ಜಿಲ್ಲಾ ಪೊಲೀಸ್ ಕಾರ್ಯಲಯ
ಬಳ್ಳಾರಿ, ದಿನಾಂಕ: 05-12-2014
ಪತ್ರಿಕಾ ಪ್ರಕಟಣೆ
ಫಿರ್ಯಾದಿದಾರರಾದ ಶ್ರೀಮತಿ ಸುಗುಣ ಕೆ.ಎಸ್.ವಾ: ಬಳ್ಳಾರಿ ರವರು ದಿನಾಂಕ 21-11-14 ರಂದು ರಾತ್ರಿ 09-30 ಗಂಟಗೆ ತನ್ನ ಮಹಡಿ ಮನೆಗೆ ಬೀಗ ಹಾಕಿಕೊಂಡು ತನ್ನ ಮಗಳ ಮಗಳ ಮನೆಗೆ ಬೆಂಗಳೂರಿಗೆ ಹೋಗಿದ್ದು ದಿನಾಂಕ 03-12-14 ರಮದು ಬೆಳಿಗ್ಗೆ 09-00 ಗಂಟೆಗೆ ಪಕ್ಕದ ಮನೆಯವರು ಫಿರ್ಯಾದಿಗೆ ಫೋನ್ ಮಾಡಿ ಫಿರ್ಯಾದಿಯ ಮನೆ ಕಳ್ಳತನವಾದಂತೆ ಕಂಡು ಬರುತ್ತಿದೆ ಎಂದು ತಿಳಿಸಿದ್ದು ದಿನಾಂಕ 03-12-14 ರಂದು ಫಿರ್ಯಾದಿ ರಾತ್ರಿ 10-00 ಗಂಟೆಗೆ ಮನೆಗೆ ಬಂದು ನೋಡಲು ಬೀಗದ ಪತ್ತ ಕಿತ್ತು ಹಾಕಿ ಬಾಗಿಲು ತೆರೆದಿದ್ದು ಬೆಡ್ ರೂಮಿನ ಬಾಗಿಲು ತೆರೆದು ಅದರಲ್ಲಿದ್ದ 150 ಗ್ರಾಮ ಬಂಗಾರ, 20 ಗ್ರಾಂ ಬೆಳ್ಳಿಯ ನಗದು ಹಣ 12,000/- ರೂ ಎಲ್ಲಾ ಒಟ್ಟು ಬೆಲೆ 4,32,600/- ಗಳ ಮೌಲ್ಯದ ವಸ್ತುಗಳನ್ನು ಯಾರೋ ಕಳ್ಳರು ಕಳ್ಳತನ ಮಾಡಿರುತ್ತಾರೆಂದು ಇದ್ದ ದೂರಿನ ಮೇರೆಗೆ ಬ್ರೂಸ್‍ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಕೈಗೊಂಡಿರುತ್ತದೆ.
ಪಿರ್ಯಾದಿಯ ಮಗನಾದ ಶಿವಶಂಕರನು ಮತ್ತು ಆತನ ತಾಯಿ ದಿನಾಂಕ: 27-28/11/14 ರಂದು ಹೊಸಪೇಟೆಯಲ್ಲಿರುವ ತಮ್ಮ ದೊಡ್ಡಪ್ಪನ ಮಗನಾದ ಸಂತೋಷ ರವರ ಮದುವೆಗೆ ದಿನಾಂಕ: 24/11/14 ರಂದು ತಮ್ಮ ಊರಾದ ಬೆಟಗೇರಿಯಿಂದ ತಮ್ಮ ತಾಯಿಯವರಾದ ಶ್ರೀಮತಿ ಪುಷ್ಪಲತಾ ರವರೊಂದಿಗೆ ಎಂ.ಜೆ ನಗರದ 6 ನೇ ಕ್ರಾಸ್‍ನಲ್ಲಿರುವ ಮನೆಗೆ ಬಂದಿದ್ದು, ಕುರುಗೋಡಿನಲ್ಲಿರುವ ತನ್ನ ಅಕ್ಕಳಾದ ಶ್ರೀಮತಿ ಸೌಭಾಗ್ಯಳನ್ನು ಮದುವೆಗೆ ಕರೆದುಕೊಂಡು ಬರಲು ದಿನಾಂಕ: 26/11/14 ರಂದು ಬೆಳಿಗ್ಗೆ 7-00 ಗಂಟೆಗೆ ತಮ್ಮ ದೊಡ್ಡಪ್ಪ ರವರ ಮನೆಯಿಂದ ಶಿವಶಂಕರ ವಯಸ್ಸು: 30 ವರ್ಷ, ಈತನು ಹೋಗಿದ್ದು, ಇಲ್ಲಿಯವರೆಗೂ ಕುರುಗೋಡಿಗೂ ಹೋಗದೇ ತಮ್ಮ ಊರಿಗೂ ಬಾರದೇ ವಾಪಾಸ್ಸು ಹೊಸಪೇಟೆಗೂ ಬಾರದೇ ಕಾಣೆಯಾಗಿದ್ದು, ಈತನನ್ನು ಸಂಬಂಧಿಕರೆಲ್ಲರೂ ಸೇರಿ ಹೊಸಪೇಟೆ ಕುರುಗೋಡು ಗದಗ, ಬೆಂಗಳೂರು, ಪೂನಾ, ಬಳ್ಳಾರಿ ಮತ್ತು ಇತರೆ ಎಲ್ಲಾ ಕಡೆ ಹುಡುಕಾಡಿದ್ದು, ಸಿಕ್ಕಿರುವುದಿಲ್ಲ. ಕಾರಣ ಕಾಣೆಯಾದ ತಮ್ಮ ಮಗನನ್ನು ಪತ್ತೆ ಮಾಡಿಕೊಡಲು ಕೊಟ್ಟ ದೂರಿನ ಮೇರಗೆ ಬಡಾವಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದೆ.
