ಮಂಗಳವಾರ, ಡಿಸೆಂಬರ್ 8, 2015

PRESS NOTE OF 08/12/2015

Crime Key Report From   To   
Sl. No FIR No FIR Date Crime Group - Crime Head Stage of case
Brucepet PS
1 Cr.No:0240/2015
(IPC 1860 U/s 504,323,354,506,34 )
08/12/2015 Under Investigation
MOLESTATION - Public Place
Brief Facts :  ಈ ದಿನ ದಿನಾಂಕ: 08/08/15 ರಂದು ಮಧ್ಯಾಹ್ನ  03-15 ಗಂಟೆಗೆ ಫಿರ್ಯಾದಿದಾರರು ಠಾಣೆಗೆ ಬಂದು ನೀಡಿದ ದೂರಿನ ಪ್ರತಿಯನ್ನು ಪಡೆದುಕೊಂಡು ಪರಿಶೀಲಿಸಿ ನೋಡಲು, ಫಿರ್ಯಾದಿದಾರರು ಮತ್ತು ಫಿರ್ಯಾದಿದಾರರ ಬಾಮೈದುನನಾದ ಕಿಶೋರ ರವರು ಸೇರಿ 2012 ನೇ ಸಾಲಿನಲ್ಲಿ ರಾಮಮೂರ್ತೀ ರವರಿಂದ ಬಳ್ಳಾರಿ ನಗರದ ಮಿಲ್ಲರ್ ಪೇಟೆಯ ನೀರಿನ ಟ್ಯಾಂಕ್ ಹತ್ತಿರದ ಟಿ.ಎಸ್. ನಂ: 577 ನೇದ್ದರಲ್ಲಿನ ಮನೆಯನ್ನು ತೆಗೆದುಕೊಂಡು ರಿಪೇರಿ ಮಾಡಿಸಿ ಅವರ ಚಿಕ್ಕಪ್ಪನ ಮಗನಾದ ಮೋಹನ್ ರವರಿಗೆ ಬಾಡಿಗೆ ಕೊಟ್ಟಿದ್ದು,  ಈ ದಿನ ಮಧ್ಯಾಹ್ನ 01-30 ಗಂಟೆಗೆ ಆಪಾದಿತರು ಫಿರ್ಯಾದಿದಾರರ ಮನೆಯ ಹತ್ತಿರ ಬಂದು ಸದರಿ ಮನೆಯು ನಮಗೆ ಸಂಬಂದಿಸಿದ್ದು ಎಂದು ಫಿರ್ಯಾದಿದಾರರ ಗಂಡನೊಂದಿಗೆ ಜಗಳ ತೆಗೆದು ದುರ್ಭಾಷೆಯಿಂದ, ಕೈಗಳಿಂದ ಹೊಡೆ ಬಡೆ ಮಾಡಿದಾಗ ಬಿಡಿಸಲು ಹೋದ ಫಿರ್ಯಾದಿದಾರಿಗೂ ಸಹ ಹಲ್ಲೆ ಮಾಡಿ ಪ್ರಾಣ ಬೆದರಿಕೆಯನ್ನು ಹಾಕಿದ್ದು, ಸದರಿ ಆಪಾದಿತರ ವಿರುದ್ದ ಸೂಕ್ತ ಕ್ರಮಕ್ಕಾಗಿ ದೂರು ನೀಡಿರುತ್ತಾರೆ.
Hadagali PS
2 Cr.No:0118/2015
(IPC 1860 U/s 00MP )
08/12/2015 Under Investigation
MISSING PERSON - Girl
Brief Facts :  ದಿನಾಂಕ 05-12-2015 ರಂದು ಬೆಳಿಗ್ಗೆ 09-00 ಗಂಟೆಗೆ ಪಿರ್ಯಾದಿ ಅಂಬಾಯಿ ನಿಂಗಪ್ಪನ ಮಗಳಾದ ಕುಮಾರಿ ಅಂಬುಜ, ತನ್ನ ಮನೆಯಲ್ಲಿ ಯಾರು ಇಲ್ಲದನ್ನು ಮನಗಂಡು ಬಾವಿಹಳ್ಳಿ ಗ್ರಾಮದ ತನ್ನ ಮನೆಯಿಂದ  ಕಾಣೆಯಾಗಿರುತ್ತಾಳೆ. ಕಾರಣ ಕಾಣೆಯಾದ ಕುಮಾರಿ ಅಂಬುಜ ಅಂದಿನಿಂದ ವಾಸಪ್ ಮನೆಗೆ ಬಾರದೆ ಸಂಭಂದಿಕರ ಮನೆಗೆ ಹೋಗದೆ ಕಾಣೆಯಾಗಿರುತ್ತಾಳೆ, ಪತ್ತೆ ಮಾಡಿಕೊಡಲು  ಕಾಣೆಯಾದ ಹುಡುಗಿ ತಂದೆ ಠಾಣೆಗೆ ಹಾಜರಾಗಿ ನೀಡಿದ ಕಂಪ್ಯೂಟರಿ ಕೃತ  ದೂರಿನ ಮೇರೆಗೆ ಪ್ರಕರಣ ದಾಖಲಿಸಿ ಪತ್ತೆ ಕಾರ್ಯ ಕೈಗೊಂಡಿದೆ
Hosahalli PS
3 Cr.No:0228/2015
(KARNATAKA POLICE ACT, 1963 U/s 87 )
08/12/2015 Under Investigation
 KARNATAKA POLICE ACT 1963 - Street Gambling (87)
