ಬುಧವಾರ, ಜನವರಿ 20, 2016

PRESS NOTE OF 20/01/2016

Crime Key Report From   To   
Sl. No FIR No FIR Date Crime Group - Crime Head Stage of case
Bellary Rural PS
1 Cr.No:0025/2016
(KARNATAKA MINOR MINERAL CONSISTENT RULE 1994 U/s 42,43,44 ; KARNATAKA LAND REVENUE ACT 1964 U/s 192(A),73 ; MMDR (MINES AND MINERALS REGULATION OF DEVELOPMENT) ACT 1957 U/s 21(1) ; IPC 1860 U/s 379 )
19/01/2016 Under Investigation
KARNATAKA STATE LOCAL ACTS - Karnataka Minor Mineral Consistent Rule 1994
Brief Facts :  ದಿನಾಂಕ: 19-1-2016 ರಂದು ಬೆಳಿಗ್ಗೆ 9-30 ಗಂಟೆಗೆ ಠಾಣೆಯ ಪಿ.ಎಸ್.ಐ ರವರಾದ ಶ್ರೀ. ಕೆ. ಹೊಸಕೇರಪ್ಪರವರು ದೂರು ನೀಡಿದ್ದು ಸಾರಾಂಶ: ದಿನಾಂಕ: 19-1-2016 ರಂದು ಬೆಳಿಗ್ಗೆ ನಾನು ಸಿಬ್ಬಂದಿಯವರಾದ ಹೆಚ್.ಸಿ-43-119 ಪಿ.ಸಿ-324 ರವರನ್ನು ಕರೆದುಕೊಂಡು ಇಲಾಖೆಯ ಜೀಪ್ ನಂಬರ್ ಕೆ.ಎ-34-ಜಿ-303 ರಲ್ಲಿ ಚಾಲಕ ಎ.ಪಿ.ಸಿ-89 ರೊಂದಿಗೆ ಠಾಣೆಯ ಸರಹದ್ದಿನಲ್ಲಿ ರೌಂಡ್ಸ್ ಮಾಡುತ್ತಾ ಇದ್ದಾಗ ಠಾಣೆಯ ಸರಹದ್ದು ಹೊನ್ನಳ್ಳಿ ಗ್ರಾಮದ ಕಡೆಯಿಂದ ಟ್ರಾಕ್ಟರ್ ಟ್ರಾಲಿಗಳಲ್ಲಿ ಮರಳನ್ನು ಸಾಗಾಣಿಕೆ ಮಾಡುತ್ತಿರುತ್ತಾರೆಂದು ಮಾಹಿತಿ ಬಂದಿದ್ದು ಈ ಮೇರೆಗೆ ಮಾನ್ಯ ಡಿ.ಎಸ್.ಪಿ ಸಾಹೇಬರು, ಬಳ್ಳಾರಿ ಗ್ರಾಮೀಣ ಉಪ-ವಿಭಾಗ ಮತ್ತು ಮಾನ್ಯ ಸಿ.ಪಿ.ಐ ಬಳ್ಳಾರಿ ಗ್ರಾಮೀಣ ವೃತ್ತರವರ ಮಾರ್ಗದರ್ಶನದಲ್ಲಿ ಇಬ್ಬರು ಪಂಚರನ್ನು ಕರೆದುಕೊಂಡು ಹೊನ್ನಳ್ಳಿ ಗ್ರಾಮದ ಬಳಿ ಇರುವ ಆಂಜಿನೇಯ ಸ್ವಾಮಿ ದೇವಸ್ಥಾನದ ಮುಂದುಗಡೆ ಹೋಗಿ ಕಾಯುತ್ತಾ ಇದ್ದಾಗ ಬೆಳಿಗ್ಗೆ 7-45 ಗಂಟೆಗೆ ಹೊನ್ನಳ್ಳಿ ಗ್ರಾಮದ ಕಡೆಯಿಂದ ಎರೆಡು ಮರಳು ತುಂಬಿದ ಟ್ರಾಕ್ಟರ್ ಟ್ರಾಲಿಗಳು ಬರುತ್ತಿದ್ದು ನೋಡಿ ಅವುಗಳನ್ನು ನಿಲ್ಲಿಸಿ ಇಬ್ಬರು ಚಾಲಕರನ್ನು ಹಿಡಿದುಕೊಂಡು ಅವರಿಗೆ ತಾವು ಲೋಡು ಮಾಡಿಕೊಂಡಿದ್ದ ಮರಳಿನ ಬಗ್ಗೆ ದಾಖಲಾತಿ ಕೇಳಲು ತಮ್ಮ ಬಳಿ ಯಾವುದೇ ದಾಖಲಾತಿ ಇಲ್ಲವೆಂದು ತಿಳಿಸಿದ್ದರಿಂದ 1] ಟ್ರಾಕ್ಟರ್ ನಂಬರ್ ಕೆ.ಎ-35-ಟಿ-3996 ಟ್ರಾಲಿ ಕೆ.ಎ-35-ಟಿ-6100 ಟ್ರಾಲಿಯಲ್ಲಿ ಲೋಡು ಮಾಡಿದ 2 ಮೆಟ್ರಿಕ್ ಟನ್ ಮರಳು ಮತ್ತು ಸ್ಯಾಂಪಲ್ ಮರಳು ಜಪ್ತು ಮಾಡಿಕೊಂಡು ಚಾಲಕ ಲೋಕೇಶ್ನನ್ನು ವಶಕ್ಕೆ ತೆಗೆದುಕೊಂಡಿದ್ದು 2] ಟ್ರಾಕ್ಟರ್ ನಂಬರ್ ಕೆ.ಎ-34-ಎನ್-4758 ಟ್ರಾಲಿ  ಚಾಸಿ ಸಂಖ್ಯೆ: ಕೆ.ಜಿ.ಇ.ಡಬ್ಲು: 100/2015 ಟ್ರಾಲಿಯಲ್ಲಿ ಲೋಡು ಮಾಡಿದ 2 ಮೆಟ್ರಿಕ್ ಟನ್ ಮರಳು ಮತ್ತು ಸ್ಯಾಂಪಲ್ ಮರಳನ್ನು ಜಪ್ತು ಮಾಡಿಕೊಂಡು ಚಾಲಕ ಹನುಮಂತ ನನ್ನು ವಶಕ್ಕೆ ತೆಗೆದುಕೊಂಡಿದ್ದು ಸಿಕ್ಕಿಬಿದ್ದ ಚಾಲಕರು ಮತ್ತು ಪರಾರಿಯಲ್ಲಿರುವ ಮಾಲೀಕರಾದ ತಿಮ್ಮನಗೌಡ ಮತ್ತು ಬಸಪ್ಪರವರು ಯಾವುದೋ ಸ್ಥಳದಿಂದ ಮರಳನ್ನು ಕಳ್ಳತನ ಮಾಡಿ ತಮ್ಮ ಟ್ರಾಕ್ಟರ್ ಟ್ರಾಲಿಗಳಲ್ಲಿ ತುಂಬಿಕೊಂಡು ಅಕ್ರಮವಾಗಿ ಸಾಗಾಣಿಕೆ ಮಾಡುತ್ತಿದ್ದರಿಂದ ಇವರುಗಳ ಮೇಲೆ ಪ್ರಕರಣ ದಾಖಲಿಸಲು ಸೂಚಿಸಿದ ಮೇರೆಗೆ ಈ ಪ್ರ.ವ.ವರದಿ ಸಲ್ಲಿಸಿದೆ.
2 Cr.No:0026/2016
(CODE OF CRIMINAL PROCEDURE, 1973 U/s 107 )
19/01/2016 Under Investigation
CrPC - Security For Good Behaviour (Sec 107 )
Brief Facts :  ಈ ದಿನ ದಿನಾಂಕಃ 19-1-2016 ರಂದು ಸಂಜೆ 4-00 ಗಂಟೆಗೆ ನಾನು ಹೆಚ್ಸಿ-43 ರವರೊಂದಿಗೆ ಹಾಲಿ ನೆಡೆಯಲಿರುವ ತಾಲ್ಲೂಕು ಪಂಚಾಯತಿ ಮತ್ತು ಜಿಲ್ಲಾ ಪಂಚಾಯತಿ ಚುನಾವಣೆ ನಿಮಿತ್ಯ ಕೊಳಗಲ್ಲು ಗ್ರಾಮಕ್ಕೆ ಹೋದಾಗ ಅಲ್ಲಿ ಬಾತ್ಮಿದಾರರಿಂದ ತಿಳಿದು ಬಂದಿದ್ದೆನೆಂದರೆ, ಬಳ್ಳಾರಿ ಗ್ರಾಮೀಣ ಠಾಣೆ ಗುನ್ನೆ ನಂ: 20/2016 ಕಲಂ: 143-147-148-427-308 ರೆ.ವಿ. 149 ಐ.ಪಿ.ಸಿ ಬಳ್ಳಾರಿ ಗ್ರಾಮೀಣ ಠಾಣೆ ಗುನ್ನೆ ನಂ: 21/2016 ಕಲಂ: 143-147-148-353-308 ಆಧಾರ 149 ಐಪಿಸಿ. ಮತ್ತು ಬಳ್ಳಾರಿ ಗ್ರಾಮೀಣ ಠಾಣೆ ಗುನ್ನೆ ನಂ: 22/2016 ಕಲಂ: 143-147-148-324-427-308 ರೆ.ವಿ. 149 ಐಪಿಸಿ ಪ್ರಕರಣದಲ್ಲಿಯ ಆರೋಪಿತರು ಅಂದರೆ ಪ್ರತಿವಾದಿಗಳಾದ ಉಪ್ಪಾರ ಜನಾಂಗದ 1] ಊಳೂರು ರಮೇಶ 2] ಸಂಜೀವಪ್ಪ 3] ನಾಗಲಪರಿ ಈರಣ್ಣ 4] ತಿಮ್ಮಪ್ಪ 5] ಮೆಂಬರ್ ಎರಿಸ್ವಾಮಿ 6] ಶಿವರಾಮ 7] ಉಪ್ಪಾರ ವೀರೇಶ 8] 
ಮಂಜು 9] ಎರಿಸ್ವಾಮಿ 10] ವೀರೇಶ 11] ಉಪ್ಪಾರ ವೀರೇಶ 12] ತಿಪ್ಪೇಸ್ವಾಮಿ 13] ಸಂಡೂರು ವೀರೇಶ 14] ಎರಿಸ್ವಾಮಿ 15] ಊಳೂರು ವೀರೇಶ್ 16]. ಶರಣ 17]. ಚಿದಾನಂದ 18]. ಉಪ್ಪಾರ ವಿರೇಶ 19]. ವಿರೇಶ 20]. ಶಿವರಾಂ 21]. ಪಾಲಾಕ್ಷಿ 22]. ತಿಪ್ಪೆಸ್ವಾಮಿ 23] ಮಲ್ಲೇಶಿ 24] ಬಿಸಲಹಳ್ಳಿ ಬಸವ 25] ಧರ್ಮಣ್ಣ 26] ಕೌಡಿಕೆ ವೀರೇಶ 27] ಕೌಡಿಕಿ ಗಾಧಿಲಿಂಗ 28] ಹೊನ್ನೂರ 29] ಎರ್ರಿಸ್ವಾಮಿ 30] ನಾಗರಾಜ 31] ಬಸವರಾಜ 32] ಕೌಡಿಕೆ ಸುರೇಶ 33] ಮಲ್ಲಾಪುರ ಕೃಷ್ಣಯ್ಯ 34] ದಮ್ಮೂರು ಎರಿಸ್ವಾಮಿ 35] ರೇವಣಸಿದ್ದ 36] ಏಳುಬೆಂಚಿ ಮಲ್ಲಿ 37] ಮಂತ್ರದ ಸಿದ್ದಪ್ಪ 38] ದಮ್ಮುರು ಎರಿಸ್ವಾಮಿ 39] ದಮ್ಮೂರು ಎರಿಸ್ವಾಮಿ 40] ಗಡಿಗೆ ಬುಡ್ಡ 41] ಶರಣಪ್ಪ 42] ದಮ್ಮುರು ಎರಿಸ್ವಾಮಿ 43] ಯಲ್ಲಪ್ಪ 44] ಎರಿಸ್ವಾಮಿ 45]. ಹನುಮಂತಪ್ಪ 46]. ನಾಗರಾಜ 47]. ಶಿವಕುಮಾರ್ 48]. ಅದೇಪ್ಪ 49]. ಎರ್ರಿಸ್ವಾಮಿ 50]. ವಿರೇಶ 51]. ರಾಮ 52]. ಚಂದ್ರ 53]. ಕೌಡಿಕಿ ರಾಮ 54]. ಬಸವರಾಜ 55]. ರಮೇಶ 56]. ರುದ್ರಪ್ಪ ದೊಡ್ಡಣ್ಣನವರ್ 57]. ಹುಚ್ಚಪ್ಪ 58]. ಹೊನ್ನೂರ್ ಸ್ವಾಮಿ 59]. ಮಲ್ಲಯ್ಯ 60]. ಬಾರಿಕರ ಆಂಜಿನೇಯ ಹಾಗೂ ಇತರರು ಒಬ್ಬರ ಮೇಲೆ ಒಬ್ಬರು ವೈಷಮ್ಯ ಇಟ್ಟುಕೊಂಡಿದ್ದು ಇವರು ಯಾವುದೇ ಸಮಯದಲ್ಲಿ ಜಗಳ ಮಾಡಿಕೊಂಡು ಗ್ರಾಮದಲ್ಲಿ ಶಾಂತತೆಗೆ ಭಂಗವನ್ನುಂಟು ಮಾಡಿ ಅಸ್ತಿ-ಪಾಸ್ತಿ ನಷ್ಟವನ್ನುಂಟು ಮಾಡುವ, ಪ್ರಾಣಹಾನಿಗಳು ಆಗುವ, ಪ್ರಕ್ಷುಬ್ದ ವಾತಾವರಣ ಉಂಟಾಗುವ ಸಾದ್ಯತೆಗಳು ಇರುತ್ತವೆಂದು ತಿಳಿದು ಬಂದಿತು. ನಾನು ಸಹ ಗುಪ್ತಾವಾಗಿ ವಿಚಾರಣೆ ಮಾಡಲು ಮೇಲ್ಕಂಡ ಗುನ್ನೆಗಳಲ್ಲಿಯ ಅರೋಪಿತರು ಅಂದರೆ ಮೇಲ್ಕಂಡ ಪ್ರತಿವಾದಿಗಳು ವೈಷಮ್ಯ ಇಟ್ಟುಕೊಂಡಿರುತ್ತಾರೆಂದು ತಿಳಿದು ಬಂದಿತು. ಅದ್ದರಿಂದ ಠಾಣೆಗೆ ಮರಳಿ ಬಂದು ಸಂಜೆ 5-00 ಗಂಟೆಗೆ ಮೇಲ್ಕಂಡ ಪ್ರತಿವಾದಿಗಳ ಮೇಲೆ ಮುಂಜಾಗ್ರತೆ ಕ್ರಮವಾಗಿ ಠಾಣೆ ಗುನ್ನೆ ನಂ: 26/2016 ಕಲಂಃ 107 ಸಿಅರ್ಪಿಸಿ ರೀತ್ಯ ಪ್ರಕರಣ ದಾಖಲು ಮಾಡಿರುತ್ತೇನೆ.
Cowlbazar PS
3 Cr.No:0013/2016
(CODE OF CRIMINAL PROCEDURE, 1973 U/s 107 )
19/01/2016 Under Investigation
CrPC - Security For Good Behaviour (Sec 107 )
Brief Facts :  ನಾನು ಈ ದಿನ ದಿನಾಂಕ: 19/01/2016 ರಂದು ಮದ್ಯಾಹ್ನ 3-45 ಗಂಟೆಗೆ ಕೌಲ್ ಬಜಾರ್ ಪೊಲೀಸ್ ಠಾಣಾ  ಸರಹದ್ದಿನಲ್ಲಿ ಗಸ್ತು ಕರ್ತವ್ಯ ನಿರ್ವಹಿಸುತ್ತ ಎಸ್.ಪಿ. ಸರ್ಕಲ್, ದೇವಿನಗರ, ರಾಜೀವ್ ಗಾಂಧಿನಗರ ಏರಿಯಾಗಳಲ್ಲಿ ಗಸ್ತು ಮಾಡುತ್ತಾ ಭಾತ್ಮೀದಾರರನ್ನು ಭೇಟಿ ಮಾಡಿ ಮಾಹಿತಿ ಸಂಗ್ರಹಿಸಲಾಗಿ, ಹರೀಶ್ ಮತ್ತು ಗೌತಮ್ ರವರು ದೇವಿನಗರ ಮತ್ತು ಎಸ್.ಪಿ. ಸರ್ಕಲ್ ಏರಿಯಾಗಳಲ್ಲಿ ಜನರನ್ನು ಗುಂಪುಕಟ್ಟಿಕೊಂಡು ತಿರುಗಾಡುತ್ತಾ, ತಾವು ಹೇಳಿದಂತೆ ಈ ಏರಿಯಾದಲ್ಲಿ ಕೇಳಬೇಕು ಎಂದು ಹೇಳುತ್ತಾ, ಸಾರ್ವಜನಿಕರ ಶಾಂತತಗೆ ಭಂಗ ತರುವ ಮತ್ತು ಸಾರ್ವಜನಿಕರ ಆಸ್ತಿ ಪಾಸ್ತಿಗೆ ನಷ್ಟವುಂಟುಮಾಡುವ ಸಂಭವ ಇದೆ ಎಂದು ಬಾತ್ಮೀದಾರರು ತಿಳಿಸಿರುತ್ತಾರೆ. ಹರೀಶ್ ಮತ್ತು ಗೌತಮ್ ರವರು ದೇವಿನಗರ ಮತ್ತು ಎಸ್.ಪಿ. ಸರ್ಕಲ್ ಏರಿಯಾಗಳಲ್ಲಿ ವಿನಾಃಕಾರಣ ಗಲಾಟೆ/ ಜಗಳ  ಮಾಡಿ ಸಾರ್ವಜನಿಕರ ನೆಮ್ಮದಿಗೆ ತೊಂದರೆ ಮಾಡುವ ಸಾಧ್ಯತೆಗಳು ಇರುತ್ತವೆ ಎಂದು ಅನುಮಾನಿಸಿ, ಈ ದಿನ ದಿನಾಂಕ: 19/01/2016 ರಂದು ಸಂಜೆ 5-00 ಗಂಟೆಗೆ ವಾಪಸ್ಸು ಠಾಣೆಗೆ ಹಿಂತಿರುಗಿ ಬಂದು ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ಉದ್ದೇಶದಿಂದ ಮುಂಜಾಗೃತ ಕ್ರಮವಾಗಿ ಪ್ರತಿವಾದಿಗಳ ವಿರುದ್ದ ಠಾಣಾ ಗುನ್ನೆ ನಂ: 13/2016 ಕಲಂ: 107 ಸಿ.ಆರ್.ಪಿ.ಸಿ. ರೀತ್ಯ ಪ್ರಕರಣವನ್ನು ದಾಖಲಿಸಿ ಕೊಂಡಿರುತ್ತೇನೆ.
