ದಿನಾಂಕ 05-12-2014
ಬಳ್ಳಾರಿ.
ಪತ್ರಿಕಾ ಪ್ರಕಟಣೆ
ಅಪರಾಧ ತಡೆ ಮಾಸಾಚರಣೆ-2014
ಬಳ್ಳಾರಿ ಜಿಲ್ಲೆಯಲ್ಲಿ 01-12-2014 ರಿಂದ 31-12-2014 ರವರೆಗೆ ಅಪರಾಧ ತಡೆ ಮಾಸಾಚರಣೆಯನ್ನು ಆಚರಿಸುತ್ತಿದ್ದು ಈ ವರ್ಷ ವಿಶೇಷವಾಗಿ ಮಹಿಳೆಯರ ಮೇಲಿನ ದೌರ್ಜನ್ಯಗಳು ಮತ್ತು ಮಕ್ಕಳ ಮೇಲೆ ನಡೆಯುವ ಲೈಂಗೀಕ ಶೋಷಣೆ/ದೌರ್ಜನ್ಯಗಳನ್ನು ತಡೆಗಟ್ಟುವ ಬಗ್ಗೆ ಕೆಲವೊಂದು ಸಾಮಾಜಿಕ ಅರಿವು ಕಾರ್ಯಕ್ರಮಗಳನ್ನು ಹಾಕಿಕೊಂಡಿದ್ದು, ಈ ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ, ಮಕ್ಕಳ ಸಹಾಯವಾಣಿ (ಅhiಟಜ ಐiಟಿe) ಕಾಣೆಯಾದ ಮಕ್ಕಳ ಬ್ಯೂರೋ ಮತ್ತು ಮಹಿಳಾ ಸಹಾಯವಾಣಿ, ಸಾಂತ್ವನ ಕೇಂದ್ರ, ಸೌಖ್ಯಬೆಳಕು ಸಮುದಾಯ ಸೇವಾ ಸಂಸ್ಥೆ ಮತ್ತು ಮಹಿಳೆ ಮತ್ತು ಮಕ್ಕಳಿಗಾಗಿ ಕೆಲಸ ಮಾಡುವ ಸರ್ಕಾರೇತರ ಸಂಸ್ಥೆಗಳನ್ನು ಬಳಸಿಕೊಳ್ಳಲಾಗಿದೆ.
ನಮ್ಮ ಸಂದೇಶಗಳನ್ನು ಜನ ಸಾಮಾನ್ಯರಿಗೆ ಮುಟ್ಟಿಸಲು ವ್ಯಾಪಕ ತಳಹದಿಯಲ್ಲಿ ನಗರಗಳಲ್ಲಿ ವಾರ್ಡ್ ಮತ್ತು ಹಳ್ಳಿಗಳನ್ನು ಘಟಕಗಳನ್ನಾಗಿ ಆಯ್ದುಕೊಂಡು ಹೆಚ್ಚಿನ ಸಂಖ್ಯೆಯಲ್ಲಿ ಜನರನ್ನು ಸೇರಿಸಿ ನಮ್ಮ ಸಂದೇಶಗಳನ್ನು ಅವರಿಗೆ ತಿಳಿಯುವ ರೀತಿಯಲ್ಲಿ ಪ್ರಚಾರಪಡಿಸಲು ಕೆಳಗಿನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
1. ಅಪರಾಧ ತಡೆ ಮತ್ತು ಜಾಗೃತಿ ಕಾರ್ಯಕ್ರಮಗಳನ್ನು ವ್ಯಾಪಕ ಪ್ರಮಾಣದಲ್ಲಿ ಪ್ರಚಾರ ಪಡಿಸಲು ದಿನಪತ್ರಿಕೆಗಳು, ದೃಶ್ಯಮಾಧ್ಯಮಗಳು, ಇಂಟರ್‍ನೆಟ್É ವೆಬ್‍ಸೈಟ್ಸ್, ವ್ಯಾಟ್ಸ್‍ಅಪ್, ಫೇಸ್‍ಬುಕ್, ಎಸ್.ಎಂ.ಎಸ್. ಗಳನ್ನು ಬಳಸಿಕೊಳ್ಳಲಾಗುವುದು.
