ಗುರುವಾರ, ಜನವರಿ 7, 2016

PRESS NOTE OF 07/01/2016

Crime Key Report From   To   
Sl. No FIR No FIR Date Crime Group - Crime Head Stage of case
Brucepet PS
1 Cr.No:0004/2016
(CODE OF CRIMINAL PROCEDURE, 1973 U/s 110(A) )
07/01/2016 Under Investigation
CrPC - Security For Good Behaviour (Sec 110)
Brief Facts :  ಈ ದಿನ ದಿನಾಂಕಃ 07/01/2016ರಂದು ಬೆಳಿಗ್ಗೆ 10.00 ಗಂಟೆಗೆ ನಾನು ಮತ್ತು ಸಿಬ್ಬಂದಿಯವರಾದ ಹೆಚ್.ಸಿ-19, ಪಿಸಿ-1174 ರವರೊಂದಿಗೆ ಠಾಣೆ ಸ್ವತ್ತಿನ ಪ್ರಕರಣಗಳಲ್ಲಿ  ಮಾಲು ಮತ್ತು ಆರೋಪಿಗಳ  ಪತ್ತೆಗಾಗಿ ನಗರದಲ್ಲಿ ಹೊರಟಿದ್ದು, ನಗರದ ಠಾಣಾ ಸರಹದ್ದಿನಲ್ಲಿ ತಿರುಗಾಡುತ್ತಾ ಬೆಳಿಗ್ಗೆ 10.30 ಗಂಟೆಗೆ ಬಳ್ಳಾರಿ ನಗರದ ಬಾಪೂಜಿ ನಗರ ಸರ್ಕಲ್ ಹತ್ತಿರ ಹೋದಾಗ ಮೇಲ್ಕಂಡ ಆರೋಪಿತನು ನಮ್ಮನ್ನು ನೋಡಿ ಓಡಿ ಹೋಗಲು ಪ್ರಯತ್ನಿಸಿದವನನ್ನು ನಾವುಗಳು ನೋಡಿ ಬೆನ್ನತ್ತಿ ಹಿಡಿದು ನೋಡಲು ಮೇಲ್ಕಂಡ ಆರೋಪಿತನಾಗಿದ್ದು ವಿಚಾರಿಸಲು  ತನ್ನ ಹೆಸರು ವಿಳಾಸ ಮೇಲ್ಕಂಡಂತೆ ನುಡಿದಿದ್ದು, ಓಡಿ ಹೋದ ಬಗ್ಗೆ ವಿಚಾರಿಸಲು ಸಮರ್ಪಕವಾದ ಉತ್ತರ ನೀಡಲಿಲ್ಲ. ಈತನು ನಮ್ಮ ಠಾಣೆಯ ಎಂ.ಓ.ಬಿ.ಆಸಾಮಿಯಾಗಿದ್ದು, ಪದೇ ಪದೇ ಸ್ವತ್ತಿನ ಅಪರಾಧಗಳನ್ನು ಮಾಡುವ ಚಾಳಿವುಳ್ಳವನಾಗಿರುತ್ತಾನೆ. ಹಾಗೂ ಸದರಿ ಆಸಾಮಿಯು ಈ ಹಿಂದೆ ಕಳುವು ಪ್ರಕರಣಗಳಲ್ಲಿ ಶಾಮೀಲಾಗಿರುತ್ತಾನೆಂದು ತಿಳಿದು ಬಂದಿದ್ದರಿಂದ ಸದರಿಯವನನ್ನು ಅಲ್ಲೇ ಬಿಟ್ಟಲ್ಲಿ ಯಾವುದಾದರೂ ಸ್ವತ್ತಿನ ಅಪರಾಧ ಮಾಡಬಹುದೆಂದು ಸಂಶಯದಿಂದ ಮತ್ತು ಅವನನ್ನು ಜಾಮೀನಿಲ್ಲದೆ ಬಿಟ್ಟಲ್ಲಿ ಸಾರ್ವಜನಿಕರಿಗೆ ಶಾಂತತಾ ಭಂಗ ಉಂಟು ಮಾಡಬಹುದೆಂದು ಮುಂಜಾಗ್ರತಾ ಕ್ರಮವಾಗಿ ಸದರಿ ಆಸಾಮಿಯನ್ನು ವಶಕ್ಕೆ ತೆಗೆದುಕೊಂಡು ಬೆಳಿಗ್ಗೆ 11.00 ಗಂಟೆಗೆ ಠಾಣೆಗೆ ಬಂದು ಆರೋಪಿತನ ವಿರುದ್ದ ಈ ಪ್ರಥಮ ವರ್ತಮಾನ ವರದಿ ದಾಖಲಿಸಿರುತ್ತೇನೆ.