Gandhinagar PS
4 Cr.No:0006/2016
(IPC 1860 U/s 379 )
19/01/2016 Under Investigation
THEFT - Other Items Not Included Above
Brief Facts :  ದಿನಾಂಕ: 13/01/2016 ರಂದು ರಾತ್ರಿ ವೇಳೆಯಲ್ಲಿ ಬಳ್ಳಾರಿ ನಗರದ ಕೆ.ಇ.ಬಿ ಸರ್ಕಲ್ ಹತ್ತಿರ ಬಸವೇಶ್ವರ ನಗರ 2ನೇ ಕ್ರಾಸಿನಲ್ಲಿರುವ ಫಿರ್ಯಾದಿಯ ಸ್ನೇಹಿತನಾದ ಬಸವರಾಜ ಇವರ ಮನೆಯ ಹತ್ತಿರ ಫಿರ್ಯಾದಿದಾರರು ತನ್ನ ಕಾರ್ ನಂ. ಕೆಎ 34/ಎನ್-3907 ನೇದ್ದನ್ನು ನಿಲ್ಲಿಸಿದಾಗ ಯಾರೋ ಕಳ್ಳರು ತನ್ನ ಕಾರಿನ ಮುಂದಿನ ಎಡಗಡೆ ಬಾಗಿಲಿನ ಕಿಟಕಿಯ ಗಾಜಿನ ಗ್ಲಾಸ್ ನ್ನು ಒಡೆದು ಕಾರಿನಲ್ಲಿದ್ದ ಪೈಯನಿರ್ ಕಂಪನಿಯ ಮ್ಯೂಸಿಕ್ ಸಿಸ್ಟ್ಂ ಮತ್ತು ಎ.ಸಿ ಕಿಟ್ ಎರಡರ ಬೆಲೆ ಒಟ್ಟು 13,500/- ರೂ. ಬಾಳುವವುಗಳನ್ನು ಕಳುವು ಮಾಡಿಕೊಂಡು ಹೋಗಿರುತ್ತಾರೆ.  ಕಳುವಾದ ನಂತರ ಫಿರ್ಯಾದಿದಾರರು ಊರಿನಲ್ಲಿ ಇರದೇ ಇದ್ದರಿಂದ ಈ ದಿನ ತಡವಾಗಿ ಬಂದು ಕಾರಿನ ಬಾಗಿಲಿನ ಗಾಜಿನ ಗ್ಲಾಸ್ ನ್ನು ಒಡೆದು ಕಾರಿನಲ್ಲಿ ಕಳುವು ಮಾಡಿದ ತನ್ನ ಮ್ಯೂಸಿಕ್ ಸಿಸ್ಟ್ಂ ಮತ್ತು ಎ.ಸಿ ಕಿಟ್ ನ್ನು ಪತ್ತೆ ಮಾಡಿ ಆರೋಪಿಗಳ ವಿರುದ್ದ ಕಾನೂನು ಕ್ರಮ ಜರುಗಿಸಬೇಕೆಂದು ಇದ್ದ ದೂರಿನ ಮೇರೆಗೆ ಈ ಪ್ರ.ವ. ವರದಿ.
5 Cr.No:0007/2016
(KARNATAKA POLICE ACT, 1963 U/s 87 )
19/01/2016 Under Investigation
 KARNATAKA POLICE ACT 1963 - Street Gambling (87)
Brief Facts :  ದಿನಾಂಕ:17.01.2015 ರಂದು ಮಧ್ಯಾಹ್ನ 01.30 ಗಂಟೆಗೆ ಫಿರ್ಯಾಧಿದಾರರು ಠಾಣೆಯಲ್ಲಿದ್ದಾಗ ಬಳ್ಳಾರಿ ನಗರದ ತಾಳೂರು ರಸ್ತೆಯ ಕಾಲುವೆ ಪಕ್ಕದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಇಸ್ಪೀಟ್ ಜೂಜಾಟ ನಡೆಯುತ್ತಿದೆ ಅಂತಾ ಬಂದ ಮಾಹಿತಿ ಮೇರೆಗೆ ಸಿಬ್ಬಂದಿ ಹಾಗು ಪಂಚರೊಂದಿಗೆ ಮಧ್ಯಾಹ್ನ 02.00 ಗಂಟೆಗೆ ಮೇಲ್ಕಂಡ ಸ್ಥಳಕ್ಕೆ ಹೋಗಿ ನೋಡಲು ಹಣವನ್ನು ಪಣವಾಗಿ ಕಟ್ಟಿ ಅಂದರ್ ಬಾಹರ್ ಎನ್ನುವ ಇಸ್ಪೀಟ್ ಜೂಜಾಟ ಆಡುತ್ತಿದ್ದವರನ್ನು ಸಿಬ್ಬಂದಿ ಹಾಗೂ ಪಂಚರೊಂದಿಗೆ ದಾಳಿ ಮಾಡಿ ಹಿಡಿದು ಜೂಜಾಟಕ್ಕೆ ಬಳಸಿದ ನಗದು ಹಣ ರೂ.1560/- ಮತ್ತು 52 ಇಸ್ಪೀಟ್ ಎಲೆಗಳನ್ನು ವಶಪಡಿಸಿಕೊಂಡು ಠಾಣೆಗೆ ಬಂದು ಆರೋಪಿತರ ವಿರುದ್ದ ಕ್ರಮ ಜರುಗಿಸಲು ನೀಡಿದ ದೂರಿನ ಮೇರೆಗೆ ಠಾಣಾ ಎನ್ ,ಸಿ ನಂ 02/16 
ರಲ್ಲಿ ನಮೂದಿಸಿಕೊಂಡು ನಂತರ ಮಾನ್ಯ ನ್ಯಾಯಲಯದ ಅನುಮತಿ ಪಡೆದು ಪ್ರಕರಣ ದಾಖಲಿಸಿದೆ
Hagaribommanahalli PS
6 Cr.No:0008/2016
(IPC 1860 U/s 323,324,354(B),504,34 ; SC AND THE ST  (PREVENTION OF ATTROCITIES) ACT, 1989 U/s 3(1)(10),3(1)(11) )
19/01/2016 Under Investigation
SCHEDULED CASTE AND THE SCHEDULED TRIBES - Scheduled Tribes Women
Brief Facts :  ಈ ದಿನ ದಿನಾಂಕ:-19/01/2016 ರಂದು ರಾತ್ರಿ 10-30 ಗಂಟೆಗೆ ಫಿರ್ಯಾಗದಿದಾರರಾದ ಶ್ರೀಮತಿ.ಹೆಚ್.ನಿರ್ಮಲ ರವರು ಠಾಣೆಗೆ ಹಾಜರಾಗಿ ತಮ್ಮ ದೂರು ಹೇಳಿಕೆಯನ್ನು ನೀಡಿದ್ದು ಅದರಲ್ಲಿನ ಸಾರಾಂಶ ಫಿರ್ಯಾದಿಯು ಹ.ಬೊ.ಹಳ್ಳಿಯ ಹೊಸ ಬಸ್ ಸ್ಯಾಂಡ್ ಮುಂದುಗಡೆ ಒಂದು ಶೆಡ್ ಇಟ್ಟುಕೊಂಡು ವಿಳೇದೆಲೆ ವ್ಯಾಪಾರ ಮಾಡಿಕೊಂಡಿದ್ದು, ದಿನಾಂಕ:-14/01/2016 ರಂದು ಕಂಬತ್ತಹಳ್ಳಿ ಗ್ರಾಮದ ಶಿವಾನಂದಪ್ಪ ರವರು ಎಲೆ ಪೆಂಡಿಯನ್ನು  ಫಿರ್ಯಾಡದಿಯ ಅಂಗಡಿಗೆ ಕಳುಹಿಸಿದ್ದು, ಪರಪಾಟಿನಿಂದ ಆಟೊದವನು ಆರೋಪಿ ಕುಮಾರ ರವರ ಅಂಗಡಿಯಲ್ಲಿ ಇಳಿಸಿದ್ದು, ಮತ್ತು ಸದರಿ ಎಲೆ ಪೆಂಡಿಗೆ ಹಚ್ಚಿದ್ದ ಪಿರ್ಯಾದಿಯ ಅಂಗಡಿಯ ಲೇಬಲ್‌ನ್ನು ಆರೋಪಿ ಕುಮಾರ ಈತನು ಕಿತ್ತೆಸೆದಿದ್ದನ್ನು ನೋಡಿ, ಪಿರ್ಯಾದಿಯ ಗಂಡ ಪ್ರಕಾಶನು ಕೇಳಲು ಹೋದಾಗ ಆರೋಪಿ ಕುಮಾರ ಮತ್ತು ಪರಸಪ್ಪ  ಫಿರ್ಯಾದಿಯ ಗಂಡ ಪ್ರಕಾಶ ರವರೊಂದಿಗೆ ಜಗಳ ಮಾಡುತ್ತಿರುವಾಗ ಫಿರ್ಯಾದಿ ಮತ್ತು ಅವರ ತಮ್ಮ ಸ್ವಾಮಿ ರವರು