Crime Key Report From To | ||||||||||||||||
Sl. No | FIR No | FIR Date | Crime Group - Crime Head | Stage of case | ||||||||||||
Brucepet PS | ||||||||||||||||
1 | Cr.No:0242/2015 (KARNATAKA EXCISE ACT, 1965 U/s 34 ) |
09/12/2015 | Under Investigation | |||||||||||||
KARNATAKA STATE LOCAL ACTS - Karnataka Excise Act 1965 | ||||||||||||||||
Brief Facts : | ದಿನಾಂಕ:09/12/15 ರಂದು ಬೆಳಗಿನ ಜಾವ 03-45 ಗಂಟೆಗೆ ಬಳ್ಳಾರಿ ನಗರದ ಮೋತಿ ಸರ್ಕಲ್ ಹತ್ತಿರ ಇರುವ ಭವಾನಿ ರವರ ಬೀಡಿ ಅಂಗಡಿ ಮುಂದುಗಡೆಯ ಸಾರ್ವಜನಿಕ ಸ್ಥಳದಲ್ಲಿ ಆಪಾದಿತರು ಅನಧಿಕೃತವಾಗಿ ಯಾವುದೇ ಪರವಾನಿಗೆ ಇಲ್ಲದೆ ಮದ್ಯ ಮಾರಾಟ ಮಾಡುತ್ತಿದ್ದಾಗ ಪಂಚರ ಸಮಕ್ಷಮ ಪೊಲೀಸ್ ಅದಿಕಾರಿ ಮತ್ತು ಸಿಬ್ಬಂದಿಯವರು ಸೇರಿ ದಾಳಿ ನೆಡೆಸಿ ರೂ.2080/-ಬೆಲೆ ಬಾಳುವ ವಿವಿಧ ಮಧ್ಯವನ್ನು, ನಗದು ಹಣ ರೂ.70/-ಗಳನ್ನು ಪಂಚನಾಮೆ ಅಡಿಯಲ್ಲಿ ಜಪ್ತು ಪಡಿಸಿಕೊಂಡಿದ್ದು, ಈ ಬಗ್ಗೆ ಆಪಾದಿತರ ವಿರುದ್ದ ಪ್ರಕರಣ ದಾಖಲಿಸಿದೆ. | |||||||||||||||
Chittavadagi PS | ||||||||||||||||
2 | Cr.No:0059/2015 (CODE OF CRIMINAL PROCEDURE, 1973 U/s 109 ) |
09/12/2015 | Under Investigation | |||||||||||||
CrPC - Security For Good Behaviour (Sec 109) | ||||||||||||||||
Brief Facts : | ದಿನಾಂಕ 09-12-2015 ರಂದು ಬೆಳಿಗ್ಗೆ 8-15 ಗಂಟೆಗೆ ಫಿರ್ಯಾದಿದಾರರು ಒಬ್ಬ ವ್ಯಕ್ತಿ ಮತ್ತು ವಿಶೇಷ ವರದಿಯನ್ನು ಹಾಜರು ಪಡಿಸಿದ ಸಾರಾಂಶ ದಿನಾಂಕ 09-12-15 ರಂದು ಬೆಳಗಿನ ಜಾವ 05-30 ಗಂಟೆಗೆ ಮಾನ್ಯ ಪಿ.ಐ ಸಾಹೇಬರ ಆದೇಶದಂತೆ ಪಿ.ಸಿ-438 ರವರನ್ನು ಜೊತೆಯಲ್ಲಿ ಕರೆದುಕೊಂಡು ಠಾಣಾ ಸರಹದ್ದಿನಲ್ಲಿ ಗುಡ್ ಮಾನರ್ಿಂಗ್ ಗಸ್ತಿಗೆ ಹೊರಟು ಗಸ್ತು ಮಾಡುತ್ತಾ ಬೆಳಿಗ್ಗೆ 8-00 ಗಂಟೆಗೆ ಬಸವೇಶ್ವರ ಬಡಾವಣೆ ಬಸವ ಮಂಟಪದ ಹತ್ತಿರ ಬಂದಾಗ ಒಬ್ಬ ವ್ಯಕ್ತಿ ಸಮವಸ್ತ್ರದಲ್ಲಿದ್ದ ಪೊಲೀಸ್ ರನ್ನು ನೋಡಿ ತನ್ನ ಮುಖವನ್ನು ತನ್ನಷ್ಟಕ್ಕೆ ತಾನೇ ಮರೆಮಾಚಿಕೊಂಡು ಪೊಲೀಸರಿಗೆ ಕಾಣದಂತೆ ವಸ್ತ್ರದ್ ಆಸ್ಪತ್ರೆ ಕಡೆಗೆ ಓಡಿ ಹೋಗಲು ಪ್ರಯತ್ನಿಸಿದವನನ್ನು ತಡೆದು ನಿಲ್ಲಿಸಿ ಹೆಸರು ವಿಳಾಸ ವಿಚಾರಿಸಲಾಗಿ ತೊದಲುತ್ತಾ ಮೊದಲು ತನ್ನ ಹೆಸರು ಶರಣಯ್ಯ ಎಂದು