ಶನಿವಾರ, ಜನವರಿ 16, 2016

PRESS NOTE OF 16/01/2016

Crime Key Report From   To   
Sl. No FIR No FIR Date Crime Group - Crime Head Stage of case
Bellary Rural PS
1 Cr.No:0016/2016
(KARNATAKA MINOR MINERAL CONSISTENT RULE 1994 U/s 42,43,44 ; KARNATAKA LAND REVENUE ACT 1964 U/s 192(A),73 ; MMDR (MINES AND MINERALS REGULATION OF DEVELOPMENT) ACT 1957 U/s 21(1) ; IPC 1860 U/s 379 )
15/01/2016 Under Investigation
KARNATAKA STATE LOCAL ACTS - Karnataka Minor Mineral Consistent Rule 1994
Brief Facts :  ದಿನಾಂಕ: 15-1-2016 ರಂದು ಬೆಳಿಗ್ಗೆ 7-30 ಗಂಟೆಗೆ ಠಾಣೆಯ ಪಿ.ಎಸ್.ಐ ರವರಾದ ಶ್ರೀ. ಕೆ. ಹೊಸಕೇರಪ್ಪರವರು ಠಾಣೆಗೆ ಹಾಜರಾಗಿ ದೂರು ನೀಡಿದ್ದು ಸಾರಾಂಶ: ಈ ದಿನ ದಿನಾಂಕ: 15-1-2016 ರಂದು ಬೆಳಿಗ್ಗೆ ತಮಗೆ ಠಾಣೆಯ ಸರಹದ್ದು ಕಮ್ಮರಚೇಡು ಗ್ರಾಮದ ಬಳಿ ಇರುವ ಹಗರಿ ಹಳ್ಳದಲ್ಲಿ ಕೆಲವು ಜನರು ಟ್ರಾಕ್ಟರ್ ಟ್ರಾಲಿಗಳಲ್ಲಿ ಮರಳನ್ನು ತುಂಬಿಕೊಂಡು ಅಕ್ರಮವಾಗಿ ಮರಳನ್ನು ತುಂಬಿಕೊಂಡು ಸಾಗಾಣಿಕೆ ಮಾಡುತ್ತಿರುತ್ತಾರೆಂದು ಖಚಿತ ವರ್ತಮಾನ ಬಂದ ಮೇರೆಗೆ ಸಿಬ್ಬಂದಿಯವರಾದ ಹೆಚ್.ಸಿ-43 ಪಿ.ಸಿ-369-839 ಮತ್ತು ಪಂಚರೊಂದಿಗೆ ರವರೊಂದಿಗೆ ಇಲಾಖೆಯ ಜೀಪ್ ನಂಬರ್ ಕೆ.ಎ-34-ಜಿ-303 ರಲ್ಲಿ ಚಾಲಕ ಎ.ಪಿ.ಸಿ-89 ರವರೊಂದಿಗೆ ಕಮ್ಮರಚೇಡು ಗ್ರಾಮದ ಹಗರಿ ಹಳ್ಳದಲ್ಲಿ ಹೋಗಿ ಬೆಳಿಗ್ಗೆ 6-15 ಗಂಟೆಗೆ ದಾಳಿ ಮಾಡಿದಾಗ 2 ಟ್ರಾಕ್ಟರ್ ಟ್ರಾಲಿಗಳನ್ನು ನಿಲ್ಲಿಸಿಕೊಂಡು ಅಕ್ರಮವಾಗಿ ಮರಳನ್ನು ಸಾಗಾಣಿಕೆ ಮಾಡುತ್ತಿದ್ದ ಜನರು ಪರಾರಿಯಾಗಿದ್ದು ಸ್ಥಳದಲ್ಲಿದ್ದ 1] ನೊಂದಣಿ ಸಂಖ್ಯೆ ಇರದ ನೀಲಿ ಬಣ್ಣದ ನ್ಯೂ ಹಾಲೆಂಡ್ ಕಂಪನಿಯ ಟ್ರಾಕ್ಟರ್ ಇಂಜಿನ್ ಸಂಖ್ಯೆ: 5325ಡಿ16900 ಮತ್ತು ಇದಕ್ಕೆ ಜೋಡಿಸಿದ ನೀಲಿ ಬಣ್ಣದ ಟ್ರಾಲಿ ಚಾಸಿ ಸಂಖ್ಯೆ: ಕೆ.ಎಂ.ಪಿ/ಎಸ್.ಟಿ467/468, ಟ್ರಾಲಿಯಲ್ಲಿ ಲೋಡು ಮಾಡಿದ 2 ಮೆಟ್ರಿಕ್ ಟನ್ ಮರಳನ್ನು 2] ಕೆಂಪು ಬಣ್ಣದ ಮ್ಯಾಸೆ ಫರ್ಗಷನ್ 241 ಡಿ.ಐ ಟ್ರಾಕ್ಟರ ಇದ್ದು ನೊಂದಣಿ ಸಂಖ್ಯೆ: ಕೆ.ಎ-34-ಟಿ-9936 ಅ ಇದಕ್ಕೆ ಜೋಡಿಸಿದ ಟ್ರಾಲಿ ನೊಂದಣಿ ಸಂಖ್ಯೆ: ಕೆ.ಎ-34-ಟಿ-5801 ಟ್ರಾಲಿಯಲ್ಲಿ ಲೋಡು ಮಾಡಿದ ಅಂದಾಜು 2 ಮೆಟ್ರಿಕ್ ಟನ್ ಮರಳು ಮತ್ತು ಸ್ಯಾಂಪಲ್ ಮರಳನ್ನು ಜಪ್ತು ಮಾಡಿಕೊಂಡು ಬಂದಿದ್ದು ಮೇಲ್ಕಂಡ ಟ್ರಾಕ್ಟರ್ ಮತ್ತು ಟ್ರಾಲಿಗಳ ಚಾಲಕರು ಮತ್ತು ಮಾಲೀಕರು ಕಮ್ಮರಚೇಡು ಗ್ರಾಮದ ಬಳಿ ಇರುವ ಹಗರಿ ಹಳ್ಳದಲ್ಲಿ ಮರಳನ್ನು ಕಳ್ಳತನ ಮಾಡಿ ಟ್ರಾಕ್ಟರ್ ಟ್ರಾಲಿಯಲ್ಲಿ ತುಂಬಿಕೊಂಡು ಸಾಗಾಣಿಕೆ ಮಾಡುತ್ತಿದ್ದರಿಂದ ಇವರ ಮೇಲೆ ಪ್ರಕರಣ ದಾಖಲು ಮಾಡಲು ಸೂಚಿಸಿದ ಮೇರೆಗೆ ಈ ಪ್ರ.ವ.ವರದಿ ಸಲ್ಲಿಸಿದೆ.
2 Cr.No:0017/2016
(IPC 1860 U/s 309 )
16/01/2016 Under Investigation
SUICIDE - Other Reasons
Brief Facts :  ದಿನಾಂಕ 15-01-2016 ರಂದು ರಾತ್ರಿ 7-00 ಗಂಟೆಗೆ ಲಕ್ಷ್ಮಯ್ಯ ವ: 25 ವರ್ಷ ಈತನು ಕಪ್ಪಗಲ್ ಗ್ರಾಮದ ತನ್ನ ಮನೆಯಲ್ಲಿ ಜೀವನದಲ್ಲಿ ಜಿಗುಪ್ಸೆ ಹೊಂದಿ ಯಾವುದೋ ಕಾರಣಕ್ಕೆ ಮನೆಯಲ್ಲಿದ್ದ 5-6 ಮಾತ್ರೆಗಳನ್ನು ಸೇವಿಸಿ ಅತ್ಮಹತ್ಯೆಗೆ ಪ್ರಯತ್ನಿಸಿ, ವಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದಾಗಿ ಈ ಬಗ್ಗೆ ಮುಂದಿನ ಕ್ರಮ ಜರುಗಿಸಲು ದೂರು.