Cowlbazar PS
2 Cr.No:0008/2016
(IPC 1860 U/s 363 )
07/01/2016 Under Investigation
KIDNAPPING AND ABDUCTION - Others
Brief Facts :  ಈ ದಿನ ದಿನಾಂಕ: 07/01/2016 ರಂದು ಬೆಳಿಗ್ಗೆ 10-30 ಗಂಟೆಗೆ  ಪಿರ್ಯಾದಿದಾರರಾದ ಶ್ರೀ ರಾಯಪ್ಪ ರವರು ಠಾಣೆಗೆ ಬಂದು ನೀಡಿದ ದೂರನ್ನು ಪಡೆದು ನೋಡಲಾಗಿ ಸಾರಾಂಶವೆನೆಂದರೆ; ತನ್ನ ಮಗ ಶಿವಶಂಕರ್ ವ;13ವರ್ಷ ಈತನು ದಿನಾಂಕ: 04/01/2016 ರಂದು ತಮ್ಮ ಗ್ರಾಮದಿಂದ ಸಿರುಗುಪ್ಪದ ಶಾಂತಿನಿಕೇತನ ಶಾಲೆಗೆ ಹೋಗುವುದಾಗಿ ಹೇಳಿ ಹೋದವನು ನಾಪತ್ತೆಯಾಗಿರುತ್ತಾನೆ. ಅವನ ಸ್ಕೂಲ್ ಬ್ಯಾಗ್ ಬಳ್ಳಾರಿ ವಿಮ್ಸ್ ಆಸ್ಪತ್ರೆ ಹತ್ತಿರ ದೊರೆತಿದ್ದು. ವಿಮ್ಸ್ ಹತ್ತಿರ ಹಣ್ಣು ಮಾರುವವರು ಶಿವಶಂಕರ್ ನಿಗೆ  ವಿಮ್ಸ್ ಆಸ್ಪತ್ರೆಯ ಹತ್ತಿರ ನೋಡಿದ್ದು ನಂತರ ಕಾಣದೆ ನಾಪತ್ತೆಯಾಗಿರುತ್ತಾನೆ.  ಅವನು ಅಪ್ರಪ್ತ ವಯಸ್ಕಬಾಲಕನಾಗಿದ್ದು ಯಾರೋ ದುಷ್ಮರ್ಮಿಗಳು ಯಾವುದೋ ಉದ್ದೇಶಕ್ಕಾಗಿ  ಅಪಹರಿಸಿಕೊಂಡು ಹೋಗಿರುವುದಾಗಿ ನೀಡಿದ ದೂರನ್ನು ಪಡೆದು ಪ್ರಕರಣವನ್ನು ದಾಖಲು ಮಾಡಿದೆ.
Gadiganur PS
3 Cr.No:0002/2016
(MMDR (MINES AND MINERALS REGULATION OF DEVELOPMENT) ACT 1957 U/s 4(1),4(1A),21(1) ; IPC 1860 U/s 379 )
07/01/2016 Under Investigation
KARNATAKA STATE LOCAL ACTS - Mmdr (Mines & Minerals Regulation Development) Act 1957
