Crime Key Report From To | ||||||||||||||||
Sl. No | FIR No | FIR Date | Crime Group - Crime Head | Stage of case | ||||||||||||
Cowlbazar PS | ||||||||||||||||
1 | Cr.No:0005/2016 (IPC 1860 U/s 363 ) |
05/01/2016 | Under Investigation | |||||||||||||
KIDNAPPING AND ABDUCTION - Others | ||||||||||||||||
Brief Facts : | ಬಳ್ಳಾರಿ ಸರ್ಕಾರಿ ಬಾಲಕರ ಬಾಲ ಮಂದಿರದ ಅಧೀಕ್ಷಕರಾದ ಶ್ರೀ ಸುದೀಪ್ ಕುಮಾರ್ ರವರು ಠಾಣೆಗೆ ಬಂದು ನೀಡಿದ ದೂರನ್ನು ಪಡೆದು ನೋಡಲಾಗಿ ನಿನ್ನೆ ದಿನ ದಿನಾಂಕ; 04/01/2015 ರಂದು ಬೆಳಿಗ್ಗೆ 10-00 ಗಂಟೆಗೆ ತನ್ನ ಸಂಸ್ಥೆಯಿಂದ ಬಾಲಕರಾದ 1) ಸುರೇಶ್ -12ವರ್ಷ ಹಾಗು 2) ತೇಜುಮುರ್ತಿ ವ-14ವರ್ಷ ರವರು ರೆಡಿಯೋ ಪಾರ್ಕ ಹತ್ತಿರದ ಸರ್ಕಾರಿ ಶಾಲೆಗೆ ಹೋಗಿ ಬರುವುದಾಗಿ ಹೇಳಿ ಹೋದವರು ಸಂಜೆ 4-40 ಗಂಟೆಯ ವರಿಗೆ ಬರಬೇಕಾಗಿದ್ದ ಬಾಲಕರು ಬಾರದೇ ಎಲ್ಲೋ ನಾಪತ್ತೆಯಾಗಿರುತ್ತಾರೆ. ಸದರಿ ಬಾಲಕರು ಅಪ್ರಾಪ್ರವಯಸ್ಕ ಬಾಲಕರಾಗಿದ್ದು ಯಾರೋ ದುಷ್ಕರ್ಮಿಗಳು ಅಪಹರಿಸಿರಬಹುದೆಂದು ಕಾರಣ ನಾಪತ್ತೆಯಾದ ಬಾಲಕರನ್ನು ಪತ್ತೆಮಾಡಿಕೊಡುವಂತೆ ನೀಡಿದ ದೂರನ್ನು ಪಡೆದು ಪ್ರಕರವನ್ನು ದಾಖಲು ಮಾಡಿದೆ. | |||||||||||||||
Hospet Extention PS | ||||||||||||||||
2 | Cr.No:0002/2016 (IPC 1860 U/s 379 ) |
05/01/2016 | Under Investigation | |||||||||||||
THEFT - Electronic Goods (Radio,TV,VCR,ACs,Office Automation Equipments) | ||||||||||||||||
Brief Facts : | ಈ ದಿನ ದಿನಾಂಕ 5-1-2016 ರಂದು ಮದ್ಯಾಹ್ನ 12-15 ಗಂಟೆಗೆ ಫಿರ್ಯಾದಿದಾರನು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೇನೆಂದರೆ. ಫಿರ್ಯಾದಿಯು ದಿನಾಂಕ 3/1/2016 ರಂದು ತನ್ನ ಮನೆಯಿಂದ ಹೊರಟು ಎ.ಪಿ.ಎಂ.ಸಿ ಮಾರ್ಕೇಟನಲ್ಲಿ ತರಕಾರಿ ತರಲು ಬಂದಿದ್ದು, ಎ.ಪಿ.ಎಂ.ಸಿಯಲ್ಲಿರುವ ಹೆಚ್.ಎನ್.ಎಫ್.ಅಂಗಡಿಯ ಪಕ್ಕದಲ್ಲಿ ತಕರಾರಿಯನ್ನು ತೆಗೆದುಕೊಳ್ಳುತ್ತಿದ್ದಾಗ ತನ್ನ ಅಂಗಿ ಜೇಬಿನಲ್ಲಿದ್ದ ಮೈಕ್ರೊ ಮ್ಯಾಕ್ಸ್ ಕಂಪನಿಯ ಮೊಬೈಲ್ ಅದರ ಐ.ಎಂ.ಇ.ಐ. ನಂ.911417452391935 ಮತ್ತು ಮಾಡೇಲ್ ನಂ.ಎ.107 ನೇದ್ದು ಅಂದಾಜು ರೂ.6,000/- ಬೆಲೆ ಬಾಳುವುದನ್ನು ಯಾರೊ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ. ಮತ್ತು ತನ್ನ ಕಳುವಾದ ಮೊಬೈಲ್ ನ್ನು ಎಲ್ಲಾ ಕಡೆ ಹುಡುಕಾಡಿ ತಡವಾಗಿ ಬಂದು ಈ ದಿನ ಮೊಬೈಲ್ ನ್ನು ಪತ್ತೆ ಮಾಡಿಕೊಡಲು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದೆ. | |||||||||||||||
3 | Cr.No:0003/2016 (CODE OF CRIMINAL PROCEDURE, 1973 U/s 110(E)(G) ) |
05/01/2016 | Under Investigation | |||||||||||||
CrPC - Security For Good Behaviour (Sec 110) | ||||||||||||||||
