ಮಂಗಳವಾರ, ಜನವರಿ 13, 2015

PRESS NOTE AS ON 14-01-2015


                                             ಜಿಲ್ಲಾ ಪೊಲೀಸ್ ಕಾರ್ಯಲಯ
                                        ಬಳ್ಳಾರಿ, ದಿನಾಂಕ: 14-01-2015.

ಪತ್ರಿಕಾ ಪ್ರಕಟಣೆ 

1) ಕೊಟ್ಟೂರು ಪೊಲೀಸ್ ಠಾಣೆ ಸರಹದ್ದಿನ ಕೂಡ್ಲಿಗಿ-ಕೊಟ್ಟೂರು ರಸ್ತೆಯ ಕುಮಾರೆಪ್ಪನ ಹೊಲದ ಹತ್ತಿರ ಮೋಟಾರ್ ಸೈಕಲ್ ಮತ್ತು ಲಾರಿ ನಡುವೆ ರಸ್ತೆ ಅಫಘಾತ ಮೋಟಾರ್ ಸೈಕಲ್ ಸವಾರನ ಸಾವು. 
       
       ದಿನಾಂಕ 13-01-2015 ರಂದು ಸಂಜೆ 6-00 ಗಂಟೆಯಿಂದ ಸಂಜೆ 6-30 ಪಿ.ಎಂ ಗಂಟೆಯ ವರೆಗೆ ಕೊಟ್ಟೂರು ಸರ್ಕಾರಿ ಆಸ್ಪತ್ರೆಯಲ್ಲಿ ಫಿರ್ಯಾದಿದಾರರಾದ ಶ್ರೀ. ಎಸ್. ಸಂಘರ್ಷ ತಂದೆ ಎಸ್. ಸುಂಕಪ್ಪ, 15 ವರ್ಷ, ಕೊರಚರು ಜನಾಂಗ, ಎಸ್.ಎಸ್.ಎಲ್.ಸಿ ವಿದ್ಯಾರ್ಥಿ, ವಾಸ: ಭತ್ತನಹಳ್ಳಿ ಗ್ರಾಮ, ಕೂಡ್ಲಿಗಿ ತಾಲ್ಲೂಕು ದೂರು ನೀಡಿದ್ದು, ದಿನಾಂಕ: 13-01-2015 ರಂದು ಸಂಜೆ 5-30 ಗಂಟೆ ಸುಮಾರಿಗೆ ಫಿರ್ಯಾದಿಯು  ಭತ್ತನಹಳ್ಳಿಯಿಂದ ತನ್ನ ಮಾವ ವೆಂಕಟೇಶ ಇವರು ನೆಡೆಸುತ್ತಿದ್ದ ಬಜಾಜ್ ಪಲ್ಸರ್ ಮೊಟಾರ್ ಸೈಕಲ್ (ನಂಬರ್ ಇರುವುದಿಲ್ಲ) ನಲ್ಲಿ ಕೊಟ್ಟೂರಿಗೆ ಬರುವಾಗ ಕೂಡ್ಲೀಗಿ-ಕೊಟ್ಟೂರು ರಸ್ತೆ ಕುಮಾರೆಪ್ಪನ ಹೊಲದ ಹತ್ತಿರ ಮುಂದೆ ಹೋಗುತ್ತಿದ್ದ ಲಾರಿಗೆ ಓವರ್ ಟೇಕ್ ಮಾಡಿ ಅತಿವೇಗ ಮತ್ತು ಅಜಾಗರುಕತೆಯಿಂದ ಮುಂದೆ ಹೋಗುವಾಗ ಎದುರಿಗೆ ಬರುತ್ತಿದ್ದ ಡಿಸ್ಕವರ್ ಬೈಕ್ ನಂ. ಕೆ.ಎ-37 ಆರ್.7634 ನೇದ್ದಕ್ಕೆ ಡಿಕ್ಕಿ ಹೊಡೆಸಿ ಅಪಘಾತ ಪಡಿಸಿದ್ದರಿಂದ ಪಕ್ಕದಲ್ಲಿ ಹೋಗುತ್ತಿದ್ದ ಲಾರಿ ನಂ. ಟಿ.ಎನ್ 21 ಎಕ್ಸ (ಟಿಎಂಪಿ) / 1205 ನೇದ್ದರ ಬಲಗಡೆಯ ಹಿಂದಿನ ಚಕ್ರಕ್ಕೆ ನಮ್ಮ ವೆಂಕಟೇಶ ಬಿದ್ದು ಬಲಕಾಲು ಸಂಪೂರ್ಣ ಸೊಂಟದವರಗೆ ಮತ್ತು ಮರ್ಮಾಂಗಕ್ಕೆ ತುಂಬಾ ರಕ್ತಗಾವಗಿ ನನಗೆ ಕೈಕಾಲುಗಳಿಗೆ ಸೊಂಟಕ್ಕೆ ಬೆನ್ನಿಗೆ ರಕ್ತಗಾಯಗಳು ಆಗಿದ್ದು ಎದುರಿಗೆ ಬರುತ್ತಿದ್ದ ಮೊಟಾರ್ ಸೈಕಲ್‍ನಲ್ಲಿ ಹಿಂದೆ ಕುಳಿತಿದ್ದ ಮಹಂತೇಶ ತಂದೆ ಹುಲುಗಪ್ಪನಿಗೆ ಬಲಕಾಲಿನ ಪಾದಕ್ಕೆ ಗಾಯವಾಗಿದ್ದು ಮೊಟಾರ್ ಸೈಕಲ್ ನೆಡೆಸುತ್ತಿದ್ದ ವೆಂಕಟೇಶ ತಂದೆ ಹನುಮಂತಪ್ಪ ಇವರಿಗೂ ಬಲಕೈಬೆರಳುಗಳಿಗೆ  ತುಂಬಾ ರಕ್ತಗಾಯಗಳಾಗಿದ್ದು ಲಾರಿ ಡ್ರೈವರ್ ಓಡಿಹೋದ. 108 ಅಂಬುಲೆನ್ಸನಲ್ಲಿ ಗಾಯಗೊಂಡ ನಾವೆಲ್ಲರು ಅಂಬುಲೆನ್ಸನಲ್ಲಿ ಬರುವಾಗ ಅಪಘಾತದಲ್ಲಿ ಆದ ಗಾಯಗಳಿಂದ ವೆಂಕಟೇಶ್ ತಂದೆ ಕಪ್ಪತ್ತಪ್ಪ, 32 ವರ್ಷ, ಕೊರಚರು ಜನಾಂಗ, ವ್ಯವಸಾಯ, ವಾಸ: ಭತ್ತನಹಳ್ಳಿ ಗ್ರಾಮ ಈತನು ದಾರಿಯ ಮದ್ಯದಲ್ಲಿ 6-00 ಗಂಟೆಗೆ ಮೃತಪಟ್ಟಿರುತ್ತಾನೆಂದು ಕೊಟ್ಟ ದೂರಿನ ಮೇರೆಗೆ ಕೊಟ್ಟೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದೆ.