Brief Facts :  ದಿನಾಂಕ:17.08.2010 ರಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳು ಸಂಡೂರು ತಾಲ್ಲೂಕು ಬನ್ನಿಹಟ್ಟಿ ಗ್ರಾಮದ ಸಾಯಿತೇಜಾ ಮೈನಿಂಗ್ ಇಂಡಸ್ಟ್ರೀಸ್ ಸ್ಟಾಕ್ ಯಾರ್ಡ್ ಗೆ ಭೇಟಿ ನೀಡಿ ಒಟ್ಟು ಅಂದಾಜು 8250 ಮೆ.ಟನ್ ದಾಸ್ತಾನು ಇರುವುದನ್ನು ಖಚಿತಪಡಿಸಿಕೊಂಡು ಸದರಿ ದಾಸ್ತಾನಿಗೆ ಸಂಬಂಧಿಸಿದ ದಾಖಲೆಗಳನ್ನು ತಕ್ಷಣವೇ ನೀಡುವಂತೆ ಇಲಾಖೆಯ ಅಧಿಕಾರಿಗಳು ಸಾಯಿ ತೇಜ್ ಮೈನಿಂಗ್ ಇಂಡಸ್ಟ್ರಿಸ್ ರವರಿಗೆ ನೋಟಿಸ್ ನೀಡಿದ್ದು, ಸದರಿ ಮೈನಿಂಗ್ ಇಂಡಸ್ಟ್ರಿಸ್ ರವರು ದಿನಾಂಕ: 12328 ಮೆ.ಟನ್ ಅದಿರು ದಾಸ್ತಾನು ಇರುವುದಾಗಿ ಸಮಾಜಾಯಿಸಿಯನ್ನು ನೀಡಿದ್ದು, ಟ್ರೀಪ್ ಶೀಟಗಳ ಪ್ರಕಾರ ಒಟ್ಟು 13864 ಮೆ.ಟನ್ ಅದಿರು  ಇದ್ದು, ಇಲಾಖೆಯ ಅಧಿಕಾರಿಗಳು ಎಲ್ಲಾ ದಾಖಲಾತಿಗಳ ಪರಿಶೀಲನೆಯ ನಂತರ ಅಂದಾಜು 5659 ಮೆ.ಟನ್ ಕಬ್ಬಿಣದ ಅದಿರನ್ನು ಯಾವುದೇ ಪರವಾನಿಗೆಯಿಲ್ಲದೆ ಸರ್ಕಾರಕ್ಕೆ ಸಂದಾಯ ಮಾಡಬೇಕಾದ ರಾಜಧನವನ್ನು ಕಟ್ಟದೇ ಕಳ್ಳತನದಿಂದ ಸಾಗಾಣಿಕೆ ಮಾಡಿರುವುದು ದೃಢಪಟ್ಟಿದ್ದರಿಂದ ಭೂ ವಿಜ್ಞಾನ ಇಲಾಖೆಯವರು ಸದರಿ ಇಂಡಸ್ಟ್ರೀಸ್ ನಲ್ಲಿ ಇದ್ದ ಕಬ್ಬಿಣ್ಣದ ಅದರಿನ್ನು 
ಪಂಚರ ಸಮಕ್ಷಮ ಜಪ್ತುಮಾಡಿಕೊಂಡಿದ್ದು, ಒಟ್ಟು 5659 ಮೆ.ಟನ್ ಕಬ್ಬಿಣದ ಅದಿರನ್ನು ಯಾವುದೇ ಪರವಾನಿಗೆ ಇಲ್ಲದೇ ಸರ್ಕಾರಕ್ಕೆ ರಾಜಧನವನ್ನು ಕಟ್ಟದೇ ಕಳ್ಳತನದಿಂದ ಸಾಗಾಣಿಕೆ ಮಾಡಿದ ಸಾಯಿತೇಜಾ ಮೈನಿಂಗ್ ಇಂಡಸ್ಟ್ರೀಸ್ ರವರ ವಿರುದ್ದ ಕಾನೂನು ಕ್ರಮ ಜರುಗಿಸುವಂತೆ ಮಾನ್ಯ ಸಿ.ಜೆ.ಮತ್ತು ಜೆ.ಎಂ.ಎಫ್.ಸಿ. ನ್ಯಾಯಾಲಯ, ಸಂಡೂರು ರವರಿಗೆ ತಮ್ಮ ದೂರನ್ನು ನೀಡಿದನ್ನು ಮಾನ್ಯ ನ್ಯಾಯಾಲಯವು ತನಿಖೆ ಕೈಗೊಂಡು ವರದಿ ನೀಡುವಂತೆ ಜ್ಞಾಪನವನ್ನು ನೀಡಿದ್ದನ್ನು ಈ ದಿನ ದಿನಾಂಕ: 07.01.2016 ರಂದು ಮಾನ್ಯ ಸಿ,.ಪಿ.ಐ.ಸಾಹೇಬರು ಸಂಡೂರು ರವರಿಂದ ಪಡೆದುಕೊಂಡು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದೆ. (ದೂರು ಪ್ರತಿಯನ್ನು ಲಗತ್ತಿಸಿದೆ).