Chittavadagi PS
3 Cr.No:0001/2016
(CODE OF CRIMINAL PROCEDURE, 1973 U/s 107 )
16/01/2016 Under Investigation
CrPC - Security For Good Behaviour (Sec 107 )
Brief Facts :  ದಿನಾಂಕ 08/08/2015 ರಂದು ಸಂಜೆ 4-00 ಗಂಟೆ ಸುಮಾರಿಗೆ ಪ್ರತಿವಾದಿಗಳು ಮುನಿರಾಳನ್ನು ಕೆಟ್ಟದೃಷ್ಟಿಯಿಂದ ನೋಡುತ್ತಾ ಚುಡಾಯಿಸುತ್ತಾ, ತಡೆದು ನಿಲ್ಲಿಸಿ  ಜಗಳ ಮಾಡಿ, ಅವಾಚ್ಯ ಶಬ್ದಗಳಿಂದ ಬೈದು,  ಕೈಯಿಂದ ಎಳೆದಾಡಿ ಮುನಿರಾಳ ಮಾನಕ್ಕೆ ಕುಂದುಂಟುಮಾಡಿ ಪ್ರಾಣ ಬೆದರಿಕೆ ಹಾಕಿದ್ದರಿಂದ ಸದರಿ ಪ್ರತಿವಾದಿಗಳ ವಿರುದ್ದ ಈಗಾಗಲೇ ಪ್ರಕರಣ ದಾಖಲಾಗಿ ತನಿಖೆ ಕೈಗೊಂಡಿರುತ್ತದೆ. ಈ ದಿನ ದಿನಾಂಕ 16/01/2016 ರಂದು ಬೆಳಿಗ್ಗೆ 11-00 ಗಂಟೆಗೆ ನಾನು ಸಿಬ್ಬಂದಿಯೊಂದಿಗೆ ಚಿತ್ತವಾಡಿಗಿ ಖಾಜನಗರ ರೈಲ್ವೆ ಗೇಟ್ ಹತ್ತಿರ ಗಸ್ತಿನಲ್ಲಿದ್ದಾಗ ಸದರಿ ಮೇಲ್ಕಂಡ ಪ್ರತಿವಾದಿಗಳು ಪುನಃ ಮುನೀರಾಳೊಂದಿಗೆ ಜಗಳ ಮಾಡಿ,  ಸಾರ್ವಜನಿಕ ಶಾಂತತೆ ಮತ್ತು ನೆಮ್ಮದಿಗೆ ಭಂಗವುಂಟು ಮಾಡಿ ಹಾಗು ಕಾನೂನು ಸುವ್ಯವಸ್ಥೆಗೆ ಧಕ್ಕೆವುಂಟು ಮಾಡುವ ಸಂಭವ ಕಂಡುಬಂದಿದ್ದರಿಂದ ಪ್ರತಿವಾದಿಗಳ ವಿರುದ್ದ ಮುಂಜಾಗ್ರತ ಕ್ರಮವಾಗಿ ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿರುತ್ತದೆ
4 Cr.No:0002/2016
(CODE OF CRIMINAL PROCEDURE, 1973 U/s 107 )
16/01/2016 Under Investigation
CrPC - Security For Good Behaviour (Sec 107 )
Brief Facts :  ದಿನಾಂಕ 08/08/2015 ರಂದು ಸಂಜೆ 4-00 ಗಂಟೆ ಸುಮಾರಿಗೆ ಪ್ರತಿವಾದಿಗಳು ಮುನಿರಾಳನ್ನು ಕೆಟ್ಟದೃಷ್ಟಿಯಿಂದ ನೋಡುತ್ತಾ ಚುಡಾಯಿಸುತ್ತಾ, ತಡೆದು ನಿಲ್ಲಿಸಿ  ಜಗಳ ಮಾಡಿ, ಅವಾಚ್ಯ ಶಬ್ದಗಳಿಂದ ಬೈದು,  ಕೈಯಿಂದ ಎಳೆದಾಡಿ ಮುನಿರಾಳ ಮಾನಕ್ಕೆ ಕುಂದುಂಟುಮಾಡಿ ಪ್ರಾಣ ಬೆದರಿಕೆ ಹಾಕಿದ್ದರಿಂದ ಸದರಿ ಪ್ರತಿವಾದಿಗಳ ವಿರುದ್ದ ಈಗಾಗಲೇ ಪ್ರಕರಣ ದಾಖಲಾಗಿ ತನಿಖೆ ಕೈಗೊಂಡಿರುತ್ತದೆ. ಈ ದಿನ ದಿನಾಂಕ 16/01/2016 ರಂದು ಬೆಳಿಗ್ಗೆ 11-00 ಗಂಟೆಗೆ ನಾನು ಸಿಬ್ಬಂದಿಯೊಂದಿಗೆ ಚಿತ್ತವಾಡಿಗಿ ಖಾಜನಗರ ರೈಲ್ವೆ ಗೇಟ್ ಹತ್ತಿರ ಗಸ್ತಿನಲ್ಲಿದ್ದಾಗ ಸದರಿ ಮೇಲ್ಕಂಡ ಪ್ರತಿವಾದಿಗಳು ಪುನಃ ಮುನೀರಾಳೊಂದಿಗೆ ಜಗಳ ಮಾಡಿ,  ಸಾರ್ವಜನಿಕ ಶಾಂತತೆ ಮತ್ತು ನೆಮ್ಮದಿಗೆ ಭಂಗವುಂಟು ಮಾಡಿ ಹಾಗು ಕಾನೂನು ಸುವ್ಯವಸ್ಥೆಗೆ ಧಕ್ಕೆವುಂಟು ಮಾಡುವ ಸಂಭವ ಕಂಡುಬಂದಿದ್ದರಿಂದ ಪ್ರತಿವಾದಿಗಳ ವಿರುದ್ದ ಮುಂಜಾಗ್ರತ ಕ್ರಮವಾಗಿ ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿರುತ್ತದೆ.
Gadiganur PS
5 Cr.No:0005/2016
(IPC 1860 U/s 279,337 )
15/01/2016 Under Investigation
MOTOR VEHICLE ACCIDENTS NON-FATAL - National Highways
Brief Facts :  ದಿನಾಂಕ:15.01.2016 ರಂದು ಮಧ್ಯಾಹ್ನ:01:15 ಗಂಟೆ ಸುಮಾರಿಗೆ ಸಂಡುರು ತಾಲ್ಲೂಕು ಕುರೇಕುಪ್ಪ ಕ್ರಾಸ್ ಬಳಿ ಕಲಿ ವೈನ್ ಶಾಪ್ ಹತ್ತಿರ ಎನ್.ಹೆಚ್.63 ರಸ್ತೆಯಲ್ಲಿ ಪಿರ್ಯಾದಿ ಮತ್ತು ಫಿರ್ಯಾದಿಯ ಮಾವನಾದ ಸುಗನಗೌಡ ರವರು ತಮ್ಮ ಮೋಟಾರ್ ಸೈಕಲ್ ನಂ:ಟಿ.ಎನ್.04/ಎ.ಎಲ್.5680 ನೇದ್ದರಲ್ಲಿ ತೋರಣಗಲ್ಲು ಕಡೆಯಿಂದ ಬರುತ್ತಿರುವಾಗ್ಗೆ ತಮ್ಮ ಎದುರಾಗಿ ಅಂದರೆ ಹೊಸಪೇಟೆ ಕಡೆಯಿಂದ ಮೋಟಾರ್ ಸೈಕಲ್ ನಂ: ಎಪಿ.02/ಬಿಎ.5136 ನೇದ್ದನ್ನು ಅದರ ಚಾಲಕನಾದ ವೀರೇಶ ರವರು ಅತಿ ವೇಗವಾಗಿ ಮತ್ತು ಅಜಾಗುರುಕತೆಯಿಂದ ನೆಡೆಸಿಕೊಂಡು ಬಂದು ಫಿಯಾದಿಯ ಮೋಟಾರ್ ಸೈಕಲ್‌ಗೆ ಢಿಕ್ಕಿ ಹೊಡೆಸಿದ್ದರಿಂದ ಸುಗನಗೌಡ ಮತ್ತು ವಿರೇಶರವರಿಗೆ ತೆರಚಿದ ರಕ್ತಗಾಯ ಮತ್ತು ಒಳಪೆಟ್ಟು ಗಾಯಗಳು ಆಗಿರುತ್ತವೆಂದು ಗಾಯಗೊಂಡವರನ್ನು ಚಿಕಿತ್ಸೆಗಾಗಿ ಜಿಂದಾಲ್ ಸಂಜೀವಿನಿ ಆಸ್ಪತ್ರೆಯಲ್ಲಿ ದಾಖಲಿಸಿ, ಅಪಘಾತಪಡಿಸಿದ ಮೋಟಾರ್ ಸೈಕಲ್ ನಂ:ಎಪಿ.02/ಬಿಎ.5136 ನೆದ್ದರ ಕಾನೂನು ಕ್ರಮ ಜರುಗಿಸುವಮತೆ ಲಿಖಿತ ದೂರಿನ ಸಾರಾಂಶವಿದ್ದ ಮೇರಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದೆ( ದೂರು ಪ್ರತಿಯನ್ನು ಲಗತ್ತಿಸಿದೆ).
Gudekote PS
6 Cr.No:0013/2016
(IPC 1860 U/s 279,304(A) )
16/01/2016 Under Investigation
MOTOR VEHICLE ACCIDENTS FATAL - Other Roads
Brief Facts :  ದಿನಾಂಕ 15/01/2016 ರಂದು ರಾತ್ರಿ ಸುಮಾರು 08-40 ಗಂಟೆ ಸಮಯದಲ್ಲಿ ಮೃತ ಚನ್ನಪ್ಪನು, ತಮ್ಮ ಊರು ಎಕ್ಕೆಗುಂದಿ ಗ್ರಾಮದಿಂದ ಬಡೆಲೆಡಕು  ಗ್ರಾಮಕ್ಕೆ ಹೋಗುವಾಗ, ರಾತ್ರಿ ಸುಮಾರು 09-00 ಗಂಟೆ ಸಮಯದಲ್ಲಿ ಬೆಳ್ಳಗಟ್ಟೆ ಕಡೆಯಿಂದ ಕಾಟ್ರಹಳ್ಳಿ ಕ್ರಾಸ್ ಕಡೆಗೆ ಬರುವ ರಸ್ತೆಯಲ್ಲಿ ತನ್ನ ಸೈಕಲ್ ಮೋಟಾರ್ ನಂಬರ್ ಕೆ ಎ 03/ ಈ ಡಿ 9106 ನೇದ್ದನ್ನು ನಿರ್ಲಕ್ಷತನದಿಂದ ಅತೀ ಜೋರಾಗಿ ಚಾಲಾಯಿಸಿಕೊಂಡು ಹೋಗುವಾಗ ಕಾಟ್ರಹಳ್ಳಿ ಕ್ರಾಸ್ ತಿರುವಿನಲ್ಲಿ ನಿಯಂತ್ರಣ ತಪ್ಪಿ ತಿರುವಲು ಸಾದ್ಯವಾಗದೇ ನೇರವಾಗಿ ರಸ್ತೆ ಬದಿಯಲ್ಲಿರುವ, ರಾ- ಹೆದ್ದಾರಿ -131 ಅಂತಾ ಬರೆದು ನಿಲ್ಲಿಸಿರುವ  ಬೋರ್ಡ್  ದಾಟಿ ರಸ್ತೆ ಬದಿಯಲ್ಲಿರುವ ಕುಣಿಯಲ್ಲಿ ತನ್ನ ಮೋಟಾರ್ ಸೈಕಲ್ ಸಮೇತ ಬಿದ್ದಾಗ, ಎದೆಗೆ ತೀವ್ರ ಪೆಟ್ಟಾಗಿ  ಮೋಟಾರ್ ಸೈಕಲ್ ಅಪಘಾತದಲ್ಲಿ  ಚನ್ನಪ್ಪನು ಮೃತ ಪಟ್ಟಿರುತ್ತಾನೆಂದು ಮುಂದಿನ ಕ್ರಮ ಜರುಗಿಸಲು ಮೃತನ ಅಣ್ಣನಾದ, ಸತ್ಯಪ್ಪ ತಂದೆ ಯರ್ರಬಾಲಪ್ಪ ವಾಸ ಎಕ್ಕೆಗುಂದಿ ಗ್ರಾಮ, ಹಾಲಿವಾಸ ಚಳ್ಳಿಕೇರೆ, ಇವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಮೇರಿಗೆ ಈ ಪ್ರಕರಣ ದಾಖಲಿಸಿದೆ.
