ಗುರುವಾರ, ಡಿಸೆಂಬರ್ 31, 2015

PRESS NOTE OF 31/12/2015

Crime Key Report From   To   
Sl. No FIR No FIR Date Crime Group - Crime Head Stage of case
Bellary Traffic PS
1 Cr.No:0196/2015
(IPC 1860 U/s 279,337,304A )
31/12/2015 Under Investigation
MOTOR VEHICLE ACCIDENTS FATAL - Other Roads
Brief Facts :  ದಿನಾಂಕ:- 21-12-2015 ರಂದು ಫಿರ್ಯಾಧಿದಾರರಾದ ಕುಮಾರಸ್ವಾಮಿ ತಂದೆ ಬಸಣ್ಣ, 30 ವರ್ಷ, ವಾಲ್ಮಿಕಿ ಜನಾಂಗ, ವ್ಯವಸಾಯ, ವಾಸ: ಹೊಸ ಚರಕುಂಟೆ ಗ್ರಾಮ, ಬಳ್ಳಾರಿ ತಾ:: ರವರ ಅಣ್ಣನವರಾದ ವೆಂಕಟೇಶ ವ: 37 ವರ್ಷ, ರವರು ಬಳ್ಳಾರಿ ಸಿಟಿ ಕಡೆಯಿಂದ ತಮ್ಮ ಊರಿಗೆ ಹೋಗಲು ಟಿ.ವಿ.ಎಸ್ ಎಕ್ಸೆಲ್ ಮೊಪೆಡ್ ನಂಬರ್ ಕೆಎ-34/ಇಬಿ-6790 ನೇದ್ದನ್ನು ಚಲಾಯಿಸಿಕೊಂಡು ಬಳ್ಳಾರಿ ನಗರದ ಬೊಮ್ಮನಹಾಳ್ ರಸ್ತೆಯ ಗೋ ಶಾಲೆಯ ಹತ್ತಿರ ಇರುವ ಕಾಟನ್ ಮಿಲ್ ಹತ್ತಿರ ರಸ್ತೆಯ ಎಡಬದಿಯಲ್ಲಿ ಹೋಗುತ್ತಿರುವಾಗ  ಅದೇ ವೇಳೆಗೆ ಎದುರುಗಡೆಯಿಂದ ಅಂದರೆ ಬೊಮ್ಮನಹಾಳ್ ರಸ್ತೆ ಕಡೆಯಿಂದ ಮಂಗಮ್ಮ ಕ್ಯಾಂಪಿನ ಪ್ರಸಾದ್ ಈತನು ಹಿರೋ ಹೊಂಡಾ ಪ್ಯಾಷನ್ ಮೋಟರ್ ಸೈಕಲ್ ನಂಬರ್ ಕೆಎ-37/ಜೆ-4341 ನೇದ್ದನ್ನು ಅತಿವೇಗ ಹಾಗು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬರುತ್ತಾ ರಸ್ತೆಯ ಎಡಬದಿಗೆ ಹೋಗದೇ ಸಂಪೂರ್ಣ ಬಲಬದಿಗೆ ಚಲಾಯಿಸುತ್ತಾ ಮೊಪೆಡ್ ಚಾಲಕನಾದ ವೆಂಕಟೇಶ ರವರಿಗೆ ಡಿಕ್ಕಿ ಹೊಡೆಸಿದ್ದರಿಂದ ವೆಂಕಟೇಶ ಹಾಗು ಪ್ರಸಾದ್ ಇಬ್ಬರು ವಾಹನಗಳ ಸಮೇತ ರಸ್ತೆ ಮೇಲೆ ಬಿದ್ದಿದ್ದು, ಪರಿಣಾಮ ವೆಂಕಟೇಶ ರವರ ಹಣೆಯ ಭಾಗದಲ್ಲಿ, ಮೂಗಿನಿಂದ ರಕ್ತ ಸೋರಿದ್ದು, ಪ್ರಸಾದ್ ಈತನಿಗೆ ಬಲಗಣ್ಣಿನ ಬಳಿ ರಕ್ತಗಾಯಗಳಾಗಿದ್ದು, ಗಾಯಗೊಂಡ ವೆಂಕಟೇಶ ಹಾಗು ಪ್ರಸಾದ್ ಇಬ್ಬರಿಗೆ  ಫಿರ್ಯಾದಿದಾರರು ಹಾಗು ತಿಪ್ಪೆಸ್ವಾಮಿ ರವರು 108 ಅಂಬುಲೆನ್ಸ್ ವಾಹನದಲ್ಲಿ ಚಿಕಿತ್ಸೆಗಾಗಿ ಬಳ್ಳಾರಿ ವಿಮ್ಸ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಿದ್ದು ಗಾಯಾಳುಗಳ ಪೈಕಿ ವೆಂಕಟೇಶ ಈತನು ಚಿಕಿತ್ಸೆಯಿಂದ ಫಲಕಾರಿಯಾಗದೇ ದಿನಾಂಕ 31-12-2015 ರಂದು ಬೆಳಗಿನ ಜಾವ 2-10 ಗಂಟೆಗೆ ಮೃತಪಟ್ಟಿರುವುದಾಗಿ ವಿಮ್ಸ್ ಆಸ್ಪತ್ರೆಯ ವೈದ್ಯರು ತಿಳಿಸಿದ್ದು ಕಾರಣ  ಮೇಲ್ಕಂಡ ಅಪಘಾತ ಪಡಿಸಿದ   ಹೀರೋ ಹೊಂಡಾ ಪ್ಯಾಷನ್ ಮೋಟರ್ ಸೈಕಲ್ ನಂಬರ್ ಕೆಎ-37/ಜೆ-4341 ನೇದ್ದರ ಚಾಲಕ ಪ್ರಸಾದ್ ಈತನ ವಿರುದ್ದ ಕಾನೂನು ರೀತ್ಯ ಕ್ರಮ ಜರುಗಿಸಲು ದೂರು ಇರುತ್ತದೆ.