ಹೋದಾಗ ಪ್ರಕಾಶ ಮತ್ತು ಸ್ವಾಮಿಗೆ ಕುಮಾರ ಹಾಗೂ ಪರಸಪ್ಪ  ರವರು ದಬ್ಬಾಡಿದ್ದು, ಮತ್ತು ಕುಮಾರನು ಫಿರ್ಯಾದಿಯ ಸೀರೆ ಸೆರಗನ್ನು ಹಿಡಿದು ನಿನ್ನಿಂದಾನೇ ಲೇ ಕತ್ತಿ ಸೂಳೆ ಇಷ್ಟೆಲ್ಲಾ ನಡೀತಿರೋದು ಅಂತ ಬೈಯುತ್ತಾ ಸೆರಗನ್ನು ಎಳೆದು ಮರ್ಯಾದೆಗೆ ಧಕ್ಕೆಯನ್ನುಂಟು ಮಾಡಿದ್ದು, ಆದರೂ ಫಿರ್ಯಾದಿಯು ಸುಧಾರಿಸಿಕೊಂಡಿದ್ದು, ಮರು ದಿನ ದಿನಾಂಕ:-15/01/2016 ರಂದು ಸಂಜೆ 6-30 ಗಂಟೆ ಸುಮಾರಿಗೆ ಆರೋಪಿ ಕುಮಾರ ರವರ ಸಹೋದರ ಮಂಜಪ್ಪ ಈತನು ಹನುಮಂತಪ್ಪ ಎನ್ನುವವರನ್ನು ಕರೆದುಕೊಂಡು ಬಂದು ದುರ್ಭಾಷೆಗಳಿಂದ ಬೈಯುತ್ತಾ ಫಿರ್ಯಾದಿಯ ಜಡೆ ಹಿಡಿದುಕೊಂಡು ದೂಕಾಡಿ ಕಪಾಳಕ್ಕೆ ಕೈಯಿಂದ ಹೊಡೆದಿದ್ದು, ಜಗಳ ಬಿಡಿಸಲು ಬಂದ ಪ್ರಕಾಶ ರವರಿಗೆ ನೀವು ನಾಯಕರೆಲ್ಲಾ ದೊಡ್ಡ ಡಾನ್ ಏನಲೇ ಸೂಳೆ ಮಕ್ಕಳೆ ಅಂತ  ಬೈಯುತ್ತ ಒಂದು ಕಲ್ಲಿನಿಂದ ಬೆನ್ನಿಗೆ ಹೊಡೆದಿದ್ದು, ಮತ್ತು ಕುಮಾರ ಮತ್ತು ಪರಸಪ್ಪ ಹಾಗೂ ಹನುಮಂತಪ್ಪ ಈ ಮೂರು ಜನರು ಮಂಜಪ್ಪನಿಗೆ ಈ ಕತ್ತಿ ಸೂಳೆಯಿಂದಲೇ ಜಗಳ ಆಗುತ್ತಿರೋದು ಈಕೆಯನ್ನು ಬಡೆಯಿರಿ ಅಂತ ಬೈಯುತ್ತಿರುವಾಗ ಪುನಃ ಆರೋಪಿ ಮಂಜಪ್ಪನು ಫಿರ್ಯಾದಿಯ ಸೀರೆ ಸೆರಗು ಎಳೆದು ಸೀರೆ ಬಿಚ್ಚಿ ಎಸೆದು, ದಬ್ಬಿ ಚರಂಡಿಯಲ್ಲಿ ಬೀಳಿಸಿದಾಗ ತಲೆಯ ಹಿಂದೆ ಒಳ ಪಟ್ಟು ಬಿದ್ದಿದ್ದು, ಆಗ ಅಲ್ಲಿ ನೆರದಿದ್ದವರು ಬಿಡಿಸಿಕೊಂಡಿದ್ದು, ನಂತರ ಫಿರ್ಯಾದಿಯು ತಮ್ಮ ಮಾವನ ಮನೆಗೆ ಹೋಗಿ ಅಲ್ಲಿ ಸುಧಾರಿಸಿಕೊಂಡು ಈ ದಿನ ಈ ಘಟನೆಯ ಬಗ್ಗೆ ತಮ್ಮ ಜನಾಂಗದ ಹಿರಿಯರೊಂದಿಗೆ ಚರ್ಚಿಸಿ ಈ ದಿನ ಡತವಾಗಿ ದೂರು ನೀಡಲು ಬಂದಿದ್ದು, ಕಾರಣ ಜಾತಿ ಎತ್ತಿ ಬೈದು, ಸೀರೆ ಬಿಚ್ಚಿ ಮಾನ ಮರ್ಯಾದೆಗೆ ಧಕ್ಕೆ ಮಾಡಿದ ಮಡಿವಾಳರ ಮಂಜಪ್ಪ, ಕುಮಾರ, ಪರಸಪ್ಪ, ಹಾಗೂ ಹನುಮಂತಪ್ಪ ರವರ ಮೇಲೆ ಕಾನೂನು ಕ್ರಮ ಜರುಗಿಸಲು ಇದ್ದ ಮೇರೆಗೆ ಈ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತದೆ.
Hosahalli PS
7 Cr.No:0007/2016
(KARNATAKA POLICE ACT, 1963 U/s 78(3) )
19/01/2016 Under Investigation
 KARNATAKA POLICE ACT 1963 - Gambling - Matka (78 Class C)
Brief Facts :  ದಿನ ದಿನಾಂಕ:೧೮/೦೧/೨೦೧೬ ರಂದು ರಾತ್ರಿ ೮-೦೦ ಗಂಟೆಗೆ ಹೊಸಹಳ್ಳಿ ಠಾಣೆಯ ಪಿ.ಎಸ್.ಐ. ರವರಾದ ಶ್ರೀ.ಡಿ.ಸುರೇಶ,ರವರು ಠಾಣೆಯಲ್ಲಿ ಹಾಜರಾಗಿ ವರದಿಯನ್ನು ಕೊಟ್ಟಿದ್ದೇನೆಂದರೆ, ಈ ದಿನ ದಿನಾಂಕ:೧೮/೦೧/೨೦೧೬ ರಂದು ಸಾಯಂಕಾಲ ೫-೦೦ ಗಂಟೆಗೆ ನಾನು ಠಾಣೆಯಲ್ಲಿದ್ದಾಗ ನಿಂಬಳಗೇರೆ ಗ್ರಾಮದಲ್ಲಿರುವ ಸಮುದಾಯ ಆರೋಗ್ಯ ಕೇಂದ್ರದ ಆಸ್ಪತ್ರೆಯ ಮುಂದುಗಡೆ ಸಾರ್ವಜನಿಕ ರಸ್ತೆಯಲ್ಲಿ  ಮಟಕಾ ಜೂಜಾಟ ನಡೆಯುತ್ತಿದೆ ಅಂತ ಮಾಹಿತಿ ಬಂದ ಮೇರೆಗೆ ಠಾಣೆಯಲ್ಲಿ ಹಾಜರಿದ್ದ ಪಿ.ಸಿ.ಗಳಾದ,೫೭,೧೦೭೩,೬೭೨,೯೦೯ ರವರಿಗೆ ಮಾಹಿತಿ ತಿಳಿಸಿ ಈ ಮೇಲ್ಕಂಡ ಸಿಬ್ಬಂಧಿಯೊಂದಿಗೆ ಸರ್ಕಾರಿ ಜೀಪ್ ನಂ.ಕೆ.ಎ.೩೪/ಜಿ.೪೦೩ ರಲ್ಲಿ ಸಾಯಂಕಾಲ ೫-೧೫ ಗಂಟೆಗೆ ಠಾಣೆಯಿಂದ ಸಾಯಂಕಾಲ ೫-೪೫ ಗಂಟೆಯ ಸುಮಾರಿಗೆ ನಿಂಬಳಗೇರೆ ಗ್ರಾಮದ ಊರ ಹೊರಡಗೆ ಜೀಪನ್ನು ನಿಲ್ಲಿಸಿಕೊಂಡು ಇಬ್ಬರು ಪಂಚರಿಗೆ ಬರಮಾಡಿಕೊಂಡು ಪಂಚರಿಗೆ ಮಟಕಾ ಜೂಜಾಟದ ಬಗ್ಗೆ ಮಾಹಿತಿ ತಿಳಿಸಿ ನಾನು, ಪಂಚರು ಮತ್ತು ಸಿಬ್ಬಂಧಿಯೊಂದಿಗೆ ಕಾಲು ನಡಿಗೆಯಲ್ಲಿ ನಡೆದುಕೊಂಡು ಹೋಗಿ ಸಾಯಂಕಾಲ ೫-೫೫ ಗಂಟೆಯ ಸುಮಾರಿಗೆ ನಿಂಬಳಗೇರೆ ಗ್ರಾಮದಲ್ಲಿರುವ ಸಮುದಾಯ ಆರೋಗ್ಯ ಕೇಂದ್ರದ ಆಸ್ಪತ್ರೆಯ ಹತ್ತಿರ ಮರೆಯಲ್ಲಿ ನಿಂತು ನೋಡಲಾಗಿ ಸಮುದಾಯ ಆರೋಗ್ಯ ಕೇಂದ್ರದ ಆಸ್ಪತ್ರೆಯ ಮುಂದುಗಡೆ ಸಾರ್ವಜನಿಕ ರಸ್ತೆಯಲ್ಲಿ ಒಬ್ಬ ವ್ಯಕ್ತಿ ಕುಳಿತು ಕೊಂಡು ಇದು ಮಟಕಾ ಜೂಜಾಟ ೧-೦೦ ರೂಪಾಯಿಗೆ ೮೦=೦೦ ರೂಗಳು ಬರುತ್ತವೆ ನಿಮ್ಮ ಅದೃಷ್ಟದ ನಂಬರ್ಗಳನ್ನು ಬರೆಸಿರಿ ಅಂತ ರಸ್ತೆಯಲ್ಲಿ ಹೋಗಿ ಬರುವ ಸಾರ್ವಜನಿಕರಿಗೆ ಕೂಗಿ ಕರೆಯುತ್ತಾ ಸಾರ್ವಜನಿಕರಿಂದ ಹಣವನ್ನು ಪಡೆದು ಕೊಂಡು ಮಟಕಾ ನಂಬರ್ಗಳುಳ್ಳ ಚೀಟಿಯನ್ನು ಬರೆದು ಕೊಡುತ್ತಿರುವುದನ್ನು ಖಚಿತ ಪಡಿಸಿಕೊಂಡು ಸಂಜೆ ೬-೦೦ ಗಂಟೆಗೆ ನಾನು, ಪಂಚರು,ಮತ್ತು ಸಿಬ್ಬಂಧಿಯವರೊಂದಿಗೆ ಮಟಕಾ ಜೂಜಾಟದ ಸ್ಥಳದ ಮೇಲೆ ದಾಳಿ ಮಾಡಿ ಮಟಕಾ ಜೂಜಾಟ ನಡೆಸುತ್ತಿದ್ದ ವ್ಯಕಿಯನ್ನು ಹಿಡಿದುಕೊಂಡೆವು.ಮಟಕಾ ನಂಬರ್ಗಳನ್ನು ಬರೆಸಲು ಬಂದಂತ ವ್ಯಕ್ತಿಗಳು ನಮ್ಮನ್ನು ನೋಡಿ ಓಡಿ ಹೋದರು.ಮಟಕಾ ಜೂಜಾಟ ನಡೆಸುತ್ತಿದ್ದ ವ್ಯಕ್ತಿಯ ಹೆಸರು ಮತ್ತು ವಿಳಾಸವನ್ನು ಕೇಳಲಾಗಿ ಅವನು ತನ್ನ ಹೆಸರು ರವಿ ತಂದೆ 
