ಗುರುವಾರ, ಜನವರಿ 14, 2016

PRESS NOTE OF 14/01/2016

Crime Key Report From   To   
Sl. No FIR No FIR Date Crime Group - Crime Head Stage of case
Hosahalli PS
1 Cr.No:0006/2016
(IPC 1860 U/s 279,337,304(A) ; INDIAN MOTOR VEHICLES ACT, 1988 U/s 183,187 )
14/01/2016 Under Investigation
MOTOR VEHICLE ACCIDENTS FATAL - National Highways
Brief Facts :  ದಿನಾಂಕ:14/01/2016 ರಂದು ಬೆಳಿಗ್ಗೆ 7-00 ಗಂಟೆಯಿಂದ 8-00 ಗಂಟೆಯ ವರೆಗೆ ಗಾಯಾಳು ಫಿರ್ಯಾದಿದಾರರಾದ ಹನುಮಂತ ರವರು ಕೂಡ್ಲಿಗಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವ ಕಾಲಕ್ಕೆ ಹೇಳಿಕೆಯ ದೂರನ್ನು ಕೊಟ್ಟಿದ್ದೇನೆಂದರೆ, ತಾನು ತನ್ನ ಸ್ನೇಹಿತರೊಂದಿಗೆ ಚಾಲಕ ಸೇರಿ ಒಟ್ಟು 16 ಜನರು ಸೇರಿಕೊಂಡು ಟ್ರಾಕ್ಸ್ ನಂ.ಕೆ.ಎ.29 ಎಂ.4643 ನೇದ್ದರಲ್ಲಿ ಭಾಗವತಿ ಗ್ರಾಮದಿಂದ ಶಬರಿ ಮಲೈ ಅಯ್ಯಪ್ಪಸ್ವಾಮಿ ದರ್ಶನಕ್ಕೆಂದು ಹೊರಟು ದಿನಾಂಕ:11/01/2016 ರಂದು ಶಬರಿ ಮಲೈನಲ್ಲಿ ಅಯ್ಯಪ್ಪ ಸ್ವಾಮಿ ದರ್ಶನ ಮಾಡಿಕೊಂಡು ವಾಪಾಸ್ ನಮ್ಮ ಗ್ರಾಮಕ್ಕೆಂದು ಅಲ್ಲಿಂದ ಹೊರಟು ದಿನಾಂಕ:14/01/2016 ರಂದು ಬೆಳಗನ ಜಾವ 5-30 ಗಂಟೆಯ ಸುಮಾರಿಗೆ ನಮ್ಮ ಟ್ರಾಕ್ಸ್ನ ಚಾಲಕನಾದ ಶಿವಕುಮಾರನು ನಮ್ಮನ್ನು ಟ್ರಾಕ್ಸ ನಂ.ಕೆ.ಎ.29/ಎಂ.4643 ರಲ್ಲಿ ಕೂಡಿಸಿಕೊಂಡು ಎಂ.ಬಿ.ಅಯ್ಯನಹಳ್ಳಿ-ಬಣವಿಕಲ್ಲು ಗ್ರಾಮದ ಮದ್ಯ ಎನ್.ಹೆಚ್.13 ರಸ್ತೆಯಲ್ಲಿ ಹೋಗುತ್ತಿರುವಾಗ ಎದರುಗಡೆಯಿಂದ ಒಬ್ಬ ಲಾರಿ ಚಾಲಕ ತನ್ನ ಲಾರಿ ನಂ.ಆರ್.ಜೆ.01/ಜಿ.7743 ನೇದ್ದನ್ನು ಅತೀ ವೇಗ ಮತ್ತು ಅಜಾಗರೂಕತೆಯಿಂದ ನಡೆಸಿಕೊಂಡು ಬಂದು ನಮ್ಮ ಟ್ರಾಕ್ಸ್ಗೆಗೆ ಡಿಕ್ಕಿ ಹೊಡೆಸಿದ್ದರಿಂದ ಟ್ರಾಕ್ಸನ ಚಾಲಕ ಶಿವಕುಮಾರ,ಮುದುಕಪ್ಪ ಪತ್ರೋಟ್,ತಿಮ್ಮಣ್ಣ ಮಡ್ಡಿ 3 ಜನರು ಸ್ಥಳದಲ್ಲಿ ಮೃತಪಟ್ಟಿದ್ದು ಇನ್ನುಳಿದ ನಮಗೆಲ್ಲ ರಕ್ತಗಾಯಗಳಾಗಿರುತ್ತವೆಂದು ಲಾರಿ ಚಾಲಕ ಅಪಘಾತ ಮಾಡಿ ಸ್ಥಳದಿಂದ ಓಡಿ ಹೋಗಿರುತ್ತಾನೆಂದು,ಅಪಘಾತ ಮಾಡಿದ ಲಾರಿ ಚಾಲಕನ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಕೊಟ್ಟ ಹೇಳಿಕೆಯ ದೂರನ್ನು ಪಡೆದು ಕೊಂಡು ಪ್ರಕರಣ ದಾಖಲು ಮಾಡಿಕೊಂಡಿರುತ್ತೇನೆ.
