ಶುಕ್ರವಾರ, ಡಿಸೆಂಬರ್ 11, 2015

PRESS NOTE OF 11/12/2015

Crime Key Report From   To   
Sl. No FIR No FIR Date Crime Group - Crime Head Stage of case
Bellary Rural PS
1 Cr.No:0532/2015
(IPC 1860 U/s 34,504,324 )
11/12/2015 Under Investigation
CASES OF HURT - Simple Hurt
Brief Facts  ದಿನಾಂಕ 11-12-2015 ರಂದು ಮದ್ಯಾಹ್ನ 1-00 ಗಂಟೆಗೆ ಫಿರ್ಯಾಧಿದಾರರಾದ ಶ್ರೀ. ಶಿವರಾಜ್ ತಂದೆ ಎರ್ರಿಸ್ವಾಮಿ ವ: 20 ವರ್ಷ ವಾಸ: ಸಿರಿವಾರ ಗ್ರಾಮ ರವರು ಠಾಣೆಗೆ ಹಾಜರಾಗಿ ದೂರು ನೀಡಿದ್ದು, ಸಾರಾಂಶವೇನೆಂದರೇ, ದಿನಾಂಕ: 10-12-2015 ರಂದು ರಾತ್ರಿ 9-00 ಗಂಟೆಯ ಸುಮಾರಿಗೆ ಫಿರ್ಯಾಧಿದಾರರು ಸಿರಿವಾರದ ಕೆಂಚಮ್ಮ ಗುಡಿ ಮುಂದೆ ಇದ್ದಾಗ ಆರೋಪಿತರಾದ ಸುಂಕಣ್ಣ, ತಿಪ್ಪೇಶ್, ಎರ್ರಿಸ್ವಾಮಿ, ಪ್ರಸಾದ್ ರವರು ಅಲ್ಲಿಗೆ ಬಂದಿದ್ದು, ಫಿರ್ಯಾಧಿದಾರರು ಕೂಲಿ ಹಣದಲ್ಲಿ ರೂ.800/- ರೂಗಳನ್ನು ಆರೋಪಿತರಿಗೆ ಕೊಟ್ಟಿದ್ದು, ಕೂಲಿ ಹಣದ ವಿಚಾರವಾಗಿ ಆರೋಪಿತರು ನಾವು 7 ಜನರು ಕೆಲಸ ಮಾಡಿದ್ದೇವೆ, ನಮಗೆ ರೂ.1500/- ನಲ್ಲಿ 1 ಸಾವಿರ ರೂಪಾಯಿ ಕೊಡು ಅಂತ ಪಿರ್ಯಾಧಿದಾರರೊಂದಿಗೆ ಜಗಳ ತೆಗೆದು ಬೈದಾಡಿ, ಕಟ್ಟಿಗೆಯಿಂದ ಕಲ್ಲಿನಿಂದ ಫಿರ್ಯಾಧಿದಾರರಿಗೆ ಹಾಗೂ ಬಿಡಿಸಲು ಬಂದ ಫಿರ್ಯಾಧಿದಾರರ ತಂದೆ ಎರ್ರಿಸ್ವಾಮಿ, ತಾಯಿ ಸುಂಕಮ್ಮ ಮತ್ತು ಅಣ್ಣ ಸುಂಕಣ್ಣ ರವರಿಗೆ ಹೊಡೆದು ರಕ್ತಗಾಯ ಹಾಗೂ ಒಳನೋವು ಪಡಿಸಿ ಪ್ರಾಣ ಬೆದರಿಕೆ ಹಾಕಿರುತ್ತಾರೆಂದು ಸದರಿಯವರ ಮೇಲೆ ಕಾನೂನು ಕ್ರಮ ಜರುಗಿಸಲು ಕೋರಿ ದೂರು ಇದ್ದ ಮೇರೆಗೆ ಈ ಪ್ರ.ವ.ವರದಿ ಸಲ್ಲಿಸಿದೆ.
