Crime Key Report From To | ||||||||||||||||
Sl. No | FIR No | FIR Date | Crime Group - Crime Head | Stage of case | ||||||||||||
Bellary Traffic PS | ||||||||||||||||
1 | Cr.No:0185/2015 (IPC 1860 U/s 279,337 ) |
02/12/2015 | Under Investigation | |||||||||||||
MOTOR VEHICLE ACCIDENTS NON-FATAL - National Highways | ||||||||||||||||
Brief Facts : | ದಿನಾಂಕ: 02-12-2015 ರಂದು ಫಿರ್ಯಾಧಿದಾರರಾದ ಲಕ್ಷ್ಮಣ ರಾಠೋಡ್ ತಂದೆ ರಮೇಶ ರಾಠೋಡ್, ವಯಸ್ಸು:27 ವರ್ಷ, ಲಂಬಾಣಿ ಜನಾಂಗ, ಕೆ.ಎಸ್.ಆರ್.ಟಿ.ಸಿ. ಬಸ್ ನಂಬರ್ ಕೆಎ.22/ಎಫ್-2045 ನೇದ್ದರ ಚಾಲಕ, ಚಿಕ್ಕೋಡಿ ಡಿಪೋ, ವಾಸ: ಸರ್ಕಾರಿ ಶಾಲೆಯ ಹತ್ತಿರ, ನೀಲಾನಗರ(ಶಿರೂರು ತಾಂಡ) ಬಾಗಲಕೋಟೆ. (ತಾ.&ಜಿ) ಹಾಲಿವಾಸ:ಪ್ರಬೋಡಿ, ಡೀಪೋ ಪಕ್ಕದಲ್ಲಿ ಚಿಕ್ಕೋಡಿ, ಬೆಳಗಾವಿ ಜಿಲ್ಲೆರವರುಠಾಣೆಯಲ್ಲಿ ಹಾಜರಾಗಿ ನೀಡಿದ ದೂರಿನ ಸಾರಾಂಶ: ನಿನ್ನೆ ದಿನ ದಿನಾಂಕ 01-12-2015 ರಂದು ಬೆಳಿಗ್ಗೆ ಚಿಕ್ಕೋಡಿಯಿಂದ ಬಳ್ಳಾರಿಗೆ ಬರಲು ಬಸ್ ನಂಬರ್ ಕೆಎ.22/ಎಫ್-2045 ನೇದ್ದರಲ್ಲಿ ಪ್ರಯಾಣಿಕರನ್ನು ಕೂಡಿಸಿಕೊಂಡು ಬೆಳಿಗ್ಗೆ 8-00 ಗಂಟೆಗೆ ಚಿಕ್ಕೋಡಿ ಬಿಟ್ಟು ರಾತ್ರಿ 11.20 ಗಂಟೆಯ ಸುಮಾರಿಗೆ ಬಳ್ಳಾರಿಗೆ ಹತ್ತಿರವಿರುವ ವಿನಾಯಕನಗರದ ಪೆಟ್ರೋಲ್ ಬಂಕ್ ಮುಂದಿನ ತಾರ್ ರಸ್ತೆಯಲ್ಲಿ ಬಸ್ಸನ್ನು ಚಲಾಯಿಸಿಕೊಂಡು ಬರುತ್ತಿರುವಾಗ ಅದೇ ವೇಳೆಗೆ ಪಿರ್ಯಾದಿಯ ಎದುರುಗಡೆಯಿಂದ ಒಂದು ಲಾರಿಯನ್ನು ಅದರ ಚಾಲಕನು ದುಡುಕಿನಿಂದ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ರಸ್ತೆಯ ಎಡಬದಿಯಲ್ಲಿ ಹೋಗದೇ ಬಲಬದಿಗೆ ಬಂದು ಪಿರ್ಯಾದಿಯ ಬಸ್ಸಿನ ಮುಂದಿನ ಬಲಭಾಗಕ್ಕೆ ಲಾರಿಯ ಮುಂದಿನ ಬಲಭಾಗದಿಂದ ಡಿಕ್ಕಿ ಹೊಡೆಸಿದ್ದರಿಂದ ಬಸ್ಸಿನ ಮುಂದಿನ ಬಲಭಾಗ ಬಖಂಗೊಂಡಿದ್ದು, ಬಸ್ಸಿನಲ್ಲಿದ್ದ ಯಾರಿಗೂ ಗಾಯಗಳಾಗಿರುವುದಿಲ್ಲ. ಡಿಕ್ಕಿ ಹೊಡೆಸಿದ ಲಾರಿಯ ಮುಂದಿನ ಬಲಭಾಗ ಸಂಪೂರ್ಣ ಜಖಂಗೊಂಡಿದ್ದು, ಲಾರಿಯ ಚಾಲಕನಾದ ನರಸಿಂಹನಿಗೆ ಬಲ ತೊಡೆಯ ಬಾಗದಲ್ಲಿ ಬಾವು ಬಂದು ಒಳಪೆಟ್ಟಾಗಿರುತ್ತದೆ. ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿ ಬಸ್ಸಿಗೆ ಡಿಕ್ಕಿ ಹೊಡೆಸಿದ ಲಾರಿ ನಂ: ಕೆಎ52/8856 ನೇದ್ದರ ಚಾಲಕ ನರಸಿಂಹನ ವಿರುದ್ಧ ಕಾನೂನು ಕ್ರಮ ಜರುಗಿಸಲು ದೂರು ಇರುತ್ತದೆ. | |||||||||||||||
Brucepet PS | ||||||||||||||||
