Crime Key Report From To | ||||||||||||||||
Sl. No | FIR No | FIR Date | Crime Group - Crime Head | Stage of case | ||||||||||||
Cowlbazar PS | ||||||||||||||||
1 | Cr.No:0370/2015 (IPC 1860 U/s 427,504,143,147,148,149,307,323,324,506(2) ) |
15/12/2015 | Under Investigation | |||||||||||||
ATTEMPT TO MURDER - Due To Other Causes | ||||||||||||||||
Brief Facts | ಫಿರ್ಯಾಧಿದಾರರನ್ನು ನಿನ್ನೆ ದಿನ ದಿನಾಂಕ: 14/12/2015 ರಂದು ರಾತ್ರಿ 11-30 ಗಂಟೆ ಸುಮಾರಿಗೆ ಲಾರಿಯ ವ್ಯವಹಾರದ ಬಗ್ಗೆ ಸೇಟಲ್ಮೇಂಟ್ ಮಾಡುತ್ತೇವೆಂದು ತಿರುಮಲ ಅಪಾರ್ಟ್ ಮೇಂಟ್ ಹತ್ತಿರ ಮಧುಸೂಧನ್ ರಾವ್, ಅವರ ತಮ್ಮ ಮೋಹನ್ ಬಾಬು @ ಮೋಹನ್ ರವರು ಕರೆಯಿಸಿ, ಕೊಲೆ ಮಾಡುವ ಉದ್ದೇಶದಿಂದ ಮಧುಸೂಧನ್ ರಾವ್, ಅವರ ತಮ್ಮ ಮೋಹನ್ ಬಾಬು @ ಮೋಹನ್, ತ್ರಿನಾಥ, ಮಧುಸೂಧನ್ ರವರ ಮಾವ ಮತ್ತು ಇತರೇ ನಾಲ್ಕು ಜನರು ಮಚ್ಚನಿಂದ, ರಾಡ್ ನಿಂದ, ಕಲ್ಲುಗಳಿಂದ ಮತ್ತು ಕೈಕಾಲುಗಳಿಂದ ನನ್ನ ತಲೆಗೆ, ಕೈಗೆ ಮತ್ತು ಮೈಕೈಗೆ ಹೊಡೆದು ಪ್ರಾಣ ಬೆದರಿಕೆ ಹಾಕಿ ಓಡಿ ಹೋಗಿರುತ್ತಾರೆ. ಕಾರಣ ಸದರಿಯವರ ವಿರುದ್ದ ಕಾನೂನು ಕ್ರಮ ಜರುಗಿಸುವಂತೆ ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಿದೆ. | |||||||||||||||
2 | Cr.No:0371/2015 (IPC 1860 U/s 109,506,34,504,323,354 ) |
15/12/2015 | Under Investigation | |||||||||||||
MOLESTATION - Other Places | ||||||||||||||||
Brief Facts | ಈಗ್ಗೆ 3 ವರ್ಷಗಳ ಹಿಂದೆ ಸಿರುಗುಪ್ಪದಲ್ಲಿಯ ಪೌರಾನಿಕ್ಸ್ ಪವರ್ ಪ್ಲಾಂಟ್ ಗೆ ಸಂಭಂದಪಟ್ಟಂತೆ ಆರೋಪಿ-2 ಮತ್ತು 3 ರವರು ಫಿರ್ಯಾಧಿ ಗಂಡನಿಗೆ ಹಣ ಕೊಡಬೇಕಾಗಿದ್ದು, ಆ ಹಣವನ್ನು ಕೊಡುವಂತೆ ಫಿರ್ಯಾಧಿ ಅತ್ತೆ-ಮಾವ ನವರು ಬೆಂಗಳೂರಿಗೆ ಹೋಗಿ ಆರೋಪಿ-2 ಮತ್ತು 3 ರವರಿಗೆ ಕೇಳಿದ್ದರಿಂದ ಅದೇ ಸಿಟ್ಟನ್ನಿಟ್ಟುಕೊಂಡು ಆರೋಪಿ-2 ಮತ್ತು ರವರು ಆರೋಪಿ-1 ರವರಿಗೆ ಕುಮ್ಮಕ್ಕು