Brief Facts : | ಈ ದಿನ ದಿನಾಂಕ:-5-1-2016 ರಂದು ಮದ್ಯಹ್ನ 1 ಗಂಟೆಗೆ ಮಾನ್ಯ ಡಿ.ಎಸ್.ಪಿ. ಆದೇಶದ ಮೇರೆಗೆ ನಮ್ಮಠಾಣಾ ಸರಹದ್ದಿನಲ್ಲಿ ನಾನು ಎನ್.ಸಿ. ಕಾಲೋನಿ ಏರಿಯಗಳಲ್ಲಿ ಪೆಟ್ರೋಲಿಂಗ್ ಮಾಡಿಕೊಂಡು ಚಪ್ಪರದಹಳ್ಳಿಯ ಸರ್ದಾರ್ ಮೊಹಲ್ಲಾ ಮಸೀದಿಯ ಮುಂದೆ ಮದ್ಯಹ್ನ 1-30 ಗಂಟೆಗೆ ಬಂದಾಗ ಸರ್ದಾರ್ ಮೊಹಲ್ಲ ಮಸೀದಿಯ ಮುಂದೆ ಹೋಗುತ್ತಿದ್ದಾಗ ಒಬ್ಬ ವ್ಯಕ್ತಿಯು ನನ್ನನ್ನು ನೋಡಿದ ಸದರಿ ವ್ಯಕ್ತಿ ಅಲ್ಲಿಂದ ತಪ್ಪಿಸಿಕೊಂಡು ಹೋಗಲು ಪ್ರಯತ್ನಿಸಿದವನನ್ನು ನಾನು ಹಿಡಿದು ನೋಡಲಾಗಿ ಸದರಿಯವನ ಹೆಸರು ಕೆ. ನೂರ್ ಭಾಷ ತಂದೆ ಕೆ.ಖಾಜಾಹುಸೇನ್ ವ: 20 ವರ್ಷ, ಮುಸ್ಲೀಂ ಜನಾಂಗ ಕೇಬಲ್ ಆಪರೇಟರ್, ವಾಸ: ಜಿಗಳಿಕಟ್ಟ ರಾಯಪ್ಪ ದೇವಸ್ಥಾನದ ಹತ್ತಿರ, ವಿಜಯ ಟಾಕೀಸ್ ಹತ್ತಿರ ಹೊಸಪೇಟೆ ಆಗಿದ್ದು, ಸದರಿಯವನು ನಮ್ಮ ಠಾಣೆಯ ಗುನ್ನೆ ನಂ-31/2012 ಮತ್ತು 32/12 ಕಲಂ, 457, 380 ಐಪಿಸಿ ಪ್ರಕರಣದಲ್ಲಿ ಎಂ.ಓ.ಬಿ ಆಸಾಮಿಯಾಗಿರುತ್ತಾನೆ, ಸದರಿಯವನಿಗೆ ಈ ಸಮಯದಲ್ಲಿ ಇಲ್ಲಿ ಏಕೆ ಬಂದು ತಿರುಗಾಡುತ್ತಿದ್ದೀಯ ಅಂತ ವಿಚಾರಿಸಲಾಗಿ ಆ ಸಮಯದಲ್ಲಿ ಅಲ್ಲಿ ಇರುವಿಕೆಯ ಬಗ್ಗೆ ಸಮರ್ಪಕವಾದ ಉತ್ತರ ನೀಡಿರುವುದಿಲ್ಲ. ಕಾರಣ ಸದರಿಯವನನ್ನು ಹಾಗೆ ಬಿಟ್ಟಲ್ಲಿ ಯಾವುದಾದರು ಸಂಙ್ಞೆ ಅಪರಾಧ ಮಾಡಲು ಬಂದಿರಬಹುದಂತ ಅನುಮಾನದ ಮತ್ತು ಇತ್ತಿಚೇಗೆ ಆಗಿರುವ ಕೋಮು ಗಲಭೆಯಾಗಿರುವುದರಿಂದ ಯಾವುದಾದರೂ ಕೋಮಿಗೆ ಪ್ರಚೋದನೆ ಮಾಡ ಬಹುದೆಂದು ಸಂಶಯವಿರುವುದರಿಂದ ಮುಂಜಾಗ್ರತೆಗಾಗಿ ಈ ದಿನ ಮದ್ಯಹ್ನ 1-45 ಗಂಟೆಗೆ ಸದರಿಯವನನ್ನು ವಶಕ್ಕೆ ತೆಗೆದುಕೊಂಡು ವಾಪಸ್ಸು ಠಾಣೆಗೆ ಮದ್ಯಹ್ನ 2-00 ಗಂಟೆಗೆ ಬಂದು ಸದ್ರಿಯವನ ವಿರುದ್ದ ಠಾಣಾ ಗುನ್ನೆ ನಂ: 3/2016 ಕಲಂ: 110 ಸಿ.ಆರ್.ಪಿ.ಸಿ.(ಇ&ಜಿ) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದೆ. | |||||||||||||||
Hospet Rural PS | ||||||||||||||||
4 | Cr.No:0004/2016 (CODE OF CRIMINAL |
05/01/2016 | Under Investigation | |||||||||||||
PROCEDURE, 1973 U/s 41,109 ) | ||||||||||||||||
CrPC - Security For Good Behaviour (Sec 109) | ||||||||||||||||
Brief Facts : | ದಿನಾಂಕ: 05/01/2016 ರಂದು ಪಿರ್ಯಾದಿ ಠಾಣೆಯ ಹೆಚ್.ಸಿ-346 ರವರು ಠಾಣೆಯ ಸಿಬ್ಬಂದಿಯಾದ ಹೆಚ್.ಸಿ-107 ಮತ್ತು ಪಿಸಿ-98,32,683 ರವರುಗಳೊಂದಿಗೆ ಬೆಳಿಗ್ಗೆ 8-30 ಗಂಟೆಗೆ ಠಾಣಾ ಸರಹದ್ದಿನ ಹೊಸೂರು ಗ್ರಾಮದ ರಸ್ತೆಯ ಬಳಿ ಇರುವ ಶ್ರೀ.ಚಿತ್ತವಾಡ್ಗೆಪ್ಪನ ಗುಡಿ ಹತ್ತಿರ ಗಸ್ತಿನಲ್ಲಿರುವಾಗ್ಗೆ ಯಾರೋ ಇಬ್ಬರು ಸದರಿ ಗುಡಿಯ ಮುಂದೆ ಬೀಗ ಹಾಕಿದ ಗುಡಿಗಳ ಕಡೆಗೆ ನೋಡುತ್ತಾ ಅತ್ತಿತ್ತ ಓಡಾಡುತ್ತಿದ್ದು, ಅನುಮಾನ ಬರುವಂತೆ ವತರ್ಿಸುತ್ತಿದ್ದರು. ಪೊಲೀಸರು ಹತ್ತಿರ ಹೋಗುತಿದ್ದಂತೆ ಪೊಲೀಸರನ್ನು ನೋಡಿ ತಮ್ಮ ಮುಖವನ್ನು ಮರೆಮಾಚಿಕೊಂಡು ಓಡಿ ಹೋಗಲು ಪ್ರಯತ್ನಿಸಿದರು. ಅಷ್ಟರಲ್ಲಿ ಅವರನ್ನು ಸಿಬ್ಬಂದಿಯವರು ಬೆನ್ನುಹತ್ತಿ ಹಿಡಿದುಕೊಂಡು ಹೆಚ್.