ಫಿರ್ಯಾದಿದಾರರಾದ ಶ್ರೀ. ರಾಘವೇಂದ್ರ ರಾವ್ ತಂದೆ ಸಾಂಭಶಿವರಾವ್, 27 ವರ್ಷ, ಶಿಳ್ಳೆಕ್ಯಾತರು ವಾಸ: ರಾಜೀವ್ ಗಾಂಧಿಪುರ, ರಾಮನಗರ ತಾಲೂಕು ಇವರ ಮಗ ರಾಹುಲ್ ತಂದೆ ರಾಘವೇಂದ್ರ ರಾವ್. 3 ವರ್ಷ, ಈತನು ಬಸರಳ್ಳಿ ಗ್ರಾಮ ಮಸೀದಿಯ ಮುಂದೆಗಟೆ ಆಟವಾಡುತ್ತಿದ್ದಾಗ ಆರೋಪಿಯಾದ ರಾಜಣ್ಣ ಈತನು ಎ.ಪಿ.26/ಡಬ್ಯೂ.5401 ನೇದ್ದರ ಈಚರ್ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ನಡೆಸಿಕೊಂಡು ಬಂದು ಮಸೀದಿಯಿಂದ ಮುಂದೆ ಆಟವಾಡುತ್ತಿದ್ದ ಪಿರ್ಯಾದಿದಾರರ ಮಗನಿಗೆ ಡಿಕ್ಕಿ ಹೊಡೆಸಿದದ್ದರಿಂದ ಮೃತಪಟ್ಟಿರುವುದಾಗಿ ಇದ್ದ ದೂರಿನ ಮೇರೆಗೆ ಹಚ್ಚೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತದೆ.
4) ಬ್ರೂಸ್‍ಪೇಟೆ ಪೊಲೀಸ್ ಠಾಣೆ ಸರಹದ್ದಿನ ಗ್ರಾಹಂ ರಸ್ತೆಯಲ್ಲಿ ನಡೆಯುತ್ತಿದ್ದ ಮಟಕಾ ಜೂಜಾಟದ ಮೇಲೆ ಪೊಲೀಸರ ದಾಳಿ ಆರೋಪಿಗಳ ಬಂಧನ, ನಗದು ಹಣ ವಶ.
ದಿಃ02-12-2014 ರಂದು ರಾತ್ರಿ 8-15 ಗಂಟೆ ಸುಮಾರಿಗೆ ಬಳ್ಳಾರಿ ನಗರದ ಬ್ರೂಸ್‍ಪೇಟೆ ಪೊಲೀಸ್ ಠಾಣೆ ಸರಹದ್ದಿನಲ್ಲಿರುವ ಗ್ರಾಹಂ ರಸ್ತೆಯಲ್ಲಿರುವ ಖುಷಿ ಬಾರ್ ಪಕ್ಕದಲ್ಲಿಯ ಸಾರ್ವಜನಿಕ ಸ್ಥಳದಲ್ಲಿ ಮಟಕಾ ದಂಧೇಯಲ್ಲಿ ತೊಡಗಿದ್ದಾಗ ಪಿ.ಐ. ಡಿ.ಸಿ.ಐ.ಬಿ ಘಟಕ ಬಳ್ಳಾರಿ, ರವರು ಸಿಬ್ಬಂದಿ ಸಂಗಡ ದಾಳಿ ಮಾಡಿದಾಗ 1] ಚಂದ್ರ ಲೇಟ್ ಲಿಂಗಪ್ಪ ವಃ46 ವರ್ಷ, ವಾಲ್ಮೀಕಿ ಜನಾಂಗ, ಕೂಲಿ ಕೆಲಸ,ಸಾಃ ವಡ್ಡರ ಬಂಡೆ, ಬಳ್ಳಾರಿ, 2) ಹನೀಫ ತಂದೆ ದಾವ್ರದ್ ವಃ23ವರ್ಷ, ಮುಸ್ಲಿಂ ಕಾರ್ ಪೆಂಟರ್ ಕೆಲಸ, ಸಾಃ ಹನುಮಾನ್ ನಗರ, ಬಳ್ಳಾರಿ ಇವರಿಂದ ಜೂಜಾಟಕ್ಕೆ ಪಣವಾಗಿ ಇಟ್ಟಿದ್ದ ನಗದು ಹಣ 11,050/-, 4 ಮಟಕಾ ಪಟ್ಟಿಗಳು , 2 ಬಾಲ್ ಪೆನ್ನು ಇವುಗಳನ್ನು ಜಪ್ತು ಪಡಿಸಿಕೊಂಡಿದ್ದು, ಈ ಬಗ್ಗೆ ಬ್ರೂಸ್‍ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತದೆ.
