ಬುಧವಾರ, ಜನವರಿ 6, 2016

PRESS NOTE OF 06/01/2016

Crime Key Report From   To   
Sl. No FIR No FIR Date Crime Group - Crime Head Stage of case
Bellary Traffic PS
1 Cr.No:0005/2016
(IPC 1860 U/s 279,337 ; INDIAN MOTOR VEHICLES ACT, 1988 U/s 187 )
06/01/2016 Under Investigation
MOTOR VEHICLE ACCIDENTS NON-FATAL - Other Roads
Brief Facts :  ದಿನಾಂಕ: 02-01-2016 ರಂದು ಫಿರ್ಯಾಧಿದಾರರಾದ ಗುರುಮೂರ್ತಿ ತಂದೆ ಗುರಪ್ಪ ವ: 39 ವರ್ಷ, ಅಗಸರ ಜನಾಂಗ, ಕುಲಕಸುಬು, ವಾಸ; ಕೊಲ್ಲಾಪುರಮ್ಮ ಗುಡಿ ಹತ್ತಿರ, ಗುಗ್ಗರಹಟ್ಟಿ, ಬಳ್ಳಾರಿ  ರವರ ಮಗಳಾದ 10 ವರ್ಷದ ಮಗಳಾದ ಕು|| ಜಯಶ್ರೀ ಎಂಬ ಬಾಲಕಿಯು ಬೆಳಿಗ್ಗೆ 9-45 ಗಂಟೆಗೆ ಬಳ್ಳಾರಿ ನಗರದ ಗುಗ್ಗರಹಟ್ಟಿ ಏರಿಯಾದ ಕೊಲ್ಲಾಪುರಮ್ಮ ಗುಡಿಯ ಮುಂದೆ ರಸ್ತೆಯಲ್ಲಿ ನಡೆದುಕೊಂಡು ಬರುತ್ತಿದ್ದಾಗ ಅದೇ ವೇಳೆಗೆ ಜಯಶ್ರೀಯ ಹಿಂಬದಿಯಿಂದ ಮಹೇಶ ವಾಸ: ಗುಗ್ಗರಹಟ್ಟಿ ಈತನು ಆಟೋ ನಂಬರ್ ಕೆಎ-34/ಎ-2026 ನೇದ್ದನ್ನು ಅತಿವೇಗ ಹಾಗು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬರುತ್ತಾ ಜಯಶ್ರೀಯ ಹಿಂಬದಿಗೆ ಸದರಿ ಆಟೋದ ಮುಂದಿನ ಚಕ್ರದಿಂದ ಡಿಕ್ಕಿ ಹೊಡೆಸಿದ್ದರಿಂದ ಜಯಶ್ರೀಯು ರಸ್ತೆಯ  ಮೇಲೆ ಬಿದ್ದಿದ್ದರ ಪರಿಣಾಮವಾಗಿ  ಜಯಶ್ರೀಯ ಎಡಮೊಣಕಾಲಿನ ಕೆಳಗೆ ಬಾಹು ಬಂದು ಒಳಪೆಟ್ಟಾಗಿರುವುದಾಗಿ ಮೇಲ್ಕಂಡ ಅಪಘಾತ ಪಡಿಸಿದ ಆಟೋ ನಂಬರ್ ಕೆಎ-34/ಎ-2026  ನೇದ್ದರ ಚಾಲಕನಾದ ಮಹೇಶನ ವಿರುದ್ದ ಕಾನೂನು ರೀತ್ಯ ಕ್ರಮ ಜರುಗಿಸಲು ದೂರು ಇರುತ್ತದೆ.