Gandhinagar PS
4 Cr.No:0002/2016
(IPC 1860 U/s 00MP )
07/01/2016 Under Investigation
MISSING PERSON - Man
Brief Facts :  ದಿನಾಂಕ:04.01.2016 ರಂದು ಬೆಳಿಗ್ಗೆ 08.30 ಗಂಟೆಗೆ  ಫಿರ್ಯಾಧಿದಾರರ ಅಳಿಯನಾದ ವಾಹೀದ್ ಭಾಷ, 38 ವರ್ಷ, ರವರು ತಮ್ಮ ಊರಾದ ಆಂದ್ರಪ್ರದೇಶದ ಹೊಳಗುಂದ ದಿಂದ ಹೊರಟು ಬಳ್ಳಾರಿಗೆ ಬಂದು ಬಳ್ಳಾರಿ ನಗರದ ಕೋಲಾಚಲಂ ಕಾಂಫೌಂಡ್ ನಲ್ಲಿರುವ ಶ್ರೀಗಣಪತಿ ಮನೋ ವೈಧ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆದುಕೊಂಡು ವಾಪಾಸ್ಸು ತಮ್ಮ ಊರಾದ ಹೊಳಗುಂದಕ್ಕೆ ಹೋಗದೇ ಕಾಣೆಯಾಗಿದ್ದು ಕಾಣೆಯಾದ ತನ್ನ ಅಳಿಯನನ್ನು ಪತ್ತೆಮಾಡಿಕೊಡಬೇಕೆಂದು ಕೊಟ್ಟ ದೂರಿನ ಮೇರೆಗೆ ಈ ಪ್ರ.ವ..ವರದಿ
Hospet Extention PS
5 Cr.No:0004/2016
(IPC 1860 U/s 498A,323,324,504,506,34 ; DOWRY PROHIBITION ACT, 1961 U/s 3,4 )
07/01/2016 Under Investigation
CRUELTY BY HUSBAND - Dowry Harasement
Brief Facts :  ಈ ದಿನ ದಿನಾಂಕ:5-1-2016 ರಂದು ರಾತ್ರಿ 8-15 ಗಂಟೆಗೆ ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಯಿಂದ ಬಂದ ಎಂ.ಎಲ್.ಸಿ. ಆಧಾರದ ಮೇರೆಗೆ ಹೆಚ್.ಸಿ.314 ರವರಿಗೆ  ಫಿರ್ಯಾದಿ ದೂರು ಒಪಡೆದುಕೊಂಡು ಬರಲು ಶಿವಮೊಗ್ಗಕ್ಕೆ ಕಳುಹಿಸಿದ್ದು, ಸದ್ರಿ ಹೆಚ್,ಸಿ,ರವರಿಗೆ ದಿನಾಂಕ 6-1-2016 ರಂದು ಫಿರ್ಯಾದಿ ನೀಡಿದ ಲಿಖಿತ ದೂರು ಪಡೆದುಕೊಂಡು ಈ ದಿನ ಬೆಳಿಗ್ಗೆ 9-30 ಗಂಟೆಗೆ  ಹಾಜರು ಪಡಿಸಿದ್ದರ ಸಾರಾಂಶವೇನೆಂದರೆ, ಫಿರ್ಯಾದಿ ಮತ್ತು ಆರೋಪಿ 1 ರವರಿಗೆ ದಿನಾಂಕ 6-7-2003 ರಂದು ಲಗ್ನವಾಗಿದ್ದು, ಮದುವೆಯ ಕಾಲಕ್ಕೆ ವರದಕ್ಷಣೆಯಾಗಿ 2,50,000/- ರೂ.