Crime Key Report From To | ||||||||||||||||
Sl. No | FIR No | FIR Date | Crime Group - Crime Head | Stage of case | ||||||||||||
APMC Yard PS | ||||||||||||||||
1 | Cr.No:0103/2015 (IPC 1860 U/s 379 ) |
03/12/2015 | Under Investigation | |||||||||||||
THEFT - Of Automobiles - Of Two Wheelers | ||||||||||||||||
Brief Facts : | ದಿನಾಂಕ:29/07/2011 ರಂದು ರಾತ್ರಿ 8-30 ಗಂಟೆಗೆ ಬಳ್ಳಾರಿ ಬಂಡಿಮೋಟ್ ನ ಕಬರಿಸ್ತಾನ ಗೇಟ್ ಹತ್ತಿರ ನಿಲ್ಲಿಸಿದ್ದ ತಮ್ಮ ಮೋಟಾರ ಸೈಕಲ್ ನಂ:ಕೆಎ-34 ಕ್ಯೂ-8552 ನೇದ್ದು ಬೆಲೆ ಅಂದಾಜು 16,000/-ರೂ ಬಾಳುವುದನ್ನು ಯಾರೋ ಕಳ್ಳರು ಕಳುವು ಮಾಡಿಕೊಂಡು ಹೋಗಿದ್ದು, ಕಳುವಾದ ಮೋಟಾರ್ ಸೈಕಲ್ ಬಗ್ಗೆ ಪಿರ್ಯಾದಿದಾರರು ದಿನಾಂಕ:30/07/2011 ರಂದು ಬಳ್ಳಾರಿ ಎಪಿಎಂಸಿ ಯಾರ್ಡ ಪೊಲೀಸ ಠಾಣೆಯಲ್ಲಿ ತಿಳಿಸಿದ್ದು ಪೊಲೀಸ್ ಠಾಣೆಯಲ್ಲಿ ಮೋಟಾರ್ ಸೈಕಲ್ ಸಿಕ್ಕಾಗ ತಿಳಿಸುತ್ತೇವೆ ಅಂತಾ ಹೇಳಿದ್ದರಿಂದ ಪಿರ್ಯಾದಿದಾರರು ಸುಮ್ಮನಾಗಿದ್ದು, ನಂತರ ದಿನಾಂಕ:02/09/2014 ರಂದು ರಾಂಪುರ ಪೊಲೀಸ್ ಠಾಣೆಯಲ್ಲಿ ತಮ್ಮ ಮೋಟಾರ್ ಸೈಕಲ್ ಸಿಕ್ಕಿದೆ ಅಂತಾ ವಿಷಯ ತಿಳಿದ ನಂತರ ಹೋಗಿ ವಿಚಾರಿಸಿಕೊಂಡು ನಂತರ ಠಾಣೆಗೆ ಬಂದು ದೂರು ಕೊಟ್ಟ ಮೇರೆಗೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. | |||||||||||||||
Brucepet PS | ||||||||||||||||
2 | Cr.No:0229/2015 (IPC 1860 U/s 379 ) |
03/12/2015 | Under Investigation | |||||||||||||
THEFT - Of Automobiles - Of Cars/Jeeps | ||||||||||||||||
Brief Facts : | ದಿನಾಂಕ:30/11/2015 ರಂದು ರಾತ್ರಿ 11.00 ಗಂಟೆಯಿಂದ ದಿನಾಂಕ:01/12/2015 ರಂದು ಬೆಳಿಗ್ಗೆ 6.30 ಗಂಟೆ ಮದ್ಯಾವಧಿಯಲ್ಲಿ ನಗರದ ಕಾಂಡ್ರಾ ಸಿದ್ದಪ್ಪ ಬೀದಿಯಲ್ಲಿ ಫಿರ್ಯಾದಿದಾರರ ಮನೆ ಹತ್ತಿರ ನಿಲ್ಲಿಸಿದ್ದ ಫಿರ್ಯಾದಿದಾರರು ಖರೀದಿಸಿದ ಬಿಳಿ ಬಣ್ಣದ ಮಾರುತಿ800 ಕಾರ್ ನೊಂದಣಿ ಸಂ.