ನೀಡಿದ್ದರಿಂದ ಆರೋಪಿ-1 ರವರು ನಿನ್ನೆ ದಿನ ದಿನಾಂಕ 14/05/2015 ರಂದು ರಾತ್ರಿ 10-48 ಗಂಟೆಗೆ ಫಿರ್ಯಾಧಿ ಗಂಡನಿಗೆ ಫೋನ್ ಮಾಡಿ ಅವಾಚ್ಯ ಶಬ್ದಗಳಿಂದ ಬೈದಿದ್ದಲ್ಲದೇ ಫಿರ್ಯಾಧಿದಾರರು ವಾಸವಿರುವ ಅಪಾರ್ಟ್ ಮೆಂಟ್ ಹತ್ತಿರ ಬಂದು ಫಿರ್ಯಾಧಿಗೆ ನಿನ್ನ ಗಂಡ ಬಳೆ ತೊಟ್ಟುಕೊಂಡು ನಿನ್ನನ್ನು ಕಳಿಸಿದ್ದನಾ ಅಂತ ಹೇಳಿ ಫಿರ್ಯಾಧಿಯ ಕೂದಲನ್ನು ಹಿಡಿದು ಅವರು ತೊಟ್ಟ್ಟಿದ್ದ ಟೀ ಶರ್ಟ್ ನ್ನು ಹಿಡಿದು ಎಳೆದಾಡಿ ಹರಿದು ಅವಮಾನ ಮಾಡಿ ಬಿಡಿಸಲು ಬಂದ ಫಿರ್ಯಾಧಿ ಗಂಡನಿಗೆ ಕೈಯಿಂದ ಕಪಾಳಕ್ಕೆ ಹೊಡೆದು ಹೊಡೆದು ಪ್ರಾಣ ಬೆದರಿಕೆ ಹಾಕಿ ಹೋಗಿದ್ದು ಸದರಿಯವರ ವಿರುದ್ದ ಕಾನೂನು ಕ್ರಮ ಜರುಗಿಸುವಂತೆ ಕೊಟ್ಟ ದೂರಿನ ಮೇರೆಗೆ ಮೇಲ್ಕಂಡ ಕಲಂಗಳ ಅನ್ವಯ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದೆ. | |||||||||||||||
Gandhinagar PS | ||||||||||||||||
3 | Cr.No:0261/2015 (KARNATAKA POLICE ACT, 1963 U/s 87 ) |
15/12/2015 | Under Investigation | |||||||||||||
KARNATAKA POLICE ACT 1963 - Street Gambling (87) | ||||||||||||||||
Brief Facts | ದಿನಾಂಕ:12.12.2015 ರಂದು ಮಧ್ಯಾಹ್ನ 02.00 ಗಂಟೆಗೆ ಫಿರ್ಯಾಧಿದಾರರು ಡಿಸಿಐಬಿ ಘಟಕದಲ್ಲಿರುವಾಗ ಬಳ್ಲಾರಿ ನಗರದ ಕಪ್ಪಗಲ್ ರಸ್ತೆಯ 7ನೇ ಕ್ರಾಸ್ ಗಾದೆಪ್ಪ ರವರ ಮನೆಯ ಪಕ್ಕದ ಸಾರ್ವಜನಿಕ ಸ್ಥಳದಲ್ಲಿ ಇಸ್ಪೀಟ್ ಜೂಜಾಟ ನಡೆದಯುತ್ತಿದೆ ಅಂತ ಮಾಹಿತಿ ಮೇರಗೆ ಡಿಸಿಐಬಿ ಘಟಕದ ಹಚ್.176 ರವರಿಂದ ಇಬ್ಬರು ಪಂಚರನ್ನು ಬರಮಾಡಿಕೊಂಡು ಪಂಚರೊಂದಿಗೆ ಫಿರ್ಯಾಧಿದಾರರು ಮೇಲ್ಕಂಡ ಸ್ಥಳಕ್ಕೆ ಮಧ್ಯಾಹ್ನ 02.30 ಗಂಟೆಗೆ ಹೋಗಿ ಮರೆಯಾಗಿ ನಿಂತು ನೋಡಲಾಗಿ 4 ಜನ ವ್ಯಕ್ತಿಗಳು ಹಣವನ್ನು ಪಣವಾಗಿ ಕಟ್ಟಿ ಜೂಜಾಟ ಆಡುತ್ತಿರುವುದು ಕಂಡು ಬಂದಿದ್ದು ನಂತರ ಗಾಂಧಿನಗರ ಠಾಣೆಯ ಪಿ.ಎಸ್.ಐ ಕಾ.