Kudligi PS
7 Cr.No:0007/2016
(IPC 1860 U/s 363 )
15/01/2016 Under Investigation
KIDNAPPING AND ABDUCTION - Procuration Of Minor Girls - For Other 
Purpose
Brief Facts :  ಈ ದಿನ ದಿನಾಂಕ:೧೫/೦೧/೨೦೧೬ ರಂದು ರಾತ್ರಿ ಫಿರ‍್ಯಾದಿದಾರರಾದ ಶ್ರೀಮತಿ ತಳವಾರ ಹನುಮಂತಮ್ಮ ಗಂಡ ತಳವಾರ ಓಬಯ್ಯ, ಸಾ: ಬಂಡ್ರಿ ಗ್ರಾಮ, ಇವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶದಲ್ಲಿ ತನಗೆ ಇಬ್ಬರು ಹೆಣ್ಣು ಮಕ್ಕಳಿದ್ದು. ೧) ಕುಮಾರಿ ತಳವಾರ ದುರುಗಮ್ಮ ವಯಸ್ಸು ೧೬ ವರ್ಷ, ೨) ಕುಮಾರಿ ತಳವಾರ ಬಸಮ್ಮ ವಯಸ್ಸು ೧೧ ವರ್ಷ ಅಂತಾ ಇದ್ದು. ತನ್ನ ಹಿರಿಯ ಮಗಳಾದ ಕುಮಾರಿ ತಳವಾರ ದುರುಗಮ್ಮ ರವರು ಬಂಡ್ರಿ ಗ್ರಾಮದಲ್ಲಿರುವ ಸರ್ಕಾರಿ ಶಾಲೆಯಲ್ಲಿ ೪ ನೇ ತರಗತಿಯವರಗೆ ವಿಧ್ಯಾಭ್ಯಾಸ ಮಾಡಿ ಬಿಟ್ಟಿದ್ದು. ಈಗ ಹೊಲಮನೆ ಕೆಲಸ ಮಾಡಿಕೊಂಡಿದ್ದು. ತಮ್ಮ ಮನೆಯ ಸ್ವಲ್ಪ ದೂರದಲ್ಲಿ ತಮ್ಮ ಜನಾಂಗದ ಲೇಸಿ ಬಂಗಾರಿ ಬಸಮ್ಮ ರವರ ಮನೆಯಿದ್ದು. ಆಕೆಯ ಮಗನಾದ ರಮೇಶ ಈತನು ಈಗ್ಗೆ ೧ ವರ್ಷದಿಂದ ತಾನು, ತನ್ನ ಹಿರಿಯ ಮಗಳಾದ ಕುಮಾರಿ ತಳವಾರ ದುರುಗಮ್ಮಳೊಂದಿಗೆ ತಮ್ಮ ಹೊಲಕ್ಕೆ ಕೆಲಸಕ್ಕೆ ಹೋಗುವಾಗ ಬರುವಾಗ ತನ್ನ ಮಗಳೊಂದಿಗೆ ಮಾತನಾಡುವುದು ಮತ್ತು ಸಲಿಗೆಯಿಂದ ಇರುತ್ತಿದ್ದು ತಾನು ಈಗ್ಗೆ ರಮೇಶನಿಗೆ ತನ್ನ ಮಗಳೊಂದಿಗೆ ಮಾತನಾಡದೇ ಇರುವಂತೆ ಎಚ್ಚರಿಕೆಯನ್ನು ನೀಡಿದ್ದಾಗಿ. ದಿನಾಂಕ:೧೩-೦೧-೨೦೧೬ ರಂದು ರಾತ್ರಿ ೯-೦೦ ಗಂಟೆಗೆ ತಮ್ಮ ಮನೆಯಲ್ಲಿ ತಾನು ತನ್ನ ಗಂಡ ತನ್ನ ಅತ್ತೆ ಬಸಮ್ಮ ಮತ್ತು ಇಬ್ಬರು ಹೆಣ್ಣು ಮಕ್ಕಳು ಊಟ ಮಾಡಿಕೊಂಡು ಟಿ.ವಿ ಧಾರವಾಹಿಯನ್ನು ರಾತ್ರಿ ೧೦-೦೦ ಗಂಟೆಯವರಗೆ ಟಿ.ವಿಯನ್ನು ನೋಡಿ ಮಲಗಿಕೊಂಡೆವು. ನನ್ನ ಇಬ್ಬರು ಮಕ್ಕಳು ನನ್ನ ಗಂಡನ ತಾಯಿಯಾದ ಬಸಮ್ಮ ರವರ ಹತ್ತಿರ ಮಲಗಿಕೊಂಡಿದ್ದರು. ರಾತ್ರಿ ೧೧-೩೦ ಗಂಟೆಗೆ ನನ್ನ ಅತ್ತೆ ಬಸಮ್ಮ ರವರು ಮೂತ್ರ ವಿಸರ್ಜನೆಗೆಂದು ಹೊರಗಡೆ ಎದ್ದು ಹೋಗಿ ಬಂದು ತನ್ನ ಪಕ್ಕದಲ್ಲಿ ಮಲಗಿದ್ದ ನನ್ನ ಹಿರಿಯ ಮಗಳಾದ ತಳವಾರ ದುರುಗಮ್ಮಳನ್ನು ಮುಟ್ಟಿ ನೋಡಲು ಆಕೆಯು ಇಲ್ಲದ್ದನ್ನು ನೋಡಿ ಅಲ್ಲೆ ಮಲಗಿಕೊಂಡಿದ್ದ ತನಗೆ ಮತ್ತು ತನ್ನ ಗಂಡ ತಳವಾರ ಓಬಯ್ಯ ರವರಿಗೆ ವಿಷಯವನ್ನು ತಿಳಿಸಿದ್ದು ಕೂಡಲೇ ತಾವು ರವರು ಮನೆಯ ಸುತ್ತಮುತ್ತಲು ಮತ್ತು ಊರಿನಲ್ಲಿರುವ ಎಲ್ಲಾ ಓಣಿ ಮತ್ತು ಬಂಡ್ರಿ ಗ್ರಾಮದಲ್ಲಿರುವ ತಮ್ಮ ಸಂಬಂಧಿಕರ ಮನೆಗಳಿಗೆ ಹೋಗಿ ತನ್ನ ಮಗಳನ್ನು ಹುಡುಕಾಡಲೂ ಸಿಗದೇ ಇದ್ದು. ತಮ್ಮ ಸಂಬಂಧಿಕರ ಊರುಗಳಾದ ಕೂಡ್ಲಿಗಿ, ತನ್ನ ತವರೂರಾದ ಗಜಾಪುರ ಹಾಗೂ ಇತರೆ ಕಡೆಗಳಲ್ಲಿ ಹುಡುಕಾಡಲು ಆಕೆಯು ಸಿಗಲಿಲ್ಲ. ತಮ್ಮ ಊರಿಗೆ ಬಂದು ತನ್ನ ಮಗಳೊಂದಿಗೆ ಹೊಲಕ್ಕೆ ಹೋಗುವಾಗ ಬರುವಾಗ ಸಲಿಗೆಯಿಂದ ಮಾತನಾಡಿಸುತ್ತಿದ್ದ ರಮೇಶ ಈತನು ಊರಿನಲ್ಲಿ ಇರುವ ಬಗ್ಗೆ ತಿಳಿಯಲು ಅವನು ಸಹ ತನ್ನ ಮಗಳು ತಮ್ಮ ಮನೆಯನ್ನು ಬಿಟ್ಟು ಹೋದ ದಿನದಿಂದ ಮನೆಯಲ್ಲಿರುವುದಿಲ್ಲವೆಂಬ ವಿಷಯ ತಿಳಿಯಿತು. ಈ ಬಗ್ಗೆ ನಮ್ಮೂರಿನ ಹಿರಿಯರಾದ ಡೆಲ್ಲಿ ಭೀಮಣ್ಣ ತಂದೆ ಲೇಟ್ ಬಸಪ್ಪ, ಶ್ರೀ.ಡಿ.ಹನುಮಂತಪ್ಪ ತಂದೆ ಹನುಮಂತಪ್ಪ, ನರಸಪ್ಪ ತಂದೆ ಓಬಯ್ಯ, ವೆಂಕಟೇಶ ತಂದೆ ದಾಸಪ್ಪ ರವರುಗಳಿಗೆ ವಿಷಯವನ್ನು ತಿಳಿಸಿದ್ದು. ಅವರುಗಳು ಈ ಬಗ್ಗೆ ದೂರು ನೀಡಲು ತಿಳಿಸಿದ್ದು. ತನ್ನ ಅಪ್ರಾಪ್ತ ವಯಸ್ಸಿನ ಮಗಳಾದ ದುರುಗಮ್ಮಳನ್ನು ರಮೇಶನು ಯಾವುದೋ ದುರುದ್ದೇಶದಿಂದ ಅಪಹರಣ ಮಾಡಿಕೊಂಡು ಹೋಗಿದ್ದು. ಇಲ್ಲಿಯವರೆಗೆ ತನ್ನ ಮಗಳ ಸಿಗದೇ ಇದ್ದುದರಿಂದ ಈ ದಿನ ತಡವಾಗಿ ಬಂದು ನನ್ನ ಮಗಳನ್ನು ಪತ್ತೆ ಹಚ್ಚಲು ಮತ್ತು ನನ್ನ ಮಗಳನ್ನು ಅಪಹರಣ ಮಾಡಿಕೊಂಡು ಹೋದ ರಮೇಶ ತಾಯಿ ಲೇಸಿ ಬಂಗಾರಿ ಬಸಮ್ಮ ಈತನ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ಇದ್ದ ದೂರಿನ ಮೇರೆಗೆ ಪ್ರಕರಣ ದಾಖಿಲಸಿಕೊಂಡು ತನಿಖೆ ಕೈಗೊಂಡಿದೆ.
