ಸೋಮವಾರ, ನವೆಂಬರ್ 30, 2015

PRESS NOTE OF 30/11/2015

Crime Key Report From   To   
Sl. No FIR No FIR Date Crime Group - Crime Head Stage of case
Bellary Rural PS
1 Cr.No:0508/2015
(KARNATAKA MINOR MINERAL CONSISTENT RULE 1994 U/s 42,43,44 ; KARNATAKA LAND REVENUE ACT 1964 U/s 192(A),73 ; MMDR (MINES AND MINERALS REGULATION OF DEVELOPMENT) ACT 1957 U/s 21(1) ; IPC 1860 U/s 379 )
30/11/2015 Under Investigation
KARNATAKA STATE LOCAL ACTS - Karnataka Minor Mineral Consistent Rule 1994
Brief Facts :  ದಿನಾಂಕ: 30-11-2015 ರಂದು ಬೆಳಿಗ್ಗೆ 10-00 ಗಂಟೆಗೆ ಶ್ರೀ. ಕೆ. ಹೊಸಕೇರಪ್ಪ, ಪಿ.ಎಸ್.ಐ., ಗ್ರಾಮೀಣ ಪೊಲೀಸ್ ಠಾಣೆ, ಬಳ್ಳಾರಿರವರು ಠಾಣೆಗೆ ಹಾಜರಾಗಿ ದೂರು ನೀಡಿದ್ದು ಸಾರಾಂಶ: ದಿನಾಂಕ: 30-11-2015 ರಂದು ಬೆಳಿಗ್ಗೆ ತಮಗೆ ಠಾಣೆಯ ಸರಹದ್ದು ಕಮ್ಮರಚೇಡು ಗ್ರಾಮದ ಹಗರಿ ಹಳ್ಳ್ಳದಲ್ಲಿ ಕೆಲವು ಜನರು ಒಂದು ಟ್ರಾಕ್ಟರ್ ಟ್ರಾಲಿಯನ್ನು ನಿಲ್ಲಿಸಿಕೊಂಡು ಅಕ್ರಮವಾಗಿ ಮರಳು ತುಂಬಿಕೊಂಡು ಸಾಗಾಣಿಕೆ ಮಾಡುತ್ತಿರುತ್ತಾರೆಂದು ಖಚಿತ ವರ್ತಮಾನ ಬಂದ ಮೇರೆಗೆ ಪಂಚರು ಮತ್ತು ಸಿಬ್ಬಂದಿಯವರಾದ ಹೆಚ್.ಸಿ-43-245 ರವರೊಂದಿಗೆ ಇಲಾಖೆಯ ಜೀಪ್ ನಂ: ಕೆಎ:34/ಜಿ/303 ರಲ್ಲಿ ಚಾಲಕ ಎ.ಪಿ.ಸಿ-89 ರವರೊಂದಿಗೆ ಬೆಳಿಗ್ಗೆ 8-45 ಗಂಟೆಗೆ ಕಮ್ಮರಚೇಡು ಗ್ರಾಮದ ಹಗರಿ ಹಳ್ಳದಲ್ಲಿ ಹೋಗಿ ದಾಳಿ ಮಾಡಿ ಅಕ್ರಮವಾಗಿ ಮರಳು ಸಾಗಾಣಿಕೆ ಮಾಡುತ್ತಿದ್ದ ಟ್ರಾಕ್ಟರ್ ನಂಬರ್ ಕೆ.ಎ-34-ಟಿ.ಎ-0145 ಟ್ರಾಲಿ ನಂಬರ್ ಎ.ಪಿ-21-ಟಿ.ಟಿ-0830, ಟ್ರಾಲಿಯಲ್ಲಿ ಲೋಡು ಮಾಡಿದ ಅಂದಾಜು 2 ಮೆಟ್ರಿಕ್ ಟನ್ ಮರಳು ರೂ. 2000/- ಬೆಲೆ ಉಳ್ಳದ್ದನ್ನು ಜಪ್ತು ಮಾಡಿಕೊಂಡು 2 ಸ್ಯಾಂಪಲ್ ಮರಳನ್ನು ತೆಗೆದುಕೊಂಡು ಟ್ರಾಕ್ಟರ್ ಚಾಲಕ ರಾಜೇಶ್ ಮತ್ತು ಮಾಲೀಕ ವಿ.ರಾಘವೇಂದ್ರನನ್ನು ವಶಕ್ಕೆ ತೆಗೆದುಕೊಂಡಿದ್ದು ಟ್ರಾಲಿ ಮಾಲೀಕ ವಿ.ಆಂಜಿನೇಯುಲು ಎಂದು ತಿಳಿದು ಬಂದಿದ್ದು ಟ್ರಾಕ್ಟರ್ ಚಾಲಕ, ಟ್ರಾಕ್ಟರ್ ಮಾಲೀಕ ಮತ್ತು ಟ್ರಾಲಿ ಮಾಲೀಕರ ಮೇಲೆ ಪ್ರಕರಣ ದಾಖಲು ಮಾಡಲು ಸೂಚಿಸಿದ ಮೇರೆಗೆ ಈ ಪ್ರ.ವ.ವರದಿ ಸಲ್ಲಿಸಿದೆ.