ಸು ರವರು ಮತ್ತು ಠಾಣಾ ಪಿಸಿ-932,975 ರವರನ್ನು ಕರೆಯಿಸಿಕೊಂಡು ಪಂಚರೊಂದಿಗೆ ದಾಳಿ ಮಾಡಿದ್ದು 4 ಜನರಲ್ಲಿ ಇಬ್ಬರು ಓಡಿ ಹೋಗಿದ್ದು ಇಬ್ಬರು ಸಿಕ್ಕಿಬಿದಿದ್ದು ಸಿಕ್ಕಿಬಿದ್ದ ಆರೋಪಿತರ ಪಂಚರ ಸಮಕ್ಷಮ ಅಂಗಶೋಧನೆ ಮಾಡಲಾಗಿ ಜೂಜಟಕ್ಕೆ ಬಳಸಿದ ನಗದು ಹಣ ರೂ.160/- ಮತ್ತು 52 ಇಸ್ಪೀಟ್ ಎಲೆಗಳನ್ನು ಜಪ್ತು ಮಾಡಿಕೊಂಡು ಬಂದು ಮುಂದಿನ ಕ್ರಮ ಜರುಗಿಸಲು ಇದ್ದ ದೂರಿನ ಮೇರೆಗೆ ಠಾಣಾ ಎನ್.ಸಿ-38/15 ರಲ್ಲಿ ನಮೂದಿಸಿಕೊಂಡು ನಂತರ ಮಾನ್ಯ ನ್ಯಾಯಾಲಯದ ಅನುಮತಿ ಪಡೆದು ಪ್ರಕರಣ ದಾಖಲಿಸಲಾಗಿದೆ ಆದ್ದರಿಂದ ಈ ಪ್ರ.ವ.ವರದಿ | |||||||||||||||
4 | Cr.No:0262/2015 (IPC 1860 U/s 379 ) |
15/12/2015 | Under Investigation | |||||||||||||
THEFT - Jewellery | ||||||||||||||||
Brief Facts | ಈ ದಿನ ದಿನಾಂಕ: 15/12/2015 ರಂದು ಫಿರ್ಯಾಧಿದಾರರಳು ಮೋಕ ರಸ್ತೆಯಲ್ಲಿರುವ ಅಲ್ಲಂ ಲೇಔಟ್ ನಲ್ಲಿರುವ ತನ್ನ ಮನೆಯನ್ನು ಬಿಟ್ಟು ದುರುಗಮ್ಮ ದೇವಸ್ಥಾನಕ್ಕೆ ಹೋಗಲು ತನ್ನ ಹೊಂಡಾ ಯ್ಯಾಕ್ಟಿವಾ ಸ್ಕೂಟರ್ ನಂ. ಕೆಎ 34/ಆರ್-3650 ನೇದ್ದರಲ್ಲಿ ದುರುಗಮ್ಮ ದೇವಸ್ಥಾನದ | |||||||||||||||
Brief Facts : | ದಕ್ಷಿಣದ ದಿಕ್ಕಿಗೆ ಇರುವ ಪ್ರವೇಶ ದ್ವಾರದ ಕಡೆ ಬೆಳಿಗ್ಗೆ 9-25 ಗಂಟೆಗೆ ಹೋಗಿ ಸ್ಕೂಟರ್ ನ್ನು ಅಲ್ಲಿ ನಿಲ್ಲಿಸಿ ದೇವಸ್ಥಾನದಲ್ಲಿ ಹೋಗಿ ಮರಳಿ 10-20 ಗಂಟೆಗೆ ಬಂದು ತನ್ನ ವ್ಯಾನಿಟಿ ಬ್ಯಾಗ್ ತೆಗೆದುಕೊಳ್ಳಲು ಹೋದಾಗ ವ್ಯಾನಿಟಿ ಬ್ಯಾಗ್ ಸಹಿತ ಅದರಲ್ಲಿಟ್ಟಿದ್ದ 1) ನಗದು ಹಣ 3,000/- ರೂ. 2) ಒಂದು 1.7 ಗ್ರಾಂ ತೂಕದ ಬಂಗಾರದ ಚೈನ್ ಸರ ಬೆಲೆ ಅಂದಾಜು 25,000/-ರೂ. 3) ಒಂದು 1.2 ಗ್ರಾಂ ತೂಕದ ಬಂಗಾರದ ಬಳೆ ಬೆಲೆ ಅಂದಾಜು 15,000/-ರೂ. 4) ಒಂದು ಹಾನರ್ ಕಂಪನಿಯ ಅಂಡ್ರೈಡ್ ಮೋಬೈಲ್ ಫೋನ್ ಬೆಲೆ ಅಂದಾಜು 4,500/-ರೂ. 5) ಒಂದು ಅಕ್ಸಿಸ್ ಬ್ಯಾಂಕ್ ಎ.ಟಿ.ಎಂ ಕಾರ್ಡ್ 6) ಒಂದು ಎಸ್.ಬಿ.ಎಂ ಬ್ಯಾಂಕ್ ಎ.ಟಿ.ಎಂ ಕಾರ್ಡ್ ಎಲ್ಲಾ ಒಟ್ಟು ಬೆಲೆ 47,500/- ರೂ. ಬಾಳುವವುಗಳನ್ನು ಕಳ್ಳತನವಾಗಿರುತ್ತವೆ ಯಾರೋ ಕಳ್ಳರು ತಾನು ದುರುಗಮ್ಮ ದೇವಸ್ಥಾನದ ಬಳಿ ಸ್ಕೂಟರ್ ನಿಲ್ಲಿಸಿದಾಗ ಸೀಟಿನ ಲಾಕ್ ಮುರಿದು ವ್ಯಾನಿಟಿ ಬ್ಯಾಗ್ ಮತ್ತು ಅದರಲ್ಲಿಟ್ಟಿದ್ದ ಮೇಲ್ಕಂಡ ವಸ್ತುಗಳು ಕಳ್ಳತನ ಮಾಡಿರುತ್ತಾರೆಂದು ನೀಡಿದ ಲಿಖಿತ ದೂರಿನ ಮೇರೆಗೆ ಪ್ರಕರಣ ದಾಖಲಿಸಿದೆ. | |||||||||||||||