8 Cr.No:0008/2016
(CODE OF CRIMINAL PROCEDURE, 1973 U/s 107 )
16/01/2016 Under Investigation
CrPC - Security For Good Behaviour (Sec 107 )
Brief Facts :  ನಿವೇದನೆ,
                 ಶ್ರೀ ಮಹಾಂತೇಶ್, ಟಿ ಪಿ.ಎಸ್.ಐ ಕೂಡ್ಲಿಗಿ ಪೊಲೀಸ್ ಠಾಣೆ ಆದ ನಾನು ಮಾನ್ಯರಲ್ಲಿ ನಿವೇದಿಸಿಕೊಳ್ಳುವ ವರದಿ ಏನಂದರೇ ನಿನ್ನೆಯ ದಿನ ದಿನಾಂಕ ೧೫/೦೧/೨೦೧೬ ರಂದು ಮದ್ಯಾಹ್ನ ೧೨-೫೦ ಗಂಟೆಯ ಸುಮಾರಿಗೆ ಕೂಡ್ಲಿಗಿ ಪಟ್ಟಣದ ಪಾದಗಟ್ಟೆ ಸರ್ಕಾಲ್ ಬಳಿ ಟಿಪ್ಪು ಸುಲ್ತಾನ ಸಂಘದ ಬೊರ್ಡ ಅನ್ನು   ಕಿತ್ತು ಹಾಕಿ  ಬಿಸಾಕಿದ ಬಗ್ಗೆ  ಯಾರೂ  ಈ ಬಗ್ಗೆ ಇಲ್ಲಿಯವರೆಗೆ ಠಾಣೆಗೆ ಹಾಜರಾಗಿ ದೂರು ಕೊಟ್ಟರುವುದಿಲ್ಲ  ಸದ್ರಿ ವಿಷಯವು ಸೂಕ್ಷ್ಮ ವಿಷಯ ವಾಗಿದ್ದರಿಂದ ನಾನು ನಿನ್ನೆ ರಾತ್ರಿ ಹಾಗು ಇಂದು ಬೆಳಿಗ್ಗೆ ಕೂಡ್ಲಿಗಿ ಪಟ್ಟಣದಲ್ಲಿ ಮಾಡಿದ  ಪೆಟ್ರೋಲಿಂಗ್ ನಿಂದ ಹಾಗು ಬಾತ್ಮೀದಾರರಿಂದ ಬಂದ ಮಾಹಿತೆಯಂತೆ ಬರುವ ದಿನಗಳಲ್ಲಿ ಈ ವಿಷಯಕ್ಕೆ ಸಂಭಂದಿಸಿದಂತೆ  ಕೂಢ್ಲಿಗಿ ಪಟ್ಟಣದಲ್ಲಿ  ಅಹಿತಕರ ಘಟನೆಗಳು ಸಂಭವಿಸುವ ಸಾದ್ಯ ಸಾದ್ಯತೆಗಳು ಕಂಡು ಬಂದಿದ್ದು ಸದ್ರಿ ವಿಷಯಕ್ಕೆ ಸಂಭಂದಿಸಿದಂತೆ ನಿನ್ನೆ ನಡೆದ ಮೇಲ್ಕಂಡ ಘಟನೆ ಸಂಭಂದಿಸಿದಂತೆ  ಯಾರೂ ಈ ರೀತಿ ಮಾಡಿರುತ್ತಾರೆಂದು ಖಚಿತವಾಗಿ ತಿಳಿದು ಬಂದಿರುವುದಿಲ್ಲ ಆದರೆ ಮೇಲಿನ ವಿಷಯಕ್ಕೆ  ಪುಷ್ಟೀಕರಣ ನೀಡಲು ಪಟ್ಟಣದ  ಗುಪ್ಪಾಲರ ವಿರುಪಾಕ್ಷಿ  ತಂದೆ  ಲೇಟ್ ಗುರುವಪ್ಪ, ೨೪ ವರ್ಷ, ವಾಲ್ಮೀಕಿ ಜನಾಂಗ, ಬೇಲ್ದಾರ ಕೆಲಸ, ವಾಸ ೧೫ ನೇ ವಾರ್ಡ, ಗುಪ್ಪಾಲರ ಓಣಿ, ಕೂಡ್ಲಿಗಿ ೨] ಪೆದ್ದ ವಿರುಪಯ್ಯನವರ ಶಶಿಕುಮಾರ @ ಶಶಿ ತಂದೆ ಲೇಟ್ ಶಂಕ್ರಪ್ಪ, ೩೦ವರ್ಷ,  ವಾಲ್ಮೀಕಿ ಜನಾಂಗ, ಕಾರ್ ಚಾಲಕ ವಾಸ ೮ನೇ ವಾರ್ಡ, ಅಜಾದ್ ನಗರ, ಕೂಡ್ಲಿಗಿ ೩] ಸಂತೋಷ ತಂದೆ ತಮ್ಮಯ್ಯನವರ  ಮಾರಣ್ಣ, ೩೩ವರ್ಷ, ವಾಲ್ಮೀಕಿ ಜನಾಂಗ, ಆಟೋ ಚಾಲಕ ವಾಸ ೧೫ ನೇ ವಾರ್ಡ, ಗುಪ್ಪಾಲರ ಓಣಿ, ಕೂಡ್ಲಿಗಿ ಪಟ್ಟಣ ಹಾಗು ಇತರೇ ಕೆಲವರು ಈ ರೀತಿ ಪ್ರಯತ್ನ ಮಾಡುತ್ತಿರುವ ಬಗ್ಗೆ ಮಾಹಿತಿ ತಿಳಿದು ಬಂದಿದ್ದು ಕಾರಣ ಬರುವ ದಿನಗಳಲ್ಲಿ  ಈ ವಿಷಯವು ಮತ್ತೆ ವಿಕೋಪಕ್ಕೆ ಹೋಗಿ ಸಾರ್ವಜನಿಕರಿಗೆ ತೊಂದರೆಯಾಗದಂತೆ ತಡೆಯಲು ಹಾಗು ಮೇಲ್ಕಂಡ  ವ್ಯಕಿಗಳ ಮೇಲೆ ಸೂಕ್ತ ನಿಗಾವಣೆ ಇಡಲು ಕೂಡ್ಲಿಗಿ ಪಟ್ಟಣದಲ್ಲಿ ಶಾಂತಿ ಸುವ್ಯವಸ್ಥೆಯನ್ನು ಕಾಪಾಡಲು ಹಾಗು ಸಾರ್ವಜನಿಕ ಆಸ್ತಿ ಪಾಸ್ತಿಗಳಿಗೆ ನಷ್ಟವಾಗದಂತೆ ತಡೆಯಲು ಮುಂಜಾಗ್ರತಾ ಕ್ರಮವಾಗಿ ಹಾಗು ಪಟ್ಟಣದಲ್ಲಿ ಕೋಮು ಗಲಭೆಯನ್ನು ತಡಗಟ್ಟುವ ಸಲುವಾಗಿ ಮೇಲ್ಕಂಡವರ ವಿರುದ್ದ ಕಲಂ ೧೦೭ ಸಿ.ಆರ್.ಪಿ.ಸಿ ರೀತಿ ಪ್ರಕರಣ ದಾಖಲಿಸಿದ್ದು ಕಾರಣ ಸದ್ರಿ ಗುಮಾನಿ ವ್ಯಕ್ತಿಗಳಿಗೆ ಮುಂಜಾಗ್ರತಾ ಕ್ರಮವಾಗಿ ಒಳ್ಳೆಯ ನಡೆತೆಯಿಂದಿರಲು ಬಾಂಡ್ ಪಡೆಯಲು ಕೋರಿದೆ.
9 Cr.No:0009/2016
(IPC 1860 U/s 426 )
16/01/2016 Under Investigation
MISCHIEF - Mischief
Brief Facts :  ಈ ದಿನ ದಿನಾಂಕ ೧೬/೦೧/೨೦೧೬ ರಂದು ಮದ್ಯಾಹ್ನ ೨-೦೦ ಗಂಟೆಗೆ ಪಿರ‍್ಯಾದಿ ಗುನ್ನಳ್ಳಿ ರಾಘವೇಂದ್ರ ತಂದೆ ಗುನ್ನಳ್ಳಿ ಬುಳ್ಳಪ್ಪ, ೩೧ ವರ್ಷ, ವಾಲ್ಮೀಕಿ ಜನಾಂಗ, ಕನ್ನಡ ಸೇನೆ ಕರ್ನಾಟಕ ತಾಲೂಕು ಅದ್ಯಕ್ಷರು, ವಾಸ ಕೂಡ್ಲಿಗಿ ಪಟ್ಟಣರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶದಲ್ಲಿ  ದಿನಾಂಕ ೧೫-೦೧-೨೦೧೬ ರಂದು ಕನ್ನಡ ಸೇನೆಕರ್ನಾಟಕ ಕಛೇರಿಯನ್ನು  ಉದ್ಘಾಟನೆ ಮತ್ತು ನಾಮ ಫಲಕ ಅನಾವರಣವನ್ನು  ಕನ್ನಡ ಸೇನೆಯ  ರಾಜ್ಯದ್ಯಕ್ಷರಾದ  ಕೆ.ಆರ್. ಕುಮಾರ್ ರವರು ನೇರವೇರಿಸಿದ್ದು ಸದ್ರಿ ವಿಷಯಕ್ಕೆ ಸಂಭಂದಿಸಿದಂತೆ  ನಾಮ ಫಲಕಕ್ಕೆ ಪಟ್ಟಣ 
ಪಂಚಾಯಿತಿಯಲ್ಲಿ ದಿನಾಂಕ ೧೪/೦೧/೨೦೧೬ ರಂದು ಅನುಮತಿಯನ್ನು ಪಡೆದುಕೊಂಡಿದ್ದು ದಿನಾಂಕ ೧೬/೦೧/೨೦೧೬ ರಂದು ಬೆಳಿಗ್ಗೆ ೬-೩೦ ಗಂಟೆಯ ಸುಮಾರಿಗೆ ಹೋದಾಗ ನಾಮಫಲಕವನ್ನು ನೋಡಿದೆನು. ಅದರಲ್ಲಿ ಪಟ್ಟಣ ಶೆಟ್ರು ವಿಶ್ವನಾಥ ಕನ್ನಡ ಸೇನೆಯ ಜಿಲ್ಲಾ ಜಂಟಿ ಕಾರ್ಯದರ್ಶಿ ಇವರ ನಾಮಫಲಕ ಇದ್ದಂತಹ ಭಾವ ಚಿತ್ರವನ್ನು ವಿರೂಪ ಗೊಳಿಸಿದ್ದು ಕಛೇರಿಯ ಮೇಲೆ ವಾಸವಿರುವ ವಿಶ್ವನಾಥರವರಿಗೆ  ವಿಷಯ ತಿಳಿಸಿದಾಗ ಸುಮಾರು ಬೆಳಿಗ್ಗೆ ೭-೩೦ ಗಂಟೆಯ ಸುಮಾರಿಗೆ  ನಾಮ ಫಲಕದ ಹಿಂದೆ ವಿಶ್ವ ಎಲೆಕ್ಟ್ರೀಕಲ್ ಅಂಗಡಿಯಲ್ಲಿ  ಸಿ.ಸಿ ಕ್ಯಾಮರ ಅಳವಡಿಸಿದ್ದು ಅಂಗಡಿಯ ಬಾಗಿಲನ್ನು ತೆಗೆಯಿಸಿ  ಸಿ.ಸಿ ಕ್ಯಾಮರವನ್ನು ನೋಡಿದಾಗ ಅದರಲ್ಲಿ ಭಾವ ಚಿತ್ರವನ್ನು ವಿರೂಪಗೊಳಿಸಿದ ವ್ಯಕ್ತಿಯು ದತ್ತಾತ್ರೆಯ ವಯಸ್ಸು ೪೦ ವರ್ಷಮ ಜಿರಾಕ್ಸ್ ಅಂಗಡಿಯ ಮಾಲೀಕರು ಅಂತ ಗೋತ್ತಾಗಿದ್ದು ಕೂಡಲೇ ನಾನು ತಾಲೂಕಿನ ಎಲ್ಲಾ ಪದಾದಿಕಾರಿಗಳನ್ನು ಸಂಪರ್ಕಿಸಿ ವಿಷಯ  ತಿಳಿಸಿರುತ್ತೇನೆ.