2 | Cr.No:0223/2015 (IPC 1860 U/s 406,409,420,468,34 ) |
02/12/2015 | Under Investigation | |||||||||||||
CHEATING - CHEATING | ||||||||||||||||
Brief Facts : | ಬಳ್ಳಾರಿ ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿಗಳ ಕಛೇರಿಯಲ್ಲಿ ಪ್ರಥಮ ದರ್ಜೆ ಸಹಾಯಕಳಾಗಿ ಕರ್ತವ್ಯ ನಿರ್ವಹಿಸುತ್ತಿರುವ ಕೆ.ಸುಜಾತ ಗಂಡ ಎ.ಮಾನಯ್ಯ, ರವರು ತನ್ನ ತಾಯಿ ಮರಿಯಮ್ಮ ರವರ ಮರಣದ ಕಾರಣ ನೀಡಿ ಅನುಕಂಪದ ಆಧಾರದಲ್ಲಿ ತಮಗೆ ಮದುವೆಯಾಗಿರುವುದಿಲ್ಲವೆಂದು ಸರ್ಕಾರಕ್ಕೆ ವಂಚಿಸುವ ಉದ್ದೇಶದಿಂದ ಸುಳ್ಳು ಮಾಹಿತಿ ನೀಡಿ ಕಾನೂನು ಬಾಹಿರವಾಗಿ ಅನುಕಂಪದ ಆಧಾರದ ಮೇಲೆ ಪತ್ರ ಸಂ: ಸಕನಿ/ಸಿಬ್ಬಂಧಿ-/ಸಿಆರ್-24/2003-04, ದಿನಾಂಕ: 19/09/2003 ಆದೇಶದನ್ವಯ ದಿನಾಂಕ: 27/09/2003 ರಂದ ಸರ್ಕಾರಿ ಸೇವೆಗೆ ಸೇರಿರುತ್ತಾರೆಂದು ಹಾಗೂ ಸದರಿ ಅನುಕಂಪದ ಆಧಾರದ ಮೇಲೆ ಸರ್ಕಾರಿ ಸೇವೆಗೆ ಸೇರಲು ಶ್ರೀ ಶಿವಪ್ಪ, ತಹಶೀಲ್ದಾರರು, ಬಳ್ಳಾರಿ[ಹಾಲಿ ನಿವೃತ್ತಿ ಹೊಂದಿರುತ್ತಾರೆ] ಮತ್ತು ಕೆ.ಮಾರುತೇಶ ರಾವ್ ಕಂದಾಯ ನಿರೀಕ್ಷಕರು, ಬಳ್ಳಾರಿ ತಾಲ್ಲೂಕು, ಬಳ್ಳಾರಿ ಇವರು ಕೆ.ಸುಜಾತ ರವರು ಮದುವೆಯಾಗಿ 3 ಜನ ಮಕ್ಕಳಿದ್ದಾಗ್ಯೂ, ಮದುವೆಯಾದ ಬಗ್ಗೆ ಹಾಗೂ ಕೆ.ಸುಜಾತ ರವರಿಗೆ ಮಕ್ಕಳು ಇರುವ ಬಗ್ಗೆ ಮಾಹಿತಿಯನ್ನು ಗೌಪ್ಯವಾಗಿಟ್ಟು, ಸರ್ಕಾರಕ್ಕೆ ಸುಳ್ಳು ಮಾಹಿತಿಯನ್ನು ನೀಡಿ, ಸುಜಾತ ರವರು ಅನುಕಂಪದ ಆಧಾರದ ಮೇಲೆ ಸರ್ಕಾರಿ ಸೇವೆಗೆ ಸೇರಲು ಅನುವು ಮಾಡಿಕೊಟ್ಟು, ಸರ್ಕಾರಕ್ಕೆ ವಂಚಿಸಿ, ನಂಬಿಕೆ ದ್ರೋಹ ಮತ್ತು ಮೋಸ ಮಾಡಿರುತ್ತಾರೆಂದು ಸದರಿಯವರ ವಿರುದ್ದ ಕ್ರಿಮಿನಲ್ ಕೇಸ್ ದಾಖಲಿಸುವಂತೆ ಮಾನ್ಯ ಪೊಲೀಸ್ ಉಪ-ಅಧೀಕ್ಷಕರು, ಕರ್ನಾಟಕ ಲೋಕಾಯುಕ್ತ, ಬಳ್ಳಾರಿ ರವರು ಕೊಟ್ಟ ದೂರಿನ ಮೇರೆಗೆ ಕೌಲ್ ಬಜಾರ್ ಪೊಲೀಸ್ ಠಾಣೆಯ ಗುನ್ನೆ ನಂ: 361/14 ರಲ್ಲಿ ಪ್ರಕರಣವನ್ನು ದಾಖಲಿಸಿಕೊಂಡು ಕೃತ್ಯ ನಡೆದ ಸ್ಥಳದ ಆಧಾರದ ಮೇರೆಗೆ ಸದರಿ ಪ್ರಕರಣದ ಕಡತವನ್ನು ಪಡೆದುಕೊಂಡು ಬ್ರೂಸ್ ಪೇಟೆ ಪೊಲೀಸ್ ಠಾಣೆಯ ಗುನ್ನೆ ನಂ: 223/15 ರಲ್ಲಿ ಕೇಸು ದಾಖಲಿಸಿಕೊಂಡು ತನಿಖೆಯನ್ನು ಕೈಗೊಂಡಿರುತ್ತದೆ. | |||||||||||||||
3 | Cr.No:0224/2015 (IPC 1860 U/s 354C ) |
02/12/2015 | Under Investigation | |||||||||||||
MOLESTATION - Other Places | ||||||||||||||||