Brief Facts :  ದಿನಾಂಕ:೦೭/೧೨/೨೦೧೫ ರಂದು ಸಾಯಂಕಾಲ ೫-೪೫ ಗಂಟೆಗೆ ಹೊಸಹಳ್ಳಿ ಠಾಣೆಯ ಪಿ.ಎಸ್.ಐ. ರವರಾದ ಶ್ರೀ.ಡಿ.ಸುರೇಶ ರವರು ಠಾಣೆಯಲ್ಲಿ ಹಾಜರಾಗಿ ವರದಿಯನ್ನು ಕೊಟ್ಟಿದ್ದೇನೆಂದರೆ, ಈ ದಿನ ದಿನಾಂಕ:೦೭/೧೨/೨೦೧೫ ರಂದು ಸಾಯಂಕಾಲ ೪-೦೦ ಗಂಟೆಯ ಸುಮಾರಿಗೆ ನಾನು ಠಾಣೆಯಲ್ಲಿದ್ದಾಗ ಸಿದ್ದಾಪುರ ಗ್ರಾಮದ ಹತ್ತಿರ ಇರುವ ರಾಜಣ್ಣನ ಹೊಲದ ಸಮೀಪ ಸಾರ್ವಜನಿಕ ರಸ್ತೆಯಲ್ಲಿ ಅಂದರ್- ಬಾಹರ್ ಎಂಬ ನಸೀಬಿನ ಇಸ್ಪೇಟ್ ಜೂಜಾಟ ನಡೆಯುತ್ತಿದೆ ಅಂತ ಮಾಹಿತಿ ಬಂದಿದ್ದರಿಂದ ಠಾಣೆಯಲ್ಲಿದ್ದ ಪಿ.ಸಿ.ಗಳಾದ ೧೮೯,೧೦೭೩,೯೦೯ ರವರಿಗೆ ಇಸ್ಪೇಟ್ ಜೂಜಾಟದ ಬಗ್ಗೆ ಮಾಹಿತಿಯನ್ನು ತಿಳಿಸಿ ನಾನು ಮೇಲ್ಕಂಡ ಸಿಬ್ಬಂಧಿಯೊಂದಿಗೆ ಸರ್ಕಾರಿ ಜೀಪ್ ನಂ.ಕೆ.ಎ.೩೪/ಜಿ.೪೦೩ ರಲ್ಲಿ ಕೂಡಿಸಿಕೊಂಡು ಸಾಯಂಕಾಲ ೪-೧೦ ಗಂಟೆಗೆ ಠಾಣೆಯಿಂದ ಹೊರಟು ಸಾಯಂಕಾಲ ೪-೩೦ ಗಂಟೆಯ ಸುಮಾರಿಗೆ ಸಿದ್ದಾಪುರ ಗ್ರಾಮದ ಊರ ಹೊರಗಡೆ ಜೀಪನ್ನು ನಿಲ್ಲಿಸಿಕೊಂಡು ಇಬ್ಬರು ಪಂಚರಿಗೆ ಬರಮಾಡಿಕೊಂಡು ಪಂಚರಿಗೆ ಇಸ್ಪೇಟ್ ಜೂಜಾಟದ ಬಗ್ಗೆ ಮಾಹಿತಿಯನ್ನು ತಿಳಿಸಿ ಪಂಚರು ಮತ್ತು ಸಿಬ್ಬಂಧಿಯೊಂದಿಗೆ ಕಾಲು ನಡಿಗೆಯಲ್ಲಿ ನಡೆದು ಕೊಂಡು ಹೋಗಿ ಸಾಯಂಕಾಲ ೪-೪೦ ಗಂಟೆಗೆ ಹೋಗಿ ಸಿದ್ದಾಪುರ ಗ್ರಾಮದ ಹತ್ತಿರ ರಾಜಣ್ಣನ ಹೊಲದ ಬಳಿ ಮರೆಯಲ್ಲಿ ನಿಂತು ನೋಡಲಾಗಿ ರಾಜಣ್ಣನ ಹೊಲದ ಸಮೀಪ ಸಾರ್ವಜನಿಕ ರಸ್ತೆಯಲ್ಲಿ ೩ ಜನರು ಗುಂಪಾಗಿ ಕುಳಿತುಕೊಂಡು ಅಂದರ್-ಬಾಹರ್ ಎಂಬ ನಸೀಬಿನ ಇಸ್ಪೇಟ್ ಜೂಜಾಟ ಆಡುತ್ತಿರುವುದನ್ನು ಖಚಿತ ಪಡಿಸಿಕೊಂಡು ಸಾಯಂಕಾಲ ೪-೪೫ ಗಂಟೆಗೆ ನಾನು, ಸಿಬ್ಬಂಧ್ದಿ ಮತ್ತು ಪಂಚರೊಂದಿಗೆ ಇಸ್ಪೇಟ್ ಜೂಜಾಟದ ಸ್ಥಳದ ಮೇಲೆ ದಾಳಿ ಮಾಡಿ ಇಸ್ಪೇಟ್ ಜೂಜಾಟ ಆಡುತ್ತಿದ್ದ ವ್ಯಕ್ತಿಗಳನ್ನು ಹಿಡಿದುಕೊಂಡು ಅವರ ಹೆಸರು ವಿಳಾಸ ಕೇಳಲಾಗಿ ೧] ಸೋಮಪ್ಪ ತಂದೆ ಲೇಟ್ ದೊಡ್ಡ ಹೊನ್ನೂರಪ್ಪ,ವ:೪೦ ವರ್ಷ,ಆದಿ ಕರ್ನಾಟಕ ಜನಾಂಗ,ವ್ಯವಸಾಯ,ವಾಸ:ಸಿದ್ದಾಪುರ ಗ್ರಾಮ  ಅಂತ ತಿಳಿಸಿದ್ದು ಇವನ ಮುಂದುಗಡೆ ಇಸ್ಪೇಟ್ ಜೂಜಾಟದ ಹಣ ೧೭೦=೦೦ ರೂಗಳು ದೊರೆಯಿತು ೨] ಜಗದೀಶ್ ತಂದೆ ಬಸವರಾಜ,ವ:೨೧ ವರ್ಷ,ಆದಿ ಕರ್ನಾಟಕ ಜನಾಂಗ,ಕೂಲಿ ಕೆಲಸ ,ವಾಸ:ಸಿದ್ದಾಪುರ ಗ್ರಾಮ ಅಂತ ತಿಳಿಸಿದ್ದು ಇವನ ಮುಂದುಗಡೆ ಇಸ್ಪೇಟ್ ಜೂಜಾಟದ ಹಣ ೧೩೦=೦೦ ರೂಗಳು ದೊರೆಯಿತು.೩] ಹನುಮಂತಪ್ಪ ತಂದೆ ಶೇಖರಪ್ಪ,ವ:೪೦ ವರ್ಷ, ಆದಿ ಕರ್ನಾಟಕ ಜನಾಂಗ,ಕೂಲಿ ಕೆಲಸ,ವಾಸ:ಸಿದ್ದಾಪುರ ಗ್ರಾಮ  ಅಂತ ತಿಳಿಸಿದ್ದು ಇವನ ಮುಂದುಗಡೆ ಇಸ್ಪೇಟ್ ಜೂಜಾಟದ ಹಣ ೨೦೦=೦೦ ರೂಗಳು ದೊರೆಯಿತು. ಜೂಜಾಟದ ಸ್ಥಳದಲ್ಲಿ ೫೨ ಇಸ್ಪೇಟ್ ಎಲೆಗಳು ದೊರೆತಿದ್ದು, ೫೨ ಇಸ್ಪೇಟ್ ಎಲೆಗಳನ್ನು ಮತ್ತು ಇಸ್ಪೇಟ್ ಜೂಜಾಟದ ಒಟ್ಟು ಹಣ ೫೦೦=೦೦ ರೂಗಳನ್ನು ಸಾಯಂಕಾಲ ೪-೪೫ ಗಂಟೆಯಿಂದ ೫-೧೫ ಗಂಟೆಯ ವರೆಗೆ ಪಂಚರ ಸಮಕ್ಷಮ ಪಂಚನಾಮೆ ಮೂಲಕ ಜಪ್ತು ಮಾಡಿಕೊಂಡು ಮೇಲ್ಕಂಡ ೩ ಜನ ವ್ಯಕ್ತಿಗಳನ್ನು ವಶಕ್ಕೆ ತೆಗೆದು ಕೊಂಡು ಜಪ್ತು ಮಾಡಿಕೊಂಡ ಇಸ್ಪೇಟ್ ಎಳೆಗಳು,ಮತ್ತು ಜೂಜಾಟದ ಹಣ ರೂ:೫೦೦=೦೦ ರೂಗಳನ್ನು ಹಾಗು ಮೇಲ್ಕಂಡ ೩ ಜನ ವ್ಯಕ್ತಿಗಳನ್ನು ನನಗೆ ಒಪ್ಪಿಸಿ ವರದಿ ಕೊಟ್ಟಿದ್ದನ್ನು ಸ್ವೀಕರಿಸಿ ಪ್ರಕರಣ ನೊಂದಾಯಿಸಿಕೊಂಡಿರುತ್ತೇನೆ.