ಸಿ-346 ರವರ ಮುಂದೆ ಹಾಜರು ಪಡಿಸಿದ್ದು ಅವರ ಹೆಸರು ವಿಳಾಸ ವಿಚಾರಿಸಲು ಮೊದಲು ವಿಧವಿಧವಾಗಿ ನುಡಿದಿದ್ದು ಪುನಃ ವಿಚಾರಿಸಲು ಮೊದಲನೆಯವ ಹೆಸರು ಸಮೀರ್ ಎಂ. ತಂದೆ ಅಲ್ಲಾಭಕ್ಷಿ, ವ-18 ವರ್ಷ, ವಿಧ್ಯಾರ್ಥಿ, ವಾ-ಹಳೇ ಮಲಪನಗುಡಿ ಗ್ರಾಮ ಹೊಸಪೇಟೆ ಅಂತಾ ಎರಡನೆಯವ ಹೆಸರು ರಮೇಶ ತಂದೆ ಹುಲುಗಪ್ಪ, ವ-30 ವರ್ಷ, ವಾಲ್ಮೀಕಿ ಜಾತಿ, ವ್ಯವಸಾಯ, ವಾ- ಚಿತ್ತವಾಡ್ಗಿ, ಹೊಸಪೇಟೆ ಅಂತಾ ತಿಳಿಸಿದ್ದು, ಸದರಿಯವರಿಗೆ ಸದರಿ ಸ್ಥಳದಲ್ಲಿ ಈ ಸಮಯದಲ್ಲಿ ಇರುವಿಕೆಯ ಬಗ್ಗೆ, ತಮ್ಮ ಮುಖವನ್ನು ಮರೆಮಾಚಿಕೊಂಡಿದ್ದರ ಬಗ್ಗೆ, ಪೊಲೀಸರನ್ನು ನೋಡಿ ಓಡಿದ ಬಗ್ಗೆ ಮತ್ತು ಅನುಮಾನ ಬರುವಂತೆ ವತರ್ಿಸುತ್ತಿದ್ದರ ಬಗ್ಗೆ ವಿಚಾರಿಸಲು ಸಮಪರ್ಕವಾದ ಉತ್ತರ ನೀಡಲಿಲ್ಲ. ಸದರಿ ಆಪಾದಿತರನ್ನು ಇಲ್ಲಿಯೇ ಬಿಟ್ಟಲ್ಲಿ ಯಾವುದಾದರೂ ಸಂಜ್ಞೆಯ ಅಪರಾಧ ಮಾಡಬಹುದೆಂದು ಮುಂಜಾಗ್ರತಾ ಕ್ರಮವಾಗಿ ಆಪಾದಿತರನ್ನು ದಸ್ತಗಿರಿ ಮಾಡಿಕೊಂಡು ವಾಪಸ್ಸು ಠಾಣೆಗೆ ಬಂದು ಎಸ್.ಹೆಚ್.ಓ. ರವರ ಮುಂದೆ ವಿಶೇಷ ವರದಿಯೊಂದಿಗೆ ಹಾಜರುಪಡಿಸಿದ್ದ ಕಾರಣ ಇವರುಗಳ ವಿರುದ್ದ ಠಾಣಾ ಗುನ್ನೆ ನಂ. 04/16 ಕಲಂ 41-109 Crpc ರೀತ್ಯಾ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಗೊಳ್ಳಲಾಯಿತು | |||||||||||||||
Kottur PS | ||||||||||||||||
5 | Cr.No:0004/2016 (IPC 1860 U/s 363 ) |
05/01/2016 | Under Investigation | |||||||||||||
KIDNAPPING AND ABDUCTION - Others | ||||||||||||||||
Brief Facts : | ದಿನಾಂಕ 05-01-2016 ರಂದು ಬೆಳಿಗ್ಗೆ 8-00 ಗಂಟೆಗೆ ಪಿರ್ಯಾದಿ ಠಾಣೆಗೆ ಹಾಜರಾಗಿ ಕೊಟ್ಟ ಕಂಪ್ಯೂಟರ್ ನಲ್ಲಿ ತಯಾರಿಸಿದ ದೂರು ಸಾರಾಂಶ: ಪಿರ್ಯಾದಿಗೆ 2 ಗಂಡು 2 ಹೆಣ್ಣು ಮಕ್ಕಳಿದ್ದು, 2 ನೇ ಮಗಳು ಕು: ಕೊಟ್ರಮ್ಮ 19 ವರ್ಷ, ಈಕೆಯು ತನ್ನ ತಾಯಿಯೊಂದಿಗೆ ಅದೇ ಊರಿನ ವಾಲ್ಮೀಕಿ ಜನಾಂಗದ ಪೆನ್ನೆನೋರ ಮಂಜುನಾಥ ಎಂಬುವನ ಹೊಲಕ್ಕೆ ಕೂಲಿ ಕೆಲಸಕ್ಕೆ ಹೋದಾಗ ಪಿರ್ಯಾದಿಯ ಮಗಳು ಕೊಟ್ರಮ್ಮಳಿಗೆ ಮತ್ತು ಮಂಜುನಾಥನಿಗೆ ಪರಿಚಯವಾಗಿ ತುಂಬಾ ಸಲಿಗೆಯಿಂದಿದ್ದು, ದಿನಾಂಕ 02-01-2016 ರಂದು ರಾತ್ರಿ 11-00 ಗಂಟೆ ಸುಮಾರಿಗೆ ಪಿರ್ಯಾದಿ ಮಗಳು ಕೊಟ್ರಮ್ಮ ಗ್ರಾಮದಲ್ಲಿ ನಡೆಯುವ ಶ್ರೀ ಆಂಜನೇಯ ಸ್ವಾಮಿ ಕಾರ್ತಿಕೋತ್ಸವಕ್ಕೆ ದೀಪಹಚ್ಚಲು ಹೋದಾಗ ದೇವಸ್ಥಾನದ ಬಳಿಯಿಂದ ಮಂಜುನಾಥನು ಕೊಟ್ರಮ್ಮಳನ್ನು ಅಪಹರಿಸಿಕೊಂಡು ಹೋಗಿರುವುದಾಗಿ, ಈಬಗ್ಗೆ ಮಂಜುನಾಥನ ಮನೆಯಲ್ಲಿ ವಿಚಾರಿಸಿದ್ದು, ಕಾರ್ತೀಕಕ್ಕೆ ಹೋದವನು ಬಂದಿಲ್ಲವೆಂದು ಮಂಜುನಾಥನ ಹೆಂಡತಿ ಮತ್ತು ತಾಯಿ ತಿಳಿಸಿದ್ದು, ಮಗಳನ್ನು ಗ್ರಾಮದಲ್ಲಿ ಮತ್ತು ಸಂಬಂಧಿಕರ ಊರುಗಳಲ್ಲಿ ವಿಚಾರಿಸಲು ಸಿಕ್ಕಿರುವುದಿಲ್ಲ. ಮಗಳನ್ನು ಪತ್ತೆ ಮಾಡಿ, ಅಪಹರಿಸಿಕೊಂಡು ಹೋದ ಮಂಜುನಾಥನ ವಿರುದ್ದ ಕಾನೂನು ಕ್ರಮ ಜರುಗಿಸಲು ಕೊಟ್ಟ ದೂರು ಮೇರೆಗೆ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತದೆ. | |||||||||||||||