Brief Facts : | ದಿನಾಂಕ:07-07-15 ರಂದು ಬೆಳಿಗ್ಗೆ 11-45 ಗಂಟೆ ಸುಮಾರಿಗೆ ಜಿಲ್ಲಾ ಖಜಾನ ಕಛೇರಿಯಲ್ಲಿ ಕೆಲಸ ಮಾಡುವ ಖಲೀಮ್ ಪಾಷ ರವರು ಪಿರ್ಯಾದಿದಾರರಿಗೆ ಒಂದು ನೊಕಿಯಾ ಕಪ್ಪು ಬಣ್ಣದ ಮೊಬೈಲ್ ಪೋನ್ ನೇದ್ದನ್ನು ಹಾಜರು ಪಡಿಸಿ ಸದರಿ ಮೊಬೈಲ್ ನೇದ್ದನ್ನು ಶೌಚಾಲಯದಲ್ಲಿ ಸಿಗರೇಟ್ ಪಾಕೆಟ್ ನಲ್ಲಿ ಯಾರೋ ಆನ್ ಮಾಡಿ ಇರಿಸಿರುತ್ತಾರೆ ಅಂತಾ ತಿಳಿಸಿದ್ದು, ನಂತರ ಪಿರ್ಯಾದಿದಾರರು ಸದರಿ ಮೊಬೈಲ್ ಬಗ್ಗೆ ಪರಿಶೀಲನೆ ನಡೆಸಿ ಸದರಿ ಮೊಬೈಲ್ ಫೋನ್ ಕಛೇರಿಯಲ್ಲಿ ಕೆಲಸ ಮಾಡುವ ವಿ.ಗೋಪಿನಾಥ ರವರದ್ದಾಗಿದ್ದು, ಜಿಲ್ಲಾ ಖಜಾನೆಯ ಮೊದಲನೇ ಮಹಡಿಯ ಶೌಚಾಲಯದಲ್ಲಿ ಆಪಾದಿತ ವಿ.ಗೋಪಿನಾಥ ರವರು ಮೊಬೈಲ್ ಕ್ಯಾಮೆರಾ ಆನ್ ಮಾಡಿ ಅದನ್ನು ಸಿಗರೇಟ್ ಪ್ಯಾಕೆಟ್ ನಲ್ಲಿ ಕ್ಯಾಮೆರಾ ಭಾಗ ಮಾತ್ರ ಕಾಣುವಂತೆ ಅಳವಡಿಸಿರುವುದು ಪಿರ್ಯಾದಿದಾರರರ ಗಮನಕ್ಕೆ ಬಂದಿದ್ದು ಕಛೇರಿಯಲ್ಲಿ ಎಲ್ಲಾ ಸಿಬ್ಬಂದಿಗಳು ಸಹ ಶೌಚಾಲಯದಲ್ಲಿ ತೆರಳುತ್ತಿರುವುದರಿಂದ ಈ ತರಹದ ಕ್ಯಾಮೆರಾ ಇರಿಸಿರುವುದು ಮತ್ತು ಶೌಚಾಲಯಕ್ಕೆ ಹೋದ ವ್ಯಕ್ತಿಗಳ ನೇರ ದೃಶ್ಯಾವಳಿಗಳನ್ನು ಸೆರೆಹಿಡಿಯಲು ಇರಿಸಿರುವುದು ಅವರ ವೈಯಕ್ತಿಕ ಘನೆತೆಗೆ ದಕ್ಕೆ ಉಂಟಾಗುತ್ತದೆ ಇದು ಕಾನೂನು ಬಾಹಿರವಾದ ಚಟುವಟಿಕೆಯಾಗಿದ್ದು, ಈ ಬಗ್ಗೆ ಪಿರ್ಯಾದಿದಾರರು ತಮ್ಮ ಮೇಲಾಧಿಕಾರಿಗಳ ಗಮನಕ್ಕೆ ತಂದು ಆಪಾದಿತ ಗೋಪಿನಾಥ ರವರ ವಿರುದ್ದ ಸೂಕ್ತ ಕ್ರಮಕ್ಕಾಗಿ ಸಹಿ ಮಾಡಿ ತಮ್ಮ ಕಛೇರಿಯ | |||||||||||||||
ಸಿಬ್ಬಂದಿಯವರಾದ ಬಿ.ಶಂಕರ್ ರವರ ಮುಖಾಂತರವಾಗಿ ಕಳುಹಿಸಿಕೊಟ್ಟ ದೂರನ್ನು ಪಡೆದು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದೆ. | ||||||||||||||||
4 | Cr.No:0225/2015 (IPC 1860 U/s 323,324,506 ) |
02/12/2015 | Under Investigation | |||||||||||||
CASES OF HURT - Simple Hurt | ||||||||||||||||
Brief Facts : | ಈ ದಿನ ದಿನಾಂಕ: 02/12/15 ರಂದು ಬೆಳಿಗ್ಗೆ 11-15 ಗಂಟೆಗೆ ಘನ ನ್ಯಾಯಾಲಯವು ಹೊರಡಿಸಿದ ಡಿಸ್ ನಂ: 1369/15, ಪಿ.ಸಿ ನಂ: 249/15 ನೇದ್ದನ್ನು ಪಡೆದುಕೊಂಡು ಪರಿಶೀಲಿಸಿ ನೋಡಲು, ದಿನಾಂಕ: 04/10/15 ರಂದು ಮಧ್ಯಾಹ್ನ 02-30 ಗಂಟೆಗೆ ಬಳ್ಳಾರಿ ನಗರದ ಸಕ್ರೆ ಕರಿಡೆಪ್ಪ ಬೀದಿಯಲ್ಲಿರುವ ಫಿರ್ಯಾದಿದಾರರ ತಮ್ಮನಾದ ಸಿ.