ಜಿಲ್ಲಾ ಪೊಲೀಸ್ ಕಾರ್ಯಲಯ
ಬಳ್ಳಾರಿ, ದಿನಾಂಕ: ೦೧-೧೧-೨೦೧೪
ಪತ್ರಿಕಾ ಪ್ರಕಟಣೆ
೧) ಕೂಡ್ಲಿಗಿ ಪೊಲೀಸ್ ಠಾಣೆ ಸರಹದ್ದಿನ ಹೊಸಪೇಟೆ ಬೈಪಾಸ್ ಎನ್.ಹೆಚ್.-೧೩ ರಸ್ತೆಯಲ್ಲಿ ಮೋಟಾರ್ ಸೈಕಲ್‌ಗೆ ಯಾವುದೋ ಲಾರಿ ಡಿಕ್ಕಿ ಪಡಿಸಿ ಪರಾರಿಯಾಗಿದ್ದು, ಅಫಘಾತದಲ್ಲಿ ಮೋಟಾರ್ ಸೈಕಲ್ ಸವಾರನ ಸಾವು.
ದಿನಾಂಕ ೩೦/೧೦/೨೦೧೪ ರಂದು ರಾತ್ರಿ ೯-೦೦ ಗಂಟೆಯ ಸುಮಾರಿಗೆ ಶ್ರೀ.ನಾಗರಾಜ ತಂದೆ ಹಾಲಪ್ಪ, ೨೩ ವರ್ಷ, ವಾಲ್ಮೀಕಿ ಜನಾಂಗ, ವ್ಯವಸಾಯ, ವಾಸ ಹೊನ್ನಾಪುರ, ಹರಪನಹಳ್ಳಿ ತಾಲೂಕು ದಾವಣಗೇರೆ ಜಿಲ್ಲಾ ಈತನು ತನ್ನ ಮೋಟಾರ್ ಸೈಕಲ್ ನಂಬರ್ ಕೆ.ಎ ೧೭ ಇ.ಜೆ ೬೬೩೮ ಹಿರೋ ಹೊಂಡ ಮೋಟಾರ್ ಸೈಕಲ್‌ನಲ್ಲಿ ಕೂಢ್ಲಿಗಿ ಕಡೆಯಿಂದ ಕೈವಲ್ಯಾಪುರಕ್ಕೆ ಹೋಗಲೆಂದು ಹೊಸಪೇಟೆ ಬೈಪಾಸ್‌ನ ಎನ್.ಹೆಚ್.೧೩ ರಸ್ತೆಯಲ್ಲಿ ಹೋಗುತ್ತಿರುವಾಗ ಹೊಸಪೇಟೆ ಕಡೆಯಿಂದ ಬಂದ ಯಾವುದೋ ಲಾರಿಯನ್ನು ಅದರ ಚಾಲಕನು ಅತಿವೇಗ ಮತ್ತು ಅಜಾಗರೂಕತೆಯಿಂದ ನಡೆಸಿಕೊಂಡು ಬಂದು ನಾಗರಾಜನ ಮೋಟಾರ್ ಸೈಕಲ್‌ಗೆ ಅಪಘಾತ ಪಡಿಸಿದ್ದು ಇದರಿಂದ ಆತನಿಗೆ ಬಲಗಾಲು ಮೊಣಕಾಲು ಮತ್ತು ಮೊಣಕಾಲು ಕೆಳಗೆ ಮುರಿದಿದ್ದು ಅಲ್ಲದೆ ಬಲಗೈಯಿ ತೋಳಿನ ಹತ್ತಿರ ಮುರಿದ್ದಿದ್ದು ಮತ್ತು ಮುಖ ಸಂಪೂರ್ಣ ಜಜ್ಜಿದಂತಾಗಿ ಹಣೆಯಿಂದ ಮತ್ತು ಮೂಗಿನಿಂದ ರಕ್ತ ಹೊರ ಬಂದು ಸ್ಥಳದಲ್ಲಿಯೇ ಮೃತಪಟ್ಟಿದ್ದು ಅಪಘಾತಪಡಿಸಿz ಲಾರಿಯನ್ನು ಅದರ ಚಾಲಕನು ನಿಲ್ಲಿಸದೇ ಹೋಗಿರುತ್ತಾನೆಂದು ಈ ಅಪಘಾತದಲ್ಲಿ ಮೋಟಾರ್ ಸೈಕಲ್ ಸಂಪೂರ್ಣ ಜಖಂಗೊಂಡಿರುತ್ತದೆಂದು ಇದ್ದ ದೂರಿನ ಮೇರೆಗೆ ಕೂಡ್ಲಿಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದೆ.