Brucepet PS
2 Cr.No:0270/2015
(IPC 1860 U/s 379 )
31/12/2015 Under Investigation
THEFT - Of Automobiles - Of Two Wheelers
Brief Facts :  ದಿನಾಂಕ:25/12/2015 ರಂದು ರಾತ್ರಿ 10.00 ಗಂಟೆಯಿಂದ 10.25 ಗಂಟೆ ಮದ್ಯಾವಧಿಯಲ್ಲಿ ಲಾಲ್ ಕಮಾನ್ ನಲ್ಲಿರುವ ಫಿರ್ಯಾದಿದಾರರ ಸ್ನೇಹಿತ ಕುಮಾರಸ್ವಾಮಿ ರವರ ಮನೆ ಮುಂದೆ ನಿಲ್ಲಿಸಿದ್ದ ಫಿರ್ಯಾದಿದಾರರ ಕೆಂಪು ಬಣ್ಣದ ಬಜಾಜ್ ಸಿ.ಟಿ.100 ಮೋಟರ್ ಸೈಕಲ್ ನಂ. ಕೆಎ34-ಈಈ-0600 ಇದರ ಚಾಸಿ ನಂ. MD2A18AZXFWA01172 Engine No. DUZWFA64371ಮಾಡಲ್ 2015, ಇದರ ಅಂದಾಜು ಬೆಲೆ ರೂ.38,600/- ಗಳ ಬಾಳುವುದನ್ನು ಯಾರೋ ಕಳ್ಳರು ಕಳುವು ಮಾಡಿಕೊಂಡು ಹೋಗಿದ್ದು ಪತ್ತೆ ಮಾಡಿಕೊಡಲು ಇದ್ದ ದೂರಿನ ಮೇರೆಗೆ ಈ ಪ್ರಥಮ ವರ್ತಮಾನ ವರದಿ.
3 Cr.No:0271/2015
(IPC 1860 U/s 379 )
31/12/2015 Under Investigation
THEFT - Of Automobiles - Of Cars/Jeeps
Brief Facts :  ದಿನಾಂಕ:18/12/2015 ರಂದು ಬೆಳಗಿನ ಜಾವ 1.00ಗಂಟೆಯಿಂದ ಅದೇ ದಿನ ಬೆಳಿಗ್ಗೆ 7.00 ಗಂಟೆ ಮದ್ಯಾವಧಿಯಲ್ಲಿ ಬಳ್ಳಾರಿ ನಗರದ ರೂಪನಗುಡಿ ರಸ್ತೆಯ ವಾಲ್ಮೀಕಿ ಸರ್ಕಲ್ ಹತ್ತಿರವಿರುವ ಫಿರ್ಯಾದಿದಾರರ ಮನೆ ಮುಂದೆ ನಿಲ್ಲಿಸಿದ್ದ ಬಿಳಿ ಬಣ್ಣದ ಮಾರುತಿ ಸುಜಕಿ ಕಂಪನಿಯ ಓಮಿನಿ ವ್ಯಾನ್ ನೊಂದಣಿ ಸಂ.ಕೆಎ02-ಎಂ-2300 ಚಾಸಿ ನಂ.ST91INT899529 Engine No. F8BIN711623, 1992 ನೇ ಮಾಡಲ್, ಇದರ ಅಂದಾಜು ಬೆಲೆ 40,000/- ಗಳ ಬೆಲೆ ಬಾಳುವುದನ್ನು ಯಾರೋ ಕಳ್ಳರು ಕಳುವು ಮಾಡಿಕೊಂಡು ಹೋಗಿದ್ದು, ಸದರಿಯವರನ್ನು ಪತ್ತೆ ಮಾಡಿ ಕಾನೂನು ಕ್ರಮ ಜರುಗಿಸಲು ಇದ್ದ ದೂರಿನ ಮೇರೆಗೆ ಈ ಪ್ರಥಮ ವರ್ತಮಾನ ವರದಿ.
