಳ್ ಗ್ರಾಮ, ಬಳ್ಳಾರಿ. ರವರು ಠಾಣೆಗೆ ಹಾಜರಾಗಿ ದೂರು ನೀಡಿದ್ದು ಸಾರಂಶವೇನೆಂದರೆ ದಿನಾಂಕ:09/01/2015 ರಂದು ಸಂಜೆ  5-00 ಗಂಟೆಗೆ ಪಿರ್ಯಾದಿದಾರರ ಗಂಡ ಅಂದ್ರಾಳಪ್ಪನು 40, ವರ್ಷ ಈತನು ಬಳ್ಳಾರಿಗೆ ಹೋಗಿ ಬರುತ್ತೇನೆಂದು ಹೇಳಿ ಬಸ್ಸು ಹತ್ತಿ ಹೋದವನು ಇಲ್ಲಿಯವರೆಗೆ ಮನೆಗೆ ಬಂದಿರುವುದಿಲ್ಲವೆಂದು ತನ್ನ ಗಂಡ ಮನೆಗೆ ಬರದೇ ಇದ್ದುದ್ದರಿಂದ ಎಲ್ಲಾ ಕಡೆ ಹುಡುಕಾಡಿ ನೋಡಲು ಪತ್ತೆಯಾಗಿರುವುದಿಲ್ಲ. ಕಾಣೆಯಾದ ತನ್ನ ಗಂಡನನ್ನು ಪತ್ತೆ ಮಾಡಿಕೊಡಬೇಕೆಂದು ಕೊಟ್ಟ ದೂರಿನ ಮೇರೆಗೆ ಎ.ಪಿ.ಎಂ.ಸಿ. ಯಾರ್ಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತದೆ. 

                                                                                                                      ಪೊಲೀಸ್ ಸೂಪರಿಂಟೆಂಡೆಂಟ್,                                                                              
                                                                                                                                 ಬಳ್ಳಾರಿ.                                                                                                              
ಇವರಿಗೆ,
ಎಲ್ಲಾ ಪತ್ರಿಕಾ ವರದಿಗಾರರಿಗೆ

ಹೆಚ್ಚಿನ ಮಾಹಿತಿಗಾಗಿ ಶ್ರೀ. ಮಹಮ್ಮದ್ ಗಯಾಸ್, ಎ.ಎಸ್.ಐ ಮೊಬೈಲ್ ನಂ. 9845484100 ಹಾಗು                              ಜಿ. ಸುಬ್ರಮಣ್ಯಂ, ಹೆಚ್.ಸಿ-175, ಮೋಬೈಲ್ ಸಂ: 9448202005 ರವರನ್ನು ಸಂಪರ್ಕಿಸಲು ವಿನಂತಿ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