ಜಿಲ್ಲಾ ಪೊಲೀಸ್ ಕಾರ್ಯಲಯ
ಬಳ್ಳಾರಿ, ದಿನಾಂಕ: 28-12-2014
ಪತ್ರಿಕಾ ಪ್ರಕಟಣೆ
ದಿನಾಂಕ: 27-12-2014 ರಂದು ಬೆಳಿಗ್ಗೆ 9-30 ಗಂಟೆಗೆ ಫಿರ್ಯಾದಿದರರಾದ ತಾರಮ್ಮ ಮತ್ತು ಆಕೆಯ ಸ್ನೇಹಿತ ಮಧುಕುಮಾರ್ ಇಬ್ಬರು ಕೂಡಿ ಮಧುಕುಮಾರ್‍ನ ಬೈಕ್ ನಂಬರ್ ಕೆಎ-35 ಡಬ್ಲೂ.9038 ನೇದ್ದರಕ್ಕು ಮೆಟ್ರಿ ದೇವಲಾಪುರ ಗ್ರಾಮದಿಂದ ಹಗರಿಬೊಮ್ಮನಹಳ್ಳಿಯಲ್ಲಿರುವ ದೇವಸ್ಥಾನಕ್ಕೆ ಹೋಗಲು ಹೊಸಪೇಟೆಯ ಮೂಲಕ ಹೊರಟಿದ್ದು, ಬೆಳಿಗ್ಗೆ 11-30 ಗಂಟೆ ಸುಮಾರಿಗೆ ಹೊಸಪೇಟೆಯ ಎಸ್.ಹೆಚ್.-25 ಹರಿಹರ ರಸ್ತೆಯಲ್ಲಿನ ನ್ಯಾಷನಲ್ ಕಾಲೇಜ್ ಎದುರಿಗೆ ಇರುವ ತಾರ್ ರಸ್ತೆಯ ಎಡಭಾಗಕ್ಕೆ ಹೋಗುತ್ತಿದ್ದಾಗ ಅದೇ ವೇಳೆಗೆ ಹರಿಹರ ಕಡೆಯಿಂದ ಹೊಸಪೇಟೆ ಸಿಟಿ ಕಡೆಗೆ ಹೋಗಲು ಕೆ.ಎಸ್.ಆರ್.ಟಿ.ಸಿ. ಬಸ್ ನಂ. ಕೆಎ-42 ಎಫ್ 552 ನೇದ್ದನ್ನು ಅದರ ಡ್ರೈವರ್ ಪ್ರಸನ್ನಕುಮಾರ್ ಎಂಬಾತನು ಅತಿವೇಗ ಹಾಗು ಅಜಾಗರೂಕತೆಯಿಂದ ಚಾಲನೆ ಮಾಡುತ್ತಾ ತನ್ನ ಮುಂದಿನ ಲಾರಿಯನ್ನು ಸೈಡ್ ಹೊಡೆಯುತ್ತಾ ಏಕಾಏಕಿ ಫಿರ್ಯಾದಿ ಹಾಗು ಆತನ ಸ್ನೇಹಿತ ಮಧುಕುಮಾರನು ಸೇರಿ ಬರುತ್ತಿದ್ದ ಬೈಕ್ ಗೆ ಡಿಕ್ಕಿ ಹೊಡೆಸಿ ಅಪಘಾತ ಮಾಡಿದ್ದರಿಂದ, ಬೈಕ್ ಓಡಿಸುತ್ತಿದ್ದ ಮಧುಕುಮಾರ್ ಹಾಗು ಫಿರ್ಯಾದಿ ತಾರಮ್ಮ ಇಬ್ಬರೂ ಬೈಕ್ ಸಮೇತ ಕೆಳಗೆ ಬಿದ್ದಿದ್ದು, ಫಿರ್ಯಾದಿಗೆ ಗಾಯಗಳು ಆಗಿದ್ದು, ಬೈಕ್ ಸವಾರ ಮಧುಕುಮಾರ್, 28 ವರ್ಷ, ವಾ; ದೇವಲಾಪುರ ಗ್ರಾಮ ಬಲಗಾಲಿನ ಕೆಳಗೆ ಮುರಿದು, ಬಲಭುಜಕ್ಕೆ ಭಾರೀ ರಕ್ತಗಾಯಗಾವಿ ಸ್ಥಳದಲ್ಲಿಯೇ ಮೃತಟ್ಟಿದ್ದು, ಗಾಯಗೊಂಡ ಫಿರ್ಯಾದಿದಾರರನ್ನು ಆಸ್ಪತ್ರೆದಾಖಲಿಸಲಾಗಿರುತ್ತದೆಂದು ಕೊಟ್ಟ ದೂರಿನ ಮೇರೆಗೆ ಹೊಸಪೇಟೆ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತದೆ.
ಪೊಲೀಸ್ ಸೂಪರಿಂಟೆಂಡೆಂಟ್,
ಬಳ್ಳಾರಿ.
ಇವರಿಗೆ,
ಎಲ್ಲಾ ಪತ್ರಿಕಾ ವರದಿಗಾರರಿಗೆ
ಹೆಚ್ಚಿನ ಮಾಹಿತಿಗಾಗಿ ಶ್ರೀ. ಮಹಮ್ಮದ್ ಗಯಾಸ್, ಎ.ಎಸ್.ಐ ಮೊಬೈಲ್ ನಂ. 9845484100 ಹಾಗು ಜಿ. ಸುಬ್ರಮಣ್ಯಂ, ಹೆಚ್.ಸಿ-175, ಮೋಬೈಲ್ ಸಂ: 9448202005 ರವರನ್ನು ಸಂಪರ್ಕಿಸಲು ವಿನಂತಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