Hospet Extention PS
4 Cr.No:0066/2015
(CODE OF CRIMINAL PROCEDURE, 1973 U/s 110(E)(G) )
31/12/2015 Under Investigation
CrPC - Security For Good Behaviour (Sec 110)
Brief Facts  ಈ ದಿನ ದಿನಾಂಕ:-31-12-2015  ಈ ಮೂಲಕ ದೂರು ನೀಡುವದೇನೆಂದರೆ, ಹೊಸಪೇಟೆ ನಗರದಲ್ಲಿ ನಡೆದ ಕೋಮು ಗಲಭೆಯ  ಹಿನ್ನಲೆಯಲ್ಲಿ ಈ ದಿನ ದಿನಾಂಕ 31-12-2015 ರಂದು ಬೆಳಿಗ್ಗೆ 7 ಗಂಟೆಯಿಂದ ಮಧ್ಯಾನ 02-00 ಗಂಟೆಯವರೆಗೆ ಠಾಣೆಯ ಸರಹದ್ದಿನಲ್ಲಿ ಗಸ್ತು ಪರಿಶೀಲನೆಯಲ್ಲಿ ತಿರುಗಾಡುತ್ತ  ಸರಹದ್ದಿನ ಚಪ್ಪರದಹಳ್ಳಿಯಲ್ಲಿ ಬರುವ ಕರ್ನಾಟಕ ಎ.ಟಿ.ಎಂ. ಮುಂದೆ ಈ ದಿನ ದಿನ ಬೆಳಿಗ್ಗೆ 9 ಗಂಟೆಗೆ ಬರುತ್ತಿದ್ದಾಗ ಒಬ್ಬ ವ್ಯಕ್ತಿ ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದು, ಸದರಿಯವನು ಪೊಲೀಸರಾದ ನಮ್ಮನ್ನು ನೋಡಿ ತಪ್ಪಿಸಿಕೊಂಡು ಹೋಗಲು ಪ್ರಯತ್ನಿಸುತ್ತಿದ್ದವನಿಗೆ ಹಿಡಿದುಕೊಂಡು ವಿಚಾರಣೆ ಮಾಡಲು ತನ್ನ ಹೆಸರು ಅನ್ಸರ ಭಾಷ ತಂದೆ ಲೇಟ್ ವಲಿಸಾಬ್, ವ: 35 ವರ್ಷ, ಮುಸ್ಲಿಂ ಜನಾಂಗ,  ಮೆಕ್ಯಾನಿಕ್ ಕೆಲಸ, ವಾಸ: 8ನೇ ಕ್ರಾಸ್, ಎಂ.ಜೆ.ನಗರ, ಹೊಸಪೇಟೆ. ಎಂದು ತಿಳಿಸಿದ್ದು, ಸದರಿಯವನು ನಮ್ಮ ಠಾಣೆಯ ಗುನ್ನೆ ನಂ. 11/2005 ಕಲಂ.457-380 ಐ.ಪಿ.ಸಿ. ಪ್ರಕರಣದಲ್ಲಿ ಆರೋಪಿಯಾಗಿದ್ದು ನಮ್ಮ ಠಾಣೆಯ ಹಳೆ ಎಂ.ಓ.ಬಿ ಆಸಾಮಿಯಾಗಿದ್ದು ಸದರಿಯವನನ್ನು ಸ್ಥಳದಲ್ಲಿ ಹಾಗೆಯೇ ಬಿಟ್ಟಲ್ಲಿ ಯಾವುದಾದರೂ ಸ್ವತ್ತಿನ ಅಪರಾದ ಮಾಡ ಬಹುದೆಂದು ಹಾಗೂ ಯಾವುದಾರು ಕೋಮಿನ ಬಗ್ಗೆ ಬೈದಾಡಿ ಸಾರ್ವಜನಿಕರಲ್ಲಿ ಶಾಂತಿ ಕದಡುವ ಸಾಧ್ಯತೆ ಕಂಡು ಬಂದಿದ್ದರಿಂದ ಮುಂಜಾಗ್ರತೆಯ ಸಲುವಾಗಿ ಸದರಿಯವನನ್ನು 9-15 ಗಂಟೆಗೆ ವಶಕ್ಕೆ ತೆದುಕೊಂಡು ಠಾಣೆಗೆ ಬೆಳಿಗ್ಗೆ 9-30 ಗಂಟೆಗೆ  ಸದರಿಯವನನ್ನು ಕರೆದುಕೊಂಡು ಬಂದು ದೂರು ತಯಾರಿಸಿ ಸದ್ರಿಯವನನ್ನು  ಹಾಜರುಪಡಿಸಿದ್ದು, ಸದ್ರಿಯವನ ವಿರುದ್ದ ಕಲಂ.110.(ಇ&ಜಿ) ಸಿ.ಆರ್.ಪಿ.ಸಿ. ಅಡಿಯಲ್ಲಿ ದೂರು ದಾಖಲಿಸಿ  ಕ್ರಮ ಕೈಗೊಂಡಿದೆ