Hosahalli PS
2 Cr.No:0220/2015
(IPC 1860 U/s 143,147,148,504,324,506,149 )
30/11/2015 Under Investigation
RIOTS - Others
Brief Facts :  ದಿನಾಂಕ:೩೦/೧೧/೨೦೧೫ ರಂದು ಮದ್ಯಾಹ್ನ ೨-೦೦ ಗಂಟೆಗೆ ಫಿರ್‍ಯಾದಿದಾರರಾದ ಶ್ರೀ.ಮಹಂತೇಶ ತಂದೆ ಗುರಾಲಿ ಚಿನ್ನಯ್ಯ,ವ:೩೦ ವರ್ಷ,ವಾಲ್ಮೀಕಿ ಜನಾಂಗ,ವ್ಯವಸಾಯ,ವಾಸ:ಹುಡೇಂ ಗ್ರಾಮ ಎಂಬುವರು ಠಾಣೆಯಲ್ಲಿ ಹಾಜರಾಗಿ ಲಿಖಿತ ದೂರು ಕೊಟ್ಟಿದ್ದೇನೆಂದರೆ,ದಿನಾಂಕ:೨೮/೧೧/೨೦೧೫ ರಂದು ಮದ್ಯಾಹ್ನ ೧೨-೩೦ ಗಂಟೆಯ ಸುಮಾರಿಗೆ ನಾನು ನಮ್ಮ ಗ್ರಾಮದ ಹಂಪಮ್ಮನ ಅಂಗಡಿ ಹತ್ತಿರ ಕುಳಿತುಕೊಂಡಿರುವಾಗ ಹಂಪಮ್ಮಳು ಅಂಗಡಿಯ ಹತ್ತಿರ ಕುಳಿತುಕೊಳ್ಳಬೇಡ ಎದ್ದು ಹೋಗು ಇಲ್ಲವಾದರೆ ಚಪ್ಪಲಿ ತೆಗೆದುಕೊಂಡು ಹೊಡೆಯುತ್ತೇನೆ ಎಂದು ನನ್ನ ಮೇಲೆ ಜಗಳ ತೆಗೆದುಕೊಂಡು ಅಲ್ಲಿಯೇ ಇದ್ದ ಪ್ರಮೇಳಮ್ಮ ಮತ್ತು ಅವರ ಮಕ್ಕಳಾದ ಕಮಲರಾಜ,ಭೀಮರಾಜ,ಶಿವರಾಜ,ರಾಮಮೂರ್ತಿ ಎಲ್ಲರೂ ಸೇರಿಕೊಂಡು ನನಗೆ ಅವಾಚ್ಯ ಶಬ್ದಗಳಿಂದ ಬೈದಾಡಿ ದೊಣ್ಣೆ,ಕಲ್ಲು,ಚಪ್ಪಲಿಯಿಂದ ಹೊಡೆದು ನೋವು ಮಾಡಿರುತ್ತಾರೆಂದು ಮತ್ತು ಅಲ್ಲಿಂದ ಊರ ಬಾಗಿಲು ವರೆಗೆ ಬಡಿದುಕೊಂಡು ಬಂದಿರುತ್ತಾರೆ.ಮತ್ತು ಮೇಲ್ಕಂಡ ವ್ಯಕ್ತಿಗಳು ನನಗೆ ಕೊಲೆ ಮಾಡುವುದಾಗಿ ಪ್ರಾಣ ಬೆದರಿಕೆ ಹಾಕಿರುತ್ತಾರೆಂದು ನನಗೆ ಹೊಡೆದು ನೋವು ಮಾಡಿದ ಮೇಲ್ಕಂಡ ವ್ಯಕ್ತಿಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಕೊಟ್ಟ ದೂರನ್ನು ಸ್ವೀಕರಿಸಿ ಪ್ರಕರಣವನ್ನು ದಾಖಲು ಮಾಡಿಕೊಂಡಿರುತತೇನೆ.
Hospet Rural PS
3 Cr.No:0173/2015
(KARNATAKA 
30/11/2015 Under Investigation
POLICE ACT, 1963 U/s 87 )
 KARNATAKA POLICE ACT 1963 - Street Gambling (87)
Brief Facts :  ದಿನಾಂಕ:30/11/2015 ರಂದು 2-00 ಎ.ಎಂ.  ಗಂಟೆಗೆ ಹೊಸಪೇಟೆಯ ಎಂ.ಪಿ. ಪ್ರಕಾಶ್ ನಗರದ ಪಂಪನಗೌಡ ರವರ ಮನೆಯ ಹತ್ತಿರದ ಸಾರ್ವಜನಿಕ ರಸ್ತೆಯ ಮೇಲೆ ಅಂದರ್ ಬಾಹರ್ ನಸೀಬಿನ ಇಸ್ಪೀಟ್ ಜುಜಾಟವನ್ನು ಹಣ ಪಣಕ್ಕಿಟ್ಟುಆಡುತ್ತಿರುವ ಬಗ್ಗೆ ಮಾಹಿತಿಯ ಮೇರೆಗೆ ಪಿರ್ಯಾದಿದಾರರು ಸಿಬ್ಬಂದಿಯವರಾದ ಹೆಚ್.ಸಿ-05, ಹಾಗು ಇತರರು  ಮತ್ತು ಪಂಚರೊಂದಿಗೆ ಹೋಗಿ ದಾಳಿ ಮಾಡಿ ಹಿಡಿದುಕೊಂಡು ಹಿಡಿದ 07 ಜನ ಅರೋಪಿತ ರಿಂದ ಮತ್ತು ಪಣಕ್ಕಿಟ್ಟಿದ್ದ ಒಟ್ಟು ಜೂಜಾಟದ ಹಣ 16,800/- ರೂಗಳನ್ನು 52 ಇಸ್ಪೀಟ್ ಎಲೆಗಳನ್ನು ಹಾಗು ಒಂದು ಪ್ಲಾಸ್ಟೀಕ್ ತಾಡಪಾಲನ್ನು  ಜಪ್ತು ಮಾಡಿಕೊಂಡು ಬಂದು ಆರೋಪಿತರ ಮೇಲೆ ಪ್ರಕರಣ ದಾಖಲು ಮಾಡಲು   ನೀಡಿದ ಜ್ಞಾಪನದ ಮೇರೆಗೆ  ಠಾಣಾ ಎನ್.