ಮಂಗಳವಾರ, ಡಿಸೆಂಬರ್ 1, 2015

PRESS NOTE OF 01/12/2015

Crime Key Report From   To   
Sl. No FIR No FIR Date Crime Group - Crime Head Stage of case
Bellary Rural PS
1 Cr.No:0511/2015
(KARNATAKA POLICE ACT, 1963 U/s 87 )
01/12/2015 Under Investigation
 KARNATAKA POLICE ACT 1963 - Street Gambling (87)
Brief Facts :  ದಿನಾಂಕ: 29-11-2015 ರಂದು ಸಂಜೆ ಠಾಣೆಯ ಪಿ.ಎಸ್.ಐ ರವರಾದ ಶ್ರೀ. ಕೆ.ಹೊಸಕೇರಪ್ಪರವರಿಗೆ ಠಾಣೆಯ ಸರಹದ್ದು ಬೊಮ್ಮನಹಾಳ್ ರಸ್ತೆಯ ತಮ್ಮಣ್ಣ ಕಾಲುವೆ ಪಕ್ಕದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಕೆಲವು ವ್ಯಕ್ತಿಗಳು ಹಣವನ್ನು ಪಣವನ್ನಾಗಿಟ್ಟು ಅಂದರ್ ಬಹಾರ್ ಎನ್ನುವ ನಸೀಬಿನ ಇಸ್ಟೇಟ್ ಜೂಜಾಟವಾಡುತ್ತಿರುತ್ತಾರಂದು ಖಚಿತ ವರ್ತಮಾನ ಬಂದ ಮೇರೆಗೆ ಪಂಚರು ಮತ್ತು ಸಿಬ್ಬಂದಿಯವರಾದ ಹೆಚ್.ಸಿ-43 ಪಿ.ಸಿ-90-91-839-810 ರವರೊಂದಿಗೆ ಇಲಾಖೆಯ ಜೀಪ್ ನಂಬರ್ ಕೆ.ಎ-34-ಜಿ-303 ರಲ್ಲಿ ಚಾಲಕ ಎ.ಪಿ.ಸಿ-89 ರವರೊಂದಿಗೆ ಸಂಜೆ 4-40 ಗಂಟೆಗೆ ಮೇಲ್ಕಂಡ ಸ್ಥಳಕ್ಕೆ ಹೋಗಿ ದಾಳಿ ಮಾಡಿ ಹಣವನ್ನು ಪಣವನ್ನನಾಗಿ ಕಟ್ಟಿ 52 ಇಸ್ಪೇಟ್ ಎಲೆಗಳಿಂದ ಅಂದರ್ ಬಹಾರ್ ಇಸ್ಪೇಟ್ 1] ಜಹೀರ್ 2] ಜೆ.ಅ ಮರ್ ಅಲಿ 3] ಮದರ್ ಖಾನ್ 4] ಇಸ್ಮಾಯಿಲ್ 5] ಹುಸೇನ್ ಬಾಷ ರವರಿಂದ ಜೂಜಾಟದ ಹಣ ರೂ. 1600/- ಮತ್ತು 52 ಇಸ್ಪೇಟ್ ಎಲೆಗಳನ್ನು ಪಂಚರ ಸಮಕ್ಷಮ ಮಾಡಿದ ಪಂಚನಾಮದಲ್ಲಿ ಜಪ್ತು ಮಾಡಿಕೊಂಡು, ಇಸ್ಪೇಟ್ ಜೂಜಾಟದಲ್ಲಿ ತೊಡಗಿದ್ದವರನ್ನು ಸ್ಥಳದಲ್ಲಿಯೇ ಬಿಟ್ಟು ಬಂದಿದ್ದಾಗಿ ಮೇಲ್ಕಂಡ 05 ಜನರ ಮೇಲೆ ಕಲಂ 87 ಕೆ.ಪಿ ಆಕ್ಟ ಅಡಿಯಲ್ಲಿ ಪ್ರಕರಣ ದಾಖಲಿಸಲು ಸೂಚಿಸಿದ ಮೇರೆಗೆ ಠಾಣೆಯ ಎನ್.ಸಿ ಸಂಖ್ಯೆ: 79/2015 ರಲ್ಲಿ ನೊಂದಾಯಿಸಿಕೊಂಡು ಪ್ರ.ವ.ವರದಿ ದಾಖಲಿಸಿ ತನಿಖೆ ಕೈಗೊಳ್ಳಲು ಘನ ನ್ಯಾಯಾಲಯದ ಪರವಾನಿಗೆ ಪಡೆದು ಪ್ರಕರಣ ದಾಖಲಿಸಿದೆ.