ತಿಳಿಸಿದ್ದು ಪುನ: ವಿಚಾರಿಸಲಾಗಿ ತನ್ನ ಹೆಸರು ಶಂಕ್ರಯ್ಯ ತಂದೆ ವೀರಯ್ಯ ವ. 26 ವರ್ಷ ಜಂಗಮ ಜನಾಂಗ, ಕೂಲಿ ಕೆಲಸ ವಾಸ. ಕಲ್ಯಾಣನಗರ, ಸಿದ್ದಿಪ್ರಿಯಾ ಕಲ್ಯಾಣಮಂಟಪದ ಹತ್ತಿರ, ಚಿತ್ತವಾಡಗಿ ಹೊಸಪೇಟೆ ಅಂತಾ ತಿಳಿಸಿದನು. ಸದರಿಯವನನ್ನು ಈ ವೇಳೆಯಲ್ಲಿ ಈ ಸ್ಥಳದಲ್ಲಿದ್ದ ಬಗ್ಗೆ ಹಾಗೂ ಅನುಮಾನಸ್ಪದವಾಗಿ ತಿರುಗಾಡುತ್ತಿರುವ ಬಗ್ಗೆ ವಿಚಾರಿಸಲು ಸಮರ್ಪಕವಾದ ಉತ್ತರ ನೀಡದೇ ಇದ್ದುದರಿಂದ ಸದರಿಯವನನ್ನು ಅಲ್ಲಿಯೇ ಬಿಟ್ಟಲ್ಲಿ ಯಾವುದಾದರೂ ಸಂಜ್ಞೆಯ ಅಪರಾಧ ಮಾಡಬಹುದೆಂದು ಶಂಕಿಸಿ ಮುಂಜಾಗ್ರತಾ ಕ್ರಮವಾಗಿ ವಶಕ್ಕೆ ತೆಗೆದುಕೊಂಡು ಬೆಳಿಗ್ಗೆ 8-15 ಗಂಟೆಗೆ ಠಾಣೆಗೆ ಬಂದು ಕೊಟ್ಟ ವರದಿಯ ಆಧಾರದ ಮೇರೆಗೆ ಪ್ರಕರಣ ದಾಖಲಿಸಿ ಕ್ರಮ ಜರುಗಿಸಿದೆ. | |||||||||||||||
Cowlbazar PS | ||||||||||||||||
3 | Cr.No:0360/2015 (CODE OF CRIMINAL PROCEDURE, 1973 U/s 110 ) |
09/12/2015 | Under Investigation | |||||||||||||
CrPC - Security For Good Behaviour (Sec 110) | ||||||||||||||||
Brief Facts : | ದಿನಾಂಕ 09/12/2015 ರಂಧು ಬೆಳಿಗ್ಗೆ 10-00 ಗಂಟೆಗೆ ಎ.ಎಸ್.ಐ ಜಟ್ಟಿಂಗೆಪ್ಪ, ಅಪರಾಧ ವಿಭಾಗದ ಸಿಬ್ಬಂದಿಯವರಾದ ಹೆಚ್.ಸಿ 344, ಪಿಸಿ 1142 ರವರೊಂದಿಗೆ ಠಾಣಾ ಸರಗಳ್ಳತನ ಪ್ರಕರಣಗಳ ಪತ್ತೆ ಕುರಿತು ಠಾಣಾ ಸರಹದ್ದಿನ ಏರಿಯಾಗಳಲ್ಲಿ ತಿರುಗಾಡುತ್ತಾ ಬೆಳಿಗ್ಗೆ 11-30 ಗಂಟೆಗೆ ವಿಧ್ಯಾನಗರದಲ್ಲಿ ಗಸ್ತು ಮಾಡುತ್ತಿರುವಾಗ ಭತ್ರಿ ರಸ್ತೆಯಲ್ಲಿ ಒಬ್ ವ್ಯಕ್ತಿ ಅನುಮಾನಸ್ಪದವಾಗಿ ನಿಂತಿದ್ದು ತನ್ನನ್ನು ತಾನು ಮರೆಮಾಚಿಕೊಂಡು ಓಡಿಹೋಗಲು ಪ್ರಯತ್ನಿಸಿದವನನ್ನು ಹಿಡಿದು ನೋಡಲು ಈತನು ಠಾಣೆಯ ವಿವಿಧ ಪ್ರಕರಣ ಗಳಲ್ಲಿ ಬಾಗಿಯಾಗಿರುವ ಹಳೆಯ ಎಂ.ಓ.ಬಿ ಆಸಾಮಿಯಾಗಿದ್ದು, ಹೆಸರು ಮೇಲ್ಕಂಡಂತೆ ತಿಳಿಸಿದ್ದು, ಇವನು ಪದೇಪದೇ ಅಪರಾಧ ವೆಸಗುವನಾಗಿದ್ದು, ಅಲ್ಲಿಯೇ ಬಿಟ್ಟಲ್ಲಿ ಪುನಃ ಯಾವುದಾದರೂ ಸ್ವತ್ತಿನ ಅಪರಾಧಗಳನ್ನು ಮಾಡುವ ಸಂಶಯ ಕಂಡುಬಂದಿದ್ದರಿಂದ ಮುಂಜಾಗ್ರತಾ ಕ್ರಮವಾಗಿ ಮದ್ಯಾಹ್ನ 12-15 ಗಂಟೆಗೆ ಠಾಣೆಗೆ ಕರೆತಂದು ಈತನ ವಿರುದ್ದ ಪ್ರರಕಣ ದಾಖಲಿಸಿಕೊಂಡು ತನಿಖೆಕೊಂಡಿರುತ್ತದೆ. | |||||||||||||||
Hospet Rural PS | ||||||||||||||||
4 | Cr.No:0179/2015 (KARNATAKA |
09/12/2015 | Under Investigation | |||||||||||||