Brucepet PS
2 Cr.No:0245/2015
(IPC 1860 U/s 363 )
11/12/2015 Under Investigation
KIDNAPPING AND ABDUCTION - Others
Brief Facts  ದಿನಾಂಕ: 06-12-15 ರಂದು ಸಂಜೆ 6-30 ಗಂಟೆ ಸುಮಾರಿಗೆ ಪಿರ್ಯಾದಿದಾರರ ಮಗನಾದ ಮಹ್ಮದ್ ಫಯಾಜ್ ರವರು ಪಿರ್ಯಾದಿದಾರರ ಹತ್ತಿರ ಹೋಗಿ ಅಮ್ಮ ರೂ 2/- ಕೊಡು ಅಂಗಡಿಗೆ ಹೋಗಿ ಬರುತ್ತೇನೆಂದು ಹೇಳಿ ಹೋದವನು ಮನೆಗೆ ಬಾರದೆ ಕಾಣೆಯಾಗಿರುತ್ತಾನೆ. ಕಾರಣ ತನ್ನ ಮಗ ಇನ್ನೂ ಅಪ್ರಪ್ತಾನಾಗಿದ್ದರಿಂದ ಯಾರೋ ನನ್ನ ಮಗನನ್ನು ಅಪಹರಣ ಮಾಡಿದಂತೆ ಕಂಡು ಬರುತ್ತದೆ ಎಂಬುದಾಗಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆಕೈಗೊಂಡಿದೆ.
Gudekote PS
3 Cr.No:0146/2015
(CODE OF CRIMINAL PROCEDURE, 1973 U/s 107 )
11/12/2015 Under Investigation
CrPC - Security For Good Behaviour (Sec 107 )
Brief Facts  ದಿನಾಂಕ 10/12/2015 ರಂದು  ರಾತ್ರಿ 08-00 ಗಂಟೆ ಸಮಯದಲ್ಲಿ ಹೆಚ್ ಸಿ 215 ರವರು ಯರ್ರದಮ್ಮನಹಳ್ಳಿ ಗ್ರಾಮಕ್ಕೆ ಭೇಟಿ ನೀಡಿ ಗ್ರಾಮದಲ್ಲಿ ಗಸ್ತು ಮಾಡಿ ಮಾಹಿತಿ ಸಂಗ್ರಹ ಮಾಡುವಾಗ, ಎ. ತಿಮ್ಮರೆಡ್ಡಿ ತಂದೆ ಉಜ್ಜಪ್ಪ 45 ವರ್ಷ, ಮಡಿವಾಳರ ಜನಾಂಗ, ಟೀ ಹೊಟೇಲ್ ಮಾಲೀಕ ವಾಸ: ಯರ್ರದಮ್ಮನಹಳ್ಳಿ ಗ್ರಾಮ, ಇತನು ಗ್ರಾಮದಲ್ಲಿ ಅಕ್ರಮವಾಗಿ ಸಾರ್ವಜನಿಕರಿಗೆ ಮದ್ಯ ಮಾರಾಟ ಮಾಡುವುದು ಈ ಬಗ್ಗೆ ಯಾರದಾರೂ ಕೇಳಿದರೆ ಅವರಿಗೆ ಅವಾಚ್ಯವಾಗಿ ಬೈಯುವುದು ಮಾಡುತ್ತಾ ಮದ್ಯಪಾನ್ ಮಾಡಿ ಜೋರಾಗಿ ಬಾಯಿ ಗದ್ದಲ ಮಾಡುವುದು ಮಾಡುತ್ತಾ, ಸಾರ್ವಜನಿಕರ ಶಾಂತತೆಗೆ, ನೆಮ್ಮದಿಗೆ, ಭಂಗವುಂಟಾಗುವಂತೆ ವರ್ತಿಸುವುದು ಮಾಡುತ್ತಾನೆಂದು ಸಾರ್ವಜನಿಕರು ಮತ್ತು