Crime Key Report From To | ||||||||||||||||
Sl. No | FIR No | FIR Date | Crime Group - Crime Head | Stage of case | ||||||||||||
APMC Yard PS | ||||||||||||||||
1 | Cr.No:0105/2015 (IPC 1860 U/s 392 ) |
07/12/2015 | Under Investigation | |||||||||||||
ROBBERY - Chain Snatching | ||||||||||||||||
Brief Facts : | ದಿನಾಂಕ: 07-12-2015 ರಂದು ಬೆಳಗಿನ ಜಾವ 4-45 ಗಂಟೆ ಸಮಯದಲ್ಲಿ ಬಿ.ಗೋನಾಳ್ ಗ್ರಾಮದಲ್ಲಿ ಪಿರ್ಯಾದಿದಾರರು ತಮ್ಮ ಮನೆ ಕಾಂಪೌಂಡಿನಲ್ಲಿದ್ದಾಗ ಯಾರೋ ಒಬ್ಬ ಅಪರಿಚಿತ ವ್ಯಕ್ತಿ ಮೋಟಾರ್ ಸೈಕಲ್ ನಲ್ಲಿ ಬಂ ದು ಮೋಟಾರ್ ಸೈಕಲನ್ನು ದೂರದಲ್ಲಿ ನಿಲ್ಲಿಸಿ ಪಿರ್ಯಾಧಿದಾರರಿಗೆ ಮನೆ ವಿಳಾಸ ಕೇಳುವ ನೆಪದಲ್ಲಿ ಹತ್ತಿರ ಬಂದು ಪಿರ್ಯಾಧಿದಾರರ ಕೊರಳಲ್ಲಿದ್ದ ಬಂಗಾರದ ತಾಳಿ ಸರ ಅಂದಾಜು ತೂಕ 41/2 ತೊಲೆ ಬೆಲೆ ಅಂದಾಜು 1,20,000/-ರೂ ಬಾಳುವುದನ್ನು ಕಿತ್ತುಕೊಂಡು ಹೋಗಿರುತ್ತಾನೆಂದು ದೂರು. | |||||||||||||||
Bellary Rural PS | ||||||||||||||||
2 | Cr.No:0524/2015 (KARNATAKA POLICE ACT, 1963 U/s 93 ; PREVENTION OF CRUELTY TO ANIMALS ACT, 1960 U/s 11(1),11(1) (F),11(1) (H),3,12 ; IPC 1860 U/s 428,429 ) |
07/12/2015 | Under Investigation | |||||||||||||
ANIMAL - Prevention Of Cruelty To Animals Act 1960 | ||||||||||||||||
Brief Facts : | ದಿನಾಂಕ: 7-12-2015 ರಂದು ಮದ್ಯಾಹ್ನ 12-15 ಗಂಟೆಗೆ ಫಿರ್ಯಾದಿ ನಿಖಿತಾ ಅಯ್ಯರ್, ಕೇರ್ (ಪ್ರಾಣಿಗಳ ಸಂರಕ್ಷಣೆ ಮತ್ತು ರಕ್ಷಣೆ ) ಸಂಘ ಬಳ್ಳಾರಿ ಘಟಕರವರು ಹಾಜರಾಗಿ ದೂರು ನೀಡಿದ್ದು ಸಾರಾಂಶ: ಬಳ್ಳಾರಿ ತಾಲ್ಲೂಕಿನ ಹಲಕುಂದಿ ಗ್ರಾಮದಲ್ಲಿ ಹೈನುಗಾರಿಕೆ ಫಾರಂನಲ್ಲಿ ಜಾನುವಾರುಗಳಿಗೆ ಆಹಾರವಿಲ್ಲದೆ ಸೊರಗುತ್ತಿದೆ ಎಂದು ಮಾಹಿತಿ ಬಂದ ಮೇರೆಗೆ ದಿನಾಂಕ: 7-12-2015 ರಂದು ಬೆಳಿಗ್ಗೆ 7-15 ಗಂಟೆಗೆ ಭೇಟಿ ನೀಡಿ ನೋಡಲಾಗಿ 10 ಕ್ಕೂ ಹೆಚ್ಚು ಆಕಳು 15 ಕ್ಕೂ ಹೆಚ್ಚು ಎಮ್ಮೆಗಳುಯ ಬಹತೇಹ ಜಾನುವಾರುಗಳು ಆಹಾರವಿಲ್ಲದೇ ಬಡಕಲು ದೇಹದಿಂದ ಇರುವುದು ಕಂಡು ಬಂದಿದ್ದು ಒಂದು ಎಮ್ಮೆ ಮತ್ತು ಕರು ಆಹಾರದ ಕೊರತೆಯಿಂದ ನಿಲ್ಲುವುದಕ್ಕೆ ಬರದೇ ಕೆಳಗಡೆ ಬಿದ್ದಿದ್ದು ಸಾಯುವ ಸ್ಥಿತಿಯಲ್ಲಿ ಇರುತ್ತದೆ. ವಿಚಾರಿಸಲಾಗಿ ಕಳೆದ 10 ದಿನಗಳಿಂದ ಈ ಜಾನುವಾರುಗಳಿಗೆ ಸರಿಯಾದಿ ಆಹಾರ ನೀಡದಿದ್ದರಿಂದ ಈ ಸ್ಥಿತಿ ಬಂದಿರುತ್ತದೆಂದು ತಿಳಿದು ಬಂದಿದ್ದು ಮತ್ತು ಹೆಚ್ಚಿನ ಹಾಲು ಕರೆಯುವ ಉದ್ದೇಶದಿಂದ ಜಾನುವಾರುಗಳಿಗೆ ಹಾನಿಕಾರಕವಾದ ಆಕ್ಸಿಟಾಸಿನ್ ಚುಚ್ಚು ಮದದು ಬಳಕೆ ಮಾಡಿರುವುದು ಕಂಡು ಬಂದಿರುತ್ತದೆ. ಜಾನುವಾರುಗಳನ್ನು ಕೇವಲ ಲಾಭಕ್ಕಾಗಿ ಬಳಸಿಕೊಂಡು ಅವುಗಳಿಗೆ ಅಗತ್ಯ ಆಹಾರ ನೀಡದೇ ಅಮಾನುಷವಾಗಿ ನೆಡೆಸಿಕೊಳ್ಳುತ್ತಿರುವ ಮಾಲೀಕರ ವಿರುದ್ದ ಕ್ರಮ ಕೈಗೊಂಡು ಅಪಾಯದ ಅಂಚಿನಲ್ಲಿರುವ ಜಾನುವಾರುಗಳಗೆ ಸೂಕ್ತ ಚಿಕಿತ್ಸೆ ಕೊಡಿಸಬೇಕೆಂದು ಕೋರಿ ದೂರು ಇರುತ್ತದೆ. | |||||||||||||||
Gandhinagar PS | ||||||||||||||||
3 | Cr.No:0251/2015 (IPC 1860 U/s 392 ) |
07/12/2015 | Under Investigation | |||||||||||||
ROBBERY - Chain Snatching | ||||||||||||||||
Brief Facts : | ಈ ದಿನ ದಿನಾಂಕ: 07/12/2015 ರಂದು ಫಿರ್ಯಾದಿದಾರಳು ಬಳ್ಳಾರಿ ನಗರದ ಸಿದ್ದಾರ್ಥ ಕಾಲೋನಿ 2ನೇ ಕ್ರಾಸಿನಲ್ಲಿರುವ ತನ್ನ ಮನೆಯ ಕಾಂಪೌಂಡ್ ಮುಂದೆ ಇರುವ ಎಕ್ಕೆ ಗಿಡಕ್ಕೆ ದೀಪವನ್ನು ಹಚ್ಚಿಟ್ಟು, ಗೇಟ್ ನೊಳಗೆ ಹೋಗಬೇಕೆನ್ನುವಷ್ಟರಲ್ಲಿ ಬೆಳಿಗ್ಗೆ 6-00 ಗಂಟೆಗೆ ಯಾರೋ ಒಬ್ಬ ಅಪರಿಚಿತ ವ್ಯಕ್ತಿ ತನ್ನ ಬಳಿ ಬಂದು ತೆಲುಗಿನಲ್ಲಿ ಇಕ್ಕಡ ರೆಡ್ಡಿ ಇಲ್ಲು ಎಕ್ಕಡ ಎಂದು ಕೇಳಲು