MINOR MINERAL CONSISTENT RULE 1994 U/s 42,44 ; IPC 1860 U/s 379 ) | ||||||||||||||||
KARNATAKA STATE LOCAL ACTS - Karnataka Minor Mineral Consistent Rule 1994 | ||||||||||||||||
Brief Facts : | ದಿ:09/12/2015 ರಂದು ಬೆಳಿಗ್ಗೆ 9-15 ಗಂಟೆಗೆ ಮಾನ್ಯ ಡಿ.ಎಸ್.ಪಿ. ಸಾಹೇಬರು ಹೊಸಪೇಟೆ ರವರಿಗೆ ಹೊಸಪೇಟೆ ಕಡೆಯಿಂದ ಕಾರಿಗನೂರು ಕಡೆಗೆ ನಧಿಕೃತವಾಗಿ ಟ್ರಾಕ್ಟರ್ ನಲ್ಲಿ ಮರಳನ್ನು ಸಾಗಾಣಿಕೆ ಮಾಡುತ್ತಿದ್ದಾರೆಂದು ಬಂದ ಖಚಿತ ಮಾಹಿತಿ ಮೇರೆಗೆ ಮಾನ್ಯ ಪಿ.ಐ. ರವರ ಸೂಚನೆಯಂತೆ ಬಳ್ಳಾರಿ ಹೊಸಪೇಟೆ ಎನ್ಹೆಚ್.-63 ರಸ್ತೆಯಲ್ಲಿ ಹನುಮಂತಪ್ಪನ ಪೆಟ್ರೋಲ್ ಬಂಕ್ ಹತ್ತಿರ ಸಿಬ್ಬಂದಿಯೊಂದಿಗೆ ಕಾಯುತ್ತಾ ಇದ್ದಾಗ ಹಸಪೇಟೆ ಕಡೆಯಿಂದ ಒಂದು ಮರಳು ತುಂಬಿದ ಟ್ರಾಕ್ಟರ್ ನಂ:ಕೆ.ಎ35/:ಟಿ:6567 ಟ್ರಾಲಿ ನಂ: ಕೆ.ಎ:35/ ಟಿ:6568 ನೇದ್ದರ ಚಾಲಕನು ತನ್ನ ಟ್ರಾಕ್ಟರ್ ನಲ್ಲಿ ಟ್ರಾಕ್ಟರ್ ಮಾಲಿಕ ಕುಮಾರ್ ನಾಯ್ಕ ವಾಸ ಕಲ್ಲಹಳ್ಳಿ ರವರ ಸೂಚನೆಯಂತೆ ಸೂಚನೆಯಂತೆ ಸುಮಾರು 1500/- ಬೆಲೆಯ 2 ಟನ್ ಸಾದಾ ಮರಳನ್ನು ಯಾವುದೇ ಅಧಿಕೃತ ಪರವಾನಿಗೆ ಇಲ್ಲದೇ ಸಕರ್ಾರಕ್ಕೆ ಕಟ್ಟ ಬೇಕಾದ ರಾಜ ಧನವನ್ನು ಕಟ್ಟದೇ ಕಳ್ಳತನದಿಂದ ಅನಧಿಕೃತವಾಗಿ ಸಾದಾ ಮರಳನ್ನು ತುಂಬಿಕೊಂಡು ಬಂದಿದ್ದರಿಂದ ಪಪಂಚರ ಸಮಕ್ಷಮ ಜಪ್ತು ಮಾಡಿಕೊಂಡು ಆರೋಪಿ ಮತ್ತು ಟ್ರಾಕ್ಟರ್ ನೊಂದಿಗೆ ಬಂದು ಮುಂದಿನ ಕ್ರಮಕ್ಕಾಗಿ ನೀಡಿದ ವರದಿಯನ್ನು ಸ್ವೀಕರಿಸಿ ಗುನ್ನೆ ದಾಖಲು ಮಾಡಿ ತನಿಖೆ ಕೈ ಗೊಳ್ಳಲಾಗಿದೆ. | |||||||||||||||
5 | Cr.No:0180/2015 (CODE OF CRIMINAL PROCEDURE, 1973 U/s 110(E)(G) ) |
09/12/2015 | Under Investigation | |||||||||||||
CrPC - Security For Good Behaviour (Sec 110) | ||||||||||||||||
Brief Facts : | ಬಿ.ಟಿ. ಮರಿಯಪ್ಪ, ಎ.ಎಸ್.ಐ ಗ್ರಾಮೀಣ ಪೊಲೀಸ್ ಠಾಣೆ ಆದ ನಾನು ಘನ ನ್ಯಾಯಾಲಯದಲ್ಲಿ ನಿವೇದಿಸಿಕೊಳ್ಳುವುದೇನೆಂದರೆ, ನಾನು ಈ ದಿನ ದಿ:- 09/12/2015 ರಂದು ಬೆಳಿಗ್ಗೆ ಪಿ.ಸಿ. 