Hadagali PS | ||||||||||||||||
5 | Cr.No:0126/2015 (KARNATAKA POLICE ACT, 1963 U/s 78(III) ) |
15/12/2015 | Under Investigation | |||||||||||||
KARNATAKA POLICE ACT 1963 - Gambling - Matka (78 Class C) | ||||||||||||||||
Brief Facts : | ಈ ದಿನ ದಿನಾಂಕ 15-12-2015 ರಂದು ಹೂವಿನ ಹಡಗಲಿ ಪಟ್ಟಣದಲ್ಲಿ ರಾಮದೇವರ ಗುಡಿಯ ಮುಂದೆ ಸಾರ್ವಜನಿಕ ರಸ್ತೆಯಲ್ಲಿ ಗಡಗಿ ಪ್ರಕಾಶ ತಂದೆ ಗಡಗಿ ವೀರಣ್ಣ,34 ವರ್ಷ, ಈತನು ಹೋಗಿ ಬರುವ ಸಾರ್ವಜನಿಕರಿಗೆ 1ರೂ 80 ರೂಪಾಯಿ ಕೊಡುತ್ತೇನೆಂದು ಕೋಗಿ ಕರೆದು ಹಣ ಪಡೆದು ಚೀಟಿಯನ್ನು ಬರೆದುಕೊಡುತ್ತಿದ್ದಾಗ, ಹಡಗಲಿ ಉಪವಿಭಾಗದ ಡಿ.ವೈ.ಎಸ್.ಪಿ ಮತ್ತು ಅವರ ಕಛೇರಿಯ ಸಿಬ್ಬಂದಿಯರಾದ ಹೆಚ್.ಸಿ-31 309 ಸಿ.ಪಿ.ಸಿ -07-197-1146 ಹಾಗೂ ಎ.ಪಿ.ಸಿ35 ರವರು 12-50 ಪಿ.ಎಂ. ಗಂಟೆಗೆ ದಾಳಿ ಮಾಡಿ ಹಿಡಿದು ಆರೋಪಿ ಗಡಗಿ ಪ್ರದೀಪ್ ಈತನ ಕಡೆಯಿಂದ ನಗದು ಹಣ 7,810/ರೂ ಹಾಗೂ 2 ಮಟಕಾ ಚೀಟಿ. ಒಂದು ಬಾಲ್ ಪೆನ್ನು ಪಂಚರ ಸಮಕ್ಷಮ ವಶಕ್ಕೆ ಪಡೆದು ಸದರಿ ಆರೋಪಿತತನ ಮೇಲೆ ಕಾನೂನು ಕ್ರಮ ಜರುಗಿಸಲು ಸೂಚಿಸಿದ ಮೇರೆಗೆ, ಸದರಿ ದೂರನ್ನು ಠಾಣೆ ಎನ್.ಸಿ ನಂ:29/2015 ನೇದ್ದರಲ್ಲಿ ನಮೊದಿಸಿ. ಮುಂದಿನ ಕ್ರಮ ಜರುಗಿಲು ಮಾನ್ಯ ನ್ಯಾಯಾಲಯಕ್ಕೆ ಪರವಾನಿಗೆ ಕೋರಿ ನ್ಯಾಯಾಲಯ ಪರವಾನಗಿ ಪಡೆದು ಪ್ರ ವ ವರದಿಯನ್ನು ದಾಖಲಿಸಿಕೊಂಡಿದೆ. | |||||||||||||||
Hospet Extention PS | ||||||||||||||||
6 | Cr.No:0058/2015 (CODE OF CRIMINAL PROCEDURE, 1973 U/s 110 ) |
15/12/2015 | Under Investigation | |||||||||||||
CrPC - Security For Good Behaviour (Sec 110) | ||||||||||||||||