5 Cr.No:0067/2015
(CODE OF CRIMINAL PROCEDURE, 1973 U/s 110(E)(G) )
31/12/2015 Under Investigation
CrPC - Security For Good Behaviour (Sec 110)
Brief Facts  ಈ ದಿನ ದಿನಾಂಕ:-31-12-2015  ರಂದು ಬೆಳಿಗ್ಗೆ 10-30 ಗಂಟೆಗೆ ಪಿ.ಎಸ್.ಐ.(ಅ.ವಿ) ರವರು ಆರೋಪಿಯೊಂದಿಗೆ ಹಾಜರಪಡಿಸಿ ನೀಡಿದ ದೂರೆನೇಂದರೆ ಹೊಸಪೇಟೆ ನಗರದಲ್ಲಿ ನಡೆದ ಕೋಮು ಗಲಭೆಯ  ಹಿನ್ನಲೆಯಲ್ಲಿ ಈ ದಿನ ದಿನಾಂಕ 31-12-2015 ರಂದು ಬೆಳಿಗ್ಗೆ 7 ಗಂಟೆಯಿಂದ ಮಧ್ಯಾನ 02-00 ಗಂಟೆಯವರೆಗೆ ಠಾಣೆಯ ಸರಹದ್ದಿನಲ್ಲಿ ಗಸ್ತು ಪರಿಶೀಲನೆಯಲ್ಲಿ ತಿರುಗಾಡುತ್ತ  ಸರಹದ್ದಿನ ಚಪ್ಪರದಹಳ್ಳಿಯ ಅಂಬಾಭವಾನಿ ದೇವಸ್ಥಾನದ ಹತ್ತಿರ ಈ ದಿನ ದಿನ ಬೆಳಿಗ್ಗೆ 10-00 ಗಂಟೆಗೆ ಬರುತ್ತಿದ್ದಾಗ ಒಬ್ಬ ವ್ಯಕ್ತಿ ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದು, ಸದರಿಯವನು ಪೊಲೀಸರಾದ ನಮ್ಮನ್ನು ನೋಡಿ ತಪ್ಪಿಸಿಕೊಂಡು ಹೋಗಲು ಪ್ರಯತ್ನಿಸುತ್ತಿದ್ದವನಿಗೆ ಹಿಡಿದುಕೊಂಡು ವಿಚಾರಣೆ ಮಾಡಲು ತನ್ನ ಹೆಸರು ಖಾಜಾ @ ಮಹ್ಮದ್ ಖಾಜಾ ತಂದೆ ಅಬ್ದುಲ್ ಸಾಬ್, ವ: 25 ವರ್ಷ, ಮುಸ್ಲಿಂ ಜನಾಂಗ, ಹೋಟಲ್ ನಲ್ಲಿ ಕೆಲಸ, ವಾಸ: ರಾಮ ಟಾಕೀಸ್ ಹಿಂದೆ, ಎಸ್.ಆರ್.ನಗರ, ಹೊಸಪೇಟೆ ಎಂದು ತಿಳಿಸಿದ್ದು, ಸದರಿಯವನು ಠಾಣೆಯ ಗುನ್ನೆ ನಂ. 42/2005 ಮತ್ತು 57/2007 ಕಲಂ 379 ಐ.ಪಿ.ಸಿ ಪ್ರಕರಣದಲ್ಲಿ ನಮ್ಮ ಠಾಣೆಯ ಹಳೆ ಎಂ.ಓ.