ಚಂದ್ರಣ್ಣ,೩೯ವರ್ಷ,ಲಿಂಗಾಯತರು,ವ್ಯವಸಾಯ,ವಾಸ:ನಿಂಬಳಗೇರೆ ಗ್ರಾಮ.ಅಂತ ತಿಳಿಸಿದ್ದು ಸದ್ರಿಯವನಿಗೆ ಶೋಧನೆ ಮಾಡಿ ನೋಡಲಾಗಿ ಅವನ ಬಳಿ ಮಟಕಾ ಜೂಜಾಟದ ಹಣ:೧,೨೫೦=೦೦ ರೂಗಳು, ಮಟಕಾ ನಂಬರ್ಗಳು ಬರೆದ ೩ ಚೀಟಿ,ಒಂದು ಬಾಲ್ ಪೆನ್ನು ದೊರೆಯಿತು.ಸದ್ರಿಯವನಿಗೆ ಮಟಕಾ ಜೂಜಾಟದ ಹಣ ಮತ್ತು ಮಟಕ ಪಟ್ಟಿಯನ್ನು ಯಾರಿಗೆ ಕೊಡುತ್ತೀಯಾ ಅಂತ ಕೇಳಲಾಗಿ ಎಸ್.ಚೆನ್ನಬಸಪ್ಪ ತಂದೆ ನಾಗಪ್ಪ,೬೫ ವರ್ಷ,ಲಿಂಗಾಯತರು, ವ್ಯವಸಾಯ, ವಾಸ:ನಾಗೇನಹಳ್ಳಿ ಗ್ರಾಮ ಕೂಡ್ಲಿಗಿ ತಾಲೂಕು ಎಂಬುವರಿಗೆ ಕೊಡುವುದಾಗಿ ತಿಳಿಸಿದನು.ಮಟಕ ಜೂಜಾಟದ ಹಣ ರೂ:೧,೨೫೦=೦೦ ರೂಗಳನ್ನು ಮತ್ತು ಮಟಕಾ ಪಟ್ಟಿ,ಬಾಲ್ಪೆನ್ನನ್ನು ಸಂಜೆ ೬-೦೦ ಗಂಟೆಯಿಂದ ರಾತ್ರಿ ೭-೦೦ ಗಂಟೆಯವರೆಗೆ ಪಂಚರ ಸಮಕ್ಷಮ ಪಂಚನಾಮೆ ಮೂಲಕ ಜಪ್ತು ಮಾಡಿಕೊಂಡು ಆರೋಪಿತನನ್ನು ವಶಕ್ಕೆ ತೆಗೆದುಕೊಂಡು ಜಪ್ತು ಮಾಡಿಕೊಂಡ ಹಣ ಮತ್ತು ಮಟಕಾ ಪಟ್ಟಿ,ಬಾಲ್ ಪೆನ್ನನ್ನು ಹಾಗು ಅರೋಪಿತನನ್ನು ಮುಂದಿನ ಕ್ರಮದ ಸಲುವಾಗಿ ನನಗೆ ಒಪ್ಪಿಸಿ ವರದಿ ಸಲ್ಲಿಸಿದ್ದನ್ನು ಸ್ವೀಕರಿಸಿ ಠಾಣೆಯ ಎನ್.ಸಿ ನಂಬರ್ -12/1504/2016 ಕಲಂ 78 (3) ಕೆ.ಪಿ.ಯಾಕ್ಟ್ ರೀತ್ಯಾ ಪ್ರಕರಣವನ್ನು ನೊಂದಾಯಿಸಿಕೊಂಡು ಸದರಿ ಪ್ರಕರಣವನ್ನು ಪ್ರ.ವ.ವರದಿಯನ್ನಾಗಿ ದಾಖಲು ಮಾಡಿಕೊಂಡು ತನಿಖೆ ನಡೆಸಲು ಪರವಾನಿಗೆ ನೀಡಬೇಕೆಂದು ಮಾನ್ಯ ನ್ಯಾಯಾಲಯದಲ್ಲಿ ವಿನಂತಿಸಿಕೊಂಡಿದ್ದು, ಮಾನ್ಯ ನ್ಯಾಯಾಲಯವು ಪ್ರ.ವ.ವರದಿಯನ್ನು ದಾಖಲು ಮಾಡಲು ಪರವಾನಿಗೆ ನೀಡಿದ ಮೇರೆಗೆ ಪ್ರಕರಣ ದಾಖಲಿಸಿಕೊಂಡಿದೆ.
Kurugod PS
8 Cr.No:0011/2016
(IPC 1860 U/s 323,324,504,506,34 )
19/01/2016 Under Investigation
CASES OF HURT - Simple Hurt
Brief Facts :  ದಿನಾಂಕ: 19/01/2016 ರಂದು ಬೆಳಿಗ್ಗೆ 06:30 ಗಂಟೆಗೆ ಪಿರ್ಯಾದಿದಾರರು ತಾನು ಪಂಚಾಯಿತಿ ಕಡೆಯಿಂದ ಕಟ್ಟಿಸುತ್ತಿದ್ದ ವಿಶ್ರಾಂತಿ ಕಟ್ಟಡದ ಹತ್ತಿರ ಹೋದಾಗ ಅಲ್ಲ್ಲಿ ಪಕ್ಕದಲ್ಲಿ ಆರೋಪಿ-1 ಮಂಜುನಾಥನು ಮಲವಿಸರ್ಜನೆ ಮಾಡುತ್ತಿದ್ದು, ಅವನಿಗೆ ಪಿರ್ಯಾದಿಯು ಇಲ್ಲಿ ವಿಶ್ರಾಂತಿ ಕಟ್ಟಡ ಕಟ್ಟಿಸುತ್ತಿದ್ದೇನೆ ನೀನು ಇಲ್ಲಿ ಮಲ ವಿಸರ್ಜನೆ ಮಾಡಿದರೆ ನಾವು ಇಲ್ಲಿ ಹೇಗೆ ಕೆಲಸ ಮಾಡಿಸಬೇಕು ಎಂದು ಕೇಳಿದಾಗ ಮಂಜುನಾಥನು ಈ ಜಾಗ ನಿಮ್ಮಪ್ಪನದಾ ನಾನು ಇಲ್ಲೆ ಕೂಡುತ್ತೇನೆ, ಲೇ ಸೂಳೆ ಮಗನೆ ನಿನ್ಯಾವನು ನನಗೆ ಹೇಳಲಿಕ್ಕೆ ಎಂದು ಪಿರ್ಯಾದಿಯನ್ನು ನೂಕಿದ್ದು, ಆರೋಪಿ-2 ಪರಸಪ್ಪ ಹಾಗೂ ಆರೋಪಿ-3 ಸುಂಕಪ್ಪ ರವರು ಬಂದು ಈ ಸೂಳೆ ಮಗನನ್ನು ಏನು ಕೇಳುತ್ತೀಯಾ ಒದಿರಿ ಎಂದು ಬೈದು, ಪಿರ್ಯಾದಿಗೆ ಕೈಗಳಿಂದ ಕಪಾಳಕ್ಕೆ, ಬೆನ್ನಿಗೆ ಹೊಡೆದು,  ಕಾಲಿನಿಂದ ಹೊಟ್ಟೆಗೆ ಒದ್ದಿರುತ್ತಾರೆ. ಮಂಜುನಾಥನು ಕಲ್ಲಿನಿಂದ ಪಿರ್ಯಾದಿಗೆ ಹಣೆಗೆ ಹೊಡೆದು ರಕ್ತಗಾಯ ಮಾಡಿರುತ್ತಾನೆ. ಜಗಳ ಬಿಡಿಸಲು ಹೋದ ಮುನಿಸ್ವಾಮಿಗೆ ಪರಸಪ್ಪ, ಸುಂಕಪ್ಪ ಹಾಗೂ ಮಂಜುನಾಥ ಕೂಡಿ ಕೈಗಳಿಂದ ಮೈಗೆ, ಕುತ್ತಿಗೆಗೆ ಹೊಡೆದಿರುತ್ತಾರೆ. ನಂತರ ಆರೋಪಿ-1 ಮಂಜುನಾಥನು ಪಿರ್ಯಾದಿಗೆ ಇಲ್ಲಿಗೆ ನಿನ್ನನ್ನು ಬಿಡುವುದಿಲ್ಲ 10 ಲಕ್ಷ ರೂಪಾಯಿ ಹೋದರೂ ಚಿಂತೆ ಇಲ್ಲ ನಿನ್ನನ್ನು ಸಾಯಿಸುತ್ತೇನೆ ಎಂದು ಬೆದರಿಕೆ ಹಾಕಿರುತ್ತಾನೆ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುತ್ತದೆ. ಇದರೊಂದಿಗೆ ಪಿರ್ಯಾದಿ ನೀಡಿದ ದೂರಿನ ಅಸಲು ಪ್ರತಿಯನ್ನು ಲಗತ್ತಿಸಿ ನಿವೇಧಿಸಿಕೊಂಡಿರುತ್ತೇನೆ.
