ಜಿಲ್ಲಾ ಪೊಲೀಸ್ ಕಾರ್ಯಲಯ
ಬಳ್ಳಾರಿ, ದಿನಾಂಕ: 04-01-2015
ಪತ್ರಿಕಾ ಪ್ರಕಟಣೆ
1) ಗಾದಿಗನೂರು ಪೊಲೀಸ್ ಠಾಣೆ ಸರಹದ್ದಿನ ತಾಳೂರು ಗ್ರಾಮದ ಹತ್ತಿರ ಮೋಟಾರ್ ಸೈಕಲ್ ರಸ್ತೆ ಅಫಘಾತ ಮೋಟಾರ್ ಸೈಕಲ್ ಸವಾರನ ಸಾವು ಒಬ್ಬರಿಗೆ ಗಾಯ.
ದಿನಾಂಕ: 02.01.2015 ರಂದು ಸಂಜೆ.07:00 ಗಂಟೆ ಸುಮಾರಿಗೆ ಫಿರ್ಯಾದಿದಾರರಾದ ಶ್ರೀ. ಅಯ್ಯಪ್ಪ, 43 ವರ್ಷ, ವಾ; ತಾಳೂರು ಗ್ರಾಮ ಸಂಡೂರು ತಾಲ್ಲೂಕು ಇವರು ವೈಯಕ್ತಿಕ ಕೆಲಸದ ಸಲುವಾಗಿ ತನ್ನ ಮೋಟಾರ್ ಸೈಕಲ್‍ನಲ್ಲಿ ಜೋಗ ಗ್ರಾಮಕ್ಕೆ ಹೋಗುತ್ತಿರುವಾಗ್ಗೆ ಸಂಡೂರು ತಾಲ್ಲೂಕು ತಾಳೂರು ಗ್ರಾಮದ ಸಮೀಪ ತಾಳೂರು-ಜೋಗ ಮಧ್ಯದಲ್ಲಿರುವ ತಾಳೂರು ಡ್ರೈವರ್‍ಸಾಬ್‍ನ ಹೊಲದ ಬಳಿ ಫಿರ್ಯಾದಿಯ ಮೋಟಾರ್ ಸೈಕಲ್‍ನ್ನು ಓವರ್ ಟೆಕ್ ಮಾಡಿದ ಕೆಎ.35/ಎಕ್ಸ್.4884 ನೇದ್ದರ ಸವಾರರು ತಮ್ಮ ಮೋಟಾರ್ ಸೈಕಲ್‍ನ್ನು ಅತಿ ವೇಗವಾಗಿ ಮತ್ತು ನಿರ್ಲಕ್ಷೆತೆಯಿಂದ ನಡೆಸಿಕೊಂಡು ಮುಂದೆ ಹೋಗಿ ನಿಯಂತ್ರಣ ತಪ್ಪಿ ರಸ್ತೆಯ ಬಲಭಾಗದ ತಗ್ಗಿನಲ್ಲಿ ಮೋಟಾರ್ ಸೈಕಲ್ ಸಮೇತ ಕೆಳಗೆ ಬಿದ್ದರು, ಫಿರ್ಯಾದಿಯು ಕೆಳಗೆ ಬಿದ್ದ ಸವಾರರನ್ನು ಅಲ್ಲಿ ಸೇರಿದ್ದ ಜನರ ಸಹಾಯದಿಂದ ಉಪಚರಿಸಿ, 108 ಅಂಬುಲೇನ್ಸ್ ಗೆ ಫೊನ್ ಮಾಡಿ ಕರೆಸಿ, ಚಿಕಿತ್ಸೆಗಾಗಿ ಬಳ್ಳಾರಿ ವಿಮ್ಸ್ ಆಸ್ಪತ್ರೆಗೆ ಕಳಿಸಿ, ಅಫಘಾತವನ್ನುವುಂಟು ಮಾಡಿದ ರಾಜೇಶ ಕುಮಾರ್‍ನ ವಿರುದ್ದ ದೂರು ನೀಡಿಲು ಠಾಣೆಗೆ ಬಂದಾಗ ತೀವ್ರ ರಕ್ತಗಾಯಗೊಂಡ ರಾಜೇಶ ಕುಮಾರ್ ಬಳ್ಳಾರಿ ವಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ದಿನಾಂಕ: 03-01-2013 ರಂದು ರಾತ್ರಿ.10:20 ಗಂಟೆ ಸುಮಾರಿಗೆ ಮೃತಪಟ್ಟಿದ್ದು, ಈ ಅಪಘಾತವನ್ನುವುಂಟು ಮಾಡಿದ ಮೃತ ರಾಜೇಶನ ವಿರುದ್ದ ಕಾನೂನು ಕ್ರಮ ಜರುಗಿಸುವಂತೆ ನೀಡಿದ ದೂರಿನ ಗಾದಿಗನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈ ಗೊಂಡಿರುತ್ತದೆ.