6 | Cr.No:0005/2016 (CODE OF CRIMINAL PROCEDURE, 1973 U/s 107,151 ) |
05/01/2016 | Under Investigation | |||||||||||||
CrPC - Preventive Arrest (Sec 151) | ||||||||||||||||
Brief Facts : | ಮಾನ್ಯ
ತಾಲ್ಲೂಕು ದಂಡಾಧಿಕಾರಿಗಳು ಕೂಡ್ಲಿಗಿ ಇವರ
ನ್ಯಾಯಾಲಯದಲ್ಲಿ ನಿವೇದನೆ, ಕೊಟ್ಟೂರು ಠಾಣೆಯ ಪುಲ್ಲಯ್ಯ ಎಂ. ರಾಥೋಡ್ ಪಿ.ಎಸ್.ಐ ಆದ ನಾನು ಘನ ತಾಲ್ಲೂಕು ದಂಡಾಧಿಕಾರಿಗಳು ಕೂಡ್ಲಿಗಿ ಇವರ ನ್ಯಾಯಾಲಯದಲ್ಲಿ ವಿನಂತಿಸಿ ಕೊಳ್ಳುವುದೇನೆಂದರೆ. ದಿನಾಂಕ 02-01-2016 ರಂದು ರಾತ್ರಿ 11-00 ಗಂಟೆಗೆ ಚಿನ್ನೇನಹಳ್ಳಿ ಗ್ರಾಮದ ವಾಸಿಯಾದ ಸಣ್ಣ ಈರಪ್ಪನ ಮಗಳಾದ ಕು:ಕೊಟ್ರಮ್ಮ ಈಕೆಯನ್ನು ಅದೇ ಗ್ರಾಮದ ಮಂಜುನಾಥ ತಂದೆ ತಿಪ್ಪಣ್ಣ ಈತನು ಅಪಹರಿಸಿಕೊಂಡು ಹೋದ ಬಗ್ಗೆ ಪಿರ್ಯಾದಿ ಸಣ್ಣ ಈರಪ್ಪನು ಈ ದಿನ ಬೆಳಿಗ್ಗೆ 8-00 ಗಂಟೆಗೆ ಠಾಣೆಗೆ ಬಂದು ಕೊಟ್ಟ ದೂರು ಮೇರೆಗೆ ಠಾಣಾ ಗುನ್ನೆ ನಂ. 04/2015 ಕಲಂ 363 ಐ.ಪಿ.ಐ ರೀತ್ಯಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ. ಹೀಗಿರುವಾಗ ಬೆಳಿಗ್ಗೆ 10-00 ಗಂಟೆಗೆ ನಾನು ಠಾಣೆಯಲ್ಲಿದ್ದಾಗ ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ಚಿನ್ನೇನಹಳ್ಳಿ ಗ್ರಾಮದಲ್ಲಿ ಎರಡು( ನಾಯಕರು-ಬೋವಿ) ಕೋಮಿನ ಕಡೆಯವರ ಮದ್ಯೆ ಗಲಾಟೆಯಾಗುವ ಸಂಭವವಿದೆ ಎಂದು ಮಾಹಿತಿ ಬಂದ ಮೇರೆಗೆ ನಾನು ಮತ್ತು ಸಿಬ್ಬಂದಿಯವರು ಸದರಿ ಚಿನ್ನೇನಹಳ್ಳಿ ಗ್ರಾಮಕ್ಕೆ ಬೆಳಿಗ್ಗೆ 10-30 ಗಂಟೆಗೆ ಭೇಟಿ ನೀಡಿ ಗ್ರಾಮಸ್ಥರನ್ನು ವಿಚಾರಿಸಲು ವಾಲ್ಮೀಕಿ ಜನಾಂಗದ ಮಂಜುನಾಥನ ಕಡೆಯವರಾದ 1) ಕುದುರೆಡು ಅಂಜಿನಪ್ಪ ತಂದೆ ರಾಜಪ್ಪ, 42 ವರ್ಷ, 2) ಕುದುರೆಡು ಓಬಪ್ಪ ತಂದೆ ರಾಜಪ್ಪ, 60 ವರ್ಷ, 3) ಕುದುರೆಸು ಬಸವರಾಜ ತಂದೆ ರಾಜಪ್ಪ 4) ಮಾರ್ನಹಳ್ಳಿ ಬೊಮ್ಮಪ್ಪ ತಂದೆ ಅಕ್ಕಪ್ಪ, 21 ವರ್ಷ, 5) ಕೋಗಳಿ ಬಸವರಾಜ ತಂದೆ ಬೊಮ್ಮಪ್ಪ, 25 ವರ್ಷ, 6) ಕುದುರೆಡು ಓಬಪ್ಪ ತಂದೆ ಮಾರೆಪ್ಪ, 35 ವರ್ಷ, 7) ದೊಡ್ಡಮನಿ ಮಂಜಪ್ಪ ತಂದೆ ಪಕ್ಕೀರಪ್ಪ, 45 ವರ್ಷ ಎಲ್ಲರೂ ವಾಲ್ಮೀಕಿ ಜನಾಂಗ, |
|||||||||||||||
ವ್ಯವಸಾಯ ವಾಸ: ಚಿನ್ನೇನಹಳ್ಳಿ ಗ್ರಾಮ ಕೂಡ್ಲಿಗಿ ಹಾಗೂ ಕೊಟ್ರಮ್ಮನ ಕಡೆಯವರಾದ ಬೋವಿ ಜನಾಂಗದ 1) ಸಣ್ಣ ವೀರಪ್ಪ ತಂದೆ ಗುಡ್ಡದ ದುರುಗಪ್ಪ, 55 ವರ್ಷ, 2) ಗುಡ್ಡದ ಹನುಮಂತಪ್ಪ ತಂದೆ ದುರುಗಪ್ಪ, 60 ವರ್ಷ, 3) ಗುಡ್ಡದ ಅಂಜಿನಪ್ಪ ತಂದೆ ದುರುಗಪ್ಪ, 48 ವರ್ಷ, 4) ಗುಡ್ಡದ ನಾಗರಾಜ ತಂದೆ ಹನುಮಂತಪ್ಪ, 30 ವರ್ಷ, 5) ಗುಡ್ಡದ ದುರುಗಪ್ಪ ತಂದೆ ಅಂಜಿನಪ್ಪ, 22 ವರ್ಷ, 6) ನಡುಮಾನಿವನಹಳ್ಳಿ ಚೌಡಪ್ಪ ತಂದೆ ರಂಗಪ್ಪ, 24 ರ್ಷ, 7) ಮುದ್ದಪ್ಪರ ಪರಶುರಾಮ ತಂದೆ ತಿಮ್ಮಪ್ಪ, 25 ವರ್ಷ, ಎಲ್ಲರೂ ಬೋವಿ ಜನಾಂಗ, ವ್ಯವಸಾಯ, ವಾಸ: ಚಿನ್ನೇನಹಳ್ಳಿ ಗ್ರಾಮ ಕೂಡ್ಲಿಗಿ ರವರುಗಳು ಸಣ್ಣ ವೀರಪ್ಪನ 2ನೇ ಮಗಳಾದ ಕು: ಕೊಟ್ರಮ್ಮ ಇವಳನ್ನು ದಿನಾಂಕ 02-01-2016 ರಂದು ರಾತ್ರಿ 