32 ಶ್ರೀನಿವಾಸಲು ರವರಿಗೆ ಕರೆದುಕೊಂಡು ನಾಗೇನ ಹಳ್ಳಿ, ಬೆನಕಾಪುರ ಗ್ರಾಮಗಳ ಕಡೆಗೆ ಗ್ರಾಮ ಬೇಟಿ ಕರ್ತವ್ಯದ ನಿಮಿತ್ಯಾ ಹೋಗಿದ್ದು ಬೆನಕಾಪುರಕ್ಕೆ ಬೆಳಿಗ್ಗೆ 11 ಗಂಟೆಗೆ ಹೋಗಿದ್ದಾಗ ಮಸೀದಿ ಹತ್ತಿರ ಒಬ್ಬ ವ್ಯಕ್ತಿಯು ವಿನಾಕರಾಣ ಜನರಿಗೆ ತೊಂದರೆ ಮಾಡುತ್ತಾ ದುಭರ್ಾಷೆಗಳಿಂದ ಬೈಯುತ್ತಾ ಜನರಲ್ಲಿ ಭಯದ ವಾತಾವರಣ ಸೃಟ್ಟಿ ಮಾಡಿರುತ್ತಾನೆಂದು ತಿಳಿದು ಬಂದಿದ್ದು ಸದರಿ ಸ್ತಳಕ್ಕೆ ಹೋಗಿ ನೋಡಲಾಗಿ ಅಲ್ಲಿ ಒಬ್ಬ ವ್ಯಕ್ತಿಯು ಮಸೀದಿ ಹತ್ತಿರ ರಸ್ತೆಯಲ್ಲಿ ಓಡಾಡುವ ಸಾರ್ವಜನಿಕರಿಗೆ ಏರು ದ್ವನಿಯಲ್ಲಿ ದುಭರ್ಾಷೆಗಳಿಂದ ಬೈದಾಡುತ್ತಾ ಸಾರ್ವಜನಿಕರಲ್ಲಿ ಭಯದ ವಾತಾವರಣ ಸೃಷ್ಟಿ ಮಾಡಿ ಸಾರ್ವಜನಿಕರ ನೆಮ್ಮದಿಗೆ ಭಂಗ ಉಂಟು ಮಾಡುತ್ತಿರುವುದು ಕಂಡು ಬಂದಿದ್ದು, ಸದರೊ ವ್ಯಕ್ತಿಯನ್ನು ಹಿಡಿದುಕೊಂಡು ಹೆಸರು ವಿಳಾಸ ವಿಚಾರಿಸಲು ತನ್ನ ಹೆಸರು ನಾಗಪ್ಪ @ ಹೊಸಪೇಟೆ ನಾಗಪ್ಪ ತಂದೆ ದಿ: ಗಂಗಪ್ಪ, ವ: 45 ವರ್ಷ, ನಾಯಕರು, ಹಾಲು ವ್ಯಾಪಾರ, ವಾಸ: ಬೆನಕಾಪುರ, ಹೊಸಪೇಟೆ (ತಾ) ಎಂದು ತಿಳಿಸಿದ್ದು ಇತನ ಬಗ್ಗೆ ಗ್ರಾಮದಲ್ಲಿ ವಿಚಾರಿಸಿ ಕೇಳಲಾಗಿ ಸದರಿ ವ್ಯಕ್ತಿಯು ಆಗಾಗ್ಗೆ ಗ್ರಾಮದಲ್ಲಿ ವಿನಾಕಾರಣ ಸಾರ್ವಜನಿಕರ ನೆಮ್ಮಧಿಗೆ ಭಂಗ ಉಂಟಾಗುವಂತೆ ಸಾರ್ವಜನಿಕರಿಗೆ ಬೈದಾಡುತ್ತಾ ತೊಂದರೆ ಕೊಡುತ್ತಿರುವುದು ಖಚಿತವಾಗಿದ್ದರಿಂದ ಸದರಿ ವ್ಯಕ್ತಿಯು ಪದೇ ಪದೇ ಅದೇ ಕೃತ್ಯವನ್ನು ಮಾಡುತ್ತಾ ಸಾರ್ವಜನಿಕರಿಗೆ ತೊಂದರೆ ಮಾಡುತ್ತಿದ್ದರಿಂದ ಸದರಿ ವ್ಯಕ್ತಿಯಿಂದ ಮುಂದಿನ ದಿನಗಳಲ್ಲಿ ಅನಾಹುತವಾಗ ಬಹುದೆಂದು ಮುಂಜಾಗ್ರತೆ ಕ್ರಮಕ್ಕಾಗಿ ದಸ್ತಗಿರಿ ಮಾಡಿಕೊಂಡು ಠಾಣೆಗೆ ಮದ್ಯಾನ 12-15 ಗಂಟೆಗೆ ಕರೆದುಕೊಂಡು ಬಂದಿದ್ದು ಠಾಣೆಯಲ್ಲಿ ಗುನ್ನೆ ನಂ: 180/2015 ಕಲಂ 110 (ಇ) & (ಜಿ) ಸಿ.ಆರ್.ಪಿ.ಸಿ ಅಡಿಯಲ್ಲಿ ಪ್ರಕರಣ ದಾಖಲಿಸಿ ಕ್ರಮ ಜರುಗಿಸಿರುತ್ತೇನೆ. | |||||||||||||||
Kampli PS | ||||||||||||||||
6 | Cr.No:0164/2015 (CODE OF CRIMINAL PROCEDURE, 1973 U/s 102,41(D) ; IPC 1860 U/s 379 ) |
09/12/2015 | Under Investigation | |||||||||||||
THEFT - Of Automobiles - Of Two Wheelers | ||||||||||||||||
Brief Facts : | ಈ ದಿನ ದಿನಾಂಕ 09-12-2015 ರಂದು ಬೆಳಿಗ್ಗೆ 04-00 ಗಂಟೆಯಿಂದ ನಾನು, ಸಿಬ್ಬಂದಿಯವರೊಂದಿಗೆ ಕಂಪ್ಲಿ ಪಟ್ಟಣದಲ್ಲಿ ಪೆಟ್ರೋಲಿಂಗ್ ಮಾಡುತ್ತಿರುವಾಗ, ಬೆಳಿಗ್ಗೆ ಕಂಪ್ಲಿ-ಗಂಗಾವತಿ ರಸ್ತೆಯಲ್ಲಿ ಗಣೇಶ ಗುಡಿಯ ಹತ್ತಿರ ಹೋಗಿ ಬರುವ ವಾಹನಗಳನ್ನು ತಪಾಸಣೆ ಮಾಡುತ್ತಿರುವಾಗ ಬೆಳಿಗ್ಗೆ 07-50 ಗಂಟೆ ಸುಮಾರಿಗೆ ಗಂಗಾವತಿ ಕಡೆಯಿಂದ ಆರೋಪಿತನು 20.000/- ರೂ ಬೆಲೆಬಾಳುವ ಮೋಟಾರ್ ಸೈಕಲ್ ನಂ ಕೆಎ36/ಯು 9977 Cha-MBLHA10EJ9HM08651, Eng-HA10EA9HM53691, ನೇದ್ದನ್ನು ನಡೆಸಿಕೊಂಡು ಬಂದು, ಸದರಿ ಮೋಟಾರ್ ಸೈಕಲ್ ನಿಲ್ಲಿಸಲು ತಿಳಿಸಿದಾಗ, ಆರೋಪಿತನು ಓಡಿ ಹೋದವನಿಗೆ ಸಿಬ್ಬಂದಿಯವರು ಹಿಡಿದುಕೊಂಡು ಬಂದಾಗ, ಸದರಿ ವಾಹನದ ದಾಖಲಾತಿಗಳನ್ನು ಕೇಳಲಾಗಿ, | |||||||||||||||