ಈ ಮೇಲ್ಕಂಡ 3 ಜನ ಪ್ರತಿವಾದಿಗಳಿಗೆ ನಾವು ತಿಳಿಸಿದ ದಿನಾಂಕದಂದು ಠಾಣೆಗೆ ಹಾಜರಾಗುವಂತೆ ತಿಳಿಸಿ ನೋಟೀಸನ್ನು ಜಾರಿ ಮಾಡಿ ಇಟ್ಟು ಕಳುಹಿಸಿರುತ್ತೇನೆ. ಹೊಸಹಳ್ಳಿ ಠಾಣೆಯ ಎನ್.ಸಿ ನಂಬರ್ 183/2015 ಕಲಂ 87 ಕೆ.ಪಿ.ಯಾಕ್ಟ್ ರೀತ್ಯಾ ಪ್ರಕರಣವು ಎನ್.ಸಿ ಪ್ರಕರಣವಾಗಿದ್ದರಿಂದ ಸದರಿ ಎನ್.ಸಿ ಪ್ರಕರಣವನ್ನು ಪ್ರಥಮ ವರ್ತಮಾನ ವರದಿಯನ್ನು ದಾಖಲು ಮಾಡಿಕೊಂಡು ತನಿಖೆಯನ್ನು ನಡೆಸಲು ಪರವಾನಿಗೆ ನೀಡಬೇಕೆಂದು ಮಾನ್ಯ ನ್ಯಾಯಾಲಯದಲ್ಲಿ ವಿನಂತಿ ಪತ್ರವನ್ನು ನಿವೇಧಿಸಿಕೊಂಡಿದ್ದರ ಪತ್ರದ ಮೇಲೆ ಮಾನ್ಯ ನ್ಯಾಯಾಲಯವು ಸದರಿ ಎನ್.ಸಿ ಪ್ರಕರಣವುನ್ನು ಪ್ರ.ವ.ವರದಿ ದಾಖಲು ಮಾಡಿಕೊಂಡು ತನಿಖೆ ನಡೆಸಲು ಪರವಾನಿಗೆ ನೀಡಿದ್ದನ್ನು ನ್ಯಾಯಾಲಯದ ಕರ್ತವ್ಯಕ್ಕೆ ಹೋಗಿದ್ದ ಪಿ.ಸಿ 312 ರವರು ಈ ದಿನ ದಿನಾಂಕ:-08/12/2015 ರಂದು 12-00 ಗಂಟೆಗೆ ಠಾಣೆಗೆ ತಂದು ಒಪ್ಪಿಸಿದ್ದನ್ನು ಸ್ವೀಕರಿಸಿ ಪ್ರಕರಣವನ್ನು ದಾಖಲು ಮಾಡಿಕೊಂಡಿರುತ್ತೇನೆ.
4 Cr.No:0229/2015
(IPC 1860 U/s 504,302 )
08/12/2015 Under Investigation
MURDER - Due To OtherCauses
Brief Facts :  ದಿನಾಂಕ:೦೮/೧೨/೨೦೧೫ ರಂದು ಮದ್ಯಾಹ್ನ ೧-೦೦ ಗಂಟೆಗೆ ಫಿರ್‍ಯಾದಿದಾರರಾದ ಶ್ರೀ.ಲೋಕೇಶಕುಮಾರ ತಂದೆ ವೀರಭದ್ರಾಚಾರಿ,ವ:೨೩ವರ್ಷ, ವಿಶ್ವಕರ್ಮ ಜನಾಂಗ,ಕಾರ್ಪೆಂಟರ್ ಕೆಲಸ,ಸಾ:ಎಂ.ಬಿ.ಅಯ್ಯನಹಳ್ಳಿ ಗ್ರಾಮ,ಎಂಬುವರು ಠಾಣೆಯಲ್ಲಿ ಹಾಜರಾಗಿ ಲಿಖಿತ ದೂರು ಕೊಟ್ಟಿದ್ದೇನೆಂದರೆ,ನನ್ನ ಚಿಕ್ಕಪ್ಪನಾದ  ಸುರೇಶಚಾರಿ.ಎ. ಇತನು ಈಗ್ಗೆ ೧೮ವರ್ಷಗಳ ಕೆಳಗೆ ಬಳ್ಳಾರಿ ತಾಲೂಕು ಸಿದ್ದಮ್ಮನಹಳ್ಳಿ ಗ್ರಾಮದ ವಾಸಿಯಾದ ನಾಗರಾಜಚಾರಿ ಎಂಬುವರ ಮಗಳಾದ ಶಿವಲಿಂಗಮ್ಮ ಎಂಬುವಳಿಗೆ ಮದುವೆ ಮಾಡಿಕೊಂಡಿರುತ್ತಾರೆ. ನಾಗರಾಜಚಾರಿ ಇವರಿಗೆ  ಮೂರು ಜನ ಹೆಣ್ಣು ಮಕ್ಕಳೀದ್ದು ಅವರಿಗೆ ಗಂಡುಮಕ್ಕಳ ಸಂತಾನ ಇಲ್ಲದ ಕಾರಣ ನಾಗರಾಜಚಾರಿ ಈಗ್ಗೆ ಸುಮಾರು ನಾಲ್ಕು ವರ್ಷಗಳಿಂದ ನನ್ನ ಚಿಕ್ಕಪ್ಪನಾದ ಸುರೇಶಾಚಾರಿ ಇವರ ಮನೆಯಲ್ಲಿ ವಾಸವಾಗಿದ್ದು, ಅಲ್ಲಲ್ಲಿ ಕಾರ್ಪೆಂಟರ್ ಕೂಲಿ ಕೆಲಸ ಮಾಡಿಕೊಂಡು ಜೀವಿಸುತ್ತಿದ್ದನು.ನಾಗರಾಜಾಚಾರಿ ಹೆಚ್ಚಾಗಿ ನಮ್ಮ ಚಿಕ್ಕಪ್ಪನ ಮನೆಯ ಮುಂದುಗಡೆ ಕಾರ್ಪೇಂಟರ್ ಕೆಲಸ ಮಾಡಿಕೊಂಡಿದ್ದನು. ನಾಗರಾಜಚಾರಿ ನಾನು ನನ್ನ ಚಿಕ್ಕಪ್ಪನ ಮನೆಗೆ ಹೋದಾಗ  ಎಂ.ಬಿ.