ಕೆಎ34-ಎಂಬಿ-3303 ಚಾಸಿ ನಂ.SB308IN1698831 Engine No. F8BIN2366439 2002 ನೇ ಮಾಡಲ್, ಇದರ ಅಂದಾಜು ಬೆಲೆ 48,000/- ಬೆಲೆ ಬಾಳುವುದನ್ನು ಯಾರೋ ಕಳ್ಳರು ಕಳುವು ಮಾಡಿಕೊಂಡು ಹೋಗಿದ್ದು, ಪತ್ತೆ ಮಾಡಿಕೊಡಲು ಇದ್ದ ದೂರಿನ ಮೇರೆಗೆ ಈ ಪ್ರಥಮ ವರ್ತಮಾನ ವರದಿ. | |||||||||||||||
3 | Cr.No:0230/2015 (IPC 1860 U/s 420 ) |
03/12/2015 | Under Investigation | |||||||||||||
CHEATING - CHEATING | ||||||||||||||||
Brief Facts : | ದಿನಾಂಕ: ೧೫-೧೨-೧೨ ರಂದು ಬೆಳಿಗ್ಗೆ ೯-೩೦ ಗಂಟೆ ಸುಮಾರಿಗೆ ವೆಂಕಟರಮಣ ರವರ ಮಗನಾದ ನರೇಶ್ ರವರು ಬಂದು ಪಿರ‍್ಯಾದಿದಾರರನ್ನು ಮೈಸೂರಿನಲ್ಲಿರುವ ಸೂಪರ್ ಸಿಕ್ಸ್ ಕಂಪನಿಯ ಆಪೀಸ್‌ಗೆ ಕರೆದುಕೊಂಡು ಹೋದಾಗ ಆಪೀಸ್‌ನಲ್ಲಿ ವೆಂಕಟರಮಣ ರವರು ಇದ್ದು ಪಿರ್ಯಾದಿದಾರರಿಗೆ ನಮ್ಮ ಸೂಪರ್ ಸಿಕ್ಸ್ ಕಂಪನಿ ಇದ್ದು ಅದರಲ್ಲಿ ಗೋದಿ ಇಟ್ಟು, ಇಡ್ಲಿ ರವಾ, ಉದ್ದಿನ ಬೆಳೆ ಮತ್ತು ಮಸಲಾ ಪೌಡರ್‌ಗಳನ್ನು ಹೋಲ್ ಸೇಲ್ ಆಗಿ ನಿಮಗೆ ಕಂಪನಿಯಿಂದ ಕಳುಹಿಸಿಕೊಡುತ್ತೇವೆ ಅವುಗಳನ್ನು ನೀವು ಕರ್ನಾಟಕದಲ್ಲಿ ಮಾರಾಟ ಮಾಡಿ ಅದಕ್ಕೆ ಮಾರಾಟದ ಮೇಲೆ ೨.೫/ ಲಾಭ ಮತ್ತು ಅದಕ್ಕೆ ನಿಮಗೆ ಏನೇ ಖರ್ಚುಗಳು ಇದ್ದರೆ ಅದನ್ನು ನಾವೇ ಬರಿಸುತ್ತೇವೆ ಅಂತಾ ಹೇಳಿದ್ದರಿಂದ ಪಿರ್ಯಾದಿದಾರರು ಆಯಿತು ಅದಕ್ಕೆ ಏನು ಮಾಡಬೇಕು ಅಂತಾ ಕೇಳಿದಾಗ ವೆಂಕಟರಮಣ ರವರು ರೂ ೫,೦೦,೦೦೦/- ಗಳಿಗೆ ಅಗ್ರಿಮೆಂಟ್ ಮಾಡಿಕೊಡಿ ಅಂತಾ ಹೇಳಿದಾಗ ಪಿರ್ಯಾದಿದಾರರು ಆಯಿತು ಅಂತಾ ಹೇಳಿದ್ದು ಅದಕ್ಕೆ ವೆಂಕಟರಮಣ ರವರು ರೂ ೫,೦೦,೦೦೦/- ಗಳ ಬದಲಿಗೆ ರೂ ೧೦,೦೦,೦೦೦/-ಗಳಿಗೆ ಅಗ್ರಿಮೆಂಟ್ ಮಾಡಿಕೊಂಡು ದಿನಾಂಕ: ೧೮-೧೨-೧೨ ರಂದು ಪಿರ‍್ಯಾದಿದಾರರು ಅಪಾದಿತನಿಗೆ ಆರ್.ಟಿ.ಜಿ.ಸಿ ಮೂಲಕ ಹಣವನ್ನು ಹಾಕಿದ್ದು ಅಪಾದಿತನ ಪುಡ್ ಗ್ರೇನ್ಸ್‌ಗಳನ್ನು ಮತ್ತು ಪಿರ‍್ಯಾದಿದಾರರು ನೀಡಿದ ಹಣವನ್ನು ನೀಡದ ಮೋಸ ಮಾಡಿರುತ್ತಾರೆಂದು ಘನ ನ್ಯಾಯಾಲಯದಲ್ಲಿ ದಾವೆ ಹೋಡಿದ್ದನ್ನು ಪಡೆದುಕೊಂಡು ಪ್ರಕರಣ ದಾಖಲಿಸಿಕೊಂಡಿದೆ. | |||||||||||||||
Chittavadagi PS | ||||||||||||||||
