ಜಿಲ್ಲಾ ಪೊಲೀಸ್ ಕಾರ್ಯಲಯ
ಬಳ್ಳಾರಿ
ದಿನಾಂಕ: 14-12-2014
ಪತ್ರಿಕಾ ಪ್ರಕಟಣೆ
1) ತಂಬ್ರಹಳ್ಳಿ ಪೊಲೀಸ್ ಠಾಣೆ ಸರಹದ್ದಿನ ಹಂಪಸಾಗರ ಗ್ರಾಮದಲ್ಲಿ ಯಾರೋ ಕಳ್ಳರಿಂದ ಮನೆಯ ಬಾಗಿಲಿನ ಬೀಗದ ಚಿಲಕದ ಕೊಂಡಿಯನ್ನು ಮುರಿದು ಕಳ್ಳತನ, ಬಂಗಾರ, ಬೆಳ್ಳಿ, ನಗದು ಹಣ ಕಳವು
ದಿ.12-12-2014 ರಂದು ಬೆಳಗ್ಗೆ 7-00 ಗಂಟೆಯಿಂದ ದಿನಾಂಕ:13-12-2014 ರಂದು ಬೆಳಗ್ಗೆ 10-00 ಗಂಟೆಯ ಮದ್ಯದ ಅವಧಿಯಲ್ಲಿ ಹಂಪಸಾಗರ ಗ್ರಾಮದ ಫಿರ್ಯಾದಿಯ ತಂದೆ ಅರಲೂರ್ ಮಲ್ಲಪ್ಪ ರವರ ಮನೆಯ ಬಾಗಿಲಿಗೆ ಹಾಕಿದ ಬೀಗದ ಕಬ್ಬಿಣದ ಚಿಲುಕದ ಕೊಂಡಿಗಳನ್ನು ಯಾರೋ ಕಳ್ಳರು ಮುರಿದು ಮನೆಯೊಳಗೆ ಪ್ರವೇಶ ಮಾಡಿ ಮನೆಯಲ್ಲಿದ್ದ 2 ಕಬ್ಬಿಣದ ಗಾಡ್ರೇಜ್‍ಗಳನ್ನು ಮತ್ತು ಒಂದು ಕಟ್ಟಿಗೆಯ ಕಪಾಟನ್ನು ಮುರಿದು ಎರಡು ಕಬ್ಬಿಣದ ಗಾಡ್ರೇಜ್‍ನಲ್ಲಿಟ್ಟದ್ದ ಒಟ್ಟು 160 ಗ್ರಾಂ ತೂಕದ ಬಂಗಾರದ ಒಡವೆಗಳು, 450 ಗ್ರಾಂ ತೂಕದ ಬೆಳ್ಳಿಯ ವಸ್ತುಗಳು, ಹಾಗೂ 17,000/- ರೂ ನಗದು ಹಣ, 20 ರೇಷ್ಮೆ ಸೀರೆಗಳು ಎಲ್ಲ ಹಳೆಯ ಮತ್ತು ಹೊಸ ವಸ್ತುಗಳು ಹಾಗೂ ನಗದು ಹಣ ಸೇರಿ ಒಟ್ಟು 2,95,000/- ರೂ ನೇದ್ದವುಗಳನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆಂದು ಫಿರ್ಯಾದಿ ನೀಡಿದ ದೂರಿನ ಮೇರೆಗೆ ತಂಬ್ರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತದೆ.
2) ಹೊಸಹಳ್ಳಿ ಪೊಲೀಸ್ ಠಾಣೆ ಸರಹದ್ದಿನ ಜುಮ್ಮೋಬನಹಳ್ಳಿ ಗ್ರಾಮದಿಂದ 17 ವರ್ಷದ ಹುಡುಗಿ ಕಾಣೆಯಾದ ಬಗ್ಗೆ.
