ಮಂಗಳವಾರ, ಜನವರಿ 12, 2016

PRESS NOTE OF 12/01/2016

Crime Key Report From   To   
Sl. No. FIR No FIR Date Crime Group - Crime Head Stage of case
Bellary Rural PS
1 Cr.No:0011/2016
(KARNATAKA POLICE ACT, 1963 U/s 78(3) ; IPC 1860 U/s 420 )
11/01/2016 Under Investigation
 KARNATAKA POLICE ACT 1963 - Gambling - Matka (78 Class C)
Brief Facts :  ದಿನಾಂಕ: 11-1-2016 ರಂದು ರಾತ್ರಿ 9-15 ಗಂಟೆಗೆ ಠಾಣೆಯ ಪಿ.ಎಸ್.ಐ ರವರಾದ ಶ್ರೀ.ಕೆ.ಹೊಸಕೇರಪ್ಪರವರು ದೂರು ನೀಡಿದ್ದು ಸಾರಾಂಶ: ದಿನಾಂಕ: 11-1-2016 ರಂದು ರಾತ್ರಿ ಬಳ್ಳಾರಿ ಗ್ರಾಮೀಣ ಪೊಲೀಸ್ ಠಾಣೆಯ ಸರಹದ್ದು ಕಪ್ಪಗಲ್ ಗ್ರಾಮದ ಸರ್ಕಾರಿ ಶಾಲೆಯ ಮುಂದುಗಡೆ ಸಾರ್ವಜನಿಕ ಸ್ಥಳದಲ್ಲಿ ಕೆಲವು ಜನರು ನಸೀಬಿನ ಮಟಕಾ ಜೂಜಾಟ ನೆಡಸುತ್ತಿರುತ್ತಾರೆಂದು ಖಚಿತ ಮಾಹಿತಿ ಬಂದ ಮೇರೆಗೆ ಪಿ.ಎಸ್.ಐ ರವರು ಸಿಬ್ಬಂದಿಯವರಾದ ಹೆಚ್.ಸಿ-43 ಪಿ.ಸಿ-115-141 ರವರೊಂದಿಗೆ ಇಲಾಖೆಯ ಜೀಪ್ ನಂಬರ್ ಕೆ.ಎ-34-ಜಿ-303 ರಲ್ಲಿ ಚಾಲಕ ಎ.ಪಿ.ಸಿ-89 ರೊಂದಿಗೆ ಕಪ್ಪಗಲ್ ಗ್ರಾಮಕ್ಕೆ ಹೋಗಿ ದಾಳಿ ಮಾಡಿದಾಗ ಕಪ್ಪಗಲ್ ಗ್ರಾಮದ ಸರ್ಕಾರಿ ಶಾಲೆಯ ಮುಂದುಗಡೆ ಸಾರ್ವಜನಿಕ ಸ್ಥಳದಲ್ಲಿ 1] ಶೇಖ್ ರಾಜ್ ಮತ್ತು 2] ಕುರುಬರ ಗಾಧಿಲಿಂಗರವರು ಸಾರ್ವಜನಿಕರಿಗೆ ಉದ್ದೇಶಿಸಿ ಇದು ಮಟಕಾ ಜೂಜಾಟ ನಸೀಬಿನ ಜೂಜಾಟ ಒಂದು ರೂಪಾಯಿ ಕಟ್ಟಿದರೆ 80 ರೂಪಾಯಿ ಕೊಡುತ್ತೇವೆ ಬನ್ನಿರಿ ಆಡಿರಿ ಎಂದು ಸಾರ್ವಜನಿಕರಿಂದ ಹಣವನ್ನು ಪಡೆದುಕೊಂಡು ಮಟಕಾ ನಂಬರಿನ ಚೀಟಿಗಳನ್ನು ಬರೆದುಕೊಡುತ್ತಾ ಮಟಕಾ ಜೂಜಾಟ ನೆಡಸುತ್ತಿದ್ದಾಗ ರಾತ್ರಿ 7-45 ಗಂಟೆಗೆ ದಾಳಿ ಮಾಡಿದಾಗ ಕುರುಬರ ಗಾಧಿಲಿಂಗನು ಓಡಿ ಹೋಗಿದ್ದು ಸಿಕ್ಕಿ ಬಿದ್ದ ಶೇಖರ್ ರಾಜನಿಂದ ಮಟಕಾ ಜೂಜಾಟದ ಹಣ ರೂ. 4030/- 1 ಮಟಕಾ ಪಟ್ಟಿ, ಒಂದು ಲಾವಾ ಕಂಪನಿಯ ಮೊಭೈಲ್ ಪೋನ್  ಮತ್ತು ಒಂದು ಬಾಲ್ ಪೆನ್ ಜಪ್ತು ಮಾಡಿಕೊಂಡಿದ್ದು ಮೇಲ್ಕಂಡ ಶೇಕ್ ರಾಜ ಮತ್ತು ಕುರುಬರ ಗಾದಿಲಿಂಗರವರು ಬಳ್ಳಾರಿ ತಾಳೂರು ರಸ್ತೆ ಶ್ರೀಸಾಯಿನಗರ ವಾಸಿ ಕೆ.ಲಿಂಗಣ್ಣ @ ಹರಿ ಯೊಂದಿಗೆ ಸೇರಿಕೊಂಡು ಮಟಕಾ ಧಂಧೆಯನ್ನು ನೆಡೆಸುತ್ತಿರುವುದಾಗಿ ವಿಚಾರಣೆಯಿಂದ ತಿಳಿದು ಬಂದಿದ್ದು ಈ ಮೇಲ್ಕಂಡ 3 ಜನರು ಸಾರ್ವಜನಿಕರಿಂದ ಹಣವನ್ನು ಪಡೆದುಕೊಂಡು ಒಂದು ರೂಪಾಯಿಗೆ 80 ರೂಪಾಯಿ ಕೊಡುವುದಾಗಿ ಹೇಳುತ್ತಾ ಒಂದು ಸಣ್ಣ ಚೀಟಿಯಲ್ಲಿ ಬರೆದುಕೊಟ್ಟು ಸಾರ್ವಜನಿಕರಿಗೆ ಮೋಸ ಮಾಡುತ್ತಿರುತ್ತಾರೆ. ಆದ್ದರಿಂದ ಇವರ ವಿರುದ್ದ ಕಲಂ. 420 ಐ.ಪಿ.ಸಿ ಮತ್ತು 78(3) ಕೆ.ಪಿ ಆಕ್ಟ ಅಡಿಯಲ್ಲಿ ಪ್ರಕರಣ ದಾಖಲು ಮಾಡಲು ಸೂಚಿಸಿದ ಮೇರೆಗೆ ಈ ಪ್ರ.ವ.ವರದಿ ಸಲ್ಲಿಸಿದೆ.
Cowlbazar PS
2 Cr.No:0010/2016
(KARNATAKA POLICE ACT, 1963 U/s 78(3) ; IPC 1860 U/s 420 )
11/01/2016 Under Investigation
CHEATING - CHEATING
Brief Facts :  ದಿನಾಂಕ: 11/01/2016 ರಂದು ಫಿರ್ಯಾಧಿದಾರರಾದ ಎ.ಎಸ್.ಐ ಜಟ್ಟಿಂಗಪ್ಪ ರವರು ಸಿಬ್ಬಂದಿಯೊಂದಿಗೆ ಹಳೇ ಬೈಪಾಸ್ ರಸ್ತೆಯಲ್ಲಿ ಗಸ್ತಿನಲ್ಲಿರುವಾಗ ಜಾಗೃತಿನಗರ ಸರ್ಕಲ್ ನಲ್ಲಿ ಸಾರ್ವಜನಿಕ ಸ್ಥಳದಲ್ಲಿ ಜನರಿಗೆ ವಂಚಿಸಿ ನಸೀಬಿನ ಮಟಕಾ ಜೂಜಾಟ ನಡೆಯುತ್ತಿದ್ದಾರೆಂದು ಮಾಹಿತಿ ಬಂದ ಮೇರೆಗೆ, ಸ್ಥಳಕ್ಕೆ ಇಬ್ಬರು ಪಂಚರನ್ನು ಮಾಡಿಕೊಂಡು, ಅವರಿಗೆ ಮಾಹಿತಿ ತಿಳಿಸಿ, ಅವರೊಂದಿಗೆ ವರ್ತಮಾನ ಸ್ಥಳಕ್ಕೆ ಹೋಗಿ ನೋಡಲು, ಆರೋಪಿತನು ಮಟಕಾ ಜೂಜಾಟದಲ್ಲಿ ತೊಡಗಿದ್ದನ್ನು ನೋಡಿ ಸಿಬ್ಬಂಧಿಯ ಸಹಾಯದಿಂದ ಪಂಚರ ಸಮಕ್ಷಮ ದಾಳಿ ಮಾಡಿದಾಗ ಸಾರ್ವಜನಿಕರು ಓಡಿ ಹೋಗಿದ್ದು, ಆರೋಪಿ ರಾಹಮತುಲ್  ಈತನು ಸಿಕ್ಕಿಬಿದಿದ್ದು, ಆತನ  ಕಡೆಯಿಂದ ನಗದು ಹಣ 960/- ರೂಗಳು, 1 ಮಟಕಾ ಪಟ್ಟಿ, 1 ಬಾಲ್ ಪೆನ್ ಜಪ್ತು ಪಡಿಸಿಕೊಂಡು ಠಾಣೆಗೆ ತಂದು ಹಾಜರು ಪಡಿಸಿದ್ದನ್ನು ಪಡೆದು ಪ್ರಕರಣ ದಾಖಲು ಮಾಡಿದೆ.
Gandhinagar PS
3 Cr.No:0004/2016
(IPC 1860 U/s 454,457,380 )
11/01/2016 Under Investigation
BURGLARY - NIGHT - At Residential Premises
Brief Facts :  ದಿನಾಂಕ:09-01-16 ರಂದು ಮಧ್ಯಾಹ್ನ 2-30 ಗಂಟೆಯಿಂದ ದಿ:11-01-16 ರಂದು ಬೆಳಿಗ್ಗೆ 9-00 ಗಂಟೆಯ ಮಧ್ಯಾವಧಿಯಲ್ಲಿ ಬಳ್ಳಾರಿ ನಗರದ ಕಪ್ಪಗಲ್ ರಸ್ತೆ ಎಂ.ವಿ ನಗರ 5ನೇ ಕ್ರಾಸ್ ಬಲಭಾಗದಲ್ಲಿರುವ ಸೈಟ್ ನಂ. 9 ಒಂದನೇ ಮಹಡಿ ಮನೆಯಲ್ಲಿರುವ ಫಿರ್ಯಾದಿದಾರಳ ಮನೆಯ ಕಟ್ಟಿಗೆ ಬಾಗಿಲ ಚಿಲಕದ ಕೊಂಡಿಯನ್ನು ಯಾರೋ ಕಳ್ಳರು ಕಟ್ ಮಾಡಿ ಮನೆಯೊಳಗಡೆ ಪ್ರವೇಶಿಸಿ ಗಾರ್ಡೆಜ್ ಬೀರುವಾಗೆ ಇದ್ದ ಬೀಗದಿಂದ 17 ಗ್ರಾಂ ತೂಕದ ಬಂಗಾರದ ಆಭರಣಗಳು ಮತ್ತು ಒಂದು ಯಾಶೀಕ ಕಂಪನಿಯ ವಿಡಿಯೋ ಕ್ಯಾಮರಾ ಎಲ್ಲಾ ಒಟ್ಟು ಬೆಲೆ 21,000/- ರೂ ಬಾಳುವವುಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆಂದು ಇದ್ದ ಮೇರೆಗೆ ಈ ಪ್ರ.ವ ವರದಿ.
Gudekote PS
4 Cr.No:0009/2016 11/01/2016 Under 
(KARNATAKA POLICE ACT, 1963 U/s 87 ) Investigation
 KARNATAKA POLICE ACT 1963 - Street Gambling (87)
Brief Facts :  ದಿನಾಂಕ 09/01/2016 ರಂದು ಸಂಜೆ 05-20 ಗಂಟೆ ಸಮಯದಲ್ಲಿ ಗುಡೇಕೋಟೆ ಠಾಣಾ ಸರಹದ್ದಿನ ಸ್ವಾಮಿಹಳ್ಳಿ ಗ್ರಾಮದ ಹತ್ತಿರ ವೀರೇಶ ರವರ ಬಾಳೆ ತೋಟದ ಪಕ್ಕದಲ್ಲಿರುವ ಹಳ್ಳದಲ್ಲಿ ಹುಣಸೆ ಮರದ ಕೆಳಗೆ ಸಾರ್ವಜನಿಕ ಸ್ಥಳದಲ್ಲಿ ಮೇಲ್ಕಂಡ ಆರೋಪಿತರೆಲ್ಲರೂ ಗುಂಪಾಗಿ ವೃತ್ತಕಾರದಲ್ಲಿ ಕುಳಿತು ಹಣವನ್ನು ಪಣವಾಗಿಟ್ಟು ನಸೀಬಿನ ಆಂದರ್ - ಬಾಹರ್ ಎಂಬ ಇಸ್ಪೆಟ್ ಜೂಜಾಟದಲ್ಲಿ ತೊಡಗಿರುವಾಗ ಪಿ ಎಸ್ ಐ ಶ್ರೀ ಕೆ ಎ ಬಸವರಾಜ ರವರು ಪಂಚರು ಹಾಗೂ ಸಿಬ್ಬಂದಿಯೊಂದಿಗೆ ದಾಳಿ ಮಾಡಿ ಹಿಡಿದು ಆರೋಪಿತರಿಂದ ಇಸ್ಪೆಟ್ ಜೂಜಾಟದಲ್ಲಿ ತೊಡಗಿಸಿದ ಒಟ್ಟು ನಗದು ಹಣ 1500/- ರೂ ಗಳನ್ನು ಹಾಗೂ 52 ಇಸ್ಪೆಟ್ ಎಲೆಗಳನ್ನು ಪಂಚರ ಸಮಕ್ಷಮ ಜಪ್ತು ಪಡಿಸಿಕೊಂಡು ಆರೋಪಿತರೊಂದಿಗೆ ಸಂಜೆ 07-15 ಗಂಟೆಗೆ ಠಾಣೆಗೆ ಬಂದು ಆರೋಪಿಗಳ ವಿರುದ್ದ ಕ್ರಮ ಜರುಗಿಸುವಂತೆ ವಿಶೇಷ ವರದಿ ನೀಡಿದ್ದು, ಆರೋಪಿತರು ಅಸಂಜ್ಞೇಯ ಅಪರಾಧ ಎಸಗಿರುವುದರಿಂದ ಆರೋಪಿತರ ವಿರುದ್ದ ಎಫ್ ಐ ಆರ್ ದಾಖಲಿಸಲು ಮಾನ್ಯ ನ್ಯಾಯಾಲಯದಿಂದ ಈ ದಿನ ಪರವಾನಿಗೆ ಪಡೆದು ಈ ಪ್ರಕರಣ ದಾಖಲಿಸಿದೆ.