ಗ್ರಾಮದಲ್ಲಿರುವ ಬಾತ್ಮೀದಾರರು ಮಾಹಿತಿ ತಿಳಿಸಿದ್ದು, ಅಕ್ರಮವಾಗಿ ಸಾರ್ವಜನಿಕರಿಗೆ ಮದ್ಯ ಮಾರಾಟ ಮಾಡಿ ಸಾರ್ವಜನಿಕರ ಶಾಂತತೆಗೆ, ನೆಮ್ಮದಿಗೆ ಭಂಗವುಂಟು ಮಾಡುವ ಸಂಭವವಿರುವುದಾಗಿ  ಬೆಳಿಗ್ಗೆ 07-30 ಗಂಟೆಗೆ ಹೆಚ್ ಸಿ 215 ರವರು ಠಾಣೆಗೆ ಬಂದು, ಸಾರ್ವಜನಿಕರ ಶಾಂತಿ, ನೆಮ್ಮದಿಗೆ ಭಂಗ ಉಂಟಾಗದಂತೆ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವ ಸಲುವಾಗಿ ಕ್ರಮ ಜರುಗಿಸಲು ಇದ್ದ ವಿಶೇಷ ವರದಿ ಮೇರಿಗೆ, ಈ ಮೇಲ್ಕಂಡ ಪ್ರತಿವಾದಿ ವಿರುದ್ದ ಮುನ್ನೆಚ್ಚರಿಕೆ ಕ್ರಮವಾಗಿ ಈ ಪ್ರಕರಣ ದಾಖಲಿಸಿರುತ್ತದೆ,
Kudligi PS
4 Cr.No:0203/2015
(KARNATAKA EXCISE ACT, 1965 U/s 32,34 )
11/12/2015 Under Investigation
KARNATAKA STATE LOCAL ACTS - Karnataka Excise Act 1965
Brief Facts  ಈ ದಿನ ದಿನಾಂಕ ೧೧/೧೨/೨೦೧೫ ರಂದು ಮದ್ಯಾಹ್ನ ೧೨-೦೦ ಗಂಟೆಗೆ ಮಾನ್ಯ ಪಿ.ಎಸ್.ಐ ರವರು ನೀಡಿದ ದೂರಿನ ಸಾರಾಂಶದಲ್ಲಿ ದಿನಾಂಕ:
Brief Facts :  -೧೧/೧೨/೨೦೧೫ ರಂದು ಬೆಳಿಗ್ಗೆ ೯-೦೦ ಗಂಟೆಗೆ ನಾನು ಕೂಡ್ಲಿಗಿ ಪೊಲೀಸ ಠಾಣೆಯಲ್ಲಿದ್ದಾಗ  ನನಗೆ ಬಂದ ಖಚಿತ ಮಾಹಿತಿಯಂತೆ ಕೈವಲ್ಯಾಪುರ ಗ್ರಾಮದ ಆನಂದ ಕುಮಾರ ಡಾಬದ ಮುಂದಿನ ಸಾರ್ವಜನಿಕ ಸ್ಥಳದಲ್ಲಿ  ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿರುವುದಾಗಿ ಖಚಿತ ಮಾಹಿತಿ ಬಂದ ಮೇರೆಗೆ ಠಾಣೆಯಲ್ಲಿ ಹಾಜರಿದ್ದ ಸಿಬ್ಬಂದಿಯವರಾದ ಪಿ.ಸಿಸ್, ೧೦೬೫,೧೭೪ ಹಾಗು ಮಾನ್ಯ ಡಿ.ಎಸ್.ಪಿ ಸಾಹೇಬರ ಸ್ಕ್ವಾಡ್ ಸಿಬ್ಬಂದಿಯವರಾದ ಹೆಚ್.ಸಿ ೨೧೬ ರುದ್ರಮುನಿ ಮತ್ತು ಪಿ.ಸಿ ೧೦೭೧ ಕಲ್ಲೇಶ್, ಪಿ.ಸಿ ೫೦೨ ಕೊಟ್ರೇಶ್ ರವರುಗಳಿಗೆ ಮಾಹಿತಿಯನ್ನು ತಿಳಿಸಿ ಹೆಚ್.