ಮಂಗಳವಾರ, ಡಿಸೆಂಬರ್ 22, 2015

PRESS NOTE OF 22/12/2015

Crime Key Report From   To   
Sl. No. FIR No FIR Date Crime Group - Crime Head Stage of case
Brucepet PS
1 Cr.No:0261/2015
(IPC 1860 U/s 120B,418,406,408,420,415,417,425,463,464 )
22/12/2015 Under Investigation
CHEATING - CHEATING
Brief Facts :  ಈದಿನ ದಿನಾಂಕಃ22-12-15 ರಂದು ಮದ್ಯಾಹ್ನ 12-15 ಗಂಟೆಗೆ ಗಾಂಧಿನಗರ ಪೊಲೀಸ್ ಠಾಣೆಯ ಗುನ್ನೆ ನಂ:28/15 ನೇದ್ದನ್ನು ಕೃತ್ಯ ಸ್ಥಳದ ಆಧಾರದ ಮೇರೆಗೆ ಕಳುಹಿಸಿದ ಪ್ರಕರಣದ ಕಡತವನ್ನು ಪಡೆದುಕೊಂಡು ನೋಡಲು ಆರೋಪಿಗಳಾದ 01 ಮತ್ತು 02 ಇವರು ರೂಪನಗುಡಿ ಫಿರ್ಕಾದ ಚಂದೂರು ಗ್ರಾಮದಲ್ಲಿರುವ ತಮಗೆ ಸಂಬಂದಿಸಿದ ಭೂಮಿ ಸರ್ವೆ ನಂ 20ಎ/01 ವಿಸ್ತಿರ್ಣ 02 ಎಕರೆ ಡಿ.ಸಿ.ಡಬ್ಲ್ಯೂ ಜಮೀನನ್ನು ಫಿರ್ಯಾಧಿಗೆ  ರೂ 2,00,000/-ಗಳಿಗೆ ಮಾರಾಟ ಮಾಡುವುದಾಗಿ ಹೇಳಿ ದಿನಾಂಕ 08.03.2010 ರಂದು ಫಿರ್ಯಾದಿ ಕಡೆಯಿಂದ 01 ಲಕ್ಷ 50 ಸಾವಿರ ಮುಂಗಡವಾಗಿ ಪಡೆದು ಸೇಲ್ ಅಗ್ರೀಮೆಂಟ್ ಮಾಡಿ ಉಳಿದ ಹಣವನ್ನು ರಿಜಿಸ್ಟರ್ ಸಮಯದಲ್ಲಿ ಕೊಡುವುದಾಗಿ ಹೇಳಿದ್ದು ಅದರಂತೆ ಫಿರ್ಯಾಧಿದಾರನು ಉಳಿದ ಹಣವನ್ನು 50 ಸಾವಿರ ಕೊಡುತ್ತೇನೆ ಮೇಲ್ಕಂಡ ಭೂಮಿಯನ್ನು ರಿಜಿಸ್ಟರ್ ಮಾಡಿಸಿಕೊಡುವಂತೆ ಕೇಳಿಕೊಂಡಾಗ್ಯೂ ಮುಂದುವರೆಸುತ್ತಾ ಬಂದು ನಂತರ ಸದರಿ ಭೂಮಿಯನ್ನು ದಿನಾಂಕ 09.06.2011 ರಂದು 3 ನೇ ಆರೋಪಿಗೆ 01 ಲಕ್ಷ 20 ಸಾವಿರಕ್ಕೆ ಆರೋಪಿ-1 ಮತ್ತು 02 ರವರು ಮಾರಾಟ ಮಾಡಿದ್ದು ಆರೋಪಿ-3 ರವರು ಫಿರ್ಯಾಧಿದಾರನಿಗೆ ಈಗಾಗಲೇ ಮೇಲ್ಕಂಡ ಜಮೀನನ್ನು ಮಾರಾಟ ಮಾಡಲು ಸೇಲ್ ಅಗ್ರೀಮೆಂಟ್ ಮಾಡಿಕೊಂಡಿದ್ದ ವಿಷಯ ಗೊತ್ತಿದಾಗ್ಯೂ ಸದರಿ ಭೂಮಿಯನ್ನು ಪಡೆದುಕೊಂಡು ಫಿರ್ಯಾಧಿಗೆ ಆರೋಪಿ-1 ರಿಂದ 03 ರವರು ಮೋಸ ಹಾಗು ನಷ್ಟವನುಂಟು ಮಾಡಿರುತ್ತಾರೆಂದು ಇದ್ದ ದೂರಿನ ಮೇರೆಗೆ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದೆ.