Hadagali PS
5 Cr.No:0009/2016
(MMDR (MINES AND MINERALS REGULATION OF DEVELOPMENT) ACT 1957 U/s 21 ; IPC 1860 U/s 379 )
12/01/2016 Under Investigation
KARNATAKA STATE LOCAL ACTS - Mmdr (Mines & Minerals Regulation Development) Act 1957
Brief Facts :  ದಿನಾಂಕ 12-01-2016 ರಂದು 05-30 ಎ.ಎಂ. ಗಂಟೆ ಸುಮಾರಿಗೆ ಹೊಳಗುಂದಿ- ಮೋರಿಗೇರಿ ರಸ್ತೆಯಲ್ಲಿ ಸಣ್ಣ ಹಳ್ಳದ ಹತ್ತಿರ  1]  1]  Mahindra Company 475 DI Bhoomiputra Tractor Engine No: ZJZG00035 &  Trali owner & Driver  2)ಪವ್ರ್ ಟ್ರಾಕ್,-439 ಕಂಪನಿಯ ಟ್ರಾಕ್ಟರ್ ಇದರ ಇಂಜಿನ್ ನೊಂದಣಿ ಸಂಖ್ಯೆ :ಕ.ೆಎ-35-ಟಿ.ಎ-1385 & ಇದರ ಟ್ರಾಲಿಯು ಇದರ ನೊಂದಣಿ ಸಂಖ್ಯೆ:ಕೆ.ಎ-35-ಟಿ.ಎ-1386 ನೇದ್ದರ ಚಾಲಕರು ಟ್ರಾಲಿಗಳಲ್ಲಿ ಆಕ್ರಮವಾಗಿ ಮರಳನ್ನು ತುಂಬಿಕೊಂಡು ಕಳ್ಳತನದಿಂದ ಸಾಗಣಿಕೆ ಮಾಡುವಾಗ, ಠಾಣೆೆ ಪಿ.ಎಸ್.ಐ ಶ್ರೀಶೈಲ ಕುಮಾರ ಮತ್ತು ಸಿಬ್ಬಂದಿ ಹೆಚ್.ಸಿ 192 ಪಿ.ಸಿ 256,892,622 ರವರೊಂದಿಗೆ ದಾಳಿ ಮಾಡಿ ಟ್ರಾಕ್ಟರ್ ಹಿಡಿದು ಪರಿಶೀಲಿಸಿದ್ದು ಸದರಿ ಟ್ರಾಕ್ಟರ್ ಚಾಲಕ ಮತ್ತು ಮಾಲಿಕರು ಸಾದಾ ಮರಳನ್ನು ಯಾವುದೇ ಪರವಾನಿಗೆ ಇಲ್ಲದೆ, ಆನಧಿಕೃತವಾಗಿ ಆಕ್ರಮವಾಗಿ ಸಾಗಾಣಿಕೆ ಮಾಡಿದ್ದು, ಹಾಗೂ ಸರ್ಕಾರಕ್ಕೆ ನ್ಯಾಯಾಯುತವಾಗಿ ಸಲ್ಲಬೇಕಾದ ರಾಜಧನವನ್ನು ಪಾವತಿಸದೆ, ಕಳ್ಳತನದಿಂದ ಸಾಗಣಿಕೆ ಮಾಡುತ್ತಿರುವಾಗ ಸಿಕ್ಕಿ ಬಿದ್ದಿರುವದು ಕಂಡು ಬಂದಿದ್ದರಿಂದ ಸದರಿಯವರ ಮೇಲೆ ಕಾನೂನು ಕ್ರಮ ಜರುಗಿಸಲು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿದೆ
Hirehadagali PS
6 Cr.No:0009/2016
(CODE OF CRIMINAL PROCEDURE, 1973 U/s 107 )
11/01/2016 Under Investigation
CrPC - Security For Good Behaviour (Sec 107 )
Brief Facts :  ಪ್ರತಿವಾದಿಯಿಂದ ಹೊಳಲು ಗ್ರಾಮದಲ್ಲಿ ತಾಲೂಕು ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆ ಸಮಯದಲ್ಲಿ  ಸಾರ್ವಜನಿಕ ಶಾಂತಿ ನೆಮ್ಮದಿಗೆ ಭಂಗ ಉಂಟಾಗುವ ಸಾಧ್ಯತೆಗಳಿರುವುದು ಈ ದಿನ ಹೊಳಲು ಗ್ರಾಮಕ್ಕೆ ಭೇಟಿ ನೀಡಿದಾಗ ಗುಪ್ತವಾಗಿ ಮಾಹಿತಿ ಸಂಗ್ರಹಿಸಿದಾಗ ಹಾಗು ಬಾತ್ಮಿದಾರರಿಂದ ತಿಳಿದುಬಂದಿದ್ದರಿಂದ ಈ ಹಿಂದೆ ಸಹ ಗಲಾಟೆಗಳಲ್ಲಿ ಭಾಗವಹಿಸಿರುವುದರಿಂದ ಕಾರಣ ಮುಂಬರುವ ತಾಲೂಕು ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆ ಸಮಯದಲ್ಲಿ ಪ್ರತಿವಾದಿಯಿಂದ ಯಾವುದೇ ಅಹಿತಕರ ಘಟನೆ ಜರುಗದಂತೆ ಸಾರ್ವಜನಿಕ ಶಾಂತತೆಗೆ ಭಂಗ ಉಂಟಾಗದಂತೆ ಮುಚ್ಚಳಿಕೆ ಪಡೆಯಲು ಮುಂಜಾಗ್ರತಾ ಕ್ರಮವಾಗಿ ಪ್ರತಿವಾದಿಯ ವಿರುದ್ದ ಪ್ರಕರಣ ದಾಖಲಿಸಿದೆ.
7 Cr.No:0010/2016
(CODE OF CRIMINAL PROCEDURE, 1973 U/s 107 )
11/01/2016 Under Investigation
CrPC - Security For Good Behaviour (Sec 107 )
Brief Facts :  ಪ್ರತಿವಾದಿಯಿಂದ ಹೊಳಲು ಗ್ರಾಮದಲ್ಲಿ ತಾಲೂಕು ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆ ಸಮಯದಲ್ಲಿ  ಸಾರ್ವಜನಿಕ ಶಾಂತಿ ನೆಮ್ಮದಿಗೆ ಭಂಗ ಉಂಟಾಗುವ ಸಾಧ್ಯತೆಗಳಿರುವುದು ಈ ದಿನ ಹೊಳಲು ಗ್ರಾಮಕ್ಕೆ  ಭೇಟಿ ನೀಡಿದಾಗ ಗುಪ್ತವಾಗಿ ಮಾಹಿತಿ ಸಂಗ್ರಹಿಸಿದಾಗ ಹಾಗು ಬಾತ್ಮಿದಾರರಿಂದ ತಿಳಿದುಬಂದಿದ್ದರಿಂದ ಹಾಗು ಪ್ರತಿವಾದಿಯು ಈ ಹಿಂದೆ ಸಹ ಗಲಾಟೆಗಳಲ್ಲಿ ಭಾಗವಹಿಸಿರುವುದರಿಂದ, ಕಾರಣ ಮುಂಬರುವ ತಾಲೂಕು ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆ ಸಮಯದಲ್ಲಿ ಪ್ರತಿವಾದಿಯಿಂದ ಯಾವುದೇ ಅಹಿತಕರ ಘಟನೆ ಜರುಗದಂತೆ ಸಾರ್ವಜನಿಕ ಶಾಂತತೆಗೆ ಭಂಗ ಉಂಟಾಗದಂತೆ ಮುಚ್ಚಳಿಕೆ ಪಡೆಯಲು ಮುಂಜಾಗ್ರತಾ ಕ್ರಮವಾಗಿ ಪ್ರತಿವಾದಿಯ ವಿರುದ್ದ ಪ್ರಕರಣ ದಾಖಲಿಸಿದ
8 Cr.No:0011/2016
(CODE OF CRIMINAL PROCEDURE, 1973 U/s 107 )
11/01/2016 Under Investigation
CrPC - Security For Good Behaviour (Sec 107 )
Brief Facts :  ಪ್ರತಿವಾದಿಯಿಂದ ಹೊಳಲು ಗ್ರಾಮದಲ್ಲಿ ತಾಲೂಕು ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆ ಸಮಯದಲ್ಲಿ  ಸಾರ್ವಜನಿಕ ಶಾಂತಿ ನೆಮ್ಮದಿಗೆ ಭಂಗ ಉಂಟಾಗುವ ಸಾಧ್ಯತೆಗಳಿರುವುದು ಈ ದಿನ ಹೊಳಲು ಗ್ರಾಮಕ್ಕೆ  ಭೇಟಿ ನೀಡಿದಾಗ ಗುಪ್ತವಾಗಿ ಮಾಹಿತಿ ಸಂಗ್ರಹಿಸಿದಾಗ ಹಾಗು ಬಾತ್ಮಿದಾರರಿಂದ ತಿಳಿದುಬಂದಿದ್ದರಿಂದ ಹಾಗು ಪ್ರತಿವಾದಿಯು ಈ ಹಿಂದೆ ಸಹ ಗಲಾಟೆಗಳಲ್ಲಿ ಭಾಗವಹಿಸಿರುವುದರಿಂದ, ಕಾರಣ ಮುಂಬರುವ ತಾಲೂಕು ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆ ಸಮಯದಲ್ಲಿ ಪ್ರತಿವಾದಿಯಿಂದ ಯಾವುದೇ ಅಹಿತಕರ ಘಟನೆ ಜರುಗದಂತೆ ಸಾರ್ವಜನಿಕ ಶಾಂತತೆಗೆ ಭಂಗ ಉಂಟಾಗದಂತೆ ಮುಚ್ಚಳಿಕೆ ಪಡೆಯಲು ಮುಂಜಾಗ್ರತಾ ಕ್ರಮವಾಗಿ ಪ್ರತಿವಾದಿಯ ವಿರುದ್ದ ಪ್ರಕರಣ ದಾಖಲಿಸಿದ
9 Cr.No:0012/2016
(CODE OF CRIMINAL PROCEDURE, 1973 U/s 107 )
11/01/2016 Under Investigation
CrPC - Security For Good Behaviour (Sec 107 )
Brief Facts :  ಪ್ರತಿವಾದಿಯಿಂದ ಹೊಳಲು ಗ್ರಾಮದಲ್ಲಿ ತಾಲೂಕು ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆ ಸಮಯದಲ್ಲಿ  ಸಾರ್ವಜನಿಕ ಶಾಂತಿ ನೆಮ್ಮದಿಗೆ ಭಂಗ ಉಂಟಾಗುವ ಸಾಧ್ಯತೆಗಳಿರುವುದು ಈ ದಿನ ಹೊಳಲು ಗ್ರಾಮಕ್ಕೆ  ಭೇಟಿ ನೀಡಿದಾಗ ಗುಪ್ತವಾಗಿ ಮಾಹಿತಿ ಸಂಗ್ರಹಿಸಿದಾಗ ಹಾಗು ಬಾತ್ಮಿದಾರರಿಂದ ತಿಳಿದುಬಂದಿದ್ದರಿಂದ ಹಾಗು ಪ್ರತಿವಾದಿಯು ಈ ಹಿಂದೆ ಸಹ ಗಲಾಟೆಗಳಲ್ಲಿ ಭಾಗವಹಿಸಿರುವುದರಿಂದ, ಕಾರಣ ಮುಂಬರುವ ತಾಲೂಕು ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆ ಸಮಯದಲ್ಲಿ ಪ್ರತಿವಾದಿಯಿಂದ ಯಾವುದೇ ಅಹಿತಕರ ಘಟನೆ ಜರುಗದಂತೆ ಸಾರ್ವಜನಿಕ ಶಾಂತತೆಗೆ ಭಂಗ ಉಂಟಾಗದಂತೆ ಮುಚ್ಚಳಿಕೆ ಪಡೆಯಲು ಮುಂಜಾಗ್ರತಾ ಕ್ರಮವಾಗಿ ಪ್ರತಿವಾದಿಯ ವಿರುದ್ದ ಪ್ರಕರಣ ದಾಖಲಿಸಿದ
10 Cr.No:0013/2016
(IPC 1860 U/s 143,147,148,307,323,324,504,506(2) )
11/01/2016 Under Investigation
ATTEMPT TO MURDER - Sudden Quarrel
Brief Facts :  ದಿನಾಂಕ 11-10-2015 ರಂದು ರಾತ್ರಿ 7.30 ಗಂಟೆ ಸುಮಾರಿಗೆ ಆರೋಪಿತರೆಲ್ಲಾ ಅಕ್ರಮ ಗುಂಪು ಕಟ್ಟಿಕೊಂಡು ಕೊಲೆ ಮಾಡುವ ಉದ್ದೇಶದಿಂದ ಬಂದವರೇ ಅವರಲ್ಲಿ ಕೆ.ಶಿವಪುತ್ರಪ್ಪ, ಟಿ. ಭೂಪತಿ, ನಾಯ್ಕರ ಹಾಲಪ್ಪ ರವರು ಇಟ್ಟಂಗಿ ಹೆಂಡಿಯಿಂದ ಮತ್ತು ಕುಡುಗೋಲಿನಿಂದ ಫಿರ್ಯಾದಿಗೆ ಹೊಡೆದಿದ್ದು,ಫಿರ್ಯಾದಿ ಮೂಗಿನಲ್ಲಿ ರಕ್ತ ಬಂದಿದ್ದು, ಆರೋಪಿ ಟಿ. ರಾಮಪ್ಪ, ಕೆ. ಶಿವಕುಮಾರ, ಜಗದೀಶ ರವರು ಫಿರ್ಯಾದಿಗೆ ಮತ್ತು ಅವರ ತಮ್ಮ ಪೂಜಾರಿ ಅಂಜಿನಪ್ಪನಿಗೆ ನೊಗ ಮತ್ತು ಬಡಿಗಿಯಿಂದ ಹೊಡೆದು ಬಲಚಪ್ಪೆ ಮೇಲೆ ಮತ್ತು ಬೆನ್ನಿನ ಮೇಲೆ ಹೊಡೆದು ರಕ್ತಗಾಯ ಮಾಡಿರುತ್ತಾರೆ. ಹಾಗು ಇವರನ್ನು ಸಿಗಿದು ಕೊಲೆಮಾಡಿಬಿಡಬೇಕು ಅಂತ ಬೆದರಿಕೆಹಾಕಿದ್ದು, ಶಿವಪುತ್ರಪ್ಪನ ತಮ್ಮಂದಿರಾದ ಕೆ. ಬಸವರಾಜ, ಕೆ.ರವಿಕುಮಾರ ಮತ್ತು ಕೆ. ವಸಂತ ರವರು ಟಾಟಾ ಎಸ್ ಗಾಡಿ ತೆಗೆಯೆಂದು ಎನ್ನುವುದು ದೊಡ್ಡ ತಪ್ಪು ಎನ್ನುವ ರೀತಿ, ಜಗಳ ಮಾಡ ಬಂದರೆ ಇವರನ್ನು ಸೀಮೆಎಣ್ಣೆ ಸುರಿದು ಸುಡಬೇಕು ಎಂದು ಅವಾಚ್ಯ ಶಬ್ದಗಳಿಂದ ಬೈದು ಬೆದರಿಕೆ ಹಾಕಿರುತ್ತಾರೆ. ಬಿಡಿಸಲು ಬಂದ ಫಿರ್ಯಾದಿ ಸ್ನೇಹಿತ ಕುರುಬರ ನಾಗರಾಜನಿಗೆ ಸಹ ಆರೋಪಿ ಶಿವಪುತ್ರಪ್ಪನ ತಮ್ಮಂದಿರು ತೊಲ್ಡಿಗೆ ಮೊಣಕಾಲಿನಿಂದ ಹೊಡೆದಿರುತ್ತಾರೆ. ಈ ಬಗ್ಗೆ ತಾವು ಹಡಗಲಿ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿರುತ್ತೇವೆಂದು ಫಿರ್ಯಾದಿಯು ಮಾನ್ಯ ಸಿ.ಜೆ. ಮತ್ತು ಜೆ.ಎಂ.ಎಫ್.ಸಿ. ಹಡಗಲಿ ನ್ಯಾಯಾಲಯದ ಮೂಲಕ ಸಲ್ಲಿಸಿದ ಖಾಸಗಿ ದೂರು ಸಂಖ್ಯೆ 02/2016 ನೇದ್ದನ್ನು ಪಡೆದು ಪ್ರಕರಣ ದಾಖಲಿಸಿದೆ.