ಸಿಂಧನೂರಿನಲ್ಲಿ ಕಳ್ಳತನ ಮಾಡಿಕೊಂಡು ಬಂದಿರುವುದಾಗಿ ತಿಳಿಸಿದ ಮೇರೆಗೆ, ಸದರಿ ಮೋಟಾರ್ ಸೈಕಲ್ಲನ್ನು ಪಂಚರನ್ನು ಸ್ಥಳಕ್ಕೆ ಬರಮಾಡಿಕೊಂಡು ಪಂಚರ ಸಮಕ್ಷಮ ಪಂಚನಾಮೆ ಮೂಲಕ ಜಪ್ತುಪಡಿಸಿಕೊಂಡು ಆರೋಪಿಯೊಂದಿಗೆ ಮಾಲು ಸಮೇತ ಠಾಣೆಗೆ ಬಂದು ಠಾಣಾ ಗುನ್ನೆ ನಂ 164/2015 ಕಲಂ 41(ಡಿ),102 ಸಿ.ಆರ್.ಪಿ.ಸಿ.ಮತ್ತು 379 ಐಪಿಸಿ ರೀತ್ಯಾ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತದೆ. | ||||||||||||||||
Kurugod PS | ||||||||||||||||
7 | Cr.No:0200/2015 (IPC 1860 U/s 323,324,341,504,506,34 ) |
09/12/2015 | Under Investigation | |||||||||||||
CASES OF HURT - Simple Hurt | ||||||||||||||||
Brief Facts : | ದಿನಾಂಕ: 07/12/2015 ರಂದು ಬೆಳಿಗ್ಗೆ 07:00ಗಂಟೆಗೆ ಪಿರ್ಯಾದಿದಾರರು ತಮ್ಮ ಬಯಲು ಜಾಗದಲ್ಲಿ ನಿಮರ್ಿಸಿರುವ ಗೇಟ್ಗೆ ಹಾಕಿರುವ ಕಾಮಂಕ್ರೇಟ್ಗೆ ನೀರು ಹಾಕುತ್ತಿದ್ದಾಗ, ಆರೋಪಿ 1.ಯಂಕಾರೆಡ್ಡಿ 2.ಯರಗೇರಿ ಸಿದ್ದಾರೆಡ್ಡಿ, 3.ಕನಕಚಲಪತಿ ರೆಡ್ಡಿ, 4. ನಾಗರೆಡ್ಡಿ ರವರು ಬಂದು, ಅವರಲ್ಲಿ ಯರಗೇರ ಸಿದ್ದಾರೆಡ್ಡಿಯು ಪಿರ್ಯಾದಿಗೆ ಅಜಾಮ ಸೂಳೆಮಕ್ಕಳೆ ಇಲ್ಲಿ ನಿಮ್ಮ ಜಾಗ ಇಲ್ಲ ಎಂದು ಹೇಳಿದರೂ ಬರುತ್ತೀರಿ ನಿಮ್ಮ ಮುಖ ನೋಡಬಾರದು ಎಂದು ಜಾತಿ ನಿಂದನೆ ಮಾಡಿ ಬೈದು, ಕೈಯಿಂದ ಕಪಾಳಕ್ಕೆ ಹೊಡೆದು, ಪಿರ್ಯಾದಿಯ ಬಲಗಾಲು ಹಿಡಿದು ತಿರುವಿರುತ್ತಾನೆ. ಕನಕಚಲಪತಿರೆಡ್ಡಿಯು ಕೈಯಿಂದ ಪಿರ್ಯಾದಿಯ ಬೆನ್ನಿಗೆ ಗುದ್ದಿರುತ್ತಾನೆ. ನಾಗಿರೆಡ್ಡಿಯು ಕೈಯಿಂದ ಪಿರ್ಯಾದಿದಾರರನ್ನು ಮುಂದಕ್ಕೆ ಹೋಗದಂತೆ ತಡೆದು ನಿಲ್ಲಿಸಿರುತ್ತಾನೆ. ಯಂಕಾರೆಡ್ಡಿಯು ಕಟ್ಟಿಗೆಯಿಂದ ಪಿರ್ಯಾದಿದಾರರ ಬಲಮೊಣಕಾಲುಗೆ ಹೊಡೆದಿರುತ್ತಾನೆ. ಯಂಕಾರೆಡ್ಡಿಯು ನನಗೆ ಲೇ ಸೂಳೆ ಮಗನೆ ಇಲ್ಲಿಗೆ ನಿಮ್ಮನ್ನು ಬಿಡುವುದಿಲ್ಲ ಸಾಯಿಸುತ್ತೇನೆ ಎಂದು ಪ್ರಾಣ ಬೆದರಿಕೆ ಹಾಕಿರುತ್ತಾನೆ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುತ್ತದೆ. ಇದರೊಂದಿಗೆ ಪಿರ್ಯಾದಿ ನೀಡಿದ ದೂರಿನ ಅಸಲು ಪ್ರತಿಯನ್ನು ಲಗತ್ತಿಸಿ ನಿವೇಧಿಸಿಕೊಂಡಿರುತ್ತೇನೆ. | |||||||||||||||