ಅದಕ್ಕೆ ಫಿರ್ಯಾದಿ ನಾಕು ತೆಲಿಯದು ನಾ ಕೊಡುಕುನು ಪಿಲಿಸ್ತಾನು ಎಂದು ಹೇಳಿ ತನ್ನ ಮಗನನ್ನು ತನ್ನ ಮನೆಯ ಕಡೆ ತಿರುಗಿ ಕರೆಯುತ್ತಿದ್ದಾಗ ಅವನು ಏಕಾಏಕಿ ಅವನ ಕೈಯಿಂದ ಫಿರ್ಯಾದಿ ಕೊರಳಲ್ಲಿದ್ದ ಬಂಗಾರದ ಎರೆಡೆಳೆಯ ಅಂಜಲಿ ಕಟಿಂಗ್ ಮಾಡೆಲ್ ನ ಮಾಂಗಲ್ಯ ಸರ ತೂಕ 60 ಗ್ರಾಂ ಬೆಲೆ 1,20,000/- ರೂ. ಮತ್ತು ಇನ್ನೊಂದು ವೈಯರ್ ನಿಂದ ಕೂಡಿದ ಕರಿಮಣಿ ಸರ ಅದರಲ್ಲಿ 10 ಗ್ರಾಂ ತೂಕದ ಬಂಗಾರದ 20 ಕೊಳವೆ, ಒಂದು ಲಕ್ಷ್ಮೀಕಾಸು, 4 ಗುಂಡುಗಳು ಇದ್ದು ಬೆಲೆ 3,000/-ರೂ. ಎರಡು ಒಟ್ಟು ತೂಕ 70 ಗ್ರಾಂ ಬೆಲೆ ಒಟ್ಟು 1,23,000/- ರೂ. ಬಾಳುವವುಗಳನ್ನು ಕಿತ್ತುಕೊಂಡು ಅಲ್ಲಿಂದ ನಡೆದುಕೊಂಡು ಹೋಗಿ ಸ್ವಲ್ಪ ದೂರದ ನಂತರ ಮೋಟಾರ್ ಸೈಕಲ್ ನಲ್ಲಿ ಹೋಗಿರುತ್ತಾನೆಂದು ಇದ್ದ ದೂರಿನ ಮೇರೆಗೆ ಈ ಪ್ರ.ವ. ವರದಿ. | |||||||||||||||
Hirehadagali PS | ||||||||||||||||
4 | Cr.No:0201/2015 (IPC 1860 U/s |
07/12/2015 | Under Investigation | |||||||||||||
34,323,324,504,506 ) | ||||||||||||||||
CASES OF HURT - Simple Hurt | ||||||||||||||||
Brief Facts : | ಫಿರ್ಯಾಧಿ ಕಡೆಯವರಿಗೂ ಮತ್ತು ಆರೋಪಿತರಿಗೆ ಆಸ್ತಿ ಹಂಚಿಕೆ ವಿಚಾರದಲ್ಲಿ ವೈಮನಸ್ಸು ಇದ್ದು ಈ ಬಗ್ಗೆ ಊರಿನ ಹಿರಿಯರು ಪಂಚಾಯಿತಿ ಮಾಡಿದ್ದು ಸದರಿ ಪಂಚಾಯಿತಿಯ ಪ್ರಕಾರ ಫಿರ್ಯಾಧಿಯ ತಮ್ಮ ಮಲ್ಲಪ್ಪನು ಸಾಗುವಳಿ ಮಾಡುತ್ತಿದ್ದ ಸರ್ವೆ ನಂ. 181 ಸಿ/1 ಮತ್ತು 182 ಸಿ/2 ನೇದ್ದರಲ್ಲಿ 5 ಎಕರೆ ಜಮೀನು ಮತ್ತು ಸದರಿ ಜಮೀನಿನಲ್ಲಿರುವ ಮೋಟಾರ್ ಪಂಪ್ ಸೆಟ್ ಆರೋಪಿ 1 ರವರ ಪಾಲಿಗೆ ಮತ್ತು ಆರೋಪಿ 1 ರವರು ಸಾಗುವಳಿ ಮಾಡುತ್ತಿದ್ದ ಸರ್ವೆ ನಂ. 