ದಿನಾಂಕ:13/12/2014 ರಂದು ಸಾಯಂಕಾಲ 5-00 ಗಂಟೆಗೆ ಫಿರ್ಯಾದಿದಾರರಾದ ಶ್ರೀ.ಹೊನ್ನೂರ್‍ಸಾಬ್ ತಂದೆ ಲೇಟ್ ಇಮಾಮ್‍ಸಾಬ್, ವ:60 ವರ್ಷ, ಮುಸ್ಲೀಂ ಜನಾಂಗ, ಕೂಲಿ ಕೆಲಸ, ವಾಸ: ಜುಮ್ಮೋಬನಹಳ್ಳಿ ಗ್ರಾಮ ಎಂಬುವರು ಠಾಣೆಯಲ್ಲಿ ಹಾಜರಾಗಿ ದೂರನ್ನು ಕೊಟ್ಟಿದ್ದೇನೆಂದರೆ, ನನ್ನ ಮಗಳಾದ ಕು:ಹೆಚ್.ಮೆಹರ್‍ತಾಜ್, ವ:17 ವರ್ಷ, ಇವಳು ಚಿತ್ರದುರ್ಗ ಜಿಲ್ಲಾ ಮೊಳಕಾಲ್ಮುರು ತಾಲೂಕು ಚಿಕ್ಕೋಬನಹಳ್ಳಿ ಗ್ರಾಮದಲ್ಲಿ ಎಸ್.ಎ.ಎಸ್. ಪದವಿ ಪೂರ್ವ ಕಾಲೇಜಿನಲ್ಲಿ ದ್ವಿತೀಯ ಪಿ.ಯು.ಸಿ.ವ್ಯಾಸಾಂಗ ಮಾಡುತ್ತಿದ್ದು, ಪ್ರತಿ ದಿನದಂತೆ ನನ್ನ ಮಗಳು ದಿನಾಂಕ:15/11/2014 ರಂದು ಬೆಳಿಗ್ಗೆ 8-30 ಗಂಟೆಗೆ ಮನೆಯಿಂದ ಕಾಲೇಜಿಗೆ ರೇವಣಸಿದ್ದೇಶ್ವರ ಬಸ್ಸಿನ ಮೂಲಕ ಕಾಲೇಜಿಗೆ ಹೋದವಳು ಮನೆಗೆ ಹಿಂದಿರುಗಲಿಲ್ಲ ನಾನು ಹಾಗು ನಮ್ಮ ಕುಟುಂಬದವರು ಹಾಗು ನಮ್ಮ ಸಂಬಂಧಿಕರು ಎಲ್ಲಾ ಕಡೆ ಹುಡುಕಾಡಿ ನೋಡಲಾಗಿ ಪತ್ತೆಯಾಗಿರುವುದಿಲ್ಲವೆಂದು, ಕಾಣೆಯಾದ ತನ್ನ ಮಗಳನ್ನು ಪತ್ತೆ ಮಾಡಿಕೊಡಬೇಕೆಂದು ಕೊಟ್ಟ ದೂರಿನ ಮೇರೆಗೆ ಹೊಸಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಯ ಕೈಗೊಂಡಿರುತ್ತದೆ.
ಪೊಲೀಸ್ ಸೂಪರಿಂಟೆಂಡೆಂಟ್,
ಬಳ್ಳಾರಿ.
ಇವರಿಗೆ, ಎಲ್ಲಾ ಪತ್ರಿಕಾ ವರದಿಗಾರರಿಗೆ
ಹೆಚ್ಚಿನ ಮಾಹಿತಿಗಾಗಿ ಶ್ರೀ. ಮಹಮ್ಮದ್ ಗಯಾಸ್, ಎ.ಎಸ್.ಐ ಮೊಬೈಲ್ ನಂ. 9845484100 ಹಾಗು
ಜಿ. ಸುಬ್ರಮಣ್ಯಂ, ಹೆಚ್.ಸಿ-175, ಮೋಬೈಲ್ ಸಂ: 9448202005 ರವರನ್ನು ಸಂಪರ್ಕಿಸಲು ವಿನಂತಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