11-00 ಗಂಟೆಗೆ ಪೆನ್ನೆನೋರ್ ಮಂಜುನಾಥ ತಂದೆ ತಿಪ್ಪಣ್ಣ ಈತನು ದೇವಸ್ಥಾನದ ಬಳಿ ಕೊಟ್ರಮ್ಮಳನ್ನು ಅಪಹರಸಿಕೊಂಡು ಹೋಗಿದ್ದು, ಈ ವಿಷಯದಲ್ಲಿ ಅಂದಿನಿಂದ ಉಭಯಸ್ಥರಲ್ಲಿ ದ್ವೇಷ ವೈಶಮ್ಯ ಬೆಳೆದು ಜಗಳ ತೆಗೆದು ಯಾವ ವೇಳೆಯಲ್ಲಾದರೂ ಒಬ್ಬರಿಗೊಬ್ವರು ಹೊಡೆದಾಡಿ ಬಡೆದಾಡಿ ಪ್ರಾಣ ಮತ್ತು ಆಸ್ತಿ ಪಾಸ್ತಿ ಹಾನಿ ಉಂಟು ಮಾಡಿ ಗ್ರಾಮದಲ್ಲಿ ಶಾಂತಿ ಭಂಗ ಉಂಟಾಗುವ ಸಾದ್ಯತೆ ಇರುತ್ತದೆ ಎಂದು ತಿಳಿದು ಬಂದಿದ್ದರಿಂದ ಮುಂಜಾಗ್ರತೆ ಕ್ರಮಕ್ಕಾಗಿ ಮೇಲ್ಕಂಡ ಪ್ರತಿವಾದಿಗಳನ್ನು ವಶಕ್ಕೆ ತೆಗೆದುಕೊಂಡು ದಿನಾಂಕ 05-01-2016 ರಂದು ಮದ್ಯಾಹ್ನ 12-30 ಗಂಟೆಗೆ ವಾಪಾಸ್ಸು ಠಾಣೆಗೆ ಬಂದು ಮೇಲ್ಕಂಡ 14 ಜನ ಪ್ರತಿವಾದಿಗಳ ವಿರುದ್ದ ಠಾಣೆ ಗುನ್ನೆ ನಂ 05/16 ಕಲಂ 107, 151,ಸಿ.ಆರ್. ಪಿ.ಸಿ ಮೇರೆಗೆ ಪ್ರಕರಣ ದಾಖಲಿಸಿಕೊಂಡಿದ್ದು, ಸದರಿ ಪ್ರತಿವಾದಿಗಳಿಂದ ಒಳ್ಳೆಯ ನಡೆತೆಯಿಂದಿರಲು ಸೂಕ್ತ ಜಾಮೀನು ಮುಚ್ಚಳಿಕೆ ಪಡೆಯಲು ಮತ್ತು ಕಲಂ 151, 107 ಸಿ.ಆರ್.ಪಿ.ಸಿ ಮೇರೆಗೆ ಕ್ರಮ ಜರುಗಿಸಲು ಈ ಮೂಲಕ ಕೋರಲಾಗಿದೆ. | ||||||||||||||||
Kuduthini PS | ||||||||||||||||
7 | Cr.No:0001/2016 (IPC 1860 U/s 323,341,504,506 ) |
05/01/2016 | Under Investigation | |||||||||||||
CASES OF HURT - Simple Hurt | ||||||||||||||||
Brief Facts : | ದಿನಾಂಕ:- 04.01.2016 ರಂದು ಬೆಳಿಗ್ಗೆ 11 ಗಂಟೆಗೆ ಪಿರ್ಯಾದಿದಾರನು ಕಟ್ಟಿಂಗ್ ಮಾಡಿಸಿಕೊಂಡು ಬರಲು ಹೋಗಿದ್ದು, ಅಗ ಕಟ್ಟಿಂಗ್ ಶಾಪ್ ನಲ್ಲಿ ಕೆ.ಗೊಂದೆಪ್ಪ @ ಮುದಿಯಾ ಈತನು ಕಟ್ಟಿಂಗ್ ಶಾಪ್ ನಲ್ಲಿ ಕುಳಿತುಕೊಂಡಿದ್ದು, ಅಗ ಕೆ.ಗೊಂದೆಪ್ಪನಿಗೆ ಪಿರ್ಯಾದಿದಾರನು ತನಗೆ ಅರ್ಜೆಂಟ್ ಅಗಿ ಹೋಗಬೇಕು ತಾನು ಕಟ್ಟಿಂಗ್ ಮಾಡಿಸಿಕೊಂಡು ಹೋಗುತ್ಥೇನೆಂದು ತಿಳಿಸಿದಾಗ ಅಲ್ಲೇ ಇದ್ದ ಆರೋಪಿ ಈತನು ತನ್ನ ಮಾವ ಕೆ.ಗೊಂದೆಪ್ಪನಿಗೆ ಕುರ್ಚಿಯಿಂದ ಇಳಿಯುವಂತೆ ತಿಳಿಸುತ್ತೀಯಾ, ತಾನು ಬಂದರೆ ಮೊದಲು ಕಟ್ಟಿಂಗ್ ಮಾಡಿಸಿಕೊಳ್ಳಲು ಬಿಡಬೇಕು ಎಂದು ತಿಳಿಸಿ, ಪಿರ್ಯಾದಿದಾರನಿಗೆ ಕೈಗಳಿಂದ ಹೊಡೆದು, ಅಕ್ರಮ ತಡೆ ಮಾಡಿ, ಮತ್ತು ಲೇ ಈಡಿಗರ ಸೂಳೇ ಮಕ್ಕಳೇ ಅಂತಾ ಅವಾಚ್ಯ ಶಬ್ದಗಳಿಂದ ಬೈದು ಪ್ರಾಣಬೆದರಿಕೆ ಹಾಕಿರುತ್ತಾನೆಂದು ಇತ್ಯಾದಿ ದೂರಿನ ಮೇರೆಗೆ. ( ದೂರಿನ ಪ್ರತಿಯನ್ನು ಲಗತ್ತಿಸಿದೆ) | |||||||||||||||
Kurugod PS | ||||||||||||||||
8 | Cr.No:0004/2016 (KARNATAKA POLICE ACT, 1963 U/s 78(III) ; IPC 1860 U/s 420 ) |
05/01/2016 | Under Investigation | |||||||||||||
KARNATAKA POLICE ACT 1963 - Gambling - Matka (78 Class C) | ||||||||||||||||