ಸಿ ೨೧೬ರವರಿಗೆ ಇಬ್ಬರು ಪಂಚರನ್ನು ಕರೆದುಕೊಂಡು ಬರುವಂತೆ ತಿಳಿಸಿದ್ದು ಅದರಂತೆ ೧] ಚೌಡಪ್ಪ ತಂದೆ ಲೇಟ್ ಕೊತ್ಲಪ್ಪ, ೫೫ವರ್ಷ, ವ್ಯವಸಾಯ, ವಾಸ ಕೈವಲ್ಯಾಪುರ ೨]ಯು,ಡಿ.ಕೃಷ್ಣಪ್ಪ ತಂದೆ  ದೊಡ್ಡ ಚೌಡಪ್ಪ, ೪೯ವರ್ಷ, ಉಪ್ಪಾರ ಜನಾಂಗ, ವ್ಯವಸಾಯ, ವಾಸ ಕೈವಲ್ಯಾಪುರ ಗ್ರಾಮ ಕೂಡ್ಲಿಗಿ ತಾಲೂಕು ಬಳ್ಳಾರಿ ಜಿಲ್ಲಾ  ಇವರುಗಳನ್ನು ಕರೆದುಕೊಂಡು ಬಂದ್ದಿದ್ದು ಅವರಿಗೆ ಅಕ್ರಮವಾಗಿ ಮದ್ಯದ ಬಾಟಲಿಗಳನ್ನು ದಾಸ್ತಾನು ಮಾಡಿಕೊಂಡು ಅಕ್ರಮವಾಗಿ ಮಾರಾಟ ಮಾಡುತ್ತಿರುವ ಬಗ್ಗೆ ಮಾಹಿತಿಯನ್ನು ತಿಳಿಸಿ ದಾಳಿಯ ಸಮಯದಲ್ಲಿ ಹಾಜರಿದ್ದು ಪಂಚನಾಮೆಯನ್ನು ಬರೆಯಸಿಕೊಡಬೇಕೆಂದು ಕೇಳಿಕೊಂಡ ಮೇರೆಗೆ ಉಭಯ ಪಂಚರು ಒಪ್ಪಿ ಸದ್ರಿ ಪಂಚರು ಮತ್ತು ಮೇಲ್ಕಂಡ ಸಿಬ್ಬಂದಿಯವರೊಂದಿಗೆ ನಾನು ಈ ದಿನ ದಿನಾಂಕ ೧೧/೧೨/೨೦೧೫ ರಂದು ಬೆಳಿಗ್ಗೆ ೯-೩೦ ಗಂಟೆಗೆ ಜೀಪ್ ನಂಬರ್ ಕೆ.ಎ ೩೪ ಜಿ ೪೫೭ ನೇದ್ದರಲ್ಲಿ ಚಾಲಕ ಎ.ಪಿ.ಸಿ ೨೧ ರವರೊಂದಿಗೆ ಠಾಣೆಯನ್ನು ಬಿಟ್ಟು ೯-೪೫ ಗಂಟೆಗೆ ಕೈವಲ್ಯಾಪುರ ಗ್ರಾಮಕ್ಕೆ ಹೋಗಿ ಗ್ರಾಮ ಬಳಿಯ ಎನ್.ಹೆಚ್, ೧೩ ರಸ್ತೆಯ ಪಕ್ಕದಲ್ಲಿ ಜೀಪ್‌ನಿಲ್ಲಿಸಿ ನಡೆದುಕೊಂಡು ಎನ್.ಹೆಚ್.೧೩ ರಸ್ತೆಯ ಪಕ್ಕದಲ್ಲಿರುವ ಆನಂದ ಡಾಬದ ಹತ್ತಿರ ಹೋಗಿ ದೂರದಿಂದ ನಿಂತು ನೋಡಲಾಗಿ ಡಾಬದ ಮುಂದಿನ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿಯು ಒಂದು ರಟ್ಟಿನ ಬಾಕ್ಸ್ ನಲ್ಲಿ ಮದ್ಯದ ಬಾಟಲಿಗನ್ನು ಇಟ್ಟುಕೊಂಡು ಮಾರಾಟ ಮಾಡುತ್ತಿದ್ದು ಪಂಚರೊಂದಿಗೆ ಹಾಗು ಮೇಲ್ಕಂಡಸಿಬ್ಬಂದಿಯವರೊಂದಿಗೆ ಈ ದಿನ ಬೆಳಿಗ್ಗೆ ೧೦-೦೦ ಗಂಟೆಗೆ ದಾಳಿ ಮಾಡಿ ಮಾರಾಟ ಮಾಡುತ್ತಿದ್ದವನನ್ನು ಹಿಡಿದುಕೊಳ್ಳಲು ಕೊಂಡುಕೊಳ್ಳಲು ಬಂದಂತಹ ಜನರೆಲ್ಲರೂ ಓಡಿ ಹೋಗಿದ್ದು  ಸಿಕ್ಕವನನ್ನು ಹೆಸರು ವಿಳಾಸವನ್ನು ವಿಚಾರ ಮಾಡಲಾಗಿ ಆತನ ಹೆಸರು ೧] ಎ.