Hospet Extention PS
2 Cr.No:0005/2016
(IPC 1860 U/s 379 )
14/01/2016 Under Investigation
THEFT - Cash
Brief Facts :  ಈ ದಿನ ದಿನಾಂಕ 14/1/2016 ರಂದು ಮದ್ಯಾಹ್ನ 1-00 ಗಂಟೆಗೆ ಫಿರ್ಯಾದಿದಾರಳು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೇನೆಂದರೆ ಫಿರ್ಯಾದಿದಾರಳು ನಿನ್ನೆ ದಿನ ದಿನಾಂಕ 13/1/2016 ರಂದು ಬೆಳಗ್ಗೆ 5-00 ಗಂಟೆಯಿಂದ 11 ಗಂಟೆಯವರೆಗೆ ಹೊಸಪೇಟೆ ಎ.ಪಿ.ಎಂ.ಸಿ. ಮಾರ್ಕೇಟನ ಬಿ.ಹೆಚ್. ರವಿ ಅಂಗಡಿಯ ಮುಂದೆ ಚಿಲ್ಲರೆ ತರಕಾರಿ ವ್ಯಾಪಾರ ಮಾಡಿಕೊಂಡು ತರಕಾರಿ ವ್ಯಾಪಾರ ಮಾಡಿದ ಹಣ ರೂ.38,000/-ಗಳನ್ನು ಒಂದು ಪರ್ಸನಲ್ಲಿಟ್ಟು ಅದನ್ನು ಗುಲಾಬಿ ಬಣ್ಣದ ಕೈ ಚೀಲದಲ್ಲಿಟ್ಟು ಅದನ್ನು ವೈರ್ ಪುಟ್ಟಿಯಲ್ಲಿ ಇಟ್ಟು ತನ್ನ ಹಿಂದೆ ಇಟ್ಟುಕೊಂಡು ತಕ್ಕಡಿ ಮತ್ತು ಉಳಿದ ತರಕಾರಿಗಳನ್ನು ನೋಡಿ ಪಕ್ಕದಲ್ಲಿಟ್ಟಕೊಂಡು ಸ್ವಲ್ಪ ಸಮಯದ ನಂತರ ವೈರ್ ಬುಟ್ಟಿಯಲ್ಲಿಟ್ಟದ್ದ ಗುಲಾಬಿ ಬಣ್ಣದ ಬ್ಯಾಗ್ ನೋಡಲು ಕಾಣಲಿಲ್ಲ ಆಗ ಅಕ್ಕ-ಪಕ್ಕದವರನ್ನು ವಿಚಾರಿಸಲು ಯಾರೋ ಒಬ್ಬನು ಸದರಿ ಬ್ಯಾಗ್ನನ್ನು ತೆಗೆದುಕೊಂಡು ಓಡಿ ಹೋದನೆಂದು ತಿಳಿಸಿದ್ದರಿಂದ ಸದರಿ ವ್ಯಕ್ತಿಯನ್ನು ಎಲ್ಲಾ ಕಡೆ ಹುಡುಕಾಡಿ ನೋಡಲು ಸಿಗದೆ ಇದ್ದುದ್ದರಿಂದ ತನ್ನ ಗಂಡನೊಂದಿಗೆ ಚರ್ಚಿಸಿ ಈ ದಿನ ತಡವಾಗಿ ಬಂದು ಪತ್ತೆ ಮಾಡಿಕೊಡಲು ಕೋರಿ ದೂರು ನೀಡಿದ್ದರಿಂದ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದೆ.