8 | Cr.No:0201/2015 (IPC 1860 U/s 363 ) |
09/12/2015 | Under Investigation | |||||||||||||
KIDNAPPING AND ABDUCTION - Others | ||||||||||||||||
Brief Facts : | ಪಿರ್ಯಾದಿದಾರರು ತನ್ನ ಮೂರು ಮಕ್ಕಳನ್ನು ತನ್ನ ಅಕ್ಕನ ಊರಾದ ದಮ್ಮೂರು ಗ್ರಾಮದಲ್ಲಿ ಬಿಟ್ಟಿದ್ದು, ತನ್ನ ಹಿರಿಯ ಮಗ ಶ್ರೀನಿವಾಸನು ಈಗ್ಗೆ 3 ವರ್ಷಗಳಿಂದ ನನ್ನ ಅಕ್ಕನ ಮಕ್ಕಳೊಂದಿಗೆ ಕೆಲಸ ಮಾಡಿಕೊಂಡು ದಮ್ಮೂರು ವಾಸವಿದ್ದು, ಈಗ್ಗೆ 5 ತಿಂಗಳಿಂದ ದಮ್ಮೂರು ಗ್ರಾಮದ ವೆಂಕವದೂತ ತಾತನ ಮಠದ ಹತ್ತಿರ ಇರುವ ಸಕರ್ಾರಿ ಶಾಲೆಯಲ್ಲಿ ನನ್ನ ಮಕ್ಕಳಾದ ಬಿ.ವಿರೇಶನು 10ನೇ ತರಗತಿ ಹಾಗೂ ವಿರುಪಾಕ್ಷಿಯು 8ನೇ ತರಗತಿಯಲ್ಲಿ ವಿದ್ಯಾಬ್ಯಾಸ ಮಾಡುತ್ತಿರುತ್ತಾರೆ. ನನ್ನ ಮಗನಾದ ಬಿ.ವಿರೇಶನು ಸರಿಯಾಗಿ ಓದಲು ಹಾಗೂ ಬರೆಯಲು ಬರುತ್ತಿರಲಿಲ್ಲ. ಮತ್ತು ಸರಿಯಾಗಿ ಶಾಲೆಗೆ ಹೋಗುತ್ತಿರಲಿಲ್ಲ. ಈಗ್ಗೆ ಒಂದು ತಿಂಗಳಿಂದೆ ಪಿರ್ಯಾಧಿದಾರರು ದಮ್ಮೂರುಗೆ ಬಂದು ವಿರೇಶನು ಸರಿಯಾಗಿ ವಿದ್ಯಾಬ್ಯಾಸ ಮಾಡದ ಕಾರಣ ವಿರೇಶನಿಗೆ ಬುದ್ದಿ ಹೇಳಿ ಹೋಗಿದ್ದಳು. ದಿನಾಂಕ: 02/12/2015 ರಂದು ಬೆಳಿಗ್ಗೆ 09:00 ಗಂಟೆಗೆ ವಿರೇಶನು ಶಾಲೆಗೆ ಹೋಗುತ್ತೇನೆ ಎಂದು ಹೇಳಿ ದಮ್ಮೂರು ಗ್ರಾಮದ ತನ್ನ ಅಕ್ಕ ಶಾಂತಮ್ಮಳ ಮನೆಯಿಂದ ಹೋಗಿ ತನ್ನ ಸ್ನೇಹಿತನಾದ ಮಹಾಂತೇಶನಿಗೆ ತನ್ನ ಫೋಟೋ ನೀಡಿ ನಾನು ಬಳ್ಳಾರಿ ಕಡೆಗೆ ಹೋಗುತ್ತಿದ್ದೇನೆ ಎಂದು ಹೇಳಿ ಹೋಗಿರುತ್ತಾನೆ. ಇಲ್ಲಿಯವರೆಗೆ ಹುಡುಕಾಡಿದರೂ ಸಿಕ್ಕಿರುವುದಲ್ಲ. ಕಾರಣ ಕಾಣೆಯಾದ ಬಾಲಕನನ್ನು ಪತ್ತೆಮಾಡಿಕೊಡಲು ಕೋರಿ ದೂರು. ಇದರೊಂದಿಗೆ ದೂರಿನ ಮೂಲ ಪ್ರತಿಯನ್ನು ಲಗತ್ತಿಸಿದೆ. | |||||||||||||||
Sirigeri PS | ||||||||||||||||
9 | Cr.No:0176/2015 (IPC 1860 U/s 379 ) |
09/12/2015 | Under Investigation | |||||||||||||
THEFT - Of Cultural - Others | ||||||||||||||||
Brief Facts : | ಪಿರ್ಯಾಧಿದಾರರು ದಿ;09/12/2015 ರಂದು ಮಧ್ಯಾಹ್ನ 3:15ಗಂಟೆಗೆ ಠಾಣೆಗ ಹಾಜರಾಗಿ ನೀಡಿದ ದೂರನ್ನು ಪಡೆದು ಪರಿಶೀಲಿಸಲು, ಸಂಜೀವಪ್ಪ ಹಾಗೂ ಬಾದನಹಟ್ಟಿ ಗ್ರಾಮದ ಹೇಮಣ್ಣ ಆತನಿಗೆ ಸುಮಾರು 170ಕುರಿಗಳನ್ನು ಸರಿಪಾಲಿಗೆ ಬಿಟ್ಟಿದ್ದು, ಒಟ್ಟು 370ಕುರಿಗಳನ್ನು ಸಂಜೀವಪ್ಪನು ಸಾಕುತ್ತಿದ್ದು, , ದಿ:-13/11/2015 