2 Cr.No:0006/2016
(IPC 1860 U/s 279,337,304(A) ; INDIAN MOTOR VEHICLES ACT, 1988 U/s 187 )
06/01/2016 Under Investigation
MOTOR VEHICLE ACCIDENTS FATAL - Other Roads
Brief Facts :  ದಿನಾಂಕ: 06-01-2016 ರಂದು ಫಿರ್ಯಾಧಿದಾರರಾದ ಮೊಹಮ್ಮದ್ ಶರೀಫ್ ತಂದೆ ಅಬ್ದುಲ್ ಜಬ್ಬರ್ ವ: 48 ವರ್ಷ, ಮುಸ್ಲಿಂ ಜನಾಂಗ, ರಾಡ್ ಬೆಂಡಿಂಗ್ ಕೆಲಸ, ವಾಸ: ಇಲಾಹಿ ಮಸೀದಿ ಎದುರುಗಡೆ, ಮರಿಸ್ವಾಮಿ ಮಠದ ಹತ್ತಿರ, ಬಳ್ಳಾರಿರವರು ಹಾಗು ಅವರ ಸ್ನೇಹಿತರಾದ ಇಸ್ಮಾಯಿಲ್ ತಂದೆ ಶೆಕ್ಷಾವಲಿ ವ: 50 ವರ್ಷ, ಬಂಡಿಹಟ್ಟಿ ರಸ್ತೆ, ಕೌಲ ಬಜಾರ್ ಬಳ್ಳಾರಿ, ಇವರಿಬ್ಬರು ಸೇರಿ ಮೋಟರ್ ಸೈಕಲ್ ನಂಬರ್ ಕೆಎ-34/ಇಬಿ-5477 ನೇದ್ದರಲ್ಲಿ ಕೆಲಸದ ಮೇಲೆ ಪುತ್ತೂರು ಆಸ್ಪತ್ರೆಯ ಹತ್ತಿರ ಬಂದು ಕೆಲಸ ಮುಗಿಸಿಕೊಂಡು, ಇಸ್ಮಾಯಿಲ್ ಈತನು ಸದರಿ ಮೋಟರ್ ಸೈಕಲ್ ನ ಹಿಂಬದಿಯಲ್ಲಿ ಮೊಹಮ್ಮದ್ ಶರೀಫ್ ರವರನ್ನು ಕೂಡಿಸಿಕೊಂಡು ಪುತ್ತುರು ಆಸ್ಪತ್ರೆಯ ಮುಂದೆ ಇರುವ ರಸ್ತೆಯ ಕಡೆಯಿಂದ ಟಿಫನ್ ಗಾಗಿ ನಟರಾಜ ಟಾಕೀಸ್ ನ ಮುಂದೆ ಇರುವ ರಸ್ತೆಗೆ ಬಂದು ಬೆಳಿಗ್ಗೆ ಸುಮಾರು 9-00 ಗಂಟೆಗೆ ಮಂಜುನಾಥ ಆಗ್ರೋ ಕೆಮಿಕಲ್ಸ್ ಶಾಪಿನ ಮುಂದೆ ಇಸ್ಮಾಯಿಲ್ ಈತನು ಸದರಿ ಮೋಟರ್ ಸೈಕಲ್ ಅನ್ನು ಪಾರ್ಕ್ ಮಾಡಲು ರಸ್ತೆಯನ್ನು ಕ್ರಾಸ್ ಮಾಡುತ್ತಿದ್ದಾಗ ಅದೇ ವೇಳೆಗೆ ರಾಯಲ್ ಸರ್ಕಲ್ ಕಡೆಯಿಂದ ಆಟೋ ನಂಬರ್ ಕೆಎ-34/4960 ನೇದ್ದನ್ನು ಅದರ ಚಾಲಕನು ಅತಿವೇಗ ಹಾಗು ಅಜಾಗರುಕತೆಯಿಂದ ಚಲಾಯಿಸಿಕೊಂಡು ಬಂದು ಪಾರ್ಕಿಂಗ್ ಮಾಡಲು ಹೊರಟಿದ್ದ ಇಸ್ಮಾಯಿಲ್ ರವರ ಮೋಟರ್ ಸೈಕಲ್ ಗೆ ಡಿಕ್ಕಿ ಹೊಡೆಸಿದ್ದರಿಂದ ಫಿರ್ಯಾದಿದಾರರು ಮತ್ತು ಇಸ್ಮಾಯಿಲ್ ಇಬ್ಬರು ಮೋಟರ್ ಸೈಕಲ್ ಸಮೇತ ಕೆಳಗೆ ಬಿದ್ದಿದ್ದರಿಂದ ಫಿರ್ಯಾದಿದಾರರಿಗೆ ಬಲಭುಜ,ಬಲಮುಂಗೈ ಹತ್ತಿರ ಎಡದವಡೆಯ ಹತ್ತಿರ ಒಳಪೆಟ್ಟಾಗಿದ್ದು, ಇಸ್ಮಾಯಿಲ್ ರವರಿಗೆ ತಲೆಯ ಬುರುಡೆಯ ಬಳಿ ಭಾರಿ ಸ್ವರೂಪದ ಗಾಯಗಳಾಗಿ ಸ್ಥಳದಲ್ಲಿಯೇ ಪ್ರಜ್ಞೆ ತಪ್ಪಿದ್ದು, ಅಪಘಾತ ಪಡಿಸಿದ ನಂತರ ಮೇಲ್ಕಂಡ ಆಟೋ ಚಾಲಕನು ಆಟೋವನ್ನು ಚಲಾಯಿಸಿಕೊಂಡು ಹಾಗೆಯೇ ಹೊರಟು ಹೋಗಿದ್ದು, ಗಾಯಗೊಂಡ ಫಿರ್ಯಾದಿದಾರರನ್ನು ಹಾಗು ಇಸ್ಮಾಯಿಲ್ ರವರನ್ನು ಚಿಕಿತ್ಸೆಗಾಗಿ ಬಳ್ಳಾರಿ ವಿಮ್ಸ್ ಆಸ್ಪತ್ರೆಗೆ ಬೆಳಿಗ್ಗೆ 9-55 ಗಂಟೆಗೆ ಕರೆದುಕೊಂಡು ಹೋಗಿ ದಾಖಲಿಸಿದ್ದು, ವೈದ್ಯರು ಪರೀಕ್ಷಿಸಿ ಇಸ್ಮಾಯಿಲ್ ಮೃತಪಟ್ಟಿರುತ್ತಾನೆಂದು ತಿಳಿಸಿರುತ್ತಾರೆಂದು, ಈ ಅಪಘಾತ ಪಡಿಸಿ, ಹಾಗೇ ಹೊರಟು ಹೋಗಿರುವ ಆಟೋ ನಂಬರ್ ಕೆಎ-34/4960 ನೇದ್ದರ ಚಾಲಕನು ಯಾರೆಂದು ಪತ್ತೆ ಮಾಡಿ ಆತನ ವಿರುದ್ದ ಕಾನೂನು ರೀತ್ಯ ಕ್ರಮ ಜರುಗಿಸಲು ದೂರು ಇರುತ್ತದೆ.
Cowlbazar PS
3 Cr.No:0006/2016
(IPC 1860 U/s 380,457 )
06/01/2016 Under Investigation
BURGLARY - NIGHT - At Residential Premises
Brief Facts :  ದಿನಾಂಕ 05-01-2016 ರಂದು ರಾತ್ರಿ 9-30 ಗಂಟೆಯಿಂದ ದಿನಾಂಕ 06-01-2016 ರಂದು ಬೆಳಿಗ್ಗೆ 6-00 ಗಂಟೆಯ ಮದ್ಯದ ಅವಧಿಯಲ್ಲಿ ಯಾರೋ ಕಳ್ಳರು ಕಳುವುಮಾಡುವ ಉದ್ದೇಶದಿಂದ ಮನೆಯ ಬಾಗಿಲಿಗೆ ಹಾಕಿದ ಬೀಗದ ಪತ್ತವನ್ನು ಯಾವುದೊ ಆಯುದದಿಂದ ಜಖಂಗೊಳಿಸಿ ಮನೆಯೊಳಗೆ ಪ್ರವೇಶಿಸಿ ಮನೆಯ ಬೆಡ್ ರೂಂನಲ್ಲಿದ್ದ ಬೀರುವಾವನ್ನು ಜಖಂಗೊಳಿಸಿ ಬೀರುವಾದಲ್ಲಿದ್ದ ಸುಮಾರು ರೂ 24,500/-ಗಳ ಬೆಲೆ 
ಬಾಳುವ ಬೆಳ್ಳಿ, ಬಂಗಾರದ ವಸ್ತುಗಳು ಹಾಗೂ ನಗದು ಹಣವನ್ನು ಕಳುವುಮಾಡಿಕೊಂಡು ಹೋಗಿರುತ್ತಾರೆಂದು ಪಿರ್ಯಾದಿದಾರರ ದೂರು ಇರುತ್ತದೆ.