Cowlbazar PS
2 Cr.No:0380/2015
(IPC 1860 U/s 379 )
22/12/2015 Under Investigation
THEFT - Jewellery
Brief Facts :  ದಿನಾಂಕ 22/12/2015 ರಂದು ಬೆಳಗಿನ ಜಾವ 3-30 ಗಂಟೆಯಿಂ 4-00 ಗಂಟೆ ಮದ್ಯದ ಅವಧಿಯಲ್ಲಿ ಯಾರೋ ಕಳ್ಳರು ಕಳುವುಮಾಡುವ ಉದ್ದೇಶದಿಂದ ರೂಮ್ ನ ಕಿಟಕಿಯ ಸೊಳ್ಳೆ ಪರದೆ ಯನ್ನುಕಟ್ ಮಾಡಿ ಕಿಟಕಿಯಿಂದ ರೂಮ್ ನಲ್ಲಿ ಮಲಗಿದ್ದ ಪಿರ್ಯಾದಿದಾರರ ಮಗಳ ಸುಮಾರು 23,000/- ರೂ ಗಳು ಬೆಲೆ ಬಾಳುವ 10 ಗ್ರಾಂ ತೂಕದ ಬಂಗಾರದ ಸರವನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆಂದು ಕಾರಣ ಪತ್ತೆ ಮಾಡಿಕೊಡಲು ದೂರು ನೀಡಿದ ಮೇರೆಗೆ ಈ ಪ್ರ.ವ.ರದಿ
Hadagali PS
3 Cr.No:0130/2015
(IPC 1860 U/s 355,323,506,114,34 )
22/12/2015 Under Investigation
CASES OF HURT - Simple Hurt
Brief Facts :  ಪಿರ್ಯಾದಿದಾರನು ಆರೋಪಿ ಸುರೇಶನ ಕಡೆಯಿಂದ ಗಣೇಶಮಾಲಿ ಮತ್ತು ಮೊಹನ್ಮಾಲಿ ಎನ್ನುವರಿಗೆ ಹಣವನ್ನು ಕೊಡಿಸಿದ್ದು, ಗಣೇಶಮಾಲಿ ಮತ್ತು ಮೊಹನ್ ಮಾಲಿ ಎನ್ನುವರು ಹಣ ಕಟ್ಟದೆ ಪರಾರಿಯಾಗಿದ್ದರಿಂದ ಇದಕ್ಕೆ ಜಾಮೀನು ಹಾಕಿದ್ದ ಪಿರ್ಯಾದಿ ಕೊಡಬೇಕಾಗಿದ್ದು, ಪಿರ್ಯದಿ ನಿನ್ನೆ ದಿನಾಂಕ18-12-2015 ರಂದು 08-45 ಪಿ.ಎಂ ಗಂಟೆ ಸುಮಾರಿಗೆ ಆರೋಪಿ ಸುರೇಶನಿಗೆ 30ಸಾವಿರ ರೂಪಾಯಿ ಹಣವನ್ನು ಕೊಡಲು ಹೋದಾಗ, ಆರೋಪಿ ಸುರೇಶನು 30ಸಾವಿರ ರೂಪಾಯಿ ಅಲ್ಲ, 33500/ರೂ ಅಂತ ಪಿರ್ಯಾದಿ ಜೊತೆ ವಾದಕ್ಕೆ ಇಳಿದು ಪಿರ್ಯಾದಿಗೆ ಚಪ್ಪಲಿಯಿಂದ ಎಡಗಡೆ ಕೆನ್ನೆಗೆ ಹೊಡೆದಿರುತ್ತಾನೆ, ಆರೋಪಿ 2 ರಿಂದ 5 ರವರು ಪಿರ್ಯಾದಿಗೆ ಕಾಲಿನಿಂದ ಬೆನ್ನಿಗೆ, ತೆಲೆಗೆ, ಹೊಟ್ಟೆ ಮೇಲೆ ವದ್ದಿರುತ್ತಾರೆಂದು ಹಾಗು ಆರೋಪಿತನು ಪ್ರಾಣ ಬೆದರಿಕೆ ಹಾಕಿ ಪಿರ್ಯಾದಿಗೆ ಹೊಡೆಯುವಂತೆ ಪ್ರಚೋದನೆ ಮಾಡಿ ಪ್ರಾಣ ಬೆದರಿಕೆ ಹಾಕಿರುತ್ತಾನೆಂದು ಇದ್ದ ಲಿಖಿತ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತದೆ.