ರಂದು ಚೆನ್ನಪಟ್ಟಣ ಗ್ರಾಮದ ಹತ್ತಿರ ಇರುವ ಸೂರಿಬಾಬು ಇವರ ಗದ್ದೆಯಲ್ಲಿ ನಮ್ಮ ಕುರಿಗಳನ್ನು ಒಂದು ವಾರದಿಂದ ಅಲ್ಲೆಯೇ ಬಿಟ್ಟು ಮೇಯಿಸುತ್ತಿದ್ದೇವು, ಅದೇ ದಿನ ರಾತ್ರಿ ಗದ್ದೆಯಲ್ಲಿ ತಂತಿ ಬಲೆ ಹಾಕಿ ಕುರಿಗಳನ್ನು ಅದರಲ್ಲಿ ಬಿಟ್ಟಿದ್ದೇವು, ಸು 11:45ಗಂಟೆೆಯವರೆಗೆ ನಾನು ನನ್ನ ಹೆಂಡತಿ, ಮಗ, ಮತ್ತು ರಾಹುಲ್, ಶರಣಪ್ಪ ಕುರಿಗಳನ್ನು ನೋಡಿಕೊಂಡು ನಂತರ ಮಲಗಿದೆವು, ನಂತರ ಬೆಳಗಿನ ಜಾವ 5:30ಗಂಟೆೆ ಸುಮಾರಿಗೆ ನಾವುಗಳು ಎದ್ದು ಕುರಿಗಳ ಹಾಲು ಕರಿಯಲು ಹೋದಾಗ, ಕುರಿಗಳ ಗುಂಪು ಕಡಿಮೆ ಕಂಡು ಅವುಗಳನ್ನು ಎಣಿಸಿ ನೋಡಲು ಒಟ್ಟು 70ಕುರಿಗಳು ಕಾಣಲಿಲ್ಲ, ಅಲ್ಲಲ್ಲಿ ಉರಿ ತುಂಡುಗಳು ಬಿದ್ದಿದ್ದನ್ನು ನೋಡಿ, ತಕ್ಷಣ ನಾನು ನಮ್ಮವರು ಸೇರಿ ಸುತ್ತಮುತ್ತಲಿನ ಏರಿಯಾಗಳಲ್ಲಿ ಹುಡುಕಾಡಿ ವಿಚಾರಿಸಿ ನೋಡಲು ಕುರಿಗಳ ಬಗ್ಗೆ ಸುಳಿವು ಸಿಗಲಿಲ್ಲ, ಈ ಬಗ್ಗೆ ಹೇಮಣ್ಣನಿಗೂ ವಿಷಯ ತಿಳಿಸಿದೆನು, ನಂತರ ನಾನು ಹೇಮಣ್ಣ ಇತರರು ಸೇರಿ ಕುರಿ ಸಂತೆ ಮಾಡುವ ಊರುಗಳಲ್ಲಿ, ಸಿಂಧನೂರು, ರಾಯಚೂರು, ಬಳ್ಳಾರಿ, ಶಿವಮೊಗ್ಗ, ಶಿಕಾರಿಪುರ, ಹಾಸನ, ಆಂಧ್ರದ ಗಡಿ ಭಾಗಗಳ ಪ್ರದೇಶಗಳಲ್ಲಿ ಎಲ್ಲಾ ಕಡೆ ಹುಡುಕಡಿ ವಿಚಾರಿಸಿ ನೋಡಿ, ಇಲ್ಲಿಯವರೆಗೂ ನಮ್ಮ್ಮ ಕುರಿಗಳು ಪತ್ತೆಯಾಗದಿದ್ದರಿಂದ, ಈ ದಿನ ತಡವಾಗಿ ಠಾಣೆಗೆ ಬಂದು 370ಕುರಿಗಳಲ್ಲಿ, ಸುಮಾರು 4ಲಕ್ಷರೂಗಳು ಬೆಲೆ ಬಾಳುವ 70ಕುರಿಗಳನ್ನು ಯಾರೋ ಕಳ್ಳರು ಕುರಿ ಕಾಲುಗಳಿಗೆ ಉರಿ ಕಟ್ಟಿಕೊಂಡು ಯಾವುದೋ ವಾಹನದಲ್ಲಿ ಹಾಕಿಕೊಂಡು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಕಾರಣ ನಮ್ಮ ಕುರಿಗಳನ್ನು ಪತ್ತೆಹಚ್ಚಿ ಕಳ್ಳರ ವಿರುದ್ದ ಮುಂದಿನ ಕಾನೂನು ಕ್ರಮ ಜರುಗಿಸಬೇಕೆಂದು ದೂರು ಇದ್ದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಡಿರುತ್ತದ. | |||||||||||||||
Siruguppa PS | ||||||||||||||||
10 | Cr.No:0252/2015 (CODE OF CRIMINAL |
09/12/2015 | Under Investigation | |||||||||||||
PROCEDURE, 1973 U/s 107 ) | ||||||||||||||||
CrPC - Security For Good Behaviour (Sec 107 ) | ||||||||||||||||
Brief Facts : | ಸಿರುಗುಪ್ಪ
ಪೊಲೀಸ್ ಠಾಣೆಯ ಪ್ರಭಾರಾಧಿಕಾರಿ ರಘು ಎನ್. ಪಿ.ಎಸ್.ಐ. [ಕಾ-ಸು] ಆದ ನಾನು ತಮ್ಮ ಘನ
ನ್ಯಾಯಾಲಯದಲ್ಲಿ ಈ ಮೂಲಕ ನಿವೇಧಿಸಿಕೊಂಡಿರುವ ವರದಿಯೇನೆಂದರೆ, ಮೇಲ್ಕಾಣಿಸಿದ ಪ್ರತಿವಾದಿಗಳು