          ನಂತರ ಎಲ್ಲಾ ಪದಾಧಿಕಾರಿಗಳು ತಾಲೂಕು ಕನ್ನಡ ಸೇನೆ ಕಛೇರಿಯಲ್ಲಿ ಸೇರಿ ಸಮಾಲೋಚನೆ ನಡೆಸಿ ಸಂಘದ ನಡಾವಳಿಗಳನ್ನು ಸಂಘದ ಪುಸ್ತಕದಲ್ಲಿ ನಮೂದಿಸಿ ಭಾವ ಚಿತ್ರವನ್ನು ವಿರೂಪಗೊಳಿಸಿದ ವ್ಯಕ್ತಿಯ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ತಡವಾಗಿ ಬಂದು ದೂರು ಕೊಟ್ಟಿದ್ದು ಈ ಬಗ್ಗೆ ಕ್ರಮ ಕೈಗೊಳ್ಳಲುಕೋರಿದೆ. ಅಂತ ಇದ್ದ ದೂರಿನ ಸಾರಾಂಶದ ಮೇರೆಗೆ ಇದು ಆಸಂಜ್ಞೆಯ ಅಪರಾಧವಾಗಿದ್ದು ಕಾರಣ ಕೂಡ್ಲಿಗಿ ಪೊಲೀಸ್ ಠಾಣೆ ಡಿ.ಪಿ.ನಂಬರ್ : ೧೭/೧೬ ರಲ್ಲಿ ನಮೂದಿಸಿದ್ದು ಕಾರಣ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಗೊಳ್ಳಲು ಪರವಾನಿಗೆಯನ್ನು ನೀಡಿಲು  ಮಾನ್ಯ ಸಿ.ಜೆ(ಹಿರಿಯ) & ಜೆ.ಎಂ.ಎಫ್.ಸಿ ನ್ಯಾಯಾಲಯ ಕೂಡ್ಲಿಗಿ ರವರಿಗೆ  ಕೋರಿಕೊಂಡಿದ್ದು  ಮಾನ್ಯ ನ್ಯಾಯಾಲಯವು ಕಲಂ ೪೨೬ ಐ.ಪಿ.ಸಿ ರೀತ್ಯ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಗೊಳ್ಳಲು   ಪರವಾನಿಗೆಯನ್ನು ನೀಡಿದ ಆದೇಶ ವನ್ನು ಈ ದಿನ ದಿನಾಂಕ ೧೬/೦೧/೨೦೧೬ ರಂದು ಮದ್ಯಾಹ್ನ ೩-೩೦ ಗಂಟೆಗೆ ಹಾಜರು ಪಡಿಸಿದ್ದನ್ನು  ಪಡೆದು ಪ್ರಕರಣದ ದಾಖಲಿಸಿದೆ.
Kurugod PS
10 Cr.No:0010/2016
(IPC 1860 U/s 279,337 )
15/01/2016 Under Investigation
MOTOR VEHICLE ACCIDENTS NON-FATAL - State Highways
Brief Facts :  ಪಿರ್ಯಾದಿದಾರರು ಮತ್ತು ಆತನ ತಂದೆ ಹನುಮಂತಪ್ಪ ಇಬ್ಬರು ಕೂಡಿ  ಕುರುಗೊಡಿನಲ್ಲಿರುವ ತನ್ನ ಸೋದರತ್ತೆಯನ್ನು ಮಾತನಾಡಿಸಿಕೊಂಡು ಬರಲು ಕುರುಗೊಡಿಗೆ ಹೋಗುವುದಕ್ಕಾಗಿ ನಿನ್ನೆ ದಿನ ದಿನಾಂಕ 14/01/2016 ರಂದು ಸಂಜೆ 4:30 ಗಂಟೆ ಸುಮಾರಿಗೆ ಬಸ್ಸಿಗಾಗಿ ಕಾಯುತ್ತಿದ್ದಾಗ ಸಂಜೆ 5:00 ಗಂಟೆ ಸುಮಾರಿಗೆ ಕುರುಗೊಡು ಕಡೆಗೆ ಹೊರಟಿದ್ದ ಒಂದು ಕೆ.ಎಸ್.ಆರ್.ಟಿ.ಸಿ ಬಸ್ ಬಳ್ಳಾರಿಯಿಂದ ಬಂದು ಕುರುಗೊಡಿಗೆ ಹೋಗಲು ನಿಂತಿದ್ದು. ಪಿರ್ಯಾದಿ ಬಸ್ನ್ನು ಹತ್ತಿದ್ದು ಆತನ ಹಿಂದೆ ತನ್ನ ತಂದೆ ಹನುಮಂತಪ್ಪನು ನಿಲ್ಲಿಸಿದ ಬಸ್ನ್ನು ಹತ್ತುತ್ತಿದ್ದಂತೆ ಬಸ್ಚಾಲಕ ತನ್ನ ಬಸ್ನ್ನು ನಿರ್ಲಕ್ಷತನದಿಂದ ಜೋರಾಗಿ ಮುಂದಕ್ಕೆ ನಡೆಸಿದ್ದರಿಂದ ಬಸ್ನ್ನು ಹತ್ತುತ್ತಿದ್ದ ಪಿರ್ಯಾದಿ ತಂದೆ ಹನುಮಂತಪ್ಪನು ನಿಯಂತ್ರಣ ತಪ್ಪಿ ಕೆಳಗೆ ಬಿದ್ದಿದ್ದರಿಂದ  ಬಸ್ಸಿನ ಹಿಂದಿನ ಗಾಲಿ ಪಿರ್ಯಾದಿ ತಂದೆಯ ಎರಡು ಕಾಲುಗಳ ಮೇಲೆ ಹತ್ತಿದ್ದರಿಂದ ಹನುಮಂತಪ್ಪನಿಗೆ  ಎರಡು ಕಾಲುಗಳಿಗೆ  ರಕ್ತಗಾಯಗಳಾಗಿದ್ದು ಕಾರಣ ಬಸ್ಸನ್ನು ನಿರ್ಲಕ್ಷತನದಿಂದ ಜೋರಾಗಿ ಚಲಿಸಿ ತನ್ನ ತಂದೆಗೆ ಅಪಘಾತ ಮಾಡಿ ಗಾಯಗಳುಂಟಾಗಲು ಕಾರಣನಾದ  ಕೆಎಸ್ಆರ್ಟಿಸಿ ಬಸ್ ನಂ ಕೆಎ-34 ಎಫ್-703 ನೇದ್ದರ ಚಾಲಕ ಕ್ರಿಷ್ಣನಾಯ್ಕ ವಾಸ: ಒಂದನೇ ಡಿಪೋ ಬಳ್ಳಾರಿ  ರವರ ವಿರುದ್ದ ಕಾನೂನು ಕ್ರಮ ಜರುಗಿಸಲು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುತ್ತದೆ. ಇದರೊಂದಿಗೆ ಪಿರ್ಯಾದಿ ನೀಡಿದ ದೂರಿನ ಅಸಲು ಪ್ರತಿ ಲಗತ್ತಿಸಿ ನಿವೇಧಿಸಿಕೊಂಡಿರುತ್ತೇನೆ.
Marriyammanahalli PS
11 Cr.No:0004/2016
(IPC 1860 U/s 279,304(A) )
16/01/2016 Under Investigation
MOTOR VEHICLE ACCIDENTS FATAL - National Highways
Brief Facts :  ಈ ದಿನ ದಿನಾಂಕ-16/01/2016 ರಂದು ಮಧ್ಯಾಹ್ನ 1.00 ಗಂಟೆಗೆ ಪರುಶುರಾಮ ವಾಸ- ಡಿ.ಎನ್.ಕೆರೆ ಇವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರನ್ನು ಪಡೆದು ಸಾರಾಂಶ- ನನ್ನ ಅಳಿಯನಾದ ಗೋಣಿಬಪ್ಪ ಟ್ರಾಕ್ಟರ್ ಗಳಲ್ಲಿ ಲೇಬರ್ ಕೆಲಸ ಮಾಡುತ್ತಾನೆ. ನಿನ್ನೆ ದಿನ ಸಾಯಂಕಾಲ ನನ್ನ ಅಳಿಯ ಮತ್ತು ವೆಂಕಟೇಶ ಇಬ್ಬರು ನಮ್ಮೂರಿನ ಹೆಚ್.ನಾಗರಾಜ ಇವರ ಟ್ರಾಕ್ಟರ್ ನಂ- ಕೆ.ಎ.೩೫/ ಟಿ. ೭೪೦೬ ಟ್ರಾಲಿ ನಂ-= ಕೆ.ಎ.೩೫/ ಟಿ. ೭೪೦೭ ನೇದ್ದರಲ್ಲಿ ಮರಳನ್ನು ಲೋಡ್ ಮಾಡಿಕೊಂಡು ಬರಲು ಟ್ರಾಕ್ಟರ್ ಚಾಲಕ ಉಜ್ಜಪ್ಪನವರ ಹನುಮಂತಪ್ಪ ಕರೆದುಕೊಂಡು ಹೋಗಿ ಲೋಡ್ ಮಾಡಿಸಿಕೊಂಡು ಬಂದು ರಾತ್ರಿ ಮನೆಯ ಹತ್ತಿರ ನಿಲ್ಲಿಸಿಕೋಂಡನು.