Brief Facts : | ಪಿಎಸ್ಐ ರವರು ದಿನಾಂಕ: 05/01/2016 ರಂದು ಬೆಳಿಗ್ಗೆ 9:20 ಗಂಟೆಗೆ ಕಲ್ಲುಕಂಭ ಗ್ರಾಮದ ಗ್ರಾಮ ಪಂಚಾಯಿತಿ ಹಿಂದಿನ ಸಾರ್ವಜನಿಕ ಸ್ಥಳದಲ್ಲಿ ಆರೋಪಿ-1 ರಿಂದ 04 ರವರು ಕೂಡಿ ಹೋಗಿ ಬರುವ ಸಾರ್ವಜನಿಕರನ್ನು ಮಟಕಾ ಆಡಲು ಕೂಗುತ್ತಾ ಒಂದು ರೂಪಾಯಿಗೆ 80 ರೂ. ಕೊಡುತ್ತೆವೆ ಅಂತ ಜನರಿಗೆ ಆಸೆ ಹುಟ್ಟಿಸಿ ಮೋಸ ಮಾಡುವ ಉದ್ದೇಶದಿಂದ ಕೂಗಿ ಕರೆಯುತ್ತಾ ಜನರಿಂದ ಹಣ ಪಡೆದು ಮಟ್ಕಾ ಜೂಜಾಟ ನಡೆಸುತ್ತಿದ್ದಾಗ ಪಿಎಸ್ಐ ರವರು ಸಿಬ್ಬಂದಿಯೊಂದಿಗೆ ಪಂಚರ ಸಮಕ್ಷಮ ಬೆಳಿಗ್ಗೆ 10:30 ಗಂಟೆಗೆ ದಾಳಿ ಮಾಡಿ ಆರೋಪಿ-1 ರಿಂದ 03 ರವರನ್ನು ಹಿಡಿದು ಅವರಿಂದ ಮಟ್ಕಾ ಜೂಜಾಟಕ್ಕೆ ಸಂಬಂದಿಸಿದ ನಗದು ಹಣ 1860=00 ರೂಪಾಯಿಗಳು, 03 ಮಟ್ಕಾಪಟ್ಟಿ, 03 ಬಾಲ್ಪೆನ್, 02 ಮೊಬೈಲ್ಗಳನ್ನು ಜಪ್ತಿಮಾಡಿಕೊಂಡಿರುತ್ತದೆ. ಆರೋಪಿ-04 ಪರಾರಿಯಾಗಿದ್ದು ಆರೋಪಿ-1 ರಿಂದ 02 ರವರು ತಾವು ಬರೆದ ಮಟ್ಕಾ ಪಟ್ಟಿಗಳನ್ನು ಆರೋಪಿ-05 ರವರಿಗೆ ಕೊಡುತ್ತಿರುವುದಾಗಿ ತಿಳಿಸಿರುತ್ತಾನೆ. ಕಾರಣ 05 ಜನ ಆರೋಪಿತರ ವಿರುದ್ದ ಕಲಂ 78(3) ಕೆ.ಪಿ.ಕಾಯ್ದೆ ಮತ್ತು ಕಲಂ 420 ಐ.ಪಿ.ಸಿ. ರೀತ್ಯಾ ಪ್ರಕರಣ ದಾಖಲಿಸಿಕೊಂಡು ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ಪಿಎಸ್ಐ ರವರು ಸೂಚಿಸಿದ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುತ್ತೇನೆ, ಇದರೊಂದಿಗೆ ದೂರಿನ ಮೂಲ ಪ್ರತಿಯನ್ನು ಲಗತ್ತಿಸಿದೆ. | |||||||||||||||
Marriyammanahalli PS | ||||||||||||||||
9 | Cr.No:0001/2016 (IPC 1860 U/s 279,337 ) |
05/01/2016 | Under Investigation | |||||||||||||
MOTOR VEHICLE ACCIDENTS NON-FATAL - National Highways | ||||||||||||||||
Brief Facts : | ಈ ದಿನ ದಿನಾಂಕ- 05/01/2016 ರಂದು ಬೆಳಿಗ್ಗೆ 11.00 ಗಂಟೆಗೆ ಹೆಚ್.ಸಿ./ 347 ಕೆ.ಮಲ್ಲೇಶಪ್ಪ ಇವರು ಗಾಯಾಳು ಚೌಡಪ್ಪ ಇವರು ನೀಡಿದ ಲಿಖಿತ ದೂರನ್ನು ಹೊಸಪೇಟೆ ಪುತ್ತೂರು ಆಸ್ಪತ್ರೆಯಲ್ಲಿ ಪಡೆದುಕೊಂಡು ಬಂದು ಹಾಜರುಪಡಿಸಿದ್ದು ಸಾರಾಂಶ- ನಿನ್ನೆ ದಿನ ದಿನಾಂಕ- 04/01/2016 ರಂದು ಬೆಳಿಗ್ಗೆ ಪಿರ್ಯಾದಿ ಚೌಡಪ್ಪ ಡಣಾಪುರ ಗ್ರಾಮಕ್ಕೆ ಕೆಲಸಕ್ಕ ತನ್ನ ಮೋಟಾರ್ ಸೈಕಲ್ ನಂಬರ್ ಕೆ.ಎ.35/ಈ.ಸಿ. 2069 ನೇದ್ದರಲ್ಲಿ ಹೋಗಿ ಪುನಃ ತಮ್ಮ ಮನೆಗೆ ಬರುವಾಗ ಎನ್.ಹೆಚ್.13 ರಸ್ತೆಯ ಹನುಮನಹಳ್ಳಿ ಸರ್ಕಾರಿ ಶಾಲೆಯ ಹತ್ತಿರ ಕ್ರಾಸ್ ಕಡೆ ತನ್ನ ಮೋಟಾರ್ ಸೈಕಲ್ ಕ್ರಾಸ್ ಮಾಡಲು ಇಂಡಿಕೇಟರ್ ಆಗಿ ಕೈ ಸನ್ನೆ ಮಾಡುತ್ತಾ ರಸ್ತೆ ಕ್ರಾಸ್ ಮಾಡುವಾಗ ಬೆಳಿಗ್ಗೆ 10 ಗಂಟೆಯ ಸುಮಾರಿಗೆ ಪ್ರಸನ್ನ ಕುಮಾರ್ | |||||||||||||||
ಈತನು ತನ್ನ ಕಾರ್ ನಂಬರ್ ಕೆ.ಎ. 36/ಎಂ. 9643 ನೇದ್ದನ್ನು ಹೊಸಪೇಟೆ ಕಡೆಯಿಂದ ಕಾರನ್ನು ಅತಿಜೋರಾಗಿ ಮತ್ತು ನಿರ್ಲಕ್ಷ್ಯತನದಿಂದ ನಡೆಸಿಕೊಂಡು ಬಂದು ರಸ್ತೆ ದಾಡುತ್ತಿದ್ದ ಪಿರ್ಯಾದಿ ಮೋಟಾರ್ ಸೈಕಲ್ ಗೆ ಡಿಕ್ಕಿ ಹೊಡೆಸಿ ಅಪಘಾತಪಡಿಸಿದ್ದರಿಂದ ಪಿರ್ಯಾದಿಗೆ ಹಣೆಗೆ ಮೂಗಿಗೆ ಎಡಕಾಲು ಮೊಣಕಾಲು ಕೆಳಗಡೆ ರಕ್ತಗಾಯಗಳು ಆಗಿರುತ್ತವೆ. ಎಂದು ಇದ್ದ ದೂರಿನ ಸಾರಾಂಶದ ಮೇರೆಗೆ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತದೆ. | ||||||||||||||||