Hosahalli PS
4 Cr.No:0237/2015
(KARNATAKA POLICE ACT, 1963 U/s 87 )
22/12/2015 Under Investigation
 KARNATAKA POLICE ACT 1963 - Street Gambling (87)
Brief Facts :  ಈ ದಿನ ದಿನಾಂಕ:೨೧/೧೨/೨೦೧೫ ರಂದು ರಾತ್ರಿ ೧೧-೩೦ ಗಂಟೆಗೆ  ಹೊಸಹಳ್ಳಿ ಠಾಣೆಯ ಪಿ.ಎಸ್.ಐ. ರವರಾದ ಶ್ರೀ.ಸುರೇಶ ಡಿ ರವರು ಠಾಣೆಯಲ್ಲಿ ಹಾಜರಾಗಿ ವರದಿಯನ್ನು ಕೊಟ್ಟಿದ್ದೇನೆಂದರೆ, ಈ ದಿನ ದಿನಾಂಕ:೨೧/೧೨/೨೦೧೫ ರಂದು ರಾತ್ರಿ ೯-೦೦ ಗಂಟೆಯ ಸುಮಾರಿಗೆ ನಾನು ಠಾಣೆಯ 
ಪಿ.ಸಿ.ಗಳಾದ ೧೦೭೩, ೩೩೧,೩೭೪, ೬೭೨,೯೮೯,೩೯೭,೯೦೯ ರವರೊಂದಿಗೆ ಖಾನಾಮಡಗು ಗ್ರಾಮದಲ್ಲಿ ಜಾತ್ರೆ ಬಂದೋ ಬಸ್ತು ಕರ್ತವ್ಯ ಮುಗಿಸಿಕೊಂಡು ಹೊಸಹಳ್ಳಿ ಗ್ರಾಮದಲ್ಲಿ ಬರುತ್ತಿರುವಾಗ ನೆಲಬೊಮ್ಮನಹಳ್ಳಿ ಗ್ರಾಮದಲ್ಲಿರುವ ಬಸವೇಶ್ವರ ದೇವಸ್ಥಾನದ ಮುಂದುಗಡೆ  ಸಾರ್ವಜನಿಕ ರಸ್ತೆಯಲ್ಲಿ ಬೀದಿ ದೀಪದ ಬೆಳಕಿನಲ್ಲಿ ಅಂದರ್- ಬಾಹರ್ ಎಂಬ ನಸೀಬಿನ ಇಸ್ಪೇಟ್ ಜೂಜಾಟ ನಡೆಯುತ್ತಿದೆ ಅಂತ ಮಾಹಿತಿ ಬಂದಿದ್ದರಿಂದ ಮೇಲ್ಕಂಡ ಸಿಬ್ಬಂಧಿಯವರಿಗೆ  ಇಸ್ಪೇಟ್ ಜೂಜಾಟದ ಬಗ್ಗೆ ಮಾಹಿತಿಯನ್ನು ತಿಳಿಸಿ ನಾನು ಮೇಲ್ಕಂಡ ಸಿಬ್ಬಂಧಿಯೊಂದಿಗೆ ಖಾಸಗಿ ವಾಹನದಲ್ಲಿ ಕೂಡಿಸಿಕೊಂಡು ಹೊಸಹಳ್ಳಿ ಯಿಂದ ಹೊರಟು ರಾತ್ರಿ ೯-೩೦ ಗಂಟೆಯ ಸುಮಾರಿಗೆ ನೆಲಬೊಮ್ಮನಹಳ್ಳಿ ಗ್ರಾಮದ ಊರ ಹೊರಗಡೆ ಜೀಪನ್ನು ಮರೆಯಲ್ಲಿ ನಿಲ್ಲಿಸಿ ಪಂಚರನ್ನು ಬರಮಾಡಿಕೊಂಡು ಪಂಚರಿಗೆ ಇಸ್ಪೇಟ್ ಜೂಜಾಟದ ಬಗ್ಗೆ ಮಾಹಿತಿಯನ್ನು ತಿಳಿಸಿ ನಾವೆಲ್ಲರೂ ಕಾಲು ನಡಿಗೆಯಿಂದ ನಡೆದು ಕೊಂಡು ರಾತ್ರಿ ೯-೪೦ ಗಂಟೆಯ ಸುಮಾರಿಗೆ ನೆಲಬೊಮ್ಮನಹಳ್ಳಿ ಗ್ರಾಮದಲ್ಲಿರುವ ಬಸವೇಶ್ವರ ದೇವಸ್ಥಾನದ ಹತ್ತಿರ ಮರೆಯಲ್ಲಿ ನಿಂತು ನೋಡಲಾಗಿ ನೆಲಬೊಮ್ಮನಹಳ್ಳಿ ಗ್ರಾಮದಲ್ಲಿರುವ ಬಸವೇಶ್ವರ ದೇವಸ್ಥಾನದ ಮುಂದುಗಡೆ ಸಾರ್ವಜನಿಕ ರಸ್ತೆಯಲ್ಲಿ ಬೀದಿ ದೀಪದ ಬೆಳಕಿನಲ್ಲಿ  ಜನರು ಗುಂಪಾಗಿ ಕುಳಿತುಕೊಂಡು ಅಂದರ್- ಬಾಹರ್ ಎಂಬ ನಸೀಬಿನ ಇಸ್ಪೇಟ್ ಜೂಜಾಟ ಆಡುತ್ತಿರುವುದನ್ನು ಖಚಿತ ಪಡಿಸಿಕೊಂಡು ರಾತ್ರಿ ೯-೪೫ ಗಂಟೆಗೆ ನಾನು, ಸಿಬ್ಬಂಧ್ದಿ ಮತ್ತು ಪಂಚರೊಂದಿಗೆ ಇಸ್ಪೇಟ್ ಜೂಜಾಟದ ಸ್ಥಳದ ಮೇಲೆ ದಾಳಿ ಮಾಡಿ ಇಸ್ಪೇಟ್ ಜೂಜಾಟ ಆಡುತ್ತಿದ್ದವರ ಪೈಕಿ ೪ ಜನರಿಗೆ ಹಿಡಿದು ಕೊಂಡೆವು, ೪ಜನರು ತಪ್ಪಿಸಿಕೊಂಡು ಓಡಿ ಹೋದರು.ನಾವು ಹಿಡಿದುಕೊಂಡ  ಇಸ್ಪೇಟ್ ಜೂಜಾಟ ಆಡುತ್ತಿದ್ದ ವ್ಯಕ್ತಿಗಳಿಗೆ ಹೆಸರು ವಿಳಾಸ ಕೇಳಲಾಗಿ ೧] ಬೆಳ್ಳೋಡಿ ದ್ಯಾಮಪ್ಪ ತಂದೆ ಲೇಟ್ ಚನ್ನಪ್ಪ,ವ:೪೭ ವರ್ಷ,ಗೊಲ್ಲರ ಜನಾಂಗ,ವ್ಯವಸಾಯ,ವಾಸ:ನೆಲಬೊಮ್ಮನಹಳ್ಳಿ ಗ್ರಾಮ ಅಂತ ತಿಳಿಸಿದ್ದು ಇವನ ಮುಂದುಗಡೆ ಹಣ ರೂ:೭೦೦=೦೦ ರೂ ದೊರೆಯಿತು.