ಜಿಲ್ಲಾ ಪೊಲೀಸ್ ಕಾರ್ಯಲಯ
ಬಳ್ಳಾರಿ, ದಿನಾಂಕ: 12-12-2014
ಪತ್ರಿಕಾ ಪ್ರಕಟಣೆ
1) ಕುರುಗೋಡು ಪೊಲೀಸ್ ಠಾಣೆ ಸರಹದ್ದಿನ ವಿ.ಟಿ. ಕ್ಯಾಂಪ್‍ನ ದಮ್ಮೂರು ಗ್ರಾಮದ ಹತ್ತಿರ ಬುಲೇರೋ ವಾಹನ ಹಾಗು ಕಾರಿನ ನಡುವೆ ರಸ್ತೆ ಅಫಘಾತ ಬುಲೇರೋ ವಾಹನ ಚಾಲಕನ ಸಾವು.
ದಿ: 11/12/14 ರಂದು ಪಿರ್ಯಾದಿ ಮಗಳ ಸೀಮಂತ ಕಾರ್ಯಕ್ರಮಕ್ಕೆ ಹಳೆಕೋಟೆಗೆ ತನ್ನ ಅಣ್ಣನ ಮಗಳು ಲಕ್ಚಿ ಇತರೆ ಸಂಬಂದಿಕರೊಂದಿಗೆ ಬುಲೇರೋ ವಾಹನ ಸ: ಕೆಎ-34/ಎಂ:8213 ರಲ್ಲಿ ಹೋಗುತ್ತಿರುವಾಗ ಆರೋಪಿ ತನ್ನ ಕಾರ್‍ನ್ನು ಸಿರುಗುಪ್ಪ ಕಡೆಯಿಂದ ಅತಿವೇಗ ಮತ್ತು ನಿರ್ಲಕ್ಷತೆಯಿಂದ ನಡೆಸಿಕೊಂಡು ಬಂದು ಎಸ್.ಹೆಚ್-19 ರಸ್ತೆ, ವಿ.ಟಿ.ಕ್ಯಾಂಪ್ ದಮ್ಮೂರು ಗ್ರಾಮದ ಹತ್ತಿರ ರಸ್ತೆ ಬಲಬಾಗಕ್ಕೆ ತಿರುಗಿಸಿದ್ದರಿಂದ ರಸ್ತೆ ಎಡಬಾಗದಲ್ಲಿ ಹೊರಟಿದ್ದ ತನ್ನ ಕಾರ್‍ಗೆ ಡಿಕ್ಕಿ ಹೊಡೆಸಿದ್ದರಿಂದ ತಮ್ಮ ವಾಹನದಲ್ಲಿದ್ದ ಲಕ್ಷ್ಮಿ, ಗಂಗಮ್ಮ, ಸಾವಿತ್ರಿ ರವರಿಗೆ ಗಾಯಗಳಾಗಿ ವಾಹನ ಜಖಂಗೊಂಡಿದ್ದು, ಕಾರ್ ಚಾಲಕ ಸುರೇಶ್, 25 ವರ್ಷ, ವಾ: ಕುರುಗೋಡು ಈತನಿಗೆ ಎದೆಗೆ ಹಿಚುಕಿದಂತಾಗಿ ಕಾಲಿಗೆ ರಕ್ತಗಾಯವಾಗಿದ್ದು, ಕಾರ್‍ನಲ್ಲಿದ್ದ ಏಜಾಜ್‍ಹುಸೇನ್ ರವರಿಗೆ ಸಹ ಗಾಯಗಳಾಗಿದ್ದು, ಎಲ್ಲರು ವಿಮ್ಸ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಾಗಿದ್ದು ಚಿಕಿತ್ಸೆಯಲ್ಲಿ ಗುಣವಾಗದೆ ಕಾರ್ ಚಾಲಕ ಸುರೇಶ್ ಈತನು ಚಿಕಿತ್ಸೆ ಪಡೆಯುತ್ತಾ ಮೃತಪಟ್ಟಿರುತ್ತಾನೆಂದು ಇದ್ದ ದೂರಿನ ಮೇರೆಗೆ ಕುರುಗೋಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ತನಿಖೆ ಕೈಗೊಂಡಿರುತ್ತದೆ.
