ಜಿಲ್ಲಾ ಪೊಲೀಸ್ ಕಾರ್ಯಲಯ
ಬಳ್ಳಾರಿ, ದಿನಾಂಕ: 11-12-2014
ಪತ್ರಿಕಾ ಪ್ರಕಟಣೆ
ಫಿರ್ಯಾಧಿದಾರರಾದ ಶ್ರೀಮತಿ. ಜಿ. ವೇಣಿ ಗಂಡ ಗುರುಪ್ರಸಾದ್, 47 ವರ್ಷ, ಸಾ: ಹೌ ನಂ. 305, ಉಮಾಮಹೇಶ್ವರಿ ಕಲ್ಯಾಣ ಮಂಟಪದ ಹತ್ತಿರ, 2ನೇ ಕ್ರಾಸ್, ರಾಘವೇಂದ್ರ ಕಾಲೋನಿ ಹತ್ತಿರ, ಬಳ್ಳಾರಿ ರವರು ಠಾಣೆಗೆ ಹಾಜರಾಗಿ ದಿ: 10-11-14 ರಂದು ಬೆಳಿಗ್ಗೆ 10-30 ಗಂಟೆಗೆ ಗುರುಪ್ರಸಾದ್, 57 ವರ್ಷ, ಈತನು ಬಳ್ಳಾರಿಯ 2ನೇ ಹಂತ ರಾಘವೇಂದ್ರ ಕಾಲೋನಿಯ ತನ್ನ ಮನೆಯಿಂದ ಮಂಜುನಾಥ ರವರ ಮೋಟರ್ ಸೈಕಲ್‍ನಲ್ಲಿ ಬಳ್ಳಾರಿ ನಗರದ ಎಸ್.ಎನ್.ಪೇಟೆ, 1ನೇ ಕ್ರಾಸ್‍ನಲ್ಲಿರುವ ಗಜರಾಜ ಅಂಡ್ ಕೋ ಅಡಿಟರ್ ಆಫೀಸ್ ಮುಂದುಗಡೆ ಮೋಟರ್ ಸೈಕಲ್‍ನಿಂದ ಇಳಿದು ಹೋದವನು ಇಲ್ಲಿಯವರೆಗೆ ವಾಪಾಸ್ಸು ಬಾರದೇ ಕಾಣೆಯಾಗಿರುತ್ತಾನೆಂದು ನೀಡಿದ ದೂರಿನ ಮೇರಗೆ ಗಾಂಧಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತದೆ.
ಪೊಲೀಸ್ ಸೂಪರಿಂಟೆಂಡೆಂಟ್,
ಬಳ್ಳಾರಿ.
ಇವರಿಗೆ, ಎಲ್ಲಾ ಪತ್ರಿಕಾ ವರದಿಗಾರರಿಗೆ
ಹೆಚ್ಚಿನ ಮಾಹಿತಿಗಾಗಿ ಶ್ರೀ. ಮಹಮ್ಮದ್ ಗಯಾಸ್, ಎ.ಎಸ್.ಐ ಮೊಬೈಲ್ ನಂ. 9845484100 ಹಾಗು ಜಿ. ಸುಬ್ರಮಣ್ಯಂ, ಹೆಚ್.ಸಿ-175, ಮೋಬೈಲ್ ಸಂ: 9448202005 ರವರನ್ನು ಸಂಪರ್ಕಿಸಲು ವಿನಂತಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