ಬಿ ಆಸಾಮಿಯಾಗಿದ್ದು ಸದರಿಯವನನ್ನು ಸ್ಥಳದಲ್ಲಿ ಹಾಗೆಯೇ ಬಿಟ್ಟಲ್ಲಿ ಯಾವುದಾದರೂ ಸ್ವತ್ತಿನ ಅಪರಾದ ಮಾಡ ಬಹುದೆಂದು ಹಾಗೂ ಯಾವುದೇ ಕೋಮಿನ ಬಗ್ಗೆ ಬೈದಾಡಿ  ಸಾರ್ವಜನಿಕರಲ್ಲಿ ಶಾಂತಿ ಕದಡುವ ಸಾಧ್ಯತೆ ಕಂಡು ಬಂದಿದ್ದರಿಂದ ಸದರಿಯವನನ್ನು 10-15 ಗಂಟೆಗೆ ವಶಕ್ಕೆ ತೆದುಕೊಂಡು ಠಾಣೆಗೆ ಬೆಳಿಗ್ಗೆ 10-30 ಗಂಟೆಗೆ  ಸದರಿಯವನನ್ನು ಕರೆದುಕೊಂಡು ಬಂದು ದೂರು ತಯಾರಿಸಿ ಸದ್ರಿಯವನನ್ನು  ಹಾಜರುಪಡಿಸಿದ್ದು, ಸದ್ರಿಯವನ ವಿರುದ್ದ ಕಲಂ.110.(ಇ&ಜಿ) ಸಿ.ಆರ್.ಪಿ.ಸಿ. ಅಡಿಯಲ್ಲಿ ದೂರು ದಾಖಲಿಸಿ  ಕ್ರಮ ಕೈಗೊಂಡಿದೆ..
Hospet Rural PS
6 Cr.No:0196/2015
(CODE OF CRIMINAL PROCEDURE, 1973 U/s 110(E)(G) )
31/12/2015 Under Investigation
CrPC - Security For Good Behaviour (Sec 110)
Brief Facts  ದಿನಾಂಕ:31/12/2015  ರಂದು ಬೆಳಿಗ್ಗೆ 09-05 ಗಂಟೆಗೆ ಠಾಣೆಯಲ್ಲಿರುವಾಗ್ಗೆ ಯಾರೋ ಒಬ್ಬ ವ್ಯಕ್ತಿಯು ಸಿದ್ದಾರ್ಥ ಎನಕ್ಲೇವ್ ಮುಂದೆ, ಅನುಮಾನಸ್ಪದವಾಗಿ ತಿರುಗಾಡುತ್ತಿದ್ದಾನೆಂದು ಮಾಹಿತಿ ಬಂದ ಮೇರೆಗೆ ನಾನು ಮತ್ತು ಸಿಬ್ಬಂದಿಯವರು ಹೋಗಿದ್ದು ಸದರಿ ಸ್ಥಳದಲ್ಲಿ ಯಾರೋ ಒಬ್ಬ ವ್ಯಕ್ತಿಯು ನಮ್ಮನ್ನು  ನೋಡಿ ತಮ್ಮ ಮುಖನ್ನು ಮರೆಮಾಚಿಕೊಂಡು ಓಡಲು ಪ್ರಯತ್ನಿಸಿದನು, ಅಷ್ಟರಲ್ಲಿ ಸಿಬ್ಬಂದಿಯವರು ಅವನನ್ನು ಬೆನ್ನುಹತ್ತಿ ಹಿಡಿದುಕೊಂಡು ಬಂದಿದ್ದು, ಅವನ ಹೆಸರು ವಿಳಾಸ ವಿಚಾರಿಸಲು ಮೇಲಿನಂತೆ ತಿಳಿಸಿದನು, ಈತನು ಠಾಣೆಯ ಹಳೆಯ ಎಂ.ಓ.ಬಿ. ಆಸಾಮಿಯಾಗಿದ್ದು,  ಸದರಿ ಸ್ಥಳದಲ್ಲಿ ಇರುವಿಕೆಯ ಬಗ್ಗೆ, ನಮ್ಮನ್ನು ನೋಡಿ ಮುಖ ಮರೆಮಾಚಿಕೊಂಡು ಓಡಿ ಹೋಗಿದ್ದರ ಬಗ್ಗೆ ವಿಚಾರಿಸಲು ಯಾವುದೇ ಸಮರ್ಪಕವಾದ ಉತ್ತರ ನೀಡಲಿಲ್ಲ. ಕಾರಣ,  ಸದರಿ ಆರೋಪಿತನನ್ನು ಇಲ್ಲಿಯೇ ಬಿಟ್ಟಲ್ಲಿ ಯಾವುದಾದರೂ ಸಂಜ್ಞೆಯ ಅಪರಾಧ ಮಾಡಬಹುದೆಂದು ಮುಂಜಾಗ್ರತಾ ಕ್ರಮವಾಗಿ ಆರೋಪಿತರನ್ನು ದಸ್ತಗಿರಿ ಮಾಡಿಕೊಂಡು ವಾಪಸ್ಸು ಠಾಣೆಗೆ ಬಂದು ಆರೋಪಿತನ ವಿರುದ್ದ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಗೊಳ್ಳಲಾಯಿತು