ಮುರುಗೇಶ್ ತಂದೆ ಆರ್ಯಪಿಲೈ  ೫೩ ವರ್ಷ, ವಾಲ್ಮೀಕಿ ಜನಾಂಗ, ಹೊಟೇಲ್ ಕೆಲಸ, ವಾಸ ಕೈವಲ್ಯಾಪುರ ಗ್ರಾಮ, ಕೂಡ್ಲಿಗಿ ತಾಲೂಕು, ಬಳ್ಳಾರಿ ಜಿಲ್ಲಾ ಅಂತ ತಿಳಿಸಿದ್ದು ಆತನ ಬಳಿ ದಾಸ್ತಾನು ಮಾಡಿಕೊಂಡಿದ್ದ  ಮದ್ಯದ ಬಾಟಲಿಗಳನ್ನು ಪರಿಶೀಲಿಸಿ ನೋಡಲಾಗಿ ೩೮ ಮದ್ಯ ತುಂಬಿದ ೧೮೦ ಎಂ.ಎಲ್.ನ ಓಲ್ಡ್ ಟವರಿನ್ ವಿಸ್ಕೀ ಟೆಟ್ರಾಪ್ಯಾಕ್‌ಗಳಿದ್ದು ಒಂದರಬೆಲೆ ೫೮.೮೦/-ಅಂತ ಇದ್ದು ಎಲ್ಲಾ ಮದ್ಯದ ಒಟ್ಟು ಬೆಲೆ ೨೨೩೪/- ರೂಗಳಿರುತ್ತವೆ, ಮದ್ಯದ ಬಾಟಲಿಗಳನ್ನು ದಾಸ್ತಾನು ಮಾಡಿಕೊಂಡು ಮಾರಾಟ ಮಾಡುತ್ತಿದ್ದರ ಅಧಿಕೃತ ಪರವಾನಿಗೆಯನ್ನು ಕೇಳಲಾಗಿ ತನ್ನ ಬಳಿ ಯಾವುದೇಅಧಿಕೃತ ದಾಖಲಾತಿಗಳಿರುವುದಿಲ್ಲವೆಂದು ತಿಳಿಸಿದ್ದು ಇವುಗಳನ್ನು ಪಂಚರ ಸಮಕ್ಷಮ ಪಂಚನಾಮೆಯ ಮೂಲಕ ಜಪ್ತು ಪಡಿಸಿಕೊಂಡಿದ್ದು ಸ್ಯಾಂಪಲ್‌ಗಾಗಿ ೨ ಟೆಟ್ರಾಪ್ಯಾಕ್‌ಗಳನ್ನು ಎಫ್.ಎಸ್.ಎಲ್.ಗೆ ಕಳುಹಿಸುವ ಸಲುವಾಗಿ ಅವುಗಳನ್ನು ಪ್ರತ್ಯೇಕವಾಗಿ ಒಂದು ಬಿಳಿಯ ಬಟ್ಟೆಯಯಲ್ಲಿ ಹಾಕಿ ಬಾಯಿ ಕಟ್ಟಿ ಅರಗಿನಿಂದ ಸೀಲು ಮಾಡಿ, ಎಸ್.ಸಿ.ಜಿ ಅಂತಾ ಮುದ್ರೆ ಹಾಕಿ, ಪಂಚರ ಮತ್ತು ನನ್ನ ಸಹಿಯುಳ್ಳ ಚೀಟಿಯನ್ನು ಅಂಟಿಸಿ ಮೇಲ್ಕಂಡ ಟೆಟ್ರಾಪ್ಯಾಕ್‌ಗಳನ್ನು ಈ ದಿನ ಬೆಳಿಗ್ಗೆ ೧೦-೦೦ ಗಂಟೆಯಿಂದ ೧೧-೦೦  ಗಂಟೆಯವರೆಗೆ ಪಂಚರ ಸಮಕ್ಷಮ ಪಂಚನಾಮೆಯ ಮೂಲಕ ಜಪ್ತು ಪಡಿಸಿಕೊಂಡು ಮರಳಿ ಕೂಡ್ಲಿಗಿ ಪೊಲೀಸ್ ಠಾಣೆಗೆ ಬಂದು ಮದ್ಯಾಹ್ನ ೧೨-೦೦ ಗಂಟೆಗೆ ಮದ್ಯದ ಟೆಟ್ರಾಪ್ಯಾಕ್‌ಗಳನ್ನು ಆರೋಪಿಯನ್ನು  ಹಾಜರು ಪಡಿಸಿದ್ದು  ಆರೋಪಿಯ ವಿರುದ್ಧ ಮುಂದಿನ ಕ್ರಮ ಕೈಗೊಳ್ಳಲು ಸೂಚಿಸಿದೆ  ಎಂದು ಇದ್ದ ದೂರಿನ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿದೆ.