Brief Facts : | ಈ ದಿನ ದಿನಾಂಕ:-15-12-2015 ರಂದು ಬೆಳಗಿನ ಜಾವ ಲರ್ಕಿಂಗ್ ಬೀಟ್ ಗಾಗಿ ಹೆಚ್.ಸಿ-170, ಪಿ.ಸಿ-527 ರವರನ್ನು ಜೊತೆಯಲ್ಲಿ ಕರೆದುಕೊಂಡು ಠಾಣೆಯಿಂದ 4-35 ಗಂಟೆಗೆ ಹೊರಟು ಠಾಣಾ ಸರಹದ್ದಿನಲ್ಲಿ ಪೆಟ್ರೋಲಿಂಗ್ ಮಾಡುತ್ತಾ ಎನ್.ಸಿ ಕಾಲೋನಿ, ಚಪ್ಪರದಹಳ್ಳಿ, ಏರಿಯಾದಲ್ಲಿ ಪೆಟ್ರೋಲಿಂಗ್ ಮಾಡಿ ನಂತರ ಎಂ.ಜೆ ನಗರಕ್ಕೆ ಬಂದು ಬೆಳಗಿನ ಜಾವ 5-30 ಗಂಟೆಗೆ ಎಂ.ಜೆ ನಗರದ ಹೂಡಾ ಪಾರ್ಕ ಪಕ್ಕದಲ್ಲಿ ಇರುವ ಶ್ರೀ.ವೆಂಕಟಸುಬ್ಬರಾಯುಡು ಇವರ ಮನೆಯ ಮುಂದೆ ಕತ್ತಲಲ್ಲಿ ಒಬ್ಬ ವ್ಯಕ್ತಿ ತಿರುಗಾಡುತ್ತಿದ್ದನ್ನು ಕಂಡು ಅಲ್ಲಿಗೆ ಹೋಗಿ ನೋಡಿದಾಗ ನಮ್ಮನ್ನು ನೋಡಿದ ಸದರಿ ವ್ಯಕ್ತಿ ಅಲ್ಲಿಂದ ತಪ್ಪಿಸಿಕೊಂಡು ಹೋಗಲು ಪ್ರಯತ್ನಿಸಿದವನನ್ನು ಹಿಡಿದು ನೋಡಲಾಗಿ ಸದರಿಯವನ ಹೆಸರು ತಿಪ್ಪಯ್ಯ ತಂದೆ ಗಾಳೆಪ್ಪ, ವ: 32 ವರ್ಷ, ಕೊರಚರ ಜಾತಿ, ಹಂದಿ ಸಾಕಾಣಿಕೆ, ವಾಸ ಗಾಳೆಮ್ಮ ಗುಡಿ ಹಿಂದೆ, ಚಪ್ಪರದಹಳ್ಳಿ, ಹೊಸಪೇಟೆ ಆಗಿದ್ದು, ಸದರಿಯವನು ನಮ್ಮ ಠಾಣೆಯ ಎಂ.ಓ.ಬಿ ಆಸಾಮಿಯಾಗಿರುತ್ತಾನೆ, ಸದರಿಯವನಿಗೆ ಈ ಸಮಯದಲ್ಲಿ ಇಲ್ಲಿ ಏಕೆ ಬಂದು ತಿರುಗಾಡುತ್ತಿದ್ದೀಯ ಅಂತ ವಿಚಾರಿಸಲಾಗಿ ಆ ಸಮಯದಲ್ಲಿ ಅಲ್ಲಿ ಇರುವಿಕೆಯ ಬಗ್ಗೆ ಸಮರ್ಪಕವಾದ ಉತ್ತರ ನೀಡಿರುವುದಿಲ್ಲ. ಕಾರಣ ಸದರಿ ಪ್ರತಿವಾದಿಯು ಯಾವುದೇ ಸಂಙ್ಞೆ ಅಪರಾಧ ಮಾಡಲು ಬಂದಿರಬಹುದಂತ ಅನುಮಾನದ ಮೇಲೆ ಮುಂಜಾಗ್ರತ ಕ್ರಮವಾಗಿ ಸದರಿಯವನನ್ನು ವಶಕ್ಕೆ ತೆಗೆದುಕೊಂಡಿದ್ದು ಸದರಿಯವನು ಠಾಣೆಯ ಎಂ.ಓ.ಬಿ ಆಸಾಮಿಯಾಗಿದ್ದು, ಚಾಳಿಬಿದ್ದ ಅಪರಾಧಿಯಾಗಿರುವುದರಿಂದ ವಾಪಸ್ಸು ಠಾಣೆಗೆ ಬೆಳಗಿನ ಜಾವ 5-46 ಗಂಟೆಗೆ ಬಂದು ಸದರಿ ಪ್ರತಿವಾದಿಯ ವಿರುದ್ದ ಠಾಣಾ ಗುನ್ನೆ ನಂ: 58/2015 ಕಲಂ: 110 ಸಿ.ಆರ್.ಪಿ.ಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದೆ. | |||||||||||||||
Hospet Rural PS | ||||||||||||||||
7 | Cr.No:0187/2015 (IPC 1860 U/s 279,337,304(A) ) |
15/12/2015 | Under Investigation | |||||||||||||
MOTOR VEHICLE ACCIDENTS FATAL - Other Places | ||||||||||||||||