ಅಯ್ಯನಹಳ್ಳಿ ಗ್ರಾಮದ  ವಾಸಿಯಾದ ವೀರಯ್ಯ ತಂದೆ ಲೇಟ್  ಚೆನ್ನಯ್ಯ,ವ:೪೫ವರ್ಷ,ಎಂಬುವನು ತನ್ನ ಬಳಿ ಅಗಾಗ ಬಂದು ನನಗೆ ಹಣ ಕೊಡು ಅಂತಾ ಪೀಡಿಸುವುದು ಮಾಡುತ್ತಾನೆ. ನಾನು ಕೂಲಿ ನಾಲಿ ಮಾಡಿಕೊಂಡು ಜೀವನ ಮಾಡುವ ಮನುಷ್ಯ ಅತನಿಗೆ ನಾನೆಲ್ಲಿಂದ ಹಣ ಕೊಡಲಿ ಅಂತಾ ಹೇಳಿದರೂ ಸಹ ಅವನು ತನಗೆ ಹಣ ಕೇಳುವುದನ್ನು ಬಿಡುತ್ತಿಲ್ಲ ಅಂತಾ ಹೇಳುತ್ತಿದ್ದನು.ಈ ದಿನ ದಿನಾಂಕ:೦೮-೧೨-೨೦೧೫ ರಂದು ಬೆಳಿಗ್ಗೆ ೧೧.೩೦ ಗಂಟೆ ಸುಮಾರಿಗೆ ನಾನು ಮತ್ತು ನಮ್ಮ ತಾತನಾದ ಅಂದರೆ ನನ್ನ ಚಿಕ್ಕಪ್ಪನ ಮಾವನಾದ ನಾಗರಾಜಚಾರಿ ಇಬ್ಬರು ಸೇರಿ ರೂಪಮ್ಮನ ಹೊಟೇಲ್‌ನಲ್ಲಿ ಟೀ ಕುಡಿದು ವಾಪಾಸ್ಸು ಮನೆಗೆಂದು ನಮ್ಮ ಗ್ರಾಮದಲ್ಲಿರುವ ಅಂಜನೇಯ ಗುಡಿ ಸಮೀಪ ರಸ್ತೆಯಲ್ಲಿ ಬರುತ್ತಿರುವಾಗ ನಮ್ಮ ಗ್ರಾಮದ ವೀರಯ್ಯ ಎಂಬುವನು ಹೊಲದಲ್ಲಿ ಕೆಲಸ ಮುಗಿಸಿಕೊಂಡು ಚಡ್ಡಿಯ ಮೇಲೆ ನಮ್ಮ ಎದುರಿಗೆ ಬಂದು  ನಮ್ಮ ತಾತ ನಾಗರಾಜಚಾರಿಯನ್ನು ನೋಡಿ ಏನಲೇ ಬಡಿಗಿ ನನಗೆ ಖರ್ಚಿಗೆ ಹಣ ಕೊಡು ಅಂತಾ ಕೇಳಿದನು.ಅಗ ನಾಗರಾಜಚಾರಿ ನಾನು ಕೂಲಿ ನಾಲಿ ಮಾಡಿಕೊಂಡು ಅಳಿಯನ ಮನೆಯಲ್ಲಿ ಜೀವನ ಮಾಡುವ ಮನುಷ್ಯ ನಾನು ನಿನಗೆ ಎಲ್ಲಿಂದ  ಹಣ ಕೊಡಲಿ ಅಂತಾ ಹೇಳೀದನು. ಅಗ ವೀರಯ್ಯನು ಲೇ ನಾನು ನಿನಗೆ ಹಣ ಕೇಳಿದಾಗಲೆಲ್ಲ ಇಲ್ಲಂತಾ ಹೇಳುತ್ತಿಯೇನಲೇ ಸೂಳೆ ಮಗನೆ ಇವತ್ತು ನಿನ್ನ ಮುಗಿಸಿಬಿಡುತ್ತೇನೆ ಅಂತಾ ಹೇಳಿ ತನ್ನ ಕೈಯಲ್ಲಿ ಹಿಡಿದುಕೊಂಡು ಬಂದಿದ್ದ ಕುಡುಗೊಲಿನಂತೆ ಇರುವ ಮಚ್ಚಿನಿಂದ ನಾಗರಾಜಚಾರಿಯ ಕುತ್ತಿಗೆಯ ಮುಂಬಾಗಕ್ಕೆ ಮತ್ತು ತಲೆಯ ಹಿಂಬಾಗಕ್ಕೆ ಮಚ್ಚಿನಿಂದ ಹೊಡೆದು ಗಾಯ ಮಾಡಿದನು. ನಾನು ವೀರಯ್ಯನನ್ನು ಹಿಡಿದುಕೊಳ್ಳಲು ಹೋದಾಗ ನನ್ನೀಂದ ಕೊಸರಿಕೊಂಡು ಮಚ್ಚು ಸಮೇತಾ ಹಿಡಿದುಕೊಂಡು ಓಡಿ ಹೋದನು. ಈ ಘಟನೆಯನ್ನು ಅಲ್ಲಿಯೇ ಇದ್ದ ಮಾರಪ್ಪ, ರಾಮಣ್ಣ,ದೇವೆಂದ್ರಾಚಾರಿ, ರೇಣುಕಾಚಾರಿ, ಮಲ್ಲಿಕಾರ್ಜುನಾಚಾರಿ, ಇತರರು ನೋಡಿರುತ್ತಾರೆ. ಗಾಯಗೊಂಡ ನನ್ನ ತಾತ ನಾಗರಾಜಚಾರಿಗೆ ನಾನು ಮತ್ತು ನಮ್ಮ ಸಂಬಂದಿ ಎ.ನಾಗರಾಚಾರಿ ಇಬ್ಬರು ಸೇರಿಕೊಂಡು ನನ್ನ ಚಿಕ್ಕಪ್ಪನ ಟಿ.ವಿ.ಎಸ್.ಮೊಪೆಡ್ ವಾಹನದಲ್ಲಿ ಮದ್ಯದಲ್ಲಿ ಕೂಡಿಸಿಕೊಂಡು ಚಿಕ್ಕಜೋಗಿಹಳ್ಳಿ ಸರ್ಕಾರಿ ಅಸ್ಪತ್ರೆಗೆ  ಚಿಕಿತ್ಸೆಗೆಂದು ಹೋಗುತ್ತಿರುವಾಗ ಮಾಕನಡಕು ಕ್ರಾಸ್ ಸಮೀಪ ಹೋಗುತ್ತಿದ್ದಂತೆ ನನ್ನ ತಾತನಿಗೆ ಹಿಡಿದುಕೊಳ್ಳಲು ಅಗಲಿಲ್ಲ.