Hospet Rural PS
11 Cr.No:0008/2016
(IPC 1860 U/s 363 )
11/01/2016 Under Investigation
KIDNAPPING AND ABDUCTION - 
Espionage
Brief Facts :  ಪಿರ್ಯಾದಿದಾರರಾದ ಶ್ರೀ ದುರ್ಗಾನಾಯ್ಕ   ರವರು ಈ ದಿನ ದಿನಾಂಕ:11/01/2016  ರಂದು ರಾತ್ರಿ   ಗಂಟೆಗೆ ಠಾಣೆಗೆ  ಹಾಜರಾಗಿ ನಿಡಿದ ಹೇಳಿಕೆ ದೂರುನ ಸಾರಾಂಶ ಏನೆಂದರೆ ತನ್ನ ಮಗಳಾದ ಕು: ನೇತ್ರಾವತಿಯು ದಿನಾಂಕ:16/12/2015 ರಂದು ಮದ್ಯಾನ 2-30 ಗಂಟೆ ಸುಮಾರಿಗೆ  ಯಾರಿಗೂ ಹೇಳದೇ ಕೇಳದೇ ಮನೆಯಿಂದ ಹೋದವಳು ಇಲ್ಲಿಯ ವರೆಗೆ  ವಾಪಾಸ್ಸು ಬಂದಿರುದಿಲ್ಲ ಆಗಿನಿಂದ ಇಲ್ಲಿಯ  ವರೆಗೆ ನಮ್ಮ ಸಂಬಂದಿಕರ ಊರುಗಳಲ್ಲಿ  ಹುಡುಕಾಡಿ ನೋಡಲಾಗಿ ಎಲ್ಲಿಯೂ  ಪತ್ತೆಯಾಗಿರುವುದಿಲ್ಲ ಎಂದು ನನ್ನ ಮಗಳನ್ನು  ಯಾರಾದರೂ  ಅಪಹರಿಸಿಕೊಂಡು ಹೋಗಿದ್ದಾರೋ ಅಥವಾ ಕಾಣೆಯಾಗಿದ್ದಾಳೋ ಗೊತ್ತಿಲ್ಲ ಕಾರಣ ನನ್ನ ಮಗಳನ್ನು  ಹುಡುಕಿ ಕೊಡಬೇಕೆಂದು  ನೀಡಿದ ದೂರನ್ನು ಸ್ವೀಕಾರ ಮಾಡಿ ಗುನ್ನೆ ದಾಖಲು ಮಾಡಿ ತನಿಖೆ ಕೈ ಗೊಳ್ಳಲಾಗಿದೆ.
Hospet Town PS
12 Cr.No:0007/2016
(IPC 1860 U/s 420 )
11/01/2016 Under Investigation
CHEATING - CHEATING
Brief Facts :  ಈ ದಿನ ದಿನಾಂಕ: 11/01/2016 ರಂದು ಸಾಯಂಕಾಲ 6:00 ಗಂಟೆಗೆ ಫಿರ್ಯಾದಿದಾರಾದ ಶ್ರೀ. ಡಿ.ಕೃಷ್ಣ ತಂದೆ ಚಂದ್ರಶೇಖರ್ ಇವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರು ಸಾರಾಂಶ: ದಿನಾಂಕ: 06/01/2016 ರಂದು ಬೆಳಿಗ್ಗೆ 11-00 ಗಂಟೆ ಸುಮಾರಿಗೆ ಜಬ್ಬಲ್ ಸರ್ಕಲ್ ಹತ್ತಿರ ಇರುವಾಗ ತಮ್ಮ ಮೋ.ನಂ. 9916172311 ನೇದ್ದಕ್ಕೆ ಮೋ.ನಂ. +917282933554 ರಿಂದ ಕರೆ ಬಂದಿದ್ದು ಅದರಲ್ಲಿ ಒಬ್ಬ ವ್ಯಕ್ತಿ ಹಿಂದಿಯಲ್ಲಿ ಮಾತನಾಡುತ್ತಾ ನಾನು ಎ.ಟಿ.ಎಂ ಸೆಂಟರ್ ನಿಂದ ಮಾತನಾಡುತ್ತಿದ್ದು ನಿಮ್ಮ ಹೆಸರು ಡಿ.ಕೃಷ್ಣ ನಿಮ್ಮ ಎಸ್.ಬಿ.ಐ ಎ.ಟಿ.ಎಂ ಕಾರ್ಡ್ ನಂ 459150023774 [4591500237743147] ಮತ್ತು ಸಿಂಡಿಕೇಟ್ ಬ್ಯಾಂಕ್ ಎ.ಟಿ.ಎಂ ಕಾರ್ಡ್ ನಂಬರ್  403398060333 [4033980603337128] ಗಳಿದ್ದು ಕೊನೆಯ ನಾಲ್ಕು ನಂಬರ್ ಗಳು ಮಿಸ್ ಆಗಿವೆ ಹೇಳಿರಿ ಎಂದು ಕೇಳಿದಾಗ ನಾನು ಬ್ಯಾಂಕಿನವರೆ ಇರಬಹುದೆಂದು ಉಳಿದ ನಂಬರ್ ಗಳು ಹಾಗೂ ವಿವರಗಳನ್ನು ನೀಡಿರುತ್ತೇನೆ. ನಂತರ ನನ್ನ ಮೊಬೈಲ್ ಗೆ ಹಣ ಕಡಿತವಾದ ಬಗ್ಗೆ ಮೆಸೇಜ್ ಗಳು ಬರಲಾರಂಭಿಸಿದಾಗ ನನಗೆ ಪರಿಚಿತನಾದ ಜಗನ್ನಾಥನಿಗೆ ತೋರಿಸಲು ಜಗನ್ನಾಥನು ನಿನ್ನ ಖಾತೆಯಿಂದ ಹಣ ಕಡಿತವಾಗುತ್ತಿದೆ ಬ್ಯಾಂಕ್ ಗೆ ಹೋಗೋಣವೆಂದು ಬ್ಯಾಂಕ್ ಗೆ ಹೋಗಿ ವಿಚಾರಿಸಲಾಗಿ ಎಸ್.ಬಿ.ಐ ಬ್ಯಾಂಕ್ ನಿಂದ ರೂ 39977=00 ಮತ್ತು ಸಿಂಡಿಕೇಟ್ ಬ್ಯಾಂಕ್ ಖಾತೆಯಿಂದ ರೂ 5100=00 ಎರಡೂ ಬ್ಯಾಂಕ್ ಖಾತೆಯಿಂದ ಒಟ್ಟು ರೂ 45077=00 ಗಳನ್ನು ಮೋಸದಿಂದ ವಂಚನೆ ಮಾಡಿದ ಬಗ್ಗೆ ಇದ್ದ ದೂರು ಸಾರಂಶದ ಮೇರೆಗೆ ಪ್ರಕಣದ ದಾಖಲಿಸಿ ತನಿಖೆ ಕೈಗೊಂಡಿದೆ.
Itagi PS
13 Cr.No:0010/2016
(CODE OF CRIMINAL PROCEDURE, 1973 U/s 107 )
11/01/2016 Under Investigation
CrPC - Security For Good Behaviour (Sec 107 )
Brief Facts :  ನಾನು ಠಾಣಾ ಗುನ್ನೆ ನಂ 01/2016 ಕಲಂ 323, 324, 504, 341, 506 ಆದಾರ 34 ಐ.ಪಿ.ಸಿ ಹಾಗೂ ಇದಕ್ಕೆ ಪ್ರತಿ ಕೇಸಾಗಿ ಗುನ್ನೆ ನಂ 02/2016 ಕಲಂ 323, 324, 504, 427, 506 ಆದಾರ 34 ಐ.ಪಿ.ಸಿ ಪ್ರಕರಣಗಳು ದಾಖಲಾದ ಹಿನ್ನಲೆಯಲ್ಲಿ ನಾನು ಸದರಿ ಸಕ್ರಹಳ್ಳಿ ಗ್ರಾಮಕ್ಕೆ 6-15 ಪಿ.ಎಂ ಗಂಟೆಗೆ ಭೇಟಿ ನೀಡಿ ಬಾತ್ಮಿದಾರರನ್ನು ಮತ್ತು ಗ್ರಾಮದ ಜನರನ್ನು ವಿಚಾರ ಮಾಡಲಾಗಿ ಕೊಂಡನಹಳ್ಳಿ ಮಲ್ಲನಗೌಡನ ಕಡೆಯವರಿಗೂ ಮತ್ತು ಪ್ರತಿವಾದಿಗಳಿಗೂ ಹಿರಿಯರ ಕಾಲದಿಂದಲೂ ಕಣ ಹಾಗೂ ಹೊಲಗಳ ಹಂಚಿಕೆಯ ವಿಚಾರದಲ್ಲಿ ವೈಶಮ್ಯವಿದ್ದು, ಇದೇ ವೈಶಮ್ಯವನ್ನು ಇಟ್ಟುಕೊಂಡು ಪ್ರತಿವಾದಿಗಳು ಓಡಾಡಲು ಮನೆಯ ಮುಂದೆ ಮುಖ್ಯ ಬಾಗಿಲು ಇದ್ದರೂ ಸಹಾ ಬೇಕಂತಲೇ, ಹಿತ್ತಲ ಬಾಗಿಲಲ್ಲಿ  ಕೊಂಡನಹಳ್ಳಿ ಮಲ್ಲನಗೌಡನ ಮತ್ತು ಈತನ ಮನೆಯವರು ಓಡಾಡುವ ದಾರಿಯಲ್ಲಿ ಬೇಕಂತಲೇ ಏನಾದರೂ ಮಾಡಿ ವಸ್ತುಗಳನ್ನು ಅಡ್ಡ ಇಡುತ್ತಿದ್ದಲ್ಲದೆ, ಈ ದಾರಿಯಲ್ಲಿ ಪ್ರತಿವಾದಿಗಳು ಬಟ್ಟೆಗಳನ್ನು ಒಣಗಿಸುವ ನೆಪದಲ್ಲಿ ಕಟ್ಟಿಗೆಗಳನ್ನು ನೆಟ್ಟಿದ್ದು, ಇದೇ ವಿಚಾರದಲ್ಲಿ ದಿನಾಂಕ 01-01-2016 ರಂದು ಬೆಳಗ್ಗೆ 7-00 ಗಂಟೆಗೆ ಜಗಳವಾದ ಹಿನ್ನಲೆಯಲ್ಲಿ ಗುನ್ನೆ ನಂ 01/2016 ದಾಖಲಾಗಿದ್ದರೂ ಸಹಾ ಪ್ರತಿವಾದಿಗಳು ತಮ್ಮ ಇದೇ ದ್ವೇಷವನ್ನು ಮುಂದುವರೆಸಿಕೊಂಡು, ಹೋಗುವವರಿದ್ದು, ಅಲ್ಲದೆ ಇವರು ಸಕ್ರಿಯವಾಗಿ ರಾಜಕೀಯ ಪಕ್ಷಗಳಲ್ಲಿ ಬಾಗಿಯಾಗುವವರಾಗಿದ್ದು, ಜೊತೆಗೆ ಇವರು ತಮ್ಮ ಕಡೆಯವರ ಸಂಖ್ಯಾ ಬಲದ ಪ್ರಯೋಗದಿಂದ ಗುಂಪು ಕಟ್ಟಿಕೊಂಡು ಪುನಃ ಗ್ರಾಮದಲ್ಲಿ ಇದೇ ವಿಚಾರದಲ್ಲಿ ಹೊಡೆದಾಟ ಮಾಡಿಕೊಳ್ಳುವದರಿಂದ ಎರೆಡು ಗುಂಪುಗಳ ನಡುವೆ ರಕ್ತಪಾತವಾಗಿ, ಸಾರ್ವಜನಿಕರ ಶಾಂತತೆಗೆ ಮತ್ತು ಆಸ್ತಿ-ಪಾಸ್ತಿಗಳಿಗೆ ನಷ್ಠ ಉಂಟಾಗುವ ಸಂಭವಗಳು ಕಂಡುಬಂದ ಕಾರಣ ಹಾಗೂ ಈ ಪ್ರತಿವಾದಿಗಳ ಮೇಲ್ಕಂಡ ವರ್ತನೆಯಿಂದ ಮುಂಬರುವ ತಾಲೂಕ ಪಂಚಾಯತಿ ಹಾಗೂ ಜಿಲ್ಲಾ ಪಂಚಾಯತಿ ಚುನಾವಣೆಗಳಲ್ಲಿ ನೀತಿ ಸಂಹಿತೆಯನ್ನು ಉಲ್ಲಂಘಿಸಿ ಚುನಾವಣೆಯ ಪ್ರಕ್ರಿಯೆಗಳ ವಿರುದ್ದ ಗಲಭೆಗಳನ್ನು ಮಾಡುವ ಸಾಧ್ಯತೆಗಳು ಕಂಡುಬಂದ ಕಾರಣ ಮುಂಜಾಗ್ರತಾ ಕ್ರಮವಾಗಿ ಮೇಲ್ಕಂಡ ಪ್ರತಿವಾದಿಗಳಿಂದ ಮಾನ್ಯ ನ್ಯಾಯಾಲಯವು ಶಾಂತಿಯಿಂದ ನೆಲೆಸಲು ಮತ್ತು ಚುನಾವಣೆ ಪ್ರಕ್ರಿಯೆಗಳಿಗೆ ಯಾವುದೇ ಅಡ್ಡಿ ಆತಂಕಗಳನ್ನು ಮಾಡದಂತೆ ಅನುವಾಗಲು ಸೂಕ್ತ ಮುಚ್ಛಳಿಕೆಯನ್ನು ಪಡೆಯಲೆಂದು ಠಾಣೆಗೆ 7-15 ಪಿ.ಎಂ ಗಂಟೆಗೆ ಮರಳಿ ಬಂದು ಮೇಲ್ಕಂಡ ಪ್ರತಿವಾದಿಗಳ ವಿರುದ್ದ 7-30 ಪಿ.ಎಂ ಗಂಟೆಗೆ ಠಾಣಾ ಗುನ್ನೆ ನಂ 10/2016 ಕಲಂ 107 ಸಿ.ಆರ್.ಪಿ.ಸಿ ಅನ್ವಯ ಈ ಪ್ರಕರಣ ದಾಖಲಿಸಿರುತ್ತದೆ.
