ಸೋಮವಾರ, ಡಿಸೆಂಬರ್ 29, 2014

PRESS NOTE AS ON 30-12-2014

ಜಿಲ್ಲಾ ಪೊಲೀಸ್ ಕಾರ್ಯಲಯ
                                        ಬಳ್ಳಾರಿ, ದಿನಾಂಕ: 30-12-2014

ಪತ್ರಿಕಾ ಪ್ರಕಟಣೆ 

1) ಹಿರೇ ಹಡಗಲಿ ಪೊಲೀಸ್ ಠಾಣೆ ಸರಹದ್ದಿನ  ಹ್ಯಾರಡ ರಸ್ತೆಯಲ್ಲಿ ಮೋಟಾರ್ ಸೈಕಲ್ ರಸ್ತೆ ಅಫಘಾತ ಮೋಟಾರ್ ಸೈಕಲ್ ಸವಾರನ ಸಾವು.       
      
   ಫಿರ್ಯಾದಿದಾರರು ದಿನಾಂಕ: 29-12-2014 ರಂದು ಬೆಳಿಗ್ಗೆ ಹ್ಯಾರಡ ರಸ್ತೆಯಲ್ಲಿರುವ ತಮ್ಮ ಹೊಲಕ್ಕೆ ಹೋದವರು ಹೊಲದ ಕೆಲಸ ಮುಗಿಸಿಕೊಂಡು ಸಂಜೆ ವಾಪಾಸ್ ಊರಿಗೆ ಬರಲು ಹ್ಯಾರಡದಿಂದ ಹೊಳಲಿಗೆ ಬರುವ ರಸ್ತೆಯಲ್ಲಿ ನಡೆದುಕೊಂಡು ಬರುವಾಗ್ಗೆ ಸಂಜೆ 7-30 ಗಂಟೆ ಸುಮಾರಿಗೆ ವಿಠಲ್‍ಕರ್ ರವರ ಹೊಲದ ಹತ್ತಿರ ಫಿರ್ಯಾದಿದಾರರ ಎದುರುಗಡೆಯಿಂದ ಆರೋಪಿಯು ತನ್ನ ಮೋಟಾರ್ ಸೈಕಲ್ ನಂ. ಕೆಎ-35 ಡಬ್ಲೂ.5516 ನೇದ್ದನ್ನು ಅತಿವೇಗವಾಗಿ ಮತ್ತು ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದವನೇ ಫಿರ್ಯಾದಿಗೆ ಡಿಕ್ಕಿ ಹೊಡೆಸಿದ್ದರಿಂದ ಫಿರ್ಯಾದಿಯ ಎರಡೂ ಮೊಣಕಾಲುಗಳ ಹತ್ತಿರ ತೆರಚಿದ ರಕ್ತಗಾಯಗಳಾಗಿ ಬಲ ಮೊಣಕಾಲ ಕೆಳಗೆ ಪೆಟ್ಟು ಆಗಿದ್ದು, ಅಫಘಾತಪಡಿಸಿ ಆರೋಪಿಗೆ ಸಹ ರಕ್ತಗಾಯಗಳು ಆಗಿದ್ದು, ಫಿರ್ಯಾದಿ ಮತ್ತು ಆರೋಪಿಗೆ ಇಬ್ಬರನ್ನು ಚಿಕಿತ್ಸೆಗಾಗಿ ಹೊಳಲು ಆಸ್ಪತ್ರೆಗೆ ದಾಖಲಿಸಿದ್ದು, ಆರೋಪಿಗೆ ಹೆಚ್ಚಿನ ಚಿಕಿತ್ಸೆಗಾಗಿ ಖಾಸಗಿ ವಾಹನದಲ್ಲಿ ಕರೆದುಕೊಂಡು ಹೋಗುವಾಗ ದಾರಿಯಲ್ಲಿ ಆರೋಪಿಯಾದ ಕೂರ್ಲಹಳ್ಳಿ  ಮಹಾವೀರ, 35 ವರ್ಷ, ವಾ: ಹ್ಯಾರಡ ಗ್ರಾಮ ಈತನು  ಮೃತಪಟ್ಟಿರುತ್ತಾನೆಂದು ದೂರು ಇರುತ್ತದೆ. ಈ ಬಗ್ಗೆ ಹಿರೇ ಹಡಗಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತದೆ.

