ಜಿಲ್ಲಾ ಪೊಲೀಸ್ ಕಾರ್ಯಲಯ
ಬಳ್ಳಾರಿ, ದಿನಾಂಕ: 07-12-2014
ಪತ್ರಿಕಾ ಪ್ರಕಟಣೆ
ದಿನಾಂಕ: 06-12-2014 ರಂದು ಸಂಜೆ 6-00 ಗಂಟೆ ಸಮಯದಲ್ಲಿ ಹೊಸಪೇಟೆಯ ಎನ್.ಸಿ. ಕಾಲೋನಿ ಏರಿಯಾದಲ್ಲಿ 9 ವರ್ಷದ ಬಾಲಕಿಯನ್ನು ಹೊಸಪೇಟೆ ಪಟ್ಟಣದ ತಳವಾರ ಕೇರಿಯ ವಾಸಿಗಳಾದ 4 ಜನ ಅಪ್ರಾಪ್ತ ವಯಸ್ಸಿನ ಹುಡುಗರು ( ವಯಸ್ಸು 10 ರಿಂದ 13 ವರ್ಷ ) ಅತ್ಯಾಚಾರ ಮಾಡಿರುತ್ತಾರೆಂದು ಹೊಸಪೇಟೆ ಪಟ್ಟಣ ಠಾಣೆಯಲ್ಲಿ ನೊಂದ ಬಾಲಕಿಯ ತಾಯಿ ಕೊಟ್ಟ ದೂರಿನ ಮೇರೆಗೆ ಕಲಂ 376(ಬಿ) ಐಪಿಸಿ ಮತ್ತು ಕಲಂ 3, 6 ಪೋಕ್ಸೋ ಆಕ್ಟ್-2012 ರ ಅಡಿಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಅತ್ಯಾಚಾರಕ್ಕೆ ಒಳಪಟ್ಟ ಬಾಲಕಿಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ. ಅತ್ಯಾಚಾರವೆಸಗಿದ ಹುಡುಗರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು ಅವರು ಅಪ್ರಾಪ್ತ ವಯಸ್ಸಿನವರಾಗಿದ್ದರಿಂದ ಜ್ಯುವೆನಲ್ ಬೋರ್ಡ ಮುಂದೆ ಹಾಜರುಪಡಿಸಿದ್ದು, ಅವರ ಆದೇಶದ ಮೇರೆಗೆ ಅಬ್ಸ್‍ರ್‍ವೇಶನ್ ಸೆಂಟರ್ ಬಳ್ಳಾರಿಯಲ್ಲಿ ದಿನಾಂಕ: 19-12-2014 ರ ವರೆಗೆ ಇಡಲು ಒಪ್ಪಿಸಿರುತ್ತಾರೆ. ಪ್ರಕರಣದ ತನಿಖೆಯನ್ನು ಪಿ.ಐ. ಹೊಸಪೇಟೆ ಪಟ್ಟಣ ಠಾಣೆ ರವರು ದಾಖಲಿಸಿಕೊಂಡು ತನಿಖೆ ಮುಂದುವರಿಸಿರುತ್ತಾರೆ.
ಪೊಲೀಸ್ ಸೂಪರಿಂಟೆಂಡೆಂಟ್,
ಬಳ್ಳಾರಿ.
ಇವರಿಗೆ,
ಎಲ್ಲಾ ಪತ್ರಿಕಾ ವರದಿಗಾರರಿಗೆ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