Crime Key Report From To | ||||||||||||||||
Sl. No. | FIR No | FIR Date | Crime Group - Crime Head | Stage of case | ||||||||||||
Bellary Rural PS | ||||||||||||||||
1 | Cr.No:0552/2015 (IPC 1860 U/s 279,337 ) |
27/12/2015 | Under Investigation | |||||||||||||
MOTOR VEHICLE ACCIDENTS NON-FATAL - State Highways | ||||||||||||||||
Brief Facts : | ದಿನಾಂಕ: 27-12-2015 ರಂದು ಬೆಳಿಗ್ಗೆ 8-30 ರಿಂದ ಬೆಳಿಗ್ಗೆ 9-30 ಗಂಟೆವರೆಗೆ ಬಳ್ಳಾರಿ ವಿಮ್ಸ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಫಿರ್ಯಾದಿ ಎಂ. ಶೇಕ್ಷಾವಲಿ ತಂದೆ ಎಂ.ಬಿ. ಹೊನ್ನುರುಸಾಬ್ ವ: 24 ವರ್ಷ, ಪಿಂಜಾರು, ಟೈಲರ್ ಕೆಲಸ, ವಾಸ: ಮೋಕ ಗ್ರಾಮ ರವರಿಂದ ಹೇಳಿಕೆ ದೂರನ್ನು ಪಡೆದುಕೊಂಡು ಬಂದಿದ್ದು ಸಾರಾಂಶ: ದಿನಾಂಕ 26-12-2015 ರಂದು ಬೆಳಿಗಿನ ಜಾವ 3-30 ಗಂಟೆಗೆ ಬಳ್ಳಾರಿ-ಮೋಕ ರಸ್ತೆಯ ಸಿರಿವಾರ ಕ್ರಾಸ್ ದಾಟಿ ಲಕ್ಷ್ಮೀರೆಡ್ಡಿ ಗೋಡನ್ ಆಚೆ ಲಗೇಜ್ ವಾಹನ ನಂ. ಕೆಎ-16-ಎ-9876 ನ್ನು ಚಾಲಕ ರಜಾಕ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿ ಏಕಾಏಕಿ ಎಡಕ್ಕೆ ತೆಗೆದುಕೊಂಡಿದ್ದರಿಂದ ವಾಹನವು ಮೋರಿಯ ಗೋಡೆಗೆ ಡಿಕ್ಕಿಹೊಡೆದಿದ್ದರಿಂದ ವಾಹನದಲ್ಲಿದ್ದ ತನಗೆ ಮತ್ತು ಚಾಲಕ ರಜಾಕ್ಗೆ ಹಾಗು ಹಮೀದ್ ಗೆ ಪೆಟ್ಟುಗಳು ತಗುಲಿ ವಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದಾಗಿ ಈ ಬಗ್ಗೆ ಮುಂದಿನ ಕ್ರಮ ಜರುಗಿಸಲು ಕೋರಿದ ಮೇರೆಗೆ ಪ್ರಕರಣ ದಾಖಲಿಸಿದೆ. | |||||||||||||||
Brucepet PS | ||||||||||||||||
2 | Cr.No:0269/2015 (CODE OF CRIMINAL PROCEDURE, 1973 U/s 107,151 ) |
28/12/2015 | Under Investigation | |||||||||||||
CrPC - Preventive Arrest (Sec 151) | ||||||||||||||||
Brief Facts : | ದಿನಾಂಕ: ೨೮/೧೨/೧೫ ರಂದು ಬೆಳಿಗ್ಗೆ ೧೦-೩೦ ಗಂಟೆಗೆ ನಾನು ಪಿ.ಸಿ. ೨೬ ರವರೊಂದಿಗೆ ಠಾಣಾ ಸರಹದ್ದಿನ ಏರಿಯಾದಲ್ಲಿ ಗಸ್ತು ಕರ್ತವ್ಯ ಮಾಡುತ್ತಾ ಬಳ್ಳಾರಿ ನಗರದ ಮೋತಿ ಸರ್ಕಲ್, ರಾಯಲ್ ಸರ್ಕಲ್ ಮೂಲಕ ಬುಡಾ ಸಂಕೀರ್ಣದ ಬಳಿ ಬೆಳಿಗ್ಗೆ ೧೦-೪೫ ಗಂಟೆಗೆ ಬಂದಾಗ ಪ್ರತಿವಾದಿಗಳು ಹಿಂದೂ ಮಹಾಸಭಾ ಸಂಚಾಲಕರಾದ ಕಮಲೇಶ ತಿವಾರಿ ರವರು ಮಹಮ್ಮದ್ ಪೈಗಂಬರ್ ರವರಿಗೆ ಅವಹೇಳನಕಾರಿ ಮಾತುಗಳನ್ನು ಆಡಿರುವುದನ್ನು ಖಂಡಿಸಿ ಎ.ಐ.ಎಂ.ಐ.ಎಂ ವತಿಯಿಂದ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಳ್ಳಲು ಪರವಾನಿಗೆ ನೀಡಲು ಕೋರಿ ಅರ್ಜಿ ನೀಡಿದ್ದು, ಈ ಬಗ್ಗೆ ಪ್ರತಿವಾದಿಗಳಿಗೆ ಪರವಾನಿಗೆಯನ್ನು ನೀಡಿರುವುದಿಲ್ಲ. ಅಲ್ಲದೆ ಪ್ರತಿವಾದಿಗಳ ಸಂಘಟನಾ ಕಛೇರಿಗಳು ನಮ್ಮ ಠಾಣೆ ವ್ಯಾಪ್ತಿಯಲ್ಲಿದ್ದು, ಪ್ರತಿವಾದಿಗಳು ಯಾವುದೇ ಸಮಯದಲ್ಲಿ ಪ್ರತಿಭಟನೆ ಮಾಡಿ ಸಾರ್ವಜನಿಕರ ಶಾಂತತೆ ಭಂಗವನ್ನುಂಟು ಮಾಡುವ ಮತ್ತು ಸಾರ್ವಜನಿಕರ ಆಸ್ತಿ-ಪಾಸ್ತಿಗೆ ಹಾನಿ ಮಾಡಿ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವ ಸಾಧ್ಯತೆಗಳು ಹೆಚ್ಚಾಗಬಹುದು, ಅಲ್ಲದೆ ವಿಧಾನ ಪರಿಷತ್ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಯಾವುದೇ ರೀತಿಯ ಪ್ರತಿಭಟನೆ ಮಾಡದಂತೆ ಮತ್ತು ಸಾರ್ವಜನಿಕ ಶಾಂತತೆ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವ ಹಿತದೃಷ್ಠಿಯಿಂದ ಅವರನ್ನು ಮುಂಜಾಗ್ರತ ಕ್ರಮಕ್ಕಾಗಿ ಬೆಳಿಗ್ಗೆ ೧೧-೦೦ ಗಂಟೆಗೆ ಬುಡಾ ಸಂಕೀರ್ಣದ ಹತ್ತಿರ ವಶಕ್ಕೆ ಪಡೆದುಕೊಂಡು ಬೆಳಿಗ್ಗೆ ೧೧-೩೦ ಗಂಟೆಗೆ ವಾಪಸ್ಸು ಠಾಣೆಗೆ ಬಂದು ಮುಂಜಾಗ್ರ್ರತಾ ಕ್ರಮಕ್ಕಾಗಿ ಪ್ರತಿವಾದಿಗಳ ವಿರುದ್ಧ ದಾಖಲಿಸಿದ ಪ್ರಕರಣ . | |||||||||||||||
Cowlbazar PS | ||||||||||||||||