Brief Facts : | ಪಿರ್ಯಾದಿದಾರರಾದ ಶ್ರೀ ರಂಗಯ್ಯ @ ರಂಗ ತಂದೆ ದಿ: ಸಣ್ಣ ಲಾಲೆಪ್ಪ, ವ: 29 ವರ್ಷ, ನಾಯಕರು, ಹಮಾಲಿ ಕೆಲಸ, ವಾಸ: ಎಲ್.ಎಫ್.ಎಸ್. ಶಾಲೆ ಹಿಂದುಗಡೆ, ಜೋಳದರಾಶಿ ಗುಡ್ಡ, ಸಂಡೂರು ರಸ್ತೆ, ಹೊಸಪೇಟೆ ಇವರು ಠಾಣೆಗೆ ಬಂದು ನೀಡಿದ ಹೇಳಿಕೆ ದೂರನ್ನು ಪಡೆದುಕೊಂಡಿದ್ದು ಸಾರಾಂಶ: ತಾನು ಮತ್ತು ಪರುಶುರಾಮ ಇಬ್ಬರು ಹೊಸಪೇಟೆ ಬಸವೇಶ್ವರ ಬಡಾವಣೆ ವಾಸಿಯಾದ ಬ್ರಹ್ಮಯ್ಯ ರವರ ಟ್ಯಾಕ್ಟರ್ ನಂಬರ್ ಕೆ.ಎ.35-ಟಿ-4205/4206 ರಲ್ಲಿ ಹಮಾಲಿ ಕೆಲಸ ಮಾಡಿಕೊಂಡಿದ್ದಾಗಿ ಸದರಿ ಟ್ಯಾಕ್ಟರಿಗೆ ಹಳೇ ಮಲಪನಗುಡಿ ಗ್ರಾಮದ ಪಂಪಾಪತಿ ಇತನು ಚಾಲಕನಾಗಿ ಕೆಲಸಮಾಡಿಕೊಂಡಿದ್ದು ಈ ದಿನ ಬೆಳಿಗ್ಗೆ ಆಕಾಶವಾಣಿ ಏರಿಯಾದಲ್ಲಿ ವೇಸ್ಟ್ ಮಣ್ಣು ಲೋಡ್ ಮಾಡಿಕೊಂಡು ರೈಲ್ವೇ ಸ್ಟೇಷನ್ ರಸ್ತೆ | |||||||||||||||
ನಾಗೇನ ಹಳ್ಳಿ ಕಡೆಗೆ ಹೊಗುವ ಸುಡುಗಾಡನಲ್ಲಿ ಮಣ್ಣನು ಅನ್ ಲೋಡ್ ಮಾಡಿ ವಾಪಾಸ್ ಎಲ್.ಎಲ್.ಸಿ ಕಾಲುವೆ ರಸ್ತೆಯ ಮೇಲೆ ಹೋಗುತ್ತಿರುವಾಗ ಚಾಲಕ ಪಂಪಾಪತಿಯು ಟ್ಯಾಕ್ಟರನ್ನು ದುಡುಕಿನಿಂದ ಜೋರಾಗಿ ನೆಡೆಸಿ ಕಾಲುವೆ ಎಡ ಅಂಚಿನಲ್ಲಿ ನೆಡೆಸಿದ್ದರಿಂದ ಟ್ಯಾಕ್ಟರ್ ಎಡಮಗ್ಗಲಾಗಿ ಕಾಲುವೆಯಲ್ಲಿ ಉರುಳಿ ಬಿದ್ದಿತು ಇದರಿಂದ ತನಗೆ ಮತ್ತು ಪರುಶುರಾಮನಿಗೆ ಸಣ್ನ ಪುಟ್ಟ ಗಾಯಗಳಾಗಿದ್ದು ತಾವು ಈಜಿ ದಡಕ್ಕೆ ಬಂದಿದ್ದಾಗಿ ಚಾಲಕ ಪಂಪಾಪತಿಯು ನೀರಿನಲ್ಲಿ ಮುಳುಗಿದ್ದು ಆತನಿಗೆ ಹೊರಕ್ಕೆ ತೆಗೆದಿದ್ದು ಆತನ ಎಡಪಕ್ಕೆಯಲ್ಲಿ ರಕ್ತ ಗಾಯ ಆಗಿದ್ದು ಮೃತ ಪಟ್ಟಿರುತ್ತಾನೆಂದು ಈ ಘಟೆನೆಯು ಬೆಳಿಗ್ಗೆ 8-30 ಗಂಟೆಗೆ ಕಾಲುವೆಯ ತಿರುವುನಲ್ಲಿ ನೆಡೆದಿದ್ದು ಚಾಲಕನ ದುಡುಕಿನ ಮತ್ತು ವೇಗದ ಚಾಲನೇ ಕಾರಣವಾಗಿದ್ದು ಕಾನೂನು ಕ್ರಮ ಜರುಗಿಸುವಂತೆ ನೀಡಿದ ದೂರಿನ ಮೇರೆಗೆ ಠಾಣೆಯ ಗುನ್ನೆನಂಬರ್; 187/2015 ಕಲಂ: 279-337-304 (ಎ) ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದೆ. | ||||||||||||||||
8 | Cr.No:0188/2015 (IPC 1860 U/s 00MP ) |
15/12/2015 | Under Investigation | |||||||||||||
MISSING PERSON - Girl | ||||||||||||||||