2. ಮಹಿಳೆ ಮತ್ತು ಮಕ್ಕಳ ದೌರ್ಜನ್ಯಕ್ಕೆ ಸಂಬಂಧಿಸದಂತೆ ಕೆಲಸ ಮಾಡುತ್ತಿರುವ ಸರ್ಕಾರಿ ಇಲಾಖೆಯ ಅಂಗ ಸಂಸ್ಥೆಗಳು, ಸರ್ಕಾರೇತರ ಸಂಘಟನೆಗಳು ಮತ್ತು ಸಂಪನ್ಮೂಲ ವ್ಯಕ್ತಿಗಳನ್ನು ಬಳಸಿಕೊಂಡು ವಿಶೇಷವಾಗಿ ಮಹಿಳೆ ಮಕ್ಕಳ ದೌರ್ಜನ್ಯ ತಡೆಯಲು ಅನುಸರಿಸಬೇಕಾದ ಮುಂಜಾಗ್ರತ ಕ್ರಮಗಳನ್ನು ಮತ್ತು ಇತ್ತೀಚಿನ ಕಾನೂನು ಮತ್ತು ಕಾನೂನಿನ ತಿದ್ದುಪಡಿಗಳು ಬಗ್ಗೆ ಭಾಷಣಗಳ ಮೂಲಕ ವಾರ್ಡ್ ಮತ್ತು ಹಳ್ಳಿಗಳು ಮತ್ತು ಶಾಲೆ, ಕಾಲೇಜುಗಳಲ್ಲಿ ಕಾರ್ಯಕ್ರಮ ಹಮ್ಮಿಕೊಂಡು ಅರಿವು ಮೂಡಿಸಲಾಗುವುದು.
3. ಜ್ಞಾನಜ್ಯೋತಿ ಮಹಾವಿದ್ಯಾಲಯ ಬಳ್ಳಾರಿ ಮತ್ತು ಸೌಖ್ಯಬೆಳಕು ಸಮುದಾಯ ಸೇವಾ ಸಂಸ್ಥೆ, ಬಳ್ಳಾರಿ ಇವರಿಂದ ಬೀದಿ ನಾಟಕಗಳು ಮತ್ತು ಹಾಡುಗಳನ್ನು ಹಾಡಿಸುವುದರ ಮೂಲಕ ಜಾಗೃತಿ ಮೂಡಿಸುವುದು.
4. ಪೊಲೀಸ್ ಅಧಿಕಾರಿಗಳಿಂದ ತಮ್ಮ ವ್ಯಾಪ್ತಿಯಲ್ಲಿ ಶಾಲೆ ಕಾಲೇಜುಗಳಿಗೆ ಭೇಟಿ ನೀಡಿ ಇಂತಹ ಅಪರಾಧಗಳ ತಡೆಗಟ್ಟುವ ಬಗ್ಗೆ ಇರುವಂತಹ ಕಾನೂನಿನ ಬಗೆಗೆ ಅರಿವು ಮೂಡಿಸುವುದು.
5. ಕರಪತ್ರಗಳನ್ನು ಮುದ್ರಿಸಿ ಹಂಚುವುದರ ಮೂಲಕ
6. ಮಹಿಳೆ ಮತ್ತು ಮಕ್ಕಳ ದೌರ್ಜನ್ಯ ತಡೆಯಲು ಸಂಬಂಧಿಸಿದಂತೆ ಕಿರುಚಿತ್ರ (ಆoಛಿumeಟಿಣಡಿಥಿ ಈiಟms) ಗಳನ್ನು ಜನರಿಗೆ ತೋರಿಸುವುದರ ಮೂಲಕ
7. ಫ್ಲೆಕ್ಸ್ ಮತ್ತು ಬೋರ್ಡ್‍ಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ಹಾಕುವುದರ ಮೂಲಕ ವಿವಿಧ ಕಾನೂನಿನ ಬಗ್ಗೆ ಅರಿವು ಮೂಡಿಸುವುದು.