Itagi PS
3 Cr.No:0014/2016
(IPC 1860 U/s 363A )
14/01/2016 Under Investigation
KIDNAPPING AND ABDUCTION - Others
Brief Facts :  ತನ್ನ ಹಿರಿಯ ಮಗನಾದ ರಾಜೇಶನು (ಹುಟ್ಟಿದ ದಿನಾಂಕ 27-05-1999 ) ಹರಪನಹಳ್ಳಿಯ ಹೆಚ್.ಪಿ.ಎಸ್ ಕಾಲೇಜಿನಲ್ಲಿ ಪಿ.ಯು.ಸಿ ಪ್ರಥಮ ವರ್ಷದ ವಿಧ್ಯಾಭ್ಯಾಸ ಮಾಡುತ್ತಿದ್ದು, ಪ್ರತಿ ದಿನ ತಮ್ಮ ಗ್ರಾಮದಿಂದ 9-00 ಎ.ಎಂ ಗಂಟೆಗೆ ತಮ್ಮ ಊರಿನಿಂದ ಹೊರಟು ಹಗರಿಬೊಮ್ಮನಹಳ್ಳಿಗೆ ಹೋಗಿ, ಹಗರಿಬೊಮ್ಮನಹಳ್ಳಿಯಿಂದ ಹರಪನಹಳ್ಳಿಗೆ ಸರ್ಕಾರಿ ಬಸ್ಸುಗಳಲ್ಲಿ ತಮ್ಮ ಗ್ರಾಮದ ಇತರೆ ವಿಧ್ಯಾರ್ಥಿಗಳೊಂದಿಗೆ ಹೋಗಿ ಸಾಯಂಕಾಲ 6-00 ಗಂಟೆ ಸುಮಾರಿಗೆ ತಮ್ಮ ಊರಿಗೆ ಮರಳಿ ಬರುವುದು ಮಾಡುತ್ತಿದ್ದು, ಇವನು ಸ್ವಲ್ಪ ಉದಾಸೀನ ಸ್ವಭಾವದವನಾಗಿದ್ದರಿಂದ ಮನೆಯಲ್ಲಿ ತಾನು ಮತ್ತು ತನ್ನ ಹೆಂಡತಿ ಇಬ್ಬರೂ ಈತನ ವಿಧ್ಯಾಭ್ಯಾಸದ ಬಗ್ಗೆ ಬುದ್ದಿ ಮಾತುಗಳನ್ನು ಆಗಾಗ ಹೇಳುತ್ತಿದ್ದು, ಬಿಟ್ಟರೆ ಈತನಿಗೆ ಬೇರೆ ಯಾವುದೇ ಸಮಸ್ಯೆಗಳಿರಲಿಲ್ಲ, ಈಗಿರುವಾಗ ತನ್ನ ಮಗನು ದಿನಾಂಕ 29-12-2015 ರಂದು ಎಂದಿನಂತೆ ಬೆಳಗ್ಗೆ 9-00 ಗಂಟೆಗೆ ಹೋಗುವವನು ಆ ದಿನ ಬೆಳಗ್ಗೆ 8-30 ಎ.ಎಂ ಗಂಟೆಗೆ ತಮ್ಮ ಮನೆಯಿಂದ ಕಾಲೇಜಿಗೆ ಹೋಗಿ ಬರುತ್ತೇನೆಂದು ಹೇಳಿ ಹೋದವನು, ಆ ದಿನ ಸಾಯಂಕಾಲ 7-00 ಗಂಟೆಯಾದರೂ ತಮ್ಮ ಮಗ ರಾಜೇಶನು ಮನೆಗೆ ವಾಪಸ್ಸಾಗಿರದ ಕಾರಣ ಆದಿನದಿಂದ ಈ ದಿನದ ವರೆಗೂ ಎಲ್ಲಾ ಕಡೆ ಹುಡುಕಾಡಿದರೂ ಸಹಾ ತಮ್ಮ ಮಗ ರಾಜೇಶನು ಎಲ್ಲಿಯೂ ಪತ್ತೆಯಾಗದ ಕಾರಣ ಅಪಹರಣವಾಗಿರಬಹುದಾದ ಅಥವಾ ಕಾಣೆಯಾಗಿರುವ ತಮ್ಮ ಮಗನಾದ ರಾಜೇಶನನ್ನು ಪತ್ತೆ ಮಾಡಿಕೊಡಲು ಈಗ ತಡವಾಗಿ ಬಂದು ಗಣಕ ಯಂತ್ರದಲ್ಲಿ ಟೈಪ್ ಮಾಡಿಸಿ ತಂದು ನೀಡಿದ ದೂರನ್ನು ಪಡೆದು ಸಾರಾಂಶದನ್ವಯ ಪ್ರಕರಣವನ್ನು ದಾಖಲಿಸಿಕೊಂಡು 
ಪತ್ತೆ ಕಾರ್ಯಕೈಗೊಂಡಿರುತ್ತದೆ.