Brief Facts : | ಪಿರ್ಯಾದಿದಾರರಾದ ಶ್ರೀ ತಿಮ್ಮಪ್ಪ ಇವರ ಮಗಳಾಧ ಕು: ಗಾಯಿತ್ರಿ ವ:19 ವರ್ಷ ಇವರು ಈ ದಿನ ಬೆಳಿಗ್ಗೆ 5-30 ಗಂಟೆ ಸುಮಾರಿಗೆ ತಮ್ಮ ಮನೆಯ ಮುಂದಿನ ಕಸವನ್ನು ಬಳಿದು ಅಂಗಳಕ್ಕೆ ನೀರು ಹಾಕಲು ಮನೆಯಿಂದ ಎದ್ದು ಹೋಗಿದ್ದು ಬೆಳಿಗ್ಗೆ 6-15 ಗಂಟೆಯಾದರೂ ಒಳಗೆ ಬರದಿದ್ದರಿಂದ ಹೋಗಿ ಹುಡುಕಾಡಿ ನೋಡಲಾಗಿ ಈ ವರೆದೂ ಪತ್ತೆಯಾಗಿರುವುದಿಲ್ಲ ಎಂದು ಹಾಗು ರಕ್ತ ಸಂಬಂದಿಕ ಊರುಗಳಿಗೆ ಪೋನ್ ಮಾಡಿ ವಿಷಯ ತಿಳಿದುಕೊಳ್ಳಲಾಗಿ ಅಲ್ಲಿಗೂ ಸಹಾ ಹೋಗಿರುವುದಿಲ್ಲ ಎಂದು ತಿಳಿದು ಬಂದಿದ್ದರಿಂದ ಹುಡುಕಿ ಕೊಡಲು ದೂರು ಇದ್ದ ಮೇರೆಗೆ ಕ್ರಪರಣ ದಾಖಲು ಮಾಡಿ ತನಿಖೆ ಕೈ ಗೊಳ್ಳಲಾಗಿದೆ. | |||||||||||||||
Kottur PS | ||||||||||||||||
9 | Cr.No:0187/2015 (CODE OF CRIMINAL PROCEDURE, 1973 U/s 107 ) |
15/12/2015 | Under Investigation | |||||||||||||
CrPC - Security For Good Behaviour (Sec 107 ) | ||||||||||||||||
Brief Facts : | ನಿ
ವೇ ಧ ನೆ: ಘನ ತಾಲ್ಲೋಕು ದಂಡಾಧಿಕಾರಿಯವರ ನ್ಯಾಯಾಲಯದಲ್ಲಿ ನಿವೇಧಿಸಿಕೊಳ್ಳುವುದೇನೆಂದರೆ, ಶ್ರೀ ಪುಲ್ಲಯ್ಯ ಎಂ ರಥೋಡ್ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಆಗಿ ಕೊಟ್ಟೂರು ಪೊಲೀಸ್ ಠಾಣೆ ಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ಈ ಮೂಲಕ ಪ್ರಮಾಣಿಕರಿಸುವುದೇನೆಂದರೆ ನಾನು ಕೂಡ್ಲಿಗಿ ತಾಲ್ಲೋಕು, ಮಲ್ಲನಾಯಕನಹಳ್ಳಿ ಗ್ರಾಮಕ್ಕೆ ಬೇಟಿ ನೀಡಿ ಪರಿಶೀಲಿಸಿದ್ದು, ಗ್ರಾಮದಲ್ಲಿ ಅಂಜಿನಪ್ಪನವರಿಗೂ ಹಾಗೂ ಸೋವೇನಹಳ್ಳಿ ನಾಗಮ್ಮ ಇವರಿಗೂ ಈ ಹಿಂದಿನಿಂದಲೂ ವೈಷಮ್ಯ ವಿದ್ದು, ಇವರುಗಳ ವಿರುದ್ದ ಠಾಣೆಯಲ್ಲಿ ಕ್ರಮವಾಗಿ 150/15 ಮತ್ತು 151/15 ಪ್ರಕರಣಗಳು ವರದಿಯಾಗಿ ತನಿಖೆಯಲ್ಲಿದ್ದು ಇವರುಗಳು ಯಾವ ಕ್ಷಣದಲ್ಲಿಯಾದರೂ ಜಗಳ ಗಲಾಟೆಗಳಾಗಿ ರಕ್ತಪಾತವಾಗುವ ಸಾದ್ಯತೆ ಇರುವುದರಿಂದ ಮೇಲ್ಕಂಡ ಪ್ರತಿವಾದಿಗಳನ್ನು ಘನ ನ್ಯಾಯಾಲಯದ ಮುಂದೆ ಹಾಜರ್ ಪಡಿಸಿಕೊಂಡು ಶಾಂತಿಪಾಲನಾ ಮುಚ್ಚಳಿಕೆ ಪಡೆಯುವಂತೆ ನಿವೇಧಿಸಿಕೊಂಡಿದೆ, |
|||||||||||||||
Sirigeri PS | ||||||||||||||||
10 | Cr.No:0180/2015 (CODE OF CRIMINAL PROCEDURE, 1973 U/s 107 ) |
