ಭಾನುವಾರ, ಜನವರಿ 4, 2015

Press Note as on 05-01-2015

                                             ಜಿಲ್ಲಾ ಪೊಲೀಸ್ ಕಾರ್ಯಲಯ
                                        ಬಳ್ಳಾರಿ, ದಿನಾಂಕ: 05-01-2015
ಪತ್ರಿಕಾ ಪ್ರಕಟಣೆ 

1) ಹೆಚ್.ಬಿ.ಹಳ್ಳಿ ಪೊಲೀಸ್ ಠಾಣೆ ಸರಹದ್ದಿನ ಅಡವಿ ಆನಂದ ದೇವನಹಳ್ಳಿ ಗ್ರಾಮದಲ್ಲಿ ಹಳೇ ದ್ವೇಷದ ಹಿನ್ನೆಲೆಯಲ್ಲಿ ಜಗಳ ಒಬ್ಬ ವ್ಯಕ್ತಿಯ ಕೊಲೆ 

       ದಿ:-01/01/2015 ರಂದು ರಾತ್ರಿ 7-35 ಗಂಟೆಗೆ ಹ.ಬೊ.ಹಳ್ಳಿ ಸರ್ಕಾರಿ ಆಸ್ಪತ್ರೆಯಿಂದ ಎಂ.ಎಲ್.ಸಿ ದೂರವಾಣಿ ಕರೆ ಬಂದ ಮೇರೆಗೆ ಆಸ್ಪತ್ರೆಗೆ ಬೇಟಿ ಕೊಟ್ಟು ಆಸ್ಪತ್ರೆಯಲ್ಲಿ ಫಿರ್ಯಾದಿದಾರರಾದ ಶ್ರೀವ್ಮತಿ. ಹಾಲಮ್ಮ, ಗಂಡ ಕಲ್ಲನಗೌಡ, 56 ವರ್ಷ, ವಾ: ಅಡವಿ ಆನಂದ ದೇವನಹಳ್ಳಿ ಗ್ರಾಮ, ಹೆಚ್.ಬಿ.ಹಳ್ಳಿ ತಾಲ್ಲೂಕು ಇವರ ಹೇಳಿಕೆ ಪಡೆಯಲಾಗಿ ಆರೋಪಿಯಾದ ಕಲ್ಲಮ್ಮನವರ ನಿಂಗಪ್ಪ ಈತನು  ಪಿರ್ಯಾದಿ ಗಂಡನ ತಂಗಿಯನ್ನು ಮದುವೆಯಾಗಿದ್ದು ಪಿರ್ಯಾದಿಯ ಗಂಡನ ತಂಗಿ ಈಗ್ಗೆ ಒಂದೂವರೆ ವರ್ಷದ ಹಿಂದೆ ಮೃತಪಟ್ಟಿದ್ದು ಆಗ ಶವ ಸಂಸ್ಕಾರಕ್ಕೆ ಹೋಗಿಲ್ಲವೆಂಬ ಹಳೇ ದ್ವೇಷದಿಂದ ದಿ:-01/01/2015 ರಂದು ಸಂಜೆ 6  ಗಂಟೆಗೆ ಆರೋಪಿತರ ಮನೆಯ ಮುಂದೆ ದಾರಿಯಲ್ಲಿ ಪಿರ್ಯಾದಿಯ ಮಕ್ಕಳು ಓಡಾಡದಂತೆ ಅಡ್ಡಲಾಗಿ ಕಟ್ಟಿಗೆಯನ್ನು ಹಾಕಿದ್ದು ಇದನ್ನು ನೋಡಿದ ಪಿರ್ಯಾದಿಯ ಗಂಡ ಕಾಳನಗೌಡ ಈತನು ಬೇರೆ ದಾರಿಯಲ್ಲಿ ಬನ್ನಿರಿ ಅಂತಾ ಹೇಳಿ ಈ ಬಗ್ಗೆ ಊರಲ್ಲಿ ದೊಡ್ಡವರಿಗೆ ತಿಳಿಸಿ ನಾಳೆ ಪಂಚಾಯತಿ ಮಾಡೋಣ ಅಂತಾ ಅಂದಿದ್ದಕ್ಕೆ ಆರೋಪಿ ಕಲ್ಲಮ್ಮನವರ ನಿಂಗಪ್ಪ ಈತನು ಕಾಳನಗೌಡನಿಗೆ ಲೇ ಸೂಳೆ ಮಗನೇ ಅದನ್ನೇನು ಪಂಚಾಯತಿ ಮಾಡುತ್ತೀ ನಿನ್ನ ತಂಗಿ ಸತ್ತಾಗ ಮಣ್ಣಿಗೆ ಬಾರದೇ ನನ್ನ ಹೊಟ್ಟೆ ಉರಿಸಿರುವೆ. ಅಂತಾ ಅವಾಚ್ಯ ಶಬ್ದಗಳಿಂದ ಬ್ಶೆದಿದ್ದು. ಆರೋಪಿಯಾದ ಕೊಟ್ರಪ್ಪ ಮತ್ತು ಅಡಿವೆಪ್ಪ ರವರು ಕೈಕಾಲುಗಳಿಂದ ಮೈಮೇಲೆ ಹೊಡೆದು ಅವಾಚ್ಯ ಬ್ಶೆದು ಆರೋಪಿ ಕೊಟ್ರಪ್ಪ ಎಲ್ಲರೂ ವಾ: ಅಡವಿ ಆನಚಿದ ದೇವನಹಳ್ಳಿ ಇವರು ಅಲ್ಲೇ ಬಿದಿದ್ದ ಕಟ್ಟಿಗೆಯಿಂದ ಪಿರ್ಯಾದಿಯ ಗಂಡನಾದ ಶ್ರೀ. ಕಲ್ಲನಗೌಡ, 65 ವರ್ಷ, ವಾ: ಅಡವಿ ಆನಂದ ದೇವನಹಳ್ಳಿ ಗ್ರಾಮ ಈತನಿಗೆ ಎದೆಗೆ ಮತ್ತು ಬಾಯಿಗೆ  ಹೊಡೆದು ರಕ್ತಗಾಯ ಮತ್ತು ಒಳಪೆಟ್ಟು ಮಾಡಿದ್ದಾಗಿ, 108 ಅಂಬುಲೆನ್ಸ್ ನಲ್ಲಿ ಚಿಕಿತ್ಸೆಗೆ ಹ.ಬೊ.ಹಳ್ಳಿ ಸರ್ಕಾರಿ ಆಸ್ಪತ್ರೆಗೆ ತಂದು ದಾಖಲಿಸಿದ್ದಾಗಿ ಇರುತ್ತದೆ. 
      ಸದರಿ ಪ್ರಕರಣದಲ್ಲಿನ ಗಾಯಾಳು ಶ್ರೀ.ಕಾಳನಗೌಡ ಇವರಿಗೆ  ದಿನಾಂಕ:- 02/01/2015 ರಂದು ಬೆಳಗಿನ ಜಾವ 1-55 ಗಂಟೆ ಸುಮಾರಿಗೆ ಚಿಕಿತ್ಸೆಗಾಗಿ ದಾವಣಗೇರೆಯ ಎಸ್.ಎಸ್. ಆಸ್ಪತ್ರೆಯಲ್ಲಿ ದಾಖಲಿಸಿದ್ದು, ಚಿಕಿತ್ಸೆ ಪಡೆಯುತ್ತಾ ಚಿಕಿತ್ಸೆ ಫಲಕಾರಿಯಾಗದೆ ದಿನಾಂಕ:-04/01/2015 ರಂದು ಸಂಜೆ 6-55 ಗಂಟೆ ಸುಮಾರಿಗೆ ಮೃತಪಟ್ಟಿರುತ್ತಾನೆ ಎಂದು ಮಾಹಿತಿ ಬಂದ ನಂತರ ಹೆಚ್.ಬಿ.ಹಳ್ಳಿ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಂಡಿರುತ್ತದೆ.  

2) ಎಂ.ಎಂ.ಹಳ್ಳಿ ಠಾಣೆ ಸರಹದ್ದಿನ ಲೋಕಪ್ಪನ ಹೊಲದ ಹತ್ತಿರ ಆಟೋ ಕಲಿಯಲೆಂದು ಆಟೋ ಚಾಲನೆ ಮಾಡುತ್ತಿದ್ದಾಗ ಆಟೋ ಪಲ್ಟಿಯಾಗಿದ್ದು, ಈ ಅಫಘಾತದಲ್ಲಿ ಒಬ್ಬ ವ್ಯಕ್ತಿಯ ಸಾವು. 