4 | Cr.No:0058/2015 (CODE OF CRIMINAL PROCEDURE, 1973 U/s 107 ) |
03/12/2015 | Under Investigation | |||||||||||||
CrPC - Security For Good Behaviour (Sec 107 ) | ||||||||||||||||
Brief Facts : | ದಿನಾಂಕ 01/09/2015 ರಂದು ರಾತ್ರಿ 7-20 ಗಂಟೆ ಸುಮಾರಿಗೆ ಪ್ರತಿವಾದಿಗಳು ಯಾವುದೇ ಪರವಾನಿಗೆ ಇಲ್ಲದೆ, ಅಕ್ರಮವಾಗಿ ಮದ್ಯವನ್ನು ಸಾಗಾಟ ಮಾಡುತ್ತಾ ಮಾರಾಟ ಮಾಡುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಸದರಿಯವರನ್ನು ಹಿಡಿದು, ಸದರಿ ಪ್ರತಿವಾದಿಗಳ ವಿರುದ್ದ ಠಾಣೆ ಗುನ್ನೆ ನಂ. 41/52015 ಕಲಂ. 32, 34 ಕೆ.ಇ.ಆಕ್ಟ್ ರೀತ್ಯಾ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು, ಈ ಪ್ರಕರಣದ ತನಿಖೆಯನ್ನು ಪೂರೈಸಿ, ಆರೋಪಿತರ ದೋಷಾರೋಪಣ ಪತ್ರವನ್ನು ಮಾನ್ಯ ನ್ಯಾಯಾಲಯಕ್ಕೆ ಸಲ್ಲಿಸಿದ್ದು, ಮಾನ್ಯ ನ್ಯಾಯಾಲಯವು ಸಿಸಿ ನಂ-1865/2015 ನೇದ್ದನ್ನು ನೀಡಿ ಹಾಲಿ ವಿಚಾರಣೆಯಲ್ಲಿರುತ್ತದೆ. ಈ ದಿನ ಬೆಳಿಗ್ಗೆ 10-30 ಗಂಟೆಗೆ ನಾನು ಸಿಬ್ಬಂದಿಯವರೊಂದಿಗೆ ಗಸ್ತಿನಲ್ಲಿದ್ದಾಗ ಸದರಿ ಮೇಲ್ಕಂಡ ಪ್ರತಿವಾದಿಗಳು ಪುನಃ ಯಾವುದೇ ಪರವಾನಿಗೆ ಇಲ್ಲದೆ ಅಕ್ರಮವಾಗಿ ಮದ್ಯವನ್ನು ಸಾಗಾಟ ಮಾಡುತ್ತಾ ಮಾರಾಟ ಮಾಡಿ ಸಾರ್ವಜನಿಕರ ಶಾಂತಿಗೆ ಭಂಗವನ್ನುಂಟು ಮಾಡಿ | |||||||||||||||
ಮತ್ತು ಕಾನೂನು ಸುವ್ಯವಸ್ಥೆಗೆ ಧಕ್ಕೆವುಂಟು ಮಾಡುವ ಸಂಭವ ಕಂಡು ಬಂದಿದ್ದರಿಂದ ಪ್ರತಿವಾದಿಗಳ ವಿರುದ್ದ ಮುಂಜಾಗ್ರತ ಕ್ರಮವಾಗಿ ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿರುತ್ತದೆ. | ||||||||||||||||
Cowlbazar PS | ||||||||||||||||
5 | Cr.No:0351/2015 (IPC 1860 U/s 00MP ) |
03/12/2015 | Under Investigation | |||||||||||||
MISSING PERSON - Girl | ||||||||||||||||
Brief Facts : | ಈ ದಿನ ದಿನಾಂಕ: 03/12/2015 ರಂದು ಬೆಳಿಗ್ಗೆ 11-30
ಗಂಟೆಗೆ ಪಿರ್ಯದಿದಾರಳಾದ ಶ್ರೀಮತಿ ಫರೀದಾ
ಅಬ್ಬಾಸ್ ತಂದೆ ಜಹೀರ್ ಅಬ್ಬಾಸ್ ವ: 36ವರ್ಷ.