3 | Cr.No:0382/2015 (KARNATAKA EXCISE ACT, 1965 U/s 15(A),32(3) ) |
27/12/2015 | Under Investigation | |||||||||||||
KARNATAKA STATE LOCAL ACTS - Karnataka Excise Act 1965 | ||||||||||||||||
Brief Facts : | ಈ ದಿನ ದಿನಾಂಕ: 27/12/2015 ರಂದು ಸಂಜೆ 6-30 ಗಂಟೆಗೆ ಹೆಚ್.ಸಿ. 233 ರವರು ಪಿಸಿ-640 ರವರೊಂದಿಗೆ ಕೋಟೆ ಏರಿಯಾದಲ್ಲಿ ಗಸ್ತಿನಲ್ಲಿರುವಾಗ ಬಳ್ಳಾರಿ ಇಂದಿರಾನಗರದ ಅಂಬೇಡ್ಕರ್ ಸ್ಕೂಲ್ ಮುಂದಿನ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ಯಾವುದೇ ಪರವಾನಿಗೆ ಇಲ್ಲದೇ ಮದ್ಯ ಸೇವನೆಗೆ ಅವಕಾಶ ಮಾಡಿಕೊಡುತ್ತಿರುವುದಾಗಿ ಮಾಹಿತಿ ಬಂದ ಮೇರೆಗೆ ಹೆಚ್.ಸಿ. 233 ರವರು ಪಂಚರ ಮತ್ತು ಪಿಸಿ-640 ರವರೊಂದಿಗೆ ವರ್ತಮಾನ ಸ್ಥಳಕ್ಕೆ ಹೋಗಿ ದಾಳಿ ಮಾಡಿದಾಗ ಸಾರ್ವಜನಿಕರು ಓಡಿ ಹೋಗಿದ್ದು, ಮದ್ಯ ಸೇವನೆಗೆ ಅವಕಾಶ ಮಾಡಿಕೊಡುತ್ತಿದ್ದ ಗಾದಿಲಿಂಗಪ್ಪ ರವರು ಸಿಕ್ಕಿಬಿದಿದ್ದು, ನಂತರ ಸ್ಥಳದಲ್ಲಿದ್ದ 180 ಎಂ.ಎಲ್. ನ 13 ವಿನ್ ಗ್ರೇಪ್ ಬ್ರಾಂಡಿಯ ಪೌಚ್ ಗಳನ್ನು ಜಪ್ತು ಪಡಿಸಿಕೊಂಡು, ಆರೋಪಿ ಮತ್ತು ಮಾಲಿನೊಂದಿಗೆ ಠಾಣೆಗೆ ಬಂದು ದೂರು ನೀಡಿದ ಮೇರೆಗೆ ಪ್ರಕರಣದ ದಾಖಲಿಸಿದೆ. | |||||||||||||||
Hadagali PS | ||||||||||||||||
4 | Cr.No:0133/2015 (IPC 1860 U/s 511,353,352 ) |
27/12/2015 | Under Investigation | |||||||||||||
Attempting to commit offences - | ||||||||||||||||
Attempting to commit offences | ||||||||||||||||
Brief Facts : | ಈ ದಿನ ದಿನಾಂಕ 27-12-2105 ರಂದು ಹೂವಿನ ಹಡಗಲಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಮದಲಗಟ್ಟ ಗ್ರಾಮದಲ್ಲಿ ಶ್ರೀ ಅಂಜನೇಯ ಸ್ವಾಮಿ ರಥೋತ್ಸವದ ಇದ್ದು, ಸದರಿ ರಥೋತ್ಸವದ ಬಂದೋಬಸ್ತ ಕರ್ತವ್ಯದಲ್ಲಿ ಹೂವಿನ ಹಡಗಲಿ ಸಬ್ ಡಿವಿಜನ್ ಮಾನ್ಯ ಡಿ.ಎಸ್.ಪಿ ಸಾಹೇಬರೊಂದಿಗೆ ಅಪರಾಧ ದಳದ ಸಿಬ್ಬಂದಿ ಸಿದ್ದಪ್ಪ. ಸಿ.ಹೆಚ್.ಸಿ -309 ಮತ್ತು ಹಾಗೂ ಬಳ್ಳಾರಿ ಸಂಚಾರಿ ಪೊಲೀಸ್ ಠಾಣೆ ಹೆಚ್.ಸಿ-157 ಶ್ರೀಪ್ರಕಾಶ ಸಿ.ಪಿ.ಸಿ-267 ಗೋವಿಂದರಾಜು ಮತ್ತು ಹಡಗಲಿ ಪೊಲೀಸ್ ಠಾಣೆ ಸಿ.ಹೆಚ್.ಸಿ-300 ರಾಜೇಂದ್ರನಾಯ್ಕ, ಸಿ.ಪಿ.ಸಿ-883 ನಾಗರಾಜ, ರವರು ರಥೋತ್ಸವದ ಬಂದೋಬಸ್ತ ಕರ್ತವ್ಯದಲ್ಲಿದ್ದಾಗ, ತುಂಗಭದ್ರ ಸೇತುವೆ ಮೇಲೆ ಸಂಚಾರಕ್ಕೆ ಅಡೆತಡೆಉಂಟಾದ ಮಾಹಿತಿ ತಿಳಿದು, ಮೇಲ್ಕಂಡ ಸಿಬ್ಬಂದಿಯೊಂದಿಗೆ ಮಾನ್ಯ ಡಿ.ಎಸ್.ಪಿ ಸಾಹೇಬರು ಸದರಿ ಸ್ಥಳಕ್ಕೆ ಹೋಗಿ ಸಂಚಾರದ ಕರ್ತವ್ಯದಲ್ಲಿದ್ದಾಗ, ಮುಂಡರಗಿ ಕಡೆಯಿಂದ ಕೆ.ಎಸ್.ಆರ್.ಟಿ.ಸಿ ಬಸ್ಸೊಂದು ಬಂದು ಸಂಚಾರಕ್ಕೆ ಅಡ್ಡಿ ಪಡಿಸಿದಾಗ, ಸಿಬ್ಬಂದಿ ಮತ್ತು ಆಧಿಕಾರಿಗಳು ಬಸ್ ಚಾಲಕನಿಗೆ ಸಂಚಾರಕ್ಕೆ ಅಡ್ಡಿಪಡಿಸದಂತೆ ಬಸನ್ನು ನಿಲ್ಲಿಸು ಅಂತ ತಿಳಿಸಿದಾಗ, ಮಾನ್ಯ ಡಿ.ಎಸ್.ಪಿ ಸಾಹೇಬರಿಗೆ ಏಕವಚನದಲ್ಲಿ ''ಏನೋ ಇನ್ನೂ ಹೆಂಗ ನಿಲ್ಲಿಸಬೇಕು ಸರಿಯಾಗಿ ನಿಲ್ಲಿಸಿದಿನಿ ಅಂತ ಏರುಧ್ವನಿಯಲ್ಲಿ ಮಾತನಾಡಿದಾಗ,ಸಿಬ್ಬಂದಿಯವರೂ ಸದರಿ ಬಸ್ ಚಾಲಕನಿಗೆ ಏನ್ ಸರಿಯಾಗಿ ನಿಲ್ಲಿಸಿದಿರಿ ನೀವೇ,,,, ನೋಡಿ ಸಂಚಾರಕ್ಕೆ ಅಡ್ಡಿಯಾಗುವ ರೀತಿಯಲ್ಲಿ ನಿಲ್ಲಿಸಿದಿರಿ ಅಂತ ಕೇಳಿದ್ದಕ್ಕೆ 'ಏಯ್ ನಾನು ಹಿಂಗೆ ನಿಲ್ಲಿಸುವದು ನೀನು ಅದೇನ್ ಮಾಡಿಕೊಳ್ಳುತ್ತಿಯ ಮಾಡಿಕೋ, ಅಂತ ಪಿರ್ಯುದಿ ಮೇಲೆ ರೇಗಿ ಹಲ್ಲೆಗೆ ಯತ್ನಿಸಿ, ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿರುತ್ತಾನೆಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದೆ. | |||||||||||||||
Hampi Tourism PS | ||||||||||||||||
5 | Cr.No:0026/2015 (IPC 1860 U/s 506,504,324 ) |
28/12/2015 | Under Investigation | |||||||||||||