14 Cr.No:0011/2016
(CODE OF CRIMINAL PROCEDURE, 1973 U/s 107 )
11/01/2016 Under Investigation
CrPC - Security For Good Behaviour (Sec 107 )
Brief Facts :  ನಾನು ಠಾಣಾ ಗುನ್ನೆ ನಂ 01/2016 ಕಲಂ 323, 324, 504, 341, 506 ಆದಾರ 34 ಐ.ಪಿ.ಸಿ ಹಾಗೂ ಇದಕ್ಕೆ ಪ್ರತಿ ಕೇಸಾಗಿ ಗುನ್ನೆ ನಂ 02/2016 ಕಲಂ 323, 324, 504, 427, 506 ಆದಾರ 34 ಐ.ಪಿ.ಸಿ ಪ್ರಕರಣಗಳು ದಾಖಲಾದ ಹಿನ್ನಲೆಯಲ್ಲಿ ನಾನು ಸದರಿ ಸಕ್ರಹಳ್ಳಿ ಗ್ರಾಮಕ್ಕೆ 6-15 ಪಿ.ಎಂ ಗಂಟೆಗೆ ಭೇಟಿ ನೀಡಿ ಬಾತ್ಮಿದಾರರನ್ನು ಮತ್ತು ಗ್ರಾಮದ ಜನರನ್ನು ವಿಚಾರ ಮಾಡಲಾಗಿ ಸಕ್ರಹಳ್ಳಿ ಗ್ರಾಮದ ವಾಸಿಯಾದ ಉತ್ತಂಗಿ ಮಲ್ಲಿಕಾರ್ಜನಪ್ಪ ತಂದೆ ಲೇಟ್ ಈರಣ್ಣ, 45 ವರ್ಷ ಇವರು ಮತ್ತು ಪ್ರತಿವಾದಿಗಳು ಹತ್ತಿರದ ಸಂಬಂದಿಗಳಾಗಿದ್ದು, ಈತನು ತಮ್ಮ ಮನೆಯ ಹಿಂಬದಿಯ ದಾರಿಯಲ್ಲಿ ಬಟ್ಟೆಗಳನ್ನು ಒಣಗಿಸಲು ನೆಟ್ಟಿದ್ದ ಕಟ್ಟಿಗೆಗಳನ್ನು ದಿನಾಂಕ 01-01-2016 ರಂದು ಬೆಳಗ್ಗೆ  7-00 ಗಂಟೆ ಸುಮಾರಿಗೆ ಪ್ರತಿವಾದಿ 1 ರವರು ಕಿತ್ತು ಎಸೆದ ವಿಚಾರದಲ್ಲಿ ಪ್ರತಿವಾದಿಗಳೆಲ್ಲಾ ಸೇರಿ ಉತ್ತಂಗಿ ಮಲ್ಲಿಕಾರ್ಜನಪ್ಪನಿಗೆ ದುರ್ಬಾಷೆಗಳಿಂದ ಬೈದು, ಕೈ-ಕಾಲುಗಳಿಂದ ಹಾಗೂ ಕಟ್ಟಿಗೆಯಿಂದ ತಲೆ ಹಾಗೂ ಇತರೆ ಕಡೆ ಹೊಡೆದು ರಕ್ತಗಾಯ ಮತ್ತು ಒಳಗಾಯಗಳನ್ನು ಮಾಡಿ ಪ್ರಾಣ ಬೆದರಿಕೆಯನ್ನು ಹಾಕಿದ ಬಗ್ಗೆ ಉತ್ತಂಗಿ ಮಲ್ಲಿಕಾರ್ಜನಪ್ಪನು ನೀಡಿರುವ ದೂರಿನ ಹಿನ್ನಲೆಯಲ್ಲಿ ಮೇಲ್ಕಂಡಂತೆ ಗುನ್ನೆ ನಂ 02/2016 ದಾಖಲಾಗಿದ್ದರೂ ಸಹಾ ಪ್ರತಿವಾದಿಗಳು ತಮ್ಮ ಇದೇ ದ್ವೇಷವನ್ನು ಮುಂದುವರೆಸಿಕೊಂಡು, ಜೊತೆಗೆ ಇವರು ತಮ್ಮ ಕಡೆಯವರ ಸಂಖ್ಯಾ ಬಲದ ಪ್ರಯೋಗದಿಂದ ಗುಂಪು ಕಟ್ಟಿಕೊಂಡು ಪುನಃ ಗ್ರಾಮದಲ್ಲಿ ಇದೇ ವಿಚಾರದಲ್ಲಿ ಹೊಡೆದಾಟ ಮಾಡಿಕೊಳ್ಳುವದರಿಂದ ಎರೆಡು ಗುಂಪುಗಳ ನಡುವೆ ರಕ್ತಪಾತವಾಗಿ, ಸಾರ್ವಜನಿಕರ ಶಾಂತತೆಗೆ ಮತ್ತು ಆಸ್ತಿ-ಪಾಸ್ತಿಗಳಿಗೆ ನಷ್ಠ ಉಂಟಾಗುವ ಸಂಭವಗಳು ಕಂಡುಬಂದ ಕಾರಣ ಹಾಗೂ ಈ ಪ್ರತಿವಾದಿಗಳ ಮೇಲ್ಕಂಡ ವರ್ತನೆಯಿಂದ ಮುಂಬರುವ ತಾಲೂಕ ಪಂಚಾಯತಿ ಹಾಗೂ ಜಿಲ್ಲಾ ಪಂಚಾಯತಿ ಚುನಾವಣೆಗಳಲ್ಲಿ ನೀತಿ ಸಂಹಿತೆಯನ್ನು ಉಲ್ಲಂಘಿಸಿ ಚುನಾವಣೆಯ ಪ್ರಕ್ರಿಯೆಗಳ ವಿರುದ್ದ ಗಲಭೆಗಳನ್ನು ಮಾಡುವ ಸಾಧ್ಯತೆಗಳು ಕಂಡುಬಂದ ಕಾರಣ ಮುಂಜಾಗ್ರತಾ ಕ್ರಮವಾಗಿ ಮೇಲ್ಕಂಡ ಪ್ರತಿವಾದಿಗಳಿಂದ ಮಾನ್ಯ ನ್ಯಾಯಾಲಯವು ಶಾಂತಿಯಿಂದ ನೆಲೆಸಲು ಮತ್ತು ಚುನಾವಣೆ ಪ್ರಕ್ರಿಯೆಗಳಿಗೆ ಯಾವುದೇ ಅಡ್ಡಿ ಆತಂಕಗಳನ್ನು ಮಾಡದಂತೆ ಅನುವಾಗಲು ಸೂಕ್ತ ಮುಚ್ಛಳಿಕೆಯನ್ನು ಪಡೆಯಲೆಂದು ಠಾಣೆಗೆ 7-15 ಪಿ.ಎಂ ಗಂಟೆಗೆ ಮರಳಿ ಬಂದು ಮೇಲ್ಕಂಡ ಪ್ರತಿವಾದಿಗಳ ವಿರುದ್ದ 8-00 ಪಿ.ಎಂ ಗಂಟೆಗೆ ಠಾಣಾ ಗುನ್ನೆ ನಂ 11/2016 ಕಲಂ 107 ಸಿ.ಆರ್.ಪಿ.ಸಿ ಅನ್ವಯ ಈ ಪ್ರಕರಣ ದಾಖಲಿಸಿರುತ್ತದೆ.
Kampli  PS
15 Cr.No:0004/2016
(IPC 1860 U/s 143,147,148,302,149,120B,109 )
11/01/2016 Under Investigation
MURDER - Over Property Disputes
Brief Facts :  ಪಿರ್ಯಾದಿದಾರರ ಹಿರಿಯ ಮಗ ರಂಗಸ್ವಾಮಿಯು ಈಗ್ಗೆ 4ವರ್ಷಗಳ ಹಿಂದೆ ಮೃತಪಟ್ಟಿದ್ದು ಆತನ ಮರಣದ ನಂತರ ಆತನ  ಹೆಂಡತಿ ಪದ್ಮಜಾ ಳು ತನ್ನ ಗಂಡನ ಪಾಲಿನ ಆಸ್ತಿಯನ್ನು  ಕೊಡುವಂತೆ   ಪಿರ್ಯಾದಿದಾರರಿಗೆ  & ಮೃತ ಸುಬ್ಬರಾಯುಡುನಿಗೆ ಕೇಳಿದ್ದು ಪಿರ್ಯಾದಿ ಹಾಗೂ ಮೃತ ಸುಬ್ಬರಾಯುಡುರವರು ಆಸ್ತಿಯೊಂದಿಗೆ ರಂಗಸ್ವಾಮಿ ಮಾಡಿದ ಸಾಲವನ್ನು ತೀರಿಸುವ ಜವಾಬ್ದಾರಿಯನ್ನು ಹೊರುವಂತೆ ತಿಳಿಸಿದ್ದು ಇದಕ್ಕೆ ಪದ್ಮಜಾ ಳು ಅವರ ತಂದೆ, ತಾಯಿ, ಇತರರ ಮಾತು ಕೇಳಿ ಇದಕ್ಕೆ ಒಪ್ಪಿರುವುದಿಲ್ಲ. ಆದ್ದರಿಂದ  ಪಿರ್ಯಾದಿದಾರರು  & ಸುಬ್ಬರಾಯುಡು ರವರು  ನ್ಯಾಯಾಲಯದ ಮುಖಾಂತರ ಆಸ್ತಿ ಹಂಚಿಕೆಗೆ ಸಂಬಂಧಿಸಿದ ವಿವಾದವನ್ನು ಬಗೆಹರಿಸಿಕೊಳ್ಳಲು ಸಿವಿಲ್ ನ್ಯಾಯಾಲಯದಲ್ಲಿ ದಾವೆ ಹೂಡಿದ್ದು ವಿಚಾರಣೆಯಲ್ಲಿರುತ್ತದೆ. ಪದ್ಮಜಾ & ಆಕೆಯ  ತಂದೆ ಹಾಗೂ ಸಂಬಂಧಿಕರು  ನ್ಯಾಯಾಲಯದಲ್ಲಿರುವ ವ್ಯಾಜ್ಯವನ್ನು ಹಿಂದೆ ತೆಗೆದುಕೊ ಎಂದು ಸುಬ್ಬರಾಯುಡು ನೊಂದಿಗೆ ಜಗಳ ಮಾಡಿ ಈ ಹಿಂದೆ ಹಲ್ಲೆ ಮಾಡಿದ್ದು ಪ್ರಕರಣಗಳು  ದಾಖಲಾಗಿರುತ್ತವೆ.  ಸುಬ್ಬರಾಯುಡುನನ್ನು ಕೊಲೆ ಮಾಡಿದರೆ  ದೌರ್ಜನ್ಯದಿಂದ  ಆಸ್ತಿಯೆನ್ನೆಲ್ಲಾ  ಸುಲಭವಾಗಿ ತಮ್ಮ ಸ್ವಾಧೀನಕ್ಕೆ ತೆಗೆದುಕೊಳ್ಳಬಹುದೆಂದು ಸಂಚು ಮಾಡಿ ಸಮಯ ಕಾದು ಈ ದಿನ ದಿನಾಂಕ: 11/01/2016ರಂದು  ರಾತ್ರಿ 7.15ಗಂಟೆಗೆ ಕಂಪ್ಲಿಯ ವೆಂಕಟೇಶ್ವರ ಟಾಕೀಸ್ ಪಕ್ಕದ ರಸ್ತೆಯಲ್ಲಿ ಮೋಟಾರ್ ಸೈಕಲ್ ನಲ್ಲಿ ಹೊರಟಿದ್ದ  ಸುಬ್ಬರಾಯುಡುನಿಗೆ ಏಕಾಏಕಿ  ಬಿಳಿಬಣ್ಣದ  ಬುಲೆರೋ ಗಾಡಿಯಲ್ಲಿ ಬಂದ ವೆಂಕಟನಾರಾಯಣ, ವೆಂಕಟರಾಮುಡು, ಮೀಸಾಲ ವೆಂಕಟೇಶ, ಪಾರ್ಥವಿಜಯ , ಪ್ರಭಾಕರ ರವರ ಪೈಕಿ  ವೆಂಕಟನಾರಾಯಣನು ಸ್ಟೀಲ್ ಸುತ್ತಿಗೆಯಿಂದ ಸುಬ್ಬರಾಯುಡನ ತಲೆಗೆ ಬಲವಾಗಿ ಹೊಡೆದಿದ್ದು ಉಳಿದವರು ಕೈಗಳಿಂದ ಸುಬ್ಬರಾಯುಡುನಿಗೆ ಹೊಡೆದಿರುತ್ತಾರೆ.  ಮೇಲ್ಕಂಡ ಬೊಲೆರೋ ದಲ್ಲಿ ಬಂದಿದ್ದ 05ಜನರು ಹಾಗೂ  ಅವರ ಜೊತೆ  ರಂಗಸ್ವಾಮಿಯ  ಹೆಂಡತಿ ಪದ್ಮಜಾ , ಆಕೆಯ ತಾಯಿ ಸರಸ್ವತಿ, ತಮ್ಮಂದಿರಾದ ಮಾರುತಿ ಪ್ರಸಾದ್ , ರಮಣಕುಮಾರ್ , ಸಂಬಂಧಿ ಸಿನಿಮಾ ಶ್ರೀರಾಮುಲು  ಒಳಸಂಚು ,ಕುಮ್ಮಕ್ಕು, ಹಾಗೂ ಪ್ರಚೋದನೆಯಿಂದ  ಈ ದಿನ ರಾತ್ರಿ 7.20ರಿಂದ 7.30ಗಂಟೆಯ ಮಧ್ಯದ ಅವಧಿಯಲ್ಲಿ  ಸುಬ್ಬರಾಯಿಡುನನ್ನು ಸ್ಟೀಲ್ ಸುತ್ತಿಗೆಯಿಂದ ಹೊಡೆದು ಕೊಲೆ ಮಾಡಿದ್ದು ಕಾರಣ ಮೇಲ್ಕಂಡವರ ವಿರುದ್ದ ಕಾನೂನು ಕ್ರಮ ಜರುಗಿಸಲು ನೀಡಿದ ಗಣಕೀಕೃತ ದೂರಿನ ಮೇರೆಗೆ ಪ್ರಕರಣ ದಾಖಲಿಸಿದೆ .