       ಈ ದಿನ ದಿನಾಂಕ- ೧೬/೦೧/೨೦೧೬ ರಂದು ಬೆಳಿಗ್ಗೆ ೫.೩೦ ಗಂಟೆಯ ಸುಮಾರಿಗೆ ಹನುಮನಹಳ್ಳಿಯಲ್ಲಿ ಅನ್ ಲೋಡ್ ಮಾಡಲು ಉಜ್ಜಪ್ಪನವರ ಹನುಮಂತಪ್ಪನು ನನ್ನ ಅಳಿಯ ಗೋಣಿಬಸಪ್ಪನಿಗೆ ಟ್ರಾಲಿಯಲ್ಲಿ ಕೂಡಿಸಿಕೊಂಡುಎನ್.ಹೆಚ್.೧೩ ರಸ್ತೆಯ ಮುಖಾಂತರ ಹೊರಟನು. ನನಗೆ ಹೊಸಪೇಟೆಯಲ್ಲಿ ಕೆಲಸ ಇದುದರಿಂದ ನಾನು ನನ್ನ ಮೋಟಾರ್ ಸೈಕಲ್ ನಲ್ಲಿ  ಹಿಂದುಗಡೆ ಕೆಂಚಪ್ಪನಿಗೆ ಕೂಡಿಸಿಕೋಂಡು ಹೊಸಪೇಟೆ ಕಡೆಗೆ ಹೊರೆಟೆನು. ನನ್ನ ಮುಂದುಗಡೆ ಎನ್.ಹೆಚ್.೧೩ ರಸ್ತೆಯಲ್ಲಿ ಯು. ಹನುಮಂತಪ್ಪನು. ಟ್ರಾಕ್ಟರ್ ನನ್ನು ಅತಿಜೋರಾಗಿ ಮತ್ತು ನಿರ್ಲಕ್ಷ್ಯತನದಿಂದ ನಡೆಸಿಕೊಂಡು ನಡೆಸಿಕೋಮಡು ಹೋಗುತ್ತಿದ್ದನು. ಬೆಳಿಗ್ಗೆ ೬.೦೦ ಗಂಟೆಯ ಸುಮಾರಿಗೆ ಡಣಾಪುರ ಗ್ರಾಮದ ಬ್ರಿಡ್ಜ್ ಹತ್ತಿ ಎನ್,ಹೆಚ್.೧೩ ರಸ್ತೆಯಲ್ಲಿ ತಗ್ಗುಗಳನ್ನು ಗಮನಿಸದೇ ನಿರ್ಲಕ್ಷ್ಯತನದಿಂದ ನಡೆಸಿದಾಗ ಟ್ರಾಕ್ಟರ್ ನ ಮುಂದಿನ ಬಲಭಾಗದ ಟೈರ್ ಬ್ಲಸ್ಟ್ ಆಗಿ ಒಮ್ಮೆಲೇ ಟ್ರಾಕ್ಟರ್ ರಸ್ತೆಯ ಬದಿ ಇದ್ದತಗ್ಗಿನಲ್ಲಿ ಟ್ರಾಲಿ ಪಲ್ಟಿಯಾಗಿ ಬಿದ್ದು ಬಿಟ್ಟಿತು. ಟ್ರಾಕ್ಟರ್ ಚಾಲಕ ಟ್ರಾಕ್ಟರ್ ನಿಂದ ಕೆಳಗಡೆ ಇಳಿದುಕೊಂಡನು. ಕೂಡಲೇ ನಾನು  ಕೆಂಚಪ್ಪ ಹಾಗೂ ಅಲ್ಲೆ ಹೋಗುತ್ತಿದ ಸೋಮಪ್ಪ ನಾವೆಲ್ಲ ಟ್ರಾಕ್ಟರ್ ಹತ್ತಿರ ಹೋಗಿ ಟ್ರಾಲಿಯಲ್ಲಿ ಸಿಕ್ಕಿಹಾಕಿಕೊಂಡಿದ್ದ ಗೋಣಿಬಸಪ್ಪನಿಗೆ ಹೊರತೆಗೆದು ನೋಡಲು ಸದರಿ ಅಪಘಾತದಿಂದಾಗಿ ಆತನಿಗೆ ತೆಲೆಯ ಹಿಂಭಾಗ ಮತ್ತು ಮುಂಭಾಗಕ್ಕೆ ರಕ್ರಗಾಯ ಸೊಂಟಕ್ಕೆ ಒಳಪೆಟ್ಟು ಗಾಯ ಮತ್ತು ಕೈ ಕಾಲುಗಳಿಗೆ ತೆರಚಿದ ಗಾಯಗಳು ಆಗಿದ್ದವು. ಟ್ರಾಕ್ಟರ್ ಚಾಲಕ ಹನುಮಂತಪ್ಪನಿಗೆ ಗಾಯಗಳು ಆಗಿರುವುದಿಲ್ಲ, ಅಪಘಾತದಲ್ಲಿ ಟ್ರಾಕ್ಟರ್ ಜಖಂಗೊಂಡಿತ್ತು. ಗಾಯಗೊಂಡ ಗೋಣಿಬಸಪ್ಪನಿಗೆ ೧೦೮ ಅಂಬ್ಯುಲೆನ್ಸ್ ಕರೆಯಿಸಿ ಅದರಲ್ಲಿ ಹೊಸಪೇಟೆ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆಗೆ ದಾಖಲಿಸಿದೆವು. ವೈದ್ಯರು ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಬಳ್ಳಾರಿ ವಿಮ್ಸ್ ಆಸ್ಪತ್ರೆಗೆ ಕರೆದುಕೊಂಡು ಹೋಗಲು ತಿಲೀಸಿದ್ದರಿಂದ ಆತನಿಗೆ 
ಅಂಬ್ಯುಲೆನ್ಸ್ ನಲ್ಲಿ ಕರೆದುಕೊಂಡು ಹೋಗುವಾಗ ಬೆಳಿಗ್ಗೆ ೧೦.೧೫ ಗಂಟೆಗೆ ತೋರಣಗಲ್ಲು ಸಮೀಪ ಮೃತಪಟ್ಟನು. ಮೃತ ದೇಹವನ್ನು ಪುನಃ ಹೊಸಪೇಟೆ ಸರ್ಕಾರಿ ಆಸ್ಪತ್ರೆಯ ಶವಗಾರದಲ್ಲಿ ತಂದು ಹಾಕಿರುತ್ತೇವೆ.
  ಕಾರಣ ಟ್ರಾಕ್ಟರ್ ಚಾಲಕ ಉಜ್ಜಪ್ಪನವರ ಹನುಮಂತಪ್ಪನು ತನ್ನ ಟ್ರಾಕ್ಟರ್ ನಂ ಕೆ.ಎ.೩೫/ಟಿ.೭೪೦೬/ಕೆ.ಎ.೩೫/ಟಿ.೭೪೦೭ ನೇದ್ದನ್ನು ಅತಿಜೋರಾಗಿ ಮತ್ತು ನಿರ್ಲಕ್ಷ್ಯತನದಿಂದ ನಡೆಸಿ ಗೋಣಿಬಸಪ್ಪನ ಸಾವಿಗೆ ಕಾರಣನಾಗಿರುತ್ತಾನೆ, ಸದರಿಯವನ ಮೇಲೆ ಕಾಣು ಕ್ರಮ ಜರುಗಿಸಲು ಕೋರುತ್ತೇನೆ. ದೂರಿನ ಮೇರೆಗೆ ಗುನ್ನೆ ದಾಖಲಿಸಿರುತ್ತದೆ.
