ಜಿಲ್ಲಾ ಪೊಲೀಸ್ ಕಾರ್ಯಲಯ
ಬಳ್ಳಾರಿ, ದಿನಾಂಕ: 25-12-2014
ಪತ್ರಿಕಾ ಪ್ರಕಟಣೆ
ದಿನಾಂಕ:24/12/2014 ರಂದು ಮದ್ಯಾಹ್ನ 2-00 ಗಂಟೆಗೆ ಫಿರ್ಯಾದಿದಾರರಾದ ಶ್ರೀ.ಕರಿಬಸಪ್ಪ ತಂದೆ ತಿಪ್ಪೇಸ್ವಾಮಿ, ವ: 21 ವರ್ಷ, ಕುರುಬರ ಜನಾಂಗ, ಹೊಸಹಳ್ಳಿಯ ಹತ್ತಿರ ಎನ್.ಹೆಚ್.13 ರಸ್ತೆಯಲ್ಲಿ ಟೀ ಹೋಟಲ್ ವ್ಯಾಪಾರಿ, ವಾಸ:ಕರೇಕಲ್ಲು ಬಗಡಿ ಹೊಸಹಳ್ಳಿ ಎಂಬುವರು ಠಾಣೆಯಲ್ಲಿ ಹಾಜರಾಗಿ ಹೇಳಿಕೆಯ ದೂರನ್ನು ಕೊಟ್ಟಿದ್ದೇನೆಂದರೆ, ದಿನಾಂಕ:24/12/2014 ರಂದು ಬೆಳಿಗ್ಗೆ 10-00 ಗಂಟೆಯ ಸುಮಾರಿಗೆ ನಾನು ತಂಬಿಗೆ ತೆಗೆದುಕೊಂಡು ನಮ್ಮ ಗ್ರಾಮದ ಕುರುಬರ ಮಾರಣ್ಣನ ಹೊಲದ ಹತ್ತಿರ ಎನ್.ಹೆಚ್.13 ರಸ್ತೆಯಲ್ಲಿ ಹೋಗುತ್ತಿರುವಾಗ ಚಿತ್ರದುರ್ಗದ ಕಡೆಯಿಂದ ಲಾರಿ ನಂ.ಎಂ.ಪಿ.41/ಜಿ.ಎ.1024 ರ ಚಾಲಕನು ತನ್ನ ಲಾರಿಯನ್ನು ಅತೀ ವೇಗವಾಗಿ ಮತ್ತು ಜೋರಾಗಿ ನಡೆಸಿಕೊಂಡು ಬಂದು ರಸ್ತೆಯ ಎಡ ಬದಿಯಲ್ಲಿ ಲಾರಿಯನ್ನು ಎಡ ಮೊಗ್ಗಲಾಗಿ ಬೀಳಿಸಿದನು ಕೂಡಲೇ ನಾನು ಮತ್ತು ಸೋಮಪ್ಪ ಪೆಟ್ರೋಲ್ ಬಂಕ್‍ನಲ್ಲಿ ಕೆಲಸ ಮಾಡುವ ಚಂದ್ರಶೇಖರ್, ತಿಪ್ಪೇಶ, ಹುಡೇಂ ಶಿವು ಸೇರಿಕೊಂಡು ಲಾರಿಯ ಬಳಿ ಹೋಗಿ ನೋಡಲಾಗಿ ಈ ಅಪಘಾತದಿಂದ ಲಾರಿಯ ಕ್ಲೀನರ್‍ಗೆ ತಲೆಯ ಹಣೆಯ ಎಡಭಾಗದಲ್ಲಿ ಬಲವಾದ ಸೀಳು ರಕ್ತಗಾಯವಾಗಿತ್ತು, ಎಡ ಮುಂಗೈ ಬೆರಳುಗಳಿಗೆ ರಕ್ತಗಾಯವಾಗಿ ಎಡ ಮುಂಗೈ ಮುರಿದು ರಕ್ತ ಶ್ರಾವವಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದನು. ಮೃತಪಟ್ಟ ವ್ಯಕ್ತಿಯ ಹೆಸರು ವಿಳಾಸವನ್ನು ಚಾಲಕನಿಗೆ ಕೇಳಲಾಗಿ ಮೃತಪಟ್ಟವನು ಹೆಸರು ಸುರೇಶ್ ತಂದೆ ವಿಕ್ರಮ್, 25 ವರ್ಷ, ಬಿಲ್ ಠಾಕೂರ್ ಜನಾಂಗ [ ಆದಿವಾಸಿ ] ಸಿಪ್ರ ಗ್ರಾಮ ಸಾವೇರಾ ತಾಲೂಕು, ಇಂದೂರು ಜಿಲ್ಲಾ, ಮದ್ಯಪ್ರದೇಶ್ ಅಂತ ತಿಳಿಸಿದನು. ಅಪಘಾತವನ್ನುಂಟು ಮಾಡಿದ ಚಾಲಕನಿಗೆ ಹೆಸರು ವಿಳಾಸ ಕೇಳಲಾಗಿ ಅವನು ತನ್ನ ಹೆಸರು, ಹೇಮಂತ ತಂದೆ ಅಮರ್‍ಸಿಂಗ್‍ಜಿ, ವ:32 ವರ್ಷ, ಲಾರಿ ಚಾಲಕ, ವಾಸ: ರಾಧಾಗಂಜ್ ಗ್ರಾಮ ದಿವಾಸ್ ತಾಲೂಕು ಮತ್ತು