ಜಿಲ್ಲಾ ಪೊಲೀಸ್ ಕಾರ್ಯಲಯ
ಬಳ್ಳಾರಿ, ದಿನಾಂಕ: 13-12-2014
ಪತ್ರಿಕಾ ಪ್ರಕಟಣೆ
1) ಬಳ್ಳಾರಿ ನಗರದ ಗಾಂಧಿನಗರ ಪೊಲೀಸ್ ಠಾಣೆ ಸರಹದ್ದಿನ ಶ್ರೀ. ಕನಕದುರ್ಗಮ್ಮ ದೇವಸ್ಥಾನದಿಂದ 38 ವರ್ಷದ ಯುವಕ ಹಣದೊಂದಿಗೆ ಕಾಣೆಯಾಗಿರುವ ಬಗ್ಗೆ.
ದಿನಾಂಕ 11-11-2014 ರಂದು ಬೆಳಿಗ್ಗೆ 6-30 ಗಂಟೆಗೆ ಫಿರ್ಯಾದಿ ಶ್ರೀ ಮಲ್ಲಿಕಾರ್ಜುನ ತಂದೆ ಮಲ್ಲಯ್ಯ ಸಾ: ಮೋಕ ಗ್ರಾಮ, ಬಳ್ಳಾರಿ ರವರು ಠಾಣೆಗೆ ಹಾಜರಾಗಿ ತನ್ನ ಅಣ್ಣನಾದ ತಿಪ್ಪೇಸ್ವಾಮಿ, ವ: 38 ವರ್ಷ, ಈತನು ಆಟೋ ನಂ.ಕೆ.ಎ.34-ಎ-3192 ನೇದ್ದರಲ್ಲಿ ಹತ್ತಿ ಲೋಡ್ ಮಾಡಿಕೊಂಡು ಚಾಲಕನಾದ ಮಹೇಶ್‍ನೊಂದಿಗೆ ಬಳ್ಳಾರಿಗೆ ಹತ್ತಿ ಮಾರಾಟ ಮಾಡಲು ಬಂದು, ಹತ್ತಿ ಮಾರಾಟದಿಂದ ಬಣ ರೂ. 54,600/- ಗಳನ್ನು ಪಡೆದುಕೊಂಡು ಸದರಿ ಆಟೋದಲ್ಲಿ ಬಳ್ಳಾರಿ ನಗರದ ಶ್ರೀ ಕನಕ ದುರ್ಗಮ್ಮ ಗುಡಿ ಹತ್ತಿರಕ್ಕೆ ಬಂದು ಆಟೋದಿಂದ ಕೆಳಗಿಳಿದು ಆಟೋ ಚಾಲಕನಿಗೆ ಊರಿಗೆ ಹೋಗಿರುತ್ತೇನೆಂದು ಹೇಳಿ ಹೋದವನು ಮರಳಿ ಮನೆಗೆ ಮರಳಿ ಬಂದಿರುವುದಿಲ್ಲವೆಂದು ಕೊಟ್ಟ ದೂರಿನ ಮೇರೆಗೆ ಗಾಂಧಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತದೆ.
2) ಹೆಚ್.ಬಿ.ಹಳ್ಳಿ ಪೊಲೀಸ್ ಠಾಣೆ ಸರಹದ್ದಿನ ವರಲಹಳ್ಳಿ ಗ್ರಾಮದ ಹತ್ತಿರ ಹೆಚ್.ಬಿ.ಹಳ್ಳಿ- ಕೊಟ್ಟೂರು ರಸ್ತೆಯಲ್ಲಿ ಮೋಟಾರ್ ಸೈಕಲ್ ಮತ್ತು ಕಾರು ನಡುವೆ ಮುಖಾಮುಖಿ ಡಿಕ್ಕಿ ಮೋಟಾರ್ ಸೈಕಲ್ ಸವಾರನ ಸಾವು.