2 Cr.No:0512/2015
(IPC 1860 U/s 379 )
01/12/2015 Under Investigation
THEFT - Of Cultural - Others
Brief Facts :  ದಿನಾಂಕ: 1-12-2015 ರಂದು ಮದ್ಯಾಹ್ನ 12-30 ಗಂಟೆಗೆ ಫಿರ್ಯಾದಿ ಶ್ರೀ. ಮರಿಸ್ವಾಮಿ ತಂದೆ ಲೇಟ್ ವಿ. ಸಣ್ಣಪ್ಪ, ವ: 51 ವರ್ಷ, ವಡ್ಡರಜಾತಿ, ಎಲ್.ಐ.ಸಿ. ಯಲ್ಲಿ ಅಸಿಸ್ಟೆಂಟ್ ಕೆಲಸ, ವಾಸ: ಜರ್ನಲಿಸ್ಟ್ ಕಾಲೋನಿ, ಹಿಂಭಾಗ, ಕಂಟೋನ್ಮೆಂಟ್, ಬಳ್ಳಾರಿ. ರವರು ಠಾಣೆಗೆ ಹಾಜರಾಗಿ ದೂರು ನೀಡಿದ್ದು ಸಾರಾಂಶ: ಬಳ್ಳಾರಿಯ ಹಳೇ ಕಪ್ಪಗಲ್ಲು ರಸ್ತೆಯಲ್ಲಿರುವ ಬಳ್ಳಾರಿ ಗ್ರಾಮದ ಸರ್ವೆ ನಂ: 50/ಬಿ/3 ವಿಸ್ತೀರ್ಣ 3 ಎಕರೆ ಹೊಲವನ್ನು ಪಿ. ನರಸಿಂಹಲುರವರಿಂದ ಖರೀದಿ ಮಾಡಿರುತ್ತೇನೆ. ಈ ಜಮೀನಿನ ಸುತ್ತಲೂ ಸುರಕ್ಷತೆಗಾಗಿ ಫೆನ್ಸಿಂಗ್ ಹಾಕಿಸಲೇಂದು ದಿನಾಂಕ: 26-7-2015 ರಂದು ಸಂಜೆ ಅಂದಾಜು 8 ಇಂಚು ದಪ್ಪನೆಯ 7 ಅಡಿ ಉದ್ದರ 250 ಕಲ್ಲುಗಳನ್ನು ರೂ. 62,250/- ಕೊಟ್ಟು ಖರೀದಿಸಿ ಜಮೀನಿನಲ್ಲಿ ಹಾಕಿಸಿದ್ದೆನು. ದಿನಾಂಕ: 28-7-2015 ರಂದು ಮದ್ಯಾಹ್ನ 3-00 ಗಂಟೆಗೆ ನೋಡಲು ತನ್ನ ಜಮೀನಿನಲ್ಲಿ ಹಾಕಿದ್ದ ಕಲ್ಲುಗಳು ಇದ್ದಿಲ್ಲ. ಈ ಮದ್ಯವಧಿಯಲ್ಲಿ ಯಾರೋ ಕಳ್ಳರು ತನ್ನ ಜಮೀನಿನಲ್ಲಿದ್ದ ಕಲ್ಲುಗಳನ್ನು ಕಳುವು ಮಾಡಿಕೊಂಡು ಹೋಗಿರುತ್ತಾರೆಂದು ಕಳ್ಳರನ್ನು ಪತ್ತೆ ಮಾಡಿ ಕಾನೂನು ಕ್ರಮ ಜರುಗಿಸಲು ಕೋರಿ ದೂರು ಇದ್ದ ಮೇರೆಗೆ ಈ ಪ್ರ.ವ.ವರದಿ ಸಲ್ಲಿಸಿದೆ
Gudekote PS
3 Cr.No:0144/2015
(IPC 1860 U/s 219,419,420,468,469,34 )
01/12/2015 Under Investigation
CHEATING - CHEATING
