ಜಿಲ್ಲಾ ಪೊಲೀಸ್ ಕಾರ್ಯಲಯ
ಬಳ್ಳಾರಿ, ದಿನಾಂಕ: 08-12-2014
ಪತ್ರಿಕಾ ಪ್ರಕಟಣೆ
1) ತುಮಟಿ ಗ್ರಾಮದಲ್ಲಿ ಕೊಲೆ.
ದಿನಾಂಕ: 06-12-2014 ರಂದು ಸಂಜೆ 7-30 ಗಂಟೆಯಿಂದ 8-30 ಗಂಟೆಯ ಸಮಯದ ಮದ್ಯದ ಅವದಿಯಲ್ಲಿ ತೋರಣಗಲ್ಲು ಪೊಲೀಸ್ ಠಾಣೆಯ ಸರಹದ್ದಿನ ತುಮಟಿ ಗ್ರಾಮದಲ್ಲಿ ಪಿರ್ಯಾದಿಯಾದ ಹೊನ್ನಮ್ಮ ಸಾರ್ವಜನಿಕ ಶೌಚಾಲಯಕ್ಕೆ ಹೋಗಿದ್ದು ಆ ಸಮಯದಲ್ಲಿ ಬಸಪ್ಪನವರ ಮಗನಾದ ಸ್ವಾಮಿಯು ಸಾರ್ವಜನಿಕ ಶೌಚಾಲಯದ ಹತ್ತಿರ ನೀಲಮ್ಮನ ಹಿಂದೆ ಬಂದು ನಿಂತಿದ್ದು ಹೆದರಿ ಕೂಗಿಕೊಂಡಾಗ ಓಡಿ ಹೋಗಿರುತ್ತಾನೆ. ಈ ವಿಷಯವನ್ನು ತನ್ನ ದೊಡ್ಡಮ್ಮನ ಮಗಳಾದ ಗಂಗಮ್ಮಳಿಗೆ ತಿಳಿಸಿದ್ದು ನೀನು ಮೊದಲು ಹೋಗು ನಿನ್ನ ಹಿಂದೆ ನಾನು ಬರುತ್ತೇನೆಂದು ಹೇಳಿ ನೀಲಮ್ಮಳನ್ನು ಮೊದಲು ದೊಡ್ಡಿಗೆ ಕಳುಹಿಸಿ ಹಿಂದೆ ಹಿಂಬಾಲಿಸಿದ್ದು ಬಸಪ್ಪನವರ ಮಗನಾದ ಸ್ವಾಮಿಯು ಹಿಂದೆ ಬಂದಿದ್ದು ನಿಂತಿದ್ದನ್ನು ನೋಡಿ ಕೂಗಿಕೊಂಡಾಗ ಓಡಿಹೋಗಿರುತ್ತಾನೆ. ಈ ವಿಷಯವಾಗಿ ಸ್ವಾಮಿಯವರ ಮನೆಯಲ್ಲಿ ನೋಡಲಾಗಿ ಮನೆಯಲ್ಲಿ ಇಲ್ಲದೆ ಇರುವುದು ಕಂಡು ಬಂದಿದ್ದು, ನಂತರ ನಾನು ನನ್ನ ದೊಡ್ಡಪ್ಪ ಇತರರು ಸೇರಿಕೊಂಡು ಕೇಳಲು ಹೋದಾಗ ನಾನು ಅಲ್ಲಿಗೆ ಹೋಗಿರುವುದಿಲ್ಲ ಏನು ಮಾಡಿಕೊಳ್ಳುತ್ತಿಯಾ ಮಾಡಿಕೊ ಎಂದು ಮಾತನಾಡಿದ್ದು, ನಂತರ ಸ್ವಾಮಿ ತಂದೆ ಬಸಪ್ಪ, ರಮೇಶ್ ತಂದೆ ಕುಂಟ ಬಸಪ್ಪ, ರವಿ ತಂದೆ ಕುಂಟ ಬಸಪ್ಪ, ಈಶ್ವರ ತಂದೆ ಚೆನ್ನಬಸಪ್ಪ, ಇವರೆಲ್ಲರು ನಮ್ಮ ದೊಡ್ಡಪ್ಪನಿಗೆ ಇವರದೆಲ್ಲ ಜಾಸ್ತಿಯಾಗಿದೆ ಎಂದು ಸಾಯಿಸಿರಿ ಕೆಳಗೆ ಬೀಳಿಸಿ ಕೈ ಕಾಲುಗಳಿಂದ ಎದೆಗೆ, ಹೊಟ್ಟೆಗೆ ಹೊಡೆದಿದರಿಂದ ಗುಜ್ಜಲ ನಾಗಪ್ಪನಿಗೆ ಒಳಪೆಟ್ಟು ಆಗಿ ಮೃತ ಪಟ್ಟಿರುತ್ತಾನೆಂದು ದೂರು ದಾಖಲಿಸಿದ್ದು ತೋರಣಗಲ್ಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಸಿ.ಪಿ.ಐ ಸಂಡೂರು ರವರು ತನಿಖೆ ಮುಂದುವರಿಸಿರುತ್ತಾರೆ.
2. ಹುಲ್ಲು ತುಂಬಿದ ಟ್ರಾಕ್ಟರ್ ಮೇಲೆಂದ ಬಿದ್ದು ಒಬ್ಬ ಸಾವು :
ಹೀರೆಹಡಗಲಿ ಪೊಲೀಸ್ ಠಾಣೆ ಗುನ್ನೆ ನಂ 139/2014 ದಿನಾಂಕ 07-12-2014 ರಂದು ಮದ್ಯಾಹ್ನ 1-00 ಗಂಟೆಗೆ ರಾಜವಾಳ-ಹಡಗಲಿ ಮಾರ್ಗದಲ್ಲಿ ಕೆ.ಎ. 35 ಟಿ 6133 ಟ್ರಾಲಿ ನಂ 1994 ರಲ್ಲಿ ಬೇವುರು ಬಸವರಾಜಪ್ಪನವರಿಗೆ ಹುಲ್ಲು ತರಲು ಚಾಲಕ ಪ್ರಭುಗೌಡ ಮೃತ ಕೆಂಚನಗೌಡ ಇತರರೊಂದಿಗೆ ಹೋಗಿದ್ದು ಟ್ರಾಕ್ಟರ್‍ನಲ್ಲಿ ಹುಲ್ಲನ್ನು ಲೋಡ್ ಮಾಡಿಕೊಂಡು ರಾಜವಾಳ್ ಮತ್ತು ಹಡಗಲಿ ರಸ್ತೆಯಲ್ಲಿ ಬರುತ್ತಿರುವಾಗ್ಗೆ ಚಾಲಕ ಪ್ರಭುಗೌಡರವರು ಅತಿವೇಗ ಮತ್ತು ಅಜಾಗರುಕತೆಯಿಂದ ನಡೆಸಿದ್ದರಿಂದ ಮೇಲೆ ಕುಳಿತ ಕೆಂಚನಗೌಡನು ಕೆಳಗೆ ಬಿದ್ದು ಮೃತಪಟ್ಟಿರುತ್ತಾನೆಂದು ದೂರು.
ಪೊಲೀಸ್ ಸೂಪರಿಂಟೆಂಡೆಂಟ್,
ಬಳ್ಳಾರಿ.
ಇವರಿಗೆ, ಎಲ್ಲಾ ಪತ್ರಿಕಾ ವರದಿಗಾರರಿಗೆ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