ಅಷ್ಟರಲ್ಲಿ ೧೦೮ ಅಂಬ್ಯುಲೆನ್ಸ ವಾಹನ ಬಂದಿದ್ದು ಅದರಲ್ಲಿ ನನ್ನ ತಾತನಿಗೆ ಚಿಕ್ಕಜೋಗಿಹಳ್ಳಿ ಸರ್ಕಾರಿ ಅಸ್ಪತ್ರೆಗೆ ಕರೆದುಕೊಂಡು ಬಂದೆವು. ಈ ದಿನ ಮದ್ಯಾಹ್ನ ೧೨-೧೫ ಗಂಟೆ ಸುಮಾರಿಗೆ ವೈದ್ಯರು ನನ್ನ ತಾತನಿಗೆ ವೈದ್ಯಕೀಯ ಪರೀಕ್ಷೆ ಮಾಡಿ ನೋಡಿ ಮೃತಪಟ್ಟಿರುತ್ತಾನೆಂದು ತಿಳಿಸಿದರು. ನಾನು ನನ್ನ ತಾತನಿಗೆ ಮೋಟಾರ್ ಸೈಕಲ್‌ನಲ್ಲಿ ಚಿಕಿತ್ಸೆಗೆಂದು ಕರೆದುಕೊಂಡು ಹೋಗುವಾಗ ಅತನಿಗೆ  ಅದಾ ಗಾಯಗಳಿಂದ ಬಂದ  ರಕ್ತ ನನ್ನ ಲುಂಗಿಗೆ ಹತ್ತಿರುತ್ತದೆ. ವೀರಯ್ಯನು ನನ್ನ ತಾತ ಹಣಕೊಡಲಿಲ್ಲ ಎಂಬ ಕಾರಣಕ್ಕಾಗಿ ಮಚ್ಚಿನಿಂದ ಹೊಡೆದು ಗಾಯಪಡಿಸಿ ಕೊಲೆ ಮಾಡಿದ್ದು ವೀರಯ್ಯನ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಕೊಟ್ಟ ದೂರನ್ನು ಸ್ವೀಕರಿಸಿ ಪ್ರಕರಣವನ್ನು ದಾಖಲು ಮಾಡಿಕೊಂಡಿರುತ್ತೇನೆ.
Hospet Traffic PS
5 Cr.No:0064/2015
(INDIAN MOTOR VEHICLES ACT, 1988 U/s 183 ; IPC 1860 U/s 279,337 )
08/12/2015 Under Investigation
MOTOR VEHICLE ACCIDENTS NON-FATAL - State Highways
Brief Facts :  ದಿ:08-12-2015 ರಂದು ಬೆಳಿಗ್ಗೆ 10-30 ಗಂಟೆ ಸುಮಾರಿಗ ಹೊಸಪೇಟೆಯ ಎಸ್ ಹೆಚ್-25 ಹರಿಹರ ರಸ್ತೆಯಲ್ಲಿರುವ ವಿದ್ಯಾನಗರ ಕ್ರಾಸ್ ಹತ್ತಿರದ ತಾರ್ ರಸ್ತೆಯಲ್ಲಿ ಕೇಸಿನ ಫಿರ್ಯಾದಿ ಮತ್ತು ಆತನ ಅಳಿಯನಾದ ಜಮೀರ್ ಇಬ್ಬರೂ ತಮ್ಮ ಬೈಕ್ ನಂಬರ್ ಕೆಎ.35/ಇಸಿ.1437 ನೇದ್ದರಲ್ಲಿ ಹೊಸಪೇಟೆಯಿಂದ ಮುನಿರಾಬಾದ್ ಗೆ ಹೋಗುತ್ತಿದ್ದಾಗ ಅದೇವೇಳೆಗೆ ಹರಿಹರ ಕಡೆಯಿಂದ ಹೊಸಪೇಟೆಕಡೆಗೆ ಬರುವ ಕೆಎ.37/ಎಂ.1733 ನಂಬರಿನ ಕಾರನ್ನು ಅದರ ಚಾಲಕನಾದ ಬಸವರಾಜನು ಅತೀವೇಗ ಹಾಗೂ ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬರುತ್ತಾ ಫಿರ್ಯಾಧಿದಾರರುಹೋಗುತ್ತಿದ್ದ ಬೈಕ್ ಗೆ ಢಿಕ್ಕಿ ಹೊಡೆಸಿ ಅಪಘಾತ ಮಾಡಿದ ಪರಿಣಾಮ ಬೈಕ್ ಚಲಾಯಿಸುತ್ತಿದ್ದ ಜಮೀರ್ ನ ಎಡಗಾಲಿಗೆ ಒಳಪೆಟ್ಟಾಗಿದ್ದು, ಹಿಂದೆ ಕುಳಿತಿದ್ದ ಫಿರ್ಯಾದಿ ಸೊಂಟಕ್ಕೆ ಒಳಪೆಟ್ಟಾಗಿ, ಎಡ ಮೊಣಕೈಗೆ ತೆರಚಿದ್ದು, ಇಬ್ಬರೂ ಹೊಸಪೇಟೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದು ಸದ್ರಿ ಕಾರ್ ಚಾಲಕನ ಮೇಲೆ ಸೂಕ್ತ ಕ್ರಮ ಜರುಗಿಸುವಂತೆ ಫಿರ್ಯಾಧಿ ನೀಡಿದ ದೂರಿನ ಮೇರೆಗೆ ಗುನ್ನೆ ದಾಖಲಿಸಿ ತನಿಖೆ ಕೈಗೊಂಡಿದೆ.