Kudligi PS
16 Cr.No:0004/2016
(INDIAN MOTOR VEHICLES ACT, 1988 U/s 183 ; IPC 1860 U/s 279,338 )
11/01/2016 Under Investigation
MOTOR VEHICLE ACCIDENTS NON-FATAL - Other Roads
Brief Facts :  ಈ ದಿನ ದಿ.11/01/16 ರಂದು ಬೆಳಗ್ಗೆ 11-30 ಗಂಟೆಗೆ  ಶ್ರೀ ಕೆ ಬಿ ಹನುಮಂತಪ್ಪ ತಂದೆ ಲೇ ಹನುಮಂತಪ್ಪ 32 ವರ್ಷ ವಾಲ್ಮೀಕಿ ವ್ಯವಸಾಯ ವಾ// ಗಂಗಮ್ಮನಹಳ್ಳಿ ಕೂಡ್ಲಿಗಿ ತಾ ಬಳ್ಳಾರಿ ಜಿಲ್ಲೆ ಇವರು ಠಾಣೆಗೆ ಹಾಜರಾಗಿ  ಲಿಖಿತ ದೂರು ನಿಡಿದ್ದು ಅದರ ಸಾರಾಂಶವೇನೆಂದರೆ  ದಿ.04/12/15 ರಂದು ತಮ್ಮ ಗ್ರಾಮದ ಈಡಿಗರ ಜನಾಂಗದ ಕೆಂಚಪ್ಪ ತಂದೆ ಲೇ ಬಸವರಾಜಪ್ಪ 27 ವರ್ಷ ಈತನು 9844815560 ನಂಬರ್ ನ ಆತನ ಮೊಬೈಲ್ ನಿಂದ ನನ್ನ 9945014389 ನಂಬರ್ ನ ಮೊಬೈಲ್ ಗೆ ಫೋನ್ ಮಾಡಿ ತಿಳಿಸಿದ್ದೇನೆಂದರೆ ಈ ದಿನ ದಿ.04/12/15 ರಂದು ರಾತ್ರಿ 07-30 ರ ಸುಮಾರಿಗೆ ನಿನ್ನ  ಅಣ್ಣ ಕೆ ಬಿ ಬಸವರಾಜಪ್ಪ 40 ವರ್ಷ ಈತನು ಕೆಎ34ವಿ6048 ನಂಬರ್ ನ ಟಿವಿಎಸ್ ಸ್ಟಾರ್ ಸಿಟಿ ಬೈಕ್ ನಲ್ಲಿ ಕುಳಿತುಕೊಂಡು 
ಕೂಡ್ಲಿಗಿ ಕಡೆಯಿಂದ ನಮ್ಮೂರಿನ ಕಡೆ ಬರುವಾಗ್ಗೆ ಬಡೆಲಡುಕು ಗ್ರಾಮದ ಸಮೀಪದ ಕೆಇಬಿ ಸೆಕ್ಷನ್ ಆಫೀಸ್ ಹತ್ತಿರ ಮಾಸಂತಿ ಹಳ್ಳದ ಹತ್ತಿರ ಕೂಡ್ಲಿಗಿ-ಉಜ್ಜಯಿನಿ ರಸ್ತೆಯಲ್ಲಿ ಬೈಕ್ ಸಮೇತ ಬಿದ್ದಿರುತ್ತಾನೆ ಅಂತಾ ವಿಷಯ ತಿಳಿಸಿದ್ದರಿಂದ ತಾನು, ಮತ್ತು ತಮ್ಮ ಗ್ರಾಮದ,ಕೆ ಸಿದ್ದೇಶ ತಂದೆ ಓಬಪ್ಪ 2] ಬಸವರಾಜಪ್ಪ ತಂದೆ ಹ್ಯಾಳ್ಯದ ಗೌಡಪ್ಪ ನನ್ನ ಅತ್ತಿಗೆಯಾದ 3] ಶ್ರೀಮತಿ ಅಂಜಿನಮ್ಮ ಗಂಡ ಕೆ ಬಿ ಬಸವರಾಜಪ್ಪ ಇಷ್ಟು ಜನ ಸೇರಿಕೊಂಡು, ವಾಹನದ ಅನುಕೂಲತೆ ಮಾಡಿಕೊಂಡು ಆ ದಿನ ರಾತ್ರಿ 08-00 ರ ಸುಮಾರಿಗೆ ಮೇಲ್ಕಂಡ ಸ್ಥಳಕ್ಕೆ ಹೋಗಿ ನೋಡಲು ತನ್ನ ಅಣ್ಣ ಕೆ ಬಿ ಬಸವರಾಜಪ್ಪ ಕೆಎ35ಬಿ6048 ನಂಬರ್ ನ ಟಿವಿಎಸ್ ಸ್ಟಾರ್ ಸಿಟಿ ಬೈಕ್ ನಲ್ಲಿ ಕೂಡ್ಲಿಗಿ ಕಡೆಯಿಂದ ನಮ್ಮೂರಿನ ಕಡೆ ಅತಿವೇಗ ಮತ್ತು ಅಜಾಗರುಕತೆಯಿಂದ ಬೈಕ್ ನ್ನು ಚಲಾಯಿಸಿಕೊಂಡು ಬಂದು ಥಾರ್ ರಸ್ತೆಯ ಎಡಬದಿಯ ಕಚ್ಚಾರಸ್ತೆಯಲ್ಲಿ ಬೈಕ್ ಸಮೇತ ಬಿದ್ದಿರುವುದು ಕಂಡುಬಂತು. ಆತನ ತಲೆಯ ಹಿಂದುಗಡೆ ಭಾರಿ ರಕ್ತಗಾಯ ಆಗಿತ್ತು. ಪ್ರಜ್ಞೆ ಇರಲಿಲ್ಲ. ಕೂಡಲೇ ನಾವುಗಳೆಲ್ಲರೂ ಚಿಕಿತ್ಸೆ ಸಲುವಾಗಿ ಕೂಡ್ಲಿಗಿ ಸರಕಾರಿ ಆಸ್ಪತ್ರೆಗೆ ನಂತರ ಹೆಚ್ಚಿನ ಚಿಕಿತ್ಸೆಗಾಗಿ ದಾವಣಗೆರೆಯ ಎಸ್ ಎಸ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆಗೆ ಸೇರಿಸಿ ಚಿಕಿತ್ಸೆ ಕೊಡಿಸಿದೆವು.  ವಾಸಿ ಆಗದೇ ಇದ್ದುದ್ದರಿಂದ ಡಾಕ್ಟರ್ ಸಲಹೆ ಮೇರೆಗೆ ಹೆಚ್ಚಿನ ಚಿಕಿತ್ಸೆಗೆ ಮಣಿಪಾಲ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಸೇರಿಸಿದ್ದು, ಅಲ್ಲಿಯೂ ವಾಸಿ ಆಗಲಿಲ್ಲ. ಮತ್ತು ಮಾತನಾಡುವ ಸ್ಥಿತಿಗೆ ಬರಲಿಲ್ಲ. ನಂತರ ಅಲ್ಲಿಂದ ಹಿರೇ ಮಂಗಳೂರು ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಅಲ್ಲಿ ಒಂದು ದಿನ ಇದ್ದು ನಂತರ ಹೆಚ್ಚಿನ ಚಿಕಿತ್ಸೆಗೆ ದಿ.10/12/15  ಸಾಯಂಕಾಲ 05-06 ರ ಸುಮಾರಿಗೆ ಬಳ್ಳಾರಿ ವಿಮ್ಸ್ ಆಸ್ಪತ್ರೆಗೆ ಹೋಗಿ ಒಳರೋಗಿಯಾಗಿ ಚಿಕಿತ್ಸೆಗೆ ಸೇರಿಸಿದೆವು. ಪ್ರಜ್ಞೆ ಬಂದರೆ ವಿಚಾರಿಸಿ ದೂರು ಕೊಡುವುದಾಗಿ ದಿ.06/12/15 ರಂದು ಕೂಡ್ಲಿಗಿ ಪೊಲೀಸ್ ಠಾಣೆಯಲ್ಲಿ ಹೋಗಿ ಬರೆದುಕೊಟ್ಟು ಹೋಗಿದ್ದೆನು. ಪ್ರಜ್ಞೆ ಬಾರದೇ ಇದ್ದುದರಿಂದ ಪೊಲೀಸ್ ರಿಗೆ ವಿಷಯ ತಿಳಿಸಿರಲಿಲ್ಲ. ದಿ.07/01/16 ರಂದು ಬಳ್ಳಾರಿ ವಿಮ್ಸ್ ಆಸ್ಪತ್ರೆಯಿಂದ ಡಿಸ್ಚಾರ್ಜ ಮಾಡಿಸಿಕೊಂಡು ಗಾಯಾಳು ತನ್ನ ಅಣ್ಣನಿಗೆ ಮನೆಗೆ ಕರೆದುಕೊಂಡು ಬಂದಿರುತ್ತೇವೆ. ಪ್ರಜ್ಞಾ ಸ್ಥಿತಿಯಲ್ಲಿ ಇರುವುದಿಲ್ಲ. ದಿ.04/12/15 ರ ರಾತ್ರಿ 07-30 ಗಂಟೆ ಸುಮಾರಿಗೆ ಅಪಘಾತ ನಡೆದ ಸಮಯದಲ್ಲಿ ತನ್ನ ಅಣ್ಣನ ಜೊತೆಗೆ ನಮ್ಮೂರಿನ ವಾಸಿಯಾದ ತಮ್ಮ ಜನಾಂಗದ ಅಂಜಿನಪ್ಪ ತಂದೆ ದೊಡ್ಡ ಹುಚ್ಚಪ್ಪ ಈತನು ಸದರಿ ಬೈಕ್ ನಲ್ಲಿ ಕುಳಿತುಕೊಂಡು ಬಂದಿದ್ದ ಅಂತಾ ಊರಿನಲ್ಲಿ ಜನರಿಗೆ ಹೇಳಿಕೊಂಡು ತಿರುಗಾಡುತ್ತಿದ್ದಾನೆ. ಕೇಳಿದರೆ ಬೈಕ್ ಸಮೇತ ಬಿದ್ದಿರುತ್ತೇವೆ ಅಂತಾ ಹೇಳುತ್ತಾನೆ. ಅವನಿಗೆ ಯಾವುದೇ ಗಾಯಪೆಟ್ಟುಗಳಾಗಿರುವುದಿಲ್ಲ. ಅತಿವೇಗ ಮತ್ತು ಅಜಾಗರುಕತೆಯಿಂದ ಚಲಾಯಿಸಿ ಬೈಕ್ ಸಮೇತ ಬಿದ್ದಂತಹ ಕೆಎ34ವಿ6048 ನಂಬರ್ ನ ಟಿವಿಎಸ್ ಸ್ಟಾರ್ ಸಿಟಿ ಬೈಕ್ ಚಾಲಕ ತನ್ನ ಅಣ್ಣ ಕೆ ಬಿ ಬಸವರಾಜನ ವಿರುದ್ಧ ಕ್ರಮ ಜರುಗಿಸಬೇಕೆಂದು ಕೇಳಿಕೊಳ್ಳುತ್ತೇನೆ. ಇದುವರೆಗೂ ಪ್ರಜ್ಞೆ ಬರಬಹುದು ಎಂಬ ಕಾರಣಕ್ಕೆ ಕಾದುಕೊಂಡೇ ಇದ್ದು, ತನ್ನ ಅಣ್ಣನಿಗೆ ಈಗ್ಗೂ ಸಹ ಪ್ರಜ್ಞೆ ಬಾರದೇ ಹಾಸಿಗೆ ಹಿಡಿದಿರುವುದರಿಂದ ಕೇಸ್ ಕೊಡುವುದೇ ಒಳ್ಳೆಯದು ಎಂದು ತೀರ್ಮಾನಿಸಿ, ತಡವಾಗಿ ಬಂದು ಈ ತನ್ನ ದೂರು ಕೊಟ್ಟಿದ್ದು ಸದರಿಯವನ ಕ್ರಮ ಜರುಗಿಸಬೇಕೆಂದು ಕೇಳಿಕೊಳ್ಳುತ್ತೇನೆ.  ಈ ತನ್ನ ದೂರಿನೊಂದಿಗೆ ಬಳ್ಳಾರಿ ವಿಮ್ಸ್ ಆಸ್ಪತ್ರೆಯಿಂದ ತಂದಂತಹ ಡಿಸ್ಚಾರ್ಜ ಸಮ್ಮರಿಯನ್ನು ಲಗತ್ತಿಸಿರುತ್ತೇನೆಂದು ದೂರು ಕೊಟ್ಟ ಮೇರೆಗೆ ಠಾಣಾ ಗುನ್ನೆ ನಂ 04/16 ಕಲಂ 279 338 ಐಪಿಸಿ ಆಧಾರ 183 ಐಎಂವಿ ಆಕ್ಟ್ ರೀತ್ಯ ಪ್ರಕರಣದ ದಾಖಲಿಸಿ ತನಿಖೆ ಕೈಗೊಂಡಿದೆ.
17 Cr.No:0005/2016
(IPC 1860 U/s 363 ; PROTECTION OF CHILDREN FROM SEXUAL OFFENCES ACT 2012 U/s 8 )
11/01/2016 Under Investigation
CHILDREN ACT - Protection of Children from Sexual Offences Act 2012 (POCSO)
Brief Facts :  ಈ ದಿನ ದಿನಾಂಕ ೧೧/೦೧/೨೦೧೬  ರಂದು  ರಾತ್ರಿ ೯-೦೦ ಗಂಟೆಗೆ  ಪಿರ‍್ಯಾದುದಾರರು ಠಾಣೆಗೆ  ಹಾಜರಾಗಿ ನೀಡಿದ ದೂರಿನ ಸಾರಾಂಶದಲ್ಲಿ ನಮಗೆ ಇಬ್ಬರು ಹೆಣ್ಣು ಮಕ್ಕಳಿದ್ದು ಅದರಲ್ಲಿ ಸಹನಾ ಹಿರಿಯಳಿದ್ದು, ಮೋನಿಕಾ ಚಿಕ್ಕವಳಿದ್ದು ಹಿರಿಯಳಾದ  ಸಹನಾಳಿಗೆ ೧೫ವರ್ಷ ವಯಸ್ಸಿದ್ದು  ಆಕೆಯು ಸಂಡೂರು ರಸ್ತೆಯಲ್ಲಿರುವ ಸಂತ್ ಮೈಕಲ್ ಶಾಲೆಯಲ್ಲಿ ೮ ನೇ ತರಗತಿಯನ್ನು ವಿದ್ಯಬ್ಯಾಸ ಮಾಡುತ್ತಿರುತ್ತಾಳೆ. ನನ್ನ ಮಗಳು ಪ್ರತಿ ದಿನ ಸೈಕಲ್‌ನಲ್ಲಿ ಶಾಲೆಗೆ ಹೋಗಿ ಬರುತ್ತಿದ್ದಳು ಈಗ್ಗೆ ಸುಮಾರು ೩ ತಿಂಗಳ ಕೆಳಗೆ ಆಕೆಯು ನನ್ನ ಬಳಿ ಬಂದು ತಿಪ್ಪೇಸ್ವಾಮಿ ಎನ್ನುವ ವ್ಯಕ್ತಿಯು ನಾನು ಶಾಲೆಗೆ ಹೋಗುವಾಗ ಬರುವಾಗ ನನ್ನನ್ನು ಹಿಂಬಾಲಿಸುತ್ತಿದ್ದು ನಾನು ಏತಕ್ಕಾಗಿ ಈ ರೀತಿ ಮಾಡುತ್ತೀಯ ಅಂತ ಕೇಳಿದ್ದಕ್ಕೆ ಆತನು ನಾನು ನಿನ್ನನ್ನು ಪ್ರೀತಿಸುತ್ತೇನೆ ಅಂತ ಹೇಳಿದ್ದು ಅದಕ್ಕೆ ನಾನು ಆತನಿಗೆ ಈ ರೀತಿಯಾಗಿ ನನ್ನ ಬಳಿ ವರ್ತನೆಮಾಡಬೇಡ ಅಂತ ಬೈಯ್ದು ಕಳುಹಿಸಿದ್ದು ಆದರೂ ಸಹಆತನ ಅದೇ ಚಾಳಿಯನ್ನು ಮುಂದುವರೆಸಿರುತ್ತಾನೆಂದು ವಿಷಯ ತಿಳಿಸಿದ್ದು ನಾನು ಮತ್ತು ನನ್ನ ಗಂಡ ಇಬ್ಬರು ಆತನಿಗೆ ಕರೆಯಿಸಿ ಈ ರೀತಿಯಾಗಿ ಮಾಡಬೇಡ ಅಂತ ತಿಳುವಳಿಕೆಯನ್ನು ಕೊಟ್ಟಿದ್ದೆವು.