4 Cr.No:0007/2016
(IPC 1860 U/s 454,457,380 )
06/01/2016 Under Investigation
BURGLARY - NIGHT - At Residential Premises
Brief Facts :  ದಿನಾಂಕ 04-01-2016 ರಂದು ಮದ್ಯಾಹ್ನ 2-00 ಗಂಟೆಯಿಂದ ದಿನಾಂಕ 06-01-2016 ರಂದು ಬೆಳಿಗ್ಗೆ 9-00 ಗಂಟೆಯ ಮದ್ಯದ ಅವಧಿಯಲ್ಲಿ ಯಾರೋ ಕಳ್ಳರು ಕಳುವುಮಾಡುವ ಉದ್ದೇಶದಿಂದ ಮನೆಯ ಬಾಗಿಲಿಗೆ ಹಾಕಿದ ಬೀಗದ ಪತ್ತವನ್ನು ಯಾವುದೊ ಆಯುದದಿಂದ ಜಖಂಗೊಳಿಸಿ ಮನೆಯೊಳಗೆ ಪ್ರವೇಶಿಸಿ ಮನೆಯ ಬೆಡ್ ರೂಂನಲ್ಲಿದ್ದ ಬೀರುವಾವನ್ನು ಜಖಂಗೊಳಿಸಿ ಬೀರುವಾದಲ್ಲಿದ್ದ ಸುಮಾರು ರೂ 24,000/-ಗಳ ಬೆಲೆ ಬಾಳುವ ಬೆಳ್ಳಿ, ಬಂಗಾರದ ವಸ್ತುಗಳನ್ನು ಕಳುವುಮಾಡಿಕೊಂಡು ಹೋಗಿರುತ್ತಾರೆಂದು ಪಿರ್ಯಾದಿದಾರರ ದೂರು ಇರುತ್ತದೆ.
Hadagali PS
5 Cr.No:0002/2016
(MMDR (MINES AND MINERALS REGULATION OF DEVELOPMENT) ACT 1957 U/s 21 ; IPC 1860 U/s 379 )
06/01/2016 Under Investigation
KARNATAKA STATE LOCAL ACTS - Mmdr (Mines & Minerals Regulation Development) Act 1957
Brief Facts :  ದಿನಾಂಕ 06-01-2016 ರಂದು ಬೆಳಿಗ್ಗೆ 05-45 ಗಂಟೆ ಸುಮಾರಿಗೆ ಸೊವೇನಹಳ್ಳಿ ಗ್ರಾಮದ ರೇಷ್ಮೆ ಇಲಾಖೆ ಕಟ್ಟಡ ಮುಂದಿನಿಂದ ತುಂಗಭದ್ರ ನದಿಯ ಕಡೆಯಿಂದ ಬರುವ ದಾರಿಯಲ್ಲಿ Mahindra 475 DI SARPANCH  Red Colour  Engine Reg:- No: KA27TB2808  Trali Chassi No:01113   ನೇದ್ದರ ಚಾಲಕನು ಇದರಲ್ಲಿ  ಆಕ್ರಮವಾಗಿ ಮರಳನ್ನು ತುಂಬಿಕೊಂಡು ಕಳ್ಳತನದಿಂದ ಸಾಗಣಿಕೆ ಮಾಡುವಾಗ ಟ್ರಾಕ್ಟರ್ ಹಿಡಿದು ಪರಿಶೀಲಿಸಿದ್ದು ಸದರಿ ಟ್ರಾಕ್ಟರ್ ಚಾಲಕ ಮತ್ತು ಮಾಲಿಕರು ಸಾದಾ ಮರಳನ್ನು ಯಾವುದೇ ಪರವಾನಿಗೆ ಇಲ್ಲದೆ, ಆನಧಿಕೃತವಾಗಿ ಆಕ್ರಮವಾಗಿ ಸಾಗಾಣಿಕೆ ಮಾಡಿದ್ದು, ಹಾಗೂ ಸಕರ್ಾರಕ್ಕೆ ನ್ಯಾಯಾಯುತವಾಗಿ ಸಲ್ಲಬೇಕಾದ ರಾಜಧನವನ್ನು ಪಾವತಿಸದೆ, ಕಳ್ಳತನದಿಂದ ಸಾಗಣಿಕೆ ಮಾಡುತ್ತಿರುವಾಗ ಸಿಕ್ಕಿ ಬಿದ್ದಿರುವದು ಕಂಡು ಬಂದಿದ್ದರಿಂದ ಸದರಿಯವರ ಮೇಲೆ ಕಾನೂನು ಕ್ರಮ ಜರುಗಿಸಲು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿದೆ.