7 Cr.No:0197/2015
(IPC 1860 U/s 435 )
31/12/2015 Under Investigation
ARSON - Others
Brief Facts  ಪಿರ್ಯಾದಿದಾರರಾದ ಶ್ರಿ ಬಿ. ಗೌಸ್ ತಂದೆ ದಿ: ಬಿ. ಪೀರಾನ್ ಸಾಬ್, ವ: 39 ವರ್ಷ, ಮುಸ್ಲಿಂ ಜನಾಂಗ, ಕಿರಾಣಿ ಮರ್ಚಂಟ್, ವಾಸ: ಗೌಸ್ ಓ 
Brief Facts :  ರೋಜಾ ಮಸೀದಿ ಹತ್ತಿರ, 3 ನೇ ಕ್ರಾಸ್, 6 ನೇವಾರ್ಡ, ಹಂಪಿ ರಸ್ತೆ, ಹೊಸಪೇಟೆ ಇವರು ಠಾಣೆಗೆ ಬಂದು ಗಣಕೀಕೃತ ದೂರನ್ನು ನೀಡಿದ್ದು ಸಾರಾಂಶ: ಪಿರ್ಯಾದಿದಾರರು ಈಗ್ಗೆ 4-5 ತಿಂಗಳ ಹಿಂದೆ ಸೋವೆನಹಳ್ಳಿ ಗ್ರಾಮ ವಾಸಿಯಾದ ನಾಗರಾಜ ಎನ್ನುವವರ ಟಿ.ವಿ.ಎಸ್. ಎಕ್ಸೆಲ್ ಸೂಪರ್ ಮೋಟರ್ ಸೈಕಲ್ ನಂಬರ್ ಕೆ.ಎ.35-ಡಬ್ಲೂ-7780 ನೇದ್ದನ್ನು 20 ಸಾವಿರ ರೂಗಳಿಗೆ ಖರೀದಿ ಮಾಡಿಕೊಂಡಿದ್ದು ತನ್ನ ಹೆಸರಿಗೆ ಇನ್ನು ಬದಲಾವಣೆ ಮಾಡಿಸಿಕೊಂಡಿಲ್ಲವೆಂದು ನಿನ್ನೆ ದಿನ 30/12/2015 ರಂದು ಚಿತವಾಡ್ಗಿಯಲ್ಲಿರುವ ತನ್ನ ಚಿಕ್ಕಮ್ಮಳ ಮಗಳ ಮದುವೆ ಇದ್ದುದರಿಂದ ಮನೆಯವರೆಲ್ಲರು ಮದುವೆ ಹೋಗಿದ್ದು ತಾನು ಮದುವೆಗೆ ಹೋಗಿ ರಾತ್ರಿ 11-30 ಗಂಟೆಗೆ ಮನೆಗೆ ಬಂದು ಪ್ರತಿ ದಿನ ನಿಲ್ಲಿಸುವ ಸ್ಥಳದಲ್ಲಿ ತನ್ನ ಮೋಟರ್ ಸೈಕಲನ್ನು ನಿಲ್ಲಿಸಿ ಮಲಗಿಕೊಂಡಿದ್ದಾಗಿ ಮದ್ಯ ರಾತ್ರಿ 1-30 ಗಂಟೆ ಸುಮಾರಿಗೆ ಟೈರ್ ಒಡೆದ ಜೋರಾದ ಶಬ್ದ ಕೇಳಿ ಎದ್ದು ಬಂದು ನೋಡಿದಾಗ ತನ್ನ ಮೋಟರ್ ಸೈಕಲಗೆ ಬೆಂಕಿ ಹತ್ತಿ ಉರಿಯುತ್ತಿದ್ದು ಆಗ ನೀರು ಹಾಕಿ ಆರಿಸಿದ್ದು ಅಷ್ಟರಲ್ಲಿ ಮೋಟರ್ ಸೈಕಲ್ ಸುಟ್ಟು ಹೋಗಿದ್ದು ಯಾರೋ ದುಷ್ಕರ್ಮಿಗಳು ತನ್ನ ಮೋಟರ್ ಸೈಕಲಗೆ ಬೆಂಕಿ ಹಚ್ಚಿ ಹೋಗಿದ್ದು ಅರೋಪಿತರನ್ನು ಪತ್ತೆ ಮಾಡಿ ಕಾನೂನು ಕ್ರಮ ಜರುಗಿಸಬೇಕೆಂದು ಇದ್ದ ದೂರಿನ ಮೇರೆಗೆ ಠಾಣೆಯ ಗುನ್ನೆನಂಬರ್ 197/2015 ಕಲಂ: 435 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತೇನೆ.