Kurugod PS
6 Cr.No:0197/2015 08/12/2015 Under 
(KARNATAKA POLICE ACT, 1963 U/s 78(3) ; IPC 1860 U/s 420 ) Investigation
 KARNATAKA POLICE ACT 1963 - Gambling - Matka (78 Class C)
Brief Facts :  ಪಿಎಸ್ಐ ರವರು ದಿನಾಂಕ: 08/12/2015 ರಂದು ಬೆಳಿಗ್ಗೆ 10:30 ಗಂಟೆಗೆ  ನೆಲ್ಲುಡಿಕೊಟ್ಟಾಲ್  ಗ್ರಾಮದ ಮಸೀದಿ ಮುಂದಿನ  ಸಾರ್ವಜನಿಕ ಸ್ಥಳದಲ್ಲಿ  ಆರೋಪಿ-1 ರಿಂದ 02 ರವರು ಕೂಡಿ ಹೋಗಿ ಬರುವ ಸಾರ್ವಜನಿಕರನ್ನು ಮಟಕಾ ಆಡಲು ಕೂಗುತ್ತಾ ಒಂದು ರೂಪಾಯಿಗೆ 80 ರೂ. ಕೊಡುತ್ತೆವೆ ಅಂತ ಜನರಿಗೆ ಆಸೆ ಹುಟ್ಟಿಸಿ ಮೋಸ ಮಾಡುವ ಉದ್ದೇಶದಿಂದ ಕೂಗಿ ಕರೆಯುತ್ತಾ ಜನರಿಂದ ಹಣ ಪಡೆದು ಮಟ್ಕಾ ಜೂಜಾಟ ನಡೆಸುತ್ತಿದ್ದಾಗ ಪಿಎಸ್ಐ ರವರು ಸಿಬ್ಬಂದಿಯೊಂದಿಗೆ ಪಂಚರ ಸಮಕ್ಷಮ ಬೆಳಿಗ್ಗೆ 10:40 ಗಂಟೆಗೆ ದಾಳಿ ಮಾಡಿ ಆರೋಪಿ-1 ಮತ್ತು 2 ರವರನ್ನು ಹಿಡಿದು ಅವರಿಂದ ಮಟ್ಕಾ ಜೂಜಾಟಕ್ಕೆ ಸಂಬಂದಿಸಿದ ನಗದು ಹಣ 3590=00 ರೂಪಾಯಿಗಳು, 02 ಮಟ್ಕಾಪಟ್ಟಿ, 02 ಬಾಲ್ಪೆನ್ 02 ಮೊಬೈಲ್ ಗಳನ್ನು ವಶಕ್ಕೆ ಪಡೆದು, ಇಬ್ಬರು ಆರೋಪಿತರ ವಿರುದ್ದ ಕಲಂ 78(3) ಕೆ.ಪಿ.ಕಾಯ್ದೆ ಮತ್ತು ಕಲಂ 420 ಐ.ಪಿ.ಸಿ. ರೀತ್ಯಾ ಪ್ರಕರಣ ದಾಖಲಿಸಿಕೊಂಡು ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ಪಿಎಸ್ಐ ರವರು ಸೂಚಿಸಿದ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುತ್ತೇನೆ, ಇದರೊಂದಿಗೆ ದೂರಿನ ಮೂಲ ಪ್ರತಿಯನ್ನು ಲಗತ್ತಿಸಿದೆ.
Sandur PS
7 Cr.No:0196/2015
(KARNATAKA POLICE ACT, 1963 U/s 96(E) )
08/12/2015 Under Investigation
 KARNATAKA POLICE ACT 1963 - others
Brief Facts :  ದಿನಾಂಕ8.12.2015 ರಂದು ಬೆಳಿಗ್ಗೆ 5-00 ಗಂಟೆಗೆ ಈ ಪ್ರಕರಣವು ದಾಖಲಾಗಿದ್ದು ಸಾರಾಂಶವುಃ-G.R.ಷಣ್ಮುಖಪ್ಪ P.S.I. ಸಂಡೂರು ಪೊಲೀಸ್ ಠಾಣೆ ಆದ ನಾನು ಘನ ನ್ಯಾಯಾಲಯದಲ್ಲಿ ನಿವೇದಿಸಿಕೊಳ್ಳುವುದೇನೆಂದರೆ ದಿನಾಂಕ ೦7/12/2015 ರಂದು ರಾತ್ರಿ 11-00 ಗಂಟೆ ಗೆ ನಾನು ಅಪರಾದ ವಿಭಾಗದ P.C.450 P.C.68 2 ರವರನ್ನು ಕರೆದುಕೊಂಡು ಪೊಲೀಸ ಇಲಾಖೆಯ ಟಾಟಾ ಸುಮೊ ವಾಹನ ನಂಬರ K.A.34-G 401 ರಲ್ಲಿ ಸಂಡೂರು ಟೌನ್‌ನಲ್ಲಿ ರಾತ್ರಿ ಗಸ್ತು ನಿಗಾವಣೆ ಮಾಡುತ್ತಾ ನಂತರ ದಿನಾಂಕ 08.12.2015 ರಂದು ಬೆಳಗಿನ ಜಾವ 3-30 ಗಂಟೆಗೆ ಸಂಡೂರ್ ಪಟ್ಟಣದಲ್ಲಿ ಬಸ್ ಡಿಪೋ ಪಕ್ಕದಲ್ಲಿರುವ A.P.M.C. ಕಾಲೇಜ್‌ನಲ್ಲಿ ಆವರಣದಲ್ಲಿ ಹೋದಾಗ ಕಾಲೇಜ್ ನಲ್ಲಿರುವ ಕಂಪುಟರ್ ಇಟ್ಟಿರುವ ರೂಮಿಗೆ  ಬೀಗ ಹಾಕಲಾಗಿದ್ದ ಬಾಗಿಲಿನ ಮುಂದೆ ಒಬ್ಬ ವ್ಯೆಕ್ತಿ ನಿಂತಿದ್ದು ಆತನು ತನ್ನ ಕೈಯ್ಯಲ್ಲಿ ಒಂದು ಕಬ್ಬಿಣದ ರಾಡ್ ಹಿಡಿದುಕೊಂಡಿದ್ದು ಪೊಲೀಸ್ ಜೀಪನ್ನು ಹಾಗು ಪೊಲೀಸ್ ಸಮವಸ್ತ್ರದಲ್ಲಿರುವ ನಮ್ಮನ್ನು ನೋಡಿ ತನ್ನ ಮುಖವನ್ನು ಮರೆಮಾಚುತ್ತಾ ಇದ್ದುದ್ದನ್ನು ಗಮನಿಸಿ ಓಡಿ ಹೋಗಲು