236 ಮತ್ತು 237 ನೇದ್ದರಲ್ಲಿನ 5 ಎಕರೆ ಜಮೀನು ಮತ್ತು ಸದರಿ ಜಮೀನಿನಲ್ಲಿರುವ ಮೋಟಾರ್ ಪಂಪ್ ಸೆಟ್ ಗಳು ಫಿರ್ಯಾಧಿಯ ತಮ್ಮ ಮಲ್ಲಪ್ಪನ ಪಾಲಿಗೆ ಬಂದಿದ್ದು ದಿನಾಂಕ 03-12-2015 ರಂದು ಫಿರ್ಯಾಧಿಯ ತಮ್ಮ ಮಲ್ಲಪ್ಪನು ಫಿರ್ಯಾಧಿಯನ್ನು ಕರೆದುಕೊಂಡು ತನ್ನ ಪಾಲಿಗೆ ಬಂದ ಹೊಲಕ್ಕೆ ನೀರು ಹಾಯಿಸಲು ಹೋಗಿದ್ದು ಬೆಳೆಗ್ಗೆ 10.30 ಗಂಟೆ ಸುಮಾರಿಗೆ ಮಲ್ಲಪ್ಪನು ಸದರಿ ಹೊಲದಲ್ಲಿನ ಮೋಟಾರ್ ಪಂಪ್ ಸೆಟ್ ನ ಬೀಗವನ್ನು ಸದರಿ ಹೊಲದಲ್ಲಿದ್ದ ಆರೋಪಿಗಳಿಗೆ ಕೇಳಲು ಆರೊಪಿ 2 ಈತನು ಮಲ್ಲಪ್ಪನಿಗೆ ಮಿಂಡ್ರಮಗನೇ, ನಿನ್ನ ಹೆಂಡತಿನ ಹಡ ಎಂದು ಅವಾಚ್ಯ ಶಬ್ದಗಳಿಂದ ಬೈದು ತನ್ನ ಕೈಗಳಿಂದ ಮಲ್ಲಪ್ಪನ ಎದೆಗೆ, ಬೆನ್ನಿಗೆ ಹೊಡೆದು ಒಳನೋವುಪಡಿಸಿದ್ದು ಬಿಡಿಸಲು ಬಂದ ಫಿರ್ಯಾಧಿಗೆ ಆರೋಪಿ 1 ಈತನು ಕಲ್ಲಿನಿಂದ ತಲೆಗೆ, ಬಲಗಾಲಿನ ಮಂಡಿಯ ಹತ್ತಿರ ಹೊಡೆದು ರಕ್ತಗಾಯಪಡಿಸಿದ್ದು ಆರೋಪಿ 2 ಈತನು ತನ್ನ ಕಾಲಿನಿಂದ ಫಿರ್ಯಾದಿಯ ಎದೆಗೆ ಒದ್ದು ಒಳನೋವು ಪಡಿಸಿದ್ದು ಆರೋಪಿತರು ಫಿರ್ಯಾಧಿ ಮತ್ತು ಫಿರ್ಯಾಧಿಯ ತಮ್ಮನಿಗೆ ಪ್ರಾಣ ಬೆದರಿಕೆ ಹಾಕಿದ್ದು ಈ ಬಗ್ಗೆ ಫಿರ್ಯಾಧಿಯು ಊರಿನ ಹಿರಿಯರೊಂದಿಗೆ ಚರ್ಚಿಸಿ ಈ ದಿನ ತಡವಾಗಿ ಠಾಣೆಗೆ ಬಂದು ದೂರು ನೀಡಿದ್ದರ ಮೇರೆಗೆ ಪ್ರಕರಣ ದಾಖಲಿಸಿದೆ. | |||||||||||||||
Siruguppa PS | ||||||||||||||||
5 | Cr.No:0251/2015 (IPC 1860 U/s 506,504,143,147,149,323 ) |
07/12/2015 | Under Investigation | |||||||||||||
RIOTS - Others | ||||||||||||||||
Brief Facts : | ಈ ದಿನ ದಿನಾಂಕ 07-12-2015 ರಂದು ಬೆಳಿಗ್ಗೆ 11=00 ಗಂಟೆಗೆ ಪಿರ್ಯಾದಿದಾರರಾದ ಪಿ.ಶೇಕ್ಷವಲಿ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶ ವೆನೆಂದರೆ ಪಿರ್ಯಾದಿಯು ಸಿರುಗುಪ್ಪ ಪಟ್ಟಣದಲ್ಲಿ ಪಂಚರ್ ಶಾಪ್ ಇಟ್ಟುಕೊಂಡು ಜೀವನ ಸಾಗಿಸುತ್ತಿದ್ದೇನೆ. ಮೊನ್ನೆ ದಿನ ದಿನಾಂಕ 05-12-2015 ರಂದು ರಾತ್ರಿ 09-30 ಗಂಟೆ ಸುಮಾರಿಗೆ ಪಿರ್ಯಾದಿಯು ತಮ್ಮ ಮನೆಯವರು ತಮ್ಮ ಮನೆಯ ಮುಂದೆ ಕುಳಿತ್ತಿದ್ದಾಗ, ತಮ್ಮ ಮನೆಯ ಪಕ್ಕದ ವಾಸಿ ಲೇಟ್ ಖಾದರ್ಸಾಬ್ ರವರ ಮಗ ಶೇಕ್ಷ ಈತನು ಆತನ ತಾಯಿಯ ಹತ್ತಿರ ಬಾಯಿ ಮಾಡುತ್ತಿದ್ದು. ಆಗ ಪಿರ್ಯಾದಿಯು ಯಾಕೆ ಬಾಯಿ ಮಾಡುತ್ತೀರೆಂದು ಕೇಳಿದ ವಿಚಾರದಲ್ಲಿ ಪಿರ್ಯದಿಗೂ ಮತ್ತು ಶೇಕ್ಷ ಈತನ ಮದ್ಯ ಮಾತಿಗೆ ಮಾತು ಬೆಳೆದು ಗಲಾಟೆ ಶುರುವಾಗಿದ್ದು. ಆಗ ಶೇಕ್ಷ ಈತನ ಪರವಾಗಿ ಅವರ ಸಂಬಂಧಿಗಳಾದ ಹತ್ತಿ ಅಲಂಸಾಬ್ ಮತ್ತು ಈತನ ತಮ್ಮಂದಿರಾದ ಹತ್ತಿ ಅಬ್ದುಲ್ , ಹತ್ತಿ ಸುಭಾನ, ಹಾಗೂ ಹತ್ತಿ ಅಲಂಸಾಬ್ ನ ಮಕ್ಕಳಾದ ದಾದಾ, ಶೇಕ್ಷವಲಿ ಮತ್ತು ಆತನ ಹತ್ತಿ ಅಲಂಸಾಬ್ ನ ಹೆಂಡತಿ ನೂರಾಬೀ ಇವರೆಲ್ಲ ಅಕ್ರಮ ಗುಂಪು ಸೇರಿಕೊಂಡು ಬಂದು ಪಿರ್ಯಾದಿಗೆ ಶೇಕ್ಷ ಈತನು ತುಮ್ನ ಕೆತ್ತೆ ಬೇಟ್ದಾ ಹೈ ಅಂತಾ ಇತ್ಯಾದಿ ಅವ್ಯಾಚ್ಚವಾಗಿ ಬೈದು ಕೈ-ಕಾಲುಗಳಿಂದ ಮತ್ತು ಉಳಿದ ಗುಂಪಿನವರೆಲ್ಲಾ ಸೇರಿ ಕೈ-ಕಾಲುಗಳಿಂದ ಹೊಡೆದುಕೊಳ್ಳುತ್ತಿದ್ದಾಗ ಸದರಿ ಗಲಾಟೆಯನ್ನು ನೋಡಿದ ನನ್ನ ತಂದೆ ಪಟ್ಟೆ ಹುಸೇನ್ ಸಾಬ್ , ನನ್ನ ಹೆಂಡತಿ ರಾಬಿಯಾ, ನಮ್ಮ ಮನೆ ಪಕ್ಕದ ಖಾಜಾಮೋಹಿದ್ದಿನ್ @ ಖಾಜು, ಹಂಡಿ ಇಸ್ಮಾಯಿಲ್ ಮತ್ತಿತ್ತರರು ಸೇರಿ ಜಗಳ ಬಿಡಿಸಿದರು ಆಗ ಶೇಕ್ಷ ಈತನು ಅಲ್ಲಿಗೆ ಸುಮ್ಮನಾಗದೇ ನೀನೂ, ನಿಮ್ಮ ಮನೆಯವರು ಈ ಓಣಿಯಲ್ಲಿ ಹೆಂಗೆ ಬಾಳ್ವೆ ಮಾಡ್ತೀರೋ ನೋಡ್ಕೊತೀವಿ ಎಂದು ಪ್ರಾಣ ಬೆದರಿಕೆ ಹಾಕಿದರು. ಸದರಿ ಗಲಾಟೆಯಲ್ಲಿ ನಾನು ಗಾಯಗೊಂಡಿದ್ದರಿಂದ ಆದೇ ದಿನ ರಾತ್ರಿ ಸಿರುಗುಪ್ಪ ಸರ್ಕಾರಿ ಅಸ್ಪತ್ರೆಗೆ ಹೋಗಿ ತೋರಿಸಿಕೊಂಡಿದ್ದು. ಸದರಿ ಗಲಾಟೆಯು ನಮ್ಮ ಮನೆಯ ಪಕ್ಕದವರು ಮಾಡಿದ್ದರಿಂದ ನಮ್ಮ ಓಣಿಯ ಹಿರಿಯರಿಗೆ ವಿಷಯ ತಿಳಿಸಿ ಪಿರ್ಯಾದಿಯು ಈ ದಿನ ತಡವಾಗಿ ಠಾಣೆಗೆ ಬಂದು ನೀಡಿದ ದೂರನ್ನು ಸ್ವೀಕರಿಸಿ ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿದೆ. | |||||||||||||||
ಸೋಮವಾರ, ಡಿಸೆಂಬರ್ 7, 2015
PRESS NOTE OF 07/12/2015
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