ಮುಸ್ಲಿಂ ಜನಾಂಗ. ಬ್ಯೂಟಿಶಿಯನ್ ಕೆಲಸ. ವಾಸ: ಎ.ಕೆ. ಅಜಾದ್ನಗರ ಲತೀಫ್ ರವರ ಮನೆಯ ಪಕ್ಕದಲ್ಲಿ ಕೌಲ್ ಬಜಾರ್ ಬಳ್ಳಾರಿ. ರವರು ಠಾಣೆಗೆ ಹಾಜರಾಗಿ ನೀಡಿದ ದೂರನ್ನು ಪಡೆದು ನೋಡಲಾಗಿ ಸಾರಾಂಶವೆನೆಂದರೆ ತನ್ನ ಮೊದಲ ಗಂಡ ಹೃದಯಘಾತದಿಂದ ಮೃತ ಪಟ್ಟಿದ್ದರಿಂದ ಬಳ್ಳಾರಿಯಲ್ಲಿ ಕೌಲ್ ಬಜಾರ್ ನ ವಾಸಿಯಾದ ನಜ್ಮಾ ರವರ ತಮ್ಮನಾದ ಜಹೀರ್ ಅಬ್ಬಾಸ್ ರವರೊಂದಿಗೆ ಈಗ್ಗೆ 6ವರ್ಷಗಳ ಹಿಂದೆ ಬಳ್ಳಾರಿಯಲ್ಲಿ ಮದುವೆಯಾಗಿರುತ್ತದೆ. ತಾನು ಮತ್ತು ತನ್ನ ಗಂಡ ಬಳ್ಳಾರಿಯಿಂದ ಬಾಂಬೆಗೆ ಹೋಗಿ ಅಲ್ಲಿಯೇ ತನ್ನ ಗಂಡ ಚಪ್ಪಲ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದರು ತಾನು ಅಲ್ಲಿ ಬ್ಯೂಟಿಶಿಯನ್ ಕೆಲಸ. ಮಾಡಿಕೊಂಡಿದ್ದಳು. ಸುಮಾರು 4 ತಿಂಗಳ ಹಿಂದೆ ಬಳ್ಳಾರಿಯಲ್ಲಿ ನಂದಿ ಸ್ಕೂಲ್ ಹತ್ತಿರದ ತನ್ನ ಖಾಲಿ ಪ್ಲಾಟ್ ನ್ನು ಮಾರಬೇಕಾಗಿದ್ದರಿಂದ ತನ್ನ ಗಂಡ ಬಾಂಬೆಯಿಂದ ಬಳ್ಳಾರಿಗೆ ಬಂದು ತನ್ನ ಅಕ್ಕಳಾದ ಶ್ರೀಮತಿ ನಜ್ಮಾ ರವರ ಮನೆಯಲ್ಲಿಇದ್ದು ಪ್ಲಾಟ್ ನ್ನು 11ಲಕ್ಷ ರೂ ಗಳಿಗೆ ಮಾತಾಗಿದೆ ಎಂದು ಹೇಳಿದರು ಅಲ್ಲದೆ ತನ್ನ ಅಕ್ಕಳ ಸಂಸಾರದಕ್ಕಾಗಿ ತನ್ನ ಬಳಿ ಹಣವನ್ನು ಕೇಳಿ ಬಳ್ಳಾರಿಯಲ್ಲಿಯೇ ಇದ್ದು ಮರಳಿ ಪೋನ್ ಮಾಡದೆ ಬಾಂಬೆಗೂ ಬಾರದೆ ಇದ್ದುದ್ದರಿಂದ ತಾನೆ ಬಾಂಬೆಯಿಂದ ಬಳ್ಳಾರಿಗೆ ಬಂದು ತನ್ನ ನಾದಿನಿ ನಜ್ಮಾ ರವರ ಮನಗೆ ಹೋಗಿ ವಿಚಾರಿಸಲಾಗಿ 'ನಿನ್ನ ಗಂಡ 17/8/2015 ರಂದು ನಮ್ಮ ಮನೆಯಿಂದ ಬಾಂಬೆಗೆ ಹೋಗುತ್ತೇನೆಂದು ಹೇಳಿ ಹೋಗಿರುತ್ತಾನೆಂದು ತಿಳಿಸಿದರು' ನಂತರ ತಾನು ತನ್ನ ಗಂಡನ ಮೋಬೈಲ್ ನಂ: 9071016766. 9449309515. ನ್ನೆದ್ದವಕ್ಕೆ ಪೋನ್ ಮಾಡಿದರೆ ಸ್ವೀಚ್ ಆಫ್ಎಂದು ಬಂದಿದ್ದು ಹುಡುಕಾಡಿ ನೋಡಿದಾಗ್ಯೂ ಪತ್ತೆಯಾಗದೇ ಇದ್ದುದ್ದರಿಂದ ತನ್ನ ನಾದಿನಿ ಮತ್ತು ಅವರ ಗಂಡನಿಗೆ ವಿಚಾರಿಸಿ ಕಾಣೆಯಾದ ತನ್ನ ಗಂಡನನ್ನು ಪತ್ತೆಮಾಡಬೇಕೆಂದು ನೀಡಿದ ದೂರನ್ನು ಪಡೆದು ಪ್ರಕರಣವನ್ನು ದಾಖಲು ಮಾಡಿದೆ. |