Siruguppa PS
12 Cr.No:0009/2016
(IPC 1860 U/s 506,341,504,143,147,149,323,324 )
15/01/2016 Under Investigation
RIOTS - Others
Brief Facts :  ಈ ದಿನ ದಿನಾಂಕ; 15-01=16 ರಂದು ಬೆಳಿಗ್ಗೆ 8-30 ಗಂಟೆಗೆ ಸಿರುಗುಪ್ಪ ಸರಕಾರಿ ಅಸ್ಪತ್ರೆಗೆ ಹೋಗಿ ಭೇಟಿ ನೀಡಿ ಸದರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಗಾಯಾಳು ಶ್ರೀ ಮುನ್ನಾ ನಾಯ್ಕ ಇವರನ್ನು ವಿಚಾರಿಸಲು, ನಮ್ಮ ತಾಂಡಾದಲ್ಲಿ ದಿನಾಂಕ; 12-01-16 ರೀಂದ ಗಾಳಿ ಮಾರೆಮ್ಮ ಹಬ್ಬ ಪ್ರಾರಂಭವಾಗಿದ್ದು ಸದರಿ ಹಬ್ಬಕ್ಕೆ ಬೇರೆ ಬೇರೆ ಕಡೆಯಿಂದ ಸರ್ಕಸ್ ಮತ್ತು ಡ್ರಾಮಾ ಮಾಡಲು ಕಲಾವಿದರು ಬಂದಿದ್ದು ನಿನ್ನೆ ದಿನ ದಿನಾಂಕ; 14-01-16 ರಂದು ರಾತ್ರಿ 8-30 ಗಂಟೆ ಸುಮಾರಿಗೆ ಡ್ರಾಮಾ ಶರುವಾಗಿದ್ದು ನಂತರ ರಾತ್ರಿ 10-30 ಗಂಟೆ ಸುಮಾರಿಗೆ ಸೈಕಲ್ ಮೇಲೆ ಸುತ್ತುತ್ತಾ ಸರ್ಕಸ್ ಮಾಡುತ್ತಿದ್ದು ತಾನು ಹೋಗಿ ನಿಂತು ನೋಡುತ್ತಿದ್ದು ಸದರಿ ಸಮಯ ನಮ್ಮ ತಾಂಡದ ನಾಗರಾಜ ನಾಯ್ಕ ಮತ್ತು ಗುರು ನಾಯಕ್ @ ಗುಂಡ ಇವರಿಬ್ಬರು ಬಾಯಿ ಮಾತಿನ ಜಗಳ ಮಾಡಿಕೊಳ್ಳುತ್ತಿದ್ದು ಸದರಿ ಜಗಳವನ್ನು ನೊಡಿ ನಾನು ಬಿಡಿಸಲು ಬಿಡಿಸಲು ಹೋಗಿದ್ದು ಆಗ ಅಲ್ಲೇ ಇದ್ದ ಕೃಷ್ಣ ನಾಯ್ಕ, ಗಣನಾಯ್ಕ, ಸಿದ್ದ ನಾಯ್ಕ, ಮತ್ತು ನಾಗು ನಾಯ್ಕ ಇವರು ಗುರುನಾಯ್ಕನೊಂದಿಗೆ ಗುಂಪು ಕೂಲಿ ನನ್ನೊಂದಿಗೆ ಜಗಳ ತೆಗೆದು ಸದರಿ ಗುಂಪಿನ ಪೈಕಿ ಕೃಷ್ಣ ನಾಯ್ಕ ನೀನೇನು ಜಗಳ ಬಿಡುಸುತ್ತೀಯಾಲೇ ಸೂಳೇ ಮಗನೆ ಎಂದು ದುರ್ಬಾಷೆಗಳಿಂದ ಬೈದು ಮುಷ್ಟಿ ಕಟ್ಟಿ ನನ್ನಮುಖಕ್ಕೆ ಮತ್ತು ಬಲಕಣ್ಣಿನ ಹತ್ತಿರ ಗುದ್ದಿಕೊಂಡಿನು. ಗಣ ನಾಯ್ಕನು ಕಾಲಿನಿಂದ ಬೆನ್ನಿಗೆ, ಹೊಟ್ಟೆಗೆ ಒದ್ದುಕೊಂಡಿದ್ದು , ಸಿದ್ದ ನಾಯ್ಕನು ಅಲ್ಲೇ ಇದ್ದ ಕಲ್ಲಿನಿಂದ ನನ್ನ ಬಲಗಡೆ ಪಕ್ಕೆಗೆ ಹೊಡೆದು ಒಳ ನೋವು ಮಾಡಿದ, ನಂತರ ಗುರುನಾಯ್ಕ ಮತ್ತು ನಾಗು ನಾಯ್ಕ ಇವರು ನನಗೆ ಮುಂದೆ ಹೋಗದಂತೆ ಅಡ್ಡಗಟ್ಟಿ ನಿಲ್ಲಿಸಿ ಕೈಕಾಲುಗಳಿಂದ ಒದ್ದು ಕೊಂಡು ಒಳನೋವು ಮಾಡಿದರು. ಅಷ್ಟರಲ್ಲಿ ಗುಂಪು ಸೇರಿದ ಜನರ ಪೈಕಿ ಹನುಮ ನಾಯ್ಕ, ನಾಗರಾಜ ನಾಯ್ಕ, ಧರ್ಮನಾಯ್ಕ, ಮೂರ್ತಿನಾಯ್ಕ, ನಾರಾಯಣಿ,ಮತ್ತು ನಾಗರಾಜ ನಾಯ್ಕ ಬಂದು ಜಗಳ ಬಿಡಿಸಿಕಳುಹಿಸಿದರು ಇಷ್ಟುಕ್ಕೂ ಸುಮ್ಮನಿರದೇ ಎಲ್ಲರೂ ಸೇರಿ ನಿನ್ನನ್ನು ಬಿಡುವುದಿಲ್ಲ ಎಂ ದು ಪ್ರಾಣ ಬೆದರಿಕೆ ಹಾಕಿದರು. ಗಾಯಗೊಂಡ ನಾನು ಚಿಕಿತ್ಸೆಗೆ ಸಿರುಗುಪ್ಪ ಸರಕಾರಿ ಆಸ್ಪತ್ರೆಗೆ ನಿನ್ನೆ ದಿನ ದಿ. 14-01-16 ರಂದು ರಾತ್ರಿ 11-00 ಗಂಟೆಗೆ ಬಂದು ದಾಖಲಾಗಿರುತ್ತೇನೆ. ವಿನಾ ಕಾರಣ ನನ್ನೊಂದಿಗೆ ಜಗಳ ತೆಗೆದು  ಮುಖಕ್ಕೆ ಹೊಡೆದು ರಕ್ತಗಾಯ ಮಾಡಿ ನಂತರ ಕೈಕಾಲುಗಳೀಂದ ಬೆನ್ನಿಗೆ , ಎದೆಗೆ, ಪಕ್ಕೆಗೆ ಹೊಡೆದು ಒಳನೂವು ಮಾಡಿದ್ದು ಈ ಬಗ್ಗೆ ನಾನು ನಮ್ಮ ಹಿರಿಯರ ಹತ್ತಿರ ಚರ್ಚಿಸಿ ನಂತರ ನನಗೆ ಹೊಡೆದ 5 ಜನರ ಮೇಲೆ ಕಾನೂನು ಕ್ರಮ ಜರುಗಿಸಲು ಈ ದಿನ ತಡವಾಗಿ ಟಾಣೆಗೆ ಬಂದು ಕಾನೂನು ಕ್ರಮ ಜರುಗಿಸಲು ನೀಡಿದ ದೂರನ್ನು ಸ್ವೀಕರಿಸಿ ನಂತರ ಠಾಣೆಗೆ ಹಿಂದಿರುಗಿ ಬಂದು ಬೆಳಿಗ್ಗೆ 10-00 ಗಂಟೆ ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿರುತ್ತೇನೆ.
13 Cr.No:0010/2016
(IPC 1860 U/s 506,341,504,143,147,149,323,324 )
15/01/2016 Under Investigation
RIOTS - Others
Brief Facts :  ,ಪಿರ್ಯಾದಿದಾರರು ನೀಡಿದ ದೂರಿನ ಸಾರಾಂಶವೇನೆಂದರೆ,. ದಿನ ದಿನಾಂಕ; 12-1-16 ರಂದು ನಮ್ಮ ಗ್ರಾಮದಲ್ಲಿ ಗಾಳಿ ಮಾರೆಮ್ಮ ಹಬ್ಬ ಇದ್ದು ಸದರಿ ಹಬ್ಬಕ್ಕೆ ಡ್ರಾಮಾ ಮತ್ತು ಸರ್ಕಸ್ ಮಾಡುವರು ಬಂದಿದ್ದು ನಿನ್ನೆ ದಿನ ದಿನಾಂಕ; 14-01-16 ರಂದು ರಾತ್ರಿ 10-30 ಗಂಟೆ ಸುಮಾರಿಗೆ ನಮ್ಮ ತಾಂಡಾಕ್ಕೆ ಬಂದ ಸರ್ಕಸ್ ನವರು ಸೈಕಲ್ ನಲ್ಲಿ ಸರ್ಕಸ್ ಮಾಡುತ್ತಿದ್ದು ತಾಂಡಾದ ಎಲ್ಲಾ ಜನರು ನೋಡುತ್ತಾ ನಿಂತುಕೊಂಡಿದ್ದು  ಆಗ ನಮ್ಮ ತಾಂಡಾದ ಕೃಷ್ಣನಾಯ್ಕನಿಗೆ ಮತ್ತು ಮುನ್ನಾ ನಾಯ್ಕನಿಗೆ ಜಗಳವಾಗುತ್ತಿದ್ದು ನಾನು ಮತ್ತು ನನ್ನ ಮಗ ಗಣನಾಯ್ಕ ಮತ್ತು ಗುಂಡನಾಯ್ಕ ಮೂರುಜನರು ಸೇರಿ ಜಗಳ ಬಿಡಿಸಲು ಹೋಗಿದ್ದು ಸದರಿ ಸಮಯ ಜಗಳಮಾಡುತ್ತಿದ್ದು ವೆಂಕಟೇಶ ನಾಯ್ಕ ಈತನು ನನಗೆ ನಿನೇನು ಹೇಳಲಿಕ್ಕೆ ಬರುತ್ತೀಯಾಲೇ ಸೂಳೇ ಮಗನೇ ಎಂದು ದುಭರ್ಾಷೆಗಳಿಂದ ಬೈದಾಡುತ್ತಿದ್ದರಿಂದ ನನ್ನ ಜೊತೆಗೆ ಇದ್ದ ನನ್ನ ಮಗ ಗಣನಾಯ್ಕನು ನಮ್ಮ ತಂದೆಗೆ ಯಾಕೆ ಬಯ್ಯುತ್ತೀಯಾ ಎಂದೆ ಕೇಳಲು ಹೋದಾಗ ಸದರಿ ಗುಂಪಿನ ಪೈಕಿ ಬಾಬುನಾಯ್ಕನು ತನ್ನ ಕೈಯಲ್ಲಿದ್ದ ಕಟ್ಟಿಗೆಯಿಂದ ನನ್ನ ಮಗನ ಬಲಗಾಲಿಗೆ ಹೊಡೆದು ಒಳ ನೋವು ಮಾಡಿದನು. ನಂತರ ಮುನ್ನಾನಾಯ್ಕನು ಗುಂಡನಾಯ್ಕನ ಎಡಗೈ ಹೆಬ್ಬೆರಳಿಗೆ ಬಾಯಿಂದ ಕಚ್ಚಿದ್ದು ನಂತರ ನಾಗರಾಜ ನಾಯ್ಕ @ ನಾರಾನಾಯ್ಕ ಮತ್ತು ಹಸರ್ಿಂಗ್ ನಾಯ್ಕ ಇಬ್ಬರು ನನ್ನ ಮಗ ಗಣನಾಯ್ಕನಿಗೆ ಮುಂದೆ ಹೋಗದಂತೆ ಅಡ್ಡ ಗಟ್ಟಿ ಕೈಕಾಲುಗಳಿಂದ ಒದ್ದು ಒಳ ನೋವು ಮಾಡಿದರು. ಸದರಿ ಜಗಳವನ್ನು ನೋಡಿ ನಮ್ಮ ತಾಂಡಾದ ಶ್ರೀನಿವಾಸ ನಾಯ್ಕ, ರೂಪ್ಲನಾಯ್ಕ, ಹರಿನಾಥ ನಾಯ್ಕ, ಪರಶು ನಾಯ್ಕ, ಮತ್ತು ವಿಠಲ ನಾಯ್ಕ ಇವರು ಜಗಳವನ್ನು ಬಿಡಿಸಿ ಕಳೂಹಿಸಿದರು. ಅಷ್ಟಕ್ಕೂ ಸುಮ್ಮನಿರದೇ ಎಲ್ಲರೂ ಸೇರಿ ನಿಮ್ಮನ್ನು ಬಿಡುವುದಿಲ್ಲಲೇ ಸೂಳೇ ಮಕ್ಕಳೇ ಎಂದು ಬೈದು ಪ್ರಾಣ ಬೆದರಿಕೆ ಹಾಕಿದರು. ನಿನ್ನೆ ನಡೆದ ಜಗಳದಲ್ಲಿ ನಮಗೆ ಮೈಮೇಲೆ ಪೆಟ್ಟು ಬಿದ್ದು ಈ ದಿನ ನೋವು ಕಾಣಿಸಿಕೊಂಡಿದ್ದರಿಂದ ಸಿರುಗುಪ್ಪ ಸರಕಾರಿ ಆಸ್ಪತ್ರೆಗೆ ಬಂದು ಚಿಕಿತ್ಸೆ ಪಡೆದುಕೊಂಡೆವು. ವಿನಾ ಕಾರಣ ನಮಗೆ ಹೊಡೆದು ಪ್ರಾಣ ಬೆದರಿಕೆ ಹಾಕಿದ 5 ಜನರ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ.