ಪ್ರಯತ್ನಿಸುತ್ತಿರುವುದನ್ನು ಕಂಡು ಸದರಿಯವನ ನಡವಳಿಕೆಯ ಬಗ್ಗೆ ಅನುಮಾನ ಬಂದು ಕೂಡಲೇ ಜೀಪನ್ನು ನಿಲ್ಲಿಸಿ ನಾನು ಮತ್ತು P.C.450.P.C.682  ರವರು ಸದ್ರಿ ವ್ಯೆಕ್ತಿಯ ಬಳಿ ಹೋಗುತ್ತಿದ್ದಂತೆ  ಸದರಿ ವ್ಯಕಿ  ಅಲ್ಲಿಂದ ಓಡಿ ಹೋಗಲು ಆತನನ್ನು ಸ್ವಲ್ಪ ದೂರ ಬೆನ್ನತ್ತಿ ನಾವು ಹಿಡಿದುಕೊಂಡು  ಆತನ ಹೆಸರು ವಿಳಾಸ ಕೇಳಲಾಗಿ ತಡವರಿಸುತ್ತಾ, ತೊದಲುತ್ತಾ ತನ್ನ ಹೆಸರು ರಮೇಶ ವಾಸಃ- ಕೌಲ್ ಬಜಾರ್ ಬಳ್ಳಾರಿ ಅಂತ ಹೇಳಿದ್ದು ಪುನಃ ಪುನಃ ತೀಕ್ಷ್ಣವಾಗಿ ವಿಚಾರಣೆ ಮಾಡಲಾಗಿ ತನ್ನ ಹೆಸರು [1] ರಾಜಣ್ಣಿ ತಂದೆ ಕಾಸೀಮ್ ಸಾಬ್ ವಯಸ್ಸು 38 ವರ್ಷ ಮುಸ್ಲಿಂ ಜಾತಿ, ಕೂಲಿ ಕೆಲಸ ವಾಸಃ- ಬಾಗ್ಯಜ್ಯೋತಿ ಕಾಲೋನಿ ಸಂಡೂರು. ಎಂದು ತಿಳಿ ಸಿ ದನು ಅಪರಾತ್ರಿ ವೇಳೆಯಲ್ಲಿ ಸದ್ರಿ ಸ್ಥಳದಲ್ಲಿದ್ದ ಬಗ್ಗೆ ಆತನ ಕೈಯ್ಯಲ್ಲಿ ದ್ದ ಕಬ್ಬಿಣದ ರಾಡ್ ಬಗ್ಗೆ ವಿಚಾರ ಮಾಡಲಾಗಿ ಯಾವುದೇ ಸಮಂಜಸವಾದ ಉತ್ತರವನ್ನು ಕೊಡ ದೆ ಇದ್ದ ಕಾರಣ ಹಾಗು ಆತನ ಕೈಯ್ಯಲ್ಲಿ ಸುಮಾರು 2 ಅಡಿ ಉದ್ದದ ಕಬ್ಬಿಣದ ರಾಡ್ ಇದ್ದು ಒಂದು ಕಡೆಗೆ ಸ್ವಲ್ಪ ಚೂಪಾಗಿದ್ದು ಅದರಿಂದ ಸದ್ರಿಯವನು ನಿಂತಿದ್ದ ಕಾಲೇಜ್‌ನ ಕಂಪುಟರ್ ಇರುವ ರೂಮಿಗೆ ಹಾಕಲಾಗಿದ್ದ ಬೀಗವನ್ನು ಮುರಿದು ಕನ್ನ ಕಳುವು ಸ್ವತ್ತಿನ ಅಪರಾಧ ಮಾಡುವ ಹೆಚ್ಚಿನ ಸಂಭವ ಇದ್ದು ಸಂಜ್ಞೇಯ ಅಪರಾ ದ ವನ್ನು ಮಾಡಬಹುದೆಂದು ಶಂಕಿಸಿ ಸ್ಥಳಕ್ಕೆ ಪಂಚರನ್ನು ಕರೆದುಕೊಂಡು ಬರಲು P.C.682 ರವರಿಗೆ ಕಳಿಸಿಕೊಟ್ಟಾಗ ಇಬ್ಬರು ಪಂಚರನ್ನು ಸ್ಥಳಕ್ಕೆ ಕರೆದುಕೊಂಡು ಬಂದಿ ದ್ದು ಪಂಚರ ಸಮಕ್ಷಮ ರಾಜಣ್ಣಿ ರವರ ಕೈಯ್ಯಲ್ಲಿದ್ದ ಕಬ್ಬಿಣದ ರಾಡ್‌ನ್ನು ಬೆಳಗಿನ ಜಾವ 03-45 ಗಂಟೆಯಿಂದ 4-45 ಗಂಟೆಯವರೆಗೆ ಪಂಚರ ಸಮಕ್ಷಮ ಪಂಚನಾಮೆ ಮಾಡಿಕೊಂಡು ರಾಜಣ್ಣಿರವರ ಕಡೆಯಿಂದ ಕಬ್ಬಿಣದ ರಾಡನ್ನು ಜಪ್ತು ಮಾಡಿಕೊಂಡು ರಾಜಣ್ಣಿರವರನ್ನು ವಶಕ್ಕೆ ತೆಗೆದುಕೊಂಡು ವಾಪಾಸ್ಸು ಠಾಣೆಗೆ ಬೆಳಗಿನ ಜಾವ 5-00 ಗಂಟೆಗೆ ಠಾಣೆಗೆ ಬಂದು ರಾಜಣ್ಣಿ ಈತನ ವಿರುದ್ದ  ಕಲಂ : 96 [E] K.P.ACT ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈ ಗೊಂಡಿರುತ್ತೇನೆ.
8 Cr.No:0197/2015
(IPC 1860 U/s 363 )
08/12/2015 Under Investigation
KIDNAPPING AND ABDUCTION - Others
Brief Facts :  ಈ ದಿನ ದಿ: 08-12-2015 ರಂದು ಬೆಳಿಗ್ಗೆ 10-30 ಗಂಟೆಗೆ ಪಿರ್ಯಾದಿ ಕೆ.ಯಲ್ಲಪ್ಪ ತಂದೆ ಕೆ.ಕುಮಾರಸ್ವಾಮಿ,ವಾಸ; 18ನೇ ವಾರ್ಡ್ ಸ್ಮಯೂರ್ ಕಾಲೋನಿ ಸಂಡೂರು  ರವರು ಠಾಣೆಯಲ್ಲಿ ಹಾಜರಾಗಿ ಕೊಟ್ಟ ದೂರಿನ ಸಾರಾಂಶವೇನೆಂದರೆ, ನನಗೆ ಮೂರು ಮಕ್ಕಳಿದ್ದು 1)ಕೆ.ನಂದೀಶ್‌ಕುಮಾರ್, 16ವರ್ಷ, 2)ಕೆ.ಕಾವ್ಯ, ವ: 14ವರ್ಷ, 3)ಕೆ.ಸಂದೀಪ್‌ಕುಮಾರ್, ವ: 13ವರ್ಷ ಎಂಬುವ ಮಕ್ಕಳಿರುತ್ತಾರೆ. ನಮ್ಮ ಮನೆಯಲ್ಲಿ ನಾನು ನನ್ನ ಹೆಂಡತಿ ಕೆ.ಅಂಬುಜಾ ಹಾಗು ಮಕ್ಕಳು ಮಾತ್ರ ವಾಸವಾಗಿರುತ್ತೇವೆ. ನನ್ನ ಮಗ ಕೆ.ನಂದೀಶ್‌ಕುಮಾರ್ ಈತನು ಸಂಡೂರಿನ ಎಸ್.