Siruguppa PS
9 Cr.No:0012/2016
(MMDR (MINES AND MINERALS REGULATION OF DEVELOPMENT) ACT 1957 U/s 21(1) ; IPC 1860 U/s 379 )
19/01/2016 Under Investigation
KARNATAKA STATE LOCAL ACTS - Mmdr (Mines & Minerals Regulation Development) Act 1957
Brief Facts :  ದಿನಾಂಕ 18-01-2016  ರಂದು  ಪಿ.ಎಸ್.ಐ (ಕಾ.ಸೂ) ರವರು  ಠಾಣೆಯಿಂದ  ಪಿಸಿ 128 ರವರನ್ನು ಕರೆದುಕೊಂಡು ಸರಕಾರಿ ಜೀಪು ನಂ ಕೆ.ಎ 34 ಜಿ 288 ನೇದ್ದರ ಚಾಲಕ ಎಪಿಸಿ 213 ರವರೊಂದಿಗೆ ರಾತ್ರಿ ಗಸ್ತು ಕರ್ತವ್ಯಕ್ಕೆ ಹೊರಟಿದ್ದು ಪಟ್ಟಣದ ಪ್ರಮಖ ಏರಿಯಾಗಳಾದ ದೇಶನೂರು ರಸ್ತೆ, ಸದಾಶಿವನಗರ,ಪಾರ್ವತಿನಗರ ಗಸ್ತು ಕರ್ತವ್ಯ ಮುಗಿಸಿಕೊಂಡು  ಸಿಂಧನೂರು ರೋಡ ಕಡೆ ಹೋಗುತ್ತಿರುವಾಗ  ದಿನಾಂಕ 19-01-16 ರಂದು ಬೆಳಿಗಿನ ಜಾವ  3-00 ಗಂಟೆಯ ಸಮಯದಲ್ಲಿ  ಸಿಂಧನೂರು ರಸ್ತೆಯ ಕಡೆಯಿಂದ ಬರುತ್ತಿದ್ದ  ಮರಳು ತುಂಬಿದ ಟ್ರಾಕ್ಟರನ್ನು   ರಿಲಾಯಿನ್ಸ್ ಪೆಟ್ರೊಲ್ ಬಂಕ್ ಹತ್ತಿರ  ನಿಲ್ಲಿಸಿ ಟ್ರಾಕ್ಟರ್ ಚಾಲಕನಿಗೆ ಟ್ರಾಲಿಯಲ್ಲಿ ತುಂಬಿದ್ದ  ಮರಳಿನ ಪರವಾನಿಗೆ ದಾಖಲಾತಿಗಳ ಬಗ್ಗೆ ಕೇಳಲು  ಯಾವುದೇ ಮರಳಿನ ಪರವಾನಿಗೆ  ದಾಖಲಾತಿ ಇಲ್ಲವೆಂದು  ತಿಳಿಸಿದ್ದು,  ಸದರಿ ಸ್ಥಳಕ್ಕೆ ಇಬ್ಬರು ಪಂಚರನ್ನು ಬರಮಾಡಿಕೊಂಡು ಪಂಚರ ಸಮಕ್ಷಮ ಟ್ರಾಕ್ಟರ್ ಚಾಲಕರ ಹೆಸರು ಮತ್ತು ವಿಳಾಸವನ್ನು ವಿಚಾರಿಸಲು ತನ್ನ ಹೆಸರು   ನರಸಪ್ಪ ತಂದೆ ರಾಮಣ್ಣ ವ:35 ವರ್ಷ ಕಬ್ಬೇರು ಜನಾಂಗ ವಾಸ:ರಾರಾವಿ ಗ್ರಾಮ ಸಿರುಗುಪ್ಪ ತಾ: ನೀಲಿ ಬಣ್ಣದ ಸೊನಾಲಿಕ್ ಕಂಪನಿಯ ಟ್ರಾಕ್ಟರ್ ನಂ ಕೆ.ಎ 34 ಟಿ.ಎ 4128 ನೇದ್ದರ ಚಾಲಕನಾಗಿದ್ದು  ನೀಲಿ  ಬಣ್ಣದ ಮರಳು ತುಂಬಿದ ಟ್ರಾಲಿ ನಂಬರ್ ಕಂಡು ಬಂದಿರುವುದಿಲ್ಲ ಟ್ರಾಲಿಯಲ್ಲಿ  ಅಕ್ರಮವಾಗಿ ಮರಳು ತುಂಬಿದ್ದ ಮರಳು ಬೆಲೆ ಅಂದಾಜು ರೂ 1000/-ಗಳು ಗಳಾಗಬಹುದು.ಈ ಬಗ್ಗೆ ಯಾವುದೇ ರೀತಿ ಅಧಿಕೃತ ದಾಖಲಾತಿಗಳು ಇಲ್ಲದೇ ಮರಳನ್ನು ಅಕ್ರಮವಾಗಿ ಟ್ರಾಕ್ಟ್ರರನಲ್ಲಿ ಕಳ್ಳತನದಿಂದ  ತುಂಬಿಕೊಂಡು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದುಕಂಡು ಬಂದಿದ್ದು ಸದರಿ ಮರಳು ತುಂಬಿದ ಟ್ರಾಕ್ಟರ ಮತ್ತು ಟ್ರಾಲಿಯನ್ನು  ಪಂಚನಾಮೇಯ ಮೂಲಕ ಪಂಚರ ಸಮಕ್ಷಮ ಜಪ್ತುಪಡಿಸಿಕೊಂಡು ಠಾಣೆಗೆ 5-00 ಎ.ಎಂ   ಗಂಟೆಗೆ ಹಿಂತಿರುಗಿ ಅಕ್ರಮ ಮರಳು ತುಂಬಿದ  ಟ್ರಾಕ್ಟರ್ ಟ್ರಾಲಿ ಮತ್ತು  ಚಾಲಕನ   ವಿರುದ್ದ ಎಂ.ಎಂ.ಆರ್.ಡಿ 21(1) ರೆ.ವಿ 379 ಐ.ಪಿ.ಸಿ  ರೀತ್ಯಾ ಕ್ರಮ ಜರುಗಿಸಲು ಸೂಚಿಸಿದ ಮೇರೆಗೆ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದೆ.
10 Cr.No:0013/2016
(MMDR (MINES 
19/01/2016 Under Investigation
AND MINERALS REGULATION OF DEVELOPMENT) ACT 1957 U/s 21(1) ; IPC 1860 U/s 379 )
KARNATAKA STATE LOCAL ACTS - Mmdr (Mines & Minerals Regulation Development) Act 1957
Brief Facts :  ಈ ದಿನ ದಿನಾಂಕ 19/01/2016 ರಂದು ಬೆಳಿಗ್ಗೆ  9-30 ಗಂಟೆಗೆ   ಪಿ.ಎಸ್.ಐ (ಕಾ.ಸೂ) ರವರು ಠಾಣೆಯಿಂದ  ಪಿಸಿ 128,1135,896  ರವರನ್ನು ಕರೆದುಕೊಂಡು ಸರಕಾರಿ ಜೀಪು ನಂ ಕೆ.ಎ 34 ಜಿ 288 ನೇದ್ದರ ಚಾಲಕ ಎಪಿಸಿ 213 ರವರೊಂದಿಗೆ  ಸಿರುಗುಪ್ಪ ಪಟ್ಟಣದಲ್ಲಿ ಗಸ್ತು ಕರ್ತವ್ಯದಲ್ಲಿದ್ದಾಗ ರಾರಾವಿ ಹಗರಿಯಿಂದ ಸಿರುಗುಪ್ಪ ಕಡೆಗೆ ಮರಳು ತುಂಬಿಕೊಂಡು ಬರುತ್ತಿರುವ ಟ್ರಾಕ್ಟರಗಳ ಬಗ್ಗೆ ಬಂದ ಖಚಿತ ಮಾಹಿತಿ ಮೇರೆಗೆ    ರಾರಾವಿ ಗ್ರಾಮದ ಕಡೆಗೆ ಹೊರಟಿದ್ದಾಗ  ಮರಳು ತುಂಬಿಕೊಂಡು ಸಿರುಗುಪ್ಪ ಕಡೆಗೆ ಬರುತ್ತಿದ್ದ ಎರಡು ಮರಳು  ಟ್ರಾಕ್ಟರಗಳನ್ನು ಬೆಳಿಗ್ಗೆ 11-00 ಗಂಟೆಗೆ ತಾಯಮ್ಮ ಗುಡಿ ಹತ್ತಿರ ಕೈ ಮಾಡಿ ನಿಲ್ಲಿಸಿ ಎರಡು ಮರಳು ತುಂಬಿದ ಟ್ರಾಕ್ಟರ ಚಾಲಕರಿಗೆ  ಟ್ರಾಲಿಯಲ್ಲಿ ತುಂಬಿದ್ದ  ಮರಳಿನ ಪರವಾನಿಗೆ ದಾಖಲಾತಿಗಳ ಬಗ್ಗೆ ಕೇಳಲು  ಯಾವುದೇ ಮರಳಿನ ಪರವಾನಿಗೆ  ದಾಖಲಾತಿ ಇಲ್ಲವೆಂದು  ತಿಳಿಸಿದ್ದು,  ಸದರಿ ಸ್ಥಳಕ್ಕೆ ಇಬ್ಬರು ಪಂಚರನ್ನು ಬರಮಾಡಿಕೊಂಡು ಪಂಚರ ಸಮಕ್ಷಮ ಟ್ರಾಕ್ಟರ್ ಚಾಲಕರ ಹೆಸರು ಮತ್ತು ವಿಳಾಸವನ್ನು ವಿಚಾರಿಸಲು ತನ್ನ ಹೆಸರು 1)ನಾಗೇಶ ತಂದೆ ಬೋಗಟೆಪ್ಪ ವ: 40 ವರ್ಷ ಉಪ್ಪಾರ ಜನಾಂಗ ವಾಸ:ಮಾರೆಮ್ಮ ದೇವಸ್ಥಾನದ ಹತ್ತಿರ ಗಜಗಿನಾಳ ಗ್ರಾಮ (ಕೆಂಪು ಬಣ್ಣದ ಮಹಿಂದ್ರ ಕಂಪನಿಯ ಟ್ರಾಕ್ಟರ್ ನಂ ಕೆ.