೨] ಪಿ.ಹಿರಿಯಪ್ಪ ತಂದೆ ಎ.ಕೆ.ಹಿರಿಯಪ್ಪ,ವ:೨೧ ವರ್ಷ,ಆದಿ ಕರ್ನಾಟಕ ಜನಾಂಗ,ವ್ಯವಸಾಯ,ವಾಸ:ನೆಲಬೊಮ್ಮನಹಳ್ಳಿ ಗ್ರಾಮ ಅಂತ ತಿಳಿಸಿದ್ದು ಇವನ ಮುಂದುಗಡೆ ಹಣ ರೂ:೭೦೦=೦೦ ರೂ ದೊರೆಯಿತು.೩] ಎ.ಶರಣಪ್ಪ ತಂದೆ ಲೇಟ್ ಈರಣ್ಣ,೪೬ ವರ್ಷ, ಲಿಂಗಾಯತರು, ವ್ಯವಸಾಯ,ವಾಸ: ನೆಲಬೊಮ್ಮನಹಳ್ಳಿ ಗ್ರಾಮ. ಅಂತ ತಿಳಿಸಿದ್ದು ಇವನ ಮುಂದುಗಡೆ ಹಣ ರೂ:೪೫೦=೦೦ ರೂ ದೊರೆಯಿತು.೪] ಹೆಚ್.ವೀರೇಶ ತಂದೆ ಸಣ್ಣ ಹಿರಿಯಪ್ಪ,ವ:೩೬ ವರ್ಷ,ಆದಿ ಕರ್ನಾಟಕ ಜನಾಂಗ,ವ್ಯವಸಾಯ,ವಾಸ:ನೆಲಬೊಮ್ಮನಹಳ್ಳಿ ಗ್ರಾಮ ಅಂತ ತಿಳಿಸಿದ್ದು ಇವನ ಮುಂದುಗಡೆ ಹಣ ರೂ:೬೫೦=೦೦ ರೂ ದೊರೆಯಿತು. ನಮ್ಮ ಜೊತೆಯಲ್ಲಿದ್ದ ಪಂಚರಿಗೆ ಓಡಿ ಹೋದ ವ್ಯಕ್ತಿಗಳ ಹೆಸರು ವಿಳಾಸ ಕೇಳಲಾಗಿ ಅವರು ಓಡಿ ಹೋದ ವ್ಯಕ್ತಿಗಳ ಹೆಸರು ೫] ಕಸಜ್ಜರ ಸಿದ್ದೇಶ ತಂದೆ ಲೇಟ್ ಮಾರಪ್ಪ,೪೦ ವರ್ಷ,ಗೊಲ್ಲರ ಜನಾಂಗ,ವ್ಯವಸಾಯ,ವಾಸ:ನೆಲಬೊಮ್ಮನಹಳ್ಳಿ ಗ್ರಾಮ.೬] ಬೊವ್ಮ್ಮಯ್ಯ ತಂದೆ ಯರ್ರಪ್ಪ,೩೫ ವರ್ಷ,ಗೊಲ್ಲರ ಜನಾಂಗ,ವ್ಯವಸಾಯ, ವಾಸ:ನೆಲಬೊಮ್ಮನಹಳ್ಳಿ ಗ್ರಾಮ ೭] ಗುರುಪಾದಪ್ಪ ತಂದೆ ಲೇಟ್ ದ್ಯಾಮಪ್ಪ,ವ:೩೫ ವರ್ಷ,ಗೊಲ್ಲರ ಜನಾಂಗ,ವ್ಯವಸಾಯ, ವಾಸ:ನೆಲಬೊಮ್ಮನಹಳ್ಳಿ ಗ್ರಾಮ ೮] ಬಸವರಾಜ ತಂದೆ ಲೇಟ್ ಕೊಟ್ರಬಸಪ್ಪ,೫೦ ವರ್ಷ, ಲಿಂಗಾಯತರು, ವ್ಯವಸಾಯ,ವಾಸ: ಕಡೇಕೊಳ ಗ್ರಾಮ ಅಂತ ತಿಳಿಸಿದರು.