ಫಿರ್ಯಾದಿದಾರರಾದ ಶ್ರೀ. ಕೆ. ಭೀಮಣ್ಣ, 50 ವರ್ಷ, ವಾ: ಡಣಾಪುರ ಗ್ರಾಮ ಹೊಸಪೇಟೆ ತಾಲ್ಲೂಕು ಇವರು ದೂರು ನೀಡಿದ್ದೇನೆಂದರೆ, ದಿ: 02-01-15 ರಂದು ಸಂಜೆ 7-45 ಗಂಟೆ ಸುಮಾರಿಗೆ ಮೃತನಾದ ಕೆ. ಸಂತೋಷ್ ಕುಮಾರ್ ತಂದೆ ಕೆ. ರಾಮಪ್ಪ, 25 ವರ್ಷ, ವಾ; ಚಿತ್ತವಾಡಗಿ, ಹೊಸಪೇಟೆ ಈತನು ತನ್ನ ಕೆ.ಎ.35/ವೈ. 0087 ಫಲ್ಸ್‍ರ್ ಬೈಕ್‍ನಲ್ಲಿ ಮರಿಯಮ್ಮನಹಳ್ಳಿಗೆ ಬಂದು ಕೆಲಸ ಮುಗಿಸಿಕೊಂಡು ಮರಳಿ ಬಿ.ಎಂ.ಎಂ. ಪ್ಯಾಕ್ಟ್ರಿಗೆ ಹೋಗುವ ಕಾಲಕ್ಕೆ ಎನ್.ಹೆಚ್. 13 ರಸ್ತೆ ನ್ಯೂ ಪರಶುರಾಮ ಡಾಬಾದ ಬಳಿ ಹೋಗುವಾಗ ಯಾವುದೋ ವಾಹನ ಚಾಲಕನು ತನ್ನ ವಾಹನವನ್ನು ಅತೀ ವೇಗ ಮತ್ತು ನಿರ್ಲಕಷತನದಿಂದ ನಡೆಸಿಕೊಂಡು ಬಂದು ಬೈಕ್‍ಗೆ ಡಿಕ್ಕಿ ಹೊಡೆದು ಅಪಘಾತಪಡಿಸಿದ್ದರಿಂದ ಬೈಕ್ ಸವಾರಕ ಸಂತೋಷಕುಮಾರನಿಗೆ ತೆಲೆಗೆ ಮತ್ತು ಬಲ ಕಾಲಿಗೆ ಭಾರಿ ಒಳಪೆಟ್ಟು ಗಾಯಗಳು ಆಗಿ ಹೊಸಪೇಟೆ ಮತ್ತು ಬಳ್ಳಾರಿ ವಿಮ್ಸ್‍ನಲ್ಲಿ ಚಿಕಿತ್ಸೆ ಪಡೆಯುತ್ತಾ ದಿ: 03-01-15 ರಂದು ಬೆಳಿಗಿನ ಜಾವ 1-45 ಗಂಟೆಗೆ ಮೃತ ಪಟ್ಟಿರುತ್ತಾನೆಂದು ಅಪಘಾತಪಡಿಸಿ ಪರಾರಿಯಾದ ವಾಹನ ಮತ್ತು ಚಾಲಕನನ್ನು ಪತ್ತೆ ಮಾಡಿ ಕ್ರಮ ಜರುಗಿಸಲು ಇದ್ದ ದೂರಿನ ಮೇರೆಗೆ ಎಂ.ಎಂ.ಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತದೆ.
ಪೊಲೀಸ್ ಸೂಪರಿಂಟೆಂಡೆಂಟ್,
ಬಳ್ಳಾರಿ.
ಇವರಿಗೆ, ಎಲ್ಲಾ ಪತ್ರಿಕಾ ವರದಿಗಾರರಿಗೆ
ಹೆಚ್ಚಿನ ಮಾಹಿತಿಗಾಗಿ ಶ್ರೀ. ಮಹಮ್ಮದ್ ಗಯಾಸ್, ಎ.ಎಸ್.ಐ ಮೊಬೈಲ್ ನಂ. 9845484100 ಹಾಗು
ಜಿ. ಸುಬ್ರಮಣ್ಯಂ, ಹೆಚ್.ಸಿ-175, ಮೋಬೈಲ್ ಸಂ: 9448202005 ರವರನ್ನು ಸಂಪರ್ಕಿಸಲು ವಿನಂತಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