ಎ 34 ಟಿ.ಎ 3520 ನೇದ್ದರ ಚಾಲಕ  2) ಆನಂದ ತಂದೆ ಏಸಪ್ಪ ವ: 27 ವರ್ಷ ಹರಿಜನ ಜನಾಂಗ ವಾಸ:ತಾಯಮ್ಮ ಕಟ್ಟೆ ಹತ್ತಿರ ಬಾಗೇವಾಡಿ ಗ್ರಾಮ ಸ್ವರಾಜ ಕಂಪನಿಯ ಟ್ರಾಕ್ಟರ್ ನೇದ್ದರ ಚಾಲಕ ನಾಗಿದ್ದು ನಂತರ ಟ್ರಾಕ್ಟರ್ ಟ್ರಾಲಿಗಳನ್ನು ಪರಿಶೀಲಿಸಲು ಕೆಂಪು ಬಣ್ಣದ ಮಹಿಂದ್ರ ಕಂಪನಿಯ ಟ್ರಾಕ್ಟರ್ ನಂ ಕೆ.ಎ 34 ಟಿ.ಎ 3520  ಕೆಂಪು ಬಣ್ಣದ ಟ್ರಾಲಿ ನಂಬರು ಕಂಡುಬಂದಿರುವುದಿಲ್ಲ. 2) ನೀಲಿ ಬಣ್ಣದ ಸ್ವರಾಜ ಕಂಪನಿಯ ಟ್ರಾಕ್ಟರ್ ನಂಬರು ಕಂಡಬಂದಿರುವುದಿಲ್ಲ ನೀಲಿಬ ಬಣ್ಣದ ಮರಳು ತುಂಬಿದ ಟ್ರಾಲಿ ನಂಬರು ಕಂಡುಬಂದಿರುವುದಿಲ್ಲ. ಸದರಿ ಎರಡು ಟ್ರಾಕ್ಟರ್ ಟ್ರಾಲಿಗಳಲ್ಲಿ   ಅಕ್ರಮವಾಗಿ ಮರಳು ತುಂಬಿದ್ದ ಮರಳು ಬೆಲೆ ತಲಾ ಅಂದಾಜು ರೂ 1000/-ಗಳು ಗಳಾಗಬಹುದು. ಒಟ್ಟು ಎರಡು ಟ್ರಾಕ್ಟರ್ ಟ್ರಾಲಿಗಳಲ್ಲಿದ್ದ ಮರಳಿನ ಅಂದಾಜು ಬೆಲೆ ರೂ 2000/-ಗಳಾಗಬಹುದು. ಈ ಬಗ್ಗೆ ಯಾವುದೇ ರೀತಿ ಅಧಿಕೃತ ದಾಖಲಾತಿಗಳು ಇಲ್ಲದೇ ಮರಳನ್ನು ಅಕ್ರಮವಾಗಿ ಟ್ರಾಕ್ಟ್ರರನಲ್ಲಿ ಕಳ್ಳತನದಿಂದ  ತುಂಬಿಕೊಂಡು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದುಕಂಡು ಬಂದಿದ್ದು ಸದರಿ ಮರಳು ತುಂಬಿದ ಎರಡು ಟ್ರಾಕ್ಟರ ಮತ್ತು ಟ್ರಾಲಿಗಳನ್ನು   ಪಂಚನಾಮೇಯ ಮೂಲಕ ಪಂಚರ ಸಮಕ್ಷಮ ಜಪ್ತುಪಡಿಸಿಕೊಂಡು ಠಾಣೆಗೆ  ಮದ್ಯಾಹ್ನ 1-00 ಗಂಟೆಗೆ  ಹಿಂತಿರುಗಿ ಅಕ್ರಮ ಮರಳು ತುಂಬಿದ ಎರಡು  ಟ್ರಾಕ್ಟರ್ ಟ್ರಾಲಿ ಗಳು ಮತ್ತು  ಇಬ್ಬರು ಚಾಲಕರ   ವಿರುದ್ದ ಎಂ.ಎಂ.ಆರ್.ಡಿ 21(1) ಆಕ್ಟ್ ರೆ.ವಿ 379 ಐ.ಪಿ.ಸಿ  ರೀತ್ಯಾ ಕ್ರಮ ಜರುಗಿಸಲು ಸೂಚಿಸಿದ ಮೇರೆಗೆ ಪ್ರಕರಣ ದಾಖಲಿಸಿ ತನಿಖೇ ಕೈಗೊಂಡಿದೆ.
11 Cr.No:0014/2016
(KARNATAKA POLICE ACT, 1963 U/s 78(3) )
19/01/2016 Under Investigation
 KARNATAKA POLICE ACT 1963 - Gambling - Matka (78 Class C)
Brief Facts :  ಈ ದಿನ ದಿನಾಂಕ:19-01-2016 ರಂದು ರಾತ್ರಿ 7-00 ಗಂಟೆಗೆ ಸುಮಾರಿಗೆ ಪಿರ್ಯಾದಿದಾರರು ಸಿರುಗುಪ್ಪ ಠಾಣಾ ಪ್ರಭಾರದಲ್ಲಿದ್ದಾಗ ಸಿರುಗುಪ್ಪ ಪಟ್ಟಣದ ಸಂತೆ ಮಾರ್ಕೆಟ್ ನ ಸಾರ್ವಜನಿಕ ಸ್ಥಳದಲ್ಲಿ ನಸೀಬಿನ ಮಟ್ಕಾ ಜೂಜಾಟ ನಡೆಯುತ್ತಿದ್ದ ಬಗ್ಗೆ ಖಚಿತ ಮಾಹಿತಿ ಬಂದ ಮೇರೆಗೆ ಪಿ.ಎಸ್.ಐ ರವರು ಪಂಚರನ್ನು ಠಾಣೆಗೆ ಕರೆಯಿಸಿಕೊಂಡು ಎಂ. ನಾಗರೆಡ್ಡಿ ಸಿಪಿಐ ಸಿರುಗುಪ್ಪ ವೃತ್ತ ಕಛೇರಿ ಇವರೊಂದಿಗೆ  ಪಿ.ಎಸ್.ಐ ಎಘು ಎನ್. ಹಾಗೂ ಸಿಬ್ಬಂದಿಯವರಾದ ಪಿ.ಸಿ.1202, 356, 52 ಮತ್ತು ಪಂಚರೊಂದಿಗೆ ಇಲಾಖೆಯ ಜೀಪ್ ನಂ.ಕೆಎ-34/ಎಫ್-288 ರಲ್ಲಿ ಹೊರಟು ಸದರಿ ಸ್ಥಳದಲ್ಲಿ ಮಟ್ಕಾ ಧಂಧೆಯಲ್ಲಿ ತೊಡಗಿದ್ದ ವ್ಯಕ್ತಿಗಳ ಮೇಲೆ ರಾತ್ರಿ 8-00 ಗಂಟೆಗೆ ದಾಳಿ ಮಾಡಿ ಹಿಡಿದು ಸದರಿಯವರ ವಶದಿಂದ ಮಟ್ಕಾ ಜೂಜಾಟಕ್ಕೆ ಸಂಬಂದಿಸಿದ ನಗದು ಹಣ 8320/-ರೂ.ಗಳು, ಒಂದು ಮಟ್ಕಾ ಪಟ್ಟಿ ಹಾಗೂ ಒಂದು ಬಾಲ್ ಪೆನ್ ಇವುಗಳನ್ನು ರಾತ್ರಿ 8-00 ಗಂಟೆಯಿಂದ ರಾತ್ರಿ 9-00 ಗಂಟೆ ವರೆಗೆ ಪಂಚನಾಮೆಯ ಮೂಲಕ ಜಪ್ತುಪಡಿಸಿಕೊಂಡು ಸದರಿ ಆರೋಪಿತರು ಮಟ್ಕಾ ಪಟ್ಟಿ ಮತ್ತು ಹಣವನ್ನು ತೆಕ್ಕಲಕೋಟೆ ರಾಘು @ ರಾಘವೇಂದ್ರ ಈತನಿಗೆ ಕೊಡುವುದಾಗಿ ತಿಳಿಸಿದ್ದು ಸಿಕ್ಕಿ ಬಿದ್ದ ಆರೋಪಿತರಾದ 1] ಗಂಗಾಧರ, 2] ಶಿವಕುಮಾರ್, 3] ವೀರಭದ್ರಗೌಡ ಮತ್ತು ಮಟ್ಕಾ ಸಾಮಾಗ್ರಿಗಳೊಂದಿಗೆ ಠಾಣೆಗೆ ಬಂದು ಪರಾರಿಯಲ್ಲಿರುವ ಆರೋಪಿ-4 ರಾಘೂ @ ರಾಘವೇಂದ್ರ  ನಾಲ್ಕು ಜನರ ವಿರುದ್ದ ಪ್ರಕರಣ ದಾಖಲಿಸಲು  ಜ್ಞಾಪನ ನೀಡಿದ ಮೇರೆಗೆ ಠಾಣೆ ಗುನ್ನೆ ನಂ:14/2016 ಕಲಂ. 78(3) ಕೆ.ಪಿ.ಯ್ಯಾಕ್ಟ್ ರೀತ್ಯ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದೆ.