10 | Cr.No:0002/2016 (IPC 1860 U/s 279,337 ) |
05/01/2016 | Under Investigation | |||||||||||||
MOTOR VEHICLE ACCIDENTS NON-FATAL - National Highways | ||||||||||||||||
Brief Facts : | ಈ
ದಿನ ದಿ: 05-01-16 ರಂದು ಮದ್ಯಾಹ್ನ 2-30 ಗಂಟೆಗೆ ಫಿರ್ಯಾದಿದಾರರು ಠಾಣೆಗೆ ಹಾಜರಾಗಿ ಕೊಟ್ಟ
ಲಿಖಿತ ದೂರು ಸ್ವೀಕರಿಸಿ ಪರಿಶೀಲಿಸಿ ನೋಡಲು, ಸಾರಾಂಶ
ಈ ಕೆಳಕಂಡಂತೆ ಇರುತ್ತದೆ. ಶ್ರೀ. ಸಿವಯ್ಯ ಪತ್ತೇಪುರಮಠ ತಂದೆ ಶರಣಪ್ಪ ವ: ೩೨ ವರ್ಷ ಜಂಗಮ ಜನಾಂಗ ಕೆ.ಎ.೨೮/ಎನ್. ೬೩೫೭ ಶಿಪ್ಟ್ ಡಿಜೈರ್ ಕಾರ್ ಚಾಲಕ ವಾಸ: ಮಾರತಿನಗರ ಮುದ್ದೆಬಿಹಾಳ್. ಬಿಜಾಪುರ (ಜಿ) ಆದ ನಾನು ತಮ್ಮಲ್ಲಿ ಕೇಳಿಕೊಳ್ಳವುದೇನೆಂದರೆ, ನಮ್ಮ ಕಾರ್ ಮಾಲಿಕ ವಿಶ್ವನಾಥರೆಡ್ಡಿ ಎಂದು ಇದ್ದು, ಇವರ ಚಿಕ್ಕಪ್ಪನ ಮಗನಾದ ಶ್ರೀ. ಅಶೋಕ್ ಬಿರಾದಾರ್ ರವರು ಅಯ್ಯಪ್ಪ ಸ್ವಾಮಿ ಮಾಲೆ ಹಾಕಿದ್ದರಿಂದ ಅವರಿಗೆ ಶಭರಿಮಲೈಗೆ ಕರೆದುಕೊಂಡು ಹೋಗಲು ನನಗೆ ತಿಳಿಸಿದರು. ನಾನು ದಿ:೩೧-೧೨-೧೫ ರಂದು ಸಂಜೆ ೭-೦೦ ಗಂಟೆಗೆ ನಮ್ಮ ಕೆ.ಎ.೨೮/ಎನ್. ೬೩೫೭ ಶಿಪ್ಟ್ ಡಿಜೈರ್ ಕಾರ್‌ನಲ್ಲಿ ಅಶೋಕ್ ಬಿರಾದಾರ್ ಮತ್ತು ಈತನ ಸ್ನೇಹಿತರಾದ ಗುರುರಾಜ ಕಡಿ, ಸಂತು @ ಸಂತೋಷ ಮಡಿವಾಳ, ಆನಂದ ಕಾಮ್ಟೆ, ರವರು ಸಹಾ ಬಂದರು. ನಮ್ಮ ಕಾರಿನಲ್ಲಿ ಇವರೊಂದಿಗೆ ದಿ:೦೨-೦೧-೧೬ ರಂದು ಮದ್ಯಾಹ್ನ ೧೨-೦೦ ಗಂಟೆಗೆ ಸೇರಿದೆವು. ದೇವರ ರ್ಶನದ ನಂತರ ದಿ:೦೩-೦೧-೧೬ ರಂದು ಮದ್ಯಾಹ್ನ ಶಭರಿಮಲೈನಿಂದ ಪ್ರಯಾಣಿಸಿ ಅಲ್ಲಲ್ಲಿ ದೇವರ ದರ್ಶನ ಮಾಡಿಕೊಂಡು ದಿ:೦೪-೦೧-೧೬ ರಂದು ಬೆಳಿಗ್ಗೆ ೧೦-೦೦ ಗಂಟೆಗೆ ಮರಳಿ ಮುದ್ದೆಬಿಹಾಳ್‌ಗೆ ಪ್ರಯಾಣ ಬೆಳೆಸಿದೆವು. ಸಂಜೆ ೪-೦೦ ಗಂಟೆ ಸುಮಾರಿಗೆ ಎನ್.ಹೆಚ್. ೧೩ ರಸ್ತೆಯ ಮುಖಾಂತರ ಬರುತ್ತಿರುವಾಗ ಗೊಲ್ಲರಹಳ್ಳಿ ಕ್ರಾಸ್ ಬಳಿ ಒಬ್ಬ ಲಾರಿ ಚಾಲಕ ತನ್ನ ಲಾರಿಯನ್ನು ಅತೀ ವೇಗ ಮತ್ತು ನಿರ್ಲಕ್ಷತನದಿಂದ ನಡೆಸಿಕೊಂಡು ಇನ್ನೊಂದು ವಾಹನಕ್ಕೆ ಸೈಡ್ ಹಾಕಲೆಂದು ಅದೇ ವೇಗದಲ್ಲಿ ಬಂದು ನಮ್ಮ ಕಾರಿಗೆ ಡಿಕ್ಕಿ ಹೊಡೆದು ಅಪಘಾತಪಡಿಸಿದನು. ಇದರಿಂದ ನಮ್ಮ ಕಾರಿನ ಮುಂಬಾಗವೆಲ್ಲ ಜಖಂಗೊಂಡಿತು. ನನ್ನ ಬಲ ಮುಂದೆಲೆಗೆ ಕೊಯ್ದಂತ ರಕ್ತಗಾಯವಾಯಿತು. ನನ್ನ ಕಾರಿನಲ್ಲಿ ಇದ್ದರಿಗೆ ಯಾವುದೇ ಗಾಯಗಳು ಆಗಿರಲಿಲ್ಲ. ಕೂಡಲೆ ಕೆಳಗೆ ಇಳಿದು ನೋಡಲು, ನಮ್ಮ ಕಾರಿಗೆ ಡಿಕ್ಕಿ ಹೊಡೆದ ಲಾರಿ ನಂಬರ್ ನೋಡಲು, ಕೆ.ಎ.೨೫/ಸಿ. ೮೪೩೫ ಈಚರ್ ಲಾರಿಯಾಗಿತ್ತು. ಚಾಲಕನ ಹೆಸರು ವಿಚಾರಿಸಲು ತನ್ನ ಹೆಸರು ಸಿದ್ರಾಮಯ್ಯ ವಾಸ: ಹುಬ್ಬಳ್ಳಿ ಎಂದು ತಿಳಿಸಿರುತ್ತಾನೆ. ನಂತರ ನಾನು ಬೇರೊಂದು ವಾಹನದಲ್ಲಿ ಮರಿಯಮ್ಮನಹಳ್ಳಿ ಖಾಸಗಿ ಆಸ್ಪತ್ರೆಗೆ ಬಂದು ಚಿಕಿತ್ಸೆಗೆ ದಾಖಲಾಗಿರುತ್ತೇನೆ. ಈ ದಿನ ಚಿಕಿತ್ಸೆ ಪಡೆದುಕೊಂಡು ಬಂದಿದ್ದು ನಿನ್ನೆ ದಿನ ನಮ್ಮ ಕಾರಿಗೆ ಡಿಕ್ಕಿ ಹೊಡೆದು ಅಪಘಾತಪಡಿಸಿದ ಲಾರಿ ನಂ:ಕೆ.ಎ.೨೫/ಸಿ. ೮೪೩೫ ಈಚರ್ ಲಾರಿ ಚಾಲಕನ ವಿರುದ್ದ ಕಾನೂನು ಕ್ರಮ ಜರುಗಿಸಲು ಕೋರುತ್ತೇನೆ. ಎಂದು ಇದ್ದ ದೂರಿನ ಮೇರೆಗೆ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತದೆ. |