2) ಕೌಲ್‍ಬಜಾರ್ ಪೊಲೀಸ್ ಠಾಣೆ ಸರಹದ್ದಿನ ಕೇಂದ್ರಿಯ ವಿದ್ಯಾಲಯದ ಮುಂದೆ ಇರುವ ಹೊಸದಾಗಿ ನಿರ್ಮಾಣ ಮಾಡುತ್ತಿರುವ ಕಟ್ಟಡದಲ್ಲಿ ರಾಡ್ ಬೆಂಡಿಂಗ್ ಕೆಲಸ ಮಾಡುವವನಿಂದ ಅಪ್ರಾಪ್ತ 2 ವರ್ಷದ ಬಾಲಕಿ ಮೇಲೆ ಲೈಂಗಿಕ ಅತ್ಯಾಚಾರ
ಫಿರ್ಯಾಧಿದಾರರು ತನ್ನ ಗಂಡ ಮತ್ತು ಮೂರು ಜನ ಮಕ್ಕಳೊಂದಿಗೆ ಈಗ್ಗೆ 3 ತಿಂಗಳಿನಿಂದ ಡಾಲರ್ಸ್ ಕಾಲೋನಿ ಷರೀಫ್ ರವರು ಹೊಸದಾಗಿ ನಿರ್ಮಾಣ ಮಾಡುತ್ತಿರುವ ಕಟ್ಟದ ಮುಂದೆ ಒಂದು ಶೆಡ್‍ನಲ್ಲಿ ವಾಸವಾಗಿದ್ದು, ಫಿರ್ಯಾಧಿದಾರರ ಗಂಡನು ಷರೀಫ್ ರವರ ಹೊಸದಾಗಿ ಕಟ್ಟುತ್ತಿರುವ ಕಟ್ಟಡಕ್ಕೆ ವಾಚ್‍ಮನ್ ಆಗಿ ಕೆಲಸ ಮಾಡುತ್ತಿದ್ದು, ದಿನಾಂಕ: 10/12/2014 ರಂದು ಆರೋಪಿ-ರಿಜ್ಞಾನ್ @ ರಿಜ್ಜುನು ಷರೀಪ್ ರವರ ಬೀಲ್ಡಂಗ್‍ನಲ್ಲಿ ಕೆಲಸ ಮಾಡಲು ಬಂದಿದ್ದು, ನಂತರ ಮದ್ಯಾಹ್ನ 12-15 ಗಂಟೆಗೆ ತನ್ನ ಮಗಳನ್ನು ತಮ್ಮ ಶೆಡ್ ಹತ್ತಿರ ಬಿಟ್ಟು, ಪಕ್ಕದ ಮನೆ ಹೆಂಗಸಿನೊಂದಿಗೆ ಮಾತನಾಡಲು ಹೋದ ಸಮಯದಲ್ಲಿ ಮದ್ಯಾಹ್ನ 12-15 ಗಂಟೆಯಿಂದ ಮದ್ಯಾಹ್ನ 12-30 ಗಂಟೆಯ ಮದ್ಯದ ಅವಧಿಯಲ್ಲಿ ಬಂಡಿಹಟ್ಟಿಯ ಕೇಂದ್ರಿಯ ವಿದ್ಯಾಲಯದ ಮುಂದೆ ಇರುವ ಷರೀಫ್ ರವರು ಹೊಸದಾಗಿ ನಿರ್ಮಾಣ ಮಾಡುತ್ತಿರುವ ಕಟ್ಟಡದ ಒಂದು ರೂಂನಲ್ಲಿ ಫಿರ್ಯಾಧಿದಾರರ ಅಪ್ರಾಪ್ತ 2 ವರ್ಷದ ಮಗಳ ಮೇಲೆ ರಾಡ್‍ಬೆಂಡಿಂಗ್ ಕೆಲಸ ಮಾಡುವ ರಿಜ್ವಾನ್ @ ರಿಜ್ಜು ಲೈಂಗಿಕ ಅತ್ಯಾಚಾರ ಮಾಡಿದ್ದಾಗಿ ಫೀರ್ಯಾಧಿದಾರರು ಕೊಟ್ಟ ಹೇಳಿಕೆ ದೂರಿನ ಮೇರೆಗೆ ಕೌಲ್‍ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತದೆ.