ಶ್ರೀನಿವಾಸುಲು ರವರ ಮನೆ ನಂ: 4/16ಎ ನೇದ್ದರ 1 ನೇ ಮಹಡಿಯಲ್ಲಿ ಫಿರ್ಯಾದಿದಾರರು, ಫಿರ್ಯಾದಿದಾರರ ಅಣ್ಣ ತಮ್ಮಂದಿರಾದ ಶ್ರೀನಿವಾಸಲು, ಕಾಸಿಪಟೆಪ್ಪ ಶೆಟ್ಟಿ, ಚನ್ನಕೇಶ್ವರ, ಯಂತ್ರೋದ್ಧಾರಕ ಮತ್ತು ರಾಘವೇಂದ್ರ ರವರು ಅವರ ತಂದೆಯ ಆಸ್ತಿಯನ್ನು ಪಾಲುವಿಭಾಗ ಮಾಡಿಕೊಳ್ಲಲು ಮಾತನಾಡುತ್ತಿರುವಾಗ ಅವರಲ್ಲಿ ಯಂತ್ರೋದ್ದಾರಕ ಮತ್ತು ಕಾಸಿಪೇಟಪ್ಪ ಶೆಟ್ಟಿ @ ಕಾಸಿನಾಥ ರವರು ಏಕಾಏಕಿಯಾಗಿ ಸಿಟ್ಟಿಗೆ ಬಂದು ಫಿರ್ಯಾದಿದಾರರಿಗೆ ಮತ್ತು ಶ್ರೀನಿವಾಸಲು ರವರಿಗೆ ತಮ್ಮ ಕೈಗಳಿಂದ ಹಲ್ಲೆ ಮಾಡಿದ್ದು, ಸದರಿ ರವರ ವಿರುದ್ದ ಸೂಕ್ತ ಕ್ರಮಕ್ಕಾಗಿ ನೀಡಿದ ದೂರಿನ ಮೇರೆಗೆ ಕೇಸು ದಾಖಲಿಸಿಕೊಂಡು ತನಿಖೆ ಕೈಗೊಂಡಿದೆ. | |||||||||||||||
Hadagali PS | ||||||||||||||||
5 | Cr.No:0113/2015 (IPC 1860 U/s 379 ) |
02/12/2015 | Under Investigation | |||||||||||||
THEFT - Of Automobiles - Of Two Wheelers | ||||||||||||||||
Brief Facts : | ಫಿರ್ಯಾದಿದಾರರು ತಮ್ಮ ಮಾಲಿಕತ್ವದಲ್ಲಿರುವ ಮೋಟಾರ್ ಸೈಕಲ್ ನಂಃ ಕೆಎ-35 ವೈ-4207 ನೇದ್ದನ್ನು ತೆಗೆದುಕೊಂಡು ದಿನಾಂಕಃ-25-11-2015 ರಂದು ರಾತ್ರಿ 8-00 ಗಂಟೆಯ ಸಮಯಕ್ಕೆ ಹೂವಿನ ಹಡಗಲಿ ಪಟ್ಟಣದ ಬಸ್ ಡಿಪೋದ ಮುಂದೆ ಇರುವ ಗಣೇಶ್ ಗುಡಿಯ ಮುಂದೆ ಬಯಲು ಜಾಗದಲ್ಲಿ ನಿಲ್ಲಿಸಿ ಹ್ಯಾಂಡ್ ಲಾಕ್ ಮಾಡಿಕೊಂಡು ತನ್ನ ಪರಿಚಯಸ್ಥರಾದ ಮೋಹನ್ ಎಂಬುವವರನ್ನು ಮಾತನಾಡಿಸಿಕೊಂಡು ಬರಲು ರಂಜಿತಾ ವೈನ್ಸ್ಗೆ ಹೋಗಿ ಅವರನ್ನು ಮಾತನಾಡಿಕೊಂಡು ವಾಪಾಸ್ಸು ಅದೆ ದಿನ ರಾತ್ರಿ 8-30 ಗಂಟೆಯ ಸಮಯಕ್ಕೆ ತಾನು ಮೋಟಾರ್ ಸೈಕಲ್ ನಿಲ್ಲಿಸಿದ ಜಾಗಕ್ಕೆ ಬಂದು ನೋಡಲು ಮೋಟಾರ್ ಸೈಕಲ್ ಅನ್ನು ಯಾರೋ ಕಳ್ಳರು ಕಳುವು ಮಾಡಿಕೊಂಡು ಹೋಗಿದ್ದು ಅಲ್ಲಿಂದ ಇಲ್ಲಿಯವರೆಗೆ ಹೂವಿನ ಹಡಗಲಿ ಪಟ್ಟಣ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಹುಡುಕಾಡಿದರೂ ಸಿಕ್ಕಿರುವುದಿಲ್ಲ ಕಾರಣ ತನ್ನ ಕಳುವಾದ ಸುಮಾರು 40,000/- ಬೆಲೆ ಬಾಳುವ ಮೋಟಾರ್ ಸೈಕಲ್ ನಂಃ ಕೆಎ-35 ವೈ4207 ನೇದ್ದನ್ನು ಯಾರೋ ಕಳ್ಳರು ಕಳುವು ಮಾಡಿಕೊಂಡು ಹೋಗಿದ್ದು ಕಳ್ಳರನ್ನು ಪತ್ತೆಮಾಡಿ ಮುಂದಿನ ಕ್ರಮ ಜರುಗಿಸಲು ಫಿರ್ಯಾದಿದಾರರು ನೀಡಿದ ಲಿಖಿತ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದೆ. | |||||||||||||||
Itagi PS | ||||||||||||||||
6 | Cr.No:0063/2015 (IPC 1860 U/s 493,504,114,306,34 ) |
02/12/2015 | Under Investigation | |||||||||||||
SUICIDE - Other Reasons | ||||||||||||||||