Kudligi PS
6 Cr.No:0002/2016
(IPC 1860 U/s 504,323,324,34 )
06/01/2016 Under Investigation
CASES OF HURT - Simple Hurt
Brief Facts :  ಈ ದಿನ ದಿನಾಂಕ ೦೬/೦೧/೨೦೧೬ ರಂದು ಬೆಳಿಗ್ಗೆ ೧೧-೩೦ ಗಂಟೆಗೆ   ಪಿರ‍್ಯಾದುದಾರರು ಠಾಣೆಗೆ ಹಾಜರಾಗಿ  ನೀಡಿದ ದೂರಿನ ಸಾರಾಂಶದಲ್ಲಿ ನಮ್ಮ ತಂದೆ ತಾಯಿಗೆ ನಾವುಗಳು ೪ ಜನ ಗಂಡು ಮಕ್ಕಳಿದ್ದು ಅದರಲ್ಲಿ ಹನುಮಂತಪ್ಪ ಹಿರಿಯನಿದ್ದು ನಾನು ಎರಡನೆಯವನಿದ್ದು, ದುರುಗಪ್ಪ ೩ ನೆಯವನಿದ್ದು, ಹೂಲೆಪ್ಪ ಚಿಕ್ಕವನಿರುತ್ತಾನೆ. ಈಗ್ಗೆ ಸುಮಾರು ೫ ವರ್ಷದ ಕೆಳಗೆ ನಾವುಗಳು ಬೇರೆ ಬೇರೆಯಾಗಿ ಜೀವನ ಮಾಡಿಕೊಂಡಿರುತ್ತೇವೆ. ನಾನು ಚಿಕ್ಕನಿರುವಾಗ ನನ್ನ ಎಡ ಕೈ ಮುರಿದ್ದು ಅಂಗವಿಕಲನಾಗಿರುತ್ತೇನೆ. ನಮಗೂ ಮತ್ತು ನಮ್ಮ ಹಿರಿಯನಾದ ಹನುಮಂತಪ್ಪನಿಗೂ ಆಸ್ತಿ ಹಂಚಿಕೊಳ್ಳುವ ವಿಚಾರವಾಗಿ ಆಗಾಗ ಜಗಳವಾಗುತ್ತಿದ್ದು ನಾವುಗಳು ಅಣ್ಣ ತಮ್ಮಂದಿರೆಂದು ಸುಮ್ಮನಾಗಿದ್ದೆವು. 
                ದಿನಾಂಕ ೦೫/೦೧/೨೦೧೬ ರಂದು ಬೆಳಿಗ್ಗೆ ೮-೦೦ ಗಂಟೆಯ ಸುಮಾರಿಗೆ ನಮ್ಮ ಮನೆಯ ಪಕ್ಕದಲ್ಲಿರುವ ನಮ್ಮ ಜಾಗದಲ್ಲಿ ನಮ್ಮ ಅಣ್ಣ  ಹನುಮಂತಪ್ಪನು ಇದು ತನ್ನ ಜಾಗ ಎಂದು ತಗ್ಗನ್ನು ತೆಗೆಯುತ್ತಿದ್ದು ಇದನ್ನು  ನೋಡಿದ ನಾನು ಅಲ್ಲಿ ಏತಕ್ಕಾಗಿ ತಗ್ಗನ್ನು ತೆಗೆಯುತ್ತೀಯ ಅಂತ ವಿಚಾರಿಸಿದ್ದಕ್ಕೆ ಆತನು ನನಗೆ ಲೇ ಸೂಳೆ ಮಗನೆ ಇದು ನಮ್ಮ ಜಾಗ ನಮ್ಮ ಜಾಗದಲ್ಲಿ ತಗ್ಗನ್ನು ತೆಗೆದರೆ ನಿನಗೇನು ಅಂತ ದುರ್ಬಾಷೆಗಳಿಂದ ಬೈಯ್ದಾಡಿದ್ದು ಅದಕ್ಕೆ ನಾನು ಹೊಲಸು ಮಾತುಗಳಿಂದ ಬೈಯ್ದಾಡಬೇಡ ಅಂತ ಆತನಿಗೆ ಅಂದಿದಕ್ಕೆ ಆತನು ನೀನು ಪ್ರತಿ ಸಲ ನನ್ನೊಂದಿಗೆ ಜಗಳ ಮಾಡುತ್ತೀಯ ಅಂತ ನನ್ನೊಂದಿಗೆ ಜಗಳಮಾಡಿ ನನ್ನನ್ನು ಕೈ ಕಾಲುಗಳಿಂದ ಹೊಡೆಬಡೆ ಮಾಡಿದ್ದು ಅಲ್ಲದೆ ಕೆಳಗೆ ಕೆಡವಿಕೊಂಡು ನನ್ನ ಬೆನ್ನಿಗೆ ತನ್ನ ಬಾಯಿಯ ಹಲ್ಲುಗಳಿಂದ  ಕಚ್ಚಿದ್ದು ಇದರಿಂದ ನನಗೆ ರಕ್ತಗಾಯವಾಯಿತು. ಇದನ್ನು ನೋಡಿದ ನನ್ನ ಹೆಂಡತಿ ಅಂಜಿನಮ್ಮ  ಬಿಡಿಸಿಕೊಳ್ಳಲು ಬಂದಾಗ ಆಕೆಗೆ ನನ್ನ ಅಣ್ಣ ಹನುಮಂತಪ್ಪನ ಹೆಂಡತಿ ಮಂಜುಳು ಅಡ್ಡ ಬಂದು ನನ್ನ ಹೆಂಡತಿಗೆ ಕೈ ಕಾಲುಗಳಿಂದ ಹೊಡೆಬಡೆ ಮಾಡಿದಳು ಈ ಜಗಳವನ್ನು ನೋಡಿದ ನಾಗಬೋಷಣ ತಂದೆ ಚಂದ್ರಗೌಡ, ಸಣ್ಣ ಹನುಮಂತಪ್ಪ ತಂದೆ  ಕರಿಹನುಮಪ್ಪ, ರವರುಗಳು ಜಗಳ ಬಿಡಿಸಿದರು. ನಂತರ ಬಂದ ನನ್ನ ತಮ್ಮ ದುರುಗಪ್ಪನು ವಾಹನದ ಅನುಕೂಲ ಮಾಡಿಕೊಂಡು ನನ್ನನ್ನು ಮತ್ತು ನನ್ನ ಹೆಂಡತಿಯನ್ನು ವಾಹನದ ಅನುಕೂಲ ಮಾಡಿಕೊಂಡು ಬಂದು ಕೂಡ್ಲಿಗಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ತೋರಿಸಿದ್ದು ನಾವುಗಳು ಒಂದೇ ತಂದೆ ಮಕ್ಕಳಾದ್ದರಿಂದ ಈ ಬಗ್ಗೆ  ಮಾತುಕೆತೆ ಮಾಡಿಕೊಂಡು ನಮ್ಮ ಸಮಸ್ಯೆಯನ್ನು ಬಗೆಹರಿಸಿಕೊಂಡರಾಯಿತು ಅಂತ ಸುಮ್ಮನಾಗಿದ್ದು, ನನ್ನ ಅಣ್ಣನು ಈವರೆಗೂ ಮಾತುಕತೆಗೆ ಬಾರದೇ ಇದ್ದುದರಿಂದ ಈ ದಿನ ತಡವಾಗಿ ಬಂದು ದೂರು ಕೊಟ್ಟಿದ್ದು ನಮ್ಮನ್ನು ಹೊಡೆಬಡೆ ಮಾಡಿ ಬಾಯಿಯಿಂದ ಕಚ್ಚಿದ ನನ್ನ ಅಣ್ಣ ಹನುಮಂತಪ್ಪ ಹಾಗು ಆತನ ಹೆಂಡತಿ ಮಂಜುಳ ರವರುಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ಕೋರಿದೆ ಅಂತ ಇದ್ದ  ದೂರಿನ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿದೆ.