Sirigeri PS
4 Cr.No:0006/2016
(IPC 1860 U/s 354(A),448 )
14/01/2016 Under Investigation
MOLESTATION - Attempt To Commit
Brief Facts :  ಪಿರ್ಯಾಧಿದಾರರು ದಿ:-14/01/2016 ರಂದು ಮಧ್ಯಾಹ್ನ 12:30ಗಂಟೆಗೆ ಪಿರ್ಯಾಧಿದಾರರು ಬಂದ ನೀಡಿದ ದೂರನ್ನು ಪಡೆದು ಪರಿಶಿಲಿಸಲು ನನ್ನ ಸ್ವಂತ ಊರು ಬಾದನಹಟ್ಟಿ ಗ್ರಾಮವಾಗಿದ್ದು, ಈಗ್ಗೇ 12 ವರ್ಷಗಳಿಂದೆ ಕೊಂಚಿಗೇರಿ ಗ್ರಾಮದ ಮಂಜುನಾಥ ಇವರೊಂದಿಗೆ ವಿವಾಹವಾಗಿದ್ದು, ನಮಗೆ ಮೂವರು ಮಕ್ಕಳಿದ್ದು, ಇಬ್ಬರು ಸುಖ ಸಂಸಾರ ಮಾಡಿಕೊಂಡು ಕೊಂಚಿಗೇರಿ ಗ್ರಾಮದಲ್ಲಿ ವಾಸವಾಗಿದ್ದು, ನನ್ನ ಗಂಡ ವ್ಯವಸಾಯ ಮಾಡಿಕೊಂಡು ಜೀವನ ಮಾಡುತ್ತಿದ್ದು, ಈ ದಿನ ದಿ:14/01/2016 ರಂದು ಬೆಳಿಗ್ಗೆ 8ಗಂಟೆಗೆ ನನ್ನ ಗಂಡ ಮಂಜುನಾಥ ಎಂದಿನಂತೆ ಮನೆಯಿಂದ ಹೊಲಕ್ಕೆ ಹೋದನು, ನಂತರ ಬೆಳಿಗ್ಗೆ 8:30ಗಂಟೆಗೆ ನಾನು ಮನೆಯಲ್ಲಿ ಒಬ್ಬಳೇ ಇದ್ದಾಗ ನಮ್ಮ ಗ್ರಾಮದ ವಿರುಪಣ್ಣ ತಂದೆ ದೊಡ್ಡನಗೌಡ ಈತನು ನಮ್ಮ ಮನೆಯೊಳಗೆ ಬಂದು ನಾನು ನಿನಗಾಗಿ ಈಗ್ಗೇ 5ವರ್ಷಗಳಿಂದ ಕಾಯುತ್ತಿದ್ದೇನೆ, ನೀನು ನನಗೆ ಬೇಕು ನನ್ನೊಂದಿಗೆ ಮಲಗಬೇಕು ಎಂದು ನನ್ನನ್ನು ಹಿಡಿದುಕೊಳ್ಳಲು ಬಂದನು ನಾನು ಕಿರುಚಾಡುತ್ತಾ ನಾನು ಆತನಿಂದ ತಪ್ಪಿಸಿಕೊಂಡು ಮನೆಯಿಂದ ಹೊರಗೆ ಬಂದು ನಮ್ಮ ಮಾವ ಕೋರಿ ದೊಡ್ಡಬಸಪ್ಪನ ಮನೆ ಹತ್ತಿರ ಹೋಗಿ ರಂಗಮ್ಮಳಿಗೆ ವಿಷಯ ತಿಳಿಸಿದೆನು, ಆಗ ನಾವು ಅಲ್ಲಿಗೆ ಹೋಗಿ ನೋಡಲು ಅವನು ಮನೆಯಿಂದ ಓಡಿ ಹೋಗಿದ್ದನು, ಅಲ್ಲೆ ನಮ್ಮ ಮಾವ ಸಣ್ಣಕರಿಬಸಪ್ಪ ಇತರರು ಇದ್ದರು, ನಂತರ ವಿಷಯ ತಿಳಿದು ನನ್ನ ಗಂಡ ಮಂಜುನಾಥ ಮನೆಗೆ ಬಂದು ವಿಚಾರಿಸಿದನು. ಈ ಬಗ್ಗೆ ಮುಂದಿನ ಕ್ರಮ ಜರುಗಿಸಲು ದೂರು ಇದ್ದ ಮೇರೆಗೆ ಪ್ರಕರಣ ದಾಖಲಿಸಿ ತನಿಖೆಕೈಗೊಂಡಿರುತ್ತದೆ,

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