Brief Facts : | ಫಿರ್ಯಾದಿಯ ಅಕ್ಕಳಾದ ಪುಷ್ಪಾವತಿಯನ್ನು ಈಗ್ಗೆ 8 ವರ್ಷಗಳ ಹಿಂದೆ ನಂದಿಬಂಡಿ ಗ್ರಾಮದ ನಾಗರಾಜ ಎಂಬುವವನೊಂದಿಗೆ ಮದುವೆಮಾಡಿಕೊಟ್ಟಿದ್ದು, ಆದರೆ ಸಂಸಾರ ಸರಿಹೊಂದದ ಕಾರಣ, ಈಕೆಯು ತನ್ನ ತವರು ಮನೆಯಾದ ಹಂಚಿನಾಳ್ ಗ್ರಾಮದ ತನ್ನ ತಂದೆಯ ಮನೆಯಲ್ಲಿಯೇ ಇದ್ದಳು. ಆರೋಪಿತರು ಫಿರ್ಯಾದಿಯ ಮನೆಯವರ ಏಳಿಗೆಯನ್ನು ಸಹಿಸದೇ ವೈಷಮ್ಯವನ್ನಿಟ್ಟುಕೊಂಡಿದ್ದಲ್ಲದೆ, ಈಗ್ಗೆ 4 ವರ್ಷಗಳಿಂದ ಫಿರ್ಯಾದಿಯ ಅಕ್ಕಳಾದ ಪುಪ್ಷಾವತಿಯನ್ನು ಆರೋಪಿ 1 ಈತನು ಮದುವೆಯಾಗುವದಾಗಿ ನಂಬಿಸಿ, ಅನೈತಿಕ ಸಂಬಂದವನ್ನಿಟ್ಟುಕೊಂಡು, ಆದರೆ ಇತ್ತೀಚೆಗೆ ಆಕೆಯನ್ನು ಮದುವೆಯಾವುದಿಲ್ಲವೆಂದು ಹೇಳುತ್ತಿದ್ದರಿಂದ ಈ ವಿಷಯವನ್ನು ಈಕೆಯು ದಿನಾಂಕ 28-11-2015 ರಂದು ಮಧ್ಯಾಹ್ನ 2-00 ಗಂಟೆ ಗೆ ತಮ್ಮ ಮನೆಯವರಿಗೆ ತಿಳಿಸಿದ್ದು, ಆಗ ಫಿರ್ಯಾದಿ ಹಾಗೂ ಫಿರ್ಯಾದಿಯ ತಂದೆ ಇಟಿಗಿ ನಿಂಗಪ್ಪ ಹಾಗೂ ಇವರ ಮನೆಯವರು ಸೇರಿ ಆರೋಪಿತರ ಮನೆಯ ಬಳಿ ಹೋಗಿ ಈ ಬಗ್ಗೆ ವಿಚಾರ ಮಾಡಲಾಗಿ ಆರೋಪಿತರು ಫಿರ್ಯಾದಿಯ ತಂದೆಗೆ ನಿಮ್ಮ ಮನೆಯ ಮನೆತನದ ಮಯರ್ಾದೆಯನ್ನು ತೆಗೆಯುವ ಉದ್ದೇಶದಿಂದಲೇ, ನಾವು ಈ ಕೆಲಸವನ್ನು ಮಾಡಿದ್ದೇವೆ, ನೀನು ಇನ್ನೇನು ಮುಖ ಎತ್ತಿಕೊಂಡು ಬದುಕುತ್ತೀಯಾ, ಯಾವುದಾದರೂ ವಿಷ ಕುಡಿದು ಸಾಯಿ ಸೂಳೆಮಗನೆ ಎಂದು ಪ್ರಚೋದನೆ ನೀಡಿ ಬೈದಿದ್ದರಿಂದ ಫಿರ್ಯಾದಿಯ ತಂದೆಯು ದಿನಾಂಕ 01-12-2015 ರಂದು 12-00 ಪಿ.ಎಂ ಗಂಟೆಗೆ ಯಾವುದೋ ಕ್ರಿಮಿನಾಷಕ ಔಷಧಿಯನ್ನು ಸೇವಿಸಿ, ವದ್ದಾಡುತ್ತಿರುವಾಗ, ಮನೆಯವರು ಕೂಡಲೇ ಈತನನ್ನು ಹೆಚ್.ಬಿ ಹಳ್ಳಿ ಸಕರ್ಾರಿ ಆಸ್ಪತ್ರೆಗೆ ಸೇರಿಸಿದ್ದು, ಆದರೆ ಫಿರ್ಯಾದಿಯ ತಂದೆಯು ಗುಣಮುಖನಾಗದೇ 3-45 ಪಿ.ಎಂ ಗಂಟೆಗೆ ಆಸ್ಪತ್ರೆಯಲ್ಲಿಯೇ ಮೃತಪಟ್ಟಿರುತ್ತಾನೆಂದು ನೀಡಿದ ಲಿಖಿತ ದೂರನ್ನು ಸ್ವೀಕರಿಸಿ ಪ್ರಕರಣವನ್ನು ದಾಖಲಿಸಿಕೊಂಡಿರುತ್ತದೆ. | |||||||||||||||
Kottur PS | ||||||||||||||||
7 | Cr.No:0174/2015 (IPC 1860 U/s 279,337,338 ; INDIAN MOTOR VEHICLES ACT, 1988 U/s 183 ) |
02/12/2015 | Under Investigation | |||||||||||||
MOTOR VEHICLE ACCIDENTS NON-FATAL - State Highways | ||||||||||||||||