Brief Facts :  ಮಾನ್ಯ ಕೂಡ್ಲಿಗಿಯ ಸಿ ಜೆ ಮತ್ತು ಜೆ ಎಂ ಎಫ್ ಸಿ ನ್ಯಾಯಾಲಯದ ಪಿ ಸಿ ನಂಬರ್ 63/2015 ಸೇದ್ದರ ದೂರನ್ನು ಹೆಚ್ ಸಿ 218 ರವರು ತಂದು ಹಾಜರುಪಡಿಸಿದ್ದನ್ನು ಸ್ವೀಕರಿಸಿ ಸಾರಾಂಶ ನೋಡಲು ಹುರುಡಿಹಳ್ಳಿ ಗ್ರಾಮದ ಸರ್ವೆ ನಂಬರ್ 110 ವಿಸ್ತೀರ್ಣ 04-67 ಎಕರೆ ಜಮೀನನ್ನು ದಿನಾಂಕ 09/12/1986 ರಂದು ಮಾನ್ಯ ತಹಶೀಲ್ದಾರ ಕೂಡ್ಲಿಗಿ ರವರು ತಮ್ಮ ನಡವಳಿ ನಂಬರ್ 672/83-84 ರಲ್ಲಿ, ಪಿರ್ಯಾಧಿಯ ತಂದೆಯವರಾದ, ಬೊಮ್ಮಲಿಂಗಯ್ಯಗಾರಿ ಪಾಲಯ್ಯ ವಾಸ ಹುರುಡಿಹಳ್ಳಿ ಗ್ರಾಮ ಇವರಿಗೆ ಅಧಿಬೋಗಾದಾರನೆಂದು ಆದೇಶ ಮಾಡಿದ್ದು ಸದರಿ ಭೂಮಿಯನ್ನು, ಪಿರ್ಯಾಧಿ ಗೌಡ್ರ ನಿಂಗಯ್ಯನಿಗೆ ವಿಸ್ತೀರ್ಣ 01-17 ಎಕರೆ, ಮತ್ತು ಪಿರ್ಯಾಧಿಯ ದೊಡ್ಡಪ್ಪನಾದ ರೆಡ್ಡಿಲಿಂಗನಗೌಡನಿಗೆ ವಿಸ್ತೀರ್ಣ 01-17 ಎಕರೆ, ಪಿರ್ಯಾಧಿಯ ಚಿಕ್ಕಪ್ಪನಾದ ಹನುಮಂತಪ್ಪನಿಗೆ ವಿಸ್ತೀರ್ಣ 01-17 ಎಕರೆ, ಪಿರ್ಯಾಧಿಯ ದೊಡ್ಡಪ್ಪನಾದ ಗೌಡ್ರಲಿಂಗಪ್ಪನಿಗೆ ವಿಸ್ತೀರ್ಣ 01-16 ಎಕರೆ ಜಮೀನನ್ನು ಭಾಗ ಮಾಡಿಕೊಂಡು ಉಳುಮೆ ಮಾಡುತ್ತಾ ತಮ್ಮ ಸ್ವಾಧೀನಲ್ಲಿಟ್ಟುಕೊಂಡಿದ್ದು,  ಸದರಿ ಸರ್ವೆ ನಂಬರ್ 110 ರ ಪಹಣಿ ಪತ್ರಿಕೆಯಲ್ಲಿ  ಬೊಮ್ಮಲಿಂಗಯ್ಯಗಾರಿ ಪಾಲಯ್ಯ ಅಂತಾ ಮುಂದುವರಿದಿದ್ದು ಇರುತ್ತದೆ, ಮೇಲ್ಕಂಡ  ಆರೋಪಿ 01 ರವರು, ಪಿರ್ಯಾಧಿಗೆ ಮೋಸ ಮಾಡುವ ಮತ್ತು ನಷ್ಟ ಉಂಟು ಮಾಡುವ ಉದ್ದೇಶದಿಂದ ನಕಲಿ ದಾಖಲೆಗಳನ್ನು ಸೃಷ್ಠಿಸಿ,  ಸುಳ್ಳು ಮಾಹಿತಿಯನ್ನು ನೀಡಿ, ಸರ್ವೆ ನಂಬರ್ 110 ರ ಖಾತೆ ಬದಲಾವಣೆಗೆ ಅರ್ಜಿ ಸಲ್ಲಿಸಿದ್ದು, ಆರೋಪಿ 02 ರಿಂದ 04 ರವರು ಸೂಕ್ತ ವಿಚಾರಣೆ ಮಾಡದೆ ಕಾನೂನು ನಿಯಮಗಳನ್ನು ಪಾಲಿಸದೆ ನಿರ್ಲಕ್ಷತನದಿಂದ ದಿನಾಂಕ 30/07/2015 ರಂದು ಸರ್ವೆ ನಂಬರ್ 110 ಪಹಣಿ ಪತ್ರಿಕೆಯಲ್ಲಿ ಹನುಮಂತಪ್ಪ ತಂದೆ ಲೇಟ್ ಬೊಮ್ಮಯ್ಯ ಇವರ ಹೆಸರಿಗೆ ಖಾತೆ ಬದಲಾವಣೆ ಮಾಡಿರುತ್ತಾರೆಂದು ಸದರಿ ಆರೋಪಿತರ ವಿರುದ್ದ ದೂರಿನಲ್ಲಿ ನಮೂಧಿಸಿದ ಕಲಂಗಳ ಅನ್ವಯ ಕ್ರಮ ಜರುಗಿಸುವಂತೆ ಇದ್ದ ದೂರಿನ ಮೇರಿಗೆ ಈ ದಿನ ದಿನಾಂಕ 01/12/2015 ರಂದು ಮದ್ಯಾಹ್ನ 12-30 ಗಂಟೆಗೆ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದೆ.