8. ಸಾರ್ವಜನಿಕ ಸ್ಥಳಗಳಲ್ಲಿ ಮತ್ತು ಶಾಲೆ ಕಾಲೇಜುಗಳಲ್ಲಿ ಪೊಲೀಸ್ ಇಲಾಖೆಯ ಅಧಿಕಾರಿಗಳ ದೂರವಾಣಿ ಸಂಖ್ಯೆಗಳ ಮಾಹಿತಿ ಫಲಕಗಳನ್ನು ಅಂಟಿಸುವುದು.
ಅಪರಾಧ ತಡೆ ಮಾಸಾಚರಣೆ ಸಲುವಾಗಿ ಮೂರು ವಿಶೇಷ ಪೊಲೀಸ್ ವಾಹನಗಳನ್ನು ಕ್ರಮವಾಗಿ ಬಳ್ಳಾರಿ ನಗರ ಮತ್ತು ಗ್ರಾಮೀಣ ಉಪವಿಭಾಗ-01, ಹೊಸಪೇಟೆ, ಹಂಪಿ ಮತ್ತು ಹಡಗಲಿ ಉಪವಿಭಾಗ-01, ಕೂಡ್ಲಿಗಿ ಉಪವಿಭಾಗ-01 ನೀಡುತ್ತಿದ್ದು ಆ ವಾಹನಗಳನ್ನು ಸದರಿ ಕಾರ್ಯಕ್ರಮ ಸಲುವಾಗಿ ಸುಸಜ್ಜಿತ ಗೊಳಿಲಾಗಿದ್ದು ಆ ಪ್ರತಿಯೊಂದು ವಾಹನದಲ್ಲಿ 2 ಜನ ಮಹಿಳಾ ಸಿಬ್ಬಂದಿ, ಒಬ್ಬ ವಿಡಿಯೋಗ್ರಾಫರ್ ಮತ್ತು ಮೈಕ್‍ಸಿಸ್ಟಮ್ ಇದ್ದು ನಗರ ಮತ್ತು ಹಳ್ಳಿಗಳಲ್ಲಿ ಕಾರ್ಯಕ್ರಮ ನಡೆಸಲು ಸುಸಜ್ಜಿತಗೊಳಿಲಾಗಿರುತ್ತದೆ. ಅಪರಾಧ ತಡೆ ಮಾಸಾಚರಣೆ ಅಂಗವಾಗಿ ಒಂದು ತಿಂಗಳ ಮಟ್ಟಿಗೆ ಮಹಿಳೆಯರ ಮತ್ತು ಮಕ್ಕಳ ದೌರ್ಜನ್ಯ/ಶೋಷಣೆ ತಡೆಯುವ ಸಲುವಾಗಿ ಸಮುದಾಯ ಅರಿವು ಕಾರ್ಯಕ್ರಮಗಳನ್ನು ಹಾಕಿಕೊಳ್ಳುವಾಗ ಕೇವಲ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಯವರು ಭಾಗವಹಿಸದೇ ಕೆಲವೊಂದು ಸರ್ಕಾರಿ ಘಟಕಗಳು ಮತ್ತು ಸರ್ಕಾರೇತರ ಸಂಸ್ಥೆಗಳು ಮಹಿಳೆಯರ ಮತ್ತು ಮಕ್ಕಳ ಸಬಲೀಕರಣಕ್ಕಾಗಿ ಕೆಲಸ ಮಾಡುತ್ತಿದ್ದು ಅಂತಹ ಸಂಸ್ಥೆಗಳನ್ನು ಬಳಸಿಕೊಂಡು ನಿರಂತರವಾಗಿ ಒಂದು ತಿಂಗಳು ಕಾಲ ಅರಿವು ಕಾರ್ಯಕ್ರಮಗಳ್ನು ಹಮ್ಮಿಕೊಳ್ಳಲಾಗಿದೆ.
ಪೊಲೀಸ್ ಅಧೀಕ್ಷಕರು,
ಬಳ್ಳಾರಿ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