Brief Facts : | ದಿನಾಂಕ 02-12-2015 ರಂದು ಬೆಳಗ್ಗೆ 11-15 ಗಂಟೆಗೆ ಪಿರ್ಯಾದಿ ಠಾಣೆಗೆ ಹಾಜರಾಗಿ ನೀಡಿದ ದೂರನ್ನು ಸ್ವೀಕರಿಸಿ ನೋಡಲಾಗಿ, ಪಿರ್ಯಾದಿದಾರರ ತಮ್ಮ ಕೊಟ್ರೇಶ ಬೆಲ್ದಾರ್ ಕೆಲಸ ಮಾಡಿಕೊಂಡು ಜೀವನ ಮಾಡಿಕೊಂದ್ದು ಪ್ರತಿ ದಿನದಂತೆ ದಿನಾಂಕ 01-12-2015 ರಂದು ಕೊಟ್ಟೂರಿನಲ್ಲಿ ಬೆಲ್ದಾರ್ ಕೆಲಸ ಮಾಡಿಕೊಂಡು ವಾಪಾಸ್ ಚಪ್ಪರದಹಳ್ಳಿ ಕಡೆಗೆ ಸಂಜೆ 7-00 ಗಂಟೆಗೆ ಕೊಟ್ಟೂರು-ಹರಪನಹಳ್ಳಿ ರಸ್ತೆಯಲ್ಲಿರುವ ಮೈಲಾರಲಿಂಗೇಶ್ವರ ಗ್ಯಾರೇಜ್ ಸಮೀಪ ಪಿರ್ಯಾದಿ ತಮ್ಮ ಸೈಕಲ್ ನಲ್ಲಿ ರಸ್ತೆಯ ಎಡಬದಿಯಲ್ಲಿ ಹೋಗುತ್ತಿರುವಾಗ್ಗೆ ಅದೇ ಸಮಯಕ್ಕೆ ಚಪ್ಪರದಹಳ್ಳಿ ಕಡೆಗೆ ಹೋಗಲು ಬಂದ ಕೆಎ17ಎ9277 ನೇದ್ದರ ಆಟೋ ಚಾಲಕ ತನ್ನ ಆಟೋವನ್ನು ಅತೀವೇಗ ಮತ್ತು ಅಜಾಗೃಕತೆಯಿಂದ ನಡೆಸಿಕೊಂಡು ಬಂದು ಮುಂದೆ ಹೋಗುತ್ತಿದ್ದ ಸೈಕಲ್ ಹಿಂಭಾಗ ಡಿಕ್ಕಿ ಹೊಡೆಸಿ ಅಪಘಾತವುಂಟು ಮಾಡಿ ಆಟೋ ಸಮೇತ ಪಲ್ಟಿಹೊಡೆಸಿದ್ದರಿಂದ ಪಿರ್ಯಾದಿ ತಮ್ಮ ಕೊಟ್ರೇಶನಿಗೂ ಮತ್ತು ಆಟೋದಲ್ಲಿದ್ದ ಆಟೋ ಸವಾರ ಮತ್ತು ಆಟೋದಲ್ಲಿ ಪ್ರಯಾಣ ಮಾಡುತ್ತಿದ್ದ ವಿರೇಶ ಇವರುಗಳಿಗೆ ಸಾಮಾನ್ಯ ಮತ್ತು ತೀವ್ರ ಸ್ವರೂಪದ ಗಾಯಗಳಾಗಿರುತ್ತವೆ ಅಂತ ನೀಡಿದ ಲಿಖಿತ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದೆ. | |||||||||||||||
Kudligi PS | ||||||||||||||||
8 | Cr.No:0200/2015 (INDIAN MOTOR VEHICLES ACT, 1988 U/s 183 ; IPC 1860 U/s 279,304(A) ) |
02/12/2015 | Under Investigation | |||||||||||||
MOTOR VEHICLE ACCIDENTS FATAL - National Highways | ||||||||||||||||
Brief Facts : | ಈ ದಿನ ದಿ:೨-೧೨-೧೫ ರಂದು ಮಧ್ಯಾಹ್ನ ೧-೦೦ ಗಂಟೆಗೆ ಪಿರ್ಯಾದಿದಾರರಾದ ಶ್ರೀ.ಸೈಯದ್ ಇರ್ಫಾನ್ ಅಲಿ ಈತನು ಠಾಣೆಗೆ ಹಾಜರಾಗಿ ಹೇಳಿಕೆ ದೂರು ನೀಡಿದ್ದು ಸಾರಾಂಶವೇನೆಂದರೆ, ಮಧ್ಯಪ್ರದೇಶದ ಸಿಂದವಾ ಎಂಬಲ್ಲಿ ಮೈದಾ ಹಿಟ್ಟಿನ ಚೀಲಗಳನ್ನು ಎಂ.ಹೆಚ್.-೧೮/ಎ.ಸಿ-೨೫೮೬ ನೊಂದಣಿ ಸಂಖ್ಯೆಯ ಲಾರಿಯಲ್ಲಿ ಲೋಡು ಮಾಡಿಕೊಂಡು ಕ್ಲೀನರ್ ದಿನೇಶ್ ಹಾಗೂ ಇನ್ನೊಬ್ಬ ಚೋಗಲಾಲ್ ಎಂಬುವರೊಂದಿಗೆ ಸಿಂದವಾದಿಂದ ಬೆಂಗಳೂರಿಗೆ ಆನ್ ಲೋಡ್ ಮಾಡಲು ದಿನಾಂಕ: ೩೦-೧೧-೨೦೧೫ ರಂದು ಮಧ್ಯಾಹ್ನ ೧೨-೦೦ ಗಂಟೆಗೆ ಹೊರಟಿದ್ದು. ಈ ದಿನ ದಿ:೨-೧೨-೧೫ ರಂದು ಬೆಳಿಗ್ಗೆ ೮-೩೦ ಗಂಟೆ ಸುಮಾರಿಗೆ ಕೂಡ್ಲಿಗಿ ಸಮೀಪ ಶ್ರೀ.ಸಾಯಿಶ್ರಾದ್ಧ ರೆಸ್ಟೋರೆಂಟ್ ಮುಂದುಗಡೆ ಎನ್.ಹೆಚ್-೧೩ ರಲ್ಲಿ ಕೂಡ್ಲಿಗಿ ಕಡೆಯಿಂದ ಚಿತ್ರದುರ್ಗದ ಕಡೆಗೆ ತನ್ನ ಲಾರಿಯನ್ನು ರಸ್ತೆಯ ಎಡಗಡೆ ನಡೆಸಿಕೊಂಡು ಹೊರಟಿದ್ದಾಗ ಎದರುಗಡೆಯಿಂದ ಅಂದರೆ ಚಿತ್ರದುರ್ಗದ ಕಡೆಯಿಂದ ಬಂದಂತಹ ಎನ್.ಎಲ್.