ಜೂಜಾಟದ ಸ್ಥಳದಲ್ಲಿ ೫೨ ಇಸ್ಪೇಟ್ ಎಲೆಗಳು ದೊರೆತಿದ್ದು, ೫೨ ಇಸ್ಪೇಟ್ ಎಲೆಗಳನ್ನು ಮತ್ತು ಇಸ್ಪೇಟ್ ಜೂಜಾಟದ ಒಟ್ಟು ಹಣ ೨೫೦೦=೦೦ ರೂಗಳನ್ನು ರಾತ್ರಿ ೯-೪೫ ಗಂಟೆಯಿಂದ ೧೦-೪೫ ಗಂಟೆಯ ವರೆಗೆ ಪಂಚರ ಸಮಕ್ಷಮ ಪಂಚನಾಮೆ ಮೂಲಕ ಜಪ್ತು ಮಾಡಿಕೊಂಡು ಮೇಲ್ಕಂಡ ೪ ಜನ ವ್ಯಕ್ತಿಗಳಿಗೆ ವಶಕ್ಕೆ ತೆಗೆದು ಕೊಂಡು ಜಪ್ತು ಮಾಡಿಕೊಂಡ ಇಸ್ಪೇಟ್ ಎಳೆಗಳು,ಮತ್ತು ಜೂಜಾಟದ ಹಣ ರೂ:೨೫೦೦=೦೦ ರೂಗಳನ್ನು ಹಾಗು ಪ್ರತಿವಾದಿಗಳಿಗೆ ನನಗೆ ಒಪ್ಪಿಸಿ ವರದಿ ಸಲ್ಲಿಸಿದ್ದನ್ನು ಸ್ವೀಕರಿಸಿ ಪ್ರಕರಣ ನೊಂದಾಯಿಸಿಕೊಂಡು ಮಾನ್ಯ ಘನ ನ್ಯಾಯಾಲಯಕ್ಕೆ ಸದರಿ ಎನ್.ಸಿ ಪ್ರಕರಣವನ್ನು ಪ್ರ.ವ.ವರದಿ ದಾಖಲು ಮಾಡಿಕೊಂಡು ತನಿಖೆ ನಡೆಸಲು ಪರವಾನಿಗೆ ಕೋರಿದ್ದು, ಮಾನ್ಯ ನ್ಯಾಯಾಲಯವು ಸದರಿ ಎನ್.ಸಿ ಪ್ರಕರಣವನ್ನು ಪ್ರ.ವ.ವರದಿ ದಾಖಲು ಮಾಡಿಕೊಂಡು ತನಿಖೆ ನಡೆಸಲು ಪರವಾನಿಗೆ ನೀಡಿದ್ದನ್ನು ಈ ದಿನ ದಿನಾಂಕ:-22-12-2015 ರಂದು ಮಧ್ಯಾಹ್ನ 12-00 ಗಂಟೆಗೆ ನ್ಯಾಯಾಲಯಕ್ಕೆ ಹೋಗಿದ್ದ ಪಿ.ಸಿ 312 ರವರು ಠಾಣೆಯಲ್ಲಿ ತಂದು ಒಪ್ಪಿಸಿದ್ದನ್ನು ಸ್ವೀಕರಿಸಿ ಪ್ರಕರಣವನ್ನು ದಾಖಲುಮಾಡಿಕೊಂಡಿರುತ್ತೇನೆ.