ಆರ್.ಎಸ್ ಪ್ರೌಢಶಾಲೆಯಲ್ಲಿ ಹತ್ತನೇ ತರಗತಿಯಲ್ಲಿ  ವಿದ್ಯಾಭ್ಯಾಸವನ್ನು ಮಾಡುತ್ತಾನೆ. ನನ್ನ ಮಗ ಕೆ.ನಂದೀಶ್‌ಕುಮಾರ್‌ನಿಗೆ ದಿನಾಂಕ: 20-11-2015  ರಂದು ಡೆಂಗ್ಯೂ ಜ್ವರ ಬಂದಿದ್ದು, ನಾವು ಆತನಿಗೆ ಸಂಡೂರು, ಬಳ್ಳಾರಿ ಖಾಸಗೀ ಆಸ್ಪತ್ರೆಗಳಲ್ಲಿ ತೋರಿಸಿದೆವು. ಅದು ಕಡಿಮೆ ಆಗದ ಕಾರಣ ಉಡುಪಿ ಮಣಿಪಾಲ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ತೋರಿಸಿಕೊಂಡು ಗುಣವಾಗಿ ದಿನಾಂಕ; 29-11-2015  ರಂದು ಮರಳಿ ಸಂಡೂರಿಗೆ ಬಂದೆವು. ನನ್ನ ಮಗನು ಪೂರಾ ಗುಣವಾಗಿದ್ದು, ಆತನು ಪುನಃ ಶಾಲೆಗೆ ಹೋಗಲು ಹಾಗು ಬಾಕಿ ಉಳಿದ  ತರಗತಿ ವಿಷಯಗಳನ್ನು ಬರೆಯಲೆಂದು  ನೋಟ್ 
ಪುಸ್ತಕಗಳನ್ನು ತೆಗೆದುಕೊಂಡು ದಿನಾಂಕ: 03-12-2015  ರಂದು ಸಂಜೆ 5-45  ಗಂಟೆಗೆ  ತನ್ನ ಸ್ನೇಹಿತರ ಮನೆಗೆ ಹೋಗಿ ಬರೆದುಕೊಂಡು ಬರುವುದಾಗಿ ಹೇಳಿ ಹೋದವನು ಆ ದಿನ ರಾತ್ರಿ 9-00 ಗಂಟೆಯಾದರೂ ಮರಳಿ ಮನೆಗೆ ಬರಲಿಲ್ಲ. ನಾವು ಗಾಬರಿಯಾಗಿ ಆ ದಿನ ರಾತ್ರಿ ಆತನ ಸ್ನೇಹಿತರಾದ ತೆನಾಲಿ, ರಕ್ಷಿತ್ ಇತರ ಮನೆಗಳಿಗೆ ಹೋಗಿ ವಿಚಾರಿಸಲು ನಂದೀಶ್ ಬಂದಿರುವುದಿಲ್ಲವೆಂದು ತಿಳಿಸಿದರು. ಆಗ ನಾವು ಸಂಡೂರಿನ ಬಸ್ ನಿಲ್ದಾಣ ಸಂತೆ ಮಾರ್ಕೇಟ್ ಇತರೆ ಕಡೆಗಳಲ್ಲಿ ಹುಡುಕಿದೆವು. ಕಾಣಲಿಲ್ಲ. ನಂತರ ಹೊಸಪೇಟೆ. ಹಂಪಿ, ಕೂಡ್ಲಿಗಿ, ಕೊಟ್ಟೂರು ಎಲ್ಲಾ ಶಾಲಾ ಕಾಲೇಜ್, ಮಠ ಮಂದಿರಗಳಲ್ಲಿ ಹಾಗು ನಮ್ಮ ಸಂಬಂಧಿಕರ ಮನೆಗಳಲ್ಲಿ ಹುಡುಕಾಡಿದ್ದು ಕಂಡುಬಂದಿರುವುದಿಲ್ಲ. ಕಾರಣ ಕಾಣೆಯಾದ ನನ್ನ ಮಗ ನಂದೀಶ್‌ಕುಮಾರನಿಗೆ ಪತ್ತೆ ಹಚ್ಚಿ ಕೊಡಬೇಕೆಂದು ತಮ್ಮಲ್ಲಿ ಕೇಳಿಕೊಳ್ಳುತ್ತೇನೆ.

ಕಾಣೆಯಾದ/ಅಪಹರಣವಾದ ನನ್ನ ಮಗನ ಚಹರೆ ಗುರುತುಗಳು ಈ ಕೆಳಕಂಡಂತೆ ಇರುತ್ತವೆ.
[1]ಹೆಸರು:- ಕೆ.ನಂದೀಶ್‌ಕುಮಾರ್:- [2] ಬಣ್ಣ ಃ- ಎಣ್ಣೆಗೆಂಪು, [3] ಮುಖ ಃ- ಕೋಲು ಮುಖ, [4] ಮೈಕಟ್ಟು ಃ- ತೆಳುವಾದ ಮೈಕಟ್ಟು [5] ವಯಸ್ಸು ಃ- 16 ವರ್ಷ. ಎತ್ತರ:- 5.6 ಅಡಿ ಎತ್ತರ, [6] ವಿದ್ಯಾಭ್ಯಾಸಃ- ಹತ್ತನೇ ತರಗತಿ ವಿದ್ಯಾರ್ಥಿ, [7] ಮಾತನಾಡುವ ಭಾಷೆಃ- ಕನ್ನಡ, ಇಂಗ್ಲೀಸ್, ಹಿಂದಿ, ತೆಲುಗು, [8] ಉಡುಪುಗಳು ಃ- ಕೆಂಪು ಟೀ ಶರ್ಟ್, ಗ್ರೀನ್ ಅರ್ದ ಪ್ಯಾಂಟ್ ಧರಿಸಿದ್ದನು. [9] ಕೂದಲು:- ೩ಇಂಚು ಕಪ್ಪು ಕೂದಲು, [10] ಮನೆಯಿಂದ ಹೋಗುವಾಗ ಕೆಂಪು ಬಣ್ಣದ ಬ್ಯಾಗ್ ತೆಗೆದುಕೊಂಡು ಹೋಗಿರುತ್ತಾನೆ. ಕಾರಣ ದಿನಾಂಕ 03-12-2015  ರಂದು ಸಂಜೆ 5-45ಗಂಟೆ ಸುಮಾರಿಗೆ ನನ್ನ ಮಗ ಕೆ.ನಂದೀಶ್‌ಕುಮಾರ್ ಈತನು ತನ್ನ ಸ್ನೇಹಿತರ ಮನೆಗೆ ಹೋಗಿ ಹೋ ವರ್ಕ್ ಮಾಡಿಕೊಂಡು ಬರುವುದಾಗಿ ಮನೆಯಲ್ಲಿ ಹೇಳಿ ಹೋದವನು, ಎಲ್ಲಿಗೋ ಹೋಗಿ ಮನೆಗೆ ಮರಳಿ ಬಾರದೇ ಕಾಣೆಯಾಗಿದ್ದರಿಂದ ನನ್ನ ಮಗನನ್ನು  ಹುಡುಕಿ ಪತ್ತೆ ಮಾಡಿಕೊಡಬೇಕೆಂದು ಇದ್ದ ದೂರನ್ನು ಸ್ವೀಕರಿಸಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತೇನೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