ಪಿರ್ಯಾದಿದಾರರಾದ ಪಿ.ಐ ಡಿ.ಸಿಐ.ಬಿ ರವರಿಗೆ ಮೇದಾರ ಓಣಿಯಲ್ಲಿರುವ ರಂಗಪ್ಪ ಬೀದಿಯ ಸಾರ್ವಜನಿಕ ಸ್ಥಳದಲ್ಲಿ ನಸೀಬಿನ ಮಟಕಾ ಜೂಜಾಟ ನಡೆಯುತ್ತಿದೆ ಎಂದು ಬಂದ ಮಾಹತಿ ಮೇರೆಗೆ ಪಿ.ಐ ರವರು ಮತ್ತು ಸಿಬ್ಬಂದಿಯವರೊಂದಿಗೆ ಹೋಗಿ ಸ್ವಲ್ಪ ದೂರದಲ್ಲಿ ಮರೆಯಲ್ಲಿ ನಿಂತು ನೋಡಲು, ಆರೋಪಿ 1] ಚಂದ್ರಶೇಖರ್ ತಂದೆ ಲೇಟ್ ಸಿದ್ದಪ್ಪ ವ: 36 ವರ್ಷ, ವಾಸ ಮೇದಾರ್ ಓಣೆ ಬಳ್ಳಾರಿ. ರವರು 1 ರೂ ಕಟ್ಟಿದರೆ, ಅದೇ ನಂಬರ್ ಬಂದರೆ 80 ರೂ.ಗಳನ್ನು ಕೊಡುವುದಾಗಿ ಕೂಗಿ ಕರೆಯುತ್ತಾ, ಮಟಕಾ ಜೂಜಾಟದ ಚೀಟಿಗಳನ್ನು ಬರೆದು ಕೊಡುತ್ತಿದ್ದ ವ್ಯಕ್ತಿ ಸಿಕ್ಕಿಬಿದ್ದಿದ್ದು, ಮಟಕಾ ಜೂಜಾಟಕ್ಕೆ ಸಂಬಂದಿಸಿದ ನಗದು ಹಣ 11350/- ರೂ. 1 ಮಟಕಾ ಪಟ್ಟಿ, 1 ಬಾಲ್‍ಪೆನ್ನು ಜಪ್ತು ಪಡಿಸಿಕೊಂಡು ದೂರು ನೀಡಿದ್ದ ಮೇರೆಗೆ ದಿನಾಂಕ 03-11-2014ರಂದು ಠಾಣೆಯ ಎನ್.ಸಿ ನಂ 161/14 ನೇದ್ದರಲ್ಲಿ ದೂರನ್ನುದಾಖಲಿಸಿಕೊಂಡು ದಿನಾಂಕ 04-11-14 ರಂದು ಪ್ರ.ವರದಿಯನ್ನು ದಾಖಲಿಸಲು ನ್ಯಾಯಲಯಾದ ಅನುಮತಿಯನ್ನು ಪಡೆದು ಈ ಪ್ರಕರಣ ದಾಖಲಿಸಿದೆ.
ಪೊಲೀಸ್ ಸೂಪರಿಂಟೆಂಡೆಂಟ್,
ಬಳ್ಳಾರಿ.
ಇವರಿಗೆ, ಎಲ್ಲಾ ಪತ್ರಿಕಾ ವರದಿಗಾರರಿಗೆ
ಹೆಚ್ಚಿನ ಮಾಹಿತಿಗಾಗಿ ಶ್ರೀ. ಮಹಮ್ಮದ್ ಗಯಾಸ್, ಎ.ಎಸ್.ಐ ಮೊಬೈಲ್ ನಂ. 9845484100 ಹಾಗು
ಜಿ. ಸುಬ್ರಮಣ್ಯಂ, ಹೆಚ್.ಸಿ-175, ಮೋಬೈಲ್ ಸಂ: 9448202005 ರವರನ್ನು ಸಂಪರ್ಕಿಸಲು ವಿನಂತಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