CASES OF HURT - Simple Hurt | ||||||||||||||||
Brief Facts : | ದಿನಾಂಕ: 28-12-2015 ರಂದು ಬೆಳಿಗ್ಗೆ 10-30 ಗಂಟೆಗೆ ಹಂಪಿಯ ಪ್ರಕಾಶ ನಗರದಲ್ಲಿ ಪಿರ್ಯಾದಿದಾರ ಮತ್ತು ಆರೋಪಿ ರಮೇಶ ಮನೆಯ ಮದ್ಯೆ ಇರುವ ಸಂದಿನ ಜಾಗದಲ್ಲಿ ಇಬ್ಬರ ಮದ್ಯ ಜಗಳ ನೆಡೆದಿದ್ದು ಜಗಳದಲ್ಲಿ ಆರೋಪಿತನು ಕೊಡಲಿಯ ಕಾವಿನಿಂದ ಪಿರ್ಯಾದಿದಾರನ ಬಲಗಡೆಯ ತಲೆಯ ಮೇಲೆ ಹೊಡೆದು ರಕ್ತ ಗಾಯ ಪಡಿಸಿದ್ದು ಜಗಳವನ್ನು ಬಿಡಿಸಲು ಬಂದ ಪಿರ್ಯಾದುದಾರನ ಹೆಂಡತಿಯಾದ ಇಮಾಮ್ ಬೀ ರವರಿಗೂ ಸಹ ಅದೇ ಕೊಡಲಿಯ ಕಾವಿನಿಂದ ಎಡಕೈ ಯ ಮೊಣ ಕಟ್ಟಿನ ಮೇಲೆ ಹೊಡೆದು ರಕ್ತ ಗಾಯ ಪಡಿಸಿರುತ್ತಾನೆ. ಮತ್ತು ಇನ್ನೊಂದು ಸಾರಿ ಈ ಜಾಗದ ತಂಟೆಗೆ ಬಂದರೆ ನಿಮ್ಮ ಪ್ರಾಣ ತೆಗೆಯುತ್ತೇನೆಂದು ಬೆದರಿಕೆ ಹಾಕಿರುತ್ತಾನೆ.ಈ ಬಗ್ಗೆ ಆರೋಪಿ ರಮೇಶ ನ ವಿರುದ್ದ ಕ್ರಮ ತೆಗೆದುಕೊಳ್ಳಲು ನೀಡಿದ ಹೇಳಿಕೆ ಅನ್ವಯ ಈ ಪ್ರ,ವ,ವರದಿ | |||||||||||||||
Hirehadagali PS | ||||||||||||||||
6 | Cr.No:0204/2015 (KARNATAKA MINOR MINERAL CONSISTENT RULE 1994 U/s 42,44 ; MMDR (MINES AND MINERALS REGULATION OF DEVELOPMENT) ACT 1957 U/s 21 ; IPC 1860 U/s 511,379 ) |
27/12/2015 | Under Investigation | |||||||||||||
KARNATAKA STATE LOCAL ACTS - Karnataka Minor Mineral Consistent Rule 1994 | ||||||||||||||||
Brief Facts : | ದಿನಾಂಕ 27-12-2015 ರಂದು ಸಂಜೆ 4.50 ಪಿ.ಎಂ. ಗಂಟೆ ಸುಮಾರಿಗೆ ಫಿರ್ಯಾದಿದಾರರಾದ ಪಿ.ಎಸ್.ಐ. ಹಿರೇಹಡಗಲಿ ರವರು ತಮ್ಮ ಸಿಬ್ಬಂದಿಯವರು ಮತ್ತು ಪಂಚರೊಂದಿಗೆ ತಮಗೆ ಬಂದ ಖಚಿತ ಮಾಹಿತಿ ಮೇರೆಗೆ ಮೈಲಾರ ಗ್ರಾಮದ ಹತ್ತಿರ ತುಂಗಭದ್ರ ನದಿ ದಂಡೆಗೆ ಹೋಗಲು ಅಕ್ರಮವಾಗಿ ಯಾವುದೇ ಪರವಾನಿಗೆ ಇಲ್ಲದೆ ಸ್ವರಾಜ್ ಕಂಪನಿಯ 735 ಎಫ್.ಇ. ಮಾಡಲಿನ ನೋಂದಣಿ ಸಂಖ್ಯೆ ಇರದ ಟ್ರಾಕ್ಟರ್ ಮತ್ತು ಕೆ.ಎ-17 ಟಿಎ-2348 ಎಂದು ನೋಂದಣಿ ಸಂಖ್ಯೆ ಇರುವ ಟ್ರೇಲರ್ ನಲ್ಲಿ ಮರಳನ್ನು ತುಂಬುತ್ತಿರುವಾಗ ದಾಳಿ ಮಾಡಲು ಸದರಿ ಟ್ರಾಕ್ಟರನ ಚಾಲಕ ಮತ್ತು ಮರಳು ತುಂಬುತ್ತಿದ್ದ ಕೂಲಿ ಆಳುಗಳು ಓಡಿಹೋಗಿದ್ದು, ಟ್ರಾಕ್ಟರ್ ಮತ್ತು ಟ್ರೇಲರನ್ನು ವಶಕ್ಕೆ ತೆಗೆದುಕೊಂಡಿದ್ದು, ಟ್ರೇಲರ್ ನಲ್ಲಿ ಸುಮಾರು ಎರಡು ಟನ್ ಮರಳು ಇದ್ದು, ಅದರ ಅಂದಾಜು ಬೆಲೆ ರೂ. 1000/- ಗಳಾಗಬಹುದು. ಮತ್ತು ಸ್ಥಳದಲ್ಲಿದ್ದ ಮರಳು ತುಂಬಲು ತಂದಿದ್ದ ಹಳೆಯ ಎರಡು ಪ್ಲಾಸ್ಟಿಕ್ ಪುಟ್ಟಿಗಳು ಹಾಗು ಒಂದು ಚಲಕಿ ಅಂದಾಜು ಬೆಲೆ ರೂ. 50/- ನೇದ್ದವುಗಳನ್ನು ಪಂಚರ ಸಮಕ್ಷಮ ಜಫ್ತುಪಡಿಸಿಕೊಂಡು ಠಾಣೆಗೆ ಬಂದು ಅಕ್ರಮವಾಗಿ ಮರಳು ಸಾಗಾಣಿಕೆಯಲ್ಲಿ ಸಿಕ್ಕಿಬಿದ್ದ ಟ್ರಾಕ್ಟರನ್ನು ಒಪ್ಪಿಸಿ, ಸದರಿ ನೋಂದಣಿ ಸಂಖ್ಯೆ ಇರದ ಸ್ವರಾಜ್ ಕಂಪನಿಯ 735 ಎಫ್.ಇ. ಮಾಡಲಿನ ಟ್ರಾಕ್ಟರ್ ಮತ್ತು ಟ್ರೇಲರ್ ನಂ. ಕೆ.ಎ-17 ಟಿಎ-2348 ನೇದ್ದರ ಚಾಲಕ ಮತ್ತು ಮಾಲಿಕರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿದೆ. | |||||||||||||||
Hosahalli PS | ||||||||||||||||
7 | Cr.No:0242/2015 (IPC 1860 U/s 279,337 ; INDIAN MOTOR VEHICLES ACT, 1988 U/s 183 ) |
28/12/2015 | Under Investigation | |||||||||||||
MOTOR VEHICLE ACCIDENTS NON-FATAL - National Highways | ||||||||||||||||