8 Cr.No:0198/2015
(CODE OF CRIMINAL PROCEDURE, 1973 U/s 110(E)(G) )
31/12/2015 Under Investigation
CrPC - Security For Good Behaviour (Sec 110)
Brief Facts :  ದಿನಾಂಕ:31/12/2015  ರಂದು ಬೆಳಿಗ್ಗೆ 11-15 ಗಂಟೆಗೆ ನಾನು ಮತ್ತು ಸಿಬ್ಬಂದಿಯವರು ರಾಜೀವ್ ನಗರದ ದಿನೇಶ್ ರವರ ಬೀಗ ಹಾಕಿನ ಮನೆಯ ಮುಂದೆ ಗಸ್ತಿನಲ್ಲಿರುವಾಗ್ಗೆ ಯಾರೋ ಒಬ್ಬ ವ್ಯಕ್ತಿಯು ಅನುಮಾನಸ್ಪದವಾಗಿ ತಿರುಗಾಡುತ್ತಿದ್ದು, ನಮ್ಮನ್ನು  ನೋಡಿ ತಮ್ಮ ಮುಖನ್ನು ಮರೆಮಾಚಿಕೊಂಡು ಓಡಲು ಪ್ರಯತ್ನಿಸಿದನು, ಅಷ್ಟರಲ್ಲಿ ಸಿಬ್ಬಂದಿಯವರು ಅವನನ್ನು ಬೆನ್ನುಹತ್ತಿ ಹಿಡಿದುಕೊಂಡು ಬಂದಿದ್ದು, ಅವನ ಹೆಸರು ವಿಳಾಸ ವಿಚಾರಿಸಲು ಮೇಲಿನಂತೆ ತಿಳಿಸಿದನು, ಈತನು ಠಾಣೆಯ ಹಳೆಯ ಎಂ.ಓ.ಬಿ. ಆಸಾಮಿಯಾಗಿದ್ದು,  ಸದರಿ ಸ್ಥಳದಲ್ಲಿ ಇರುವಿಕೆಯ ಬಗ್ಗೆ, ನಮ್ಮನ್ನು ನೋಡಿ ಮುಖ ಮರೆಮಾಚಿಕೊಂಡು ಓಡಿ ಹೋಗಿದ್ದರ ಬಗ್ಗೆ ವಿಚಾರಿಸಲು ಯಾವುದೇ ಸಮರ್ಪಕವಾದ ಉತ್ತರ ನೀಡಲಿಲ್ಲ. ಕಾರಣ,  ಸದರಿ ಆರೋಪಿತನನ್ನು ಇಲ್ಲಿಯೇ ಬಿಟ್ಟಲ್ಲಿ ಯಾವುದಾದರೂ ಸಂಜ್ಞೆಯ ಅಪರಾಧ ಮಾಡಬಹುದೆಂದು ಮುಂಜಾಗ್ರತಾ ಕ್ರಮವಾಗಿ ಆರೋಪಿತರನ್ನು ದಸ್ತಗಿರಿ ಮಾಡಿಕೊಂಡು ವಾಪಸ್ಸು ಠಾಣೆಗೆ ಬಂದು ಆರೋಪಿತನ ವಿರುದ್ದ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಗೊಳ್ಳಲಾಯಿತು
Hospet Town PS
9 Cr.No:0270/2015
(IPC 1860 U/s 420 )
31/12/2015 Under Investigation
CHEATING - CHEATING
Brief Facts :  ಈ ದಿನ ದಿನಾಂಕ:31/12/2015 ರಂದು ಬೆಳಿಗ್ಗೆ 11:00 ಗಂಟೆಗೆ ಫಿರ್ಯಾದಿದಾರಾದ ಶ್ರೀ. ಡಿ.ಖಾಜಾ ಹುಸೇನ್ ತಂದೆ ಲೇಟ್ ಫಕ್ರುದ್ದೀನ್ ಸಾಬ್, ಇವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರು ಸಾರಾಂಶ: ನಿನ್ನೆ ದಿನಾಂಕ:30/12/2015 ರಂದು ಮಧ್ಯಾಹ್ನ 12:45 ಗಂಟೆಗೆ ಕೋಟೆ ಏರಿಯಾ ಹಳೆ ಮೇದಾರ ಓಣಿ ಓಂಕಾರೇಶ್ವರ ಗುಡಿ ಹತ್ತಿರ ಇರುವ ತಮ್ಮ ಮನೆಯಲ್ಲಿರುವಾಗ ತಮ್ಮ ಮೋ.ನಂ.9945680343 ನೇದ್ದಕ್ಕೆ ಮೋ.ನಂ.9973146487 ರಿಂದ ಕರೆ ಬಂದಿದ್ದು ಅದರಲ್ಲಿ ಒಬ್ಬ ವ್ಯಕ್ತಿ ಹಿಂದಿಯಲ್ಲಿ ಪಿರ್ಯಾದಿದಾರರ ಎ.ಟಿ.ಎಂ. ಕಾರ್ಡ ನಂಬರಿನ 16 ನಂಬರ ಮತ್ತು ಸಿಕ್ರೇಟ್ ಕೋಡನ್ನು ಪಡೆದು ಅವರ ಖಾತೆಯಿಂದ 24,500/- ರೂ ಗಳನ್ನು ಡ್ರಾ ಮಾಡಿಕೊಂಡು ನನಗೆ ಮೋಸ ಮಾಡಿದ ಅನಾಮಧೇಯ ವ್ಯಕ್ತಿಯ ವಿರುದ್ದ ಕಾನೂನು ಕ್ರಮ ಜರುಗಿಸಲು ಕೋರಿದೆ ಅಂತಾ ದೂರು ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದೆ.