ಸಿ. ನಂ:15/2015 ಕಲಂ:87 ಕೆ.ಪಿ.ಯಾಕ್ಟ ಎನ್.ಸಿ. ಪ್ರಕರಣ ದಾಖಲಿಸಿಕೊಂಡು ನಂತರ ಮಾನ್ಯ ನ್ಯಾಯಾಲಯದ ಆದೇಶ ಪಡೆದು  ಗುನ್ನೆ ದಾಖಲು ಮಾಡಿ  ತನಿಖೆ ಕೈ ಗೊಳ್ಳಲಾಗಿದೆ
4 Cr.No:0174/2015
(IPC 1860 U/s 279,337 ; INDIAN MOTOR VEHICLES ACT, 1988 U/s 183,187 )
30/11/2015 Under Investigation
MOTOR VEHICLE ACCIDENTS NON-FATAL - State Highways
Brief Facts :  ಪಿರ್ಯಾದಿದಾರರಾದ ಶ್ರೀ ಕೆ. ಗೋವಿಂದ ತಂದೆ ದಿ: ಸತ್ತೆಪ್ಪ, ವ: 35 ವರ್ಷ, ಕೊರವರ ಜನಾಂಗ, ಬ್ಯಾಂಡ್ ಬಾರಿಸುವ ಕೆಲಸ, ವಾಸ: ಹೊಸಪ್ಲಾಟ್, ಹಂಪಿ ರಸ್ತೆ, ಹಳೇ ಮಲಪನ ಗುಡಿ ಇವರು ಈ ದಿನ 30/11/2015 ರಂದು ಬೆಳಿಗ್ಗೆ 10-45 ಗಂಟೆಗೆ ಠಾಣೆಗೆ ಬಂದು ಹೇಳಿಕೆ ದೂರು ನೀಡಿದ್ದು ಸಾರಾಂಶ: ನಿನ್ನೆ ದಿನ 29/11/2015 ರಂದು ತಾನು ಮದ್ಯಾಹ್ನ ಹೊಸಪೇಟೆಗೆ ಬಂದಿದ್ದು ಮರಳಿ ತನ್ನ ಊರಿಗೆ ಹೋಗಿ ಕೊಟ್ರೇಶ್ ರವರ ಬೇಕರಿ ಮುಂದುಗಡೆ ರಸ್ತೆ ದಾಟಿ ಮನೆಗೆ ಹೋಗುತ್ತಿರುವಾಗ 4 ಪಿ.ಎಂ. ಸುಮಾರಿಗೆ ಹೊಸಪೇಟೆ ಕಡೆಯಿಂದ ಮೋಟರ್ ಸೈಕಲ್ ನಂಬರ್ ಕೆ.ಎ.35-ಎಲ್-5176 ನೇದ್ದನ್ನು ಅದರ ಚಾಲಕನು ಜೋರಾಗಿ, ಮತ್ತು ದುಡುಕಿನಿಂದ ನೆಡೆಸಿಕೊಂಡು ಬರುತ್ತಾ ತನಗೆ ಡಿಕ್ಕಿ ಪಡಿಸಿದ್ದಾಗಿ ಇದರಿಂದ ತಾನು ಕೆಳಕ್ಕೆ ಬಿದ್ದು ತೆಲೆಗೆ ಬಲಕೆನ್ನೆಗೆ ಹಲ್ಲಿಗೆ ರಕ್ತಗಾಯ ಮತ್ತು ಒಳ ಪೆಟ್ಟು ಆಗಿರುವುದಾಗಿ ಅಪಘಾತ ನೋಡಿದ ಅಟೋ ಚಾಲಕ ಹುಲುಗಪ್ಪ ಎನ್ನುವವರು ಮತ್ತು ಅಲ್ಲಿಗೆ ಬಂದ ತನ್ನ ಅಳಿಯ ಕೊಮಾರಿ ರವರು ತನಗೆ ಚಿಕಿತ್ಸೆಗೆ ಹೊಸಪೇಟೆ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ದಾಖಲಿಸಿದ್ದು ಚಿಕಿತ್ಸೆ ಪಡೆದುಕೊಂಡು ರಾತ್ರಿ ಮನೆಗೆ ಹೋಗಿದ್ದು ಈ ದಿನ ತಡವಾಗಿ ಬಂದು ದೂರು ನೀಡಿ ತನಗೆ ಅಪಘಾತ ಪಡಿಸಿದ ಮೋಟರ್ ಸೈಕಲ್ ನಂಬರ್ ಕೆ.ಎ.35-ಎಲ್-5176 ನೇದ್ದರ ಚಾಲಕನ ಮೇಲೆ ಕಾನೂನು ಕ್ರಮ ಜರುಗಿಸಬೇಕಂದು ಮೋಟರ್ ಸೈಕಲ್ ಸವಾರನ ಹೆಸರು ಗೊತ್ತಿಲ್ಲ ನೋಡಿದರೆ ಗುರುತಿಸುವುದಾಗಿ ಇದ್ದ ದೂರಿನ ಮೇರಗೆ ಠಾಣೆಗೆ ಗುನ್ನೆ ನಂಬರ್ : 174-2015 ಕಲಂ: 279-337 ಐಪಿಸಿ ಮತ್ತು ಕಲಂ: 183-187 ಐಎಂವಿ ಆಕ್ಟ್ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತೇನೆ.