                ನನ್ನ ಮಗಳು ಸಹನಾಳು ಪ್ರತಿ ದಿನ ಶಾಲೆಯಿಂದ ಮರಳಿ ಮನೆಗೆ ಬಂದು ಕೊತ್ಲ ಆಂಜನೇಯ ದೇವಸ್ಥಾನ ಹತ್ತಿರದ ವಲಿ ಬಾಷಾರವರಲ್ಲಿ ಟ್ಯೂಷನ್‌ಗೆ ಹೋಗುತ್ತಿದ್ದು ಅದರಂತೆ ಈ ದಿನ ದಿನಾಂಕ ೧೧/೦೧/೨೦೧೫ ರಂದು ಸಾಯಂಕಾಲ ಶಾಲೆಯಿಂದ ಮರಳಿ ಮನೆಗೆ ಬಂದು ಸಂಜೆ ೫-೦೦ ಗಂಟೆಯ ಸುಮಾರಿಗೆ ಟ್ಯೂಷನ್ ಗೆ ಹೋಗುತ್ತೇನೆಂದು ಹೇಳಿ ಹೋಗಿದ್ದು ಸ್ವಲ್ಪ ಸಮಯದ ನಂತರ ನನ್ನ ಮಗಳ ಸ್ನೇಹಿತೆಯಾದ ಸ್ವಪ್ನ ಎಂಬುವಳು ನನ್ನ ಮೊಬೈಲ್‌ಗೆ ಪೋನ್ ಮಾಡಿ ಸಹನಾಳು ಟ್ಯೂಷನ್‌ಗೆ ಬಂದಿರುವುದಿಲ್ಲ  ಅಂತ  ತಿಳಿಸಿದ್ದು ಕೂಡಲೇ ನಾನು ಮತ್ತು ನನ್ನ ತಮ್ಮನಾದ ಸಿದ್ದೇಶ್ ನೊಂದಿಗೆ  ಹುಡುಕಾಡಿ ನೋಡಲಾಗಿ ನನ್ನ ಮಗಳು ಸಿಗಲಿಲ್ಲ. ಸ್ವಲಪ್ ಸಮಯದ ನಂತರ ನನ್ನ ತಮ್ಮ ಸಿದ್ದೇಶ ಈತನು ನನ್ನ ಮಗಳೊಂದಿಗೆ ಮನೆಗೆ ಬಂದಿದ್ದು ನನ್ನ ಮಗಳು ಸಹನಾಳಿಗೆ ಈ ಬಗ್ಗೆ ವಿಚಾರಿಸಲಾಗಿ

             ನಾನು ಪ್ರತಿ ದಿನ ವಲಿ ಬಾಷಾ ರವರಲ್ಲಿ ಟ್ಯೂಷನ್‌ಗೆ ಹೋಗುತ್ತಿದ್ದು ಸಂಜೆ ೫-೩೦ ಗಂಟೆಯ ಸುಮಾರಿಗೆ ಕೊರಚರ ಭೀಮಣ್ಣನ ಮನೆಯ ಹತ್ತಿರ ಹೋಗುತ್ತಿರುವಾಗ ಮೇಲ್ಕಂಡ ತಿಪ್ಪೇಸ್ವಾಮಿಯು ಮೋಟಾರ್ ಸೈಕಲ್ ನಲ್ಲಿ ನನ್ನ ಹತ್ತಿರ ಬಂದು ನೀನು ನನ್ನ ಮೋಟಾರ್ ಸೈಕಲ್‌ನಲ್ಲಿ ಕುಳಿತುಕೋ ಎಲ್ಲಿಯಾದರೂ ಹೋಗೋಣ ಅಂತ ಹೇಳಿದನು. ಅದಕ್ಕೆ ನಾನು ನಮ್ಮ  ತಂದೆ ತಾಯಿಗಳು ಮನೆಯಲ್ಲಿ ಬೈಯುತ್ತಾರೆ ಬರುವುದಿಲ್ಲ ಅಂತ ಹೇಳಿದ್ದು ಅದಕ್ಕೆ ಆತನು ಬಲವಂತದಿಂದ ನನ್ನನ್ನು ಮೋಟಾರ್ ಸೈಕಲ್‌ನಲ್ಲಿ ಕುಳ್ಳಿರಿಸಿಕೊಂಡು ಬಂಡೆ ಬಸಾಪುರ ತಾಂಡದ ರಸ್ತೆಯ ಬಳಿಯ ಗುಡ್ಡದ ಮೇಲೆ ನನ್ನನ್ನು ಕರೆದುಕೊಂಡು ಹೋಗಿದ್ದು ನಾನು ಆತನಿಗೆ ಇಲ್ಲಿಗೆ ಏತಕ್ಕಾಗಿ ಕರೆದುಕೊಂಡು ಬಂದಿದ್ದೀಯ ಅಂತ ಕೇಳಿದ್ದಕ್ಕೆ ಆತನು ನಾನು ನಿನ್ನನ್ನು ಬಹಳ ಪ್ರೀತಿಸುತ್ತೇನೆ ನೀನು ನನ್ನನ್ನು ಪ್ರೀತಿಸು ಅಂತ  ಹೇಳಿದ್ದು ಅದಕ್ಕೆ ನಾನು ನಮ್ಮ ತಂದೆ ತಾಯಿಗೆ ಗೋತ್ತಾದರೆ ಬೈಯುತ್ತಾರೆಂದು ಆತನಿಗೆ ಹೇಳಿದ್ದು ಆದರೂ ಸಹ ಆತನು  ನಾನು ಬೇಡವೆಂದರೂ ಸಹ  ನನ್ನನ್ನು ತಬ್ಬಿಕೊಂಡನು  ನಾನು ಕೂಡಲೇ ಅವನನ್ನು  
ಜೋರಾಗಿ ತಳ್ಳಿದೆನು. ನಂತರ ನಾನು ಸಿಟ್ಟಿನಿಂದ ನಾನು ನನ್ನನ್ನು ಕರೆದುಕೊಂಡ ಜಾಗಕ್ಕೆ ಬಿಡದೇ ಹೋದರೆ ನಾನು ನಮ್ಮ ತಂದೆ ತಾಯಿಗೆ ವಿಷಯ ತಿಳಿಸುತ್ತೇನೆಂದು  ಹೇಳುತ್ತಿದ್ದಂತೆ ಆತನು ತನ್ನ ಮೋಟಾರ್ ಸೈಕಲ್‌ನಲ್ಲಿ ಹತ್ತಿಸಿಕೊಂಡು ಪುನ ವಾಪಾಸ್ಸು ಕರೆದುಕೊಂಡು ಬರುತ್ತಿರುವಾಗ ನಮ್ಮ ಮಾವ ಸಿದ್ದೇಶ್, ಹಾಗು ಆತನ ಸ್ನೇಹಿತ ಹನುಮಂತ ರವರುಗಳು ನೋಡಿ ನಮ್ಮನ್ನು ವಿಚಾರಿಸಿದಾಗ ನಾನು ನಡೆದ ಸಂಗತಿಯನ್ನು ತಿಳಿಸಿದ್ದು ಕೂಡಲೇ ನಮ್ಮ ಮಾಮ ಮತ್ತು ಆತನ ಸ್ನೇಹಿತ ತಿಪ್ಪೇಸ್ವಾಮಿಯನ್ನು  ಹಿಡಿದುಕೊಳ್ಳಲು ಹೋದಾಗ ಆತನು ಮೋಟಾರ್ ಸೈಕಲ್ ಬಿಟ್ಟು ಓಡಿ ಹೋದನು. ಆ ಮೋಟಾರ್ ಸೈಕಲ್ ನಂಬರ್ ಕೆ.ಎ ೩೫ ವಿ ೭೯೦೮ ಅಂತ ಇರುತ್ತದೆ. ಅಂತ ತಿಳಿಸಿದಳು.  ಈ ಬಗ್ಗೆ ನಾನು ನನ್ನ ಗಂಡನೊಂದಿಗೆ ಚರ್ಚೆಮಾಡಿ ನನ್ನ ಮಗಳೊಂದಿಗೆ ಬಂದು ದೂರು ಕೊಟ್ಟಿದ್ದು ಕಾರಣ ಈ ಬಗ್ಗೆ ಕ್ರಮ ಕೈಗೊಳ್ಳಲು ಕೋರಿದೆ. ಅಂತ ಇದ್ದ ದೂರಿನ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿದೆ.
18 Cr.No:0006/2016
(IPC 1860 U/s 279,304(A) ; INDIAN MOTOR VEHICLES ACT, 1988 U/s 183,187 )
11/01/2016 Under Investigation
MOTOR VEHICLE ACCIDENTS FATAL - National Highways
Brief Facts :  ಈ ದಿನ ದಿ.11/01/16 ರಂದು ರಾತ್ರಿ  11-30 ಗಂಟೆಗೆ   ಶ್ರೀ ಕೆ ಕೊಟ್ರೇಶ್ ತಂದೆ ಲೇ ಸಣ್ಣವೀರಪ್ಪ 51 ವರ್ಷ ಲಿಂಗಾಯತರು ಶ್ಯಾಮಿಯಾನ ಸಪ್ಲೈಯರ್ 03 ನೇ ವಾರ್ಡ್ ಬೆಂಗಳೂರು ರಸ್ತೆ  ಕೂಡ್ಲಗಿ ಬಳ್ಳಾರಿ ಜಿಲ್ಲೆ ಇವರು ಠಾಣೆಗೆ ಹಾಜರಾಗಿ  ದೂರು ನಿಡಿದ್ದು ಅದರ ಸಾರಾಂಶವೇನೆಂದರೆ ಈ ದಿನ ದಿ.11/01/16 ರಂದು ರಾತ್ರಿ 09-15 ಗಂಟೆ ಸುಮಾರಿಗೆ ಕೂಡ್ಲಿಗಿಯಿಂದ ವಿರುಪಾಪುರಕ್ಕೆ ಎನ್ ಹೆಚ್ 13 ರ ಮುಖಾಂತರ ತನ್ನ ಮೊಟಾರ್ ಬೈಕ್ ನಲ್ಲಿ ಕುಳಿತು ಹೊರಟಿದ್ದಾಗ ಅದೇ ಸಮಯಕ್ಕೆ ಕೂಡ್ಲಿಗಿಯಿಂದ ಪ್ರಕಾಶ್ ತಂದೆ ವೀರಭದ್ರಚಾರಿ 28 ವರ್ಷ ಕಾರ್ಪೇಂಟರ್ ಕೆಲಸ ವಿಶ್ವಕರ್ಮ ಜನಾಂಗ ವಾ// ಮೊರಬ ಗ್ರಾಮ ಕೂಡ್ಲಿಗಿ ತಾ ಈತನು ಸಹ ತನ್ನ ಊರಿಗೆ ಆತನ ಬೈಕ್ ನಲ್ಲಿ ಕುಳಿತು ಹೊರಟಿದ್ದು ನಾವೀಬ್ಬರು ಒಬ್ಬರ ಹಿಂದೆ ಮತ್ತೊಬ್ಬರು ಬೈಕ್ ನ್ನು ಚಲಾಯಿಸುತ್ತಾ ಕೂಡ್ಲಿಗಿ ಕಡೆಯಿಂದ ಹೊರಟಿದ್ದಾಗ ಈ ದಿನ ರಾತ್ರಿ 09-30 ಗಂಟೆ ಸುಮಾರಿಗೆ ಎನ್ ಹೆಚ್ 13 ರಲ್ಲಿ ಕರೇಕಲ್ಲು ಬಗಡಿ  ಇಳಿಜಾರಿನ ಕೂಡ್ಲಿಗಿಯ ಘಂಟೇರ್ ಗುರುರಾಜ್ ಇವರ ತೋಟದ ಹತ್ತಿರ ಥಾರ್ ರಸ್ತೆಯ ಮಧ್ಯಭಾಗದಲ್ಲಿ ಉತ್ತರಕ್ಕೆ ಅಂದರೆ ಕೂಡ್ಲಿಗಿ ಕಡೆ ಮುಖ ಮಾಡಿ ಒಬ್ಬ ವ್ಯಕ್ತಿಯು ಬೋರಲಾಗಿ ಬಿದ್ದಿದ್ದನ್ನು ನೋಡಿ, ನಾವಿಬ್ಬರು ಮೋಟಾರ್ ಸೈಕಲ್ ಗಳನ್ನು ಸೈಡ್ ಗೆ ನಿಲ್ಲಿಸಿ ಹತ್ತಿರ ಹೋಗಿ ನೋಡಲಾಗಿ ಆ ವ್ಯಕ್ತಿಯ ಹಣೆಗೆ, ಮುಖಕ್ಕೆ ಭಾರಿ ರಕ್ತಗಾಯಗಳಾಗಿ ರಕ್ತಸ್ರಾವವಾಗಿ ಸ್ಥಳದಲ್ಲಿಯೇ ಸತ್ತು ಹೋಗಿದ್ದನು. ಮಾಸಲು ಬಿಳಿ ಬಣ್ಣದ ತುಂಬು ತೋಳಿನ ಶರ್ಟ್ ಮತ್ತು ಮಾಸಲು ಬಣ್ಣದ ಪ್ಯಾಂಟ್ ಧರಿಸಿದ್ದು ಅಂದಾಜು ವಯಸ್ಸು 25 ರಿಂದ 30 ವರ್ಷಗಳು ಇರಬಹುದು. ಹೆಸರು ವಿಳಾಸ ಗೊತ್ತಿರುವುದಿಲ್ಲ. ಈ ವಿಷಯವನ್ನು ಫೋನ್ ಮೂಲಕ ಕೂಡ್ಲಿಗಿ ಪೊಲೀಸ್ ಠಾಣೆಗೆ ತಿಳಿಸಿ ಪೊಲೀಸ್ ರನ್ನು ಸ್ಥಳಕ್ಕೆ ಕರೆಯಿಸಿ, ಎನ್ ಹೆಚ್ 13 ರಲ್ಲಿ ಸಂಚರಿಸುವ ವಾಹನಗಳಿಗೆ ಅಡತಡೆ ಆಗಬಾರದೆಂಬ ಕಾರಣಕ್ಕೆ ಶವವನ್ನು ವಾಹನದ ಅನುಕೂಲ ಮಾಡಿ ಕೂಡ್ಲಿಗಿ ಸರಕಾರಿ ಆಸ್ಪತ್ರೆಯ ಶವಗಾರದ ಕೋಣೆಯಲ್ಲಿ ಇರಿಸಿರುತ್ತೇವೆ. ಮೃತ ವ್ಯಕ್ತಿಯು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಯಾವುದೋ ವಾಹನ ಡಿಕ್ಕಿಪಡಿಸಿದ್ದರಿಂದ ಮೃತಪಟ್ಟಿರಬಹುದು  ಅಥಾವ ಯಾವುದೋ ವಾಹನದಲ್ಲಿ ಈತನು ಹೋಗುತ್ತಿದ್ದಾಗ ಮುಗ್ಗರಿಸಿ ಬೋರಲಾಗಿ ಬಿದ್ದು ಸತ್ತಿರಬಹುದೆಂದು ಇವನ ಸಾವು ಯಾವುದೋ ವಾಹನದ ಚಾಲಕನ ಅತಿವೇಗ ಮತ್ತು ಅಜಾಗರುಕತೆಯ ಚಾಲನೆಯಿಂದ ಉಂಟಾಗಿರಬಹುದೆಂದು ಮೇಲ್ನೋಟಕ್ಕೆ ಕಂಡು ಬರುತ್ತಿದ್ದು, ಅತೀ ವೇಗ ಮತ್ತು ಅಜಾಗರುಕತೆಯಿಂದ ಚಲಾಯಿಸಿ, ಅಪಘಾತ ಉಂಟುಪಡಿಸಿ ಎನ್ ಹೆಚ್ 13 ರಲ್ಲಿ ತನ್ನ ವಾಹನವನ್ನು ಸ್ಥಳದಲ್ಲಿ ನಿಲ್ಲಿಸದೇ ಹೊಸಪೇಟೆ ಕಡೆಗೋ ಅಥಾವ ಚಿತ್ರದುರ್ಗದ ಕಡೆಗೋ ಹೊರಟು ಹೋದಂತಹ ಯಾವುದೋ ವಾಹನದ ಚಾಲಕನ ವಿರುದ್ಧ ಕ್ರಮ ಜರುಗಿಸಬೇಕೆಂದು ಕೇಳಿಕೊಳ್ಳುತ್ತೇನೆ ಎಂದು ದೂರು ಕೊಟ್ಟ ಮೇರೆಗೆ ಠಾಣಾ ಗುನ್ನೆ ನಂ 06/16 ಕಲಂ 279 304 [ಎ] ಐಪಿಸಿ ಆಧಾರ 183 187 ಐಎಂವಿ ಆಕ್ಟ್ ರೀತ್ಯ ಪ್ರಕರಣದ ದಾಖಲಿಸಿ ತನಿಖೆ ಕೈಗೊಂಡಿದೆ.