Tekkalkota PS
10 Cr.No:0144/2015
(KARNATAKA POLICE ACT, 1963 U/s 78(III) )
31/12/2015 Under Investigation
 KARNATAKA POLICE ACT 1963 - Gambling - Matka (78 Class C)
Brief Facts :  ದಿನಾಂಕ; 21/12/2015 ರಂದು ಬೆಳಿಗ್ಗೆ 11-45 ಗಂಟೆಗೆ ಆರೋಪಿ ಕೆ.ನಾಗರಾಜನು ಉಡೇಗೋಳ್ ಗ್ರಾಮದ ಈರಣ್ಣದೇವರ ಕಟ್ಟೆಯ ಮೇಲೆ ಕುಳಿತು ಸಾರ್ವಜನಿಕರನ್ನು ಕರೆಯುತ್ತಾ ಇದ್ದು ಮಟಕಾ ನಸೀಬಿ ಜೂಜಾಟ ಇದರಲ್ಲಿ 1 ನಂಬರ್ಗೆ 1/- ರೂ. ಕಟ್ಟಿದರೆ, ಅದೇ ನಂಬರ್ ಬಂದರೆ 8೦/- ರೂಪಾಯಿ ಕೊಡುವುದಾಗಿ ಕೂಗಿ ಹೇಳುತ್ತಾ, ಬಂದಂತ ಸಾರ್ವಜನಿಕರಿಂದ ಹಣ ಪಡೆಯುತ್ತಾ ಮಟಕಾ ಚೀಟಿಗಳನ್ನು ಬರೆದುಕೊಡುತ್ತಿದ್ದುದ್ದನ್ನು ನೋಡಿ ಪಿಎಸ್ಐ ಸಾಹೇಬರು ಸಿಬ್ಬಂದಿಯವರ ಸಂಗಡ ಪಂಚರ ಸಮಕ್ಷಮ ದಾಳಿ ಮಾಡಿ ಹಿಡಿದು ಆರೋಪಿತನಿಂದ ನಗದು ಹಣ 1981/- ರೂ. ಮತ್ತು ಮಟಕಾ ಸಾಮಾಗ್ರಿಗಳನ್ನು ಜಪ್ತು ಪಡಿಸಿಕೊಂಡು, ಮಟಕಾ ಪಟ್ಟಿಯನ್ನು ಯಾರಿಗೆ ಕೊಡುತ್ತೀಯ ಎಂದು ಕೇಳಿದರೆ ನಿಟ್ಟೂರಿನ ಕುರುಬರ ಲಕ್ಷ್ಮಣರವರಿಗೆ ಕೊಡುವುದಾಗಿ ತಿಳಿಸಿದ್ದು, ಆರೋಪಿ ಮತ್ತು ಮಟಕಾ ಜೂಜಾಟದ ಹಣ ಹಾಗೂ ಸಾಮಾಗ್ರಿಗಳನ್ನು ಠಾಣೆಯಲ್ಲಿ ಒಪ್ಪಿಸಿ ಆರೋಪಿ ಕೆ.ನಾಗರಾಜ ಮತ್ತು ನಿಟ್ಟೂರು ಕುರುಬರ ಲಕ್ಷ್ಮಣ ರವರ ವಿರುದ್ದ ಕೊಟ್ಟ ದೂರನ್ನು ಪಡೆದು ಪ್ರಕರಣ ದಾಖಲು ಮಾಡಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