5 Cr.No:0175/2015
(CODE OF CRIMINAL PROCEDURE, 1973 U/s 41,109 )
30/11/2015 Under Investigation
CrPC - Security For Good Behaviour (Sec 109)
Brief Facts :  ದಿನಾಂಕ:30/11/15 ರಂದು ನಾನು ಮತ್ತು ಸಿಬ್ಬಂದಿಯವರು ಮಧ್ಯಾಹ್ನ 12-15 ಗಂಟೆಗೆ ಗೋಕುಲ ನಗರದ ರಾದಾಕೃಷ್ಣನ ಗುಡಿಯ ಹತ್ತಿರ ಗಸ್ತಿನಲ್ಲಿರುವಾಗ್ಗೆ ಯಾರೋ ಒಬ್ಬ ವ್ಯಕ್ತಿಯು ಸದರಿ ಗುಡಿಯ ಮುಂದೆ ಬೀಗ ಹಾಕಿದ ಗಾಡಿಗಳ ಹ್ಯಾಂಡಲ್ ಗಳನ್ನು ಅಲುಗಾಡಿಸುತ್ತಾ ಅನುಮಾನ ಬರುವಂತೆ ವರ್ತಿಸುತ್ತಿದ್ದು ನಾವು ಹತ್ತಿರ ಹೋಗುತ್ತಿದ್ದಂತೆ  ತನ್ನ ಮುಖವನ್ನು ಮರೆಮಾಚಿಕೊಂಡು ಓಡಿ ಹೋಗಲು ಪ್ರಯತ್ನಿಸಿದನು. ಸಿಬ್ಬಂದಿಯವರು ಆತನಿಗೆ ಬೆನ್ನು ಹತ್ತಿ ಹಿಡಿದುಕೊಂಡು ಬಮದು ಹಾಜರುಪಡಿಸಿದರು.  ಹೆಸರು ವಿಳಾಸ ವಿಚಾರಿಸಲು ಮೊದಲು ತೊದಲುತ್ತಾ ವಿದವಿದವಾಗಿ ನುಡಿದನು. ಪುನಃ ವಿಚಾರ ಮಾಡಲು ಮೇಲಿನಂತೆ ತಿಳಿಸಿದನು. ಸದರಿ ವ್ಯಕ್ತಿಗೆ ಈ ಸಮಯದಲ್ಲಿ ಇಲ್ಲಿ ಇರುವಿಗೆ ಬಗ್ಗೆ, ನಮ್ಮನ್ನು ನೋಡಿ ಓಡಿ ಹೋಗಲು ಪ್ರಯತ್ನಿಸಿದ ಬಗ್ಗೆ, ತನ್ನ ಮುಖವನ್ನು  ಮರೆಮಾಚಿಕೊಂಡಿದ್ದರ ಬಗ್ಗೆ, ಗುಡಿಯ ಮುಂದೆ ಗಾಡಿಗಳ ಹ್ಯಾಂಡ್ ಲ್ ಗಳನ್ನು ಅಲುಗಾಡಿಸುತ್ತಿದ್ದರ ಬಗ್ಗೆ ವಿಚಾರಿಸಲು ಸಮಪರ್ಕವಾದ  ಉತ್ತರ ನೀಡಲಿಲ್ಲ. ಸದರಿ ವ್ಯಕ್ತಿಯನ್ನು ಇಲ್ಲಿಯೆ ಬಿಟ್ಟಲ್ಲಿ ಯಾವುದಾದಾರೂ ಸಂಜ್ಞೆಯ ಅಪರಾದ ಮಾಡಬಹುದೆಂದು ಮುಂಜಾಗ್ರತಾ ಕ್ರಮವಾಗಿ ಸದರಿ ವ್ಯಕ್ತಿಯನ್ನು ದಸ್ತಗಿರಿ ಮಾಡಿಕೊಂಡು ವಾಪಸ್ಸು ಠಾಣೆಗೆ ಬಂದು ಮೇಲ್ಕಂಡ ಕಲಂ ಅನ್ವಯ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಗೋಳ್ಳಲಾಯಿತು.