ಹಣವನ್ನು ನೀಡಿ  ಖರ್ಚು ಮಾಡಿ ಮದುವೆ ಮಾಡಿಕೊಟ್ಟಿದ್ದು, ಮದುವೆಯಾದ ಮರು ದಿನದಿಂದಲೂ ಆರೋಪಿತರು ಫಿರ್ಯಾದಿದಾರಳಿಗೆ ಮಾನಸಿಕವಾಗಿ ಮತ್ತು ದೈಹಿಕವಾಗಿ ಹಿಂಸೆ ನೀಡಿದ್ದು, ಮದುವೆಯಾದ ನಂತರ ಆರೋಪಿತರು ಹಿಂಸೆ ನೀಡಿ ಬಂಗಾರ ತರಲು ಒತ್ತಾಯ ಮಾಡಿದ್ದರಿಂದ ಫಿರ್ಯಾದಿಯು ತನ್ನ ತವರಿನಿಂದ 7 ತೊಲೆ ಬಂಗಾರದ ಒಡವೆಮಾಡಿಸಿಕೊಟ್ಟಿದ್ದರೂ ಸಹ ಆರೋಪಿತರು ಫಿರ್ಯಾದಿದಾರಳಿಗೆ ವಿನಾ ಕಾರಣವಾಗಿ  ಮಾನಸಿಕ  ಮತ್ತು ದೈಹಿಕ ಹಿಂಸೆ ನೀಡಿದ್ದು ಅದನ್ನು ಸಹಿಸಿಕೊಂಡಿಬಂದಿದ್ದರೂ ಸಹ ದಿನಾಂಕ 4-1-2016 ರಂದು ರಾತ್ರಿ 10-30 ಗಂಟೆಗೆ ಹೊಸಪೇಟೆ ಎಂ.ಜೆ.ನಗರ ತನ್ನ ಗಂಡನ ಮೆನೆಯಲ್ಲಿ ಮಕ್ಕಳು ಆಳುತ್ತಿದ್ದ ವಿಷಯವನ್ನು ನೆವ ಮಾಡಿಕೊಂಡು ಪುನ: ಮಾನಸಿಕ  ಮತ್ತು ದೈಹಿಕ ಹಿಂಸೆ ನೀಡಿ ಅವಾಚ್ಯ ಶಬ್ದಗಳಿಂದ ಬೈಡಿ ಆರೊಪಿತರು ಕೈಗಳಿಂದ ಲಟ್ಟಣಿಕೆಯಿಂದ ಹೊಡೆದು ಗಂಡನು ಫಿರ್ಯಾದಿಗೆ ಅರಚಾಡದಂತೆ ಬಾಯಿ ಮುಚ್ಚಿ ದಿಂಬಿನಿಂದ  ಕುತ್ತಿಗೆ ಮತ್ತು ಮುಖಕ್ಕೆ ಒತ್ತಿ ಮೈ ಮೇಲೆ ಹೊಡೆದು ಒಳನೋವು ಪಡಿಸಿರುತ್ತಾರೆಂದು ಸದರಿಯವರ ವಿರುದ್ಧ ಕಾನೂನು ಕ್ರಮ ಕೈಕೊಳ್ಳಲು ಕೋರಿ ನೀಡಿದ  ದೂರಿನ ಮೇರೆಗೆ ಪ್ರಕರಣ ದಾಖಲು ಮಾಡಿ ತನಿಖೆ ಕೈಕೊಂಡಿದೆ.
Hospet Town PS
6 Cr.No:0004/2016
(KARNATAKA EXCISE ACT, 1965 U/s 32(1),32(2),13(E),14,15 )
07/01/2016 Under Investigation
KARNATAKA STATE LOCAL ACTS - Karnataka Excise Act 1965
Brief Facts :  ಈ ದಿನ ದಿನಾಂಕ:07/01/2015 ರಂದು ಮಧ್ಯಾಹ್ನ 12-15 ಗಂಟೆಗೆ ಫಿರ್ಯಾದಿದಾರರಾದ ಶ್ರೀ,ಡಿ.ಶ್ರೀ,ಧರ್, ಪಿ.ಐ, ಪಟ್ಟಣ ಠಾಣೆ ರವರು ಠಾಣೆಯಲ್ಲಿ ಹಾಜರಾಗಿ ನೀಡಿದ ದೂರು ಸಾರಾಂಶ ಈ ದಿನ ದಿನಾಂಕ 07/10/2015 ರಂದು ಬೆಳಿಗ್ಗೆ 9-45 ಗಂಟೆಗೆ ಠಾಣೆಯಲ್ಲಿರುವಾಗ್ಗೆ ಡಿ.