Brief Facts : | ದಿನಾಂಕ:೨೮-೧೨-೨೦೧೫ ರಂದು ಬೆಳಿಗ್ಗೆ ೧೦-೩೦ ಗಂಟೆಗೆ ಪಿರ್‍ಯಾದಿದಾರರಾದ ಶ್ರೀ. ವಿಜಯ ಪ್ರಸಾದ ತಂದೆ ಲೇಟ್ ರುದ್ರಪ್ಪ,ವ:೪೬ವರ್ಷ,ವಿಶ್ವಕರ್ಮ ಜನಾಂಗ,ಬೋರ್ಡಡಿಸೈನರ್ ಕೆಲಸ,ಸಾ;ಐಡಿಎಲ್ ಹೋಮ್ಸ್ ,ರಾಜಾರಾಜೇಶ್ವರಿ ನಗರ ,ಬೆಂಗಳೂರು-೯೮,ರವರು ಠಾಣೆಗೆ ಹಾಜರಾಗಿ ಕೊಟ್ಟ ಕಂಪ್ಯೂಟರನಲ್ಲಿ ನಮೂದು ಮಾಡಿದ ದೂರಿನ ಸಾರಂಶವೆನೆಂದರೆ ನಾನು,ನನ್ನ ಹೆಂಡತಿ ವಿಜಯಲಕ್ಷ್ಮಿ,ನನ್ನ ಮಗಳು ರಾಜೇಶ್ವರಿ,ನನ್ನ ಮಗ ಗಂಗಾಧರ, ನಮ್ಮ ಸಂಬಂದಿಯಾದ ಕವಿತ ಹಾಗೂ ನಮ್ಮ ಮನೆಯ ಮೇಲೆ ಇರುವ ಪ್ರಮೀಳಮ್ಮ,ರಾಕೇಶ, ಪವನ್ ಕುಮಾರ ಎಲ್ಲರೂ ನಮ್ಮ ಓಮಿನಿ ಕಾರ್ ನಂ:ಕೆ.ಎ-೪೧/ಜೆಡ್-೮೨೦೬ ನೇದ್ದರಲ್ಲಿ ಕೊಪ್ಪಳದಲ್ಲಿನ ನನ್ನ ಹೆಂಡತಿಯ ಅಣ್ಣನಾದ ನಾಗರಾಜ ಪತ್ತರ ಎಂಬುವರ ಮನೆಗೆ ನನ್ನ ಮಗನಾದ ಗಂಗಾಧರನ ಉಪನಯನ ಕಾರ್ಯಕ್ರಮಕ್ಕೆಂದು ಕೊಪ್ಪಳಕ್ಕೆ ಹೋಗಿ ಅಲ್ಲಿ ಸದರಿ ಕಾರ್ಯಕ್ರಮವನ್ನು ಮುಗಿಸಿಕೊಂಡು ದಿನಾಂಕ:೨೭-೧೨-೨೦೧೫ ರಂದು ಬೆಳಿಗ್ಗೆ ೧೦-೦೦ ಗಂಟೆಯ ಸುಮಾರಿಗೆ ಬೆಂಗಳೂರಿಗೆ ಈ ಮೇಲ್ಕಂಡ ನಮ್ಮ ಓಮಿನಿ ಕಾರಿನಲ್ಲಿ ನಾವೆಲ್ಲರಲೂ ಕುಳಿತುಕೊಂಡು ಹೊರಟೆವು. ನಮ್ಮ ಓಮಿನಿ ಕಾರನ್ನು ನನ್ನ ಮಗನಾದ ಗಂಗಾಧರನು ನಡೆಸುತ್ತಿದ್ದನು. ದಿನಾಂಕ:೨೭-೧೨-೨೦೧೫ ರಂದು ಸಾಯಂಕಾಲ ೦೫-೦೦ ಗಂಟೆಯ ಸುಮಾರಿಗೆ ನನ್ನ ಮಗನು ನಮ್ಮನ್ನು ಕೂಡಿಸಿಕೊಂಡು ಹೊಸಹಳ್ಳಿ ಗ್ರಾಮದ ಹತ್ತಿರ ಗಾಣಿಗರ ಸಮುದಾಯ ಭವನದ ಎದುರುಗಡೆ ಎನ್.ಹೆಚ್.೧೩ ರಸ್ತೆಯಲ್ಲಿ ಚಿತ್ರದುರ್ಗದ ಕಡೆ ನಡೆಸಿಕೊಂಡು ಹೋಗುತ್ತಿರುವಾಗ ಚಿತ್ರದುರ್ಗ ಕಡೆಯಿಂದ ಲಾರಿ ನಂ: ಟಿ.ಎನ್.೫೨/ಬಿ-೯೧೫೫ ನೇದ್ದರ ಚಾಲಕನು ತನ್ನ ಲಾರಿಯನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ನಡೆಸಿಕೊಂಡು ಬಂದು ನಮ್ಮ ಓಮಿನಿ ಕಾರಿನ ಮುಂಭಾಗಕ್ಕೆ ಡಿಕ್ಕಿಪಡಿಸಿದನು. ಈ ಅಪಘಾತದಿಂದ ನನಗೆ ಎಡಗಣಿನ ಮೇಲೆ, ಹಣೆಯ ಮೇಲೆ,ಎಡಗೈಹಿಮ್ಮಡಿಯ ಹತ್ತಿರ ತೆರಚಿದ ಗಾಯವಾಯಿತು. ನನ್ನ ಮಗ ಓಮಿನಿ ಚಾಲಕ ಗಂಗಾಧರನಿಗೆ ಬಲಗಾಲಿಗೆ,ಬಲಗೈಗೆ ಓಳನೋವು ಅಯಿತು.ನನ್ನ ಹೆಂಡತಿಗೆ ಎಡಗೈ ಹತ್ತಿರ,ಎಡಗಾಲಿನಿ ಹತ್ತಿರ ಓಳನೋವು ಅಯಿತು.ನನ್ನ ಮಗಳಿಗೆ ಕೂಡ ಎಡಗೈ ಹತ್ತಿರ ಓಳಪೆಟ್ಟು ಅಯಿತು. ಇದೇ ಕಾರಿನಲ್ಲಿ ಇದ್ದ ಪ್ರಮೀಳಮ್ಮ,ಪವನಕುಮಾರ,ರಾಕೇಶ, ಹಾಗೂ ನಮ್ಮ ಸಂಬಂದಿ ಕವಿತಳಿಗೆ ಯಾವುದೇ ರೀತಿಯ ಗಾಯಗಳಾಗಿರುವುದಿಲ್ಲ. ಅಪಘಾತವನ್ನುಂಟು ಮಾಡಿದ ಲಾರಿ ಚಾಲಕ ಸ್ಥಳದಲ್ಲಿಯೇ ಇದ್ದು ಅವನ ಹೆಸರು ವಿಳಾಸ ಕೇಳಲಾಗಿ ಅತನು ತನ್ನ ಹೆಸರು ಮುತ್ತು.ಎಸ್. ತಂದೆ ಪಾಲಪಂಡೆ.ಎಂ.ಸಾ: ೫ ಇಸ್ಟ್ ಸ್ಟ್ರೀಟ್ ನಾಗಮಲೈ, ಪದುಕೊಟೆ, ಮದುರೈ, ತಮಿಳು ನಾಡು ರಾಜ್ಯ ಅಂತಾ ತಿಳಿಸಿದನು. ಗಾಯಗೊಂಡ ನಾವುಗಳು ಹೊಸಹಳ್ಳಿ ಸರ್ಕಾರಿ ಅಸ್ಪತ್ರೆಗೆ ಬಂದು ಚಿಕಿತ್ಸೆಗೆ ದಾಖಲಾದೆವು. ವೈದ್ಯರು ನಮಗೆ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಬೇರೆ ಯಾವುದಾದರು ದೊಡ್ಡ ಆಸ್ಪತ್ರೆಗೆ ಹೋಗಲು ತಿಳಿಸಿದ್ದರಿಂದ ಗಾಯಗೊಂಡ ನಾವೆಲ್ಲರೂ ವಾಹನದ ಅನುಕೂಲ ಮಾಡಿಕೊಂಡು ಕೊಪ್ಪಳ ಕೃಷಿ ಖಾಸಗಿ ಆಸ್ಪತ್ರೆಗೆ ಹೋಗಿ ಚಿಕಿತ್ಸೆಗೆ ದಾಖಲಾದೆವು. ನಾನು ಇಲ್ಲಿಯ ವರೆಗೆ ಕೊಪ್ಪಳ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆದು ಕೊಂಡು ಈ ಅಪಘಾತದ ಬಗ್ಗೆ ನಮ್ಮ ಬಂದುಗಳೊಂದಿಗೆ ಮಾತನಾಡಿಕೊಂಡು ಈಗ ಠಾಣೆಗೆ ತಡವಾಗಿ ಬಂದು ಈ ನನ್ನ ದೂರನ್ನು ನೀಡಿರುತ್ತೇನೆಂದು ಕೊಟ್ಟ ದೂರನ್ನು ಸ್ವೀಕರಿಸಿ ಪ್ರಕರಣ ದಾಖಲಿಸಿಕೊಂಡಿರುತ್ತೇನೆ. | |||||||||||||||
Hospet Town PS | ||||||||||||||||
8 | Cr.No:0248/2015 (PREVENTION OF DAMAGE TO PUBLIC PROPERTY ACT, 1984 U/s 3,4 ; IPC 1860 U/s 427,506,504,143,147,148,149,323,324 ) |
27/12/2015 | Under Investigation | |||||||||||||
RIOTS - Communal | ||||||||||||||||