Kuduthini PS
5 Cr.No:0150/2015
(IPC 1860 U/s 279,304(A) ; INDIAN MOTOR VEHICLES ACT, 1988 U/s 187 )
11/12/2015 Under Investigation
MOTOR VEHICLE ACCIDENTS FATAL - State Highways
Brief Facts :  ದಿನಾಂಕ:- 10.12.2015 ರಾತ್ರಿ 8:45 ಗಂಟೆ ಸುಮಾರಿಗೆ ಪಿಯರ್ಾದಿದಾರನು  ಮತ್ತು ನಾಗರಾಜ, ದ್ಯಾವಣ್ಣ ಮತ್ತು ಅಂಜಿನಿ ಮತ್ತಿತರು ಸೇರಿ ಹೊಸದರೋಜಿ ಗ್ರಾಮದಲ್ಲಿ ಬಸ್ ನಿಲ್ದಾಣದಲ್ಲಿ ರಸ್ತೆಯ ಎಡಗಡೆ ಮಾತನಾಡಿಕೊಂಡು ನಿಂತುಕೊಂಡಿದ್ದಾಗ, ಅದೇ ವೇಳೆಗೆ ಟ್ರ್ಯಾಕ್ಟರ್ ನಂಬರ್ ಕೆಎ-37/ಟಿಬಿ-2329 ಮತ್ತು ಟ್ರಾಲಿ ನಂಬರ್ ಇರುವುದಿಲ್ಲ ನೇದ್ದರ ಚಾಲಕ ಮೇಘರಾಜ ಈತನು ಟ್ರ್ಯಾಕ್ಟರ್ ನ ಟ್ರಾಲಿಯಲ್ಲಿ ಕಬ್ಬಿಣದ ಮಡಿಕೆಯನ್ನು ಟ್ರಾಲಿಯಿಂದ ಎಡಗಡೆ ಸೈಡ್ ನಲ್ಲಿ ಬಂದಿದ್ದು,. ಟ್ರ್ಯಾಕ್ಟರ್ ನ್ನು ಅತೀವೇಗ ಮತ್ತು ಅಜಾಗರುಕತೆಯಿಂದ ಚಲಾಯಿಸಿಕೊಂಡು ರಸ್ತೆಯ ಎಡಗಡೆ ಪಕ್ಕದಲ್ಲಿ ನಿಂತಿದ್ದ ನಾಗರಾಜನಿಗೆ ಡಿಕ್ಕಿ ಹೊಡೆಸಿದ್ದರಿಂದ ನಾಗರಾಜನಿಗೆ ಹಣೆಗೆ ರಕ್ತಗಾಯವಾಗಿ, ಚಿಕಿತ್ಸೆ ಫಲಕಾರಿಯಾಗದೇ ದಿನಾಂಕ:- 11.12.2015 ರಂದು ಬೆಳಗಿನ ಜಾವ 4:30 ಗಂಟೆಗೆ ಮೃತಪಟ್ಟಿರುತ್ತಾನೆ. ಡಿಕ್ಕಿ ಹೊಡೆಸಿದ ನಂತರ ಟ್ರ್ಯಾಕ್ಟರ್ ಚಾಲಕನ ಅಪಘಾತವಾದ ಬಗ್ಗೆ ತಮ್ಮ ಮಾಲಿಕರಿಗೆ ತಿಳಿಸಿ ಬರುತ್ತೇನೆಂದು ಹೇಳಿ ಓಡಿ ಹೋಗಿರುತ್ತಾನೆ. ಮತ್ತೊಮ್ಮೆ ನೋಡಿದರೆ ಗುರ್ತಿಸುತ್ತೆನೆ.  ಅದ್ದರಿಂದ ಟ್ರ್ಯಾಕ್ಟರ್ ಚಾಲಕ ಮೇಘರಾಜನ ವಿರುದ್ದ ಕಾನೂನು ಕ್ರಮ ಕೈಗೊಳ್ಳಲು ಮನವಿ . ( ದೂರಿನ ಪ್ರತಿ ಲಗತ್ತಿಸಿದೆ)
Siruguppa PS
6 Cr.No:0254/2015
(INDIAN MOTOR VEHICLES ACT, 1988 U/s 183 )
11/12/2015 Under Investigation
MOTOR VEHICLE ACCIDENTS NON-FATAL - State Highways