Hadagali PS
4 Cr.No:0112/2015 01/12/2015 Under 
(CODE OF CRIMINAL PROCEDURE, 1973 U/s 109 ) Investigation
CrPC - Security For Good Behaviour (Sec 109)
Brief Facts :  ನಿನ್ನೆ ದಿನಾಂಕ: 30-11-2015 ರಂದು ರಾತ್ರಿ 11-00 ಗಂಟೆಯಿಂದ ಮಾನ್ಯ ಸಿ.ಪಿ.ಐ ಸಾಹೇಬರವರ ಆದೇಶದಂತೆಎಸ್.ಒ ಕರ್ತವ್ಯವನ್ನು ಮುಗಿಸಿಕೊಂಡು ಶ್ರೀ ಹನುಮಂತಪ್ಪ ಸಿ.ಪಿ.ಸಿ 1165 ರವರೊಂದಿಗೆ ಸ್ವತ್ತಿನಅಪರಾಧಗಳನ್ನು ತಡೆಗಟ್ಟಲು ಹಡಗಲಿ ಪಟ್ಟಣದಲ್ಲಿ ಮುಂಜಾಗ್ರತಾ ಕ್ರಮಕ್ಕಾಗಿ ಗಸ್ತು ಕರ್ತವ್ಯ ಮತ್ತು ರಾತ್ರಿ ಗಸ್ತು ಕರ್ತವ್ಯದ ಸಿಬ್ಬಂದಿಗಳ ಚೆಕ್ಕಿಂಗ್ಗಾಗಿ ಹಡಗಲಿ ಪಟ್ಟಣದ ರಾಜೇವ್ ನಗರ ರಾಮಸ್ವಾಮಿ ಬಡಾವಣೆ ಎ,ಪಿ.ಎಂ.ಸಿ ಸರ್ಕಲ್ ಗಳಲ್ಲಿ ಗಸ್ತು ಮಾಡಿಕೊಂಡು ಬೆಳಗಿನ ಜಾವ 3-00 ಗಂಟೆಯ ಸುಮಾರಿಗೆ ಮದಲಘಟ್ಟಿ ಸರ್ಕಲ್ ಹತ್ತಿರ ಬಂದಾಗ 1 ಮತ್ತು 4 ನೇ ರಾತ್ರಿ ಗಸ್ತು ಕರ್ತವ್ಯ ದಲ್ಲಿದ್ದ ಸಿಬ್ಬಂದಿಯವರಾದ ಪಿ.ಸಿ 1157 ಮತ್ತು ಹೆಚ್.ಜಿ 543 ರವರನ್ನು ಮದಲಘಟ್ಟಿ ಸರ್ಕಲ್ ಕರೆಸಿಕೊಂಡು ಚಕ್ಕಿಂಗ್ ಕರ್ತವ್ಯದಲ್ಲಿದ್ದಾಗ ಅಲ್ಲಿ ಶ್ರೀ ಗಣೇಶ ದೇವಸ್ಥಾನದ ಹಿಂದುಗಡೆಒಬ್ಬ ವ್ಯೆಕ್ತಿ  ನಿಂತುಕೊಂಡಿದ್ದು ಅವನು ಪೊಲೀಸರಾದ ನಮ್ಮನ್ನು ನೋಡಿ ಅವನು ತನ್ನ ಇರುವಿಕೆಯನ್ನು ಮರೆಮಾಚಿಕೊಂಡು ಓಡಿ ಹೋಗುವನನ್ನು ನಾವುಗಳು ಸುತ್ತುವರಿದು ಹಿಡಿದು ಅವನ ಹೆಸರು ಮತ್ತು ವಿಳಾಸವನ್ನು ಕೇಳಲು ಮೊದಲಿಗೆ  ನಾಗ ಅಂತಾ ತಿಳಿಸಿದ್ದು ನಾವು ಅವನಿಗೆ ಪೂರ್ಣ ಹೆಸರನ್ನು ಹೇಳಲು ಪುನ: ಕೇಳಿದಾಗಆಗ ಅವನು ಓಬಳಾಪುರದ ನಾಗರಾಜ ತಾಯಿ ಬೀಮವ್ವ 24 ವರ್ಷ ವಾಲ್ಮೀಕಿ ಜನಾಂಗ  ವ್ಯವಸಾಯ ಕೆಲಸ ವಾಸ ಶ್ರೀ ಕಾಳಮ್ಮನಗುಡಿ ಹತ್ತಿರ ಕಡ್ಲಬಾಳು ಗ್ರಾಮ ಹೆಚ್.ಬಿ ಹಳ್ಳಿ ತಾ. ಬಳ್ಳಾರಿ ಜಿ. ಅಂತಾ ತಿಳಿಸಿದ್ದು ನಾವು ಆ ವೇಳೆಯಲ್ಲಿ ಆ ಸ್ಥಳದಲ್ಲಿ ಇದ್ದ ಬಗ್ಗೆ ಮತ್ತು ನಮ್ಮನ್ನು ನೋಡಿ ತಪ್ಪಿಸಿಕೊಂಡು ಓಡಿ ಹೋಗಲು ಪ್ರಯತ್ನಪಟ್ಟ ಬಗ್ಗೆ ವಿಚಾರ ಮಾಡಲು ಅವನು ಸಮಪರ್ಕವಾದ ಉತ್ತರ ನೀಡಲಿಲ್ಲ. ಹಾಗೆಯೇ ತಮ್ಮ ಊರಿನಿಂದ ಹಡಗಲಿ ಪಟ್ಟಣಕ್ಕೆ ಬಂದ ಬಗ್ಗೆ ಸಹ ವಿಚಾರ ಮಾಡಲು ಸಮಪರ್ಕವಾದ ಉತ್ತರ ನೀಡಲಿಲ್ಲ. ಆಗ ನಾವು ಅವನನ್ನು ಆವೇಳೆಯಲ್ಲಿ ಆ ಸ್ಥಳದಲ್ಲಿ ಬಿಟ್ಟು ಬಂದಲ್ಲಿ ಯಾವುದಾದರೂ ಸ್ವತ್ತಿನ ಅಪರಾಧ ಮಾಡುತ್ತಾನೆ ಎಂಬ ಸಂಶಯ ಬಂದಿದ್ದರಿಂದ ಮುಂಜಾಗ್ರತ ಕ್ರಮಕ್ಕಾಗಿ  ಸದರಿ ವ್ಯಕ್ತಿಯನ್ನು  ಬೆಳಗಿನ ಜಾವ 03-30 ಗಂಟೆಗೆ ವಶಕ್ಕೆ ಪಡೆದುಕೊಂಡು ಠಾಣೆಗೆ ಬಂದು ಠಾಣಾಧಿಕಾರಿಯವರಿಗೆ ಮುಂದಿನ ಕ್ರಮ ಜರುಗಿಸಲು  ಸೂಚಿಸಿ ನೀಡಿದ ವಿಶೇಷ ವರದಿಯ ಮೇರೆಗೆ ಈ ಪ್ರ.ವ.ವರದಿ.