2) ಬಳ್ಳಾರಿ ಸಂಚಾರ ಪೊಲೀಸ್ ಠಾಣೆ ಸರಹದ್ದಿನ ಅಲ್ಲೀಪುರ ಗ್ರಾಮದ ಹತ್ತಿರ 50 ರಿಂದ 55 ವರ್ಷದ ಅಪರಿಚಿತ ವ್ಯಕ್ತಿಗೆ ಕೆ.ಎಸ್.ಆರ್.ಟಿ.ಸಿ. ಬಸ್ ಡಿಕ್ಕಿ ವ್ಯಕ್ತಿ ಸ್ಥಳದಲ್ಲಿಯೇ ಸಾವು. 

       ದಿನಾಂಕ: 29-12-14 ರಂದು ರಾತ್ರಿ ಸುಮಾರು 7-30 ಗಂಟೆಯ ಸಮಯದಲ್ಲಿ ಫಿರ್ಯಾಧಿ ಯುವರಾಜ ಸಾ: ಅಲ್ಲಿಪುರ ಗ್ರಾಮ, ಬಳ್ಳಾರಿ ಈತನು ತನ್ನ ಗ್ರಾಮದ ಅಬ್ದುಲ್ಲಾ ಇವರೊಂದಿಗೆ ತಮ್ಮ ಗ್ರಾಮದಿಂದ ತನ್ನ ಮೋಟಾರ್ ಸೈಕಲ್ ಚಲಾಯಿಸಿಕೊಂಡು ಬಳ್ಳಾರಿ ಸಿಟಿ ಕಡೆಗೆ ಹೋಗಲು ಬಳ್ಳಾರಿ ನಗರದ ಹೊಸಪೇಟೆ ರಸ್ತೆಯ ಹೊಂಡ ಶೋ ರೂಂ ಹತ್ತಿರ ಬರುತ್ತಿದ್ದಾಗ ಅದೇ ಸಮಯಕ್ಕೆ ರಸ್ತೆಯ ಎಡಬದಿಯಲ್ಲಿ ಒಬ್ಬ ಅಪರಿಚಿತ ವ್ಯಕ್ತಿ, 50-55 ವರ್ಷ ಈತನು ಅಲ್ಲಿಪುರ ಕಡೆಗೆ ನಡೆದುಕೊಂಡು ಹೊರಟಿದ್ದು, ಈತನ ಹಿಂಬದಿಯಿಂದ ಕೆ.ಎಸ್.ಆರ್.ಟಿ.ಸಿ. ಬಸ್ಸು ನಂ: ಕೆಎ.34.ಎಫ್.871 ನೇದ್ದರ ಚಾಲಕನಾದ ಹನುಮನಾಯ್ಕ ನು ಬಳ್ಳಾರಿ ಸಿಟಿ ಕಡೆಯಿಂದ ಬಸ್‍ನ್ನು  ಅತಿವೇಗ ಮತ್ತು ಅಜಾಗರೂಕತೆಯಿಂದ  ಡಿಕ್ಕಿ ಹೊಡಿಸಿದ್ದರಿಂದ ವ್ಯಕ್ತಿ ಮೃತಪಟ್ಟ ಬಗ್ಗೆ ದೂರು ಇದ್ದು ಈ ಬಗ್ಗೆ ಬಳ್ಳಾರಿ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತದೆ. 
                                                                                               
                                                                                                             ಪೊಲೀಸ್ ಸೂಪರಿಂಟೆಂಡೆಂಟ್,                                                                                                                                        ಬಳ್ಳಾರಿ.                                                                                                                
ಇವರಿಗೆ,
ಎಲ್ಲಾ ಪತ್ರಿಕಾ ವರದಿಗಾರರಿಗೆ

ಹೆಚ್ಚಿನ ಮಾಹಿತಿಗಾಗಿ ಶ್ರೀ. ಮಹಮ್ಮದ್ ಗಯಾಸ್, ಎ.ಎಸ್.ಐ ಮೊಬೈಲ್ ನಂ. 9845484100 ಹಾಗು        
ಜಿ. ಸುಬ್ರಮಣ್ಯಂ, ಹೆಚ್.ಸಿ-175, ಮೋಬೈಲ್ ಸಂ: 9448202005 ರವರನ್ನು ಸಂಪರ್ಕಿಸಲು ವಿನಂತಿ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