|||||||||||||||
Hadagali PS | ||||||||||||||||
6 | Cr.No:0115/2015 (MMDR (MINES AND MINERALS REGULATION OF DEVELOPMENT) ACT 1957 U/s 21 ; IPC 1860 U/s 379 ) |
03/12/2015 | Under Investigation | |||||||||||||
KARNATAKA STATE LOCAL ACTS - Karnataka Minor Mineral Consistent Rule 1994 | ||||||||||||||||
Brief Facts : | ಈ ದಿನ ದಿನಾಂಕ03-12-2015 ರಂದು ತಹಶಿಲ್ದಾರರಿಗೆ ಮಾಹಿತಿ ಬಂದ ಮೇರೆಗೆ ತಮ್ಮ ಸಿಬ್ಬಂದಿಯೊಂದಿಗೆ ಮತ್ತು ಪೊಲೀಸರೊಂದಿಗೆ ಹೊನ್ನೂರ್ ಗ್ರಾಮದ ಮುಖ್ಯ ರಸ್ತೆಯಲ್ಲಿ ಸರ್ಕಾರಿ ಆಸ್ಪತ್ರೆ ಮುಂದೆ ಇದ್ದಾಗ, ಹೊನ್ನೂರ್ ಕಡೆಯಿಂದ 11]Mahindra 475 DI SARPANCH Company Engine No:ZJTX00865 ಮತ್ತು ಇದರ ಟ್ರಾಲಿ ಚಾಲಕನು ಸರ್ಕಾರದ ಯಾವುದೆ ಪರವಾನಿಗೆಯನ್ನು ಪಡೆಯದೆ, ಮರಳನ್ನು ಕಳ್ಳತನದಿಂದ ಸಾಗಣಿಕೆ ಮಾಡಿ, ಸರ್ಕಾರಕ್ಕೆ ಯಾವುದೆ ರಾಜಧನವನ್ನು ತುಂಬದೆ ಸರ್ಕಾರಕ್ಕೆ ನಷ್ಟ ಮಾಡಿ, ತಮ್ಮ ಸ್ವಂತ ಲಾಭಕ್ಕಾಗಿ ಮಾರಾಟ ಮಾಡಲೆಂದು ಹಡಗಲಿ ಪಟ್ಟಣಕ್ಕೆ ಬರುವಾಗ ದಾಳಿ ಮಾಡಿ, 1500/ರೂ ಬೆಲೆ ಬಾಳುವ ಸಾದಾ ಮರಳು ಮತ್ತು ಮೇಲ್ಕಂಡ ಟ್ರಾಕ್ಟರ್ ಇಂಜಿನ್ ಮತ್ತು ಟ್ರಾಲಿ ಅಂದಾಜು ಬೆಲೆ 2,25000 ರೂ ಗಳಷ್ಟು ಬೆಲೆ ಬಾಳುವ ಟ್ರಾಕ್ಟರನ್ನು ವಶಕ್ಕೆ ಪಡೆದು ಪಂಚನಾಮೆ ಮಾಡಿ ವಾಹನ ಚಾಲಕ ಮತ್ತು ಮಾಲಿಕ ಹಾಗೂ ಕೃತ್ಯದಲ್ಲಿ ಭಾಗಿಯಾದವರನ್ನು ಪತ್ತೆ ಹಚ್ಚಿ ಕಾನೂನು ಕ್ರಮ ಜರುಗಿಸಲು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಆರೋಪಿತರ ಪತ್ತೆಕಾರ್ಯಕೈಗೊಂಡಿದೆ. | |||||||||||||||