Hagaribommanahalli PS
5 Cr.No:0181/2015
(IPC 1860 U/s 279,338 )
01/12/2015 Under Investigation
MOTOR VEHICLE ACCIDENTS NON-FATAL - Other Roads
Brief Facts :  ಈ ದಿನ ದಿನಾಂಕ 01-12-15 ರಂದು ಬೆಳಿಗ್ಗೆ 11-50 ಗಂಟೆಗೆ ನಾನು ಹ.ಬೊ.ಹಳ್ಳಿ ಪಟ್ಟಣದ ರೌಂಡ್ಸನಲ್ಲಿದ್ದಾಗ ಠಾಣೆಯಿಂದ ಹ.ಬೊ.ಹಳ್ಳಿ ಸರ್ಕಾರಿ ಆಸ್ಪತ್ರೆಯಿಂದ ಎಂ.ಎಲ್.ಸಿ ದೂರವಾಣಿ ಕರೆ ಬಂದ ಬಗ್ಗೆ ತಿಳಿಸಿದ್ದರಿಂದ ಆಸ್ಪತ್ರೆಗೆ ಬೇಟಿ ನೀಡಿ ಆಸ್ಪತ್ರೆಯಲ್ಲಿದ್ದ ಪ್ರತ್ಯಕ್ಷ ಸಾಕ್ಷಿ ಮೇಲ್ಕಂಡ ಪಿರ್ಯಾದಿದಾರರಾದ ಕೆ.ನಾಗರಜ ರವರ  ಹೇಳಿಕೆ ದೂರನ್ನು ಪಡೆದುಕೊಂಡು ಬಂದಿದ್ದು, ಸಾರಾಂಶವೇನೆಂದರೆ, ಪಿರ್ಯಾದಿದಾರರ ಅಜ್ಜಿಯಾದ ದುರುಗಮ್ಮ ಸುಮಾರು 70 ವರ್ಷ, ಈಕೆಯು ಈ ದಿನ ದಿನಾಂಕ 01-12-15 ರಂದು ಬೆಳಿಗ್ಗೆ 11-30 ಗಂಟೆ ಸುಮಾರಿಗೆ ಹ.ಬೊ.ಹಳ್ಳಿ ಪಟ್ಟಣದ ರೂಪ ಸಿಮೆಂಟ್ ಗೋಡೋನ್ ಮುಂದಿನ ರಸ್ತೆಯ ಮೇಲೆ ರಟ್ಟು ಆರಿಸುತ್ತಿದ್ದಾಗ ಕೊಟ್ರೇಶ ಟಾಕೀಸ್ ಕಡೆಯಿಂದ ಆರೋಪಿ ನಾಗರಾಜನು ತನ್ನ ಇಂಡಿಕಾ ಕಾರ್ ನಂ ಕೆ.ಎ.35/ಬಿ-3802 ನೇದ್ದನ್ನು ಅತೀ ವೇಗ ಮತ್ತು ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು ದುರುಗಮ್ಮನಿಗೆ ಡಿಕ್ಕಿ ಹೊಡೆಸಿದ್ದು ಇದರಿಂದ ಆಕೆ ಕೆಳಗೆ ಬಿದ್ದಾಗ ಕಾರಿನ ಮುಂದಿನ ಎಡಗಡೆಯ ಚಕ್ರ ಆಕೆಯ ಎಡ ತೊಡೆಯ ಮೇಲೆ ಹತ್ತಿ ಇಳಿದ ಪರಿಣಾವಾಗಿ ಆಕೆಯ ಎಡ ತೊಡೆಯ ಮೂಳೆ ಮುರಿದು ಚರ್ಮ ಹಿಡಿದುಕೊಂಢಿದ್ದು, ಎಡ ಕಪಾಳದ ಹತ್ತಿರ ಕೆತ್ತಿರುತ್ತದೆ ಅಂತ ಗಾಯಗೊಂಡ ದುರುಗಮನನ್ನು ಆಕೆಗೆ ಅಪಘಾತ ಪಡಿಸಿದ ಕಾರಿನಲ್ಲಿಯೇ ಚಿಕಿತ್ಸೆಗೆ ಹ.ಬೊ.ಹಳ್ಳಿ ಸರ್ಕಾರಿ ಆಸ್ಪತ್ರೆಗೆ ತಂದು ದಾಖಲಿಸಿರುವುದಾಗಿ ಈ ಅಪಘಾತಪಡಿಸಿದ ಸದರಿ ಇಂಡಿಕಾ ಕಾರ್ ಚಾಲಕ ನಾಗರಾಜನ ಮೇಲೆ ಕಾನೂನು ಕ್ರಮ ಜರುಗಿಸುವಂತೆ ಇದ್ದ ಮೇರೆಗೆ ಈ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದೆ
Kampli  PS
6 Cr.No:0158/2015
(IPC 1860 U/s 379 )
01/12/2015 Under Investigation
THEFT - Of Automobiles - Of Two Wheelers
Brief Facts :  ಈ ದಿನ ದಿನಾಂಕ 01-12-2015 ರಂದು ಬೆಳಿಗ್ಗೆ 10-30 ಗಂಟೆಗೆ  ಶ್ರೀ,ಬಿ.ರಾಘವೇಂದ್ರ ತಂದೆ ಲೇಟ್,ಬಿ.ಲಿಂಗಪ್ಪ 38ವರ್ಷ, ವಾಲ್ಮೀಕಿ ಜನಾಂಗ, ವ್ಯವಸಾಯ, ಸಾ// 17ನೇ ವಾರ್ಡು, ನಟರಾಜ ಕಲಾ ಮಂದಿರ ಹತ್ತಿರ, ಕಂಪ್ಲಿ,  ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೇ, ದಿನಾಂಕ 18-11-2015 ರಂದು ಬೆಳಿಗ್ಗೆ 06-30 ಗಂಟೆಯಿಂದ 07-30 ಗಂಟೆಯ ಮಧ್ಯದ ಅವಧಿಯಲ್ಲಿ ಯಾರೋ ಕಳ್ಳರು, ಮನೆಯ ಮುಂದೆ ನಿಲ್ಲಿಸಿದ್ದ 26,000/- ರೂ ಪಾಯಿ ಬೆಲೆ ಬಾಳುವ ಸಿಲ್ವರ್ ಬಣ್ಣದ ಹಿರೋ ಹೊಂಡಾ ಸ್ಪ್ಲೆಂಡರ್ ಪ್ಲಸ್ ಮೋಟಾರ್ ಸೈಕಲ್ ನಂ ಕೆಎ03/ಹೆಚ್ ಜಿ 9505. ಇಂಜಿನ್ ನಂ HA10EAA9D22255. ಚಾಸಿಸ್ ನಂ-MBLHA10EJA9D12097.  ನೇದ್ದನ್ನು ಹ್ಯಾಂಡ್ ಲಾಕ್ ಮುರಿದು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಆಗಿನಿಂದ ಇಲ್ಲಿಯವರೆಗೆ, ನಾನು, ನನ್ನ ಅಣ್ಣನಾದ ಮಂಜುನಾಥ ಇಬ್ಬರೂ ಸೇರಿಕೊಂಡು ಕಂಪ್ಲಿ, ಗಂಗಾವತಿ, ಹೊಸಪೇಟೆ, ಬಳ್ಳಾರಿ, ಕುರುಗೋಡು, ಸಿರಿಗೇರಿ, ಕಂಪ್ಲಿಯ ಅಕ್ಕ-ಪಕ್ಕದ ಹಳ್ಳಿಗಳಲೆಲ್ಲಾ ಹುಡುಕಾಡಿದರೂ ಮೇಲ್ಕಂಡ ಮೋಟಾರ್ ಸೈಕಲ್ ಸಿಕ್ಕಿರುವುದಿಲ್ಲ. ಈಗ ತಡವಾಗಿ ಠಾಣೆಗೆ ಬಂದು ಕಳುವಾಗಿರುವ ನನ್ನ ಮೇಲ್ಕಂಡ ಮೋಟಾರ್ ಸೈಕಲ್ ನ್ನು ಮತ್ತು ಕಳ್ಳರನ್ನ ಪತ್ತೇ ಮಾಡಿ, ಕಳ್ಳರ ವಿರುದ್ದ ಕಾನೂನು ಕ್ರಮ ಕೈಗೊಳ್ಳಬೇಕೆಂದು ದೂರು ಇದ್ದ ಮೇರೆಗೆ ಗುನ್ನೆ ನಂ 158/2015 ಕಲಂ 379 ಐಪಿಸಿ ರೀತ್ಯಾ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತದೆ.