ದಿನಾಂಕ 12-12-14 ರಂದು ಬೆಳಿಗ್ಗೆ 6-00 ಗಂಟೆಗೆ ಪಿರ್ಯಾದಿ ಶ್ರೀ ಎನ್.ಮಾಬುಸಾಬ್ ಇವರು ಠಾಣೆಯಲ್ಲಿ ಹಾಜರಾಗಿ ಹೇಳಿಕೆ ದೂರು ನೀಡಿದ್ದು ಅದರಲ್ಲಿ ತನ್ನ 3 ನೇ ಮಗನಾದ ಮಹಮ್ಮದ್ ಶಫಿ ಈತನು ರಾಂಪುರದಲ್ಲಿ ಮದುವೆಯಾಗಿ ಅಲ್ಲೆ ತನ್ನ ಹೆಂಡತಿ ಮಕ್ಕಳೊಂದಿಗೆ ವಾಸವಾಗಿದ್ದು, ಪಿರ್ಯಾದಿದಾರರನ್ನು ನೋಡಿಕೊಂಡು ಹೋಗಲು ದಿನಾಂಕ 11-12-14 ರಂದು ರಾತ್ರಿ 8-30 ಗಂಟೆಗೆ ಬಜಾಜ್ ಡಿಸ್ಕವರಿ ಮೋಟರ್ ಸೈಕಲ್ ನಂ ಕೆ.ಎ.17/ಇಇ-0211 ನೇದ್ದರಲ್ಲಿ ಪಿರ್ಯಾದಿದಾರರ ಮನೆಗೆ ಬಂದು ಎಲ್ಲರನ್ನು ನೋಡಿಕೊಂಡು ನಿನ್ನೆ ರಾತ್ರಿ 10-30 ಗಂಟೆ ಸುಮಾರಿಗೆ ಪುನಹ ರಾಂಪುರಕ್ಕೆ ಹೋಗಲು ಹ.ಬೊ.ಹಳ್ಳಿ-ಕೊಟ್ಟೂರುನ ತಾರ್ ರಸ್ತೆಯ ಮೇಲೆ ವರಲಹಳ್ಳಿ ಗ್ರಾಮದ ಹತ್ತಿರ ಬಜಾಜ್ ಡಿಸ್ಕವರಿ ಮೋಟರ್ ಸೈಕಲ್ ನಂ ಕೆ.ಎ.17/ಇಇ-0211 ಹೋಗುತ್ತಿದ್ದಾಗ ಕೊಟ್ಟೂರು ಕಡೆಯಿಂದ ಆರೋಪಿ ಆರ್..ಶಿವಕುಮಾರ ಈತನು ತನ್ನ ಇಂಡಿಕಾ ಕಾರ್ ನಂ ಕೆ.ಎ.35/ಎನ್-0415 ನೇದ್ದನ್ನು ಅತೀವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಮಹಮ್ಮದ ಶಫಿಯ ಮೋಟರ್ ಸೈಕಲ್‍ಗೆ ಡಿಕ್ಕಿಹೊಡೆಸಿದ ಪರಿಣಾಮ ಮಹಮ್ಮದ್ ಶಫಿ, 30 ವರ್ಷ ವಾ: ಹೆಚ್.ಬಿ.ಹಳ್ಳಿ ಈತನ ಮೋಟರ್ ಸೈಕಲ್ ಸಮೇತ ರಸ್ತೆಯ ಮೇಲೆ ಬಿದ್ದಿದ್ದರಿಂದ ಆತನ ಬಲಗೈ ಭುಜಕ್ಕ, ಬಲ ಎದಗೆ, ಮತ್ತು ಬಲಾಗಾಲಿನ ತೊಡೆಗೆ ರಕ್ತಗಾಯ ಮತ್ತು ಒಳಪೆಟ್ಟುಗಳಾಗಿದ್ದು, ಚಿಕಿತ್ಸೆಗೆ 108 ಆಂಬೂಲೆನ್ಸ್‍ನಲ್ಲಿ ಹ.ಬೊ.ಹಳ್ಳಿ ಸರ್ಕಾರಿ ಆಸ್ಪತ್ರೆಗೆ ತಂದು ದಾಖಲಿಸಿದ್ದು ವೈದ್ಯರು ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ದಾವಣಗೇರೆ ಸಿ.ಜಿ ಆಸ್ಪತ್ರಗೆ ಕಳಿಸಿಕೊಟ್ಟಿದ್ದು, ಸಿ.ಜಿ.ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಿದಾಗ ವೈದ್ಯರು ಪರೀಕ್ಷೀಸಿ ಮೃತಪಟ್ಟಿದ್ದಾಗಿ ತಿಳಿಸಿದ್ದಾಗಿ, ಇದ್ದ ದೂರಿನ ಮೇರೆಗೆ ಹೆಚ್.ಬಿ.ಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಪೊಲೀಸ್ ಸೂಪರಿಂಟೆಂಡೆಂಟ್,
ಬಳ್ಳಾರಿ.
ಇವರಿಗೆ, ಎಲ್ಲಾ ಪತ್ರಿಕಾ ವರದಿಗಾರರಿಗೆ
ಹೆಚ್ಚಿನ ಮಾಹಿತಿಗಾಗಿ ಶ್ರೀ. ಮಹಮ್ಮದ್ ಗಯಾಸ್, ಎ.ಎಸ್.ಐ ಮೊಬೈಲ್ ನಂ. 9845484100 ಹಾಗು ಜಿ. ಸುಬ್ರಮಣ್ಯಂ, ಹೆಚ್.ಸಿ-175, ಮೋಬೈಲ್ ಸಂ: 9448202005 ರವರನ್ನು ಸಂಪರ್ಕಿಸಲು ವಿನಂತಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