ಜಿಲ್ಲಾ, ಮದ್ಯಪ್ರದೇಶ್ ಅಂತ ತಿಳಿಸಿದನು. ಈ ಅಪಘಾತದಿಂದ ಚಾಲಕನಿಗೆ ಎಡ ಮುಂಗೈ ಹತ್ತಿರ ಗದ್ದದ ಹತ್ತಿರ ತೆರೆಚಿದ ಗಾಯಗಳಾಗಿದ್ದವು. ಈ ಅಪಘಾತದಿಂದ ಲಾರಿಯ ಎಡಭಾಗ ಮತ್ತು ಕ್ಯಾಬಿನ್, ಮುಂದಿನ ಗ್ಲಾಸ್ ಜಕಂಗೊಂಡು ಲಾರಿಯಲ್ಲಿ ಲೋಡ ಮಾಡಿದ್ದ ಬಾಕ್ಸಗಳು ಚಲ್ಲಾ ಪಿಲ್ಲಿಯಾಗಿ ಕೆಳಗೆ ಬಿದ್ದಿರುತ್ತವೆ. ಗಾಯಗೊಂಡ ಚಾಲಕನಿಗೆ ಹೊಸಹಳ್ಳಿ ಸರ್ಕಾರಿ ಆಸ್ಪತ್ರೆಯಲಿ ಚಿಕಿತ್ಸೆಗೆ ದಾಖಲು ಮಾಡಿರುವುದಾಗಿ ಕೊಟ್ಟ ದೂರಿನ ಮೇರೆಗೆ ಹೊಸಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತದೆ.
ಪಿಯಾದಿದಾರರಾದ ಶ್ರೀ. ಸಂಗಮೇಶ ತಂದೆ ವರಬಸಪ್ಪ, 36 ವರ್µ, ಹಿಂದೂ ಬಲಿಜಿಗ ಜನಾಂಗ, ವಾಸ: ರಂಗನಾಥ ಶಾಲೆ ಹತ್ತಿರ, ಕಮ್ಮಿಂಗ್ ರಸ್ತೆ, ಬಳ್ಳಾರಿ. ಇವರ ದೂರಿನ ಮೇರೆಗೆ ದಿ:18-12-2014 ರಂದು ಸಂಜೆ 4-00 ಗಂಟೆ ಸುಮಾರಿಗೆ ಪಿರ್ಯಾದಿದಾರರ ಹೆಚಿಡತಿಯಾದ ಶ್ರೀಮತಿ.ಲಲಿತಮ್ಮ, 31 ವರ್ಷ, ವಾ: ಕಮ್ಮಿಂಗ್ ರಸ್ತೆ, ಬಳ್ಳಾರಿ ಇವರು ಮನೆಗೆ ಬೀಗ ಹಾಕಿ ಸೀರೆ ಜಿಗ್ ಜಾಗ್ ಮಾಡಿಸಲು ಕೊಟ್ಟು ಬರುತ್ತೇನೆಂದು ಟೈಲರ್ ಸೀನಾ ರವರ ಬಳಿ ಮನೆಯು ಬೀಗವನ್ನು ಕೊಟ್ಟು ಹೋದವಳು ರಾತ್ರಿಯಾದರು ಬಾರದೆ ಇದ್ದು ಈ ಬಗ್ಗೆ ಈ ದಿನದ ವರೆಗೂ ಪಿರ್ಯಾದಿದಾರರು ತನ್ನ ಹೆಂಡತಿ ಲಲಿತಳನ್ನು ತಮ್ಮ ಸಂಬಂಧಿಕರ ಮನೆಗಳಲ್ಲಿ ಇತರೆ ಕಡೆಗಳಲ್ಲಿ ಹುಡಿಕಾಡಿ ನೋಡಲು ಸಿಗದೇ ಇದ್ದುದ್ದರಿಂದ ಕಾಣೆಯದ ತನ್ನ ಹೆಂಡತಿಯನ್ನು ಪತ್ತೆ ಹಚ್ಚಿಕೊಡಬೇಕೆಂದು ಇದ್ದ ದೂರಿನ ಮೇರೆಗೆ ಬ್ರೂಸ್‍ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತದೆ.
ಪೊಲೀಸ್ ಸೂಪರಿಂಟೆಂಡೆಂಟ್,
ಬಳ್ಳಾರಿ.
ಇವರಿಗೆ,
ಎಲ್ಲಾ ಪತ್ರಿಕಾ ವರದಿಗಾರರಿಗೆ
ಹೆಚ್ಚಿನ ಮಾಹಿತಿಗಾಗಿ ಶ್ರೀ. ಮಹಮ್ಮದ್ ಗಯಾಸ್, ಎ.ಎಸ್.ಐ ಮೊಬೈಲ್ ನಂ. 9845484100 ಹಾಗು
ಜಿ. ಸುಬ್ರಮಣ್ಯಂ, ಹೆಚ್.ಸಿ-175, ಮೋಬೈಲ್ ಸಂ: 9448202005 ರವರನ್ನು ಸಂಪರ್ಕಿಸಲು ವಿನಂತಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