ದಿನಾಂಕ: ೩೧-೧೦-೨೦೧೪ ರಂದು ಮದ್ಯಾಹ್ನ ೨-೦೦ ಗಂಟೆಗೆ ಬಳ್ಳಾರಿ ಗ್ರಾಮೀಣ ಠಾಣೆ ಸರಹದ್ದು ಬಳ್ಳಾರಿ-ಅನಂತಪುರ ರಸ್ತೆ ಬಿ.ಎಸ್.ಎ.ಎಲ್. ಪ್ಯಾಕ್ಟರಿ ಎದುರಿಗೆ ಇರುವ ಜನತಾ ನಗರದಲ್ಲಿರುವ ಒಂದು ಮನೆಯಲ್ಲಿ ಅಕ್ರಮವಾಗಿ ಗಾಂಜಾವನ್ನು ಶೇಖರಣೆ ಮಾಡಿ ಇಟ್ಟಿರುವ ಬಗ್ಗೆ ಬಂದ ಮಾಹಿತಿ ಮೇರೆಗೆ ಡಿ.ಎಸ್.ಪಿ. ಬಳ್ಳಾರಿ ಗ್ರಾಮೀಣ ಉಪ ವಿಭಾಗ ರವರು ಮತ್ತು ಬಳ್ಳಾರಿ ಗ್ರಾಮೀಣ ಪೊಲೀಸ್ ಠಾಣೆಯ ಪಿಎಸ್‌ಐ ಶ್ರೀ. ಕೆ. ಹೊಸಕೇರಪ್ಪ ಮತ್ತು ಪೊಲೀಸ್ ಸಿಬ್ಬಂದಿಯವರು ಮೇಲ್ಕಂಡ ಸ್ಥಳಕ್ಕೆ ದಾಳಿ ಮಾಡಿ ನೋಡಲಾಗಿ ಅರೋಪಿಯಾದ ಜಾಫರ್ ಸಾಧಿಕ್ ತಂದೆ ವಲಿಸಾಬ್, ವ: ೨೫ ವರ್ಷ, ಮುಸ್ಲಿಂ ಜಾತಿ, ಲಾರಿಚಾಲಕ, ವಾಸ: ಗಣೇಶ್ ಗುಡಿ ಹಿಂದುಗಡೆ, ಕೊಲುಮೆ ಚೌಕ್, ಬಳ್ಳಾರಿ ಇತನನ್ನು ದಸ್ತಗಿರಿ ಮಾಡಿ ಇತನು ಶೇಖರಣೆ ಮಾಡಿ ಇಟ್ಟುಕೊಂಡಿದ್ದ ಒಟ್ಟು ೪ ಚೀಲಗಳಲ್ಲಿಯ ಅಂದಾಜು ರೂ: ರೂ. ೧೦,೫೦೦/- ಬೆಲೆಯ ಅಂದಾಜು ೩೫ ಕೆ.ಜಿ. ಗಾಂಜಾ, ಇತನ ಬಳಿ ಇದ್ದ ನಗದು ಹಣ ರೂ: ೩,೭೦೦/-, ಒಂದು ತಕ್ಕಡಿ ೨ ಕೆ.ಜಿ. ತೂಕದ ಕಲ್ಲನ್ನು ಜಪ್ತು ಮಾಡಿಕೊಂಡಿದ್ದು, ಈ ಬಗ್ಗೆ ಬಳ್ಳಾರಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತದೆ.
೩) ಬಳ್ಳಾರಿ ನಗರದ ಎ.ಪಿ.ಎಂ.ಸಿ. ಪೊಲೀಸ್ ಠಾಣೆ ಸರಹದ್ದಿನ ಬೆಂಗಳೂರು ರಸ್ತೆಯ ರೈಲ್ವೆ ಗೇಟ್ ಹತ್ತಿರ ಚೆಕ್‌ಪೋಸ್ಟ್ ಬಳಿ ಆಟೋ ಚಾಲಕನಿಂದ ಬಿಜಾಪುರ ವಾಸಿ ಪ್ರಯಾಣಿಕನಿಗೆ ಬೆದರಿಸಿ ಹಣ ಮೊಬೈಲ್ ದೋಚಿ ಪರಾರಿ.
ದಿನಾಂಕ ೩೦-೧೦-೨೦೧೪ ರಂದು ರಾತ್ರಿ ೧೧-೩೦ ಗಂಟೆಯ ಸುಮಾರಿಗೆ ಫಿರ್ಯಾದಿದಾರರಾದ ಮಲ್ಲಿಕಾರ್ಜುನ.ಎಂ.ಕೆ. ತಂದೆ ಮಲ್ಲಪ್ಪ ಕುಂಬಾರ್, ವ. ೪೦ ವರ್ಷ, ಲಿಂಗಾಯಿತ ಜನಾಂಗ, ವ್ಯಾಯಾಮ ಸಲಕರಣೆ ತಯಾರಿ ಮಾಡುವ ಕೆಲಸ , ವಾಸ: ಬಸವನಗರ , ಲಾಲಾ ಭಂಗ್ಲ ಹತ್ತಿರ , ಬಿಜಾಪುರ. ಬಿಜಾಪುರ ಜಿಲ್ಲೆ. ನಗರದ ಮೋತಿ ಸರ್ಕಲ್ ಬಳಿ ಇರುವ ಮಯೂರಿ ಬಾರ್ ಮುಂದುಗಡೆ ನಿಂತು ಕೊಂಡಿದ್ದಾಗ ಅಲ್ಲಿಗೆ ಬಂದ ಆಟೋನಂ. ಕೆಎ-೩೪-ಎ-೭೭೮೭ ಚಾಲಕನಾದ ಮುತ್ತಣ್ಣ, ಫಿರ‍್ಯಾದಿದಾರರನ್ನು ಕಂಡು ಎಲ್ಲಿಗೆ ಹೋಗಬೇಕೆಂದು ವಿಚಾರಿಸಿದಾಗ ಆತನು ಊಟ ಎಲ್ಲಿಸಿಗುತ್ತೆ ಎಂಬುದಾಗಿ ಕೇಳಲಾಗಿ ಗುಗ್ಗರಹಟ್ಟಿ ಬಳಿ ಊಟ ಸಿಗುತ್ತದೆ ಎಂಬುದಾಗಿ ಕರೆದುಕೊಂಡು ಹೋಗಿ ಊಟ ಮಾಡಿಕೊಂಡು ವಾಪಸ್ಸು ಬರುವಾಗ ದಿನಾಂಕ: ೩೧-೧೦-೧೪ ರಂದು ೦೧-೦೦ ಎ.ಎಂ. ಗಂಟೆ ಸುಮಾರಿಗೆ ಬೆಂಗಳೂರು ರಸ್ತೆಯ ರೈಲ್ವೇ ಗೇಟ್ ಹತ್ತಿರ ಚೆಕ್ ಪೋಸ್ಟ್ ಬಳಿ ಕತ್ತಲಲ್ಲಿ ಆಟೋ ನಿಲ್ಲಿಸಿ ಫಿರ‍್ಯಾದಿದಾರನನ್ನು ನಿನ್ನ ಬಳಿ ಹಣ ಎಷ್ಠಿದೆ ಕೊಡು ಎಂಬುದಾಗಿ ಬೆದರಿಸಿ ಆತನ ಎದೆ ಜೇಬಿಗೆ ಕೈ ಹಾಕಿ ಜೇಬಿನಲ್ಲಿದ್ದ ಮೈಕ್ರೋಮ್ಯಾಕ್ಸ್ ಮೊಬೈಲ್ ಮತ್ತು ಅತನ ಪ್ಯಾಂಟ್ ಜೇಬಿನಲ್ಲಿದ್ದ ನಗದು ಹಣ ರೂ.೭,೦೦೦/- ವನ್ನು ಬಲವಂತವಾಗಿ ಕಿತ್ತುಕೊಂಡು ತನ್ನನ್ನು ಅಲ್ಲೇ ಬಿಟ್ಟು ಹೋಗಿರುತ್ತಾನೆಂದು ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತೇನೆ.