15/12/2015 | Under Investigation | |||||||||||||
CrPC - Security For Good Behaviour (Sec 107 ) | ||||||||||||||||
Brief Facts : | ಸಿರಿಗೇರಿ ಪೊಲೀಸ್ ಠಾಣೆಯ ಶ್ರೀ ಬಿ ನಿರಂಜನ ಪಿಎಸ್ಐ ಆದ ನಾನು ಮಾನ್ಯ ಘನ ನ್ಯಾಯಾಲಯಕ್ಕೆ ನಿವೇದಿಸಿಕೊಳ್ಳುವುದೇನೆಂದರೆ, ಈ ದಿನ ದಿನಾಂಕ-15.12.2015 ರಂದು ಮಧ್ಯಾಹ್ನ 12:00 ಗಂಟೆಗೆ ನಾನು ಠಾಣಾ ಪ್ರಕರಣಗಳಲ್ಲಿ ಸಿರುಗುಪ್ಪಕ್ಕೆ ಹೋಗಿ, ನಂತರ ಠಾಣಾ ಸರಹದ್ದಿನ ಗ್ರಾಮಗಳ ಬೇಟಿಗಾಗಿ ಹೋಗಿ ಭೈರಾಪುರ ಗ್ರಾಮಕ್ಕೆೆ ಬೇಟಿ ನಂತರ ಮಧ್ಯಾಹ್ನ 2.00 ಗಂಟೆಗೆ ಕರೂರು ಗ್ರಾಮಕ್ಕೆ ಬೇಟಿ ನೀಡಿ ಸದರಿ ಗ್ರಾಮದಲ್ಲಿ ಮುಖಂಡರನ್ನು ಮತ್ತು ಭಾತ್ಮಿದಾರರನ್ನು ಸಂಪಕರ್ಿಸಿ ಗ್ರಾಮದಲ್ಲಿ ಪುಂಡರ ಹಾಳೆಯನ್ನು ಹೊಂದಿರುವ ಪ್ರತಿವಾದಿ ಅಮರೇಶಗೌಡ ತಂದೆ ಪಂಪಾಪತಿಗೌಡ, ಇವರ ಬಗ್ಗೆ ವಿಚಾರಿಸಿದಾಗ ಸದರಿ ಪ್ರತಿವಾದಿಯು ಗ್ರಾಮದಲ್ಲಿ ಚಟುವಟಿಕೆಗಳುಳ್ಳವನಾಗಿದ್ದು, ಗ್ರಾಮದಲ್ಲಿ ತಮ್ಮ ಜನಾಂಗದವರನ್ನು ಎತ್ತಿಕಟ್ಟಿ ಗುಂಪುಕಟ್ಟಿಕೊಂಡು ತಾನು ರೌಡಿ ಆಸಾಮಿಯೆಂದು ಜನರಲ್ಲಿ ಭಯದ ವಾತಾವರಣ ಉಂಟುಮಾಡುತ್ತಿರುತ್ತಾನೆ. ಈತನಿಂದ ಮುಂಬರುವ ವಿಧಾನ ಪರಿಷತ್ ಚುನಾವಣೆಯಲ್ಲಿ ಗ್ರಾಮದಲ್ಲಿ ಸಾರ್ವಜನಿಕರ ಶಾಂತಿ ನೆಮ್ಮದಿಗೆ ಭಂಗ ತರುವ ಸಾದ್ಯತೆ ಇರುತ್ತದೆ ಎಂದು ಭಾತ್ಮೀದಾರರಿಂದ ಮಾಹಿತಿ ತಿಳಿದಿದ್ದು, ಈ ವಿಷಯವಾಗಿ ಪ್ರತಿವಾದಿಯು ಗ್ರಾಮದಲ್ಲಿ ಚುನಾವಣೆ ಸಮಯದಲ್ಲಿ ಯಾವ ಸಮಯದಲ್ಲಾದರೂ ಗಲಾಟೆ ಮಾಡಿ ಗ್ರಾಮದಲ್ಲಿ ಸಾರ್ವಜನಿಕರ ಶಾಂತತೆಗೆ ಭಂಗ ತರುವ ಸಾದ್ಯತೆ ಇರುವುದರಿಂದ, ಮೇಲ್ಕಂಡ ಪ್ರತಿವಾದಿಯ ವಿರುದ್ದ ಠಾಣೆಗೆ ಮಧ್ಯಾಹ್ನ 2:45ಗಂಟೆಗೆ ಬಂದು ನನ್ನ ಸ್ವದೂರಿನ ಮೇರೆಗೆ ಠಾಣಾ ಗುನ್ನೆ ನಂ-180/15 ಕಲಂ-107 ಸಿಆರ್.ಪಿ.ಸಿ ರೀತ್ಯ ಪ್ರಕರಣ ದಾಖಲು ಮಾಡಿರುತ್ತೇನೆ. ಮಾನ್ಯರು ಪ್ರತಿವಾದಿಗಳಿಂದ ಅತೀ ಹೆಚ್ಚಿನ ಮೊತ್ತಕ್ಕೆ ಮುಚ್ಚಳಿಕೆ ಬರೆಯಿಸಿಕೊಳ್ಳಲು ಮಾನ್ಯರಲ್ಲಿ ಕೋರಲಾಗಿದೆ. | |||||||||||||||
ಮಂಗಳವಾರ, ಡಿಸೆಂಬರ್ 15, 2015
PRESS NOTE OF 15/12/2015
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