೦೧/ಎನ್-೦೩೮೬ ನೊಂದಣಿ ಸಂಖ್ಯೆಯ ಟ್ರೈಲರ್ ಲಾರಿ ಚಾಲಕ ಕ್ರಿಪಾಶಂಕರ್ ಸಿಂಗ್ ತಂದೆ ರಾಜೇಂದ್ರಸಿಂಗ್ ವಾಸ : ಪರ್ಶಿಯ ಗ್ರಾಮ , ಚುನಾರ ತಾಲೂಕು ಮಿರ್ಜಾಪುರ ಜಿಲ್ಲೆ , ಉತ್ತರ ಪ್ರದೇಶ ರಾಜ್ಯ ಈತನು ಅತೀವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸುತ್ತಾ ತನ್ನ ತಲೆ ಮತ್ತು ಬಲಗೈಯನ್ನು ಹೊರಗಡೆ ಇರಿಸಿ ತನ್ನ ಹಿಂದುಗಡೆಯಿಂದ ಬರುವಂತಹ ವಾಹನಗಳಿಗೆ ಬಲಗೈಯಿಂದ ಸನ್ನೆಯನ್ನು ಮಾಡುತ್ತಾ ಜೋರಾಗಿ ರಸ್ತೆಯ ಎಡಬದಿಯಿಂದ ಬಲಬದಿಗೆ ತಿರುಗಿಸಿದವನೆ ಪಿರ್ಯಾದಿ ಲಾರಿಯ ಬಲಗಡೆಯ ಬಾಡಿಗೆ ಡಿಕ್ಕಿ ಪಡಿಸಿದ್ದರ ಪರಿಣಾಮ ಆರೋಪಿ ಲಾರಿಯ ಮುಂದಿನ ಭಾಗ ಜಖಂ ಆಗಿ ಬಲಗಡೆಯ ಬಾಗಿಲು ಒಮ್ಮೇಲೆ ತೆರೆದಾಗ ಕ್ಯಾಬಿನಿನ ಒಳಗಿನಿಂದ ಬಲಮಗ್ಗಲಾಗಿ ತಾರ್ ರಸ್ತೆಯ ಎಡಬದಿ ಕಚ್ಚ ರಸ್ತೆಯ ಮೇಲೆ ಬೋರಲಾಗಿ ಬಿದ್ದು. ತಲೆಗೆ ಬಲವಾದ ರಕ್ತಗಾಯವಾಗಿ ಬಲಗೈ ಮುಂಗೈ ಹಿಂಭಾಗ ಜಜ್ಜಿ ರಕ್ತ ಮಾಂಸ ಹೊರಬಂದು ಸ್ಥಳದಲ್ಲೆ ಮೃತಪಟ್ಟಿದ್ದು. ಮೃತನ ಮೇಲ್ಕಂಡ ಲಾರಿಯು ತಾರ್ ರಸ್ತೆಯ ಎಡಬದಿ ಕಚ್ಚಾ ರಸ್ತೆಯ ತಗ್ಗಿನಲ್ಲಿರುವ ತೊಗರಿ ಹೊಲದಲ್ಲಿ ಹೋಗಿ ಜಖಂಗೊಂಡು ನಿಂತಿರುವುದಾಗಿ ಮೃತನ ಹೆಸರು ವಿಳಾಸದ ಬಗ್ಗೆ ಶವದ ಬಳಿ ಬಿದ್ದಂತಹ ಅವನ ೦೯೦೧೯೩೨೩೬೨೫ ನಂಬರಿನ ಮೊಬೈಲ್ ನಿಂದ ಆತನ ತಂದೆ ರಾಜೇಂದ್ರಸಿಂಗ್ ಎಂಬುವರ ೦೯೯೩೬೪೧೪೪೮೧ ನಂಬರಿನ ಮೊಬೈಲ್ ಗೆ ಪೋನ್ ಮಾಡಿ ಮೃತ ಕ್ರಿಪಾಶಂಕರ್ ಸಿಂಗ್ ಎಂಬುವನೇ ಆಗಿರುತ್ತಾನೆಂದು ಖಚಿತಪಡಿಸಿಕೊಂಡು ತಡವಾಗಿ ಬಂದು ದೂರು ಕೊಟ್ಟಿರುವುದಾಗಿ ಸದರಿ ಲಾರಿಯ ಚಾಲಕ ಕ್ರಿಪಾಶಂಕರ್ ಸಿಂಗ್ ನ ವಿರುದ್ಧ ಕೊಟ್ಟ ಹೇಳಿಕೆ ದೂರಿನ ಮೇರೆಗೆ ಮುಂದಿನ ಕ್ರಮದ ಸಲುವಾಗಿ ಮೇಲ್ಕಂಡಂತೆ ಪ್ರಕರಣ ದಾಖಲಿಸಿಕೊಂಡು ತನಿಖೆಕೈಗೊಂಡಿರುತ್ತದೆ. | |||||||||||||||
Kurugod PS | ||||||||||||||||
9 | Cr.No:0194/2015 (IPC 1860 U/s 363 ) |
02/12/2015 | Under Investigation | |||||||||||||
KIDNAPPING AND ABDUCTION - Others | ||||||||||||||||
Brief Facts : | ಪಿರ್ಯಾದಿದಾರರ ಹೆಂಡತಿಯ ಅಕ್ಕ ಸುಶೀಲಾಳ ಹಿರಿಯ ಮಗ ಆಕಾಶನನ್ನು ಪಿರ್ಯಾಧಿದಾರರು ತಮ್ಮ ಮನೆಯಲ್ಲಿ ಈಗ್ಗೆ 08 ವರ್ಷಗಳಿಂದ ಇಟ್ಟುಕೊಂಡು ಕುರುಗೋಡುನ ಸಸ್ಯಶಾಮಲ ಶಾಲೆಯಲ್ಲಿ ವಿದ್ಯಾಬ್ಯಾಸ ಮಾಡಿಸುತ್ತಿದ್ದರು. ಹಾಲಿ ಆಕಾಶನು 5 ನೇ ತರಗತಿ ಓದುತ್ತಿರುತ್ತಾನೆ. ದಿನಾಲು ಶಾಲೆಗೆ ಪಿರ್ಯಾದಿದಾರರ ಮನೆಯಿಂದ ನಡೆದುಕೊಂಡು ಹೋಗಿ ಬರುತ್ತಿದ್ದು, ಆಕಾಶನು ಶಾಲೆಯಲ್ಲಿ ನೀಡಿದ ಹೋವಕರ್್ ಸರಿಯಾಗಿ ಮಾಡದೇ ಯಾವಾಗಲೂ ಟಿ.