ಸಿ.ಐ.ಬಿ ಇನ್ಸ್ ಪೆಕ್ಟರ್ ರವರಾದ ಶ್ರೀ ಹನುಮಂತರಾಯಪ್ಪರವರು ತಮ್ಮ ಸಿಬ್ಬಂದಿಯವರೊಂದಿಗೆ ರಾಣಿಪೇಟೆಯ ಎ 1 ಬಾರ್ ಹತ್ತಿರ ಅನಧಿಕೃತವಾಗಿ ಸೇಂದಿ ಮಾರಾಟ ಮಾಡುತ್ತಿರುವುದಾಗಿ ಮಾಹಿತಿ ಬಂದಿದೆ ಬನ್ನಿರಿ ಎಂದು ನನಗೆ ಮಾಹಿತಿ ನೀಡಿದ್ದು ಕೂಡಲೇ ನಾನು ಸಿಬ್ಬಂದಿಯವರಾದ ಪಿ.ಸಿ 903, 968 ಜೀಪ್ ಚಾಲಕ ಎ.ಪಿ.ಸಿ 138 ರವರೊಂದಿಗೆ ಹೋಗಿ ಡಿ.ಸಿ.ಐ.ಬಿ, ಪಿ.ಐ ರವರೊಂದಿಗೆ ಬೆಳಿಗ್ಗೆ 09-55 ಗಂಟೆಗೆ ಎ 1 ಬಾರ್ ಹತ್ತಿರದ ಹನುಮಂತಪ್ಪ ರವರ ತೋಟದ ಮುಂದುಗಡೆಗೆ ಹೋಗಿ ಸ್ವಲ್ಪದೂರದಲ್ಲಿ ನಿಂತು ನೋಡಲಾಗಿ ಇಬ್ಬರು ವ್ಯಕ್ತಿಗಳು ಸಾರ್ವಜನಿಕ ಸ್ಥಳದಲ್ಲಿ ಸೇಂದಿಯನ್ನು ಮಾರಾಟ ಮಾಡುತ್ತಿದ್ದು ಸಾರ್ವಜನಿಕರು ಹಣವನ್ನು ನೀಡಿ ಅವರಿಂದ ತೆಗೆದುಕೊಂಡು ಕುಡಿಯುತ್ತಿದ್ದುದನ್ನು ನೋಡಿ  ದಾಳಿ ನಡೆಸಲಾಗಿ ಇಬ್ಬರು ವ್ಯಕ್ತಿಗಳು  
ಸಿಕ್ಕಿಬಿದ್ದಿದ್ದು ಸದರಿಯವರನ್ನು ಒಬ್ಬೊಬ್ಬರನ್ನಾಗಿ ವಿಚಾರಿಸಲಾಗಿ 1] ಫಾರೂಕ್ ಖಾನ್ ತಂದೆ ಲೇಟ್ ಅಹಮ್ಮದ್ ಖಾನ್, 50 ವರ್ಷ, ಮುಸ್ಲಿಂ ಜನಾಂಗ, ಕಾರಪೆಂಟರ್ ಕೆಲಸ, ವಾಸ|| ಹಂಪಿ ರಸ್ತೆ, ಹೊಸಪೇಟೆ, 2] ರವೀಂದ್ರ ತಂದೆ ಹನುಮಂತಪ್ಪ,  56 ವರ್ಷ, ವಾಲ್ಮಿಕಿ ಜನಾಂಗ, ವಾಸ|| ರಾಣಿಪೇಟೆ ಹೊಸಪೇಟೆ ಎಂದು ತಿಳಿಸಿದ್ದು ಸೇಂದಿ ಮಾರುತ್ತಿದ್ದ ಬಗ್ಗೆ ಪರವಾನಗಿಯನ್ನು ಕೇಳಲಾಗಿ ಯಾವುದೇ ರೀತಿಯ ಪರವಾನಗಿಯಿರುವುದಿಲ್ಲವೆಂದು ಮತ್ತು ಇಲ್ಲಿಗೆ ಬರುವ ಸಾರ್ವಜನಿಕರಿಗೆ ಕುಡಿಯಲು ನೀಡುವುದಾಗಿ ತಿಳಿಸಿರುತ್ತಾರೆ ಕ್ಯಾನ್ ನಲ್ಲಿದ್ದ ಸೇಂದಿಯನ್ನು ಪರೀಕ್ಷಿಸಲಾಗಿ ಸುಮಾರು 5 ಲೀಟರ್ ಗಳಷ್ಟು ಇದ್ದು ಇದು ಬಿಳಿ ಬಣ್ಣದಲ್ಲಿದ್ದು ಸದರಿ ಸೇಂದಿಯಲ್ಲಿ ಎಫ್.ಎಸ್.ಎಲ್ ಸ್ಯಾಂಪಲ್ ಗಾಗಿ ಒಂದು ಲೀಟರ್ ನೀರಿನ ಬಾಟಲಿಯಲ್ಲಿ ಒಂದು ಲೀಟರ್ ನಷ್ಟು ಸೇಂದಿ  ತೆಗೆದುಕೊಂಡು ಎಲ್ಲಾ ಸೇಂದಿ, ಬೆಲೆ ರೂ,200/- ಗಳು, ಸ್ಥಳದಲ್ಲಿ 4 ಜಗ್ಗು, ಎರಡು ಸಣ್ಣ ಜಗ್ಗು, ಒಂದು ಪ್ಲಾಸ್ಟಿಕ್ ಬಕೆಟ್ ಹಾಗೂ ಸೇಂಧಿ ಮಾರಾಟದಿಂದ  ಬಂದ ನಗದು ಹಣ ರೂ,40/- ಗಳನ್ನು ಪಂಚರ ಸಮಕ್ಷಮದಲ್ಲಿ ಈ ದಿನ ಬೆಳಿಗ್ಗೆ 10-30 ಗಂಟೆಯಿಂದ 11-30 ಗಂಟೆಯವರಗೆ ಜಪ್ತುಪಡಿಸಿಕೊಂಡು ಆರೋಪಿಗಳನ್ನು ವಶಕ್ಕೆ ಪಡೆದುಕೊಂಡು ಬೆಳಿಗ್ಗೆ 11-45 ಗಂಟೆಗೆ ವಾಪಸ್ಸು ಠಾಣೆಗೆ ಬಂದು ಪಿಸಿ-903 ರವರ ಮುಖಾಂತರ ಗಣಕಯಂತ್ರದಲ್ಲಿ ದೂರನ್ನು ತಯಾರಿಸಿದ್ದು, ಕಾರಣ ಸದರಿಯವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಲು ಸೂಚಿಸಲಾಗಿದೆ ಅಂತಾ ಇದ್ದ ದೂರು ಮೇರೆಗೆ ಹೊಸಪೇಟೆ ಪಟ್ಟಣ ಠಾಣಾ ಗುನ್ನೆ ನಂ: ನಂ:04/2016, ಕಲಂ:13(ಸಿ),14,15 ರೆ/ವಿ    2(1)(2) ಕೆ.ಇ ಕಾಯ್ದೆ ರೀತ್ಯ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದೆ.
Sandur PS
7 Cr.No:0002/2016
(CODE OF CRIMINAL PROCEDURE, 1973 U/s 110(E)(G) )
07/01/2016 Under Investigation
CrPC - Others
Brief Facts :  ಜಿ.ಆರ್.ಷಣ್ಮುಖಪ್ಪ, ಪಿ.ಎಸ್.ಐ, ಸಂಡೂರು ಪೊಲೀಸ್ ಠಾಣೆ ಆದ ನಾನು ಮಾನ್ಯ ಘನ ನ್ಯಾಯಾಲಯದಲ್ಲಿ ನಿವೇದಿಸಿಕೊಳ್ಳುವುದೇನೆಂದರೆ, ಈ ದಿನ ದಿನಾಂಕ 07/01/2016 ರಂದು ಬೆಳಿಗ್ಗೆ 10-03 ಗಂಟೆಗೆ ಗ್ರಾಮ ಭೇಟಿಗಾಗಿ ನಾನು ಹಾಗು ಠಾಣೆಯ ಸಿಬ್ಬಂದಿಯವರಾದ ಪಿಸಿ: 377, 682 ರವರ ಸಂಗಡ ಹೋಗಿದ್ದು, ಸಂಡೂರು ಠಾಣಾ ವ್ಯಾಪ್ತಿಯಲ್ಲಿ ಬರುವ ನಾರಾಯಣಪುರ  ಗ್ರಾಮಕ್ಕೆ ಈದಿನ ಬೆಳಿಗ್ಗೆ 11-30  ಗಂಟೆಗೆ  ಭೇಟಿಗಾಗಿ ಹೋದಾಗ, ಗ್ರಾಮದಲ್ಲಿ ಬಾತ್ಮಿದಾರರಿಗೆ ಕಂಡು ಗ್ರಾಮದ ವಿದ್ಯಾಮಾನಗಳ ಬಗ್ಗೆ ಗೌಪ್ಯವಾಗಿ ವಿಚಾರಿಸಲು ಮಾಹಿತಿ ತಿಳಿದು ಬಂದಿದ್ದೇನೆಂದರೆ, [1]ನಾಗರಾಜ ತಂದೆ ತಿಮ್ಮಪ್ಪ, ವ: 39 