T.B. Halli PS
14 Cr.No:0004/2016
(IPC 1860 U/s 143,147,148,504,323,324,506,149 )
16/01/2016 Under Investigation
RIOTS - Others
Brief Facts :  ಫಿರ್ಯಾಧಿದಾರರು ಹಾಗೂ ಆರೋಪಿತರು ಸಂಬಂಧಿಕರಿದ್ದು ಇವರ ನಡುವೆ ಪಿತ್ರಾರ್ಜಿತ ಆಸ್ತಿಯ ಪಾಲು ವಿಭಾಗದಲ್ಲಿ ವೈಮನಸ್ಸು ಇದ್ದು ಈ ದಿನ ದಿನಾಂಕ : 16-01-2016 ರಂದು ಬೆಳಗ್ಗೆ ಕಾಲ್ವಿತಾಂಡದ ಶ್ರೀ.ಸೇವಲಾಲ್ ಗುಡಿಯ ಹತ್ತಿರ ಪಂಚಾಯ್ತಿ ಮಾಡುತ್ತಿರುವಾಗ್ಗೆ  ಪಂಚಾಯ್ತಿಯಲ್ಲಿ ಸಮಸ್ಯೆ ಬಗೆಹರಿಯದೇ ಪಂಚಾಯ್ತಿ ಮುಕ್ತಾಯಗೊಂಡಿದ್ದಾಗ ಬೆಳಗ್ಗೆ 11-30 ಸುಮಾರಿಗೆ ಫಿರ್ಯಾಧಿದಾರರಿಗೆ ಆರೋಪಿ-1 ರಮೇಶನಾಯ್ಕನು ಒಮ್ಮಿಂದೊಮ್ಮೆಲೇ ಲೇ ಸೂಳೆ ಮಕ್ಕಳ ನೀವು ನಮ್ಮ ಭೂಮಿಯ ತಂಟೆಗೆ ಪದೇ ಪದೇ ಬರುತ್ತೀರಾ ಅಂತಾ ಬೈದಿದ್ದು ಅದಕ್ಕೆ ಫಿರ್ಯಾಧಿದಾರರು ಆ ರೀತಿ ದೊಡ್ಡವರಿಗೆ ಮಾತನಾಡ ಬೇಡ ಅಂತಾ ಹೇಳುತ್ತಿದ್ದಂತಯೇ ಆರೋಪಿ-1 ಈತನು ಅಲ್ಲಿಯೇ ಬಿದ್ದಿದ್ದ ಕಲ್ಲಿನಿಂದ ಜೋರಾಗಿ ಫಿರ್ಯಾಧಿದಾರರ ಎಡ ಹಣೆಗೆ ಹೊಡೆದು ರಕ್ತಗಾಯ ಪಡಿಸಿ, ಇನ್ನೊಂದು ಕಲ್ಲಿನಿಂದ ಫಿರ್ಯಾಧಿದಾರರ ಎಡ ದವಡೆಗೆ ಹೊಡೆದು ಒಳಪೆಟ್ಟು ಮಾಡಿದ್ದು, ನಂತರ ರಮೇಶ್ ನಾಯ್ಕನೊಂದಿಗೆ ಚಂದ್ರನಾಯ್ಕ, ಮೋಹನ್ನಾಯ್ಕ, ಭೀಮ್ಲನಾಯ್ಕ, ಶಾಂತಿಬಾಯಿ, ಲತಾಬಾಯಿ, ಲಕ್ಷ್ಮಿಬಾಯಿ,ಜಮಿಣಿಬಾಯಿ ರವರು ಅಕ್ರಮವಾಗಿ ಗುಂಪುಕಟ್ಟಿಕೊಂಡು ಬಂದು ಫಿರ್ಯಾಧಿಗೆ ಹಾಗೂ ಅವರ ಮಗ ರಾಜೇಂದ್ರನಾಯ್ಕನಿಗೆ ಕೈ ಕಾಲುಗಳಿಂದ  ಮೈ-ಕೈಗೆ ಹೊಡೆದು ಒಳಪೆಟ್ಟು ಮಾಡಿ, ಪ್ರಾಣ ಬೆಧರಿಕೆ ಹಾಕಿರುತ್ತಾರೆ ಅಂತಾ ಫಿರ್ಯಾಧಿದಾರರು ಠಾಣೆಗೆ ಹಾಜರಾಗಿ ನೀಡಿದ ಗಣಕೀಕೃತ ದೂರಿನ ಮೇರೆಗೆ ಪ್ರಕರಣ ದಾಖಲಿಸಿದೆ.
15 Cr.No:0005/2016
(IPC 1860 U/s 504,143,147,148,149,323,324,354 )
16/01/2016 Under Investigation
RIOTS - Others
Brief Facts :  ಫಿಯರ್ಾಧಿ ಮತ್ತು ಆರೋಪಿತರಿಗೆ ಈಗ್ಗೆ 1 ವರ್ಷದ ಹಿಂದಿನಿಂದ ಜಮೀನಿನ ವಿಷಯದಲ್ಲಿ ವ್ಯಾಜ್ಯವಿದ್ದು ಈ ಕುರಿತು ತಾಂಡದ ಹಿರಿಯರ ಮುಂದೆ ಪಂಚಾಯ್ತಿ ಮಾಡಿದಾಗ್ಯೂ ಬಗೆಹರಿಯದ ಕಾರಣ ಈ ದಿನ ದಿನಾಂಕ : 16-01-2016 ರಂದು ತಾಂಡದ ಹಿರಿಯರೊಂದಿಗೆ ಫಿಯರ್ಾದಿ ಮತ್ತು ಆರೋಪಿತರೆಲ್ಲರೂ ಸೇರಿ ಪಂಚಾಯ್ತಿ ಮಾಡುವಾಗ ಒಬ್ಬರಿಗೊಬ್ಬರು ಬಾಯಿ ಮಾತಿನ ಜಗಳ ಮಾಡಿಕೊಂಡು ಆರೋಪಿತರೆಲ್ಲರೂ ಸೇರಿ ಫಿಯರ್ಾದಿ ಮತ್ತು ಆತನ ಕಡೆಯವರಿಗೆ ಅವಾಚ್ಯ ಶಬ್ದಗಳಿಂದ ಬೈದು, ಫಿಯರ್ಾಧಿದಾರನ ತಾಯಿ ಜಮುನಾಬಾಯಿಯ ಸೀರೆಯನ್ನು ಎಳೆದಾಡಿ ಮಾನಭಂಗ ಮಾಡಲು ಪಯತ್ನಿಸಿ, ಕಲ್ಲಿನಿಂದ ಕೆಳಹೊಟ್ಟೆಗೆ ಹೊಡೆದು ಒಳಪೆಟ್ಟು ಮಾಡಿದ್ದರಿಂದ ಮಮರ್ಾಂಗದಿಂದ ರಕ್ತಸ್ರಾವ ಆಗಿದ್ದು, ಉಳಿದವರಿಗೂಸಹ ತಲೆಗೆ ಮತ್ತು ಎದೆಗೆ ಕಲ್ಲಿನಿಂದ ಹೊಡೆದು ಒಳಪೆಟ್ಟು ಮಾಡಿರುತ್ತಾರೆ ಕಾರಣ ಆರೋಪಿತರ ವಿರುದ್ದ ಕಾನೂನು ಕ್ರಮ ಜರುಗಿಸಲು ಫಿಯರ್ಾದಿ ಹ.ಬೊ ಹಳ್ಳಿ ಸರಕಾರಿ ಆಸ್ಪತ್ರೆಯಲ್ಲಿ ನೀಡಿದ ಹೇಳಿಕೆ ದೂರನ್ನು ಹೆಚ್.ಸಿ 110 ರವರು ಪಡೆದು ಪಿ.ಸಿ 530 ರವರ ಮುಖಾಂತರ ಕಳುಹಿಸಿಕೊಟ್ಟಿದ್ದನ್ನು ಪಡೆದು ಪ್ರಕರಣ ದಾಖಲಿಸಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