Brief Facts : | ದಿನಾಂಕ:27/12/2015 ರಂದು ರಾತ್ರಿ 8-30 ಗಂಟೆಗೆ ಪಿ.ಐ ಸಾಹೇಬರಾದ ಶ್ರೀ,ಢಿ.ಶ್ರೀಧರ್ ರವರು ಠಾಣೆಯಲ್ಲಿ ಹಾಜರಾಗಿ ನೀಡಿದ ದೂರು ಸಾರಾಂಶ ದಿನಾಂಕ:26/12/2015 ರಂದು ಬೆಳಿಗ್ಗೆ 11:00 ಗಂಟೆಗೆ ಹೊಸಪೇಟೆ ತಾಲೂಕು ವಾಲ್ಮೀಕಿ ನಾಯಕ ಸಂಘದ ಅಧ್ಯಕ್ಷರಾದ ಶ್ರೀ,ಶಿವರಾಮ ಗುಜ್ಜಲ ರವರು ಐಸಿಸ್ ಉಗ್ರ ಸಂಘಟನೆಯ ಲಾಂಛನವಿರುವ ಕರಪತ್ರದಲ್ಲಿ ಖಾಜಾಪೀರ್(ಗೀರ್ & ಪೀರ್) ಸಿದ್ದಿ ವಿನಾಯಕ ಗುಡಿ ಹತ್ತಿರ ಹೊಸಪೇಟೆ ಈತನ ಹೆಸರಿನಲ್ಲಿ ಆರ್.ಎಸ್.ಎಸ್, ಭಜರಂಗ ದಳ ಮತ್ತು ಜಾಗೃತ ನಾಯಕ ಬಳಗಗಳ ಹೆಸರುಗಳನ್ನು ಉಲ್ಲೇಖಿಸುತ್ತಾ ಎಲ್ಲಾ ಹಿಂದೂಗಳಿಗೆ ವಿಶೇಷವಾಗಿ ನಾಯಕ ಸಮಾಜವನ್ನು ಕೇಂದ್ರೀಕರಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿ, ಕೋಮು ಸೌಹಾರ್ದತೆಗೆ ಧಕ್ಕೆ ತರುವಂತಹ ವಿಷಯಗಳನ್ನು ಮತ್ತು ಮುಸ್ಲೀಮೇತರರನ್ನು ಸಾರ್ವತ್ರಿಕವಾಗಿ ಕೊಲ್ಲುವ ಶಪಥವಿರುವ ಹಾಗೂ ಮಿಲಿಟರಿ ಮತ್ತು ಪೊಲೀಸ್ ವ್ಯವಸ್ಥೆಗೆ ಸವಾಲು ಹಾಕುವಂತಹ ಕರಪತ್ರ ತಯಾರಿಸಿ ದೇಶದ್ರೋಹ ಕೃತ್ಯ ಹಾಗೂ ಸಮಾಜದಲ್ಲಿ ಶಾಂತಿ ಕದಡುವ ವ್ಯಕ್ತಿಗಳ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಲು ಇದ್ದ ದೂರಿನ ಸಾರಾಂಶದ ಮೇರೆಗೆ ಹೊಸಪೇಟೆ ಪಟ್ಟಣ ಠಾಣೆ ಗುನ್ನೆ ನಂ:245/15, ಕಲಂ:153(A),295(A),120(B),504,506 ಐಪಿಸಿ ರೀತ್ಯ ಪ್ರಕರಣ ದಾಖಲಿಸಿ ಆರೋಪಿಯನ್ನು ದಸ್ತಗಿರಿ ಮಾಡಿ ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ಇರುತ್ತದೆ, ಇದೇ ವಿಷಯಕ್ಕೆ ಸಂಬಂಧಿಸಿದಂತೆ ಈ ದಿನ ದಿನಾಂಕ:27/12/2015 ರಂದು ಸಂಜೆ 6-00 ಗಂಟೆಗೆ ಹಿಂದೂ ಜನಾಂಗದವರು ಸಂಡೂರ್ ರಸ್ತೆಯ ವಾಲ್ಮಿಕಿ ಶಾಲೆಯಲ್ಲಿ ಸಭೆ ಸೇರಿ ಸಭೆ ಮಾಡುವಾಗ ಸುಮಾರು 400-500 ಜನರು ಸೇರಿ ಅದರಲ್ಲಿದ್ದ ಸುಮಾರು 150-200 ಜನರು ಉದ್ಧೇಶ ಪೂರ್ವಕವಾಗಿ ಅಕ್ರಮವಾಗಿ | |||||||||||||||
ಗುಂಪು ಕಟ್ಟಿಕೊಂಡು ರಾತ್ರಿ 7-00 ಗಂಟೆಯ ಸಮಯದಲ್ಲಿ ಮುಸ್ಲೀಂ ಏರಿಯಾದ ಎಸ್.ಆರ್ ನಗರದಲ್ಲಿನ ಮುಖ್ಯ ರಸ್ತೆಗೆ, ನೂರಾನಿ ಮಸೀದಿ ಹತ್ತಿರ ನುಗ್ಗಿ ಈ ಸೂಳೇ ಮಕ್ಕಳನ್ನು ಜೀವ ಸಹಿತ ಬಿಡಬಾರದು ಅಂತ ಅವಾಚ್ಯ ಶಬ್ದಳಿಂದ ಬೈಯುತ್ತಾ ಗಲಾಟೆ ಮಾಡಿ ಸಾರ್ವಜನಿಕರಿಗೆ ಹೊಡೆಯುತ್ತಾ ಕಲ್ಲುಗಳನ್ನು ತೂರುತ್ತಾ ರಸ್ತೆಯ ಅಕ್ಕಪಕ್ಕದಲ್ಲಿ ನಿಲ್ಲಿಸಿದ್ದ ಮೋಟಾರ್ ಸೈಕಲ್ಲುಗಳನ್ನು, ಅಂಗಡಿಗಳನ್ನು ಮತ್ತು ಇತರೆಯವುಗಳನ್ನು ಕೈನಲ್ಲಿದ್ದ ಕಲ್ಲುಗಳಿಂದ ಜಖಂಗೊಳಿಸಿ ಆಸ್ತಿಪಾಸ್ತಿಗಳಿಗೆ ನಷ್ಟ ಉಂಟು ಮಾಡುತ್ತಿದ್ದಾಗ ಪೊಲೀಸರು ಮಧ್ಯ ಪ್ರವೇಶಿಸಿ ಮುಂದಾಗುವ ಅನಾಹುತವನ್ನು ತಪ್ಪಿಸಿದ್ದು, ಇದರಿಂದ ನಗರದಲ್ಲಿ ಪ್ರಕ್ಷುಬ್ಧ ವಾತವರಣ ನಿರ್ಮಾಣವಾಗಿ ಕೋಮು ಸೌಹಾರ್ಧತೆಗೆ ಭಂಗ ಉಂಟಾಗಿರುತ್ತದೆ, ಗಲಾಟೆ ಮಾಡುತ್ತಿದ್ದವರು ಪೊಲೀಸರನ್ನು ನೋಡಿ ಚದುರಿ ಓಡಿ ಹೋಗಿದ್ದು, ಅವರುಗಳ ಹೆಸರು ವಿಳಾಸ ತಿಳಿದು ಬಂದಿರುವುದಿಲ್ಲ, ಈ ಗಲಾಟೆಯಲ್ಲಿ ಶಾಬಾಜ್ ತಂದೆ ಇಜಾರ್ ಹುಸೇನ್ ಮತ್ತು ಇತರೆಯವರು ಗಾಯಗೊಂಡಿದ್ದು, ಮೋಟಾರ್ ಸೈಕಲ್ ಗಳು ಮತ್ತು ಕಾರ್ ಗಳು ಜಖಂಗೊಂಡಿರುತ್ತವೆ, ಕಾರಣ ಎಸ್.ಆರ್ ನಗರದಲ್ಲಿ ಗಲಾಟೆ ಮಾಡಿ ಸಾರ್ವಜನಿಕ ಆಸ್ತಿಪಾಸ್ತಿಗೆ ನಷ್ಟ ಉಂಟು ಮಾಡಿದವರ ವಿರುದ್ಧ ಕ್ರಮ ಜರುಗಿಸಲು ಸೂಚಿಸಲಾಗಿದೆ ಅಂತ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದೆ. | ||||||||||||||||
Kottur PS | ||||||||||||||||
9 | Cr.No:0196/2015 (IPC 1860 U/s 279,337,338 ; INDIAN MOTOR VEHICLES ACT, 1988 U/s 183 ) |
27/12/2015 | Under Investigation | |||||||||||||
MOTOR VEHICLE ACCIDENTS NON-FATAL - Other Roads | ||||||||||||||||
Brief Facts : | ದಿನಾಂಕ 27-12-2015 ರಂದು ಪಿರ್ಯಾದಿ ರಾತ್ರಿ 9-00 ಗಮಟೆಗೆ ಪಿರ್ಯಾದಿದಾರರು ಕೇಸಲಾಪುರ ಗ್ರಾಮದಿಂದ ಇಟ್ಟಿಗಿ ಮಾರ್ಗವಾಗಿ ಕೊಟ್ಟೂರಿಗೆ ಪಾದಯಾತ್ರೆ ಬರುವಾಗ್ಗೆ ಕೊಟ್ಟೂರು-ಇಟ್ಟಿಗಿ ರಸ್ತೆಯಲ್ಲಿ ಸಂಗಮೇಶ್ವರ ಕ್ರಾಸ್ ಹತ್ತಿರ ಿಟ್ಟಿಗಿ ಕಟೆಯಿಂದ ಹಿಂದಿನಿಂದ ಮೋಟಾರ್ ಸೈಕಲ್ ನಂ ಕೆಎ35ಇಬಿ3531 ನೇದ್ದರ ಚಾಲಕ ಬಿ.ಶಂಕ್ರಪ್ಪ ತಂದೆ ವೀರಭದ್ರಪ್ಪ, ಮುಖ್ಯಪೇದೆ ಇಟ್ಟಿಗಿ ಠಾಣೆ ಇವರು ತನ್ನ ಮೋಟಾರ್ ಸೈಕಲ್ ನ್ನು ಅತೀವೇಗ ಮತ್ತು ಅಜಾಗೃಕತೆಯಿಂದ ನಡೆಸಿಕೊಂಡು ಬಂದು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಪಿರ್ಯಾದಿಗೆ ಅಪಘಾತ ಪಡಿಸಿ ಡಿಕ್ಕಿಹೊಡೆಸಿದ್ದರಿಂದ ಪಿರ್ಯಾದಿಯ ಬಲಕಾಲು ಮೀನುಖಂಡದ ಹತ್ತಿರ,ಎಡಕೈಮುಂಗೈ ಹತ್ತಿರ ಒಳಪೆಟ್ಟಾಗಿ, ಅಂಗೈಗೆ ತಲೆಯ ಹಿಂಭಾಗದಲ್ಲಿ ಮತ್ತು ಎರಡು ಕಾಲುಬೆರಳುಗಳಿಗೆ ರಕ್ತಗಾಯಗಳಾಗಿದ್ದು ಸದರಿ ಅಪಘಾತದಲ್ಲಿ ಆರೋಪಿಗೂ ಸಹ ಗಾಯಗಳಾಗಿರುತ್ತವೆ ಈ ಬಗ್ಗೆ ಕ್ರಮ ಜರುಗಿಸಲು ಕೊಟ್ಟೂರು ಸರ್ಕಾರಿ ಆಸ್ಪತ್ರೆಯಲ್ಲಿ ಕೊಟ್ಟ ದೂರು ಮೇರೆಗೆ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದೆ. | |||||||||||||||
10 | Cr.No:0197/2015 (INDIAN MOTOR VEHICLES ACT, 1988 U/s 183 ; IPC 1860 U/s 279,337,338 ) |
28/12/2015 | Under Investigation | |||||||||||||
MOTOR VEHICLE ACCIDENTS NON-FATAL - Other Roads | ||||||||||||||||
Brief Facts : | ದಿನಾಂಕ 28-12-2015 ರಂದು ಪಿರ್ಯಾದಿ ಠಾಣೆಗೆ ಹಾಜರಾಗಿ ಕೊಟ್ಟ ಕಂಪ್ಯೂಟರ್ ನಲ್ಲಿ ತಯಾರಿಸಿದ ದೂರು ಸಾರಾಂಶ: ದಿನಾಂಕ 27-12-2015 ರಂದು ಸಂಜೆ 4-00 ಗಂಟೆಗೆ ಪಿರ್ಯಾದಿಯ ಅಣ್ಣನ ಮಗನಾದ ಜಿ.ಎಂ. ಕೊಟ್ರಯ್ಯನು ಕೊಟ್ಟೂರಿನಲ್ಲಿ ಕೆಲಸ ಮುಗಿಸಿಕೊಂಡು ತನ್ನ ಮೋಟಾರ್ ಸೈಕಲ್ ನಂ. ಕೆಎ-17ಇಇ-1055 ನೇದ್ದರಲ್ಲಿ ಕೊಟ್ಟೂರು-ಬೊಮ್ಮನಹಳ್ಳಿ ರಸ್ತೆಯ ಹ್ಯಾಳ್ಯಾ ಸಮೀಪ ಸಕ್ರಳ್ಳಿ ಮಲ್ಲಯ್ಯನ ಹೊಲದ ಹತ್ತಿರ ಬರುವಾಗ ಎದುರುಗಡೆ ಹ್ಯಾಳ್ಯಾ ಕಡೆಯಿಂದ ಮೋಟಾರ್ ಸೈಕಲ್ ನಂ. ಕೆಎ-35 ಡಬ್ಲ್ಯೂ-0712 ನೇದ್ದರ ಚಾಲಕ ಸಂತೋಷ ಎಂಬುವನು ಮೋಟಾರ್ ಸೈಕಲ್ ನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ನಡೆಸಿಕೊಂಡು ಬಂದು ಕೊಟ್ರಯ್ಯನ ಮೋಟಾರ್ ಸೈಕಲ್ ಗೆ ಡಿಕ್ಕಿ ಹೊಡೆಸಿ ಅಪಘಾತ ಪಡಿಸಿದ್ದರಿಂದ ಕೊಟ್ರಯ್ಯನಿಗೆ ಎಡಕಾಲು ಮೀನು ಖಂಡದ ಕೆಳಗೆ ಮೂಳೆ ಮುರಿದಿದ್ದು, ಎಡಹಣೆಯ ಮೇಲೆ, ಎಡಕಿವಿ ಹಿಂಭಾಗ ತಲೆಯಲ್ಲಿ ರಕ್ತಗಾಯವಾಗಿದ್ದು, ಸದರಿ ಗಾಯಾಳುವನ್ನು ಕೊಟ್ಟೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ, ವೈದ್ಯರ ಸಲಹೆ ಮೇರೆಗೆ ಹೆಚ್ಚಿನ ಚಿಕಿತ್ಸೆಗಾಗಿ ದಾವಣಗೆರೆ ಎಸ್.ಎಸ್. ಆಸ್ಪತ್ರೆಗೆ ದಾಖಲಿಸಿ, ತಡವಾಗಿ ಬಂದು ದೂರು ನೀಡುತ್ತಿದ್ದು, ಅಪಘಾತ ಪಡಿಸಿದ ಮೋಟಾರ್ ಸೈಕಲ್ ಚಾಲಕನ ವಿರುದ್ದ ಕಾನೂನು ಕ್ರಮ ಜರುಗಿಸಲು ಕೊಟ್ಟ ದೂರು ಮೇರೆಗೆ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತದೆ. | |||||||||||||||
Kurugod PS | ||||||||||||||||
11 | Cr.No:0210/2015 (IPC 1860 U/s 279,304(A) ) |
27/12/2015 | Under Investigation | |||||||||||||
MOTOR VEHICLE ACCIDENTS FATAL - Other Roads | ||||||||||||||||
Brief Facts : | ನಿನ್ನೆ ದಿನ ದಿನಾಂಕ 26/12/2015 ರಂದು ಎಮ್ಮಿಗನೂರು ಗ್ರಾಮದಲ್ಲಿ ಪಿರ್ಯಾದಿದಾರರ ಮಗ ಶಿವಪ್ಪನು ತನ್ನ ಸ್ನೇಹಿತ ತುಕಾರಾಂನನ್ನು ಮದುವೆ ಮನೆಯಲ್ಲಿ ಬಿಟ್ಟು ಹಿಂತಿರುಗಿ ನಮ್ಮ ಗ್ರಾಮಕ್ಕೆ ಒಬ್ಬನೇ ನಮ್ಮ ಮೋಟಾರ್ ಸೈಕಲ್ ನಂ ಕೆಎ-34 ವೈ-6069 ನೇದ್ದರಲ್ಲಿ ಎಮ್ಮಿಗನೂರು ಗ್ರಾಮದಿಂದ ಬರುತ್ತಿರುವಾಗ ರಾತ್ರಿ 11:00 ಗಂಟೆ ಸುಮಾರಿಗೆ ಕುರುಗೋಡು ಹತ್ತಿರವಿರುವ ಹೊಸ ಕೆಎಸ್ಆರ್ಟಿಸಿ ಡಿಪೋ ಮುಂದೆ ಕಂಪ್ಲಿ-ಕುರುಗೋಡು ರಸ್ತೆಯಲ್ಲಿ ತನ್ನ ಮೋಟಾರ್ ಸೈಕಲ್ನ್ನು ಅತಿವೇಗ ಮತ್ತು ಅಜಾಗೂರುಕತೆಯಿಂದ ಚಾಲನೆ ಮಾಡಿಕೊಂಡು ಬಂದು ನಿಯಂತ್ರಣ | |||||||||||||||