ವರ್ಷ, ವಡ್ಡರ ಜನಾಂಗ, ಮೇಸ್ತ್ರಿ ಕೆಲಸ, ವಾಸ: ನಾರಾಯಣ ಪುರ ಗ್ರಾಮ, ಸಂಡೂರು ತಾಲೂಕು. [2] ಅನಂದಪ್ಪ ತಂದೆ ಶರಣಪ್ಪ, ವ : 45 ವರ್ಷ, ಲಿಂಗಾಯತರ ಜನಾಂಗ, ವ್ಯವಸಾಯ ಕೆಲಸ, ವಾಸ: ನಾರಾಯಣ ಪುರ ಗ್ರಾಮ, ಸಂಡೂರು ತಾಲೂಕು. ಇವರುಗಳು ಗ್ರಾಮದಲ್ಲಿ ನಸೀಬಿನ  ಮಟಕಾ ಜೂಜಾಟದಲ್ಲಿ ನಿರತರಾಗಿ, ಕದ್ದುಮುಚ್ಚಿ ಮೊಬೈಲ್ ಫೋನ್ ಗಳ ಮುಖಾಂತರ ಧಂದೆಯಲ್ಲಿ ತೊಡಗಿರುತ್ತಾರೆಂದು ತಿಳಿದು ಬಂದಿರುತ್ತದೆ. ಈಗಾಗಲೇ ಸದರಿ ಆರೋಪಿತರು ಗ್ರಾಮದಲ್ಲಿ ಮಟಕಾ ಜೂಜಾಟ ನಡೆಸುತ್ತಿದ್ದರಿಂದ ಈಹಿಂದೆ  ಆರೋಪಿತರ ಮೇಲೆ ಸಂಡೂರು ಠಾಣೆಯಲ್ಲಿ ಗುನ್ನೆ ನಂ: 08/2015  ಕಲಂ: 78 (3) ಕೆ.ಪಿ. ಯಾಕ್ಟ್ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿತರು ಮಾನ್ಯ ಸಿ.ಜೆ. ಮತ್ತು ಜೆ.ಎಂ.ಎಫ್.ಸಿ. ನ್ಯಾಯಾಲಯ, ಸಂಡೂರವರಲ್ಲಿ ಸಿಸಿ ನಂ: 98/2015 ರಲ್ಲಿ ತಲಾ ರೂ. 300-00 ರಂತೆ ಒಟ್ಟು ರೂ. 600-00 ಹಣವನ್ನು ದಂಡ ಕಟ್ಟಿರುತ್ತಾರೆ. ಆರೋಪಿತರು ಮಟಕಾ ಜೂಜಾಟ ನಡೆಸುತ್ತಿದ್ದರಿಂದ ಸಾರ್ವಜನಿಕರು ಮಟಕಾ ಜೂಜಾಟದಲ್ಲಿ ತೊಡಗಿ, ತಮ್ಮ ಹಣ-ಐಶ್ವರ್ಯವನ್ನು ಕಳೆದುಕೊಂಡು, ಮನೆಗಳಲ್ಲಿ ಗಲಭೆಗಳು ಆಗುವ ಸಾಧ್ಯತೆಗಳು ಇರುತ್ತವೆ. ಜೂಜಾಟವು ಒಂದು ಅನಿಷ್ಠ ಪದ್ದತಿ ಇದ್ದು, ಜೂಜಾಟದಿಂದ ಸಾರ್ವಜನಿಕರು ನಿರ್ಗತಿಕರಾಗಿ ಸಂಸಾರಗಳು ಬೀದಿಗೆ ಬರುವ ಸಾಧ್ಯತೆಗಳು ಇರುವುದರಿಂದ ಈ ದಿನ ದಿನಾಂಕ: ಮಧ್ಯಾಹ್ನ 12-00 ಗಂಟೆಗೆ ಮೇಲ್ಕಾಣಿಸಿದ ಆರೋಪಿತರನ್ನು ವಶಕ್ಕೆ ತೆಗೆದುಕೊಂಡು, ಠಾಣೆಗೆ 12-45 ಗಂಟೆಗೆ ಕರೆತಂದು ಆರೋಪಿತರ ವಿರುದ್ದ ಗುನ್ನೆ ನಂಬರ್ 02/2016 ಕಲಂ 110 [ಇ] & [ಜಿ] ಸಿ.ಆರ್.ಪಿ.ಸಿ ಪ್ರಕಾರ ಕೇಸು ದಾಖಲಿಸಿಕೊಂಡು ಕ್ರಮ ಕೈಗೊಂಡಿರುತ್ತದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