ವಿ ನೋಡುತ್ತಾ ಕುಳಿತುಕೊಳ್ಳುತ್ತಿದ್ದನು. ಪಿರ್ಯಾದಿದಾರರು ಸಾಕಷ್ಟು ಸಲ ಹೋಂ ವರ್ಕ ಮಾಡು ಟಿ.ವಿ ನೋಡಬೇಡ ಅಂತ ಹೇಳುತ್ತಿದ್ದರೂ ಕೇಳುತ್ತಿರಲಿಲ್ಲ. ದಿನಾಂಕ 30/11/2015 ರಂದು ಬೆಳಿಗ್ಗೆ 9:00 ಗಂಟೆ ಸುಮಾರಿಗೆ ಆಕಾಶನು ಶಾಲೆಗೆ ಹೋಗಿ ಬರುತ್ತೇನೆಂದು ಮನೆಯಿಂದ ಹೋದವನು ಸಂಜೆ 06:00 ಗಂಟೆಯಾದರೂ ಶಾಲೆಯಿಂದ ಮನೆಗೆ ಬಂದಿರುವುದಿಲ್ಲ, ನಂತರ ಶಾಲೆಯ ಮುಖ್ಯಗುರುಗಳನ್ನು ಪಿರ್ಯಾದಿದಾರರು ಭೇಟಿ ಮಾಡಿ ಆಕಾಶನು ಈ ದಿನ ಶಾಲೆಗೆ ಬಂದಿದ್ದಾನೆಯೇ ಎಂದು ವಿಚಾರಿಸಲು ಮುಖ್ಯಗುರುಗಳು ಈ ದಿನ ಆಕಾಶನು ಬೆಳಿಗ್ಗೆಯಿಂದ ಶಾಲೆಗೆ ಬಂದಿಲ್ಲ ಎಂದು ತಿಳಿಸಿದ ಮೇಲೆ ಪಿರ್ಯಾದಿದಾರರು ಈ ವಿಷಯವನ್ನು ಆಕಾಶನ ತಂದೆ-ತಾಯಿಗೆ ಆಕಾಶ್ ಕಾಣೆಯಾದ ಬಗ್ಗೆ ತಿಳಿಸಿ, ಅಲ್ಲಲ್ಲಿ ಹುಡುಕಾಡಿ ತಡವಾಗಿ ಬಂದು ನೀಡಿದ ಗಣಕೀಕೃತ ದೂರಿನ ಮೇರೆಗೆ. ಇದರೊಂದಿಗೆ ಮೂಲ ದೂರಿನ ಪ್ರತಿಯನ್ನು ಲಗತ್ತಿಸಿದೆ. | |||||||||||||||
Sandur PS | ||||||||||||||||
10 | Cr.No:0191/2015 (IPC 1860 U/s 363 ) |
02/12/2015 | Under Investigation | |||||||||||||
KIDNAPPING AND ABDUCTION - Others | ||||||||||||||||
Brief Facts : | ಈ ದಿನ ದಿನಾಂಕ: 02/12/2015 ರಂದು ಮದ್ಯಾಹ್ನ 01-00 ಗಂಟೆಗೆ ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶ ಏನೆಂದರೆ, ದಿನಾಂಕ: 26/11/2015 ರಂದು ನಾನು ನನ್ನ ಹೆಂಡತಿ ಮತ್ತು ದರ್ಶನ್ ರವರೊಂದಿಗೆ ಬೆಳಗಾವಿಗೆ ಮದುವೆಗೆ ಹೋಗಿ ದಿನಾಂಕ: 28/11/2015 ರಂದು ವಾಪಾಸ್ಸು ಸಂಡೂರಿಗೆ ಬಂದಿದ್ದು, ದಿನಾಂಕ: 29/11/2015 ರಂದು ಮನೆಯಲ್ಲಿದ್ದ ನನ್ನ ಮಕ್ಕಳಾದ ಅಭಿಜಿತ್ ಮತ್ತು ತರುಣ್ ಗೆ ಮೋಟಾರ್ ಸೈಕಲ್ ತೆಗೆದುಕೊಂಡು ತಿರುಗಾಡಿರುತ್ತೀರೆಂದು ಬೈದು ಬುದ್ದಿಮಾತು ಹೇಳಿದ್ದಕ್ಕೆ, ಅಭಿಜಿತ್ ಮತ್ತು ತರುಣ್ ರವರು ಮನೆಯಲ್ಲಿ ಯಾರಿಗೆ ಹೇಳದೇ ಕೇಳದೇ ಬೆಳಿಗ್ಗೆ 08-00 ಗಂಟೆಗೆ ಎಲ್ಲಿಗೋ ಹೋಗಿ ಕಾಣೆಯಾಗಿರುತ್ತಾರೆ. ಇಲ್ಲಿಯವರೆಗೆ ಎಲ್ಲಾ ಕಡೆ ಹುಡುಕಾಡಿ ನೋಡಲಾಗಿ ಸಿಕ್ಕಿರುವುದಿಲ್ಲ. ಕಾರಣ ಕಾಣೆಯಾದ ನನ್ನ ಮಕ್ಕಳನ್ನು ಪತ್ತೆ ಹಚ್ಚಿಕೊಡಲು ಇದ್ದ ದೂರನ್ನು ಸ್ವೀಕರಿಸಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದೆ. | |||||||||||||||
ಬುಧವಾರ, ಡಿಸೆಂಬರ್ 2, 2015
PRESS NOTE OF 02/12/2015
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