Kampli PS | ||||||||||||||||
7 | Cr.No:0160/2015 (KARNATAKA POLICE ACT, 1963 U/s 78(3) ) |
03/12/2015 | Under Investigation | |||||||||||||
KARNATAKA POLICE ACT 1963 - Gambling - Matka (78 Class C) | ||||||||||||||||
Brief Facts : | ದಿನಾಂಕ 02/12/2015 ರಂದು ಸಂಜೆ 06.30 ಗಂಟೆಗೆ ಶ್ರೀ.ಲಿಂಗನಗೌಡ ನೆಗಳೂರು, ಸಿಪಿಐ ಕಂಪ್ಲಿ ರವರು ಕಛೇರಿಯಲ್ಲಿದ್ದಾಗ ಕಂಪ್ಲಿ ಪಟ್ಟಣದ ಜಿ.ಕೆ.ಟವರ್ ಎದುರುಗಡೆ ಇರುವ ಟೀ ಸ್ಟಾಲ್ ಅಂಗಡಿ ಮುಂದಿನ ಸಾರ್ವಜನಿಕ ಸ್ಥಳದಲ್ಲಿ ನಸೀಬಿನ ಮಟಕಾ ಜೂಜಾಟ ನಡೆಯುತ್ತಿರುವ ಬಗ್ಗೆ ಖಚಿತ ವರ್ತಮಾನದ ಮೇರೆಗೆ ಸಿಪಿಐ ರವರು ಸಿಬ್ಬಂದಿ ಹಾಗೂ ಪಂಚರ ಸಂಗಡ ಮಾಹಿತಿಯಂತೆ ಮೇಲ್ಕಂಡ ಸ್ಥಳಕ್ಕೆ ರಾತ್ರಿ 7.00 ಗಂಟೆಗೆ ಹೋಗಿ ನಸೀಬಿನ ಮಟಕಾ ಜೂಜಾಟದಲ್ಲಿ ತೊಡಗಿದ್ದ ಆರೋಪಿ ಶಾಮೀದ್ನ ಮೇಲೆ ದಾಳಿ ಮಾಡಿ ಹಿಡಿದು ಆತನಿಂದ ಮಟಕಾ ಜೂಜಾಟಕ್ಕೆ ಉಪಯೋಗಿಸಿದ 1) ಎರೆಡು ಮಟಕಾ ಚೀಟಿ, 2) ಒಂದು ಬಾಲ್ ಪೆನ್ನು 3) ನಗದು ಹಣ ರೂ. 2000/-ಅನ್ನು ಪಂಚನಾಮೆ ಮೂಲಕ ಜಪ್ತುಪಡಿಸಿಕೊಂಡಿರುತ್ತಾರೆ. | |||||||||||||||
ಆರೋಪಿ ಶಾಮೀದ್ ನು ಮಟಕಾ ಪಟ್ಟಿಯನ್ನು ಕಂಪ್ಲಿ ಶಿಬರದಿನ್ನೆ ಏರಿಯಾದಲ್ಲಿರುವ ಮಲ್ಲಿಕಾರ್ಜುನನಿಗೆ ಕೊಡುವುದಾಗಿ ತಿಳಿಸಿದ್ದು ಇಬ್ಬರ ವಿರುದ್ದ ಕಾನೂನು ಕ್ರಮ ಜರುಗಿಸಲು ನೀಡಿದ ಜ್ಞಾಪನ ಪಡೆದು ಠಾಣೆಯ ಎನ್.ಸಿ ನಂ: 26/2015 ಕಲಂ 78(ಎ) ಕೆ.ಪಿ ಯಾಕ್ಟ್ ರೀತ್ಯ ಪ್ರಕರಣ ದಾಖಲಿಸಿದ್ದು ಈ ದಿನ ಮಾನ್ಯ ನ್ಯಾಯಾಲಯದ ಅನುಮತಿ ಪಡೆದು ಪ್ರ ವ ವರದಿ ದಾಖಲಿಸಿದೆ | ||||||||||||||||
8 | Cr.No:0161/2015 (CODE OF CRIMINAL PROCEDURE, 1973 U/s 110(E)(G) ) |