Kottur PS
5 Cr.No:0194/2015
(IPC 1860 U/s 34,504,448,323,324 )
22/12/2015 Under Investigation
CASES OF HURT - Simple Hurt
Brief Facts :  ದಿನಾಂಕ 22-12-15 ರಂದು ಬೆಳಗ್ಗೆ 9-15  ಗಂಟೆಗೆ ಪಿರ್ಯಾದಿ ಠಾಣೆಗೆ ಹಾಜರಾಗಿ ನೀಡಿದ ಹೇಳಿಕೆ ದೂರನ್ನು ಸ್ವೀಕರಿಸಿ ನೋಡಲಾಗಿ. ದಿನಾಂಕ 21-12-15 ರಂದು ನಾಗರಕಟ್ಟೆಯಲ್ಲಿರುವ ಪಂಚಾಯ್ತಿಯಲ್ಲಿ ಕೆಲಸ ಮುಗಿಸಿಕೊಂಡು ಸಂಜೆ 6-00 ಗಂಟೆಗೆ ಪಿರ್ಯಾದಿ ಮನೆಗೆ ಬಂದು ಮನೆಯಲ್ಲಿ ಅಂಗಿಬಿಚ್ಚಿ ಕೈಕಾಲು ತೊಳದುಕೊಳ್ಳು ಹೊರಗಡೆ ಬರುವಾಗ ಅದೇ ಸಮಯಕ್ಕೆ ಅದೇ ಗ್ರಾಮದ ವಾಸಿಗಳಾದ ಆರೋಪಿ 1] ಕೌಸಪ್ಪಳ ಶೇಖರಪ್ಪ 2] ಅಂಜಿನಮ್ಮ ಗಂಡ ಕೌಸಪ್ಪಳ ಶೇಖರಪ್ಪ 3] ರೇಣುಕಮ್ಮ 4] ಕುಮಾರಿ ಶಿಲ್ಪಾ ಇವರುಗಳು ಪಿರ್ಯಾದಿಯ ಮನೆಯೊಳಗೆ ಅಕ್ರಮ ಪ್ರವೇಶ ಮಾಡಿ ಪಿರ್ಯಾದಿಗೆ ಆರೋಪಿಗಳು ಲೇ ಸೂಳೆ ಮಗನೆ ನಮ್ಮ ಶಿಲ್ಪಾಳಿಗೆ ಅಜನ್ಮ ವೈರಿ ಎಂದು ಏಕೆ ಬೈದೆ ಅಂತ ಕೈಯಿಂದ ಕಪಾಳಕ್ಕೆ ಹೊಡೆದು, ಕುತ್ತಿಗೆಗೆ ಜಿಗಿರಿ, ಎಡಕೈ ತಿರುವಿ ರಟ್ಟೆಗೆ ಜಿಗಿರಿ, ಕಾಲಿನಿಂದ ಸೊಂಟಕ್ಕೆ, ಪಕ್ಕೆಗೆ ಒದ್ದು, ಆರೋಪಿ ಶೇಖರಪ್ಪನು ಅಲ್ಲೇ ಮನೆಯಲ್ಲಿದ್ದ ಕಟ್ಟಿಗೆಯಿಂದ ಪಿರ್ಯಾದಿಯ ಬೆನ್ನಿಗೆ ಹೊಡೆದ ಆಗ ಜಗಳ ಬಿಡಿಸಲು ಬಂದ ಸಾವಿತ್ರಮ್ಮ ಮತ್ತು ದೀಪಕ್ ಗೂ ಸಹ ಆರೋಪಿಗಳು ಕೈಗಳಿಂದ ಹೊಡೆದಿರುತ್ತಾರೆ ಅಂತ ನೀಡಿದ ಹೇಳಿಕೆ ದೂರಿನ ಮೇರೆಗೆ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