        ದಿ:04-01-15 ರಂದು ಬೆಳಿಗ್ಗೆ 7-30 ಗಂಟೆ ಸುಮಾರಿಗೆ ಮರಿಯಮ್ಮನಹಳ್ಳಿಯ ಪ್ರಿಯಾಂಕನಗರದ ಮೃತ ಬರ್ನಪಿಂಗ್‍ನು ತಾನು ವಾಸವಿರುವ ಬಾಡಿಗೆ ಮನೆಯ ಮುಂದೆ ನಿಲ್ಲಸಿದ್ದ ಕೆ.ಎ.35/ಎ. 8409 ಅಪ್ಪಿ ಆಟೋವನ್ನು ಡ್ರೈವಿಂಗ್ ಕಲಿಯಲೆಂದು ತಾನೆ ಖುದ್ದಾಗಿ ಚಾಲು ಮಾಡಿಕೊಂಡು ಅದರಲ್ಲಿ ತನ್ನ ಸಂಗಡ ವಾಸವಿರುವ ದನಿನಾಯ್ಕ ಮತ್ತು ಜಗ್ ಕುವಾರ್ ರವರನ್ನು ಕೂಡಿಸಿಕೊಂಡು ಆಟೋವನ್ನು ಅಯ್ಯನಹಳ್ಳಿ ಮತ್ತು ಲೋಕಪ್ಪನಹೊಲ ಗ್ರಾಮದ ಮಾರ್ಗವಾಗಿ ಆಟೋವನ್ನು ಅತೀ ವೇಗ ಮತ್ತು ನಿರ್ಲಕ್ಷತನದಿಂದ ಅಡ್ಡ ದಿಡ್ಡಿಯಾಗಿ ನಡೆಸಿಕೊಂಡು ಹೋಗಿ ರಸ್ತೆಯ ಎಡ ತೆಗ್ಗಿನಲ್ಲಿ ಬೀಳಿಸಿದ್ದರಿಂದ ಆಟೋ ಚಾಲನೆ ಮಾಡುತ್ತಿದ್ದ ಬರ್ನಪಿಂಗ್ ತಂದೆ ಸಂಕೇರ್ತನ್, 28 ವರ್ಷ, ವಾ: ಸಾಂಬಾಲ್‍ಪುರ ಗ್ರಾಮ ಓರಿಸ್ಸಾ ರಾಜ್ಯ ಈತನು ಆಟೋ ಕೆಳಗೆ ಸಿಕ್ಕಿಕೊಂಡು ತಲೆಗೆ ಬಾರಿ ಪೆಟ್ಟು ಬಿದ್ದು ಕೂಡಲೆ ಸೇರಿದ ಜನರು 108 ಅಂಬುಲೆನ್ಸ್‍ನಲ್ಲಿ ಹಾಕಿಕೊಂಡು ಹೊಸಪೆಟೆ 100 ಬೆಡ್ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲು, ಸದರಿ ಚಿಕಿತ್ಸೆಯಲ್ಲಿ ಗುಣ ಮುಖನಾಗದೆ ಬೆಳಿಗ್ಗೆ 9-15 ಗಂಟೆಗೆ ಮೃತಪಟ್ಟಿರುತ್ತಾನೆ ಕೊಟ್ಟ ದೂರಿನ ಮೇರೆಗೆ ಎಂ.ಎಂ.ಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕಣರ ದಾಖಲಿಸಿ ತನಿಖೆ ಕೈಗೊಂಡಿರುತ್ತದೆ
                                                ಪೊಲೀಸ್ ಸೂಪರಿಂಟೆಂಡೆಂಟ್,    
                                                        ಬಳ್ಳಾರಿ.                  
ಇವರಿಗೆ,
ಎಲ್ಲಾ ಪತ್ರಿಕಾ ವರದಿಗಾರರಿಗೆ

ಹೆಚ್ಚಿನ ಮಾಹಿತಿಗಾಗಿ ಶ್ರೀ. ಮಹಮ್ಮದ್ ಗಯಾಸ್, ಎ.ಎಸ್.ಐ ಮೊಬೈಲ್ ನಂ. 9845484100 ಹಾಗು            
ಜಿ. ಸುಬ್ರಮಣ್ಯಂ, ಹೆಚ್.ಸಿ-175, ಮೋಬೈಲ್ ಸಂ: 9448202005 ರವರನ್ನು ಸಂಪರ್ಕಿಸಲು ವಿನಂತಿ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