03/12/2015 | Under Investigation | |||||||||||||
CrPC - Security For Good Behaviour (Sec 110) | ||||||||||||||||
Brief Facts : | ನಾನು
ಮತ್ತು ಸಿಬ್ಬಂದಿಯವರಾದ ಪಿಸಿ 750, 499 ರವರೊಂದಿಗೆ ಈ ದಿನ ದಿನಾಂಕ 03/12/2015 ರಂದು
ಮದ್ಯಾಹ್ನ 2 ಘಂಟೆಗೆ ಕಂಪ್ಲಿ ಅಂಬೇಡ್ಕರ್ ಸರ್ಕಲ್
ಏರಿಯಾದಲ್ಲಿ ರೌಂಡ್ಸ್ ನಲ್ಲಿದ್ದಾಗ ಆರೋಪಿತರಾದ
ಶಾಮಿದ್ & ಮಲ್ಲಿಕಾರ್ಜನರವರು
ಮುಂದಿನ ದಿನಗಳಲ್ಲಿ ಪುನಃ ಮಟಕಾ ಜೂಜಾಟದ ಧಂಧೆಯಲ್ಲಿ ತೊಡಗುವ ಸಾಧ್ಯತೆಗಳಿರುವ ಬಗ್ಗೆ
ಬಾತ್ಮೀದಾರರಿಂದ ತಿಳಿದು ಬಂದ ಮೇರೆಗೆ
ಅಂಬೇಡ್ಕರ್ ಸರ್ಕಲ್ ಬಳಿ ಇದ್ದ ಶಾಮಿದ್ & ಮಲ್ಲಿಕಾರ್ಜುನರವರನ್ನು ಮಧ್ಯಾಹ್ನ
2.15 ಗಂಟೆಗೆ ವಶಕ್ಕೆ ಪಡೆದು
ಮಧ್ಯಾಹ್ನ 2.30 ಘಂಟೆಗೆ ಠಾಣೆಗೆ ಬಂದಿರುತ್ತೇನೆ. ಮೇಲ್ಕಂಡ ಆರೋಪಿತರು ಈ ಹಿಂದೆ ಮಟಕಾ ನಸೀಬಿನ ಜೂಜಾಟದಲ್ಲಿ ಭಾಗಿಯಾಗಿದ್ದರಿಂದ ಅವರ ಮೇಲೆ ಕಂಪ್ಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣಗಳು ದಾಖಲಾಗಿದ್ದರೂ ಸದ್ರಿ ವ್ಯಕ್ತಿಗಳು ತಮ್ಮ ಚಾಳಿಯನ್ನು ಬಿಡದೇ ಪದೇ ಪದೇ ಮಟಕಾ ಜೂಜಾಟದಲ್ಲಿ ತೊಡಗುವುದನ್ನು ರೂಡಿಗತವಾಗಿ ಬೆಳೆಸಿಕೊಂಡಿರುತ್ತಾರೆ. ಸದ್ರಿಯವರು ಸಾರ್ವಜನಿಕರಿಗೆ ಮಟಕಾ ಜೂಜಾದಲ್ಲಿ ತೊಡಗುವಂತೆ ಪ್ರಚೋದನೆ ಮಾಡುವುದರಿಂದ ಅನೇಕ ವ್ಯಕ್ತಿಗಳು ಇಂತಹಾ ಕೆಟ್ಟ ದಂದೆಗೆ ಬಲಿಯಾಗಿ ಆಥರ್ಿಕ ದಿವಾಳಿ ಹೊಂದಿ ತಮ್ಮ ಸಂಸಾರಗಳನ್ನು ನಿಭಾಯಿಸುವುದು ಕಷ್ಟವಾಗಿ ಮಟಕಾ ಜೂಜಾಟ ಆಡಲು ಹಣ ಇಲ್ಲದ ಸಮಯದಲ್ಲಿ ಕಳ್ಳತನ ಮತ್ತು ಇತರೆ ಚಟಕ್ಕೆ ಬಲಿಯಾಗುವ ಸಾದ್ಯತೆಗಳು ಇರುತ್ತವೆ. ಇವರು ಸಮಾಜ ಘಾತುಕ ಚಟುವಟಿಕೆಯಲ್ಲಿ ತೊಡಗದಂತೆ ತಡೆಗಟ್ಟುವ ನಿಟ್ಟಿನಲ್ಲಿ ಆರೋಪಿತರನ್ನು ಠಾಣೆಗೆ ಕರೆದುಕೊಂಡು ಬಂದು ಅವರ ವಿರುದ್ದ ಮುಂಜಾಗ್ರತೆ ಕ್ರಮಾವಾಗಿ ಮದ್ಯಾಹ್ನ 2.30ಗಂಟೆಗೆ ಕಂಫ್ಲಿ ಪೊಲೀಸ್ ಠಾಣೆ ಗುನ್ನೆ ನಂಬರ್ 161/2015 ಕಲಂ 110 (ಇ)&(ಜಿ) ಸಿ.