|||||||||||||||
Sandur PS | ||||||||||||||||
11 | Cr.No:0001/2016 (CODE OF CRIMINAL PROCEDURE, 1973 U/s 151,107 ) |
05/01/2016 | Under Investigation | |||||||||||||
CrPC - Security For Good Behaviour (Sec 107 ) | ||||||||||||||||
Brief Facts : | ಷಣ್ಮುಖಪ್ಪ.ಜಿ.ಆರ್, ಪಿ.ಎಸ್.ಐ, ಸಂಡೂರು ಪೊಲೀಸ್ ಠಾಣೆ ಆದ ನಾನು ಮಾನ್ಯ ಘನ ನ್ಯಾಯಾಲಯದಲ್ಲಿ ನಿವೇದಿಸಿಕೊಳ್ಳುವುದೇನೆಂದರೆ, ಗ್ರಾಮ ಭೇಟಿಗಾಗಿ ಆದ ನಾನು ಹಾಗು ಸಿಬ್ಬಂದಿ ಯವರಾದ ಸಿ:682 ಮತ್ತು ಡಬ್ಲು.ಪಿ.ಸಿ :1031, 1042 ರವರ ಸಂಗಡ ಈದಿನ ದಿನಾಂಕ : 05/01/2016 ರಂದು ಬೆಳಿಗ್ಗೆ 11-45 ಗಂಟೆಗೆ ಕಮತ್ತೂರು ಗ್ರಾಮಕ್ಕೆ ಹೋದಾಗ, ಬಾತ್ಮಿದಾರರಿಂದ ಮಾಹಿತಿ ಸಂಗ್ರಹಿಸಲು, ತಿಳಿದು ಬಂದಿದ್ದೇನೆಂದರೆ ಈ ಮೇಲ್ಕಂಡ ಪ್ರತಿವಾದಿಗಳಾದ [1] ಶ್ರೀಮತಿ. ಹೊನ್ನುರಮ್ಮ ಗಂಡ ಜಯಣ್ಣ, ವ: 36 ವರ್ಷ, ಚೆಲುವಾದಿ ಜನಾಂಗ, ಸ್ವಂತ ಗ್ರಾಮ : ಕೋನಸಾಗರ ಗ್ರಾಮ, ಮೊಳಕಾಳ್ಮೂರು ತಾಲೂಕು, ಚಿತ್ರದುರ್ಗ ಜಿಲ್ಲೆ, ಹಾಲಿವಾಸ: ಕೆ.ಎಸ್.ಆರ್.ಟಿ. ಬಸ್ ಡಿಪೋ ಹತ್ತಿರ ಇರುವ ಬಿ.ಜೆ.ಪಿ. ಆಫೀಸ್ ಹತ್ತಿರ, ಸಂಡೂರು, [2] ಶ್ರೀಮತಿ.ಓಬಮ್ಮ ಗಂಡ ವೈ.ಜಿ. ಕುಮಾರ ಸ್ವಾಮಿ, ವ: 46 ವರ್ಷ, ವಾಲ್ಮೀಕಿ ಜನಾಂಗ, ಕಮತ್ತೂರು ಗ್ರಾಮ, ಸಂಡೂರು ತಾಲೂಕು, ಇವರು ಸಂಡೂರು ಪಟ್ಟಣ ದಲ್ಲಿರುವ ಮದ್ಯದ ಅಂಗಡಿಗಳಿಂದ ಮದ್ಯದ ಬಾಟಲುಗಳನ್ನು ಕಮತ್ತೂರು ಗ್ರಾಮಕ್ಕೆ ತಂದು ಯಾವುದೇ ಪರವಾನಿಗೆ ಇಲ್ಲದೆಯೇ ಆಗಿಂದಾಗ್ಗೆ ಜನರಿಗೆ ಮಾರಿ ಖಾಲಿ ಮಾಡುತ್ತಿದ್ದಾರೆಂದು ಮಾಹಿತಿ ತಿಳಿದು ಬಂದಿರುತ್ತದೆ. ಸದರಿ ರವರು ಮದ್ಯ ಮಾರುವ ವೇಳೆಯಲ್ಲಿ ಜನರ ಹತ್ತಿರ ಗಲಾಟೆ ವಗೈರೆ ಮಾಡುವ ಸಂಭವಗಳು ಮಾಡಿಕೊಂಡು ಸಾರ್ವಜನಿಕರ ಶಾಂತಿ-ನೆಮ್ಮದಿಗೆ ಭಂಗವನ್ನುಂಟು ಮಾಡುವ ಸಂಭವಗಳು ಇರುತ್ತವೆ. ಹಾಗು ಲಾರಿ ಚಾಲಕರುಗಳುಕುಡಿದ ಅಮಲಿನಲ್ಲಿ ಅಪಘಾತಗಳನ್ನು ಮಾಡುವ ಸಂಭವ ಇರುತ್ತದೆಂದು ಇದರಿಂದಾಗಿ ಪ್ರಾಣ ಹಾನಿಗಳಾಗುವ ಸಂಭವ ಇದ್ದು ಕಾರಣ ಮುಂದಾಗ ಬಹು ದಾದ ಅನಾಹುತವನ್ನು ತಪ್ಪಿಸುವ ನಿಟ್ಟಿನಲ್ಲಿ ಮುಂಜಾಗ್ರತಾ ದೃಷ್ಟಿಯಿಂದ ಈ ದಿನ ದಿನಾಂಕ 05/01/2016 ರಂದು ಮದ್ಯಾಹ್ನ 12-00 ಗಂಟೆಗೆ ಸದ್ರಿಯವರನ್ನು ವಶಕ್ಕೆ ತೆಗೆದುಕೊಂಡು ಠಾಣೆಗೆ ಮದ್ಯಾಹ್ನ 1-00 ಗಂಟೆಗೆ ಬಂದು ಪ್ರತಿವಾದಿಗಳ ವಿರುದ್ದ ಠಾಣೆ ಗುನ್ನೆ ನಂಬರ್ 01/2016 ಕಲಂ 151-107 ಸಿ.ಆರ್.ಪಿ.ಸಿ ಪ್ರಕಾರ ಕೇಸು ದಾಖಲಿಸಿಕೊಂಡು ತನಿಖೆ ಕೈಗೊಂಡು ಮಾನ್ಯ ನ್ಯಾಯಾ ಲಯವು ಪ್ರತಿವಾದಿಗಳ ವಿರುದ್ದ ಈ ರೀತಿ ಅನಧಿಕೃತವಾಗಿ ಮದ್ಯದ ಬಾಟಲುಗಳನ್ನು ಸಾರ್ವಜನಿಕರಿಗೆ ಮಾರಾಟ ಮಾಡದಂತೆ ಮುಂದಿನ ಕ್ರಮ ಜರುಗಿಸಬೇಕೆಂದು ಘನ ನ್ಯಾಯಾಲಯದಲ್ಲಿ ಕೋರಲಾಗಿದೆ. | |||||||||||||||
ಮಂಗಳವಾರ, ಜನವರಿ 5, 2016
PRESS NOTE OF 05/01/2016
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