T.B. Halli PS
7 Cr.No:0049/2015
(IPC 1860 U/s 341,504,506(2) )
01/12/2015 Under Investigation
WRONGFUL RESTRAINT/CONFINEMENT - Attempt To Commit
Brief Facts :  ಫಿರ್ಯಾಧಿದಾರರ ಹೊಲ ಹಾಗೂ ಆರೋಪಿತರ ಹೊಲಗಳು ಅಕ್ಕ-ಪಕ್ಕದಲ್ಲಿದ್ದು ಹೊಲಗಳ ಮ್ಯಾರಿಯ ವಿಚಾರದಲ್ಲಿ ವೈಮನಸ್ಸು ಇದ್ದು, ದಿನಾಂಕ : 30-11-2015 ರಂದು ಸಂಜೆ 04-30 ಗಂಟೆ ಸುಮಾರಿಗೆ ಫಿರ್ಯಾಧಿದಾರರು ತಮ್ಮ ಹೊಲದಲ್ಲಿ ಕೆಲಸ ಮುಗಿಸಿಕೊಂಡು ವಾಪಸ್ಸು ಮನೆಗೆ ಬರುತ್ತಿರುವಾಗ್ಗೆ ಯಡ್ರಮ್ಮನಹಳ್ಳಿ ಗ್ರಾಮದ ದೇವರಮನಿ ಹನುಮಂತಪ್ಪನ ಹೊಲದ ಪಕ್ಕದ ಕೋಡಿಹಳ್ಳಿ ಕಡೆಗೆ ಹೋಗುವ ರಸ್ತೆಯಲ್ಲಿ ಆರೋಪಿಯು ಫಿರ್ಯಾಧಿದಾರರನ್ನು ಅಕ್ರಮವಾಗಿ ತಡೆದು ನಿಲ್ಲಿಸಿ,  ಲೇ ಸೂಳೆ ಮಗನೆ ನಮ್ಮ ಹೊಲದ ಮ್ಯಾರಿಯ ತಂಟೆಗೆ ಪದೇ ಪದೇ ಬರುತ್ತೀಯಾ ಈಗಾ ಬಾರಲೇ ಅಂತಾ ಅವಾಚ್ಯ ಶಬ್ದಗಳಿಂದ ಬೈದು,  ತಾನು ಚೂರಿಯನ್ನು ತೋರಿಸಿ ಇನ್ನೂ 2-3 ದಿನದಲ್ಲಿ ಈ ಚೂರಿಯಿಂದ ನಿನ್ನನ್ನು ಸಾಯಿಸಿ ಬಿಡುತ್ತೇನೆ ಅಂತಾ ಪ್ರಾಣ ಬೆಧರಿಕೆ ಹಾಕಿರುತ್ತಾನೆ ಅಂತಾ ಫಿರ್ಯಾದಿ ಈ ದಿನ ತಡವಾಗಿ ಬಂದು ನೀಡಿದ ಲಿಖಿತ ದೂರಿನ ಮೇರೆಗೆ ಪ್ರಕರಣ ದಾಖಲಿಸಿದೆ.
Tekkalkota PS
8 Cr.No:0131/2015
(IPC 1860 U/s 302 )
01/12/2015 Under Investigation
MURDER - Due to Adultery
Brief Facts :  ಆರೋಪಿ ವೀರೇಶನು ಮೃತ ಈರಮ್ಮಳೊಂದಿಗೆ ಈಗ್ಗೆ ೧೨ ವರ್ಷಗಳಿಂದ ಸಂಬಂಧ ಹೊಂದಿದ್ದು, ಇವರಿಗೆ ೪ ಜನ ಮಕ್ಕಳು ಇರುತ್ತಾರೆ.  ಇತ್ತೀಚಿಗೆ ಆರೋಪಿತನು ಮೃತಳ ಶೀಲದ ಮೇಲೆ ಸಂಶಯ ಪಟ್ಟು, ಜಗಳ ಮಾಡುತ್ತಿದ್ದು,  ಈ ದಿನ ದಿನಾಂಕ; ೦೧/೧೨/೨೦೧೫ ರಂದು ಬೆಳಗಿನ ಜಾವ ೩-೩೦ ಗಂಟೆಗೆ ಮೃತಳು ತನ್ನ ಮಕ್ಕಳೊಂದಿಗೆ ತನ್ನ ಮನೆಯಲ್ಲಿ ಮಲಗಿರುವಾಗ ಆರೋಪಿತನು ಬಂದು ಈರಮ್ಮಳನ್ನು ಸಾಯಿಸಲು ಕಲ್ಲಿನಿಂದ ಬಲವಾಗಿ ಹಣೆ ಮತ್ತು ಮುಖಕ್ಕೆ ಜಜ್ಜಿ  ಕೊಲೆ ಮಾಡಿರುತ್ತಾರೆಂದು ದೂರಿನ ಸಾರಾಂಶ ಇರುತ್ತದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