Brief Facts :  ಪಿರ್ಯಾದಿದಾರರು ಸಿರುಗುಪ್ಪ ಸರಕಾರಿ ಆಸ್ಪತ್ರೆಯಲ್ಲಿ ನೀಡಿದ ದೂರಿನ ಸಾರಾಂಶವೇನೆಂದರೆ, ತನ್ನ ಲಾರಿಗೆ ತಾನೇ ಚಾಲಕನಾಗಿ ಕೆಲಸ ಮಾಡಿಕೊಂಡಿದ್ದು,  ನಾನು ಬೇತಂಚೆರ್ಲದಿಂದ ಗೋವಾ ನಗರಕ್ಕೆ ನನ್ನ ಲಾರಿ ನಂ. ಎಪಿ-21/ಟಿಯು-3555 ನೇದ್ದರಲ್ಲಿ ಪೌಡರ್ ಲೋಡನ್ನು ತೆಗೆದುಕೊಂಡು ಹೋಗಿ ಗೋವಾದಲ್ಲಿ ಅನ್-ಲೋಡ್ ಮಾಡಿ ನಂತರ ನಿನ್ನೆ ದಿನ ದಿನಾಂಕ; 10-12-15 ರಂದು ಗೋವಾದಿಂದ ಆದೋನಿಗೆ ಕೇಬರ್ ಡ್ರಂಗಳನ್ನು ಲೋಡ್ ಮಾಡಿಕೊಂಡು ಸಂಜೆ 6-00 ಗಂಟೆ ಸುಮಾರಿಗೆ ಗೋವಾ ಬಿಟ್ಟು ಈ ದಿನ ದಿನಾಂಕ; 11-12-15 ರಂದು ಬೆಳಿಗ್ಗೆ 8-45 ಗಂಟೆ 
ಸುಮಾರಿಗೆ ಸಿರುಗುಪ್ಪ ಆದೋನಿ ರಸ್ತೆಯಲ್ಲಿರುವ ತಾಯಮ್ಮ ದೇವಸ್ಥಾನದ ಹತ್ತಿರ ರಸ್ತೆಯ ಎಡಬದಿಗೆ ಅದೋನಿ ಕಡೆಗೆ ಹೋಗುತ್ತಿರುವಾಗ ಅದೇ ಸಮಯ ಆದೋನಿ ಕಡೆಯಿಂದ ಸಿರುಗುಪ್ಪ ಕಡೆಗೆ ಕೆ.ಎಸ್.ಆರ್.ಟಿ.ಸಿ ಬಸ್ ಬರುತ್ತಿದ್ದು ಸದರಿ ಬಸ್ ಚಾಲಕನು ಬಸ್ನ್ನು ಅತೀವೇಗ ಮತ್ತು ಅಜಾಗರೂಕತೆಯಿಂದ ನಡೆಸಿಕೊಂಡು ಬಂದು ಏಕಾಏಕಿ ಬಸ್ನ್ನು ಬಲಕ್ಕೆ ತಿರುಗಿಸಿ ರಸ್ತೆಯ ಎಡಕ್ಕೆ ಹೋಗುತ್ತಿದ್ದ ನನ್ನ ಲಾರಿಗೆ ಡಿಕ್ಕಿ ಹೊಡೆಸಿ ಅಪಘಾತ ಪಡಿಸಿದ ಪರಿಣಾಮ ನನಗೆ ಬಲಮೊಣಕಾಲಿನಿಂದ ಬಲಪಾದದವರೆಗೆ ಪೆಟ್ಟು ಬಿದ್ದು ಒಳನೋವುಆಗಿದ್ದು ನಮ್ಮ ಲಾರಿ ಕ್ಲೀನರ್ ರಾಮು ನನಗೆ ಹೊರಗೆ ಇಳಿಸಿದನು.  ನನ್ನ ಲಾರಿ ಬಲಗಡೆಯ ಕ್ಯಾಬಿನ್ ಭಾಗ ಸಂಪೂರ್ಣ ಜಖಂಗೊಂಡಿರುತ್ತದೆ. ನಂತರ ನನಗೆ ಅಪಘಾತ ಪಡಿಸಿದ ಕೆ.ಎಸ್.ಆರ್.ಟಿ.ಸಿ ಬಸ್ಆಗಿದ್ದು ಇದರ ನಂ.ಕೆಎ-34/ಎಫ್-609 ಇದ್ದು ಇದರ ಚಾಲಕನ ಹೆಸರು ಶರಣ ಗೌಡ ಎಂದು ಗೊತ್ತಾಯಿತು. ಸದರಿ ಬಸ್ ಚಾಲಕನ ಬಲಗಡೆಯ ಹಣೆಗೆ ಮತ್ತು ಕೆನ್ನೆಗೆ ಹಾಗೂ ಬಲಗಾಲಿನ ಪಾದದ ಮೇಲೆ ರಕ್ತಗಾಯವಾಗಿದ್ದು ಸದರಿ ಅಪಘಾತದಿಂದಬಸ್ನಲ್ಲಿದ್ದ ಪ್ರಾಯಾಣಕರಾದ  1] ಶ್ರೀಧರ್ ರೆಡ್ಡಿ ಈತನಿಗೆ ಮೂಗಿಗೆ ಒಳಪೆಟ್ಟಾಗಿದ್ದು, 2] ಲಕ್ಷ್ಮಣ ಈತನಿಗೆ ತುಟಿಗೆ ಪೆಟ್ಟು ಬಿದ್ದು ಕೆಳಗಿನ ಮೂರು ಹಲ್ಲು ಮುರಿದುಹೋಗಿರುತ್ತದೆ. 