T.B. Halli PS
12 Cr.No:0007/2016
(IPC 1860 U/s 279,337,304(A) )
19/01/2016 Under Investigation
MOTOR VEHICLE ACCIDENTS FATAL - Other Roads
Brief Facts :  ದಿನಾಂಕ : 19-01-2016 ರಂದು ಫಿರ್ಯಾಧಿದಾರರು ಹಾಗೂ ಮೃತ ರಂಗಪ್ಪನು ತಮ್ಮ ಬಜಾಜ್ ಬಾಕ್ಸರ್ ಮೋಟಾರ್ ಸೈಕಲ್ ನಂ. ಕೆ.ಎ-37/ಜೆ.5310 ನೇದ್ದರಲ್ಲಿ ಕಿತ್ನೂರು ಗ್ರಾಮಕ್ಕೆ ಹೋಗುತ್ತಿದ್ದಾಗ ಜಿ.ರಮೇಶರವರ ಹೊಲದ ಹತ್ತಿರ ಮದ್ಯಾಹ್ನ 03-30 ಸುಮಾರಿಗೆ ಎದುರುಗಡೆಯಿಂದ ಬಂದ ಒಂದು ಹಿರೋ ಹೆಚ್.ಎಫ್ ಡಿಲಕ್ಸ್ ಕೆ.ಎ-37/ವಿ-8228 ಮೋಟಾರ್ ಸೈಕಲ್ ಚಾಲಕನು ತನ್ನ ಮೋಟಾರ್ ಸೈಕಲ್ ನ್ನು  ಅತೀ ವೇಗ ಮತ್ತು ಅಜಾಗರೂಕತೆಯಿಂದ ನಡೆಸಿಕೊಂಡು ಬಂದು ಫಿರ್ಯಾಧಿದಾರರ ಮೋಟಾರ್ ಸೈಕಲ್ ನ  ಹ್ಯಾಂಡಲ್ ಗೆ  ಡಿಕ್ಕಿ ಹೊಡೆಸಿದ ಪರಿಣಾಮ ಫಿರ್ಯಾಧಿದಾರ  ರಸ್ತೆಯ ಎಡಭಾಗಕ್ಕೆ ಬಿದ್ದು ಬಲ ಭುಜಕ್ಕೆ ಒಳಪೆಟ್ಟು ಆಗಿರುತ್ತದೆ, ರಂಗಪ್ಪನು ರಸ್ತೆಯ ಬಲಭಾಗಕ್ಕೆ ಬಿದ್ದಿದ್ದು ಅದೇ 
ವೇಳೆಗೆ ಆರೋಪಿ-2 ಈತನ ಮೋಟಾರ್ ಸೈಕಲ್ ಹಿಂದುಗಡೆ ಬರುತ್ತಿದ್ದ ನೀರಿನ ಟ್ಯಾಂಕ್ ನ  ಟ್ರ್ಯಾಕ್ಟರ್ ನಂ. ಕೆ.ಎ-35/ಟಿ-8425 ನೇದ್ದರ  ಚಾಲಕನು ತನ್ನ ಟ್ರ್ಯಾಕ್ಟರ್ ನ್ನು  ಅತೀ ವೇಗವಾಗಿ ಮತ್ತು ಅಜಾಗರೂಕತೆಯಿಂದ ನಡೆಸಿಕೊಂಡು ಬಂದು ರಂಗಪ್ಪನ ತಲೆಯ ಮೇಲೆ ಟ್ರ್ಯಾಕ್ಟರ್  ಹಿಂದಿನ ಬಲಗಡೆಯ ಗಾಲಿ ಹತ್ತಿ ಇಳಿಸಿದ್ದರಿಂದ ರಂಗಪ್ಪನು ಮೃತ ಪಟ್ಟಿರುತ್ತಾನೆ. ಕಾರಣ ಇಬ್ಬರು ಆರೋಪಿತರ ವಿರುದ್ದ ಕಾನೂನು ಕ್ರಮ ಕೈಗೊಳ್ಳು ಫಿರ್ಯಾಧಿದಾರರು ಠಾಣೆಗೆ ಹಾಜರಾಗಿ ನೀಡಿದ ಗಣಕೀಕೃತ ದೂರಿನ ಮೇರೆಗೆ ಪ್ರಕರಣ ದಾಖಲಿಸಿದೆ.
Tekkalkota PS
13 Cr.No:0005/2016
(CODE OF CRIMINAL PROCEDURE, 1973 U/s 107 )
19/01/2016 Under Investigation
CrPC - Security For Good Behaviour (Sec 107 )
Brief Facts :  ದಿನಾಂಕ: 18/01/2016 ರಂದು ಬೆಳಿಗ್ಗೆ ಅರ್ಜಿದಾರರು ಹೊಲಕ್ಕೆ ಹೋದಾಗ ಪ್ರತಿವಾದಿಗಳು ಅರ್ಜಿದಾರರನ್ನು ನೋಡಿ, ಬೈದು ಬೆದರಿಸಿದ್ದಾಗಿ ಕೊಟ್ಟ ದೂರು ಅರ್ಜಿಯನ್ನು ಮೇರೆಗೆ ಠಾಣೆಯ ಡಿಪಿ ನಂಬರ್ ೦೫/೨೦೧೬ ದಾಖಲು ಮಾಡಿಕೊಂಡು ಈ ದಿನ ದಿನಾಂಕ; 19/01/2016 ರಂದು ಮದ್ಯಾಹ್ನ 1-30 ಗಂಟೆಗೆ ವಿಚಾರಣೆಗೆ ಹೋದಾಗ, ಪ್ರತಿವಾದಿಗಳು ಊರಲ್ಲಿ ಕಂಡು ಬಂದಿರುವುದಿಲ್ಲ.  ಅಲ್ಲದೇ ಪೊಲೀಸ್ ಬಾತ್ಮೀದಾರರನ್ನು ಭೇಟಿ ಮಾಡಿ ಪ್ರತಿವಾದಿಗಳ ಬಗ್ಗೆ ವಿಚಾರಿಸಲು ಪ್ರತಿವಾದಿಗಳು ಮುಂದಿನ ದಿನಗಳಲ್ಲಿ ಯಾವ ಸಮಯದಲ್ಲಾದರೂ ಅರ್ಜಿದಾರರೊಂದಿಗೆ ಮತ್ತು ಅವರ ಸಂಬಂಧಿಕರೊಂದಿಗೆ ಜಗಳ / ಗಲಾಟೆಗಳು ಮಾಡಿ, ಪ್ರಾಣ ಹಾನಿಯಾಗುವ ಮತ್ತು  ಕಾನೂನು ಸುವ್ಯವಸ್ಥೆಗೆ ತೊಂದರೆ ಆಗುವ, ಸಾರ್ವಜನಿಕರ ಶಾಂತತೆಗೆ ಭಂಗ ಉಂಟಾಗುವ ಸಾದ್ಯತೆಗಳು ಇವೆ ಎಂದು ಬಾತ್ಮೀದಾರರಿಂದ ಮಾಹಿತಿ ತಿಳಿದು ಬಂದಿರುತ್ತದೆ. ಆದ್ದರಿಂದ ವಾಪಸ್ಸು ಸಂಜೆ 4-30 ಠಾಣೆಗೆ ಬಂದು ಮುಂಜಾಗೃತಾ ಕ್ರಮಕ್ಕಾಗಿ ಪ್ರತಿವಾದಿಗಳ ವಿರುದ್ದ ಠಾಣಾ ಗುನ್ನೆ ನಂಬರ್ 05/2016 ಕಲಂ 107 ಸಿಆರ್ಪಿಸಿ ರೀತ್ಯ ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿರುತ್ತೇನೆ.
Thoranagal PS
14 Cr.No:0004/2016
(IPC 1860 U/s 279,337 ; INDIAN MOTOR VEHICLES ACT, 1988 U/s 187 )
19/01/2016 Under Investigation
MOTOR VEHICLE ACCIDENTS NON-FATAL - National Highways
Brief Facts :  ಪಿರ್ಯಾದಿ, ಪಿರ್ಯಾದಿದಾರರ ಚಿಕ್ಕಪ್ಪನ ಮಗ ಪೆನ್ನಯ್ಯ, ಅವರ ಸಂಭಂಧಿ ಬಾಲಾಂಜಿನೇಯ ಮತ್ತು  ಪ್ರೆಂಡ್ ಆದಮ್ ವಲಿ ನಾಲ್ಕೂ ಜನ ಸೇರಿ ದಿನಾಂಕ: 17.01.2016 ರಂದು ಸಂಜೆ 4:00 ಗಂಟೆಗೆ ತೋರಣಗಲ್ಲು ನಿಂದ ಇಂಡಿಕಾ ಕಾರ್ ನಂ: ಕೆಎ-37/ಎಂ.3010 ರಲ್ಲಿ ಬಳ್ಳಾರಿಗೆ ಪಿರ್ಯಾದಿದಾರರ ಭಾವನ ಮಗನ ಹುಟ್ಟುಹಬ್ಬಕ್ಕೆ ಹೋಗಿ ಕಾರ್ಯಕ್ರಮ ಮುಗಿಸಿಕೊಂಡು ಬಳ್ಳಾರಿಯಿಂದ ಹೊರಟಿದ್ದು ಬಳ್ಳಾರಿ - ಹೊಸಪೇಟೆ ಎನ್.ಹೆಚ್-63 ರಸ್ತೆಯಲ್ಲಿ ಕಾರ್ ನ್ನು ಪಿರ್ಯಾದಿದಾರರು ಚಲಾಯಿಸಿಕೊಂಡು ಬರುತ್ತಿರುವಾಗ  ರಾತ್ರಿ 11:15 ಗಂಟೆ ಸುಮಾರಿಗೆ ತೋರಣಗಲ್ಲು ಗ್ರಾಮದ ಸಮೀಪ ಕಡಪಾ ಹೋಟಲ್ ಹತ್ತಿರ ಎದುರುಗಡೆಯಿಂದ ಒಂದು ಹಳದಿ ಬಣ್ಣದ ಹೈವಾ ಟಿಪ್ಪರ್ ಲಾರಿಯನ್ನು ಅದರ ಚಾಲಕ ವೇಗವಾಗಿ ನಿರ್ಲಕ್ಷತೆಯಿಂದ ಚಲಾಯಿಸಿಕೊಂಡು ಬಂದು ಇಂಡಿಕಾ ಕಾರ್ ಗೆ ಡಿಕ್ಕಿ ಹೊಡೆಸಿ ಲಾರಿಯನ್ನು ನಿಲ್ಲಿಸಿದೆ ಪರಾರಿಯಾಗಿದ್ದು, ಇಂಡಿಕಾ ಕಾರ್ ಜಖಂಗೊಂಡು, ಕಾರ್ ನಲ್ಲಿದ್ದ ನಾಲ್ಕೂ ಜನರಿಗೆ ರಕ್ತಗಾಯ ಒಳಪೆಟ್ಟುಗಳಾಗಿರುತ್ತವೆ. ಅಪಘಾತವುಂಟು ಮಾಡಿ ಹೋದ ಲಾರಿ ಮತ್ತು ಚಾಲಕನನ್ನು ಪತ್ತೆ ಹಚ್ಚಿ ಲಾರಿ ಚಾಲಕನ ವಿರುದ್ದ ಕಾನೂನು ಕ್ರಮ ಜರುಗಿಸಲು ಮನವಿ ಅಂತಾ ದೂರಿನ ಸಾರಾಂಶ(ಪಿರ್ಯಾದಿದಾರರ ದೂರಿನ ಪ್ರತಿ ಲಗತ್ತಿಸಿದೆ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