ಜಿಲ್ಲಾ ಪೊಲೀಸ್ ಕಾರ್ಯಲಯ
ಬಳ್ಳಾರಿ, ದಿನಾಂಕ: 12-12-2014
ಪತ್ರಿಕಾ ಪ್ರಕಟಣೆ
ದಿನಾಂಕ: 01-12-2014 ರಿಂದ 31-12-2014 ರವರೆಗೆ ಪ್ರತಿ ವರ್ಷದಂತೆ ಈ ವರ್ಷವೂ ಬಳ್ಳಾರಿ ಜಿಲ್ಲೆಯಾದ್ಯಂತ ಅಪರಾಧ ತಡೆ ಮಾಸಾಚರಣೆಯನ್ನು ಬಳ್ಳಾರಿ ಜಿಲ್ಲಾ ಪೊಲೀಸರಿಂದ ಆಚರಿಸಲಾಗುತ್ತದೆ.
ರಾಷ್ಟ್ರಾದ್ಯಂತ ಇತ್ತೀಚೆಗೆ ಮಹಿಳೆಯರಿಗೆ ಅನೇಕ ತೊಂದರೆಗಳುಂಟಾಗುತ್ತಿದ್ದು, ಅವರ ರಕ್ಷಣೆಗೆಂದೇ ಹಲವಾರು ಕಾನೂನುಗಳನ್ನು ಮಾರ್ಪಾಡು ಮಾಡಲಾಗಿದೆ ಹಾಗೂ ಈ ನಿಟ್ಟಿನಲ್ಲಿ ಮಹಿಳೆಯರಿಗೆ ರಕ್ಷಣೆ ಒದಗಿಸಲು ಬಳ್ಳಾರಿ ಜಿಲ್ಲಾ ಪೊಲೀಸ್ ಕಛೇರಿಯಲ್ಲಿ “ಮಹಿಳಾ ಸಹಯವಾಣಿ ಘಟಕ” ತೆರೆಯಲಾಗಿದ್ದು, ಈ ದಿನದಿಂದ ಬಳ್ಳಾರಿ ನಗರದ ಆದಿ ದೇವತೆ ದುರ್ಗಮ್ಮ ದೇವಿಯ ಹೆಸರಿನಲ್ಲಿ “ದುರ್ಗಾವಾಹಿನಿ” ಪ್ರಾರಂಭ ಮಾಡಲಾಗಿರುತ್ತದೆ. ಈ ವರ್ಷದ ಅಪರಾಧ ತಡೆ ಮಾಸಾಚಾರಣೆಯನ್ನು ಮಹಿಳೆಯರ ಮತ್ತು ಮಕ್ಕಳ ರಕ್ಷಣೆಗೆ ಒತ್ತು ನೀಡುವ ನಿಟ್ಟಿನಲ್ಲಿ ಹೆಚ್ಚಿನ ಮಹತ್ವವನ್ನು ಕೊಡಲಾಗುತ್ತಿದೆ.
ಅಪರಾಧ ತಡೆ ಮಾಸಾಚರಣೆ ಅಂಗವಾಗಿ ಎನ್.ಎಂ.ಡಿ..ಸಿ. ಸಂಡೂರು ಸಂಸ್ಥೆಯ ಸಹಾಯದಿಂದ 03 ವಾಹನಗಳನ್ನು ಪಡೆಯಲಾಗಿದ್ದು, ಒಂದು ವಾಹನವು ಬಳ್ಳಾರಿ ನಗರ ಮತ್ತು ಗ್ರಾಮೀಣ ಉಪವಿಭಾಗಳ ವ್ಯಾಪ್ತಿಯಲ್ಲಿ, ಎರಡನೇ ವಾಹನವು ಹೊಸಪೇಟೆ, ಹಂಪಿ ಮತ್ತು ಹಡಗಲಿ ಉಪವಿಭಾಗಗಳ ವ್ಯಾಪ್ತಿಯಲ್ಲಿ ಹಾಗು ಮೂರನೇ ವಾಹನವು ಕೂಡ್ಲಿಗಿ ಉಪವಿಭಾಗದ ವ್ಯಾಪ್ತಿಯಲ್ಲಿ ಮಹಿಳೆಯರ ಮತ್ತು ಮಕ್ಕಳ ರಕ್ಷಣೆ ಹಾಗು ಮಹಿಳೆಯರ ವಿರುದ್ಧ ಸಂಭವಿಸುವ ಅಪರಾಧಗಳ ಕಾನೂನುಗಳ ಬಗ್ಗೆ ಮಾಹಿತಿ ನೀಡಲು ಈ ದಿನ ದಿನಾಂಕ: 12-12-2014 ರಂದು ಉದ್ಘಾಟನೆ ಮಾಡಲಾಗಿದೆ. ಉದ್ಘಾಟನಾ ಕಾರ್ಯಕ್ರಮವು ಹೊಸಪೇಟೆ ಪಟ್ಟಣದಲ್ಲಿ ನಡೆದಿರುತ್ತದೆ. ವಾಹನಗಳ ಉದ್ಘಾಟನೆಯನ್ನು ಕರ್ನಾಟಕ ಸರ್ಕಾರದ ಘನತೆವೆತ್ತ ರಾಜ್ಯಪಾಲರಾದ ಸನ್ಮಾನ್ಯ ಶ್ರೀ. ವಜುಭಾಯಿವಾಲಾ ಹಾಗು ಸನ್ಮಾನ್ಯ ಶ್ರೀ. ಪಿ.ಟಿ. ಪರಮೇಶ್ವರ ನಾಯ್ಕ, ಕಾರ್ಮಿಕ ಸಚಿವರು ಹಾಗು ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವರು, ಕರ್ನಾಟಕ ರಾಜ್ಯ, ಬೆಂಗಳೂರು ರವರು ಮಾಡಿರುತ್ತಾರೆ.
ಬಳ್ಳಾರಿ ಜಿಲ್ಲೆಯಾದ್ಯಂತ ಮಹಿಳಾ ಸಹಾಯವಾಣಿ ಘಟಕ ಹಾಗು ದುರ್ಗಾವಾಹಿನಿ ವಾಹನಗಳು ನಿರಂತರವಾಗಿ ಮಹಿಳೆಯ ರಕ್ಷಣೆಗಾಗಿ ಕಾರ್ಯ ನಿರ್ವಹಿಸುತ್ತವೆ. ಜಿಲ್ಲೆಯ ಸಾರ್ವಜನಿಕರು ಮೇಲ್ಕಂಡ ಸಹಾಯವಾನಿ ಹಾಗು ದುರ್ಗಾವಾಹಿನಿಯ ಸದುಪಯೋಗ ಪಡೆದುಕೊಳ್ಳಲು ಮತ್ತು ಮಹಿಳೆಯರು, ಶಾಲಾ ಕಾಲೇಜುಗಳ ವಿಧ್ಯಾರ್ಥಿನಿಯರು ಹಾಗು ಮಕ್ಕಳು ತಮ್ಮ ಯಾವುದೇ ದೂರುಗಳು ಇದ್ದಲ್ಲಿ ದುರ್ಗಾವಾಹಿನಿ ಸಂಖ್ಯೆ: 7829181181 ಗೆ ಸಂಪರ್ಕಿಸಲು ವಿನಂತಿಸಿಕೊಳ್ಳಲಾಗಿದೆ.
¥ÉÆ°Ã¸ï ¸ÀÆ¥ÀjAmÉAqÉAmï, §¼Áîj.
EªÀjUÉ,
J¯Áè
¥ÀwæPÁ ªÀgÀ¢UÁgÀjUÉ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