Kuduthini PS
19 Cr.No:0003/2016
(IPC 1860 U/s 323,324,504,506,341,447,34 )
11/01/2016 Under Investigation
CASES OF HURT - Simple Hurt
Brief Facts :  ದಿನಾಂಕ:- 06.01.2016 ರಂದು ಮದ್ಯಾಹ್ನ 2:30 ಗಂಟೆಗೆ ಪಿರ್ಯಾದಿದಾರನು ಜಿಂದಾಲ್ ಕಿಟ್ ಯಾರ್ಡನಲ್ಲಿ ಮಿನೇರ ಫ್ಯಾಕ್ಟರಿ ಹತ್ತಿರ ಕರ್ತವ್ಯ ನಿರ್ವಹಿಸುತ್ತಿರುವಾಗ ಆರೋಪಿತರು ಕಿಟ್ ಯಾರ್ಡ ಒಳಗೆ ಬಂದು ಕೆಲಸ ಮಾಡುತ್ತಿದ್ದವರಿಗೆ ಕೈಗಳಿಂದ ಹೊಡೆದು, ಪಿರ್ಯಾದಿದಾರನಿಗೆ ರಾಡ್ ನಿಂದ ಹೊಡೆದು ಅವಾಚ್ಯ ಶಬ್ದಗಳಿಂದ ಬೈದು, ಪ್ರಾಣಬೆದರಿಕೆ ಹಾಕಿರುತ್ತಾರೆಂದು ಇತ್ಯಾದಿ ದೂರಿನ ಮೇರೆಗೆ. ( ದೂರಿನ ಪ್ರತಿ ಲಗತ್ತಿಸಿದೆ)
20 Cr.No:0004/2016
(IPC 1860 U/s 287,337 )
11/01/2016 Under Investigation
NEGLIGENT ACT - Machinery - Related
Brief Facts :  ಕೆಪಿಸಿಎಲ್ ನಲ್ಲಿ 3ನೇ ಯೂನಿಟ್ ನಲ್ಲಿ ಎಸ್.ಎನ್.ಸಿ. ಕಂಪನಿಯವರು ಜೆ.ಎನ್.ಟಿ.-15 ನ್ನು ಎರೆಕ್ಷನ್ ಮಾಡಿದ್ದು ಸದರಿ ಕೆಲಸಕ್ಕೆ ಈ ದಿನ ದಿನಾಂಕ:- 11.01.2016 ರಂದು ಮದ್ಯಾಹ್ನ 12 ಗಂಟೆ ಸುಮಾರಿಗೆ ಪಿರ್ಯದಿದಾರನು ಮತ್ತು ಬಿನೋದ್ ರಾಯ್ ಮತ್ತಿತರು ಸೇರಿ ಜೆ.ಎನ್.ಟಿ-15 ರಲ್ಲಿ 76 ಮೀಟರ್ ನಲ್ಲಿ ಬೀಮ್ ನ್ನು ಜೋಡನೆ ಮಾಡುತ್ತಿರುವಾಗ ಬಿನೋದ್ ರಾಯ್ ಇತನು ಕೆಳಗೆ ಬಿದ್ದು ಬೆನ್ನಿಗೆ ಒಳಪೆಟ್ಟು ಅಗಿರುತ್ತದೆ. ಬಿನೋದ್ ರಾಯ್ ಈತನು ಕೆಲಸ ಮಾಡುವಾಗ ಎಸ್.ಎನ್.ಸಿ. ಕಂಪನಿಯ ಸೂಪರ್ ವೈಜರ್ ಆಕಾಶ್ ಮತ್ತು ಎಸ್.ಎನ್.ಸಿ. ಕಂಪನಿಗೆ ಸಂಬಂಧಪಟ್ಟವರು, ಮತ್ತು ಬಿಹೆಚ್ ಇಎಲ್ ಕಂಪನಿಗೆ ಸಂಬಂಧಪಟ್ಟವರು ಬಿನೋದ್ ರಾಯ್ ಈತನು ಕೆಲಸ ಮಾಡುವಾಗ ಯಾವುದೇ ಸುರಕ್ಷತಾ 
ಸಾಧಾನಗಳನ್ನು ಒದಗಿಸದೇ, ಕರ್ತವ್ಯದಲ್ಲಿ ನಿರ್ಲಕ್ಷತನ ತೋರಿಸಿದ್ದರಿಂದ ಈ ಘಟನೆ ನಡೆದಿರುತ್ತದೆ. ಅದ್ದರಿಂದ ಮೇಲ್ಕಂಡವರ ವಿರುದ್ದ ಕಾನೂನು ಕ್ರಮ ಕೈಗೊಳ್ಳಲು ಮನವಿ ಅಂತಾ ದೂರಿನ ಮೇರೆಗೆ. ( ದೂರಿನ ಪ್ರತಿ ಲಗತ್ತಿಸಿದೆ)
21 Cr.No:0005/2016
(IPC 1860 U/s 279,337,304(A) ; INDIAN MOTOR VEHICLES ACT, 1988 U/s 187 )
12/01/2016 Under Investigation
MOTOR VEHICLE ACCIDENTS FATAL - State Highways
Brief Facts :  ದಿನಾಂಕ:- 11.01.2016 ರಂದು ಪಿರ್ಯಾದಿದಾರಳು ಮತ್ತು ಮೃತ ಹನುಮಕ್ಕಳು ಮೋಟರ್ ಸೈಕಲ್ ನಂ, ಕೆಎ-35/ಕ್ಯೂ-1710 ನೇದ್ದರಲ್ಲಿ ಕುಳಿತುಕೊಂಡು ಬರುವಾಗ ಸದರಿ ಮೋಟರ್ ಸೈಕಲ್ ನ್ನು ಹನುಮಂತ ಈತನು ಚಲಾಯಿಸುತ್ತಿದ್ದು, ಕಂಪ್ಲಿ-ಬಳ್ಳಾರಿ ರಸ್ತೆಯಲ್ಲಿ ಐಬಿ ಕ್ರಾಸ್ ಕಡೆಯಿಂದ ಹೊಸದರೋಜಿ ಕಡೆಗೆ ಬರುವಾಗ ಸದರಿ ಮೋಟರ್ ಸೈಕಲ್ ನ್ನು ಅತೀವೇಗ ಮತ್ತು ಅಜಾಗರುಕತೆಯಿಂದ ಚಲಾಯಿಸಿಕೊಂಡು ಬಂದು ರಸ್ತೆಯ ತಿರುವುನಲ್ಲಿ ಏಕಾಏಕಿಯಾಗಿ ಕೆಳಗೆ ಬಿಳಿಸಿದ್ದರಿಂದ ಪಿರ್ಯದಿದಾರಳಿಗೆ ಗಾಯಳಾಗಿದ್ದು, ಹನುಮಕ್ಕಳಿಗೆ ತಲೆಗೆ ತೀವ್ರ ಸ್ವರೂಪದ ರಕ್ತಗಾಯವಾಗಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುತ್ತಾಳೆ. ಅದ್ದರಿಂದ ಮೋಟರ್ ಸೈಕಲ್ ಚಾಲಕನಾದ ಹನುಮಂತನ ವಿರುದ್ದ ಕಾನೂನುಕ್ರಮ ಕೈಗೊಳ್ಳಲು ಮನವಿ. ( ದೂರಿ ಪ್ರತಿಯನ್ನು ಲಗತ್ತಿಸಿದೆ)
Sandur PS
22 Cr.No:0003/2016
(IPC 1860 U/s 143,147,148,323,324,504,506,149 ; SC AND THE ST  (PREVENTION OF ATTROCITIES) ACT, 1989 U/s 3(1)(x) )
11/01/2016 Under Investigation
SCHEDULED CASTE AND THE SCHEDULED TRIBES - Scheduled Tribes
Brief Facts :  ಈ ದಿನ ದಿನಾಂಕ 11/01/2016 ರಂದು ರಾತ್ರಿ 9-00 ಗಂಟೆಗೆ ಸಂಡೂರು ಸರಕಾರಿ ಆಸ್ಪತ್ರೆಯಿಂದ MLC ಸಂದೇಶ ಬಂದ ಮೇರೆಗೆ ಆಸ್ಪತ್ರೆಗೆ ಭೇಟಿ ನೀಡಿ ಚಿಕಿತ್ಸೆ ಪಡೆಯುತ್ತಿದ್ದ ಫೀರ್ಯಾದಿಯು ನೀಡಿದ ಲಿಖಿತ ದೂರನ್ನು ಸ್ವೀಕರಿಸಿ ನೋಡಲಾಗಿ ಸಾರಾಂಶವು:- ಈ ದಿನ ದಿ: 11-01-2016 ರಂದು ಮದ್ಯಾಹ್ನ 2-30 ಗಂಟೆಗೆ ನಾನು ಸಂಡೂರಿನ ಕೂಡ್ಲಿಗಿ ರಸ್ತೆಯ ಪಕ್ಕದಲ್ಲಿರುವ ವಿಶಾಲ ಟಾಕೀಸ್ ಎದುರುಗಡೆ ಇರುವ ಅಬ್ದುಲ್ ರಹೀಮ್ ರವರ ಬಿಸ್ಮಿಲ್ಲಾ ರವರ ಹೋಟೆಲ್ಗೆ ಊಟಕ್ಕೆಂದು ನಾನು ಮತ್ತು ನನ್ನ ಸ್ನೇಹಿತ ಹನುಮೇಶ, ಚಂದ್ರು, ಕಾಶಪ್ಪ, ಬಾಸ್ಕರ್ ಸೇರಿ ಹೋಗಿದ್ದೆವು. ಎಲ್ಲರೂ ಊಟ ಮುಗಿಸಿಕೊಂಡು ಬಿಲ್ಲನ್ನು ಸಹ ನೀಡಿ ಕೈಯನ್ನು ಒರಿಸಿಕೊಳ್ಳಲು ಅಬ್ದುಲ್ ರಹೀಮ್ ಗೆ ಪೇಪರ್ ಕೇಳಿದ್ದು, ಆಗ ಆತನು ಪೇಪರ್ ಕೊಡುವುದಿಲ್ಲಾ ಹೋಗಲೇ ಎಂದು ಹೇಳೀದನು. ಆಗ ನಾನ ಪೇಪರ್ ಕೊಡದಿದ್ದರೂ ಚಿಂತೆ ಇಲ್ಲ, ಕೆಟ್ಟ ಶಬ್ದ ಬಳಸಬೇಡ ಎಂದು ಹೇಳಿದ್ದು, ಆಗ ಆತನು ಅಲ್ಲೇ ಇದ್ದ ತನ್ನ ಅಣ್ಣನಾದ ಅಬ್ದುಲ್ ಬಾಕೈ ಇಬ್ಬರೂ ಸೇರಿ ಕೊಂಡು ನನಗೆ ಹೋಗಲೇ ಸೂಳೆ ಮಗನೆ ನಾವು ಮುಸ್ಲಿಮರು ಪ್ರಪಂಚನ್ನೆ ನಡುಗಿಸುತ್ತೇವೆ. ನೀವೆಲ್ಲಾ ಏನು, ನಾಯಕ ಸೂಳೆ ಮಕ್ಕಳೆ, ನಿಮ್ಮದು ಜಾಸ್ತಿಯಾಯಿತು ನಮ್ಮಗಳ ಮುಂದೆ ನಿಮ್ಮದು ಏನು ನಡೆಯುವುದಿಲ್ಲವೆಂದು ಅವಾಚ್ಯಶಬ್ದಗಳಿಂದ ಬೈದಿದ್ದು, ಆಗ ನಾನು ನನಗೆ ಏನಾದರೂ ಅನ್ನು ಆದರೆ ನಮ್ಮ ಸಮಾಜ ಮತ್ತು ಜನಾಂಗದ ಬಗ್ಗೆ ಮಾತಾನಾಡಬೇಡವೆಂದು ಹೇಳಿದೆ. ಅದಕ್ಕೆ ಅವರಿಬ್ಬರು ಹೋಗಲೇ ಸೂಳೆ ಮಗನೆ ಮೊನ್ನೆ ತಾನೆ ಹೊಸಪೇಟೆಯಲ್ಲಿ ನಮ್ಮ ಮುಸ್ಲಿಂ ಜನಾಂಗದವರನ್ನು ನಿಮ್ಮ ನಾಯಕ ಜಾಗೃತ ಬಳಗದ ಬಗ್ಗೆ ಅವಹೇಳನಕಾರಿಯಾಗಿ ಬೈದು ಕರಪತ್ರಗಳನ್ನು ಹಂಚಿದ್ದಾನೆ. ನೀವೇನು ಮಾಡಿದಿರಿಲೇ ಮಕ್ಕಳೆ ಎಂದು ಅಲ್ಲದೇ ನನ್ನ ಕಪಾಳಕ್ಕೆ ಇಬ್ಬರೂ ಸೇರಿ ಹೊಡೆದರು. ಕೂಡಲೇ ಅವರು ಸಂಬಂದಿಕನಾದ ಪೊಲೀಸ್ ಇಲಾಖೆಯಲ್ಲಿ ಜಮೇದಾರನಾಗಿ ಕೆಲಸ ಮಾಡುತ್ತಿರುವ ಸೈಯದ್  ಅಹಮ್ಮದ್ ಗೆ ಕರೆಮಾಡಿ ಕೂಡಲೇ ಹೋಟೆಲ್ ಗೆ ಬರುವಂತೆ ಹೇಳಿದ್ದು, ಆಗ 2-3 ನಿಮಿಷದಲ್ಲೇ ಹೋಟೆಲ್ ಗೆ  ತನ್ನ ಇಬ್ಬರು ಮಕ್ಕಳೊಂದಿಗೆ ಆಗಮಿಸಿದ ಸೈಯದ್ ಅಹಮ್ಮದ್ ಜಮೇದಾರ್ ಮತ್ತು ಇಬ್ಬರು ಮಕ್ಕಳು ಸೇರಿ ನನ್ನ ಮೇಲೆ ಏಕಾಏಕೀ ಕಾಲಿನಿಂದ ಹೊಡೆದಿದ್ದು, ನಂತರ ಅಲ್ಲಿಯೇ ಇದ್ದ ಕುರ್ಚಿ,  ಮೇಜನ್ನು ತೆಗೆದುಕೊಂಡು ನನ್ನ ಮಏಲೆ ಎಸೆದರು. ಅಲ್ಲಿಯೇ ಕಟ್ಟಿಗೆಯಿಂದ ಮತ್ತು ಕೈ ಕಾಲುಗಳಿಂದ ಮನಸ್ಸೊಇಚ್ಚೆ ನನ್ನ ಎದೆಗೆ ಮುಖಕ್ಕೆ ಹೊಟ್ಟೆಗೆ ಬೆನ್ನಿಗೆ ಜನನಾಂಗಕ್ಕೆ ಮಾರಣಂತಿಕವಾಗಿ ಹೊಡೆದರು. ನಾನು ಎಷ್ಟೆ ಅಂಗಲಾಚಿ ಬೇಡಿಕೊಂಡರು ಅವರು ನನ್ನನ್ನು ಬಿಡಲಿಲ್ಲ ಸೈಯದ್ ಅಹಮ್ಮದ್ ಜಮೇದಾರ್ ರವರು ನನಗೆ ಏನಾಲೇ ನಾಯಕ ಸೂಳೆ ಮಗನೆ ನನ್ನ ಸಂಬಂಧಿಕನ ಹೋಟೆಲ್ ಗೆ ಬಂದು ನಕರ ಮಾಡುತ್ತೀಯಾ ಏನಲೇ ಬೋಳಿಮಗನೇ, ನಾನು ಪೊಲೀಸ್ ಇಲಾಖೆಯಲ್ಲಿದ್ದೇನೆ. ಯಾವನು ನನ್ನನ್ನು ಏನು ಮಾಡಿಕೊಳ್ಳುವುದಿಲ್ಲ. ನಾನು ನನ್ನ ಅಳಿಯಂದಿರು ಮತ್ತು ನನ್ನ ಮಕ್ಕಳು ನಿನ್ನನ್ನು ಇಲ್ಲೇ ಸಾಯಿಸುತ್ತೇವೆ ಲೇ ನಿನ್ನನ್ನು ಯಾರು ಬಂದು ಬಿಡಿಸಿಕೊಳ್ಳುತ್ತಾರೋ ನೋಡಿಕೊಳ್ಳುತ್ತೇವೆ ಎಂದು ಇನ್ನೂ ಜೋರಾಗಿ ಎಲ್ಲರೂ ಸೇರಿ ಅಂದರೆ ಸಯ್ಯದ್ ಅಹಮ್ಮದ್ (ಜಮೇದಾರ್), ಆತನ ಇಬ್ಬರು ಮಕ್ಕಳು ಮತ್ತು ಆತನ ಇಬ್ಬರು ಅಳಿಯಂದಿರಾದ ಅಬ್ದುಲ್ ಅಹೀಮ್ ಮತ್ತು ಅಬ್ದುಲ್ ಬಾಕ್ವೆ ನನ್ನನ್ನು ಉರುಳಾಡಿಸಿಕೊಂಡು ಹೊಡೆದರು. ಆಗ ನಾನು ಜೀವವನ್ನು ಉಳಿಸಿಕೊಳ್ಳಲು ಜೋರಾಗಿ ಕೂಗಿಕೊಂಡೆ. ಅದು ಸಾರ್ವಜನಿಕ ಸ್ಥಳವಾಗಿರುವುದರಿಂದ ಸಾರ್ವಜನಿಕರು ಗುಂಪು-ಗುಂಪಾಗಿ ನೋಡುತ್ತಾ ನಿಂತಿದ್ದರು. ಸೈಯ್ಯದ್ ಅಹಮ್ಮದ್ (ಜಮೇದಾರ್) ಪೊಲೀಸ್ ಇಲಾಖೆಯಲ್ಲಿ ಇರುವುದರಿಂದ ಯಾರೊಬ್ಬರು ನನ್ನನ್ನು ಬಿಡಿಸಿಕೊಳ್ಳಲು ಬರಲಿಲ್ಲ. ಕೊನೆಗೆ ನನ್ನ ನರಳಾಟವನ್ನು ನೋಡಲಾರದೇ ನನ್ನ ಜೊತೆಗೆ ಬಂದಿದ್ದ, ಹನುಮೇಶ, ಕಾಶಪ್ಪ, ಭಾಸ್ಕರ್, ಚಂದ್ರು ನನ್ನನ್ನು ಸೈಯ್ಯದ್ ಅಹಮ್ಮದ್ ಮತ್ತು 
ಅವರ ಅಳಿಯಂದಿರು ಮತ್ತು ಅವರ ಮಕ್ಕಳಿಂದ ಬಿಡಿಸಿಕೊಂಡು, ಕೂಡಲೇ ಸಂಡೂರು ಸರಕಾರಿ ಅಸ್ಪತ್ರೆಗೆ ದಾಖಲಿಸಿದರು. ಆದ ಕಾರಣ ನನ್ನ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದವರ ವಿರುದ್ದ ದೂರನ್ನು ದಾಖಲಿಸಿಕೊಂಡು ನನಗೆ ನ್ಯಾಯ ನಿಡಬೇಕೆಂದು ತಮ್ಮಲ್ಲಿ ಕೇಳಿಕೊಳ್ಳುತ್ತಿದ್ದೇನೆ ಈ ದೂರನ್ನು ನಾನೇ ಖುದ್ದಾಗಿ ನನ್ನ ಮಗನಾದ ರಾಕೇಶ.ಬಿ. ನಿಗೆ ಹೇಳಿ ಬರೆಸಿ ನಂತರ ಓದಿಸಿ ಕೇಳಿ ಠಾಣೆಗೆ ಲಿಖಿತ ದೂರನ್ನು ನೀಡಿದ್ದನ್ನು ಸ್ವೀಕರಿಸಿ, ಠಾಣೆಗೆ ವಾಪಾಸ್ ರಾತ್ರಿ 10-15 ಗಂಟೆಗೆ ಬಂದು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿರುತ್ತದೆ
Sirigeri PS
23 Cr.No:0005/2016
(KARNATAKA POLICE ACT, 1963 U/s 87 )
11/01/2016 Under Investigation
 KARNATAKA POLICE ACT 1963 - Street Gambling (87)
Brief Facts :  ದಿನಾಂಕ: 11-01-2016 ರಂದು ಸಂಜೆ 7.00 ಗಂಟೆಗೆ ಶ್ರೀ. ನಿರಂಜನ ಪಿಎಸ್ಐ ಸಿರಿಗೇರಿ ಠಾಣೆ, ರವರು ಠಾಣೆಗೆ ಬಂದು ಮೂಲ ಪಂಚನಾಮೆ, ಮಾಲು, ಮತ್ತು ದೂರನ್ನು ನೀಡಿದ್ದು ಸಾರಾಂಶ: ದಿನಾಂಕ: 11-01-2016 ರಂದು ಮಧ್ಯಾಹ್ನ 4ಗಂಟೆಗೆ ಠಾಣೆಯ ಸರಹದ್ದಿನ ಕರೂರು  ಗ್ರಾಮದ ಕೊಟ್ರಬಸವೇಶ್ವರ  ದೇವಸ್ಥಾನದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ 11ಜನರು ಕೂಡಿ  ನಸೀಬಿನ ಇಸ್ಪೀಟ್ ಜೂಜಾಟ ಆಡುತ್ತಿದ್ದಾರೆಂದು ಖಚಿತ ಮಾಹಿತಿ ಬಂದ ಮೇರೆಗೆ ಪಿಎಸ್ಐರವರು ಪಂಚರು ಮತ್ತು ಸಿಬ್ಬಂದಿ ಯೊಂದಿಗೆ ಇಲಾಖೆಯ ಜೀಪ್ ನಂಬರ್ ಕೆ.ಎ-34-ಜಿ-269 ರಲ್ಲಿ ಹೆಚ್ ಸಿ46,ಪಿಸಿ-194.638.1162.1223 ರವರೊಂದಿಗೆ ಸಂಜೆ 5:00 ಗಂಟೆಗೆ ಕರೂರು ಗ್ರಾಮದ ಕೊಟ್ರಬಸವೇಶ್ವರ ದೇವಸ್ಥಾನದ ಹತ್ತಿರ ಸಾರ್ವಜನಿಕ ಸ್ಥಳದಲಿ ಜೂಜಾಟ ಆಡಲು ಸೇರಿದ ಜನರ ಗುಂಪಿನ ಹತ್ತಿರ ಹೋಗಿ ಇಸ್ಪೀಟ್ ಜೂಜಾಟದಲ್ಲಿ ತೊಡಗಿದ್ದವರ ಮೇಲೆ ದಾಳಿ ಮಾಡಿ ಒಟ್ಟು 11 ಜನರನ್ನು ಜೂಜಾಟದಲ್ಲಿ ದೊರೆತ ಒಟ್ಟು  ನಗದು ಹಣ ರೂ. 6800/- ಪಂಚನಾಮೆ ಅಡಿಯಲ್ಲಿ ಜಪ್ತು ಮಾಡಿಕೊಂಡು ಬಂದಿದ್ದಾಗಿ ಇವರ ಮೇಲೆ ಕ್ರಮ ಜರುಗಿಸಲು ಸೂಚಿಸಿದ ಮೇರೆಗೆ ಠಾಣೆ ಗುನ್ನೆ  ನಂ :05/2016 ಕಲಂ :87 ಕೆಪಿ ಯಾಖ್ಟ್  ರಿತ್ಯ ನೊಂದಾಯಿಸಿಕೊಂಡಿರುತ್ತೇನೆ.
Siruguppa PS
24 Cr.No:0005/2016
(CODE OF CRIMINAL PROCEDURE, 1973 U/s 109 )
11/01/2016 Under Investigation
CrPC - Security For Good Behaviour (Sec 109)
Brief Facts :  ನಾನು ಎಸ್.ತಿಪ್ಪೇರುದ್ರಪ್ಪ   ಪಿ.ಎಸ್.ಐ (ಸಿ) ಆದ ನಾನು  ಮಾನ್ಯ ನ್ಯಾಯಲಯದಲ್ಲಿ ನಿವೇದಿಸಿಕೊಳ್ಳುವುದೇನೆಂದರೆ ದಿನಾಂಕ 11/01/2016 ರಂದು ಬೆಳಿಗ್ಗೆ  9-00  ಗಂಟೆಗೆ ಅಪರಾಧ ಸಿಬ್ಬಂದಿಯವರಾದ ಪಿಸಿ 128, 896 ಮತ್ತು ರವರನ್ನು ಕರೆದುಕೊಂಡು ಸಿರುಗುಪ್ಪ ಪಟ್ಟಣ ಮತ್ತು ಹೊರವಲಯ ಕಡೆಗ  ಗಸ್ತು ಕರ್ತವ್ಯಕ್ಕೆಂಡು ಠಾಣೆಯಿಂದ ಮೋಟಾರು ಸೈಕಲಗಳಲ್ಲಿ ಹೊರಟಿದ್ದು ಸಿರುಗುಪ್ಪ ಪಟ್ಟಣದ ಮಹಾವೀರ ನಗರ ಕೃಷ್ಣನಗರ ,ಕೆ.ಹೆಚ್.ಬಿ ಕಾಲೋನಿ, ಸದಾಶಿವನಗರ, ಪ್ರಮುಖ ಬೀದಿಗಳಲ್ಲಿ ಗಸ್ತು ಕರ್ತವ್ಯ ನಿರ್ವಹಿಸತ್ತಾ  ದೇಶನೂರು ರಸ್ತೆಯ ಕಡೆಗೆ ಹೊಗುತ್ತಿರುವಾಗ ಮದ್ಯಾಹ್ನ 10-00 ,ಗಂಟೆಗೆ ವ್ಯಕ್ತಿ ಗಾಂಧಾರಮ್ಮ ಗುಡಿ ಹತ್ತಿರ ನಿಂತಿದ್ದ ಒಬ್ಬ ವ್ಯಕ್ತಿ ಪೊಲೀಸ್ರಾದ ನಮ್ಮನ್ನು ನೋಡಿ ತನ್ನ ಮುಖವನ್ನು ತಮ್ಮ  ಕೈಗಳಿಂದ ಮರೆಮಾಚಿಕೊಂಡು ಅಲ್ಲಿಂದ ಹಿಂದಕ್ಕೆ ತಿರುಗಿ ತಪ್ಪಿಸಿಕೊಂಡು ಹೋಗಲು ಪ್ರಯತ್ನಿಸಿದವನನ್ನು   ನೋಡಿ ಶಂಕಿಸಿ ಸದರಿಯವರನ್ನು  ಸಿಬ್ಬಂದಿಯವರೊಂದಿಗೆ ಹಿಡಿದುಕೊಂಡು ಅವರು ತನ್ನ ಹೆಸರು ಮತ್ತು ವಿಳಾಸವನ್ನು ವಿಚಾರಿಸಲು ಅವರು ಗಾಭರಿಯಿಂದ ತೊದಲುತ್ತಾ ತನ್ನ ಹೆಸರು ನಾಗಪ್ಪ   ಎಂದು ತಿಳಿಸಿದ ಅವನನ್ನು ಪುನಃ ವಿಚಾರಿಸಲುತನ್ನ ಹೆಸರು ನಾಗಪ್ಪ ತಂದೆ ತಿಮ್ಮಪ್ಪ ವ:38 ವರ್ಷ ನಾಯಕರು ಜನಾಂಗ ವಾಸ:ಬೂದಗುಪ್ಪ ಸಿರುಗುಪ್ಪ ತಾ:   ಎಂದು ತಿಳಿಸಿದ್ದು ಅವರನ್ನು  ಆ ಸಮಯದಲ್ಲಿ ಆ ಸ್ಥಳದಲ್ಲಿ ಹಾಜರಿದ್ದು ಪೊಲೀಸರಾದ ನಮ್ಮನ್ನು ನೋಡಿ ತಪ್ಪಿಸಿಕೊಂಡು ಹೋದ ಬಗ್ಗೆ ವಿಚಾರಿಸಲು ಸಮರ್ಪಕ ವಾದ ಉತ್ತರವನ್ನು ನೀಡದೇಇರುವುದರಿಂದ ಆ ಸ್ಥಳದಲ್ಲಿ ಆ ಸಮಯದಲ್ಲಿ ಯಾವುದಾದರೂ ಸ್ವತ್ತಿನ ಘೋರ ಸ್ವರೂಪದ ಅವರಾಧವನ್ನು ವೆಸಗಲು ಬಂದಿರಬಹುದೆಂದು ಶಂಕಿಸಿ ಮುಂಜಾಗೃತಾಕ್ರಮವಾಗಿ ಆರೋಪಿತನನ್ನು ಸದರಿ ಯವನೊಂದಿಗೆ ಠಾಣೆಗೆ 11 -00ಎ. ಎಮ್ ಗಂಟೆಗೆ ಬಂದು ಸದರಿಯವನ ವಿರುದ್ದ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