3) ಬ್ರೂಸ್‍ಪೇಟೆ ಪೊಲೀಸ್ ಠಾಣೆ ಸರಹದ್ದಿನ ಹೊಸ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದಲ್ಲಿ ಬಸ್ಸು ಹತ್ತುತ್ತಿರುವಾಗ್ಗೆ ಮಹಿಳೆಯ ಕೊರಳ ಬಂಗಾರದ ಚೈನ್ ಕಿತ್ತುಕೊಂಡು ಪರಾರಿ.
ದಿನಾಂಕ: 11-12-2014 ರಂದು ಬೆಳಿಗ್ಗೆ 06-45 ಗಂಟೆ ಸುಮಾರಿಗೆ ಫಿರ್ಯಾದಿದಾರರಾದ ಶ್ರೀಮತಿ. ಲಲಿತ ಗಂಡ ನಾಗೇಶ್ವರರಾವ್, 52 ವರ್ಷ, ವಾ: ಹೈದರಾಬಾದ್ ಇವರು ಬಳ್ಳಾರಿ ನಗರದ ಹೊಸ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದಲ್ಲಿ ಕೊಪ್ಪಳಕ್ಕೆ ಹೋಗುವ ಬಸ್ಸನ್ನು ಹತ್ತುತ್ತಿರುವಾಗ ಅವರ ಹಿಂದಿನಿಂದ ಯಾರೋ ಒಬ್ಬ ವ್ಯಕ್ತಿ ಫಿರ್ಯಾದಿದಾರರಳ ಕೊರಳಿಗೆ ಕೈ ಹಾಕಿ ಅವರ ಕೊರಳಲ್ಲಿದ್ದ 30 ಗ್ರಾಂ ತೂಕದ ಬಂಗಾರದ ಕೊರಳಿನ ಚೈನ್ ಸರ ಅಂದಾಜು ಬೆಲೆ ರೂ. 75,000/- ಬೆಲೆ ಬಾಳುವುದನ್ನು ಕಿತ್ತುಕೊಂಡು ಹೋಗಿರುತ್ತಾನೆಂದು ಸದರಿ ವ್ಯಕ್ತಿಯನ್ನು ಪತ್ತೆ ಹಚ್ಚಿ ಬಂಗಾರದ ಚೈನ್ ಸರವನ್ನು ಪತ್ತೆ ಮಾಡಿಕೊಡಬೇಕೆಂದು ಕೊಟ್ಟ ದುರಿನ ಮೇರೆಗೆ ಬ್ರೂಸ್‍ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಕೈಗೊಂಡಿರುತ್ತದೆ.
ಪೊಲೀಸ್ ಸೂಪರಿಂಟೆಂಡೆಂಟ್,
ಬಳ್ಳಾರಿ.
ಇವರಿಗೆ,
ಎಲ್ಲಾ ಪತ್ರಿಕಾ ವರದಿಗಾರರಿಗೆ
ಹೆಚ್ಚಿನ ಮಾಹಿತಿಗಾಗಿ ಶ್ರೀ. ಮಹಮ್ಮದ್ ಗಯಾಸ್, ಎ.ಎಸ್.ಐ ಮೊಬೈಲ್ ನಂ. 9845484100 ಹಾಗು ಜಿ. ಸುಬ್ರಮಣ್ಯಂ, ಹೆಚ್.ಸಿ-175, ಮೋಬೈಲ್ ಸಂ: 9448202005 ರವರನ್ನು ಸಂಪರ್ಕಿಸಲು ವಿನಂತಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