ಸಿರುಗುಪ್ಪ ಪೊಲೀಸ್ ಠಾಣಾ ವ್ಯಾಪ್ತಿಯ ನಾಗರಾಳ್ ಗ್ರಾಮದಲ್ಲಿ ವಾಸವಾಗಿದ್ದು ಉಭಯ
ಪ್ರತಿವಾದಿಗಳು ಒಂದೇ ಜನಾಂಗದವರಾಗಿದ್ದು ಹಾಗೂ 3ನೇ ಅಣ್ಣ ತಮ್ಮಂದಿರಾಗಿರುತ್ತಾರೆ. ಇವರ
ಜಮೀನುಗಳು ನಾಗರಾಳ್ ಗ್ರಾಮ ವ್ಯಾಪ್ತಿಯಲ್ಲಿ ಒಂದೇ ಕಡೆಗೆ ಇರುತ್ತದೆ. '' ಎ '' ಗುಂಪಿನ
ಪ್ರತಿವಾದಿಗಳು ನಾಗರಾಳ್ ಗ್ರಾಮದಲ್ಲಿ ಸವರ್ೇ ನಂ. 16/ಬಿ-1 ಎ ಪೈಕಿ 1.17 ಎಕರೆ ಜಮೀನು
ಹೊಂದಿದ್ದು ಇವರಿಗೆ ಮಾತ್ರ ತಮ್ಮ ಜಮೀನಿನಲ್ಲಿ ತಿರುಗಾಡುವ ಅಧಿಕಾರ ಇದ್ದು ಈ ಬಗ್ಗೆ ಉಭಯರು
ಜಮೀನಿನಲ್ಲಿ ತಿರುಗಾಡು ವಿಷಯದಲ್ಲಿ ವಾದ ಮಾಡಿಕೊಂಡಿದ್ದರಿಂದ '' ಎ '' ಗುಂಪಿನ
ಪ್ರತಿವಾದಿಗಳು ದಿ.03-10-15 ರಂದು ಮಾನ್ಯ ನ್ಯಾಯಾಲಯದಲ್ಲಿ ಓ.ಎಸ್. ನಂ. 199/15 ರಲ್ಲಿ
ದಾವೆ ಹೋಡಿದ್ದರಿಂದ ಮಾನ್ಯ ನ್ಯಾಯಾಲಯವು ದಿನಾಂಕ;17-10-15 ರಂದು '' ಖಿ ಜ ಆಜಜಿಜಟಿಜಚಿಟಿಣ ಠಜಿ ಚಿಟಿಥಿಛಠಜಥಿ ಛಿಟಚಿಟಟಿರ
ಣಟಿಜಜಡಿ ಣಜ ಜಜರಜಟಿಜಚಿಟಿಣ ಚಿಡಿಜ ಜಡಿಜಛಥಿ ಡಿಜಣಡಿಚಿಟಿಜಜ ಜಿಡಿಠಟ ಟಿಣಜಡಿಜಿಜಡಿಟಿರ ಟಿ
ಣಜ ಣಣ ಟಚಿಟಿಜ ಛಜಚಿಡಿಟಿರ ಖಥಿ.ಟಿಠ.16/ಃ1ಂ ಟಜಚಿಣಡಿಟಿರ 1-17 ಚಿಛಿಡಿಜ ಣಣಚಿಣಜಜ ಚಿಣ
ಓಚಿರಚಿಡಿಚಿಚಿಟ ತಟಟಚಿರಜ, ಡಿಣರಣಠಿಠಿಚಿ ಖಿಚಿಟಣಞ, ಃಚಿಟಟಚಿಡಿ ಆಣಡಿಛಿಣ ಛಥಿ ಚಿಟಿ
ಠಡಿಜಜಡಿ ಠಜಿ ಣಜಟಠಿಠಡಿಚಿಡಿಥಿ ಟಿರಿಣಟಿಛಿಣಠಟಿ ಣಟಟ ಣಜ ಜಠಿಠಚಿಟ ಠಜಿ ಣಜ ಣಣ '' ಎಂದು
ಆದೇಶ ಹೊರಡಿಸಿರುತ್ತಾರೆ. . '' ಎ ಮತ್ತು ಬಿ '' ಗುಂಪಿನವರು ಒಂದೇ ಗ್ರಾಮದಲ್ಲಿ ವಾಸವಾಗಿದ್ದು ಹಾಗೂ ಒಂದೇ ಸಮಯದಾಯಕ್ಕೆ ಸೇರಿದವರಾಗಿದ್ದು ಇವರಿಬ್ಬರ ಮಧ್ಯೆ ಪುನಃ ವೈ ಮನಸ್ಸು ಉಂಟಾಗಿ ಜಗಳ ಮಾಡಿ ಸಾರ್ವಜನಿಕ ಶಾಂತತೆಗೆ ಭಂಗ ಉಂಟು ಮಾಡುವ ಹಾಗೂ ಜೀವಹಾನಿ ಮಾಡಿಕೊಳ್ಳುವ ಸಾದ್ಯತೆ ಇರುವುದರಿಂದ ಮುಂಜಾಗ್ರತಾ ಕ್ರಮವಾಗಿ ಈ ದಿವಸ ಎರಡೂ ಗುಂಪಿನ ಮೇಲೆ ಠಾಣೆಯ ಗುನ್ನೆ ನಂ:252/15 ಕಲಂ,107 ಸಿ.ಅರ್.ಪಿ.ಸಿ. ರೀತ್ಯ ಪ್ರಕರಣ ದಾಖಲಿಸಿ ತನಿಖೆ ಕೈಗೊಡಿರುತ್ತೇನೆ. ಮಾನ್ಯರು ಸದರಿಯವರಿಗೆ ಜಗಳ ಮಾಡದಂತೆ ಒಳ್ಳೆಯ ಹಾಗೂ ಸದ್ವರ್ಥನೆಯಿಂದ ಇರುವಂತೆ ಸೂಕ್ತ ಭದ್ರತೆ ಮುಚ್ಚಳಿಕೆಯನ್ನು ತೆಗೆದುಕೊಳ್ಳಬೇಕೆಂದು ಈ ಮೂಲಕ ಮಾನ್ಯ ನ್ಯಾಯಾಲಯಕ್ಕೆ ವರಧಿಯನ್ನು ನಿವೇದಿಸಿಕೊಂಡಿರುತ್ತೇನೆ. |
|||||||||||||||
ಬುಧವಾರ, ಡಿಸೆಂಬರ್ 9, 2015
PRESS NOTE OF 09/12/2015
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