Kampli  PS
6 Cr.No:0156/2015
(CODE OF CRIMINAL PROCEDURE, 1973 U/s 109 )
30/11/2015 Under Investigation
CrPC - Others
Brief Facts :  ಈ ದಿನ ದಿನಾಂಕ 30-11-2015 ರಂದು ಬೆಳಿಗ್ಗೆ 04-00 ಗಂಟೆಗೆ ನಾನು ಪಿಸಿ499,695  ರವರನ್ನು ಕರೆದುಕೊಂಡು ಪಟ್ಟಣದಲ್ಲಿ ವಿಶೇಷ ಗಸ್ತಿನಲ್ಲಿದ್ದಾಗ (ಗುಡ್ ಮಾರ್ನಿಂಗ್ ಬೀಟ್)  ಕಂಪ್ಲಿಯ ವಾಲ್ಮೀಕಿ ಸರ್ಕಲ್  ಹತ್ತಿರ  ಇಬ್ಬರು ವ್ಯಕ್ತಿಗಳು ನಮ್ಮನ್ನು ನೋಡಿ ತಮ್ಮ ಇರುವಿಕೆಯನ್ನು ಮರೆಮಾಚಿಕೊಳ್ಳಲು ಪ್ರಯತ್ನಿಸಿದವರಿಗೆ ಬೆಳಿಗ್ಗೆ 04-20 ಗಂಟೆಗೆ ಹಿಡಿದು ವಿಚಾರಿಸಲು ಅವರ ಹೆಸರು ವಿಚಾರಿಸಲಾಗಿ  1) ವಲಿ ತಂದೆ ರಾಜಾಸಾಬ್, 18 ವವರ್ಷ, ಮುಸ್ಲಿಂ ಜನಾಂಗ, ಕೂಲಿ ಕೆಲಸ, ವಾ-ಹೊಸಪೇಟೆ ಬೈಪಾಸ್ ರಸ್ತೆ ಕಂಪ್ಲಿ 2) ರಮೇಶ ತಂದೆ ಹುಲಿಯಪ್ಪ,28 ವರ್ಷ, ಚಲುವಾದಿ ಜನಾಂಗ, ಕೂಲಿ ಕೆಲಸ, ವಾ-ಚಲುವಾದಿಕೇರಿ ಗಂಗಾವತಿ ಅಂತ ತಿಳಿಸಿದ್ದು, ಸದರಿ ಆಸಾಮಿಗಳು ಕಂಪ್ಲಿಯಲ್ಲಿ ಯಾವುದಾದರೂ ಸ್ವತ್ತಿನ ಅಪರಾಧ ಮಾಡಬಹುದೆಂದು ಶಂಕಿಸಿ, ಬೆಳಿಗ್ಗೆ 04-45 ಗಂಟೆಗೆ ಮರಳಿ ಠಾಣೆಗೆ ಬಂದು ಆಸಾಮಿಗಳ ವಿರುದ್ದ ಗುನ್ನೆ ನಂ  156/2015 ಕಲಂ 109 ಸಿಆರ್ ಪಿಸಿ ರೀತ್ಯಾ ಪ್ರಕರಣ ದಾಖಲಿಸಿ, ಮುಂದಿನ ಕ್ರಮಕ್ಕಾಗಿ ಮಾನ್ಯ ತಹಶಿಲ್ದಾರರು ಹಾಗೂ ತಾಲೂಕು ದಂಡಾಧೀಕಾರಿಗಳು ಹೊಸಪೇಟೆ ರವರ ಸನ್ನಿಧಿಗೆ ವರದಿಯೊಂದಿಗೆ ನಿವೇದಿಸಿಕೊಂಢಿರುತ್ತದೆ.
7 Cr.No:0157/2015
(DOWRY PROHIBITION ACT, 1961 U/s 3,4 ; IPC 1860 U/s 498A,323,342 )
30/11/2015 Under Investigation
CRUELTY BY HUSBAND - Dowry Harasement
Brief Facts :  ದಿನಾಂಕ: 28/05/2005ರಂದು ಕಂಪ್ಲಿ  ಕೆ ಎಸ್ ಭವನದಲ್ಲಿ ಪಿರ್ಯಾದಿದಾರಳಿಗೂ & ಆರೋಪಿ ವಿಜಯಪಾರ್ಥಸಾರಥಿಗೂ ವಿವಾಹವಾಗಿದ್ದು  ವಿವಾಹದ ಸಮಯದಲ್ಲಿ  ಆರೋಪಿತನು ಪಿರ್ಯಾದಿದಾರಳ ತಂದೆ ತಾಯಿಯವರಿಗೆ ಒಂದು ಮೋಟಾರ್ ಸೈಕಲ್, 36 ತೊಲೆ ಬಂಗಾರ, ರೂ 10ಲಕ್ಷ ನಗದು , ಕಂಪ್ಲಿಯಲ್ಲಿರುವ 02 ಪ್ಲಾಟ್  ವರದಕ್ಷಿಣೆಯಾಗಿ ಕೊಡುವಂತೆ ಒತ್ತಾಯ ಮಾಡಿದ್ದು , ಬಂಗಾರ, ವಾಹನ, ಪ್ಲಾಟ್ , ನಗದನ್ನು  ತೆಗೆದುಕೊಂಡ ನಂತರವೂ ಪಿರ್ಯಾದಿದಾರಳಿಗೆ ಪುನಃ ಹೆಚ್ಚಿನ ವರದಕ್ಷಿಣೆ  ತರುವಂತೆ  ದೈಹಿಕ, ಮಾನಸಿಕ ಕಿರುಕುಳ ನೀಡುತ್ತಿರುತ್ತಾನೆ ಅಲ್ಲದೇ ಹೆಚ್ಚಿನ  ವರದಕ್ಷಿಣೆ ಬೇಡಿಕೆ  ವಿಷಯದಲ್ಲಿ ದಿನಾಂಕ: 26/08/2014ರಂದು ಪಿರ್ಯಾದಿಯೊಂದಿಗೆ ಜಗಳ ತೆಗೆದು ಪಿರ್ಯಾದಿಗೆ ಹಲ್ಲೆ ಮಾಡಿ ತಮ್ಮ  ಮನೆಯ ಕೋಣೆಯಲ್ಲಿ ಕೂಡಿ ಹಾಕಿರುತ್ತಾನೆ . & ನಂತರದ ದಿನಗಳಲ್ಲಿ ತಾವು ಕಂಪ್ಲಿಯಲ್ಲಿ  ಮನೆ ಮಾಡಿದ್ದು ಆ ಮನೆಯಲ್ಲೂ ಸಹ   ಆರೋಫಿತನು ಹೆಚ್ಚಿನ ವರದಕ್ಷಿಣೆ ತರುವಂತೆ ಪಿರ್ಯಾದಿದಾರಳಿಗೆ ಕಿರುಕುಳ ನೀಡುತ್ತಿದ್ದು ಕಾರಣ  ಆರೋಪಿತನ ವಿರುದ್ದ ಕ್ರಮ ಜರುಗಿಸಲು ಮಾನ್ಯ ನ್ಯಾಯಾಲಯದಲ್ಲಿ ಪಿರ್ಯಾದಿದಾರಳು ಖಾಸಗೀ ದೂರನ್ನು ನೀಡಿದ್ದು ಈ ಬಗ್ಗೆ  ನ್ಯಾಯಾಲಯವು ಕಳುಹಿಸಿದ  ಸದ್ರಿ ಖಾಸಗೀ ದೂರನ್ನು ಈ ದಿನ ಸ್ವೀಕರಿಸಿ ಪ್ರಕರಣ ದಾಖಲಿಸಿದೆ
T.B. Dam PS
8 Cr.No:0035/2015
(CODE OF CRIMINAL PROCEDURE, 1973 U/s 110(E)(G),41(A) )
30/11/2015 Under Investigation
CrPC - Security For Good Behaviour (Sec 110)
Brief Facts :  ರಮಣಬಾಬು @ ಛಂಟಿ, ತಂದೆ. ಸತ್ಯರಾವ್. ವಯಸ್ಸು 24 ವರ್ಷ, ಬೆಸ್ತರ ಜನಾಂಗ, ಮೀನಿನ ವ್ಯಾಪಾರ, ಇವರು ದಿನಾಂಕ:- 26/10/2012 ರಂದು ರಾತ್ರಿ ಸುಮಾರು 7 ಗಂಟೆಗೆ ಟಿ.ಬಿ.ಡ್ಯಾಂ ಪೊಲೀಸ್ ಠಾಣೆ ಸರಹದ್ದಿನ ಇ.ವಿ.ಕ್ಯಾಂಪ್, ಬಳಿ ಎನ್. ಹೆಚ್. 13 ರಸ್ತೆಯಲ್ಲಿ ಬೆಂಗಳೂರು ನಗರದ ವಾಸಿಗಳಾದ ಶ್ರೀ. ಮಹಾಂತೇಶ್, ತಂದೆ. ಬಸಯ್ಯ, ಇವರು ಕಾರಿನಲ್ಲಿ ಹೋಗುತ್ತಿರುವಾಗ  ನವೀನ್ ಕುಮಾರ್ ರವರೊಂದಿಗೆ ಸೇರಿ ಕಾರನ್ನು ಅಡ್ಡಗಟ್ಟಿ ನಿಲ್ಲಿಸಿ ಫಿರ್ಯಾದಿದಾರರಿಗೆ ಹೆದರಿಸಿ ಫಿರ್ಯಾದಿದಾರರ ಕೊರಳಲ್ಲಿದ್ದ ಬಂಗಾರದ ಚೈನು ಮತ್ತು ಹಣ ಬಲವಂತವಾಗಿ ಕಿತ್ತುಕೊಂಡು ಹೋಗಿರುವುದರಿಂದ ಟಿ.ಬಿ.ಡ್ಯಾಂ ಪೊಲೀಸ್ ಠಾಣೆಯಲ್ಲಿ ಗುನ್ನೆನಂಬರ್ 40/2012 ಕಲಂ 392 ಐ.ಪಿ.ಸಿ. ಅಡಿಯಲ್ಲಿ ಪ್ರಕರಣವು ದಾಖಲಾಗಿ ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿರುತ್ತದೆ.                