2) ಸಿರಿಗೆರೆ ಪೊಲೀಸ್ ಠಾಣೆ ಸರಹದ್ದಿನ ಎಂ. ಸೂಗೂರು ಗ್ರಾಮದಲ್ಲಿ ಕೋಳಿ ಪಂದ್ಯ ನಡೆಯುತ್ತಿದ್ದ ಸ್ಥಳಕ್ಕೆ ಪೊಲೀಸರ ದಾಳಿ ನಗದು ಹಣ ವಶ, ಆರೋಪಿಗಳ ಬಂಧನ. 

      ದಿನಾಂಕ: 13-01-2015 ರಂದು ಮದ್ಯಾಹ್ನ 1-00 ಗಂಟೆಗೆ ಶ್ರೀ. ವಿ.ಆರ್. ಏಳಗಿ, ಸಿ.ಪಿ.ಐ. ತೆಕ್ಕಲಕೋಟೆ ರವರಿಗೆ ಎಂ. ಸೂಗೂರು ಗ್ರಾಮದ ಮಡೆ ನಾಗರಾಜ್ ರವರ ಮನೆಯ ಪಕ್ಕದ ಸಾರ್ವಜನಿಕ ಸ್ಥಳದಲ್ಲಿ ಕೋಳಿ ಜೂಜಾಟ ನಡೆಯುತ್ತಿದೆ ಅಂತ ಬಂದ ಖಚಿತ ಮಾಹಿತಿ ಮೇರೆಗೆ ಪೊಲೀಸ್ ಸಿಬ್ಬಂದಿಯವರೊಂದಿಗೆ ಮದ್ಯಾಹ್ನ 2-00 ಗಂಟೆಗೆ ಹೋಗಿ ವೀಕ್ಷಿಸಿದ್ದು ಮೇಲ್ಕಂಡ ಸ್ಥಳದಲ್ಲಿ ಜನರು ಗುಂಪಾಗಿ ನಿಂತುಕೊಂಡು ಎರೆಡು ಕೋಳಿ ಜಗಳಕ್ಕೆ ಬಿಟು ಹಣವನ್ನು ಪಣವಾಗಿಟ್ಟು ಜೂಜಾಟ ಆಡುತ್ತಿದ್ದವರ ಮೇಲೆ ದಾಳಿ ಮಾಡಲಾಗಿ ಜೂಜಾಟದಲ್ಲಿ ನಿರತರಾಗಿದ್ದ ಆರೋಪಿತರಾದ ಸೀತರಾಮ ರಾಜು ಹಾಗು ಇತರೆ 15 ಜನರು ಎಲ್ಲರೂ ವಾ: ಎಂ. ಸೂಗೂರು ಗ್ರಾಮ ಇವರನ್ನು ದಸ್ತಗಿರಿ ಮಾಡಿ ಜೂಜಾಟಕ್ಕೆ ಬಳಸಿದ್ದ ನಗದು ಹಣ ರೂ. 37,620/- ಗಳನ್ನು ಹಾಗು ಜೂಜಾಟಕ್ಕೆ ಬಳಸಿದ್ದ ಎರಡು ಕೋಳಿಗಳು, 5 ಮೋಟಾರ್ ಸೈಕಲ್‍ಗಳು ಜಪ್ತು ಪಡಿಸಿಕೊಂಡಿದ್ದು, ಈ ಬಗ್ಗೆ ಸಿರಿಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತದೆ. 

                                                                                                              ಪೊಲೀಸ್ ಸೂಪರಿಂಟೆಂಡೆಂಟ್,                                                                                                                                       ಬಳ್ಳಾರಿ.                                                                                                                
ಇವರಿಗೆ,
ಎಲ್ಲಾ ಪತ್ರಿಕಾ ವರದಿಗಾರರಿಗೆ

ಹೆಚ್ಚಿನ ಮಾಹಿತಿಗಾಗಿ ಶ್ರೀ. ಮಹಮ್ಮದ್ ಗಯಾಸ್, ಎ.ಎಸ್.ಐ ಮೊಬೈಲ್ ನಂ. 9845484100 ಹಾಗು                           ಜಿ. ಸುಬ್ರಮಣ್ಯಂ, ಹೆಚ್.ಸಿ-175, ಮೋಬೈಲ್ ಸಂ: 9448202005 ರವರನ್ನು ಸಂಪರ್ಕಿಸಲು ವಿನಂತಿ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