ತಪ್ಪಿ ರಸ್ತೆಯಲ್ಲಿ ಮೋಟಾರ್ ಸೈಕಲ್ ಸಮೇತ ಎರಡು ಮೂರು ಸಲ ಪಲ್ಟಿಯಾಗಿ ಬಿದ್ದು ತಲೆಗೆ ಬಲವಾದ ರಕ್ತಗಾಯವಾಗಿ, ಎರಡು ಮೊಣಕಾಲಿಗೆ ಮೈಗೆ ಕೈಗಳಿಗೆ ರಕ್ತಗಾಯವಾಗಿ ಮೃತಪಟ್ಟಿರಬಹುದು. ಕಾರಣ ತನ್ನ ಸಾವಿಗೆ ತಾನೇ ಕಾರಣನಾದ ಮೋಟಾರ್ ಸೈಕಲ್ ಚಾಲಕ ನನ್ನ ಮಗ ಶಿವಪ್ಪ ರವರ ಶವದ ಮುಂದಿನ ಕಾನೂನು ಕ್ರಮ ಜರುಗಿಸಲು ಕೋರಿ ನಮ್ಮ ಹಿರಿಯರೊಂದಿಗೆ ಚಚರ್ಿಸಿ ಈ ದಿನ ತಡವಾಗಿ ಬಂದು ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಿರುತ್ತದೆ ಇದರೊಂದಿಗೆ ಪಿರ್ಯಾದಿ ನೀಡಿದ ದೂರಿನ ಅಸಲು ಪ್ರತಿಯನ್ನು ಲಗತ್ತಿಸಿ ನಿವೇಧಿಸಿಕೊಂಡಿರುತ್ತೇನೆ. | ||||||||||||||||
12 | Cr.No:0211/2015 (IPC 1860 U/s 279,337 ) |
28/12/2015 | Under Investigation | |||||||||||||
MOTOR VEHICLE ACCIDENTS NON-FATAL - State Highways | ||||||||||||||||
Brief Facts : | ಪಿರ್ಯಾದಿದಾರರ ಲಾರಿ ನಂ ಕೆಎ10/2842 ನೇದ್ದಕ್ಕೆ ಮೈಸೂರಿನಲ್ಲಿ ಕಾಫಿ ಬೀಜ ಲೋಡ್ ಮಾಡಿಕೊಂಡು ಅದನ್ನು ಹೈದಾರಬಾದ್ಗೆ ತೆಗೆದುಕೊಂಡು ಹೋಗಲು ಬಾಡಿಗೆ ಇದ್ದುದರಿಂದ ದಿನಾಂಕ 27/12/2016 ರಂದು ಬೆಳಿಗ್ಗೆ 8:00 ಗಂಟೆ ಸುಮಾರಿಗೆ ಮೈಸೂರಿಲ್ಲಿ ಕಾಫಿ ಬೀಜ ಲೋಡ್ ಮಾಡಿಕೊಂಡು ಪಿರ್ಯಾದಿ, ಮತ್ತೊಬ್ಬ ಚಾಲಕ ಇಮ್ರಾನ್ ಪಾಷಾ, ಕ್ಲೀನರ್ ನಿಲೇಶ್ ಎಲ್ಲರೂ ಕೂಡಿ ಹೈದರಾಬಾದ್ಗೆ ಹೋಗಲು ರಾತ್ರಿ 10:45 ಗಂಟೆ ಸುಮಾರಿಗೆ ಬಳ್ಳಾರಿ ದಾಟಿ ಕೊಳೂರು ಕ್ರಾಸ್ ಹತ್ತಿರ ಹಳ್ಳದ ಬ್ರಿಡ್ಜ್ ಹತ್ತಿರ ಬಳ್ಳಾರಿ-ಶಿರುಗುಪ್ಪ ರಸ್ತೆಯಲ್ಲಿ ಹೋಗುತ್ತಿರುವಾಗ ನಮ್ಮ ಮುಂದುಗಡೆ ಯಾವುದೋ ಒಂದು ಟ್ರೇಲರ್ ಹೊರಟಿದ್ದು ಆ ಟ್ರೇಲರ್ ಚಾಲಕ ಟ್ರೇಲರ್ನ ಬ್ರೇಕ್ ಹಾಕಿದ್ದು ಆ ಸಮಯದಲ್ಲಿ ಪಿರ್ಯಾದಿ ಲಾರಿಯ ಚಾಲಕ ಇಮ್ರಾನ್ಪಾಷಾ ಲಾರಿಯನ್ನು ಅತಿವೇಗ ಮತ್ತು ಅಜಾಗೂರುಕತೆಯಿಂದ ಜೋರಾಗಿ ಚಲಾಯಿಸಿಕೊಂಡು ಹೋಗಿ ಎರಡು ವಾಹನಗಳ ಮದ್ಯೆ ನಿಗದಿತ ಅಂತರವನ್ನು ಕಾಯ್ದುಕೊಳ್ಳದೇ ಮುಂದೆ ಹೊರಟಿದ್ದ ಟ್ರೇಲರ್ಗೆ ಡಿಕ್ಕಿ ಹೊಡೆದಿದ್ದು, ಟ್ರೇಲರ್ ಚಾಲಕ ತನ್ನ ಲಾರಿಯನ್ನು ನಿಲ್ಲಿಸದೇ ಹೋಗಿದ್ದು, ಲಾರಿ ಟ್ರೇಲರ್ಗೆ ಡಿಕ್ಕಿ ಹೊಡೆದ ರಭಸಕ್ಕೆ ಲಾರಿಯಲ್ಲಿದ್ದ ಕ್ಲೀನರ್ ನಿಲೇಶನಿಗೆ ಎಡಗಾಲಿಗೆ ರಕ್ತಗಾಯವಾಗಿದ್ದು ಕಾರಣ ಅಪಘಾತ ಮಾಡಿ ಪಿರ್ಯಾದಿ ಲಾರಿ ಕ್ಲೀನರ್ ನಿಲೇಶನಿಗೆ ಗಾಯಗಳನ್ನುಂಟು ಮಾಡಿದ ಲಾರಿ ನಂ ಕೆಎ-10/2842 ನೇದ್ದರ ಚಾಲಕ ಇಮ್ರಾನ್ಪಾಷಾ ರವರ ವಿರುದ್ದ ಕಾನೂನು ಕ್ರಮ ಜರುಗಿಸಲು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿರುತ್ತದೆ ಇದರೊಂದಿಗೆ ಪಿರ್ಯಾದಿ ನಿಡಿದ ದೂರಿನ ಅಸಲು ಪ್ರತಿಯನ್ನು ಲಗತ್ತಿಸಿರುತ್ತೇನೆ. | |||||||||||||||
P.D. Halli PS | ||||||||||||||||
13 | Cr.No:0068/2015 (MMDR (MINES AND MINERALS REGULATION OF DEVELOPMENT) ACT 1957 U/s 4(1),4(1A),21(1) ; IPC 1860 U/s 379 ) |
28/12/2015 | Under Investigation | |||||||||||||
KARNATAKA STATE LOCAL ACTS - Mmdr (Mines & Minerals Regulation Development) Act 1957 | ||||||||||||||||
Brief Facts : | ಈ ದಿನ ದಿನಾಂಕ 28/12/20152 ರಂದು ಬೆಳಿಗ್ಗೆ 10.00 ಗಂಟೆಗೆ ಶ್ರೀ. ಪ್ರಸಾದ್ ಕೆ. ಗೋಖಲೆ ಸಿ.ಪಿ.ಐ ಬಳ್ಳಾರಿ ಗ್ರಾಮೀಣ ವೃತ್ತ ರವರು ಠಾಣೆಗೆ ಹಾಜರಾಗಿ ನೀಡಿದ ವಿಶೇಷ ವರದಿಯನ್ನು ನೋಡಲಾಗಿಈ ದಿನಾಂಕ 28/12/2015 ರಂದು ಬೆಳಿಗ್ಗೆ 8.20 ಗಂಟೆಗೆ ರೂಪನಗುಡಿ ಗ್ರಾಮದ ಹಗರಿ ನದಿ ದಂಡೆಯ ಮೇಲೆ ಟ್ರಾಕ್ಟರ್ ಮತ್ತು ಟ್ರಾಲಿಯಲ್ಲಿ ಮರಳನ್ನು ಚಾಲಕ ಮತ್ತು ಮಾಲಿಕ ಅಕ್ರಮವಾಗಿ ಮರಳನ್ನು ತುಂಬಿಕೊಂಡು ಬರುತ್ತಿದ್ದಾಗ ಸಿ.ಪಿ.ಐ ಹಾಗೂ ಸಿಬ್ಬಂದಿಯವರು ಟ್ರಾಕ್ಟರ್ ನ್ನು ನಿಲ್ಲಿಸಿದಾಗ ಚಾಲಕನು ಟ್ರಾಕ್ಟರ್ ಮತ್ತು ಟ್ರಾಲಿಯಲ್ಲಿದ್ದ ಮರಳನ್ನು ಸ್ಥಳದಲ್ಲಿಯೇ ಬಿಟ್ಟು ಓಡಿ ಹೋಗಿರುತ್ತಾನೆ. ಹಾಗೂ ಒಟ್ಟು ಟ್ರಾಲಿಯಲ್ಲಿದ್ದ ಸುಮಾರು 2 ಟನ್ ಮರಳಿದ್ದು ಒಟ್ಟು ರೂ 2,೦೦೦/ ಗಳಾಗಬಹುದು ಎಂದು ಇದ್ದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದೆ. | |||||||||||||||