                        ಈ ವ್ಯಕ್ತಿಯ ಚಟುವಟಿಕೆಗಳ ಮೇಲೆ ನಿರಂತರವಾಗಿ ನಿಗಾಯಿಟ್ಟು ಸಾರ್ವಜನಿಕರಿಗೆ ತೊಂದರೆಯಾಗುವುದನ್ನು ತಪ್ಪಿಸುವ ಉದ್ದೇಶದಿಂದ ಟಿ.ಬಿ.ಡ್ಯಾಂ ಪೊಲೀಸ್ ಠಾಣೆಯಲ್ಲಿ ಪುಂಡರ ಹಾಳೆಯನ್ನು ತೆರೆದು ಈತನ ಚಟುವಟಿಕೆಗಳ ಮೇಲೆ ನಿಗಾವಹಿಸುತ್ತಾ ಬಂದಿರುತ್ತದೆ.  ಸದರಿ ಪುಂಡ ಆಸಾಮಿಯು ಕೆಲವು ವರ್ಷಗಳು ಒಳ್ಳೆ ರೀತಿಯಿಂದ ಜೀವನ ಮಾಡುತ್ತಿದ್ದವನು ಇತ್ತೀಚಿಗೆ ಸುಮಾರು 2-3 ತಿಂಗಳಿಂದ ಅನವಶ್ಯಕವಾಗಿ ಟಿ.ಬಿ.ಡ್ಯಾಂನ ಹೊರವಲಯ ಪ್ರದೇಶಗಳಲ್ಲಿ ಸೂರ್ಯಾಸ್ಥದ ನಂತರ ಮತ್ತು ಮಧ್ಯಾಹ್ನದ ಸಮಯದಲ್ಲಿ ಜನವಿರಳವಿರುವ ಸ್ಥಳಗಳಲ್ಲಿ ತಿರುಗಾಡುವುದು ರಸ್ತೆಯಲ್ಲಿ ಓಡಾಡುವ ಜನರಿಗೆ ವಿಚಿತ್ರವಾಗಿ ನೋಡುವುದು ಜನರೊಂದಿಗೆ ವಿಚಿತ್ರವಾಗಿ ವರ್ತಿಸುವುದು ಮಾಡುತ್ತಿರುವುದರಿಂದ ಈತನ ವರ್ತನೆಯನ್ನು ಮತ್ತು ಮನೋಭಾವನೆಗಳನ್ನು ನೋಡಿರುವ ಸಾರ್ಜ ಜನಿಕರು ಭಯಭೀತರಾಗಿರುತ್ತಾರೆಂದು ಪೊಲೀಸ್ ಬಾತ್ಮೀದಾರರಿಂದ ಮಾಹಿತಿ ತಿಳಿದು ಬಂದಿದ್ದರಿಂದ  ಈ ದಿವಸ ದಿನಾಂಕ:- 30/11/2015 ರಂದು ಬೆಳಿಗ್ಗೆ 11-30 ಗಂಟೆಗೆ ಸದರಿ ಆಸಾಮಿಯು ಹಳೇ ಪಿ.ಎಲ್.ಸಿ.ಕಾಲನಿಯ ಮುತ್ತುಮಾರೆಮ್ಮಗುಡಿ ಹತ್ತಿರ ಪಿರ್ಯಾದಿದಾರರು ಸುತ್ತು ಕರ್ತವ್ಯದಲ್ಲಿದ್ದಾಗ ಆ ಸಮಯ ಆ ಸ್ಥಳದಲ್ಲಿ ಸದರಿ ವ್ಯಕ್ತಿಯು ಸಂಶಯಾಸ್ಫದ ರೀತಿಯಲ್ಲಿ ಕಂಡು ಬಂದಿದ್ದು ಮತ್ತು ಪಿರ್ಯಾದಿಗೆ ನೋಡಿ  ನಿಧಾನವಾಗಿ ಕಣ್ಮರೆಯಾಗಲು ಪ್ರಯತ್ನಿಸಿದವನಿಗೆ ಹಿಡಿದು ಆ ಸಮಯ ಅಲ್ಲಿದ್ದ ಬಗ್ಗೆ ಅವನಿಗೆ ವಿಚಾರಮಾಡಲಾಗಿ ಸಮರ್ಪಕವಾದ ಉತ್ತರ ನೀಡದೇ ಇದ್ದರಿಂದ ಸ್ವಾಧೀನಕ್ಕೆ ತೆಗೆದುಕೊಂಡು ಮುಂಜಾಗ್ರತಾ ಕ್ರಮಕ್ಕಾಗಿ ದೂರು ಸಲ್ಲಿಸಿರುತ್ತಾರೆ.
9 Cr.No:0036/2015 30/11/2015 Under 
(CODE OF CRIMINAL PROCEDURE, 1973 U/s 110(E)(G),41(1)(A) ) Investigation
CrPC - Security For Good Behaviour (Sec 110)
Brief Facts :  ಕೆ. ನವೀನ್ ಕುಮಾರ, ತಂದೆ. ಕೃಷ್ಣಮೂರ್ತಿ. ವಯಸ್ಸು 21 ವರ್ಷ,  ಆದಿ ದ್ರಾವಿಡ ಜನಾಂಗ, ವೆಲ್ಡಿಂಗ್ ಕೆಲಸ., ಇವರು ದಿನಾಂಕ:- 26/10/2012 ರಂದು ರಾತ್ರಿ ಸುಮಾರು 7 ಗಂಟೆಗೆ ಟಿ.ಬಿ.ಡ್ಯಾಂ ಪೊಲೀಸ್ ಠಾಣೆ ಸರಹದ್ದಿನ ಇ.ವಿ.ಕ್ಯಾಂಪ್, ಬಳಿ ಎನ್. ಹೆಚ್. 13 ರಸ್ತೆಯಲ್ಲಿ ಬೆಂಗಳೂರು ನಗರದ ವಾಸಿಗಳಾದ ಶ್ರೀ. ಮಹಾಂತೇಶ್, ತಂದೆ. ಬಸಯ್ಯ, ಇವರು ಕಾರಿನಲ್ಲಿ ಹೋಗುತ್ತಿರುವಾಗ  ರಮಣಬಾಬು ರವರೊಂದಿಗೆ ಸೇರಿ ಕಾರನ್ನು ಅಡ್ಡಗಟ್ಟಿ ನಿಲ್ಲಿಸಿ ಫಿರ್ಯಾ ದಿದಾರರಿಗೆ ಹೆದರಿಸಿ ಫಿರ್ಯಾದಿದಾರರ ಕೊರಳಲ್ಲಿದ್ದ ಬಂಗಾರದ ಚೈನು ಮತ್ತು ಹಣ ಬಲವಂತವಾಗಿ ಕಿತ್ತುಕೊಂಡು ಹೋಗಿರುವುದರಿಂದ ಟಿ.ಬಿ.ಡ್ಯಾಂ ಪೊಲೀಸ್ ಠಾಣೆಯಲ್ಲಿ ಗುನ್ನೆನಂಬರ್ 40/2012 ಕಲಂ 392 ಐ.ಪಿ.ಸಿ. ಅಡಿಯಲ್ಲಿ ಪ್ರಕರಣವು ದಾಖಲಾಗಿ ನ್ಯಾಯಾಲ ಯದಲ್ಲಿ ವಿಚಾರಣೆ ಹಂತದಲ್ಲಿರುತ್ತದೆ.                