೪) ಹೊಸಪೇಟೆ ಪಟ್ಟಣ ಪೊಲೀಸ್ ಠಾಣೆ ಸರಹದ್ದಿನ ರಾಮಾ ಟಾಕೀಸು ಹತ್ತಿರ ಇರುವ ಓಂಕಾರೇಶ್ವರ ರಿಕ್ರಿಯೇಷನ್ ಕ್ಲಬ್‌ನಲ್ಲಿ ನಡೆಯುತ್ತಿದ್ದ ಅಂದರ್-ಬಾಹರ್ ಇಸ್ಪೇಟ್ ಜೂಜಾಟದ ಮೇಲೆ ಪೊಲೀಸರ ದಾಳಿ ನಗದು ಹಣ ವಶ, ೧೯ ಆರೋಪಿಗಳ ಬಂಧನ.
ದಿನಾಂಕ: ೩೧/೧೦/೧೪ ರಂದು ರಾತ್ರಿ ೭-೧೫ ಗಂಟೆಗೆ ಪಿ.ಐ. ಹೊಸಪೇಟೆ ಪಟ್ಟಣ ಪೊಲೀಸ್ ಠಾಣೆ ರವರಿಗೆ ಬಂದ ಮಾಹಿತಿ ಮೇರೆಗೆ ಡಿ.ಎಸ್.ಪಿ ಹೊಸಪೇಟೆ ರವರ ನೇತೃತ್ವದಲ್ಲಿ ತಮ್ಮ ಠಾಣೆಯ ಎ.ಎಸ್.ಐ ಮತ್ತು ಸಿಬ್ಬಂದಿಗಳು ಸೇರಿ ೯-೧೫ ಗಂ ಹೊಸಪೇಟೆಯ ರಾಮಾ ಟಾಕೀಸು ಹತ್ತಿರ ಇರುವ ಶ್ರೀ. ಓಂಕಾರೇಶ್ವರ ರಿಕ್ರಿಯೇಷನ್ ಅಸೋಸಿಯೇಷನ್‌ನಲ್ಲಿ ಕಾನೂನು ಬಾಹಿರವಾಗಿ ಅಂದರ್-ಬಹರ್ ಇಸ್ಪೇಟ್ ಜೂಜಾಟದ ಮೇಲೆ ದಾಳಿ ಮಾಡಿದ್ದು, ಇಸ್ಪೇಟ್ ಜೂಜಾಟದಲ್ಲಿ ತೊಡಗಿದ್ದ ಆರೋಪಿಗಳಾದ ೧) ಡಿ.ಶರಣಯ್ಯ ತಂದೆ ಡಿ.ಮಹಾಬಲೇಶ್ವರಯ್ಯ ಮತ್ತು ಇತರೆ ೧೮ ಜನ ಎಲ್ಲಾರ ವಾಸ: ಹೊಸಪೇಟೆ ಇವರನ್ನು ವಶದಿಂದ ದೊರೆತ ನಗದು ಹಣ ರೂ. ೭೮,೦೫೦/- ಮತ್ತು ೫೨ ಇಸ್ಪೇಟ್ ಎಲೆಗಳನ್ನು ೯ ಮೊಬೈಲ್‌ಗಳನ್ನು ಜಪ್ತು ಪಡಿಸಿಕೊಂಡಿರುತ್ತಾರೆಂದು ಇದ್ದ ದೂರಿನ ಮೇರೆಗೆ ಹೊಸಪೇಟೆ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತದೆ.
ಪೊಲೀಸ್ ಸೂಪರಿಂಟೆಂಡೆಂಟ್,
ಬಳ್ಳಾರಿ. ಇವರಿಗೆ,
ಎಲ್ಲಾ ಪತ್ರಿಕಾ ವರದಿಗಾರರಿಗೆ
ಹೆಚ್ಚಿನ ಮಾಹಿತಿಗಾಗಿ ಶ್ರೀ. ಮಹಮ್ಮದ್ ಗಯಾಸ್, ಎ.ಎಸ್.ಐ ಮೊಬೈಲ್ ನಂ. ೯೮೪೫೪೮೪೧೦೦ ಹಾಗು
ಜಿ. ಸುಬ್ರಮಣ್ಯಂ, ಹೆಚ್.ಸಿ-೧೭೫, ಮೋಬೈಲ್ ಸಂ: ೯೪೪೮೨೦೨೦೦೫ ರವರನ್ನು ಸಂಪರ್ಕಿಸಲು ವಿನಂತಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