ಆರ್.ಪಿ.ಸಿ. ಪ್ರಕಾರ ಕ್ರಮ ಜರುಗಿಸಿರುತ್ತೇನೆ. ಕಾರಣ ಮಾನ್ಯರು ಆರೋಪಿತರಿಂದ ಸೂಕ್ತ ಭದ್ರತಾ ಮುಚ್ಚಳಿಕೆ ಪಡೆದು ಇನ್ನು ಮುಂದೆ ಇಂತಹಾ ಸಮಾಜಘಾತುಕ ಚಟುವಟಿಕೆಯಲ್ಲಿ ತೊಡಗದಂತೆ ಎಚ್ಚರಿಕೆಯಿಂದ ಇರಲು ಕ್ರಮ ಜರುಗಿಸಲು ಪ್ರಕರಣ ದಾಖಲಿಸಿದೆ |
|||||||||||||||
Kottur PS | ||||||||||||||||
9 | Cr.No:0176/2015 (IPC 1860 U/s 380,457 ) |
03/12/2015 | Under Investigation | |||||||||||||
BURGLARY - NIGHT - Temple Theft | ||||||||||||||||
Brief Facts : | ಈ ದಿನ ದಿನಾಂಕ:- 03-12-2015 ರಂದು ಮದ್ಯಹ್ನ 01.00 ಗಂಟೆಗೆ ಪಿರ್ಯಾಧಿದಾರರಾದ ಲಿಂಗನಗೌಡ ಇವರು ಠಾಣೆಗೆ ಹಾಜರಾಗಿ ನೀಡಿದ ಗಣಕಯಂತ್ರದಿಂದ ತಯಾರಿಸಿದ ದೂರಿನ ಸಾರಾಂಶ ಬೇವೂರು ಗ್ರಾಮದ ಶ್ರೀ. ವೀರಭದ್ರೇಶ್ಡರ ದೇವಸ್ಥಾನದಲ್ಲಿ ನಿನ್ನೆ ದಿನ ದಿನಾಂಕ:-02-12-2015 ರಂದು ರಾತ್ರಿ 07.00 ಗಂಟೆಯಿಂದ ಈ ದಿನ ಬೆಳಿಗ್ಗೆ 03-12-2015 ರಂದು ಬೆಳಿಗ್ಗೆ 06.00 ಗಂಟೆಯ ಮದ್ಯದ ಅವಧಿಯಲ್ಲಿ ಯಾರೋ ಕಳ್ಳರು ಬೀಗಹಾಕಿರದ ದೇವಸ್ಥಾನದ ಒಳಗೆ ಪ್ರವೇಶ ಮಾಡಿ ದೇವಸ್ಥಾನದಲ್ಲಿದ್ದ ಕಬ್ಭಿಣದ ಹುಂಡಿಯನ್ನು ಕಬ್ಬಣಿದ ರಾಡಿನಿಂದ ಮೀಟಿ ಅದರಲ್ಲಿದ್ದ ನಗದು ಹಣ.15.000 ರಿಂದ 20.000/- ರೂ ಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಕಳ್ಳರನ್ನು ಪತ್ತೆ ಹಚ್ಚಿ ಕಾನೂನು ಕ್ರಮ ಜರುಗಿಸಬೇಕೆಂದು ಇದ್ದ ದೂರಿನ ಮೇರೆಗೆ ಪ್ರಕರಣ ದಾಖಲಿಸಿದೆ. | |||||||||||||||
ಗುರುವಾರ, ಡಿಸೆಂಬರ್ 3, 2015
PRESS NOTE OF 03/12/2015
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