Siruguppa PS | ||||||||||||||||
14 | Cr.No:0274/2015 (CODE OF CRIMINAL PROCEDURE, 1973 U/s 109 ) |
28/12/2015 | Under Investigation | |||||||||||||
CrPC - Security For Good Behaviour (Sec 109) | ||||||||||||||||
Brief Facts : | ಎಸ್.ತಿಪ್ಪೇರುದ್ರಪ್ಪ ಪಿ.ಎಸ್.ಐ(ಅ.ವಿ) ಆದ ನಾನು ಮಾನ್ಯ ನ್ಯಾಯಲಯದಲ್ಲಿ ನಿವೇದಿಸಿಕೊಳ್ಳುವುದೇನೆಂದರೆ ಈ ದಿನ ಬೆಳಿಗ್ಗೆ 7-00 ಗಂಟೆಗೆ ಗಂಟೆಗೆ ಅಪರಾಧ ಸಿಬ್ಬಂದಿಯವರಾದ ಪಿಸಿ 128, ಕರೆದುಕೊಂಡು ಗುಡ್ ಮಾರ್ನಿಂಗ್ ಬೀಟ್ ಕರ್ತವ್ಯಕ್ಕೆ ಸಿರುಗುಪ್ಪ ಪಟ್ಟಣ ಮತ್ತು ಹೊರವಲಯ ಕಡೆಗೆ ಠಾಣೆಯಿಂದ ಮೋಟಾರು ಸೈಕಲಗಳಲ್ಲಿ ಹೊರಟಿದ್ದು ಸಿರುಗುಪ್ಪ ಪಟ್ಟಣದ ಕೃಷ್ಣನಗರ ,ಕೆ.ಹೆಚ್.ಬಿ ಕಾಲೋನಿ, ಸದಾಶಿವನಗರ, ಪ್ರಮುಖ ಬೀದಿಗಳಲ್ಲಿ ಗಸ್ತು ಕರ್ತವ್ಯ ನಿರ್ವಹಿಸತ್ತಾ ದೇಶನೂರು ರಸ್ತೆಯ ಕಡೆಗೆ ಹೊಗುತ್ತಿರುವಾಗ ಬೆಳಿಗ್ಗೆ 7-45 ಎ.ಎಂ ಗಂಟೆಗೆ ಗಾಂಧಾಮ್ಮ ಗುಡಿ ಹತ್ತಿರ ನಿಂತಿದ್ದ ಇಬ್ಬರು ವ್ಯಕ್ತಿಗಳು ಪೊಲೀಸ್ರಾದ ನಮ್ಮನ್ನು ನೋಡಿ ತನ್ನ ಮುಖವನ್ನು ತಮ್ಮ ಕೈಗಳಿಂದ ಮರೆಮಾಚಿಕೊಂಡು ಅಲ್ಲಿಂದ ಹಿಂದಕ್ಕೆ ತಿರುಗಿ ತಪ್ಪಿಸಿಕೊಂಡು ಹೋಗಲು ಪ್ರಯತ್ನಿಸಿದವರನ್ನು ನೋಡಿ ಶಂಕಿಸಿ ಸದರಿಯವರನ್ನು ಸಿಬ್ಬಂದಿಯೊಂದಿಗೆ ಹಿಡಿದುಕೊಂಡು ಅವರ ಹೆಸರು | |||||||||||||||
ಮತ್ತು ವಿಳಾಸವನ್ನು ವಿಚಾರಿಸಲು ಅವರು ಗಾಭರಿಯಿಂದ ತೊದಲುತ್ತಾ ತನ್ನ ಹೆಸರು ಗಾದಿಲಿಂಗ ಇನ್ನೊಬ್ಬನು ಬಸವ ಅಂತಾ ಎಂದು ತಿಳಿಸಿದರು ಅವರನ್ನು ಒಬ್ಬೊಬ್ಬರಾಗಿ ಹೆಸರು ಮತ್ತು ವಿಳಾಸವನ್ನು ಪುನಃ ವಿಚಾರಿಸಲು ತನ್ನ ಹೆಸರು ಗಾದಿಲಿಂಗಪ್ಪ ತಂದೆ ಕೊಂಚಪ್ಪ ವ: 30 ವರ್ಷ ಕುರಬರು ಜನಾಂಗ ಕೂಲಿ ಕೆಲಸ ವಾಸ: ಎ.ಆರ್.ಎಸ್.ಪಾರ್ಮಕ ಹತ್ತಿರ ಸಿರುಗುಪ್ಪ 2) ಬಸವ ತಂದೆ ಗೋವೀಂದಪ್ಪ ವ: 22 ವರ್ಷ ಕುರಬರು ಜನಾಂಗ ಕೂಲಿ ಕೆಲಸ ವಾಸ: ಬಸವಣ್ಣನ ಗುಡಿ ಹತ್ತಿರ ಸಿರುಗುಪ್ಪ ಎಂದು ತಿಳಿಸಿದ್ದು ಅವರನ್ನು ಆ ಸಮಯದಲ್ಲಿ ಆ ಸ್ಥಳದಲ್ಲಿ ಹಾಜರಿದ್ದು ಪೊಲೀಸರಾದ ನಮ್ಮನ್ನು ನೋಡಿ ತಪ್ಪಿಸಿಕೊಂಡು ಹೋದ ಬಗ್ಗೆ ವಿಚಾರಿಸಲು ಸಮರ್ಪಕ ವಾದ ಉತ್ತರವನ್ನು ನೀಡದೇಇರುವುದರಿಂದ ಆ ಸ್ಥಳದಲ್ಲಿ ಆ ಸಮಯದಲ್ಲಿ ಯಾವುದಾದರೂ ಸ್ವತ್ತಿನ ಘೋರ ಸ್ವರೂಪದ ಅವರಾಧವನ್ನು ವೆಸಗಲು ಬಂದಿರಬಹುದೆಂದು ಶಂಕಿಸಿ ಮುಂಜಾಗೃತಾಕ್ರಮವಾಗಿ ಆರೋಪಿತರನ್ನು ಠಾಣೆಗೆ 8-45 ಎ.ಎಮ್ ಗಂಟೆಗೆ ಬಂದು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದೆ. | ||||||||||||||||
Tekkalkota PS | ||||||||||||||||
15 | Cr.No:0142/2015 (INDIAN MOTOR VEHICLES ACT, 1988 U/s 187 ; IPC 1860 U/s 279,337,338 ) |
27/12/2015 | Under Investigation | |||||||||||||
MOTOR VEHICLE ACCIDENTS NON-FATAL - State Highways | ||||||||||||||||
Brief Facts : | ಪಿರ್ಯಾದಿದಾರರು ದಿನಾಂಕ; 26/12/2015 ರಂದು ರಾತ್ರಿ ಸುಮಾರು 7-30 ಗಂಟೆಗೆ ಅಂಗಡಿಯಲ್ಲಿ ಬೀಡಿ ತೆಗೆದುಕೊಂಡು ತಮ್ಮ ಮನೆಗೆ ಹೋಗಲು ಎಸ್ಹೆಚ್-೧೯ ರಸ್ತೆಯನ್ನು ದಾಟುತ್ತಿರುವಾಗ ಆರೋಪಿ ಮೋಟಾರ್ ಸೈಕಲ್ ನಂಬರ್ ಕೆಎ-36 ಆರ್-615 ನೇದ್ದನ್ನು ಅತಿವೇಗ ಮತ್ತು ಅಜಾಗರುಕತೆಯಿಂದ ನಡೆಸಿಕೊಂಡು ಬಂದು ಪಿರ್ಯಾದಿದಾರರಿಗೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರ ಎಡಗಾಲು ಮುಂಗಾಲು ಮುರಿದಿದ್ದು, ತಲೆ ಮತ್ತು ಬಲಗಾಲು ಮೊಣಕಾಲಿಗೆ ಗಾಯಪೆಟ್ಟುಗಳು ಆಗಿರುತ್ತವೆ. ಮೋಟಾರ್ ಸೈಕಲ್ ಚಾಲಕ ಮಣಿಕಂಟನ ವಿರುದ್ದ ಕಾನೂನು ಕ್ರಮ ಜರುಗಿಸಲು ಕೊಟ್ಟ ದೂರನ್ನು ಪಡೆದು ಪ್ರಕರಣ ದಾಖಲು ಮಾಡಿದೆ. | |||||||||||||||
ಸೋಮವಾರ, ಡಿಸೆಂಬರ್ 28, 2015
PRESS NOTE OF 28/12/2015
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