               ಈ ವ್ಯಕ್ತಿಯ ಚಟುವಟಿಕೆಗಳ ಮೇಲೆ ನಿರಂತರವಾಗಿ ನಿಗಾಯಿಟ್ಟು ಸಾರ್ವಜನಿಕರಿಗೆ ತೊಂದರೆಯಾಗುವುದನ್ನು ತಪ್ಪಿಸುವ ಉದ್ದೇಶದಿಂದ ಟಿ.ಬಿ.ಡ್ಯಾಂ ಪೊಲೀಸ್ ಠಾಣೆಯಲ್ಲಿ ಪುಂಡರ ಹಾಳೆಯನ್ನು ತೆರೆದು ಈತನ ಚಟುವಟಿಕೆಗಳ ಮೇಲೆ ನಿಗಾವಹಿಸುತ್ತಾ ಬಂದಿರುತ್ತದೆ.  ಸದರಿ ಪುಂಡ ಆಸಾಮಿಯು ಕೆಲವು ವರ್ಷಗಳು ಒಳ್ಳೆ ರೀತಿಯಿಂದ ಜೀವನ ಮಾಡುತ್ತಿದ್ದವನು ಇತ್ತೀಚಿಗೆ ಸುಮಾರು 4-5 ತಿಂಗಳಿಂದ ಅನವಶ್ಯಕವಾಗಿ ಟಿ.ಬಿ.ಡ್ಯಾಂನ ಹೊರವಲಯ ಪ್ರದೇಶಗಳಲ್ಲಿ ಸೂರ್ಯಾಸ್ಥದ ನಂತರ ಮತ್ತು ಮಧ್ಯಾಹ್ನದ ಸಮಯದಲ್ಲಿ ಜನವಿರಳವಿರುವ ಸ್ಥಳಗಳಲ್ಲಿ ತಿರುಗಾಡುವುದು ರಸ್ತೆಯಲ್ಲಿ ಓಡಾಡುವ ಜನರಿಗೆ ವಿಚಿತ್ರವಾಗಿ ನೋಡುವುದು ಜನರೊಂದಿಗೆ ವಿಚಿತ್ರವಾಗಿ ವರ್ತಿ ಸುವುದು ಮಾಡುತ್ತಿರುವುದರಿಂದ ಈತನ ವರ್ತನೆಯನ್ನು ಮತ್ತು ಮನೋಭಾವನೆಗಳನ್ನು ನೋಡಿರುವ ಸಾರ್ಜ ಜನಿಕರು ಭಯ ಭೀತರಾಗಿರುತ್ತಾರೆಂದು ಪೊಲೀಸ್ ಬಾತ್ಮೀದಾರರಿಂದ ಮಾಹಿತಿ ತಿಳಿದು ಬಂದಿದ್ದು ಇರುತ್ತದೆ. ಈ ದಿವಸ ದಿನಾಂಕ:- 30/11/2015 ರಂದು ಮಧ್ಯಾಹ್ನ 12-15 ಗಂಟೆಗೆ ಸದರಿ ಆಸಾಮಿಯು ಎನ್.ಹೆಚ್. 13 ರಲ್ಲಿ ಬಳಿ ಇರುವ ಹೆಚ್.ಎಲ್.ಸಿ. ಕಾಲುವೆ ದಂಡೆಯ ಮೇಲೆ  ಫಿರ್ಯಾದಿದಾರರು ಸುತ್ತು ಕರ್ತವ್ಯ ದಲ್ಲಿದ್ದಾಗ ಆ ವೇಳೆ ಸದರಿ ಸ್ಥಳದಲ್ಲಿ ಸದರಿ ಆಸಾಮಿಯು ಸಂಶಯಾಸ್ಫದ ರೀತಿಯಲ್ಲಿ ಕಂಡು ಬಂದಿದ್ದು ಮತ್ತು ಸುತ್ತು ಕರ್ತವ್ಯದಲ್ಲಿದ್ದ ಫಿರ್ಯಾದಿಗೆ ನೋಡಿ ನಿಧಾನವಾಗಿ ಕಣ್ಮರೆಯಾಗಲು ಪ್ರಯತ್ನಿಸಿದವನಿಗೆ ಹಿಡಿದು ಆ ಸಮಯ ಅಲ್ಲಿದ್ದ ಬಗ್ಗೆ ಅವನಿಗೆ ವಿಚಾರಮಾಡಲಾಗಿ ಸಮರ್ಪಕವಾದ ಉತ್ತರ ನೀಡದೇ ಇದ್ದರಿಂದ ಸ್ವಾಧೀನಕ್ಕೆ ತೆಗೆದುಕೊಂಡು ಮುಂಜಾಗ್ರತಾ ಕ್ರಮಕ್ಕಾಗಿ ದೂರು ಸಲ್ಲಿಸಿರುತ್ತಾರೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