3] ಚನ್ನಬಸವ ಈತನಿಗೆ ಮೂಗಿಗೆ ರಕ್ತಗಾಯ 4] ಕೆ.ಎಂ. ವೀರೇಶ ಈತನಿಗೆ ಬಲಮೊಣಕಾಲಿಗೆ ಒಳಪೆಟ್ಟಾಗಿದ್ದು,, 5] ಕಾಳಿಂಗ ಈತನಿಗೆ ಬಲಮೊಣಕಾಲಿಗೆ ಒಳಪೆಟ್ಟು, 6]  ಹಾಲೇಶ್ ಈತನಿಗೆ ಬಲಕಣ್ಣಿಗೆ ರಕ್ತಗಾಯ ಮತ್ತು ಸೊಂಟಕ್ಕೆ ಒಳಪೆಟ್ಟು, 7] ಎನ್. ಈರಣ್ಣ ಈತನಿಗೆ ಸೊಂಟಕ್ಕೆ ಒಳಪೆಟ್ಟು 8] ಆಲಂಬಾಷ ಈತನಿಗೆ ಎಡಹಣೆ ಪಟ್ಟಿಗೆ ರಕ್ತಗಾಯ 9] ಯು.ರಮೇಶ್ ಈತನಿಗೆ ಬಲಮೊಣಕಾಲಿಗೆ ರಕ್ತಗಾಯ 10] ಮಲ್ಲಮ್ಮ ಇವರಿಗೆ ತಲೆಗೆ ಒಳಪೆಟ್ಟು 11] ವೆಂಕಟೇಶ್ ಈತನಿಗೆ ಹೆಣೆಯ ಎಡಭಾಗಕ್ಕೆ ರಕ್ತಗಾಯ 12] ಗೀತಾ ಇವರಿಗೆ ಬಲಕಾಲಿಗೆ ಒಳ ಪೆಟ್ಟು 13] ಮಧುಶ್ರೀ ಇವರಿಗೆ ತಲೆಗೆ ರಕ್ತಗಾಯ 14] ಜಿ. ವೀರೇಶ ಗೌಡ ಈತನಿಗೆ ಹಣೆಗೆ ಮತ್ತು ಎಡಮೊಣಕೈಗೆ ರಕ್ತಗಾಯ 15]  ಮಲ್ಲಿಕಾಜರ್ುನ ಈತನಿಗೆ ಬಲಗಡೆ ಹಣೆಗೆ ರಕ್ತಗಾಯ 16] ಮೇಲ್ಗಿರಿದಾಸ್ ಇವರಿಗೆ ತುಟಿಗೆ ಮತ್ತು ಕುತ್ತಿಗೆಗೆ ಒಳಪೆಟ್ಟು 17] ಶ್ರೀನಿವಾಸ ಈತನಿಗೆ ಬಲಗಡೆ ಪಕ್ಕೆಗೆ ಒಳಪೆಟ್ಟು 18] ಹನುಮಂತ ರೆಡಿ ಇವರಿಗೆ ಗದ್ದಕ್ಕೆ ರಕ್ತಗಾಯ  19] ಗೌರೀಶ್ 20] ವಿರುಪಾಕ್ಷ ರೆಡ್ಡಿ 21] ಶಿವರಾಮ 22] ರಾಜಶೇಕರ್ ಹಾಗೂ ಇತರರಿಗೆ ಚಿಕ್ಕ ಪುಟ್ಟ ಗಾಯಗಳಾಗಿದ್ದು ಗೊತ್ತಾಯಿತು. ಸದರಿ ಅಪಘಾತದಲ್ಲಿ ಲಾರಿ ನಂ.ಎಪಿ-21/ಟಿಯು.355 ಮತ್ತು ಬಸ್ ನಂ. ಕೆಎ-34/ಎಫ್-609 ನೇದ್ದವುಗಳು ಜಖಂಗೊಂಡಿರುತ್ತದೆ.
ಕಾರಣ ಅತೀವೇಗ ಮತ್ತು ಅಜಾಗರೂಕತೆಯಿಂದ ನಡೆಸಿಕೊಂಡು ಬಂದು  ಡಿಕ್ಕಿ ಹೊಡೆಸಿ ಅಪಘಾತ ಪಡಿಸಿದ ಬಸ್ ನಂ. ಕೆಎ-34/ಎಫ್-609 ನೇದ್ದರ ಚಾಲಕ ಶರಣಗೌಡ ಈತನ ಮೇಲೆ ಕಾನೂನು ಕ್ರಮ ಜರುಗಿಸಲು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