Kurugod PS
7 Cr.No:0005/2016
(KARNATAKA POLICE ACT, 1963 U/s 78(III) ; IPC 1860 U/s 420 )
06/01/2016 Under Investigation
 KARNATAKA POLICE ACT 1963 - Gambling - Matka (78 Class C)
Brief Facts :  ಪಿಎಸ್ಐ ರವರು ಈ ದಿನ ದಿನಾಂಕ: 06/01/2016 ರಂದು ಬೆಳಿಗ್ಗೆ 9:30 ಗಂಟೆಗೆ  ಹಳೆ ನೆಲ್ಲುಡಿ ಗ್ರಾಮದ ದುರುಗಮ್ಮ ದೇವಸ್ಥಾನದ ಮುಂದಿನ  ಸಾರ್ವಜನಿಕ ಸ್ಥಳದಲ್ಲಿ ಆರೋಪಿ-01 ರವರು ಹೋಗಿ ಬರುವ ಸಾರ್ವಜನಿಕರನ್ನು ಮಟಕಾ ಆಡಲು ಕೂಗುತ್ತಾ ಒಂದು ರೂಪಾಯಿಗೆ 80 ರೂ. ಕೊಡುತ್ತೆವೆ ಅಂತ ಜನರಿಗೆ ಆಸೆ ಹುಟ್ಟಿಸಿ ಮೋಸ ಮಾಡುವ ಉದ್ದೇಶದಿಂದ ಕೂಗಿ ಕರೆಯುತ್ತಾ ಇಬ್ಬರು ಮಟ್ಕಾ ಜೂಜಾಟ ನಡೆಸುತ್ತಿದ್ದಾಗ ಪಿಎಸ್ಐ ರವರು ಸಿಬ್ಬಂದಿಯೊಂದಿಗೆ ಪಂಚರ ಸಮಕ್ಷಮ ದಾಳಿ ಮಾಡಿದಾಗ ಆರೋಪಿ-01 ರವರು ಸಿಕ್ಕಿಬಿದ್ದಿದ್ದು  ಸಿಕ್ಕಿಬಿದ್ದ ಆರೋಪಿತನಿಂದ  ಮಟ್ಕಾ ಜೂಜಾಟಕ್ಕೆ ಸಂಬಂದಿಸಿದ ನಗದು ಹಣ 2400/- ರೂಪಾಯಿಗಳು, 1 ಮಟ್ಕಾಪಟ್ಟಿ, 1 ಬಾಲ್ಪೆನ್, 1 ಮೊಬೈಲ್ ವಶಕ್ಕೆ ಪಡೆದು ಆರೋಪಿ-01 ರವರು ತಾನು ಬರೆದ ಮಟ್ಕಾ ಪಟ್ಟಿಗಳನ್ನು ಆರೋಪಿ-02 ರವರಿಗೆ ಕೊಡುತ್ತಿರುತ್ತೇನೆ ಎಂದು ತಿಳಿಸಿದ್ದು ನಂತರ ಆರೋಪಿಯೊಂದಿಗೆ ಮತ್ತು ಜಪ್ತಿಪಡಿಸಿಕೊಂಡ  ಸ್ವತ್ತಿನೊಂದಿಗೆ ಠಾಣೆಗೆ ಬಂದು ಸದರಿಯವರ ವಿರುದ್ದ ಕಲಂ 78(3) ಕೆ.ಪಿ.ಕಾಯ್ದೆ ಮತ್ತು ಕಲಂ 420 ಐ.ಪಿ.ಸಿ. ರೀತ್ಯಾ ಪ್ರಕರಣ ದಾಖಲಿಸಿಕೊಂಡು ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ಪಿಎಸ್ಐ ರವರು ಸೂಚಿಸಿದ ಮೇರೆಗೆ  ಪ್ರಕರಣ ದಾಖಲಿಸಿಕೊಂಡಿರುತ್ತೇನೆ, ಇದರೊಂದಿಗೆ ಪಿರ್ಯಾದಿದಾರರು ನೀಡಿದ ವಿಶೇಷ ವರದಿಯನ್ನು ಲಗತ್ತಿಸಿ ನಿವೇಧಿಸಿಕೊಂಡಿರುತ್ತೇನೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